ಆಚರಣೆ ಮತ್ತು ನಂಬಿಕೆಗಳ ಟೀಕೆ: ಅಂದು ಹಾಗೂ ಇಂದು ( ಭಾಗ – ೨ )
– ವಿನಾಯಕ ವಿಶ್ವನಾಥ ಹಂಪಿಹೊಳಿ
ಟೀಕೆಗಳ ಸ್ವರೂಪದಲ್ಲಿ ಆಗಿರುವ ಬದಲಾವಣೆಯನ್ನು ಅರಿಯಬೇಕಾದರೆ ಪಾಶ್ಚಿಮಾತ್ಯರಲ್ಲಿ ಕ್ರಿಶ್ಚಿಯಾನಿಟಿಯಿಂದ ಆರಂಭವಾದ ಹೊಸ ಟೀಕೆಯ ಪ್ರಕಾರವನ್ನು ನಾವಿಲ್ಲಿ ಗಮನಿಸಬೇಕು. ಕ್ರಿಶ್ಚಿಯಾನಿಟಿಯು ಪ್ರಸಾರವಾಗುವಾಗ ಅದರ ನಂಬಿಕೆಗಳು ಯಹೂದಿ ಹಾಗೂ ಗ್ರೀಕರಿಂದ ವ್ಯಾಪಕ ಟೀಕೆಗೊಳಗಾದವು. ಹಳೆ ಒಡಂಬಡಿಕೆಯಲ್ಲಿ ಗಾಡ್ ಮಸೀಹನ ಕುರಿತು ನೀಡಿರುವ ಭರವಸೆಯನ್ನು ಜೀಸಸ್ ನೆರವೇರಿಸಿರುವದರಿಂದ ಯಹೂದಿಗಳು ಜೀಸಸ್ ನ ಪ್ರಾಫಸಿಯನ್ನು ಒಪ್ಪಿ ಕ್ರಿಶ್ಚಿಯನ್ನರಾಗಬೇಕೆಂಬ ವಾದವನ್ನು ಯಹೂದಿಗಳು ಸ್ಪಷ್ಟವಾಗಿ ನಿರಾಕರಿಸಿದರು. ಹಳೇ ಒಡಂಬಡಿಕೆಯ ಕತೆಗಳೇ ಮಾನವನ ನಿಜವಾದ ಚರಿತ್ರೆಯಾಗಿರುವದರಿಂದ ಉಳಿದೆಲ್ಲ ಗತಕಾಲದ ಕತೆಗಳು ಇವಿಲ್ ನಿಂದ ಪ್ರಭಾವಿತವಾಗಿದ್ದು, ಗ್ರೀಕರು ಅವುಗಳನ್ನು ತ್ಯಜಿಸಿ ಕ್ರಿಶ್ಚಿಯಾನಿಟಿಯನ್ನು ಸ್ವೀಕರಿಸಬೇಕು ಎಂಬ ವಾದವನ್ನು ಗ್ರೀಕರು ನಿರಾಕರಿಸಿದರು.
ಆಚರಣೆ ಮತ್ತು ನಂಬಿಕೆಗಳ ಟೀಕೆ: ಅಂದು ಹಾಗೂ ಇಂದು ( ಭಾಗ – ೧ )
– ವಿನಾಯಕ ವಿಶ್ವನಾಥ ಹಂಪಿಹೊಳಿ
ಭಾರತೀಯ ಸಂಪ್ರದಾಯಗಳಲ್ಲಿ ಟೀಕೆಗಳು ಹಾಗೂ ವಿಮರ್ಶೆಗಳು ಮುಂಚಿನಿಂದಲೂ ಬೆಳೆದುಕೊಂಡು ಬಂದಿವೆ. ನೂರಾರು ದರ್ಶನಗಳು ತಮ್ಮ ತತ್ತ್ವವನ್ನು ಸಾಧಿಸುವಾಗ ಉಳಿದ ದರ್ಶನಗಳನ್ನು ಟೀಕಿಸುತ್ತವೆ. ಅವೈದಿಕ ದರ್ಶನಗಳು ವೈದಿಕರು ಹೇಳುವ ಆತ್ಮಾಸ್ತಿತ್ವವನ್ನು ನಿರಾಕರಿಸುತ್ತವೆ. ಉಪನಿಷತ್ತಿನ ದರ್ಶನಗಳು ವೈದಿಕರ ಕರ್ಮಕಾಂಡವನ್ನು