ಸದ್ಯದ ಸನ್ನಿವೇಶದಲ್ಲಿ ನಮ್ಮ ಮಾಧ್ಯಮಗಳ ನಡೆ ಸರಿಯಾಗಿದೆಯೇ..?
– ಮು ಅ ಶ್ರೀರಂಗ
ದಿನ ನಿತ್ಯ ಮಾಮೂಲಾಗಿ ಸಾಗುತ್ತಿದ್ದ ಜೀವನಕ್ಕೆ ಸ್ವಲ್ಪ ತಡೆ ಉಂಟಾದಾಗ ಮನಸ್ಸಿಗೆ ಕಸಿವಿಸಿ ಆಗುವುದು ಸಹಜ. ೫೦೦ ಮತ್ತು ೧೦೦೦ ನೋಟುಗಳ ಚಲಾವಣೆಯ ನಿಷೇಧದ ಪರಿಣಾಮದಿಂದಲೂ ಹೀಗಾಗಿದೆ. ಬಸ್ಸು, ರೈಲು, ವಿಮಾನ, ನೀರು, ವಿದ್ಯುತ್ತು ಇವುಗಳ ದರ ಇಷ್ಟನೇ ತಾರೀಖಿನಿಂದ ಹೆಚ್ಚಾಗುತ್ತದೆ ಎಂದು ಮುಂಚಿತವಾಗಿ ಘೋಷಣೆ ಮಾಡಿದಂತೆ ನೋಟಿನ ವಿಷಯದಲ್ಲಿ ಮಾಡಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಅದರ ಹಿಂದಿನ ಉದ್ದೇಶವೇ ನಿರರ್ಥಕವಾಗುತ್ತದೆ. ಇದು ಸಾಮಾನ್ಯ ಜ್ಞಾನ. ಆ ಎರಡು ನೋಟುಗಳ ಬದಲಾವಣೆಗಾಗಿ ೫೦ ದಿನಗಳ ಕಾಲಾವಕಾಶವಿದೆ. ಆದರೆ ಹೆಚ್ಚಿನ ಪತ್ರಿಕೆ ಮತ್ತು ಟಿ ವಿ ಸುದ್ದಿ ಮಾಧ್ಯಮಗಳು ನೆಗೆಟಿವ್ ಧೋರಣೆಗೆ ಕೊಟ್ಟಷ್ಟು ಮಹತ್ವವನ್ನು ಧನಾತ್ಮಕ ಸುದ್ದಿಗಳಿಗೆ ಕೊಡದೆ ಇರುವುದು ಸಮಸ್ಯೆಯು ಜಟಿಲವಾಗುತ್ತಿದೆ ಎಂಬ ಭಾವನೆಯನ್ನು ಜನರಲ್ಲಿ ಹರಡುತ್ತಿದೆ.
ಸೊರಬದ ರಾಷ್ಟ್ರೀಕೃತ ಬ್ಯಾಂಕ್ ಒಂದರ ಚೀಫ್ ಮ್ಯಾನೇಜರ್ ಒಬ್ಬರು ಖಾಯಿಲೆಯಿಂದ ಬಳಲುತ್ತಿದ್ದ ವೃದ್ಧರ ಮನೆಗೇ ಹೋಗಿ ಅವರ ಖಾತೆಯಿಂದ ಸುಮಾರು ಇಪ್ಪತ್ತು ಸಾವಿರ ರೂಪಾಯಿಗಳನ್ನು withdraw ಮಾಡಿ ಕೊಟ್ಟರು. ಅವರ ಬ್ಯಾಂಕ್ ಆ ತಾಲೂಕಿನ ಸುಮಾರು 233 ಬ್ಯಾಂಕ್ ಗಳಿಗೆ ಹಣ ಸಪ್ಲೈ(cash chest) ಮಾಡಬೇಕಾದ ಹೊಣೆ ಹೊತ್ತಿರುವಂತಹುದು. ಅವರಿಗೆ ಕೆಲಸದ ಒತ್ತಡ ಎಷ್ಟಿರಬಹುದು ಸ್ವಲ್ಪ ಯೋಚಿಸಿ .