ವಿಷಯದ ವಿವರಗಳಿಗೆ ದಾಟಿರಿ

Archive for

14
ಡಿಸೆ

ಭಗವದ್ಗೀತೆ ಹೇಳುವ ಆಹಾರ ಆದರ್ಶ

ಡಾ. ಶ್ರೀಪಾದ ಭಟ್
ಸಹಾಯಕ ಪ್ರಾಧ್ಯಾಪಕ
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

krsna_eatingಆಹಾರ ಎಂದರೆ ದೇಹಕ್ಕೆ ಪೌಷ್ಟಿಕಾಂಶಗಳನ್ನು ಒದಗಿಸುವ ಯಾವುದೇ ಪದಾರ್ಥ “ಪೋಷಕಾಂಶ (ಪ್ರೊಟೀನು), ಶರ್ಕರಪಿಷ್ಟ (ಕಾರ್ಬೊಹೈಡ್ರೇಟು) ಮತ್ತು ಕೊಬ್ಬು (ಫ್ಯಾಟ್)ಗಳನ್ನು ಅಗತ್ಯವಾಗಿ ಒಳಗೊಂಡ, ದೇಹದ ಪೋಷಣೆ, ಬೆಳವಣಿಗೆ, ಸುಭದ್ರತೆಗೆ ಕಾರಣವಾಗುವ ವಸ್ತು” ಎಂದು ವಿಶ್ವಕೋಶ ಹೇಳುತ್ತದೆ. ಆಹಾರ ವಸ್ತು ಮೂಲತಃ ಸಸ್ಯ ಅಥವಾ ಪ್ರಾಣಿ ಮೂಲದ್ದಿರಬಹುದು. ಅದರಲ್ಲಿ ಜೀವಿಗಳ ಬೆಳವಣಿಗೆಗೆ ಅಗತ್ಯವಾದ ಮೇಲ್ಕಂಡ ಧಾತುಗಳ ಜೊತೆಗೆ ವಿಟಮಿನ್ ಮತ್ತು ಖನಿಜಾಂಶಗಳು ಇದ್ದಾಗ ಮಾತ್ರ ಅಂಥ ವಸ್ತುವನ್ನು ಆಹಾರ ಎನ್ನಲಾಗುತ್ತದೆ. ಆಹಾರ ಸೇವಿಸಿದ ದೇಹದ ವ್ಯವಸ್ಥೆ ಆಹಾರದಲ್ಲಿನ ಮೂಲವಸ್ತುಗಳನ್ನು ಬೇರ್ಪಡಿಸಿ, ತನ್ನ ಕೋಶಗಳ ಮೂಲಕ ದೇಹದ ವಿವಿಧ ಭಾಗಗಳಿಗೆ ಧಾತುಗಳನ್ನು ಪ್ರವಹಿಸಿ ದೇಹದಲ್ಲಿ ಶಕ್ತಿ ಸಂಚಯನವಾಗುವಂತೆ ಮಾಡುತ್ತದೆ, ದೇಹದ ಬೆಳವಣಿಗೆಗೂ ಕಾರಣವಾಗುತ್ತದೆ. ಇದು ಆಹಾರದ ಬಗ್ಗೆ ಆಧುನಿಕ ವಿಜ್ಞಾನ ಹೇಳುವ ಮಾತು. ಮತ್ತಷ್ಟು ಓದು »

13
ಡಿಸೆ

ಅಖಂಡ ದರ್ಶನ..!

ಮೂಲ ( ತೆಲುಗು ) :- ಟಿ ಶ್ರೀವಲ್ಲೀ ರಾಧಿಕ
ಕನ್ನಡಕ್ಕೆ :- ಬುಸಿರಾಜು ಲಕ್ಷ್ಮೀದೇವಿ ದೇಶಾಯಿ

dads-late-pregnancyಶಾಲೆಯಲ್ಲಿ ನಾವು ಮೂವರಿಗೆ ತ್ರಿಮೂರ್ತಿಗಳಂತಾನೆ ಹೆಸರು. ನಾನೇಕೆ ಈಗ ಈ ಕಥೆ ಹೇಳುವುದೆಂದರೆ ನಾನೊಬ್ಬ ಕಥೆಗಾರ. ಜೀವನದಲ್ಲಿ ಏನೇ ಸ್ವಲ್ಪ ವಿಚಿತ್ರವಾಗಿ ಜರುಗಿತೆಂದರೆ ಆ ವಿಷಯವನ್ನು ನಾಲ್ಕು ಜನರೊಂದಿಗೆ ಹಂಚಿಕೊಳ್ಳುವುದು ನನ್ನ ಅಭಿಲಾಷೆ. ಹರಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿ ಈಗಷ್ಟೇ ನಿವೃತ್ತಿ ಹೊಂದಿದ್ದಾನೆ. ಶಿವು ವಿಧ ವಿಧದ ವ್ಯಾಪಾರ ವ್ಯವಹಾರಗಳನ್ನು ನೋಡಿಕೊಳ್ಳುತ್ತಾನೆ. ಅವನಿಗೆ ಸಾಕಷ್ಟು ಸಂಪಾದನೆ ಇದೆ, ಇಂದೋರ್’ನಲ್ಲಿ ಸೆಟ್ಲ್ ಆಗಿದ್ದಾನೆ. ಇವತ್ತು ಅವನ ಫೋನ್’ನಿಂದಾನೆ ಕಥೆ ಶುರುವಾಯ್ತು. ಮತ್ತಷ್ಟು ಓದು »

12
ಡಿಸೆ

ಜಯಲಲಿತಾರನ್ನು ಚಿರಸ್ಮರಣೀಯವಾಗಿಸಿದ “ಅಮ್ಮ ಉನವಾಗಮ್”

– ಶ್ರೇಯಾಂಕ ಎಸ್ ರಾನಡೆ

26amma-kitchen1||ವಿಶ್ವಸಂಸ್ಥೆಯ ಅಂಗಸಂಸ್ಥೆ ಆಹಾರ ಮತ್ತು ಕೃಷಿ ಸಂಸ್ಥೆಯ ಇತ್ತೀಚಿನ “ವಿಶ್ವದ ಆಹಾರ ಅಭದ್ರತೆಯ ಪರಿಸ್ಥಿತಿ 2015″ರ ವರದಿಯ ಪ್ರಕಾರ ಭಾರತದಲ್ಲಿ ದಿನನಿತ್ಯ 19.46 ಕೋಟಿ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಭಾರತ ನಗರೀಕರಣಗೊಳ್ಳುತ್ತಿರುವ ದೇಶ. ಹಾಗಾಗಿ ಸರಿಯಾದ ಯೋಜನೆ ರೂಪಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳದ ಹೊರತು ನಗರೀಕರಣಗೊಂಡಂತೆಲ್ಲ ನಿರಾಶ್ರಿತರ, ಬಡವರ, ಹಸಿವಿನಿಂದ ಬಳಲುವವರ ಸಂಖ್ಯೆಯೂ ಹೆಚ್ಚಲಿದೆ. ತಕ್ಷಣದ ಪರಿಸ್ಥಿತಿಯಿಂದ ನೋಡಿದರೆ ಸರಕಾರಗಳ ಕಡಿಮೆ ಮೊತ್ತದ ಆದರೆ ಉತ್ತಮ ಗುಣಮಟ್ಟದ ‘ಅಮ್ಮ ಮೆಸ್’ನಂತಹ ಆಹಾರ ಪೂರೈಸುವ ಯೋಜನೆಗಳು ಈ ದೇಶದ ಹಸಿವು ಹಾಗೂ ಪೌಷ್ಟಿಕತೆಯ ಕೊರತೆಯನ್ನು ನೀಗಿಸಿ ದೇಶವನ್ನು ಮತ್ತಷ್ಟು ಉತ್ಪಾದಕಗೊಳಿಸಲು ಸಹಾಯ ಮಾಡುತ್ತವೆ.|| ಮತ್ತಷ್ಟು ಓದು »

10
ಡಿಸೆ

ಇದು ಆರಂಭ ಅಷ್ಟೇ; ಕಾದು ನೋಡೋಣ

– ಮು ಅ ಶ್ರೀರಂಗ

maxresdefault‘ಹಳ್ಳಿಗಳ ಮನೆಯಲ್ಲಿನ ಹೆಂಗಸರು’ ಆಪದ್ಧನ ಎಂದು ಕೂಡಿಡುವ ಹಣ ಸಾವಿರಾರು ರೂಪಾಯಿಗಳು ಇರಬಹುದು. ಆದರೆ ಲಕ್ಷಾಂತರ ರೂಪಾಯಿಗಳ ತನಕ ಇರುತ್ತದೆ ಎಂಬುದು ಕೇವಲ ಉತ್ಪ್ರೇಕ್ಷೆ. ಇದಕ್ಕೆ ಕಾರಣಗಳು ಹೀಗಿವೆ..