ಟೀಕಿಸುತ್ತವೆ. ಅದ್ವೈತ, ವಿಶಿಷ್ಟಾದ್ವೈತ, ತತ್ತ್ವವಾದಗಳಂಥ ದರ್ಶನಗಳ ದಾರ್ಶನಿಕರು ಪರಸ್ಪರ ಒಬ್ಬರನ್ನೊಬ್ಬರು ಟೀಕಿಸುತ್ತಾರೆ. ಹಾಗೆಯೇ ವೀರಶೈವ ದರ್ಶನವೂ ಉಳಿದ ದರ್ಶನಗಳನ್ನು ಟೀಕಿಸುತ್ತದೆ. ಹೀಗೆ ನಮ್ಮ ಪೂರ್ವಜರು ಪರಸ್ಪರರ ದರ್ಶನಗಳನ್ನು ಟೀಕಿಸುತ್ತ, ಪರರ ಟೀಕೆಗಳಿಗೆ ಸಮಾಧಾನವನ್ನು ಹೇಳುತ್ತ ತಮ್ಮ ತಮ್ಮ ದರ್ಶನಗಳ ವಾದಗಳನ್ನು ಶ್ರೀಮಂತವಾಗಿಸುತ್ತ ಬಂದಿದ್ದಾರೆ. ಈ ಚರ್ಚೆಯ ಪರಂಪರೆ ಇಂದಿಗೂ ನಡೆದುಕೊಂಡು ಬಂದಿದೆ. ಮತ್ತಷ್ಟು ಓದು 
ಎತ್ತ ಸಾಗುತ್ತಿದೆ ಕನ್ನಡದ ಬೌದ್ಧಿಕ ಜಗತ್ತು..?
– ಡಾ. ಪ್ರವೀಣ ಟಿ. ಎಲ್
ಉಪನ್ಯಾಸಕರು
ಕುವೆಂಪು ವಿಶ್ವವಿದ್ಯಾನಿಲಯ
ಬೌದ್ಧಿಕವಲಯದಲ್ಲಿ ಮುಕ್ತ ಸಂವಾದಗಳು ಜ್ಞಾನದ ಬೆಳವಣಿಗೆಯ ದೃಷ್ಟಿಯಿಂದ ಅತ್ಯಂತ ಮುಖ್ಯ. ಅವುಗಳು ಹೆಚ್ಚೆಚ್ಚು ನಡೆಯಲೆಂದೇ ಯುಜಿಸಿಯಂತಹ ಸಂಸ್ಥೆಗಳು, ಸರ್ಕಾರಗಳು ಕೋಟಿಗಟ್ಟಲೇ ಹಣವನ್ನು ನೀಡುತ್ತವೆ. ವಿದ್ಯಾರ್ಥಿಗಳ ನಡುವೆ, ಚಿಂತಕರ ನಡುವೆ ಸಂವಾದಗಳು, ಚರ್ಚೆಗಳು ನಡೆದರೆ ಮಾತ್ರವೇ ತಮ್ಮ ತಿಳುವಳಿಕೆಯ ಮಿತಿಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಹಾಗೂ ಹೊಸ ಹೊಸ ಚಿಂತನೆಯ ಉಗಮಕ್ಕೆ ದಾರಿಯಾಗಲಿವೆ. ಆಗ ಅಲ್ಲಿನ ಬೌದ್ಧಿಕ ವಲಯವು ಹೆಚ್ಚು ಕ್ರಿಯಾಶೀಲವಾಗಿದೆ ಎಂದು ತೀರ್ಮಾನಿಸಬಹುದು. ಕರ್ನಾಟಕದ ಸಂದರ್ಭದಲ್ಲಿ ಬುದ್ಧಿಜೀವಿಗಳೆಂದರೆ ಸಾಹಿತಿಗಳು ಎಂಬಂತಾಗಿದೆ. ಕನ್ನಡ ಬೌದ್ಧಿಕ ವಲಯದಲ್ಲಿ ಇಂತಹ ಸಂವಾದಗಳು ನಡೆಯುತ್ತಿವೆಯೇ? ಎಂಬ ಮುಖ್ಯ ಪ್ರಶ್ನೆಯೊಂದನ್ನು ಕೇಳಿಕೊಳ್ಳಬೇಕಾದ ಸುಸಂದರ್ಭದಲ್ಲಿದ್ದೇವೆ. ಮತ್ತಷ್ಟು ಓದು 
ದಿಗ್ಗಜರ ಮೇಲಾಟ..!
– ರೂಪಲಕ್ಷ್ಮೀ
೧೯೮೦ರ ದಶಕ ಅಮೇರಿಕಾಗಷ್ಟೇ ಅಲ್ಲಾ, ಇಡೀ ಜಗತ್ತಿಗೆ ಅತ್ಯಂತ ಮಹತ್ವದ ದಶಕ. ಇಬ್ಬರು ದಿಗ್ಗಜರು ಕಂಪ್ಯೂಟರ್ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಒತ್ತಿದ ಕಾಲವಿದು. ಕಂಪ್ಯೂಟರ್ ತಂತ್ರಜ್ಞಾನ ಮನೆಮನೆಗೆ ಪಸರಿಸಲು ಸಹಾಯ ಮಾಡಿದ ಬಿಲ್ ಗೇಟ್ಸ್ ಹಾಗೂ ಸ್ಟೀವ್ ಜಾಬ್ಸ್ ಇಬ್ಬರ ನಡುವಿನ ಸಂಕೀರ್ಣ ಸಂಬಂಧವನ್ನು, ನಾಟಕೀಯವಾಗಿ, ನಾಜೂಕಾಗಿ ಈ ವಿಡಿಯೋದಲ್ಲಿ ಚಿತ್ರಿಸಿದ್ದಾರೆ. ಈ ಇಬ್ಬರೂ ಒಟ್ಟಿಗೆ ಇದ್ದರೂ ಕೂಡ ಪರಸ್ಪರ ಸ್ಪರ್ಧಿಗಳಾಗಿದ್ದರು. ಪರಸ್ಪರ ಸ್ಫರ್ಧಿಗಳಾಗಿದ್ದರೂ ಕೂಡ, ಒಟ್ಟಿಗೆ ಕೆಲಸ ಮಾಡಿ ತಂತ್ರಜ್ಞಾನದಲ್ಲಿ ಅತ್ಯುತ್ತಮ ಹಂತವನ್ನು ತಲುಪಿದವರು. ಒಬ್ಬರನೊಬ್ಬರು ಎಷ್ಟು ವಿರೋಧಿಸುತ್ತಿದ್ದರೋ, ಅಷ್ಟೇ ಪರಸ್ಪರ ಗೌರವಿಸುತ್ತಿದ್ದರು ಕೂಡ. ಇಬ್ಬರೂ ಕೂಡ ಮಹತ್ವಾಕಾಂಕ್ಷಿಗಳು, ಬುದ್ಧಿವಂತರು. ಕಂಪ್ಯೂಟರ್ ಮತ್ತು ತಂತ್ರಜ್ಞಾನ ಎರಡರಲ್ಲಿಯೂ ಆಪಲ್ ಕಂಪೆನಿಯೇ ಮೇಲುಗೈ ಸಾಧಿಸಬೇಕೆಂಬುದು ಸ್ಟೀವ್ ಜಾಬ್ಸ್ ನ ಮನಸ್ಥಿತಿಯಾಗಿದ್ದರೆ, ಮನೆಮನೆಗೂ ತಂತ್ರಜ್ಞಾನವನ್ನು ತಲುಪಿಸಬೇಕೆಂಬುದು ಬಿಲ್ ಗೇಟ್ಸ್ ನ ಇಚ್ಛೆಯಾಗಿತ್ತು. ಮತ್ತಷ್ಟು ಓದು 
ಪೀರಾಯರ ಒಂದು ಕಥಾನಕ – ನೀಳ್ಗತೆ ಭಾಗ ೨
– ಮು. ಅ. ಶ್ರೀರಂಗ, ಬೆಂಗಳೂರು
(ನಿಲುಮೆಯಲ್ಲಿ ೨೧-೧-೨೦೧೭ ರಂದು ಪ್ರಕಟವಾದ ನೀಳ್ಗತೆ ಯ ಮುಂದುವರಿದ ಭಾಗ)
[ಇಲ್ಲಿಯರೆಗೆ:- ಸರ್ಕಾರಿ ಕೆಲಸದಿಂದ ನಿವೃತ್ತರಾಗಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಪದ್ಮನಾಭರಾವ್(ಪೀರಾಯ) ಅಲ್ಲಿನ ಗಡಿಬಿಡಿಯ, ಏಕತಾನತೆಯ ಜೀವನ, ಇವುಗಳಿಂದ ಬೇಸತ್ತು, ನಾಲ್ಕಾರು ದಿನಗಳಾದರೂ ಇವೆಲ್ಲದರಿಂದ ದೂರವಿರೋಣ ಎಂದು ತನ್ನ ಸ್ನೇಹಿತ ಹಾಗೂ ಬೆಂಗಳೂರಿನಲ್ಲಿ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಾಜು ವಶಿಷ್ಠನ ಸ್ವಂತ ಊರಿನಲ್ಲಿದ್ದ ತೋಟದ ಮನೆಗೆ ಬರುತ್ತಾರೆ. ಪಕ್ಕದ ಮನೆಯಲ್ಲಿದ್ದ ಕಂಟ್ರಾಕ್ಟರ್, ಸೈಟು, ಮನೆಗಳ ಬ್ರೋಕರ್ ಏಜೆನ್ಸಿ ನಡೆಸುತ್ತಿದ್ದ ಲಿಂಗೇಗೌಡನ ಪರಿಚಯವಾಗುತ್ತದೆ. ಆತನ ಅತೀ ಮಾತುಗಾರಿಕೆ ಪೀರಾಯರಿಗೆ ಬೇಸರ ತರಿಸುತ್ತದೆ. ಆ ಊರಿನ ಕಾಲೇಜಿನಲ್ಲಿ ನಡೆಯುವ ಸಾಹಿತ್ಯಕ್ಕೆ ಸಂಬಂಧಿಸಿದ ವಿಚಾರಸಂಕಿರಣದ ಆಹ್ವಾನ ಪತ್ರಿಕೆ ಕೊಡಲು ಬರುವ ಕನ್ನಡ ಉಪನ್ಯಾಸಕಿ ರಮಾದೇವಿಯ ಭೇಟಿಯೂ ಆಗುತ್ತದೆ. ಮತ್ತಷ್ಟು ಓದು 
ಬಣ್ಣದ ಬದುಕು
– ಎಸ್ ಜಿ ಅಕ್ಷಯ್ ಕುಮಾರ್
‘ರವಿ’ ಬೆಳಗ್ಗೆ ಏಳುವಾಗ, ಆಗಸದಲ್ಲಿನ ರವಿ ತನ್ನ ಹಾದಿಯ ಕಾಲು ಭಾಗ ಕ್ರಮಿಸಿಯಾಗಿತ್ತು. ಎದ್ದವನು ಮುಖಕ್ಕೆ ನೀರು ಸಹ ಹಾಕದೇ, ಸೀದಾ ತೆಂಕೊಡ್ಲಿನ ಬಸ್ ಸ್ಟಾಪಿನತ್ತ ನಡೆದ. ಬಸ್ ಸ್ಟಾಪಿನ ಹಿಂದಿನ ಗೋಡೆಗೆ ಮೂತ್ರಾಲಂಕಾರ ಮಾಡಿ, ತನ್ನ ಕಲೆಯನ್ನು ತಾನೇ ಮೆಚ್ಚಿಕೊಂಡು ಶಂಕ್ರಣ್ಣನ ಹೋಟೇಲಿಗೆ ಬಂದು ಕುಳಿತ. ಅದು ಶಂಕ್ರಣ್ಣನ ಮನದಲ್ಲೊಂದೇ ಹೋಟೆಲ್ ಆಗಿತ್ತು. ಉಳಿದವರಿಗೆಲ್ಲ ಅದು ತಟ್ಟಿ ಕಟ್ಟಿದ ಜೋಪಡಿಯಂತೆ ಕಾಣುತ್ತಿತ್ತು. ಅಲ್ಲಿ ಶಂಕ್ರಣ್ಣ ಚಾ, ಬೋಂಡ ಮುಂತಾದವುಗಳನ್ನು ಮಾರುತ್ತಿದ್ದ. ಬೆಳಗಿನ ಪೇಪರು ತೆಂಕೊಡ್ಲಿನ ಮಟ್ಟಿಗೆ ದೊಡ್ಡ ವಿಚಾರವೇ ಆಗಿತ್ತು. ಅದನ್ನು ತರಿಸುತ್ತಿದ್ದುದು ಪೈಗಳ ಮನೆಗಾದರೂ ಬಸ್ ಕಂಡೆಕ್ಟರ್ ಅದನ್ನು ಶಂಕ್ರಣ್ಣನ ಅಂಗಡಿಯಲ್ಲಿ ಕೊಟ್ಟು ಹೋಗುತ್ತಿದ್ದ. ಅವರ‍್ಯಾರಾದರೂ ತೆಗೆದುಕೊಂಡು ಹೋಗುವ ಮೊದಲೇ ಓದಬೇಕೆಂಬ ಬಯಕೆಯಲ್ಲೇ ರವಿ ನಡೆದು ಬಂದಿದ್ದ. ಸೀದಾ ಕೊನೆಯ ಪುಟಕ್ಕೆ ತಿರುಗಿಸಿ ಭಾರತ ಮತ್ತೊಂದು ಟೆಸ್ಟನ್ನು ಸೋತಿದ್ದನ್ನು ಪಕ್ಕಾ ಮಾಡಿಕೊಂಡು ಆಟಗಾರ ಕುಟುಂಬಕ್ಕೆಲ್ಲ ಬೈದು, ಮುಖಪುಟದಲ್ಲಿ ಹಲ್ಲು ಕಿರಿಯುತ್ತಿದ್ದ ರಾಜಕಾರಣಿಗಳಿಗೊಂದಿಷ್ಟು ಬೈದು ಪೇಪರು ಬಿಸಾಕಿ ವಾಪಸ್ಸು ಹೊರಟ. ಅವನ ಆಗಮನದಲ್ಲಿ ಶಂಕ್ರಣ್ಣ ಎಷ್ಟು ನಿರ್ಲೀಪ್ತನಾಗಿದ್ದನೋ, ಈಗಲೂ ಅಷ್ಟೇ ನಿರ್ಲೀಪ್ತನಾಗಿದ್ದ. ಮತ್ತಷ್ಟು ಓದು 
ಕಲೆ ಮತ್ತು ಸಾಹಿತ್ಯಗಳು ಐಡಿಯಾಲಜಿಯ ಬಂಧನದಿಂದ ಎಂದು ಹೊರಬಂದಿತು?
– ಬಾಲಚಂದ್ರ ಭಟ್
“ಸಾಹಿತ್ಯವನ್ನು ಕೆಡಿಸಿದ್ದೇ ಈ ಮಾರ್ಕ್ಸಿಸ್ಟುಗಳು. ರಸಾನುಭೂತಿ ಅನ್ನೋದನ್ನು ಮರೆತು ಸಮಾಜಕ್ಕೆ ನಿಮ್ಮ ಕೊಡುಗೆ ಏನು ಅಂತ ಕವಿಗಳಿಗೆ, ಕತೆಗಾರರಿಗೆ ಕೇಳೋಕೆ ಶುರು ಮಾಡಿದ್ದೇ ಅವರು. ಶಾಸ್ತ್ರೀಯ ಸಂಗೀತ ಒಂದು ಅವರಿಗೆ ಅರ್ಥ ಆಗ್ತಿರಲಿಲ್ಲ ನೋಡ್ರೀ. ಒಂದು ವೇಳೆ ಅರ್ಥ ಆಗಿದ್ದರೆ ಬೆಳಗ್ಗೆ ಹಾಡೋ ತೋಡೀ ರಾಗದಿಂದ ಸಮಾಜಕ್ಕೆ ಏನು ಕೊಡುಗೆ ಸಿಕ್ಕಿದೆ ಅಂತಾನೂ ಕೇಳಿರೋರು. ಪುಣ್ಯಕ್ಕೆ ಬಹುತೇಕ ಮಾರ್ಕ್ಸಿಸ್ಟರಿಗೆ ಸಂಗೀತದ ಗಂಧವೇ ಇಲ್ಲ”
ಹೀಗಂತ ಎಸ್ ಎಲ್ ಭೈರಪ್ಪನವರು ಜೈಪುರ ಲಿಟರರಿ ಫೆಸ್ಟಿವಲ್ ನಲ್ಲಿ ಹೇಳಿದ್ದರೆಂದು ಜೋಗಿಯವರು ಇತ್ತೀಚೆಗೆ ಫೇಸ್ಬುಕ್ ನಲ್ಲಿ ಹಾಕಿಕೊಂಡಿದ್ದರು. ಭೈರಪ್ಪನವರ ಈ ಹೇಳಿಕೆಗೆ ವಿರುದ್ಧ ಪ್ರತಿಕ್ರಿಯಿಸಿದವರೆಲ್ಲರೂ ಅವರು ನೋಡಿದ ಸಾಹಿತ್ಯಾಸಕ್ತ ಹಾಗೂ ಸಂಗೀತಾಸಕ್ತ ಮಾರ್ಕ್ಸಿಸ್ಟರನ್ನು ಉದಾಹರಿಸುವದರ ಮೂಲಕ ಭೈರಪ್ಪನವರ ಹೇಳಿಕೆಯನ್ನು ಅಲ್ಲಗೆಳೆದಿದ್ದರು. ಭೈರಪ್ಪನವರು ಏನೆ ಹೇಳಿದರೂ ಅದಕ್ಕೆ ಉಗ್ರ ಪ್ರತಿರೋಧ ಬರುವದು ಸಾಮಾನ್ಯ. ಅದರಲ್ಲೂ ಮಾರ್ಕ್ಸಿಸ್ಟರ ಬಗ್ಗೆ ಇಂತಹ ಹೇಳಿಕೆ ಕೊಟ್ಟರೆ ಮಾರ್ಕ್ಸಿಸಂ ನ್ನು ಗುತ್ತಿಗೆ ತೆಗೆದುಕೊಂಡವರು ಮುಗಿಬೀಳುವದನ್ನು ಊಹಿಸಬಹುದಾದದ್ದೆ. ಆದರೆ ಈ ಕುರಿತ ಪರ ವಿರೋಧ ಅಭಿಪ್ರಾಯಗಳ ಹೊರತಾಗಿಯೂ ಭೈರಪ್ಪನವರ ಹೇಳಿಕೆ ಮಾರ್ಕ್ಸಿಸಂ ನ ವಿಷ್ಲೇಷಣೆಗೆ ಪ್ರಸ್ತುತವಂತೂ ಹೌದು. ಮತ್ತಷ್ಟು ಓದು 
ಶಿಕ್ಷಣದಿಂದ ಸ್ತ್ರೀ ಮತ್ತು ಉಕ್ಕಿನ ತರುಣ ಪಡೆ; ಎರಡು ತತ್ವಗಳ ಸಂಗಮ ಈ ಸಾಹಿತ್ಯ ಸಮ್ಮೇಳನ
– ಅಕ್ಷತಾ ಬಜ್ಪೆ
ವಿವೇಕಾನಂದರ ಪಶ್ಚಿಮದ ದಿಗ್ವಿಜಯದ ಕಥೆ ನಮಗೆಲ್ಲ ಗೊತ್ತೇ ಇದೆ. ಆದರೆ ಈ ಒಂದು ದಿಗ್ವಿಜಯ ಗುರು–ಶಿಷ್ಯೆಯರ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಯಿತು. ದೇಶಕ್ಕೆ ಶುಭಶಕುನವಾಯಿತು. ಸ್ವಾಮಿ ವಿವೇಕಾನಂದರು ಹೋದಲ್ಲೆಲ್ಲಾ ಅವರನ್ನು ಅನುಸರಿಸುತ್ತಾ ಅವರ ಉಪನ್ಯಾಸಗಳನ್ನು ಕೇಳುತ್ತಿದ್ದ ಐಯರ್ಲೆಂಡಿನ ಮಾರ್ಗರೆಟ್ ಗೆ ಭಾರತದ ಬಗ್ಗೆ ಇದ್ದ ಕುತೂಹಲ ಹೆಚ್ಚಾಗುತ್ತಲೇ ಹೋಯಿತು. ಭಾರತಕ್ಕೆ ಬರಲು ಉತ್ಸುಕರಾಗತೊಡಗಿದರು. ಇದಕ್ಕಾಗಿ ಸ್ವಾಮೀಜಿಯವರಲ್ಲಿ ನಿವೇದನೆಯನ್ನು ಸಲ್ಲಿಸಿದರು. ಆದರೆ ಸ್ವಾಮೀಜಿ ಒಪ್ಪಲಿಲ್ಲ. ಸ್ವಾಮೀಜಿಯವರು ತಮ್ಮ ಮೊದಲ ಯುರೋಪ್ ಪ್ರವಾಸ ಮುಗಿಸಿ ಆಗಷ್ಟೇ ಭಾರತಕ್ಕೆ ಹಿಂದಿರುಗಿದ್ದರು. ಪರಿಸ್ಥಿತಿಗೆ ಸ್ಪಂದಿಸಿದ ಸ್ವಾಮೀಜಿ ಮಾರ್ಗರೆಟ್ ಗೆ ಪತ್ರ ಬರೆದು ಭಾರತಕ್ಕೆ ಬರುವಂತೆ ಸೂಚನೆಯಿತ್ತರು. ಮತ್ತಷ್ಟು ಓದು 
ಶಿಕ್ಷಣದಿಂದ ಸ್ತ್ರೀ ಮತ್ತು ಉಕ್ಕಿನ ತರುಣ ಪಡೆ; ಎರಡು ತತ್ವಗಳ ಸಂಗಮ ಈ ಸಾಹಿತ್ಯ ಸಮ್ಮೇಳನ
– ಅಕ್ಷತಾ ಬಜ್ಪೆ