ಅಂತಹುದರಲ್ಲೂ ಒಬ್ಬ ವೃದ್ಧರಿಗೆ ಅವರ ಮನೆಗೇ ಹೋಗಿ ಸಹಾಯ ಮಾಡಿದ್ದಾರೆ. ಇಂತಹ ಉದಾಹರಣೆಗಳು ಇನ್ನೂ ಇರಬಹುದು. ಆದರೆ ಸದಾ ಟಿ ಆರ್ ಪಿ ಮೇಲೆ ಕಣ್ಣಿಟ್ಟು ಬ್ರೇಕಿಂಗ್ ನ್ಯೂಸ್ ಕೊಡುವುದರಲ್ಲಿ ಮಗ್ನವಾಗಿರುವ ವರದಿಗಾರರಿಗೆ ಕಾಣುತ್ತಿಲ್ಲ ಅಷ್ಟೇ. ಬ್ಯಾಂಕ್ ಮತ್ತು ಅಂಚೆಕಚೇರಿಯ ನೌಕರರು ಭಾನುವಾರ, ರಜಾದಿನಗಳಲ್ಲಿ ಸಹ ದಿನಕ್ಕೆ ಹದಿನೈದು ಗಂಟೆಗಳಷ್ಟು ಕಾಲ ಗೊಣಗದೆ ದುಡಿದಿದ್ದಾರೆ. ಬ್ಯಾಂಕ್ ಉದ್ಯೋಗಿಗಳು ಸೇಫ್ ಆಗಿ ನಡು ರಾತ್ರಿ ಮನೆ ತಲುಪಲು ಸಂಸ್ಥೆಯೊಂದು ಉಚಿತವಾಗಿ ಕಾರಿನ ವ್ಯವಸ್ಥೆ ಮಾಡಿದೆ. ಸರ್ಕಾರ ಕೆಲಸದ ಒತ್ತಡವನ್ನು ನಿವಾರಿಸಿ, ಜನಗಳಿಗೆ ಅನುಕೂಲವಾಗಲೆಂದು ನಿವೃತ್ತ ಬ್ಯಾಂಕ್ ನೌಕರರನ್ನು ನೋಟು ಬದಲಾವಣೆಯ ಕೆಲಸಕ್ಕೆ ತೆಗೆದುಕೊಳ್ಳಿ ಎಂದು ಎಲ್ಲಾ ಬ್ಯಾಂಕಿನ ಆಡಳಿತದ ಮುಖ್ಯಸ್ಥರಿಗೆ ಹೇಳಿದೆ. ಎ ಟಿ ಎಂ ಗಳ ಕೆಲಸ ನಿರ್ವಹಣೆಗೆ ತೊಂದರೆಯಾಗಿದೆ. ನಿಜ. ಅದಕ್ಕೆ ಕಾರಣ ಅವುಗಳನ್ನು ಹೊಸ ನೋಟಿನ ತಂತ್ರಜ್ಞಾನಕ್ಕೆ ತಕ್ಕಂತೆ ಬದಲಾಯಿಸಬೇಕಾಗಿರುವುದು. ಇದನ್ನು ಮುಂಚೆಯೇ ಹೇಗೆ ಮಾಡಲು ಸಾಧ್ಯ? ಅದನ್ನು ಮಾಡುವ ಸಿಬ್ಬಂದಿಗಾದರೂ ಕಾರಣ ಹೇಳಬೇಕಲ್ಲ. ಅಲ್ಲಿಗೆ ಗೌಪ್ಯತೆ ಎಲ್ಲಿ ಉಳಿಯಿತು?
