ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 7, 2016

3

ಭವಿಷ್ಯತ್ತಿನಲ್ಲಿ ಯಾವ ಹಬ್ಬ ಕೈಬಿಡಲಿದೆಯೋ…?

‍ನಿಲುಮೆ ಮೂಲಕ

– ಸಂತೋಷಕುಮಾರ ಮೆಹೆಂದಳೆ. ಕೈಗಾ 

dsc8476_tipu_sultan_m
( ನಾನು ನನ್ನ ಸಮಾಜ ಮತ್ತು ಧರ್ಮಾಧಾರಿತ ವೃತ್ತದಲ್ಲಿ ನನ್ನ ಹಿರಿಮೆಯನ್ನು ಸ್ಥಾಪಿಸಿಕೊಳ್ಳುವುದು ಹೇಗೆ..? ಇನ್ನೊಂದು ಧರ್ಮವನ್ನು ಮುಗಿಸಿ ಹಾಕುವುದರ ಮೂಲಕ. ಇದು ಸುಲಭದ ದಾರಿ ಮತ್ತು ಸರಿಯಾಗಿ ಇನ್ನೂರು ವರ್ಷಗಳ ಹಿಂದೆ ಟಿಪ್ಪು ಮಾಡಿದ್ದೂ ಅದೇ. ಅನಾಮತ್ತಾಗಿ ಲಕ್ಷಗಟ್ಟಲೇ ಹಿಂದೂಗಳನ್ನು ವರ್ಷವಧಿಯೊಳಗೆ ಮುಗಿಸಿ ಹಾಕಿ, ಕೊಡವರ ಒಂದು ತಲೆಮಾರನ್ನೇ ನಿರ್ನಾಮ ಮಾಡಿ, ಅದನ್ನು ಸಾಧನೆ ಎಂಬಂತೆ ಪತ್ರಗಳ ಮೂಲಕ ಪ್ರಚುರಪಡಿಸಿದ ಕೂಡಾ. ಆದರೆ ಇವತ್ತಿಗೂ ಅವನ ಭಜನೆ ಮಾಡುತ್ತಿರುವ ಭಟ್ಟಂಗಿಗಳಿಗೆ ತಾವೂ ಮುಂದೊಮ್ಮೆ ಇಂತಹದ್ದೇ ಪರಿಸ್ಥಿತಿಗೆ ಈಡಾಗಲಿದ್ದೇವೆ ಎನ್ನುವ ಅರಿವಾದರೂ ಬೇಡವಾ…? )  

ತೀರ ನಮ್ಮದೇ ನೆನಪಿನಲ್ಲುಳಿಯುವ ಕಾರ್ಯವನ್ನು ಕೈಗೊಳ್ಳುವ ಮಹನೀಯರಿಗಾಗಿ ಹತ್ತು ಹಲವು ರೀತಿಯಲ್ಲಿ ಅವರ ಸೇವೆಯನ್ನು ಸ್ಮರಿಸುವುದು ಸಹಜವೇ ಆಗಿರುವಾಗ ಟಿಪ್ಪುನಂತಹ ವ್ಯಕ್ತಿತ್ವವನ್ನು ಯಾವ ಕಾರಣಕ್ಕಾಗಿ ನಾವು ಹುತಾತ್ಮವಾಗಿಸಬೇಕು, ಜಯಂತಿ ಮಾಡಿ ಮೆರೆಸಬೇಕು ಎಂದು ಕೇಳಿ ನೋಡಿ. ಪ್ರಜ್ಞಾವಂತನಾದ ಒಬ್ಬೇ ಒಬ್ಬನೂ ಇದಕ್ಕೆ ಪ್ರತಿ ನುಡಿಯಲಾರ. ಅಕಸ್ಮಾತ್ ಎನಾದರೂ ಹೇಳಲೇಬೇಕು ಎಂದಿದ್ದರೆ ಆ ಚರ್ಚೆ ಬಿಟ್ಟುಬಿಡೊಣ ಎಂದಾನೆಯೇ ಹೊರತಾಗಿ ಟಿಪ್ಪುಗೊಂದು ಹಬ್ಬ ಮಾಡೊಣ ಎಂದು ಹೇಳಲಿಕ್ಕಿಲ್ಲ. ಅಕಸ್ಮಾತ ಹಾಗೆ ಹೇಳಿದ್ದೇ ಆದಲ್ಲಿ ಅವನಿಗೆ ನಮ್ಮ ಇತಿಹಾಸದ ಯುಕ್ತಾಯುಕ್ತ ಜ್ಞಾನವೇ ಇಲ್ಲ ಎನ್ನಬೇಕಾಗುತ್ತದೆ. ಕಾರಣ ಟಿಪ್ಪುವಿನ ಕುಕೃತ್ಯಗಳನ್ನು, ಅವನ ಇತಿಹಾಸವನ್ನು ಬರೀ ಸಂತ್ರಸ್ತ ಹಿಂದೂಗಳು ಬರೆಯಲಿಲ್ಲ. ಹಿಂದೂಗಳ ಹೊರತಾದ ಹೊರ ದೇಶದಲ್ಲದವರೂ ಬರೆದು ದಾಖಲಿಸಿಬಿಟ್ಟಿದ್ದಾರಲ್ಲಾ.., ಅಲ್ಲೆಲ್ಲೂ ಟಿಪ್ಪು ಒಬ್ಬ ಮಹಾರಾಜ ಅಥವಾ ನಿಜವಾದ ಸಮ್ರಾಜ್ಯದ ರಕ್ಷಕನಂತೆ ಕಾಣಿಸದೆ ಕೇವಲ ಮುಸ್ಲಿಂ ಧಾರ್ಮಿಕತೆಯ ಮೇಲೆ ನಂಬುಗೆ ಇರಿಸಿದ್ದ ಅತೃಪ್ತ ವ್ಯಕ್ತಿಯಾಗಿ ಗೋಚರಿಸುತ್ತಾನೆ.