(೧). ಹಿಂದಿದ್ದಂತೆ ಈಗ ಹಳ್ಳಿಗಳಲ್ಲಿ ಅವಿಭಕ್ತ ಕುಟುಂಬಗಳು ಇಲ್ಲ. ತಾವು ಪಟ್ಟ ಹಳ್ಳಿಯ ಕಷ್ಟಗಳು ತಮ್ಮ ಮಕ್ಕಳಿಗೆ ಬೇಡ ಎಂದು ತಾಯಿತಂದೆಯರೇ ತಮ್ಮ ಮಕ್ಕಳನ್ನು ಓದು, ಕೆಲಸ ಎಂದು ಪಟ್ಟಣಕ್ಕೆ ಕಳಿಸುತ್ತಿದ್ದಾರೆ ಅಥವಾ ಮಕ್ಕಳೇ ಸ್ವತಃ ಹುಟ್ಟಿದೂರನ್ನು ಬಿಟ್ಟು ಪಟ್ಟಣಕ್ಕೆ ವಲಸೆ ಹೋಗಿಯಾಗಿದೆ. ಅವರು ಮತ್ತೆ ಬಂದು ಹಳ್ಳಿಯಲ್ಲಿ ತಮ್ಮಂತೆ ವ್ಯವಸಾಯ ಮಾಡಿಕೊಂಡಿರುವುದಿಲ್ಲ ಎಂದು ತಾಯಿ-ತಂದೆಯರಿಗೂ ಗೊತ್ತು; ಊರು ಬಿಟ್ಟು ಬಂದ ಮಕ್ಕಳು ಒಮ್ಮೆ ಪಟ್ಟಣ ವಾಸದ ರುಚಿ ಹತ್ತಿದ ಮೇಲೆ ಹಳ್ಳಿಗೆ ಹೋಗುವುದು ವರ್ಷಕ್ಕೊಮ್ಮೆ ಊರ ಜಾತ್ರೆಗೋ ಅಥವಾ ತಾಯಿ ತಂದೆಯರು ತೀವ್ರವಾದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ ಬಂದ ಮೇಲೆ ಅಷ್ಟೇ. ಮತ್ತಷ್ಟು ಓದು »

9
ಡಿಸೆ

‘ಶಿಕ್ಷಣ ಕ್ರಾಂತಿ’ಯ ಅನಿವಾರ್ಯತೆ

– ವಿನಾಯಕ ಪೈ
ಉಪನ್ಯಾಸಕರು
ಉಡುಪಿ

swami-vivekananda-quotes-educationಶಿಕ್ಷಣವೆಂದರೆ ಮೊದಲೇ ಮನುಷ್ಯನಲ್ಲಿ ಇರುವ ಪರಿಪೂರ್ಣತೆಯನ್ನು ಪ್ರಕಾಶಪಡಿಸುವುದು
– ಸ್ವಾಮಿ ವಿವೇಕಾನಂದ

ವಿವೇಕಾನಂದರು ಭಾರತ ಕಂಡಂತಹ ಶ್ರೇಷ್ಟ ಚಿಂತಕ, ಧೀರ ಸನ್ಯಾಸಿ, ಅಪ್ರತಿಮ ದೇಶ ಪ್ರೇಮಿ. ಸಾಮಾಜಿಕ ಒಡಕುಗಳ ವಿರುದ್ಧ ಪ್ರತಿಭಟಿಸಿ ಜಾಗೃತಿ ಸೃಷ್ಟಿಸಿದ ಸಮಾಜ ಸುಧಾರಕ. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಹಿರಿಮೆಯನ್ನು, ದೇಶದ ಅಂತಃಸತ್ವವನ್ನು ಮನೆ ಮನೆಯಲ್ಲಿ ಪಸರಿಸಿ ರಾಷ್ಟ್ರ ದೀವಿಗೆಯ ಬೆಳಕನ್ನು ಎಲ್ಲೆಲ್ಲೂ ಚೆಲ್ಲಿದ ಯುಗಪುರುಷ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಭಾರತದ ಬಗೆಗಿನ ದ್ವಂದ್ವಗಳನ್ನು, ಕೀಳರಿಮೆಯನ್ನು ಹೋಗಲಾಡಿಸಿ ಭಾರತ ಸರ್ವಕಾಲಕ್ಕೂ ಶ್ರೇಷ್ಟ ಎಂದು ಭೋಗರಾಷ್ಟ್ರಗಳಲ್ಲಿ ಜ್ಞಾನೋದಯಗೊಳಿಸಿದ  ಪವಿತ್ರ ಬೋಧಿವೃಕ್ಷದ ಪ್ರತಿರೂಪ ವಿವೇಕಾನಂದರು. ಮತ್ತಷ್ಟು ಓದು »