ನಗರದ ಜನ ನಿಬಿಡ ಸ್ಥಳಗಳಿಗೆ, ಬಡಾವಣೆಗಳಿಗೆ, ಗ್ರಾಮೀಣ ಪ್ರದೇಶಗಳಿಗೆ ಮೊಬೈಲ್ ಎ ಟಿ ಎಂ ಸೇವೆಯನ್ನು ಕೆಲವು ಬ್ಯಾಂಕಿನವರು ಒದಗಿಸಿದ್ದಾರೆ. ನೀರು, ವಿದ್ಯುತ್ತು, ಆಸ್ತಿ ತೆರಿಗೆ ಇತ್ಯಾದಿ ನಾಗರಿಕ ಸೇವೆಗಳ ಶುಲ್ಕವನ್ನು ಹಳೆಯ ನೋಟುಗಳಲ್ಲೇ ಪಾವತಿಸುವ ಅವಕಾಶ ಕಲ್ಪಿಸಿದೆ. ಚಿಲ್ಲರೆ ಸಮಸ್ಯೆ ನಿವಾರಣೆಗಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಕೊಡಬೇಕಾಗಿಲ್ಲ ಎಂದು ಹೇಳಿದೆ. ಮತ್ತು ಅದೇ ರೀತಿ ನಡೆಯುತ್ತಿದೆ. ಇನ್ನೆರೆಡು ಮೂರು ದಿನಗಳಲ್ಲಿ ಪೆಟ್ರೋಲ್ ಬಂಕ್ ಗಳಲ್ಲಿ ಸಹ ನೋಟಿನ ವಿನಿಮಯಕ್ಕೆ ಅವಕಾಶ ಕಲ್ಪಿಸಲಿದೆ. ಇವೆಲ್ಲ ಸುದ್ದಿಗಳಿಗೆ ಕೊಡಬೇಕಾದಷ್ಟು ಮಹತ್ವವನ್ನು ನಮ್ಮ ಸುದ್ದಿ ಮಾಧ್ಯಮಗಳು ಕೊಟ್ಟರೆ ಸಾಮಾನ್ಯ ಜನಗಳಿಗೆ ಆತಂಕ ಕಡಿಮೆಯಾಗುತ್ತದೆ. ಇದು ಆಗುತ್ತಿಲ್ಲ. ಸ್ಟಾಕ್ ಶಾಟ್ಸ್/ವಿಡಿಯೋಗಳನ್ನೇ ಮತ್ತೆ ಮತ್ತೆ ತೋರಿಸಿ ಆತಂಕವನ್ನು ಹೆಚ್ಚುಮಾಡುತ್ತಿದ್ದಾರೆ. ಇದುವರೆಗೆ ಡೆಬಿಟ್ ಕಾರ್ಡ್ ಮೂಲಕ ವ್ಯವಹಾರ ಮಾಡದ ಮಧ್ಯಮ ಶ್ರೇಣಿಯ
ಕಿರಾಣಿ ಅಂಗಡಿಗಳು,ಹೋಟೆಲ್ ಗಳು, ದರ್ಶಿನಿಗಳು ಅವುಗಳನ್ನು ಮಾಡಲು ತೊಡಗಿವೆ. ಬ್ಯಾಂಕ್ ಖಾತೆ ಇಲ್ಲದವರಿಗೆ/ಡೆಬಿಟ್ ಕಾರ್ಡ್ ಇಲ್ಲದವರಿಗೆ ಅಥವಾ ಉಪಯೋಗಿಸಲು ಬಾರದ ತೀರಾ ಕೆಳವರ್ಗದ ಜನಗಳಿಗೆ, ಗ್ರಾಮೀಣ ಭಾಗದ ಜನರಿಗೆ ಸ್ವಲ್ಪ ತೊಂದರೆ ಆಗಿದೆ. ಇಲ್ಲವೆಂದಲ್ಲ. ಅಲ್ಲೂ ನಂಬಿಕೆಯ ಮೇಲೆ ಈವರೆಗೆ ವ್ಯಾಪಾರಸ್ಥರ ಜತೆ ಒಳ್ಳೆಯ ವ್ಯವಹಾರ ನಡೆಸಿದವರಿಗೆ ತೊಂದರೆ ಆಗುವುದು ತಪ್ಪಿರಬಹುದು. ನಗರ ಪ್ರದೇಶದಲ್ಲಿ ಉತ್ತಮ ಬಾಂಧವ್ಯ ಹೊಂದಿರುವ ಗಿರಾಕಿಗಳಿಗೆ ಅಂಗಡಿಯವರು ಸಾಲ ಕೊಟ್ಟ ನಿದರ್ಶನಗಳಿವೆ. ಗ್ರಾಮೀಣ ಭಾರತವೂ ಸೇರಿದಂತೆ ಇಡೀ ಭಾರತದ ಎಲ್ಲಾ ನಾಗರಿಕರಿಗೂ ಬ್ಯಾಂಕ್ ಖಾತೆಯಿರಬೇಕೆಂದು ಕೇಂದ್ರ ಸರ್ಕಾರ ಬ್ಯಾಂಕ್ ಖಾತೆ ತೆರೆಯಲು ಬೇಕಾದ ಪ್ರಾರಂಭಿಕ ಶುಲ್ಕದ ಅಗತ್ಯವಿಲ್ಲದ ‘ಶೂನ್ಯ ಶುಲ್ಕ ಖಾತೆ’ಯನ್ನು (zero balance account) ಸುಮಾರು ಎರಡು ವರ್ಷಗಳ ಹಿಂದೆಯೇ ಜಾರಿಗೆ ತಂದಿತು. ಇದರ ಪರಿಣಾಮವಾಗಿ ಇಂದು 25.51 ಕೋಟಿಯಷ್ಟು ಜನ ಧನ ಖಾತೆಗಳು ತೆರೆಯಲ್ಪಟ್ಟಿವೆ. ಮತ್ತು ಅವುಗಳಲ್ಲಿ 45.636 ಕೋಟಿಯಷ್ಟು ಹಣವನ್ನು ನಮ್ಮ ಗ್ರಾಮೀಣ ಭಾಗದ ಜನಗಳು ಠೇವಣಿಮಾಡಿದ್ದಾರೆ. ಇದು ಗಿನ್ನಿಸ್ ದಾಖಲೆಯಾಗಿದೆ.
ಇದಲ್ಲದೆ ಸರ್ಕಾರ ಕೊಡುವ ಎಲ್ಲಾ ಸಹಾಯಧನಗಳು(subsidy) ನೇರವಾಗಿ ಫಲಾನುಭವಿಗಳಿಗೇ ತಲುಪಬೇಕೆಂಬ ಉದ್ದೇಶದಿಂದ ಅವರವರ ಬ್ಯಾಂಕ್ ಖಾತೆಗೇ ಸರ್ಕಾರ ಜಮಾ ಮಾಡುತ್ತಿದೆ. ಹೀಗಾಗಿ ಇಂದು ಪ್ರತಿಯೊಬ್ಬರೂ /ಪ್ರತಿ ಸಂಸಾರವೂ ಬ್ಯಾಂಕ್ ಖಾತೆ ಹೊಂದಿರುವುದು ಅನಿವಾರ್ಯವಾಗಿದೆ. ಆದ್ದರಿಂದ ಸರ್ಕಾರ ಒಂದು ಒಳ್ಳೆಯ ಉದ್ದೇಶದಿಂದ ಜಾರಿಗೆ ತಂದಿರುವ ೫೦೦ ಮತ್ತು ೧೦೦೦ ರೂಪಾಯಿಗಳ ನಿಷೇಧವನ್ನು ಬ್ಯಾಂಕ್ ಮುಂದಿನ ಸರತಿಯ ಸಾಲಿನ (ಕ್ಯೂ) ಉದ್ದ ನೋಡಿ ಟೀಕಿಸುವುದು ಸರಿಯಲ್ಲ.
೧. ಈ ಹಿಂದೆಯೂ ನಮ್ಮಲ್ಲಿ ರೇಷನ್ ಅಂಗಡಿಯ ಮುಂದೆ,ಬಸ್ಸು,ರೈಲು ನಿಲ್ದಾಣಗಳಲ್ಲಿ ಕ್ಯೂ ಇರಲಿಲ್ಲವೇ? ಈಗಲೂ ಇಲ್ಲವೇ? ನೆಚ್ಚಿನ ನಾಯಕ ನಟರ ಸಿನಿಮಾ ನೋಡಲು, ಐಪಿಎಲ್ ಕ್ರಿಕೆಟ್ ಮ್ಯಾಚ್ ನೋಡಲು ಟಿಕೆಟ್ ಗಾಗಿ ಕ್ಯೂ ನಿಲ್ಲುತ್ತಿಲ್ಲವೇ?