ವಿವೇಕಾನಂದರ ಪಶ್ಚಿಮದ ದಿಗ್ವಿಜಯದ ಕಥೆ ನಮಗೆಲ್ಲ ಗೊತ್ತೇ ಇದೆ. ಆದರೆ ಈ ಒಂದು ದಿಗ್ವಿಜಯ ಗುರು–ಶಿಷ್ಯೆಯರ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಯಿತು. ದೇಶಕ್ಕೆ ಶುಭಶಕುನವಾಯಿತು. ಸ್ವಾಮಿ ವಿವೇಕಾನಂದರು ಹೋದಲ್ಲೆಲ್ಲಾ ಅವರನ್ನು ಅನುಸರಿಸುತ್ತಾ ಅವರ ಉಪನ್ಯಾಸಗಳನ್ನು ಕೇಳುತ್ತಿದ್ದ ಐಯರ್ಲೆಂಡಿನ ಮಾರ್ಗರೆಟ್ ಗೆ ಭಾರತದ ಬಗ್ಗೆ ಇದ್ದ ಕುತೂಹಲ ಹೆಚ್ಚಾಗುತ್ತಲೇ ಹೋಯಿತು. ಭಾರತಕ್ಕೆ ಬರಲು ಉತ್ಸುಕರಾಗತೊಡಗಿದರು. ಇದಕ್ಕಾಗಿ ಸ್ವಾಮೀಜಿಯವರಲ್ಲಿ ನಿವೇದನೆಯನ್ನು ಸಲ್ಲಿಸಿದರು. ಆದರೆ ಸ್ವಾಮೀಜಿ ಒಪ್ಪಲಿಲ್ಲ. ಸ್ವಾಮೀಜಿಯವರು ತಮ್ಮ ಮೊದಲ ಯುರೋಪ್ ಪ್ರವಾಸ ಮುಗಿಸಿ ಆಗಷ್ಟೇ ಭಾರತಕ್ಕೆ ಹಿಂದಿರುಗಿದ್ದರು. ಪರಿಸ್ಥಿತಿಗೆ ಸ್ಪಂದಿಸಿದ ಸ್ವಾಮೀಜಿ ಮಾರ್ಗರೆಟ್ ಗೆ ಪತ್ರ ಬರೆದು ಭಾರತಕ್ಕೆ ಬರುವಂತೆ ಸೂಚನೆಯಿತ್ತರು.
ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಸೋದರಿ ನಿವೇದಿತಾ ಭೋಗ ಭೂಮಿಯನ್ನು ತೊರೆದು ಯೋಗ ಭೂಮಿಯತ್ತ ಪಯಣಿಸಿದರು. ಹೊರಡುವ ಮುಂಚೆಯೇ ಭಾರತದಲ್ಲಿನ ದಯನೀಯ ಪರಿಸ್ಥಿತಿಯನ್ನು ವಿವರಿಸಿದ್ದ ಸ್ವಾಮೀಜಿಗೆ ‘ನಿಮ್ಮ ಜನರೇ ಇನ್ನು ನಮ್ಮ ಜನರು’ ಎಂದು ಸಮಾಧಾನ ಪಡಿಸಿದ್ದರು.ಒಂದು ರೆಕ್ಕೆಯಿಂದ ಹಕ್ಕಿ ಹಾರಲಾರದು ಅಂತೆಯೇ ಪುರುಷರ ಜೊತೆಯಾಗಿ ಸ್ತ್ರೀಯರೂ ಶಿಕ್ಷಿತರಾಗಿ ಬಲಿಷ್ಟರಾದರೆ ಮಾತ್ರ ಸಧೃಡ ಭಾರತವನ್ನು ಕಟ್ಟಲು ಸಾಧ್ಯ ಎಂಬ ಚಿಂತನೆ ಹೊಂದಿದ್ದರು. ಸ್ವಾಮೀಜಿ ‘ತಾಯಿಯ ಮೃದು ಹೃದಯ, ಯೋಧನ ವಿರ್ಯೋತ್ಸಾಹಗಳು, ತತ್ವಜ್ಞಾನಿಯ ಬೌದ್ಧಿಕ ಪ್ರತಿಭೆ, ಸಂತನ ದಿವ್ಯದೃಷ್ಟಿ, ದೇಶ ಪ್ರೇಮಿಯ ರಾಷ್ಟ್ರಪ್ರಜ್ಞೆ ಇದೆಲ್ಲಾ ಏಕತ್ರ ಕಲಿತ ನಾರೀಮಣಿ ನಿವೇದಿತಾ, ಸ್ವಾಮೀಜಿಗೆ ತಮ್ಮ ಇಂಗ್ಲೆಂಡ್ ಕಾರ್ಯದ ಪರಿಣಾಮವಾಗಿ ದೊರೆತಂತಹ ಅತ್ಯಂತ ಶ್ರೇಷ್ಟ ಪುಷ್ಪ.