8
ಡಿಸೆ

ಚೇಂಜ್‍ಗೆ ಗಂಡ, ಎಕ್ಸ್’ಚೇಂಜ್‍ಗೆ ಪರಗಂಡ..! ( ಹಾಸ್ಯ )

– ತುರುವೇಕೆರೆ ಪ್ರಸಾದ್

coupleಬ್ರಹ್ಮಚಾರಿಯಾದ ಮೋದಿಗೆ ನಮ್ಮಂತಹ ಸದ್ (ಸತ್?) ಗೃಹಸ್ಥರ ಕಷ್ಟ ಹೇಗೆ ಗೊತ್ತಿರಲಿಕ್ಕೆ ಸಾಧ್ಯ ? ಎಂದು ನಾವು ಹಲವು ಬಾರಿ ಬಹಳ ಬೇಸತ್ತುಕೊಂಡಿದ್ದೆವು. ದೊಡ್ಡ ದೇಶದ ಪ್ರಧಾನಿ ಆಗುವುದು ದೊಡ್ಡದಲ್ಲ, ಚಿಕ್ಕ ಸಂಸಾರದಲ್ಲಿ ನಿಧಾನಿಯಾಗಿ ಎಲ್ಲವನ್ನೂ ನಿಭಾಯಿಸುವುದೇ ಕಷ್ಟ ಎಂದು ಮೊದಲಿನಿಂದಲೂ ನಮಗೆ ಅನುಭವವೇದ್ಯವಾದ ಅರಿವು ಮೂಡಿತ್ತು. ಅಂತದ್ದೊಂದು ಅರಿವಿಲ್ಲದೆ ಮೋದಿ ಎಲ್ಲಂದರಲ್ಲಿ ಓಡಾಡಿಕೊಂಡು, ದೇಶ ಸುತ್ತಿಕೊಂಡು ನೆಮ್ಮದಿಯಾಗಿದ್ದಾರಲ್ಲ ಎಂದು ನಮಗೆ ಸಿಕ್ಕಾಪಟ್ಟೆ ಹೊಟ್ಟೆ ಉರಿಯಿತ್ತು. ನಮ್ಮಂತಹ ಗೃಹಸ್ಥರಿಗೆ ಯಾವುದೇ ಪ್ಯಾಕೇಜ್ ಘೋಷಿಸಿರಲಿಲ್ಲ ಎಂದು ಮುಂದಿನ ಬಾರಿ ಅವರಿಗೆ ಓಟ್ ಮಾಡುವುದೇ ಬೇಡ ಎಂದು ನಿರ್ಧರಿಸಿದ್ದೆವು. ಈಗ ಅವರು ಏಕಾಏಕಿ 1000, 500ರ ನೋಟುಗಳನ್ನು ಬ್ಯಾನು ಮಾಡಿ ನಮಗೆ ದೊಡ್ಡ ಉಪಕಾರ ಮಾಡಿದ್ದಾರೆ. ಮಡದಿ ಇದ್ದಿದ್ದರೆ ಇಷ್ಟೆಲ್ಲಾ ಗುಟ್ಟು ಕಾಯ್ದಿಟ್ಟುಕೊಂಡು ಮೋದಿ ದೊಡ್ಡ ದೊಡ್ಡ ನೋಟುಗಳನ್ನು ಬ್ಯಾನ್ ಮಾಡಲು ಆಗುತ್ತಿರಲಿಲ್ಲ. ಹೇಗೋ ದೊಡ್ಡ ದೊಡ್ಡ ನೋಟುಗಳನ್ನು ಬ್ಯಾನ್ ಮಾಡಿ ಕೋಟ್ಯಂತರ ಗೃಹಸ್ಥರನ್ನು ಸಂಕಟದಿಂದ ಪಾರು ಮಾಡಿದ್ದಾರೆ. ನಮ್ಮಲ್ಲೂ ಹೊಸ ಆಸೆ ಭರವಸೆ ಮೂಡಿಸಿದ್ದಾರೆ. ಕೋಟ್ಯಂತರ ಪತ್ನೀ ಶೋಷಿತ ಗಂಡಸರ ಪರವಾಗಿ ಮೋದಿಗೆ ಕೋಟಿಕೋಟಿ ವಂದನೆಗಳು.. ಮತ್ತಷ್ಟು ಓದು »

7
ಡಿಸೆ

“ಅನ್ವೇಷಣೆ..!”