೨. ಇನ್ನು ಹಾಲಿ ರಾಜ್ಯದ ಸಚಿವರೊಬ್ಬರು ವಿಮಾನ ಪ್ರಯಾಣಕ್ಕೆ ದುಡ್ಡಿಲ್ಲದೆ ಟ್ರಾವೆಲ್ ಏಜೆಂಟ್ ಬಳಿ ಸಾಲ ಹೇಳಿ ಊರಿಗೆ ಬಂದದ್ದು, ಮಾಜಿ ಮೇಯರ್ ಒಬ್ಬರು ನನಗೆ ಬ್ಯಾಂಕ್ ನ ಡೆಬಿಟ್ ಕಾರ್ಡ್ ಉಪಯೋಗಿಸಲು ಬರುವುದಿಲ್ಲ; ತುಂಬಾ ಕಷ್ಟವಾಗಿದೆ ಎಂದು ಹೇಳಿದ್ದನ್ನು ಪತ್ರಿಕೆಯೊಂದು ಬಾಕ್ಸ್ ಐಟಂ ಸುದ್ದಿ ಮಾಡಿದ್ದನ್ನು ಎಷ್ಟರ ಮಟ್ಟಿಗೆ ನಂಬಬಹುದು? ಆ ಸಚಿವರ ಬಳಿ ಡೆಬಿಟ್ ಕಾರ್ಡ್/ಕ್ರೆಡಿಟ್ ಇರಲಿಲ್ಲವೇ ಎಂಬುದನ್ನು ಪ್ರಶ್ನಿಸದೆ ಇದ್ದ ವರದಿಗಾರರ ಉದ್ದೇಶವೇನು?
೩. ಭಾರತದಂತಹ ವಿಶಾಲವಾದ ಪ್ರಜಾಪ್ರಭುತ್ವದ ದೇಶದಲ್ಲಿ ಕೇಂದ್ರ ಸರ್ಕಾರದ ಯಾವುದಾದರೊಂದು ಮಹತ್ವದ ನಿರ್ಣಯದ ಫಲಿತಾಂಶ ತಿಳಿಯಬೇಕಾದರೆ ಸುಮಾರು ಆರೇಳು ತಿಂಗಳಾದರೂ ಬೇಕು. ಹೀಗಾಗಿ ಹತ್ತೇ ದಿನಕ್ಕೆ ಇದರಿಂದ ಪ್ರಯೋಜನವಿಲ್ಲ, ಇತ್ಯಾದಿ ಕವಡೆ ಶಾಸ್ತ್ರ ಹೇಳುವುದನ್ನು ಬಿಟ್ಟು ನಮ್ಮ ಜನಗಳು, ಮಾಧ್ಯಮಗಳು ಸರ್ಕಾರದೊಂದಿಗೆ ಸಹಕರಿಸಬೇಕು. ಸಾಧ್ಯವಾದರೆ, ಬಿಡುವಿದ್ದರೆ ಬ್ಯಾಂಕ್ ಮುಂದೆ ಸರತಿಸಾಲಿನಲ್ಲಿ ನಿಂತಿರುವ ಜನರಿಗೆ ಅರ್ಜಿ ತುಂಬಿಸಿ ಕೊಡುವುದು, ನೀರು ಕೊಡುವುದು ಇತ್ಯಾದಿ ಸ್ವಲ್ಪ ಮಟ್ಟಿನ ಸಹಾಯ ಮಾಡಬಹುದು. ಆಗದಿದ್ದರೆ ಸಾಮಾಜಿಕ ಸುದ್ದಿ ತಾಣಗಳಾದ face book, whatsapp, blog ಇತ್ಯಾದಿಗಳ ಮೂಲಕ ಅಪಪ್ರಚಾರ ಮಾಡುವುದನ್ನಾದರೂ ನಿಲ್ಲಿಸಬೇಕು.
ಉತ್ತಮ ಲೇಖನ.
ದುಷ್ಟ ಚತುಷ್ಟಯರಾದ ನಾಗ,ಸಲಾಂಸಾಬಿ,ಗೋತಾಮ್,ಇತ್ಯಾದಿಗಳು ಓದಿಕೊಂಡು ಸ್ವಲ್ಪ ಬುದ್ಧಿ ಕಲಿಯತಕ್ಕದ್ದು.
ನೋಟು ನಿವೃತ್ತಿ ಹೇರಿಕೆಗೆ ಪ್ರತಿಯಾಗಿ ಈ ನಾಡಿನ ಬಡವರೂ ಸ್ತ್ರೀಯರೂ ದೀನ ದಲಿತರೂ ಶೂದ್ರಾತಿಶೂದ್ರರೂ ಅಲ್ಪಸಂಖ್ಯಾತರೂ ಸಂತ್ರಸ್ತ ಮಧ್ಯಮವರ್ಗದವರೂ ತುಘಲಕ್ ಶಾಹಿಗೆ ಬುದ್ಧಿ ಕಲಿಸಲಿದ್ದಾರೆ. ಉತ್ತರಪ್ರದೇಶದಲ್ಲಿ ಮಾಯಾವತಿ ಅಕ್ಕನ ಅಲೆ ಎಲ್ಲೆಲ್ಲೂ ಕಂಡುಬರುತ್ತಿದೆ. ನಿನ್ನೆ ಸೋನಿಯಾ ಅಮ್ಮ ರಾಜದೀಪ ಸರ್ದೆಸಾಯಿಗೆ ನೀಡಿದ ಸಂದರ್ಶನಕ್ಕೆ ದೇಶಾದ್ಯಂತ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಪಂಜಾಬಿನಲ್ಲಿ ಅರವಿಂದ್ ಅಣ್ಣನ ಬಗ್ಗೆ ಎಲ್ಲೆಲ್ಲೂ ಭಾರೀ ಭರವಸೆ ಇದೆ. ದೇಶದಲ್ಲಿ ಬರಲಿದೆ ಬದಲಾವಣೆ. ನೀವೂ ಬದಲಾಗಿ.
ಮಾಧ್ಯಮಗಳು ಈ ವಿಚಾರದಲ್ಲಿ ಯಾವುದೇ ತಪ್ಪು ಮಾಡುತ್ತಿಲ್ಲ. ತಾವು ವಿನಾಕಾರಣ ಅಸಹನೆ ವ್ಯಕ್ತಪಡಿಸಿರುವಿರಿ. ಮತ್ತೊಂದು ವಿಷಯ. ಕವಡೆ ಶಾಸ್ತ್ರ ಎಂಬುದನ್ನು ಉಲ್ಲೇಖಿಸಿರುವುದಕ್ಕೆ ತಮಗೆ ಅಭಿನಂದನೆಗಳು.
ಆತ್ಮೀಯ ನಿಲುಮೆಯ ಸಂಪಾದಕರೆ, ಬಹಳ ಸಮಯದಿಂದ ಬೈಗುಳ ಹಾಗೂ ಕೆಟ್ಟ ಭಾಷೆಯನ್ನು ಬಳಸಿ ನಿಂದಾಪ್ರಧಾನವಾದ ಕಾಮೆಂಟುಗಳನ್ನು ಮಾತ್ರ ಮಾಡುತ್ತಾ ಬರುತ್ತಿರುವ ಸುದರ್ಶನ ರಾವ್ ಹಾಗೂ WITIAN ಅವರನ್ನು ಒಂದು ತಿಂಗಳ ಮಟ್ಟಿಗಾದರೂ ನಿಲುಮೆಯಿಂದ ನಿಷೇಧಿಸಿ. ನಾಗಶೆಟ್ಟಿಯಂತಹ ಮೂರ್ಖರನ್ನು ಸಹಿಸಬಹುದು ಆದರೆ ಸದಾ ಹೊಲಸನ್ನೇ ಉಗುಳುವವರನು ಸಹಿಸಲಾಗದು.