ಇತಿಹಾಸದ ಪುಟಗಳನ್ನು ನೋಡಿದಾಗ ಟಿಪ್ಪು ಯಾವ ರೀತಿಯಲ್ಲೂ ಹಿಂದೂಸ್ತಾನದ ನೆಲದಲ್ಲಿ ಸ್ಥಳೀಯರು ಮತ್ತು ಹಿಂದೂ ಸಂಸ್ಕೃತಿ ಅಥವಾ ಪ್ರಜೆಗಳಿಗಾಗಿ ದಾಖಲಿಸುವಂತಹ ಕೆಲಸವನ್ನೇ ಮಾಡಲಿಲ್ಲ ಎಂದರೆ ಅನಾಮತ್ತಾಗಿ ಎರಡು ದಶಕದ ಅವನ ಕಾಲಾವಧಿಯಲ್ಲಿ ಈ ನೆಲದ ಅಮಾಯಕ ಪ್ರಜೆಗಳು ಅದಿನ್ನೆಂಥಾ ಕಷ್ಟವನ್ನು ಅನುಭವಿಸಿದ್ದಾರೋ ಯೋಚಿಸಿ. ಕಾರಣ ಒಂದು ಆಳ್ವಿಕೆ ಅಥವಾ ಇಪ್ಪತ್ತು ವರ್ಷದ ಕಾಲಾವಧಿ ಎಂದರೆ ಅಜಮಾಸು ಒಂದು ತಲೆಮಾರು ಬದಲಾಗುವ ಅಮೂಲ್ಯ ಸಮಯವದು.

ಮೂಲತ: ಹೈದರಾಲಿಗೆ ಟಿಪ್ಪು ಹುಟ್ಟಿದ್ದೇ ದುರ್ಗದ ತಿಪ್ಪೇಸ್ವಾಮಿ ಎನ್ನುವ ಸ್ವಾಮಿಗಳ ಆಶಿರ್ವಾದದಿಂದ ಎಂದೇ ಅವನ ಇತಿಹಾಸ ಆರಂಭವಾಗುವಾಗ ಮುಂದೆ ಅಪಭ್ರಂಶವಾಗಿ ತಿಪ್ಪೇಸುಲ್ತಾನ ಎಂಬ ಹೆಸರು ಟಿಪ್ಪುಸುಲ್ತಾನ ಆಗಿದ್ದಿರಬಹುದು ಎನ್ನುವ ವಾದವನ್ನು ಅಂತರ್ಜಾಲದ ಪುಟವೊಂದು ಮುಂದಿಡುತ್ತದೆ. ಅದೆಲ್ಲಾ ಏನೇ ಇರಲಿ ರಾಜ್ಯಾಡಳಿತಕ್ಕೆ ಕೈ ಹಾಕಿದ ದಿನದಿಂದಲೂ ಟಿಪ್ಪು ಪರಮ ಹಿಂದೂ ದ್ವೇಷಿಯಾಗಿದ್ದ, ಕನ್ನಡ ಮತ್ತು ಕರ್ನಾಟಕದ ನೆಲಕ್ಕಾಗಿ ಏನನ್ನೂ ಮಾಡಲಿಲ್ಲ ಎನ್ನುವುದನ್ನು ಗಂಭೀರ ಇತಿಹಾಸಕಾರರು ದಾಖಲಿಸಿದ್ದಾರೆ. ಅದರಿಂದಾಗೇ ಕನ್ನಡದ ಬದಲಾಗಿ ಉರ್ದು ಮತ್ತು ಪಾರ್ಸಿ ಭಾಷೆಯ ಬಳಕೆಗೆ ಆತ ಆಜ್ಞೆ ಹೊರಡಿಸಿದರೆ, ಕನ್ನಡ ಅಸಂಖ್ಯಾತ ಸ್ಥಳಗಳ ಹೆಸರನ್ನು ಬದಲಿಸಿದ ಎನ್ನುತ್ತದೆ ಇತಿಹಾಸ. ಅದರಲ್ಲಿ ಪ್ರಮುಖವಾಗಿ ಕಣ್ಣಾನೂರು-ಕಸನೂರು, ಗುಟ್ಟಿ-ಫೈಜಾಬಾದ್, ಧಾರವಾಡ ಖುಷಿರ್ವಾಡ, ದಿಂಡಿಗಲ್ – ಖಲಿಕಾಬಾದ್, ರತ್ನಾಗಿರಿ-ಮುಸ್ಥಾಫಾಬಾದ್, ಮಂಗಳೂರು-ಜಲಾಲಾಬದ್, ಕಲ್ಲಿಕೋಟೆ ಇಸ್ಲಾಮಾ ಬಾದ್ ಆಗುತ್ತಾ ಕೊನೆಯಲ್ಲಿ ರಾಜ್ಯದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಿಸಿಕೊಳ್ಳುತ್ತಿರುವ ಮೈಸೂರು ನಝ್ಹಾರಾಬಾದ್. (ಈ ಹೆಸರಿನ ಏರಿಯಾ ಈಗಲೂ ಮೈಸೂರಿನಲ್ಲಿದೆ) ಆಗುವ ಮೂಲಕ ಕನ್ನಡದ ಹೆಸರು ಮತ್ತು ಇತಿಹಾಸವನ್ನು ಮೊದಲ ಹಂತದಲ್ಲೇ ಆತ ನಿರ್ನಾಮಗೊಳಿಸಿದ್ದ.

ವಿಚಿತ್ರವೆಂದರೆ ತುಂಬ ಚೆಂದದ ಹುಲಿಯ ಬಣ್ಣ ಮತ್ತು ಅದರ ಪಟ್ಟೆಗಳನ್ನು ಇಷ್ಟಪಡುತ್ತಿದ್ದ ಕಾರಣ ಟಿಪ್ಪು ತನ್ನ ಸೈನಿಕರಿಗೂ ಇತರ ಸಮವಸ್ತ್ರಗಳಿಗೂ ಹುಲಿಯ ಪಟ್ಟಿಗಳ ರೂಪವನ್ನು ಕೊಡಲು ಸೂಚಿಸಿದ್ದ. ಹಾಗಾಗಿ ಅವನ ಹುಲಿಯ ಪ್ರೇಮದಿಂದಾಗಿ ಅವನಿಗೆ ಶೇರ್–ಈ–ಮೈಸೂರು ಹೆಸರು ಮುಂದೆ ಮೈಸೂರು ಹುಲಿಯಾಯಿತೇ ವಿನಃ ಬೇರಾವ ಕಾರಣಗಳೂ ಇತಿಹಾಸದಲ್ಲಿ ಕಂಡುಬರುವುದಿಲ್ಲ. ಸ್ವಂತ ಹುಲಿ ಕೊಂದದ್ದಂತೂ ಎಲ್ಲೂ ದಾಖಲಾಗಿಲ್ಲ.