ಕಡಲತಡಿಯಲ್ಲಿ ಮೊಳಗಲಿದೆ ಸಾಹಿತ್ಯ ಸಮ್ಮೇಳನದ ಝೇಂಕಾರ
– ರಾಜೇಶ್ ನರಿಂಗಾನ
ಹೌದು.. ಕಡಲತೀರ ಮಂಗಳೂರು ಒಂದು ವಿಶಿಷ್ಟ, ವಿನೂತನ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಜ್ಜುಗೊಂಡಿದೆ. ಇದನ್ನು ವಿಶಿಷ್ಟ, ವಿನೂತನ ಎಂದು ಕರೆಯುವುದಕ್ಕೂ ಕಾರಣವಿದೆ. ಇದು ದೇಶದಲ್ಲಿಯೇ ಮೊದಲ ಬಾರಿಗೆ ನಡೆಯುತ್ತಿರುವ ಸಾಹಿತ್ಯದ ಉತ್ಸವ. ಜಗತ್ತು ಕಂಡ ಶ್ರೇಷ್ಠ ಸಂತ, ಸಿಡಿಲ ಸಂನ್ಯಾಸಿ ಸ್ವಾಮಿ ವಿವೇಕಾನಂದ ಮತ್ತು ಅವರ ಅಸ್ಖಲಿತ ವಾಗ್ಝರಿಗೆ ಮರುಳಾಗಿ ದೂರದ ಪಾಶ್ಚಿಮಾತ್ಯ ದೇಶವಾದ ಐರ್ಲೆಂಡಿನಿಂದ ಭಾರತಕ್ಕೆ ಆಗಮಿಸಿ, ಈ ದೇಶಕ್ಕಾಗಿ ತಮ್ಮನ್ನು ತಾವು ಸಂಪೂರ್ಣವಾಗಿ ನಿವೇದಿಸಿದ ಸೋದರಿ ನಿವೇದಿತಾ ಅವರ ಸಾಹಿತ್ಯದ ಸಂಗಮವಿದು. ಈ ಇಬ್ಬರು ಶ್ರೇಷ್ಟ ವ್ಯಕ್ತಿಗಳ ಸಾಹಿತ್ಯದ ಅಧ್ಯಯನ, ಅವರ ಜೀವನ ಪ್ರೇರಣೆಯ ಸಂದೇಶದ ಅಪೂರ್ವ ಸಮಾವೇಶವೇ “ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ”
ಈ ನಾಡಿನ ಖ್ಯಾತ ಚಿಂತಕ, ವಾಗ್ಮಿ, ಅಂಕಣಕಾರ ಶ್ರೀಯುತ ಚಕ್ರವರ್ತಿ ಸೂಲಿಬೆಲೆಯವರ ಮಾರ್ಗದರ್ಶನದಲ್ಲಿ ಕಳೆದ ಎರಡುವರೆ ವರ್ಷಗಳಿಂದ ಅನೇಕ ಸಮಾಜಮುಖಿ ಸೇವಾ ಕಾರ್ಯಗಳನ್ನು ಕೈಗೊಂಡು ಇಡೀ ರಾಷ್ಟ್ರದ ಗಮನ ಸೆಳೆದಿರುವ ಯುವಾಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದ ನೇತೃತ್ವದಲ್ಲಿ ಈ ಅಭೂತಪೂರ್ವ ಸಾಹಿತ್ಯ ಸಮ್ಮೇಳನವು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಇದೇ ಫೆಬ್ರವರಿ 11 ಮತ್ತು 12 ರಂದು ಸಂಪನ್ನಗೊಳ್ಳಲಿದೆ.
ಸಾಹಿತ್ಯ ಸಮ್ಮೇಳನದಲ್ಲಿ ಏನಿದೆ?
ಮತ್ತಷ್ಟು ಓದು 