“ನಿನ್ನ ಹೆಸರು ಕೂಡಾ ಹಾಕಲಾರದ ಹೇತ್ಲಾಂಡಿಗಳಿಂದ ಮಾತ್ರ ಇಂತಹ ಸಲಹೆಗಳು ಬರಲು ಸಾಧ್ಯ”
ಮತ್ತದೇ ಕೆಟ್ಟ ಭಾಷೆ ಬೈಗುಳ! ಈ ರೀತಿಯ ದುರಾಚಾರ ವರ್ತನೆಯನ್ನು ಮುಂದುವರೆಸಿದರೆ ನಿಮ್ಮೊಡನೆ ಸಕಾರಾತ್ಮಕ ಚರ್ಚೆ ಸಾಧ್ಯವಾಗುವುದು ಹೇಗೆ? ನಾನು ಹಿಂದೆ ಹೇಳಿರುವಂತೆ ನಾಗಶೆಟ್ಟಿಯಂತಹ ಮೂರ್ಖರನ್ನು ಸಹಿಸಬಹುದು ಆದರೆ ಸದಾ ಹೊಲಸನ್ನೇ ಉಗುಳುವವರನ್ನು ಸಹಿಸಲಾಗದು.
I have told you before. Whether u tolerate or mot is immaterial to me. Simply you can not reason with nagashetty and alikes.
ಸುದರ್ಶನ್ ನಿಮ್ಮ ಕಮೆಂಟುಗಳು ಅಸಹ್ಯಕರವಾಗಿವೆ, ಇದರಿಂದ ನಿಲುಮೆಗೆ ಕೆಟ್ಟ ಹೆಸರು ಬರುತ್ತಿದೆ. ಇದನ್ನು ನಾನಷ್ಟೇ ಅಲ್ಲ ಹಲವರು ಹೇಳಿದ್ದಾರೆ. ಬೇರೆಯವರನ್ನು ಹೆತ್ಲಾಂಡಿ ಎಂದು ಜರಿಯುವ ನೀವು ನಿಮ್ಮ ದುರ್ವರ್ತನೆಗೆ ನಾಗಶೆಟ್ಟಿಯನ್ನು ಕಾರಣವಾಗಿಸುವುದು ಸರಿಯಲ್ಲ. ನಾಗಶೆಟ್ಟಿ ಪ್ರಲೋಭನೆ ಎಂದ ಮಾತ್ರಕ್ಕೆ ನೀವು ನಗ್ನರಾಗಿ ನರ್ತಿಸಬೇಕೇ? ಸಂಯಮ ಬೇಡವೇ? ಇದೇನಾ ನೀವು ಬ್ರಾಹ್ಮಣರಾಗಿ ಪಡೆದ ಸಂಸ್ಕಾರ? ಇನ್ನಷ್ಟು ಕೆಟ್ಟ ಮಾತುಗಳಿಂದ ನನ್ನನ್ನು ಹಾಗೂ ಇತರ ಓದುಗರನ್ನು ಜರಿಯುವ ಮೊದಲು ಬ್ರಾಹ್ಮಣನಲ್ಲಿರಬೇಕಾದ ಶಮ ದಮಗಳ ಬಗ್ಗೆ ಕರ್ತವ್ಯನಿರತರಾಗಿ ನಿಮ್ಮ ಬ್ರಾಹ್ಮಣ್ಯವನ್ನು ಉಳಿಸಿಕೊಳ್ಳಿ.