ಮೇಲುಕೋಟೆಯಲ್ಲಿ ಅನಾಮತ್ತು 700 ಜನ ಅಯ್ಯಂಗಾರ್ ಬ್ರಾಹ್ಮಣ ಕುಟುಂಬವನ್ನು ನಿರ್ವಂಶ ಮಾಡಲು ಕಾರಣ ತನ್ನ ಸಾಮ್ರಾಜ್ಯ ಉಳಿಸಿಕೊಳ್ಳಲು. ಕಾರಣ ಮೈಸೂರು ಸಂಸ್ಥಾನಕ್ಕೆ ತೀರ ನಿಷ್ಠರಾಗಿದ್ದ ಇಲ್ಲಿನ ಅಯ್ಯಂಗಾರರು ನರಕ ಚತುರ್ದಶಿಯ ದಿನ ಹಬ್ಬದ ಸಡಗರದಲ್ಲಿದ್ದಾಗ, ತನ್ನ ಕಿರಾತಕ ಪಡೆಯೊಂದಿಗೆ ಎರಗಿದ ಟಿಪ್ಪು ಒಂದೇ ರಾತ್ರಿಯಲ್ಲಿ ಅವರ ಮಾರಣಹೋಮ ನಡೆಸಿ, ಕೈಗೆ ಸಿಕ್ಕ ಹೆಂಗಸರ ಮೇಲೆ ನಡೆದ ಮಾನಭಂಗ ಅದ್ಯಾವ ಮಟ್ಟಕ್ಕಾಗಿರಬೇಕು ಎಂದು ಬೇರೆ ವಿವರಿಸಬೇಕಿಲ್ಲ. ಆ ದಿನ ಊರಲಿದ್ದ ಎಲ್ಲಾ ಕಲ್ಯಾಣಿಗಳಲ್ಲೂ ಸಾಲುಸಾಲಾಗಿ ಹೆಂಗಸರ ಹೆಣಗಳು ತೇಲುತ್ತಿದ್ದವು ಎನ್ನುತದೆ ಇತಿಹಾಸ. ಆದರೆ ಇದನ್ನು ಸ್ಪಷ್ಟವಾಗಿ ಉಲ್ಲೇಖಿಸಿ ಮಾತಾಡಬಲ್ಲ ಪ್ರಾಮಾಣಿಕ ಇತಿಹಾಸ ತಜ್ಞರು ಮಾತ್ರ ಟಿಪ್ಪುವಿನ ಇತಿಹಾಸ ಕಾವಲು ಕಾಯುತ್ತಾ ಅಮೇಧ್ಯದ ಟಿಪ್ಸು ಪಡೆಯುತ್ತಾ, ಕಾಲಕಾಲಕ್ಕೆ ಸಮ್ಮೇಳನಗಳ ಅಧ್ಯಕ್ಷತೆ, ಅಕಾಡೆಮಿ ಮೆಂಬರ್‍ಶಿಪ್ಪುಗಳಿಗೆ ಟವಲ್ ಹಾಕಿಟ್ಟು ಕಾಯುತ್ತಿದ್ದಾರೆ.

ವಿಚಿತ್ರವೆಂದರೆ ಶತ್ರುವಾಗಿದ್ದ ಬ್ರಿಟಿಷರನ್ನು ತನ್ನ ವೈರಿ ಎಂದೆಣಿಸುವ ಟಿಪ್ಪು, ಅವರನ್ನು ತಡೆಯಲಾಗದೆ ಜಗತ್ತಿನ ಯುದ್ಧ ಪಿಪಾಸು ನೆಪೋಲಿಯನ್ ಬೋನಾಪಾರ್ಟೆಯ ಬೆಂಬಲಕ್ಕಾಗಿ ಕಾಗದ ಬರೆಯುತ್ತಾನೆ. (1997 ಏಪ್ರಿಲ್ 21) ಪ್ರೆಂಚ್‍ರೊಡನೆ ಸೇರಿ ಬ್ರೀಟಿಷರನ್ನು ಓಡಿಸಿದರೆ ಸಂಪೂರ್ಣ ದೇಶವನ್ನು ಕೊಳ್ಳೆಹೊಡೆಯಬಹುದೆನ್ನುವ ದೂರಗಾಮಿ ಕುತಂತ್ರವನ್ನು ಎದುರಿಗಿಡುತ್ತಾನೆ. ಇದೆಲ್ಲಕ್ಕಿಂತಲೂ ಮಿಗಿಲು ಅವನನ್ನು ಸ್ವಾತಂತ್ರಯೋಧ ಎಂದು ಕೈಯ್ಯಲ್ಲಿ ಶಾಲು, ಮಾಲೆ ಹಿಡಿದು ಅವನ ಚಿತ್ರದೆದುರಿಗೆ ಗೌರವ ಸಲ್ಲಿಸಲು ಸಾಲು ಸಾಲಾಗಿ ಗುಲಾಮರ ತರಹ ನಿಲ್ಲುತ್ತಿದ್ದಾರಲ್ಲ. ಟಿಪ್ಪುವಿನ ಈ ಹೇಯ ಅವತಾರದ ಹೊತ್ತಿನಲ್ಲಿ ಭಾರತದಲ್ಲಿನ್ನೂ ಸ್ವಾತಂತ್ರ ಹೋರಾಟವೆಂಬ ಪರಿಕಲ್ಪನೆಯೇ ಇರಲಿಲ್ಲ. ಇವರಿಗೆ ಹೇಗೆ ಗೊತ್ತಾಯಿತೋ ಆತ `ಓರಾಟಗಾರ’ ಎಂದು.