– ಭಾಸ್ಕರ ಭೀಮರಾವ್ ಖಾಂಡ್ಕೆ
ಸಾಗರ

3d14802ಬಹುಶಃ ಜೀವನವೇ ಹೀಗೆ, ಯಾವುದೋ ಸಮಸ್ಯೆ ಯಾವುದಕ್ಕೋ ಪರಿಹಾರ, ಯಾವುದೋ ಪ್ರಶ್ನೆ ಯಾವುದಕ್ಕೋ ಉತ್ತರವಾಗಿ ಬಿಡುತ್ತದೆ

ಇಂದು ಏಕಾಂತದ ಮಿತ್ರನೊಂದಿಗೆ ಸಂಭಾಷಣೆ ನಡೆಸುವ ಅವಕಾಶ ಸಿಕ್ಕಿಬಿಟ್ಟಿತು. ಮಾತಿಗೆ ಮಾತು ಬೆಳೆಯುತ್ತಾ ನನ್ನೊಳಗೆ ಶೂನ್ಯ ತುಂಬಿದ ಭಾವನೆ…ಛಲಬಿಡದ ತಿವಿಕ್ರಮನಂತೆ ಶೂನ್ಯದೊಂದಿಗೆ ಸೆಣಸಾಡುತ್ತಾ ನನ್ನೊಳಗೆ ಅಡಗಿರಬಹುದಾದ ಸತ್ಯದ ಅನ್ವೇಷಣೆಯ ಪ್ರಯತ್ನದ ಫಲವೇ ಈ ಸಾಹಿತ್ಯ , ಬಹುಶಃ ಇದು ಸಾಹಿತ್ಯವಲ್ಲಾ ನಮ್ಮೆಲ್ಲರೊಳಗೆ ಹುದುಗಿರುವ ಆದ್ಯಾತ್ಮದ ಒಂದು ಸಣ್ಣ ಹನಿ… ಮತ್ತಷ್ಟು ಓದು »

7
ಡಿಸೆ

ಗುಂಗು..!

– ಡಾ.ಸುದರ್ಶನ ಗುರುರಾಜರಾವ್

Rodin's The Thinker at Sunset 9752ಗುಂಗಿನ ಹಂಗದು ನಿನಗಿರೆ ಗೆಳೆಯ
ಬೇಸರವಿಲ್ಲದೆ ಕಳೆವುದು ಸಮಯ
ಜೀವನಕೊಂದು ಸಿಗುವುದು ಧ್ಯೇಯ
ಬದುಕಿದ ಬಾಳಿಗೆ ದೊರೆವುದು ನ್ಯಾಯ

ಪಿತೃ ವಾಕ್ಯವೆ ರಾಮನ ಗುಂಗು
ಭ್ರಾತೃ ಪ್ರೇಮವೆ ಭರತನ ಗುಂಗು
ಸೀತಾಪತಿ ಜಪ ಮಾರುತಿ ಗುಂಗು ಮತ್ತಷ್ಟು ಓದು »

6
ಡಿಸೆ

ಸೈದ್ಧಾಂತಿಕ ಸಂಘರ್ಷದಡಿಯಲ್ಲಿ ಸಾಹಿತ್ಯಿಕ ಭಯೋತ್ಪಾದನೆ..?