ರೀ ಶೆಟ್ಟರೆ, ಅದೇನು ನಿಮಗೆ ನಾಗಶಿಟ್ಟಿಯ ಬಗ್ಗೆ ಅಥವಾ ಹರಾಮ್ ಬಾವಾನ ಬಗ್ಗೆ ಅಷ್ಟು ಪ್ರೀತಿ? ನಾಗಶಿಟ್ಟಿ ಬರೆದ ಕಮೆಂಟನ್ನು ಮಾತ್ರ ಹಾಗೇ ಉಳಿಸಿಕೊಂಡು ನನ್ನ ಕಮೆಂಟನ್ನು ಅಳಿಸಿಹಾಕಿದ್ದೀರಲ್ಲ! ನಿಮಗೆ ಈ ಅಧಮನ ಬಗ್ಗೆ ಪ್ರೀತಿ ಇದ್ದರೆ ನಿಮ್ಮ ಮನೆಗೇ ಕರೆದು ಇಟ್ಟುಕೊಳ್ಳಿ, ಮಾಡರೇಷನ್ ನಲ್ಲೇಕೆ ಈ ಪ್ರೀತಿಯನ್ನು ತೋರಿಸುತ್ತೀರಿ? ಅಥವಾ ಎಲ್ಲಿ ನಿಮ್ಮ ಕುರಿತೂ ಕಾಮೆಂಟ್ ಹಾಕುವರೋ ಎಂಬ ಭಯವೇ?
ಪ್ರತಿ ಲೇಖನಕ್ಕೂ ಅವೇ ಕಿತ್ತೋದ ಪ್ರತಿಕ್ರಿಯೆ ಬರೆಯುತ್ತಾ, ಆರೋಗ್ಯಪೂರ್ಣ ಚರ್ಚೆಯನ್ನು ಹಳ್ಳ ಹಿಡಿಸುವ ಕೆಲಸ ಮಾಡುವ ನಾಗಶಿಟ್ಟಿ ಮತ್ತು ಹರಾಮ್ ಬಾವಾ ಗಳಿಗೆ ಅವರ ತಪ್ಪನ್ನು ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಹೇಳುವ ಪ್ರಯತ್ನ ನಾನು ಮಾಡುತ್ತಿದ್ದೇನೆ. ಯಾರೋ anonymous ಹೆಸರಿನಲ್ಲಿ ಪ್ರತಿಕ್ರಿಯೆ ಹಾಕಿದ ತಕ್ಶಣ ನನ್ನ ಕಮೆಂಟುಗಳನ್ನು ಅಳಿಸಿ ಹಾಕಿದ್ದೀರಲ್ಲ, ನಾಗಶಿಟ್ಟಿಯ ‘ದೀಡುಪಂಡಿತ’ ತನದ ಕಮೆಂಟುಗಳನ್ನು ಬಾಯಿ ಚಪ್ಪರಿಸಿಕೊಂಡು ಓದುತ್ತೀರೇನೋ, ಓದಿಕೊಳ್ಳಿ.
ಈ ಹಿಂದೆಯೇ ಬರೆದಂತೆ ಮೌಲಿಕವಾದ ಲೇಖನಗಳಿಗೆ ಸಭ್ಯಭಾಷೆಯಲ್ಲೇ ಪ್ರತಿಕ್ರಿಯಿಸಿದ್ದೇನೆ, ಮುಂದೂ ಬರೆಯುತ್ತೇನೆ. ನನ್ನ ಕಮೆಂಟುಗಳನ್ನು ಮಾತ್ರ ಅಳಿಸಿಹಾಕುವುದು ಮುಂದುವರಿದರೆ, ನಿಮ್ಮಲ್ಲಿ ಪ್ರಕಟವಾಗುವ ಲೇಖನಗಳಿಗೆ ಸಂದುವುದು ನಾಗಶಿಟ್ಟಿ, ಗೌ’ತಮ’, ಹರಾಮ್ ಬಾವಾಗಳಂತಹವರ “ಕಾಪಿ-ಪೇಸ್ಟ್” ಪ್ರತಿಕ್ರಿಯೆಗಳು ಮಾತ್ರ ಎನ್ನುವುದನ್ನೂ ನೆನಪಿಡಿ.
ನಿನ್ನ ಯೋಗ್ಯತೆಗೆ ಸರಿಯಾಗಿ ಇಕ್ಕಿದ್ದಾರೆ ಬಾವ ಭಾಯಿ. ತೊಲಗಾಚೆ.