ಗೋಪಾಲ ರಾವ್ – ಖ್ಯಾತ ಅಧ್ಯಯನ ಮತ್ತು ಇತಿಹಾಸದ ನಿಖರ ಮಾಹಿತಿಯನ್ನು ನಮೂದಿಸಿರುವವರ  ಪ್ರಕಾರ 1792 ರಲ್ಲಿ ಟಿಪ್ಪು ಸೋತು ನೆಗೆದು ಬಿದ್ದನಲ್ಲ ಆಗ ಬ್ರೀಟಿಷರು ಅವನ ಸಂಪತ್ತು ಸೇರಿದಂತೆ ಸರ್ವಸ್ವವನ್ನು ಮುಟ್ಟುಗೋಲುಹಾಕಿ ಬಂಧಿಸಿದವರನ್ನು ಲೆಕ್ಕಿಸಿದರೆ ಇದ್ದ 65 ಜನ ಆಡಳಿತ ಮಂಡಳಿಯಲ್ಲಿ ಕೇವಲ 6 ಜನ ಮಾತ್ರ ಇತರೆ ಮತದವರಿದ್ದರೆ ಉಳಿದೆಲ್ಲರೂ ಮುಸ್ಲಿಂರಾಗಿದ್ದರು. (ಆದರೆ ಇದಕ್ಕೂ ಮೊದಲೇ ಹೈದರಾಬಾದಿನ ನಿಜಾಮ ಸಂಪೂರ್ಣವಾಗಿ ಆಡಳಿತದಲ್ಲಿ ಮುಸ್ಲಿಂರೇ ಇರಬೇಕೆಂದು ಫಾರ್ಮಾನು ಹೊರಡಿಸಿದ್ದರೆ, ಟಿಪ್ಪು ಅದನ್ನು ಅಕ್ಷರಶಃ ಜಾರಿಗೆ ತರಲು ಯತ್ನಿಸುತ್ತಿದ್ದ) ಟಿಪ್ಪು ಬರುತ್ತಿದ್ದಂತೆ ಮಾಡಿದ ಮೊದಲ ಕೆಲಸವೆಂದರೆ ಹಿಂದೂಗಳು ಮಾತ್ರವೇ ತಲೆಗಂದಾಯ ಕಟ್ಟಬೇಕು, ಉಳಿದಂತೆ ಮುಸ್ಲಿಂ ಹಾಗು ಮತಾಂತರಗೊಂಡ ಮುಸ್ಲಿಂರಿಗೂ ಇದರಿಂದ ವಿನಾಯಿತಿ ನೀಡಿದ್ದು. ತೀರ ಈಗಿನ ಮತ ರಾಜಕೀಯವನ್ನು ಆಗಿನ ಟಿಪ್ಪು ಅನಾಮತ್ತಾಗಿ ಅನುಸರಿಸಿದ್ದ ಮತ್ತು ತೀವ್ರವಾಗಿ ತನ್ನ ಅರಬ್ಬಿ ಮೂಲದ ಭಾಷೆಯನ್ನೇ ಹೇರಲು ಯತ್ನಿಸಿ, ಅದು ಸಾಮೂಹಿಕವಾಗಿ ಸಾಧ್ಯವಿಲ್ಲ ಎಂದು ಮನಗಾಣುತ್ತಿದ್ದಂತೆ ಹೆಚ್ಚಿನ ಭಾಗಗಳಲ್ಲಿ ಪದಗಳನ್ನು ತುರುಕುವ ಮೂಲಕ ಅದನ್ನು ಚಾಲನೆಯಲ್ಲಿಟ್ಟಿದ್ದ. ಅದರ ಪಳೆಯುಳಿಕೆಯಾಗಿ ಈಗಲೂ ಸರಕಾರಿ ಭಾಷೆಯಲ್ಲಿ ಪದಬಳಕೆಗಳು ಜಾರಿಯಲ್ಲಿವೆ.

ಟಿಪ್ಪು ತನ್ನ ಕಾಲಾವಧಿಯಲ್ಲಿ ರಾಜ್ಯಾಡಳಿತಕ್ಕಿಂತ ಮತಾಂತರ ಮತ್ತು ಹಿಂದೂ ಬ್ರಾಹ್ಮಣರ, ಮಲೆಯಾಳಿ ನಾಯರ್ ಮತ್ತು ನಂಬೂದಿರಿಗಳ ಹತ್ಯೆಗೆ ಅತಿ ಹೆಚ್ಚಿನ ಮಹತ್ವ ಹಾಗು ಗಮನ ನೀಡಿದ್ದ ಎನ್ನುವುದಕ್ಕೆ ಜಾಗತಿಕ ಉಲ್ಲೇಖಗಳು ಲಭ್ಯವಿದ್ದು ತೀವ್ರ ವಿಷಾದನೀಯವೆಂದರೆ ಅಂತಹ ಯಾವುದೇ ಇತಿಹಾಸವನ್ನು ಭಾರತೀಯರು ಉಲ್ಲೇಖಿಸುವಲ್ಲಿ ಹಿಂದೆ ಬಿದ್ದರು ಎನ್ನುವುದು. ಹೆಚ್ಚಾಗಿ ಇವತ್ತಿನ ಇಂತಹ ಟಿಪ್ಪುವಿನ ಮತಾಂಧಕಾರಿ ವರ್ತನೆಯನ್ನು ವಿವರಿಸಿದ್ದು ಮತ್ತು ಅತ್ಯಂತ ನಿಖರವಾಗಿ ದಾಖಲಿಸಿದ್ದು ವಿದೇಶಿ ಬರಹಗಾರರೇ, ತೀರ ಪಾಕಿಸ್ತಾನದಂತಹ ರಾಷ್ಟ್ರದಲ್ಲೂ ಇಂತಹ ಅನಾಹುತಕಾರಿ ಕಾರ್ಯಗಳ ಉಲ್ಲೇಖವಿದ್ದು ಟಿಪ್ಪು ತನ್ನ ಕಾಲಾವಧಿಯಲ್ಲಿ ಸರಿ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಜನರನ್ನು ಮತಾಂತರಿಸಿದ್ದ ಎನ್ನುತ್ತವೆ ದಾಖಲೆಗಳು.