– ಸಂತೋಷಕುಮಾರ ಮೆಹೆಂದಳೆ.

hqdefault( ಇವತ್ತು ಅರ್ಜೆಂಟಿಗೆ ಬಿದ್ದು ಸ್ಟೇಟಸ್ ಅಪ್‍ಡೇಟ್ ಮಾಡುವವರು ಅದನ್ನು ಪೂರೈಸಿ ಎದ್ದು ಹೋಗಿಬಿಡುತ್ತಿದ್ದಾರೆ. ಕೆಲವರಿಗದು ತಮ್ಮ ಟಿ.ಆರ್.ಪಿ. ಯ ಮಾನದಂಡವೂ ಆಗಿರುವುದರಿಂದ ಲಿಂಗ, ಧರ್ಮ ಸೇರಿದಂತೆ ವರ್ಗಬೇಧದ ವ್ಯತ್ಯಾಸವಿಲ್ಲದೆ, ಕಾಮ, ಕರ್ಮಗಳ ಅಭ್ಯಂತರವಿಲ್ಲದೆ ನಾಲ್ಕು ಸಾಲು ಬರೆಯುತ್ತಾರೆ ಇಲ್ಲಾ ಜಗತ್ತಿನ ಯಾವ ಮೂಲೆಯದ್ದೋ ಶೇರು ಮಾಡಿ ಚು.. ಚು.. ಎಂದು ಹಲ್ಲಿ ಲೊಚಗುಟ್ಟಿದಂತೆ ತಾವೊಂದೆರಡು ಸಾಲು ಸೇರಿಸಿಬಿಡುತ್ತಾರೆ. ಆದರೆ ಅದರ ಕೆಳಗೆ ಮುಖ ಮೂತಿ, ಪರಿಚಯವೇ ಇಲ್ಲದವರೂ, ಜಾತಿ ಪಂಥದ ಹೊರತಾಗಿ ಪರಮ ದ್ವೇಷಿಗಳಾಗಿ ಬದಲಾಗಿ, ನಿರಂತರ ಸಂಘರ್ಷಗಳಿಗಿಳಿದು ಉಳಿದುಬಿಡುತ್ತಾರಲ್ಲ ಅದರ ಹೊಣೆಗಾರಿಕೆ ಯಾರದ್ದು…? ) ಮತ್ತಷ್ಟು ಓದು »

6
ಡಿಸೆ

ಕತೆಯಾದಳು ಹುಡುಗಿ..! ( ನೈಜ ಘಟನೆ )

– ದಿವ್ಯಾಧರ ಶೆಟ್ಟಿ ಕೆರಾಡಿ
ಉಪನ್ಯಾಸಕ
ಆಳ್ವಾಸ್ ಕಾಲೇಜು ಮೂಡುಬಿದಿರೆ

tumblr_licm5vownc1qguwbzo1_500_largeಅದೊಂದು ದಿನ ವಾಟ್ಸಾಪ್ ಗೆ ಅಪರಿಚಿತ ನಂಬರೊಂದರಿಂದ ಹಾಯ್ ಅಂತ ಮೆಸೇಜ್ ಒಂದು ಬಂದಾಗ ನಾನು ನೋಡಿಯೂ ನೋಡದ ಹಾಗೆ ಸುಮ್ಮನಿದ್ದೆ ಮತ್ತೊಂದೆರಡು ದಿನ ಪದೇ ಪದೇ ಮೆಸೇಜ್ ಬಂದಾಗ ಯಾರೂ ನೀವು ಅಂದಾಗ ನಿಮ್ಮ ಅಭಿಮಾನಿ ಎಂದು ಆ ಕಡೆಯಿಂದ ಉತ್ತರ  ಬಂದಾಗ ನಗುವೇ ನನ್ನುತ್ತರವಾಗಿತ್ತು. ಯಾರೋ ಹುಡುಗರು ಬೇಕಂತಾನೆ ಆಟ ಆಡಿಸ್ತಾ ಇದ್ದಾರೆ ಅದ್ಕೊಂಡು ಸುಮ್ನಾದ್ರೆ ಇದು ಮುಗಿಯುವ ತರ ಕಾಣ್ಲಿಲ್ಲ.. ನೇರವಾಗಿ ಆ ನಂಬರ್ ಗೆ ಕಾಲ್ ಮಾಡಿದ್ರೆ ರಿಸೀವ್ ಮಾಡ್ಲಿಲ್ಲ ಇದ್ಯಾರೋ ಬೇಕಂತ ಮಾಡ್ತಿದ್ದಾರೆ ಅನ್ನಿಸಿ ಮಸೇಜ್ ಮಾಡಬೇಡಿ ಅಂತ ಗದರಿಸಿ ಇಟ್ರೆ ಮೊದಲಿಗಿಂತ ಜಾಸ್ತಿ ಮಸೇಜ್ ಬರ್ತಾ ಇತ್ತು.. ಮತ್ತಷ್ಟು ಓದು »