ಅದರಲ್ಲೂ ಕೇರಳ ಮತ್ತು ಕರ್ನಾಟಕ ಅವನ ದಾಳಿಗೆ ನಲುಗಿದ ಪ್ರಮುಖ ರಾಜ್ಯಗಳು. ಇಲ್ಲೆಲ್ಲ ನಡೆಸಿದ ಮಾರಣ ಹೋಮದ ಬಗ್ಗೆ ಲಿಖಿತ ದಾಖಲೆ ಸಲ್ಲಿಸುತ್ತಿದ್ದ ಟಿಪ್ಪು ಅದನ್ನೊಂದು ಮಹತ್ಕಾರ್ಯ ಎಂದೇ ಭಾವಿಸಿದ್ದ. ಮಂಗಳೂರಿನಲ್ಲಿ ಅತ್ಯಂತ ಹೀನಾಯವಾಗಿ ಕ್ರಿಶ್ಚಿಯನ್ನರನ್ನು ನಡೆಸಿಕೊಂಡ ಟಿಪ್ಪು 60000 ಕ್ರಿಶ್ಚಿಯನ್ನರನ್ನು ಕಾಲಿಗೆ ಕೊಳ, ಕೈಗೆ ಬಳೆ ತೊಡಿಸಿ ಅವರನ್ನು ಮೈಸೂರಿನವರೆಗೂ ನಡೆಸಿಕೊಂಡು ಬಂದ. ಅವನ ದಾರಿಯ ಮೇಲಿನ ದೌರ್ಜನ್ಯಕ್ಕೆ ಶೇ.10 ರಷ್ಟು ಕ್ರಿಶ್ಚಿಯನ್ನರು ರಸ್ತೆಯ ಮೇಲೆ ಹುಳುಗಳಂತೆ ಬಿದ್ದು ಸತ್ತು ಹೋದರು. ಅಲ್ಲಲ್ಲೆ ಹೆಣಗಳನ್ನು ಸರಿಸಿ ನಡೆದು ಬಂದ ಟಿಪ್ಪು ಮಾಡಿದ ಮೊದಲ ಕೆಲಸ ಅವರನ್ನೆಲ್ಲಾ ಸುನ್ನತಿ ಮಾಡಿ ಮತಾಂತರಿಸಿದ್ದು ಮತ್ತು ಸೆರೆಗೆ ತಳ್ಳಿದ್ದು. ಈ ಅನಾಹುತಕ್ಕೆ ಸಾಕ್ಷಿ ಈಗಿನ ನೆತ್ತರಕೆರೆ ವಿಟ್ಲದ ಬಳಿಯಲ್ಲಿದೆ.

ಅವನ ಕ್ರೌರ್ಯದ ಮಾಹಿತಿ ಮತ್ತು ವಿವರ ” ಯೋಯೇಜ್ ಟು ಈಸ್ಟ್ ಇಂಡಿಯಾ ” ಕೃತಿ ರಚಿಸಿದ ಲೇಖಕ, ಇತಿಹಾಸ ತಜ್ಞ ಬಾತರ್ ಲೋಮಿಯಾ ಎನ್ನುವವನಿಂದ ತಿಳಿಯುತ್ತದೆ. ಅವನ ಪ್ರಕಾರ ಕಲ್ಲಿಕೋಟೆಯ ಮಾರಣ ಹೋಮ ಜಗತ್ತು ಕಂಡು ಕೇಳರಿಯದ ಹಿಂಸೆಗಳ ಕೃತ್ಯ ಎನ್ನುತ್ತಾನೆ. ಸಾಲುಸಾಲಾಗಿ ಆನೆಯ ಸಾಲುಗಳನ್ನು ಹೊರಡಿಸುತ್ತಿದ್ದ ಟಿಪ್ಪು ಸರಿ ಸುಮಾರು 2000 ಬ್ರಾಹ್ಮಣ ಕುಟುಂಬಗಳನ್ನು ಒಂದು ಕುಡಿಯೂ ಉಳಿಸದಂತೆ ನಾಶ ಮಾಡುತ್ತಾನೆ, ಅವರ ದೇಹವನ್ನು ವಿನೋದಾವಳಿಯ ನೆಪದಲ್ಲಿ ಆನೆಯ ಕಾಲಿಗೆ ಕಟ್ಟಿ ಹೊಸಕಿಸುತ್ತಾನೆ. ತೀರ ಬೆತ್ತಲೆ ಮಾಡಿ ಗಂಡು ಹೆಣ್ಣು ಎನ್ನುವ ಬೇಧವಿಲ್ಲದೆ ಅವರನ್ನೆಲ್ಲ ಮೆರವಣಿಗೆ ಮಾಡುತ್ತಾ ಸಾಯಿಸಿದ್ದನ್ನು ಬಾತರ್ ಲೋಮಿಯೋ ಅತ್ಯಂತ ಸ್ಪಷ್ಠವಾಗಿ ದಾಖಲಿಸಿದ್ದಾನೆ. ಅಸಲಿಗೆ ಹಾಗೆ ತೀರಿ ಹೋದ ಕಲ್ಲಿಕೊಟೆಯ ಬ್ರಾಹ್ಮಣರಲ್ಲಿ ಉಳಿದು ಹೋದವರ ಪ್ರಾಣ ಉಳಿಸುವುದಕ್ಕಾಗೇ ಸ್ವತಃ ಕಲ್ಲಿಕೋಟೆಯ ರಾಜ ಆ ಊರನ್ನೆ ತೊರೆದು ಹೋಗುತ್ತಾನೆ. ಸುಮಾರು 1783 ರ ಹೊತ್ತಿಗೆ ದಿನಕ್ಕೆ ಹತ್ತಿಪ್ಪತ್ತು ಬ್ರಾಹ್ಮಣರ ತಲೆ ಕಡಿದು ಝಾಮೋರಿನ ಕೋಟೆಯ ಹೊರಗೆ ನೇತಾಡಿಸುವುದು ಅವನ ಹವ್ಯಾಸವಾಗಿ ಬದಲಾಗಿತ್ತು ಎನ್ನುತ್ತದೆ ಬ್ರಿಟಿಷ ಅಧಿಕಾರಿಯೊಬ್ಬನ ಡೈರಿ. ಈ ಸಮಯದಲ್ಲೇ ಸಾಮೂಹಿಕ ಸುನ್ನತಿ ಮಾಡಿಸುವ ಅವನ ಭಿಭತ್ಸಕಾರಿ ಕೃತಿ ಬೆಳಕಿಗೆ ಬಂದಿದ್ದು.

ನೂರಾರು ಹಿಂದೂಗಳನ್ನು ಸಾಲಾಗಿ ಬೆತ್ತಲೆಯಾಗಿ ನಿಲ್ಲಿಸಿ ಕತ್ತಿಯಿಂದ ಅವರ ಮಾರ್ಮಾಂಗದ ತುದಿಯನ್ನು ಕತ್ತರಿಸಿ ಬಾಯಿಗೆ ಮಾಂಸವನ್ನು ತುಂಬಿ `ಇನ್ನು ಮೇಲೆ ಇವರೆಲ್ಲಾ ಇಸ್ಲಾಂ’ ಧರ್ಮಕ್ಕೆ ಪರಿವರ್ತನೆಯಾದವರೆಂದು ಘೋಶಿಸುತ್ತಿದ್ದ. ಬರೆಯುತ್ತಾ ಹೋದರೆ ಬರೀ ನರಮೇಧದ ಕತೆಯನ್ನು ಇತಿಹಾಸವಾಗಿಸಿಕೊಂಡ ಟಿಪ್ಪು ಅಪ್ಪಟ ಸ್ತ್ರೀಲೋಲಕನಾಗಿ 600 ಕ್ಕೂ ಹೆಚ್ಚು ಜನರನ್ನು ತನ್ನ ಜನಾನದಲ್ಲಿ ತುಂಬಿಕೊಂಡಿದ್ದ. ಇಂಥವನ ಬಗ್ಗೆ ಇವತ್ತು ಹಬ್ಬ ಆಚರಿಸುವ ಮೊದಲೊಮ್ಮೆ ಇತಿಹಾಸ ದಾಖಲೆಯ ವಿವರವನ್ನೊಮ್ಮೆ ನೋಡುವುದೊಳಿತು. ಪೂರ್ತಿ ಬರೆದು ಪೂರೈಸುವ ಬದಲಿಗೆ ರೆಫೆರೆನ್ಸ್‍ಗಾಗಿ ಒಂದಷ್ಟು ಮಾಹಿತಿಯನ್ನು ಇಲ್ಲಿ ಕೊಟಿದ್ದೇನೆ. ಈ ಕೆಳಗಿನ ಇತಿಹಾಸದ ದಾಖಲೆಗಳನ್ನು ಕ್ರೊಢೀಕರಿಸಿದರೆ ಸಾವಿರ ಪುಟದ ಇನ್ನೊಂದು ಬಿಭತ್ಸಕಾರಿ ಹೊತ್ತಗೆಯಾದೀತು.

• ವಿಲಿಯಂ ಲೋಗನ್ – ಮಲಬಾರ್ ಮ್ಯಾನ್ಯುಯೆಲ್ ( ಬ್ರಿಟೀಷ್ ಸರಕಾರದಲ್ಲಿ ವಿದೇಶಿ ಅಧಿಕಾರಿ ಸ್ಕಾಟಿಷ್. ಕೇರಳ ತಮಿಳನಾಡಿನಲ್ಲಿ ಎರಡು ದಶಕಗಳ ಕಾಲ ದಂಡಾಧಿಕಾರಿಯಾಗಿದ್ದ ಕಲೆಕ್ಟರ್ )
• ವಟಂಕ್ಕೂರು ರಾಜವರ್ಮ – ಕೇರಳ ಸಂಸ್ಕೃತ ಸಾಹಿತ್ಯ ಚರಿತ.
• ಲೇವಿಸ್ ರೈಸ್ – ಹಿಸ್ಟರಿ ಆಫ್ ಮೈಸೂರ್ ಆಂಡ್ ಕೂರ್ಗ್.
• ಐ.ಎಮ್. ಮುತ್ತಣ್ಣನವರ – ಕೂರ್ಗ ಗೆಝೇಟಿಯರ್. (1785 ಡಿಸೆಂಬರ್  13 – ಭಾಗಮಂಡಲ ದೇವಟ್ಟಿ ಪರಂಬುನಲ್ಲಿ 30000 ಕೊಡವರ ಮಾರಣ ಹೋಮ. )
• 1797 ಏಪ್ರಿಲ್ 21 – ಪ್ರೆಂಚ್‍ರಿಗೆ ಟಿಪ್ಪು ಸಹಾಯ ಅಪೇಕ್ಷಿಸಿ, ಭಾರತ ಕೊಳ್ಳೆ ಹೊಡೆಯುವ ಪ್ರಲೋಭನೆಯ ಕಾಗದ ಬರೆದದ್ದು.
• ಮೀರ್ ಹುಸೈನ್ ಕೀರ್ಮಾನಿ – 1788 ರ ಇತಿಹಾಸಕಾರ – ದಾಳಿಯ ದಾಖಲೆಗಳು.
• ಕ್ಯಾಪ್ಟನ್ ಥಾಮಸ್ ಮ್ಯಾರಿಯಟ್ – ಟಿಪ್ಪುವಿನ ಮರಣಾನಂತರದ ಲಭ್ಯವಿದ್ದ ಮಾಹಿತಿಯ ಇತಿಹಾಸಕಾರ.
• ಕೇಯಿಟ್ ಬ್ಯಾಂಕ್ – ಟಿಪ್ಪು ಸುಲ್ತಾನ ಸರ್ಚ್ ರ್ ಲೆಜಿಟ್ಮಸಿ ( ಇದು ಟಿಪ್ಪು ಸತ್ತ ನಂತರ ಅಖಂಡ ಆರ್ನೂರು ಚಿಲ್ರೆ ಹೆಂಗಸರ ಜನಾನಾದವರ ಕಥೆ ಏನಾಯಿತು ಎಂದು ದಾಖಲಿಸುತ್ತದೆ )
• ಡಾ. ನರಸಿಂಹನ್ – 1792 ರ ಮೇಲು ಕೋಟೆಯಲ್ಲಿ ಅಯ್ಯಂಗಾರ್ ಬ್ರಾಹ್ಮಣರ ಮಾರಣ ಹೋಮದ ದಾಖಲೆ (ಇದರ ಕಾರಣ ಇವತ್ತಿಗೂ ಇಲ್ಲಿ ದೀಪಾವಳಿಯ ದಿನ ಸೂತಕ ಆಚರಿಸಲಾಗುತ್ತದೆ. )
• ಬಾರ್ಟ್ ಲೋಮಿಯೋ – ವೋಯೇಜ್ ಟು ಈಸ್ಟ್ ಇಂಡೀಸ್ ( ಫೆÇೀರ್ತುಗೀಸ್ ಯಾತ್ರಿಕ )
• ಕರ್ನಲ್ ಪುಲ್ಲೇಟಿನ್ – ಬ್ರಿಟಿಷ ಕರ್ನಲ್ – 1783 ಕಲ್ಲಿಕೋಟೆ ಮಾರಣಹೋಮದ ದಾಖಲೆಗಾರ.
• 1788 ಮಾರ್ಚ್ 22 – ಅಬ್ದುಲ್ ಖಾದೀರ್ ಪತ್ರ (12000 ಹಿಂದೂ ನಂಬೂದಿರಿ ಬ್ರಾಹ್ಮಣರನ್ನು ಮತಾಂತರಿಸಿದ ದಾಖಲೆ)
• 1790 ಜನೇವರಿ 18 – ಸಯ್ಯದ್ ಅಬ್ದುಲ್ ದುಲಾಯಿಗೆ ಬರೆದ ಕಾಗದ (ಕಲ್ಲಿಕೋಟೆ, ಕೊಚ್ಚಿ ಭಾಗದ ಎಲ್ಲಾ ಹಿಂದೂಗಳ ಮತಾಂತರದ ದಾಖಲೆ)
• 1790 ಜನೇವರಿ 19 – ಬದ್ರುದ್ದಿನ್ ಜುಮಾನ್ ಖಾನ್ ಪತ್ರ(ಮಲಬಾರ್‍ನ ನಾಲ್ಕು ಲಕ್ಷ ಜನ ಹಿಂದೂ ಗಳನ್ನು ಮುಸ್ಲಿಂಗೆ ಪರಿವರ್ತಿಸಿದ ದಾಖಲೆ ಜತೆಗೆ ತಿರುವಾಂಕೂರಿನ ರಾಜ ರಾಮವರ್ಮನನ್ನು (ನಾಯರ್) ಮತಾಂತರಿಸುವ ಯೋಜನಾ ವರದಿ.
• 1964 – ಲೈಫ್ ಆಫ್ ಟಿಪ್ಪು ಸುಲ್ತಾನ್(ಪಾಕಿಸ್ತಾನ ಅಡ್ಮಿನಿಸ್ಟ್ರೆಟಿವ್ ಸ್ಟಾಫ್ ಕಾಲೇಜ್. ಲಾಹೋರ ಪ್ರಕಟ. 100000 ಹಿಂದೂಗಳು ಮತ್ತು 70000 ಕ್ರಿಶ್ಚಿಯನ್ನರನ್ನು ಮತಾಂತರಿಸಿದ ದಾಖಲೆಯ ಪುಸ್ತಕ )
• ಪ್ರೊ.ಲೇವಿಸ್ ಬಾವರಿ – ಬ್ರಿಟಿಷ್ ಇತಿಹಾಸಕಾರ (ದೇಗುಲ ಮತ್ತು ಮೂರ್ತಿ ಭಂಜನೆಯ ದಾಖಲೆ. ದಕ್ಷಿಣ ಭಾರತದ ಸುಮಾರು 8000 ದೇವಸ್ಥಾನಗಳನ್ನು ಹಾಳುಗೆಡುವಿದ ಮಾಹಿತಿ. ಮಣಿಯೂರು(ಇಲ್ಲೀಗ ಮಸೀದಿ ಕಟ್ಟಲಾಗಿದೆ) ತೇಲಶ್ಚರಿ, ತಿರುವೆಂಕಟ ದೇವಸ್ಥಾನ, ಚಿರಕ್ಕಲ್, ಮೈಸೂರು ಕೊಡಗು, ಮಂಗಳೂರು, ತಳಿ, ಗೋವಿಂದಪುರ, ವಾರಂಕ್ಕಲ್, ತಿರುವಣ್ಣೂರು, ಪುತ್ತೂರು, ಮಧೂರು ಸೇರಿದಂತೆ ಅತ್ಯುತ್ತಮ ಎನ್ನಬಹುದಾಗಿದ್ದ ಶಿಲ್ಪಕಲೆಗಳಿಂದ ಕಂಗೊಳಿಸುತ್ತಿದ್ದ ದೇವಸ್ಥಾನಗಳು ಸಂಪೂರ್ಣ ನೆಲಕಚ್ಚಿದವು. ಇವನ್ನೆಲ್ಲ ವಿಲಯಂ ಲೋಗನ್ ಕೂಡಾ ದಾಖಲಿಸಿದ್ದಾನೆ.
• 1784 ಸೆಂಟ್ ಮಿಲಾಗ್ರೀಸ್ ಚರ್ಚು – ಟಿಪ್ಪು ನೆಲಸಮಗೊಳಿಸಿದ. ಇದರ ನಿರ್ಮಾಣ 1640ರಲ್ಲಾಗಿತ್ತು.
• ಡಿಸೆಂಬರ್ 7, 1782 ರಿಂದ ಮೇ. 4 1799 – ಟಿಪ್ಪು ಮೈಸೂರು ಕೇರಳ ಮತ್ತು ಕರ್ನಾಟಕದ ಭಾಗದಲ್ಲಿ ನಡೆಸಿದ ಮಾರಣ ಹೋಮದ ಅವಧಿ ಹಾಗು ಅವನ ಆಡಳಿತ ಕಾಲಾವಧಿ.

ಇದೆಲ್ಲಾ ಇತಿಹಾಸ ಮತ್ತು ಕೇವಲ ಲಭ್ಯವಿರುವ ದಾಖಲೆ. ದಾಖಲೆಯಾಚೆಗೆ ಅದೆಷ್ಟು ನೆತ್ತರ ಕತೆಗಳನ್ನು ಟಿಪ್ಪುನ ಕಾಲಾವಧಿಯಲ್ಲಿ ಹಿಂದೂ ಜನಾಂಗ ಅನುಭವಿಸಿರಲಿಕ್ಕಿಲ್ಲ. ಹಿಂದೆಂದೋ ನಡೆದ ಘಟನೆಗಳಿಗೆ ಈಗಿನ ಬ್ರಾಹ್ಮಣರು ಮತ್ತು ಮೇಲ್ವರ್ಗ ಕೊಂಚ ಸಹಿಸಿಕೊಳ್ಳಬೇಕು ಎನ್ನುವ ಬುದ್ಧಿವಂತರೇ, ಕನಿಷ್ಟ ನಾವು ಭಾರತೀಯರು, ನಮ್ಮ ರಾಷ್ಟ್ರೀಯತೆಗೆ ಒಂದು ವಿಶೇಷತೆಯಿದೆ ಎನ್ನುವುದನ್ನು ಅರಿಯದೆ ಅಕಾಡೆಮಿ, ಪ್ರಶಸ್ತಿ, ಅಧ್ಯಕ್ಷತೆ, ಮೈಕು ಮತ್ತು ವೇದಿಕೆ ಎನ್ನುತ್ತಾ ನಂದೊಂದು ಸೀಟು ಎಂದು ಕರ್ಚೀಪ್ ಹಾಕುತ್ತಲೇ ಇದ್ದರೆ ನಿಮಗರಿವಾಗುವ ಮೊದಲೇ ಮತ್ತೊಮ್ಮೆ ನಿಮ್ಮನ್ನೂ ಬಹಿರಂಗವಾಗಿ ಬೆತ್ತಲಾಗಿಸಿ ಸುನ್ನತಿಗೊಳಪಡಿಸಿಯಾರು. ಈಗಲೂ ಕಾಲ ಮಿಂಚಿಲ್ಲ. ನನ್ನ ದೇಶ, ನಮ್ಮ ನಾಡು, ನಾವು ಭಾರತೀಯರು ಎನ್ನುವ ಸನಾತನತೆ ಇನ್ನಾದರೂ ಮೈಗೊಡಿಸಿಕೊಳ್ಳಿ. ಇತಿಹಾಸ ಬದಲಿಸಲಾಗದಿದ್ದರೂ ಕಲಿಯಬಹುದು. ಆದರೆ ವರ್ತಮಾನವನ್ನೂ ರೂಢಿಸಿಕೊಳ್ಳದಿದ್ದರೆ ನೀವು ಮತ್ತೊಮ್ಮೆ ಇತಿಹಾಸದ ಭಾಗವಾಗುವುದರಲ್ಲಿ ಸಂಶಯವಿಲ್ಲ. ಯಾರಿಗೆ ಗೊತ್ತು ಯಾವ ಸಮುದಾಯ ಭವಿಷ್ಯತ್ತಿನಲ್ಲಿ ದಸರೆಯನ್ನು ಬಿಡಬೇಕಾಗಿ ಬರಬಹುದೆಂದು. ಜಾಗ್ರತೆ…!

3 ಟಿಪ್ಪಣಿಗಳು Post a comment
  1. Goutham
    ನವೆಂ 7 2016

    ಭವಿಷ್ಯತ್ತಿನಲ್ಲಿ ದಸರೆಯನ್ನು ಬಿಡಬೇಕಾಗಿ ಬರಬಹುದೆ೦ಬ ನಿಮ್ಮ ಆತಂಕಕ್ಕೆ ಕಾರಣವೇ ಇಲ್ಲ. ದೇಶಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಟಿಪ್ಪುವನ್ನು ನೆನೆಯುವುದು ನಮ್ಮ ಮತ್ತು ನಿಮ್ಮ ಕೆರ್ತವ್ಯ .

    ಉತ್ತರ
    • vasu
      ನವೆಂ 7 2016

      ಟಿಪ್ಪು ನಿಮಗೆ ಆದರ್ಶ, ನಮಗಲ್ಲ. ಅವನ ಜಯಂತಿಯನ್ನು ವಿರೋಧಿಸುವುದು ನಮ್ಮ ಕರ್ತವ್ಯ. ನಮ್ಮದು ಪ್ರಜಾಪ್ರಭುತ್ವ. ನಿಮ್ಮ ಸುಳ್ಳು ಧೋರಣೆ ಮತ್ತು ವಕ್ತವ್ಯಗಳನ್ನು ವಿರೋಧಿಸುವ, ಅಲ್ಲಗಳೆಯುವ ಹಕ್ಕು ನಮಗಿದೆ.

      ಉತ್ತರ
  2. ಶೆಟ್ಟಿನಾಗ ಶೇ.
    ನವೆಂ 7 2016

    “ಮೇಲುಕೋಟೆಯಲ್ಲಿ ಕೈಗೆ ಸಿಕ್ಕ ಹೆಂಗಸರ ಮೇಲೆ ನಡೆದ ಮಾನಭಂಗ ಅದ್ಯಾವ ಮಟ್ಟಕ್ಕಾಗಿರಬೇಕು ಎಂದು ಬೇರೆ ವಿವರಿಸಬೇಕಿಲ್ಲ.”

    ಇದು ಖಚಿತ ದಾಖಲೆಗಳೊಂದಿಗೆ ಪುರಾವಿತ ಸತ್ಯವೋ ಅಥವಾ ಹಿಂದುತ್ವವಾದಿಗಳು ತೇಲಿ ಬಿಡುತ್ತಿರುವ ಮತಾಂಧ ಗುಮಾನಿಯೋ? ಮಾಂಡಯಂ ಅಯಂಗಾರ್ಯರು ಈ ಘಟನೆ ಬಗ್ಗೆ ಏನನ್ನುತ್ತಾರೆ? ಇದು ನಿಜವಾಗಿಯೂ ಘಟಿಸಿದೆ ಎಂದು ಅವರು ಒಪ್ಪುತ್ತಾರಾ?

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments