ಶುಭ ಮುಂಜಾನೆಯ ಮೂವತ್ತು ಗೆಳೆಯರು..!
-ರವಿ ಮುರ್ನಾಡು
ನಿಮಗೆ ಪರಿಚಯಿಸಬೇಕು ನನ್ನ ಗೆಳೆಯರನ್ನು. ನಂಟನ್ನು ಹಾಗೇ ಬದುಕಿನಲ್ಲಿ ಗಂಟು ಹಾಕಬೇಕು. ಲೆಕ್ಕವಿಲ್ಲದ ರಾತ್ರಿಗಳ ಕಳೆದು, ಪ್ರತಿ ಮುಂಜಾನೆಯ ಲೆಕ್ಕ ತೆಗೆಯುವುದು ತುಂಬಾ ಇಷ್ಟದ ಕೆಲಸ. ರಾತ್ರಿಯ ಲೆಕ್ಕವಿಟ್ಟವರದ್ದು ಕತ್ತಲೆಯ ಕೆಲಸ. ಹಗಲಿನ ಲೆಕ್ಕವಿಟ್ಟವರದ್ದು ಪುಟದ ದಾಖಲೆಯ ಕೆಲಸ. ಹಗಲು-ರಾತ್ರಿಯ ನಡುವೆ ಅಳಿಸಿ ಹೋಗುವ ನಗುವಿನ ಗಳಿಗೆಗಳು ಮತ್ತೆ ಬರಲಿ ಎಂಬುದು ಎಲ್ಲರ ಕನಸು. ಮತ್ತೆ ಮತ್ತೆ ಒತ್ತರಿಸುವ ದುಃಖ್ಖ ಮತ್ತೇ ಬಾರದಿರಲೀ ಎಂಬ ಪ್ರಾರ್ಥನೆ.
ಆ ಬಂಧವನ್ನು ಹಾಗೆಯೇ ಉಳಿಸುತ್ತಾ ಬಂದಿದ್ದೇನೆ. ಅವರು ಮನುಷ್ಯ ಭಾಷೆಗೆ ನಿಲುಕದ ನಕ್ಷತ್ರಗಳು. ಪ್ರತೀ ನನ್ನ ಮುಂಜಾನೆಗೆ ” ಶುಭ” ಮುಂಜಾವಿನ ಭಾಷ್ಯ ಬರೆಯುತ್ತಾರೆ. ಚಿನ್ನದ ಅಕ್ಷರಗಳಲ್ಲಿ ಬರೆದಿಡುವ ಆನಂದ ಅದು. ಶುಭಾಶಯ ಅಂದಾಗ ಮನೆ-ಮನೆಯ ದಿನಗಳು ಆಲೋಚನೆಗೆ ಬರುತ್ತವೆ. ಬೆಳಿಗ್ಗೆ ಎದ್ದು ಹೊರ ಬಂದಾಗ ಹಲವರ- ಪರಿಚಿತರ ಶುಭಾಶಯಗಳು ಎದುರುಗೊಳ್ಳುತ್ತವೆ. ನಮ್ಮೆಲ್ಲರ ಹಗಲು ಹುಟ್ಟುವುದೇ ಆವಾಗ. ಮನುಷ್ಯನ ಮನಸ್ಸನ್ನು ಅಂತಹ ಸಂದರ್ಭಗಳು ನಿರ್ಧರಿಸುತ್ತವೆ. ರಾತ್ರಿ ನಿದ್ದೆಗೆ ಜಾರಿದ ಮೇಲೆ ಶರೀರ ಒಂಟಿ. ಮನಸ್ಸು ಕೂಡ. ಬೆಳಿಗ್ಗೆ ಎದ್ದಾಗಲೇ ಗೊತ್ತಾಗುವುದು ನಾವು ಹೇಗೆ ಎಂದು. ಸಂಸಾರ ಅನ್ನುವ ಜಗತ್ತಿನಲ್ಲಿ ಅದರ ಪರಿಕಲ್ಪನೆಯ ಚಿತ್ರಣ ಮೂಡುವುದು ಹೇಗೋ?. ಮನೆ ಎಂದರೆ ಒಂದು ಜಗತ್ತು. ಗಂಡ-ಹೆಂಡತಿ- ಮಕ್ಕಳು ಮತ್ತು ಅದರೊಳಗೆ ಬೇರುಬಿಟ್ಟ ಸಂಬಂಧಗಳು. ಅದೊಂದು ವರ್ತುಲ ಬೆಳಗ್ಗಿನ ಗಳಿಗೆಗೆಳನ್ನು ಹಗಲಿಗೆ ಹಂಚಿಕೊಂಡು ದೀಪ ಹಚ್ಚಿದ ದಿನಗಳನ್ನು ಕಾಯುತ್ತಿದ್ದೇನೆ.!!
ಅವರ ನಗು ಕಾಣದೆಯೂ ಇರಬಹುದು…ನನ್ನ ಗೆಳೆಯರ ಮಾತುಗಳು ಅರ್ಥವಾಗದೆಯೂ ಇರಬಹುದು….ಚಿತ್ತಪಟದಲ್ಲಿ ಭಾವವಾಗಿಸುತ್ತೇನೆ. ಭಾವದ ಭಾವಚಿತ್ರವಾಗಿಸುತ್ತೇನೆ. ಭಾವಚಿತ್ರಗಳು ಹಾಗೆಯೇ…ನಗುವಂತಿದ್ದರೆ ಎಲ್ಲರಿಗೂ ನಗುತ್ತಿರುತ್ತವೆ. ದುಃಖ್ಖದಲ್ಲಿದ್ದರೆ, ಎಲ್ಲರ ಮುಂದೆ ಅಳುತ್ತಿರುತ್ತದೆ. ಸುಖ-ದುಃಖ್ಖವನ್ನು ನಿರಂತರ ಪ್ರತಿಫಲಿಸುವ ಒಂದು ಶಕ್ತಿ ಎಂದರೆ ಅದು ಭಾವಚಿತ್ರ. ಅದಕ್ಕೆ ಮನುಷ್ಯರು ಭಾವಚಿತ್ರವನ್ನು ಹೆಚ್ಚು ಇಷ್ಟ ಪಡುತ್ತಾರೆ. ಮತ್ತಷ್ಟು ಓದು 
ಇದು ಹಿಂದಿ ಹೇರಿಕೆ ಬೂತದ ಕೈಚಳಕ
ಸರಕಾರ ತನ್ನ ಕಾರ್ಯಗಳು ಜನರಿಗೆ ತಲುಪಿಸೊಕ್ಕೆ ಪತ್ರಿಕೆಗಳನ್ನ ಅವಲಂಬಿಸಿದೆ. ಕೆಲವು ಪ್ರಮುಕ ಕಾರ್ಯಗಳನ್ನ/ ಸೌಲಬ್ಯಗಳನ್ನ ಪತ್ರಿಕೆಗಳಲ್ಲಿ ಜಾಹಿರಾತು ನೀಡಿತ್ತೆ. ಪತ್ರಿಕೆಗಳಲ್ಲಿ ಜಾಹಿರಾತನ್ನ ನೋಡೊ ಜನ, ಆ ಕಾರ್ಯ/ಸೌಲಬ್ಯದ ಲಾಬ ಪಡೆದುಕೊಳ್ಳಬೇಕು ಅನ್ನೊದು ಉದ್ದೇಶ(?).ಆದರೆ ಸರಕಾರ ಈ ಜಾಹಿರಾತು ನೀಡೋ ವಿಶಯದಲ್ಲೂ ತಾರತಮ್ಯ ಮಾಡಿ ತನ್ನ ಕಾರ್ಯ/ ಸೌಲಬ್ಯ ಗಳು ಕನ್ನಡಿಗರಿಗೆ ಸಿಗಬಾರ್ದು ಅನ್ನೊ ತರ ನಡೆದುಕೊಳ್ತಿರೋದು ಮಾತ್ರ ನಿಗೂಡ! ಇದೋ ಹೀಗೆ ಅಂತೀರ- ಕನ್ನಡ ಪತ್ರಿಕೆಗಳಲ್ಲಿ ಕನ್ನಡವಲ್ಲದ, ಕನ್ನಡಿಗರಿಗೆ ಅರಿವಿಲ್ಲದ ಹಿಂದಿ ಬಾಶೆಯಲ್ಲಿ ಜಾಹಿರಾತು ನೀಡೋದು.
ಈ ಕೆಲ್ಸವನ್ನ ಸರಕಾರ ಬಹಳ ವ್ಯವಸ್ತಿತವಾಗಿ ಮಾಡ್ತಿದೆ. ಇದರ ಕೆಲವು ಕೆಲವು ಸ್ಯಾಂಪಲ್ ಗಳು-
೧. ಕೆಲವು ವರ್ಶಗಳ ಹಿಂದೆ ನೈರುತ್ಯ ರೈಲ್ವೆ ,ಡಿ ದರ್ಜೆ ನೌಕರರಿಗೆ(೭ ಅತವಾ ೮ ನೇ ತರಗತಿ ಪಾಸಾದವರಿಗೆ) ಅರ್ಜೆಗೆ ಅಹ್ವಾನಿಸಿ, ಕನ್ನಡವಲ್ಲದ ಬಾಶೆಯಲ್ಲಿ ಯಾವುದೋ ಒಂದೆರಡು ಚಿಕ್ಕ ಪತ್ರಿಕೆಗಳಲ್ಲಿ ಜಾಹಿರಾತು ನೀಡಿತ್ತಂತೆ. ಆ ಜಾಹಿರಾತು ಓದೋಕ್ಕೆ ಆಗದ ಕನ್ನಡದವರು ಅರ್ಜಿ ಹಾಕಿದ್ದೆ ಕಡಿಮೆ ಜನ. ಎಂತಾ ದುರಂತ.
ಮತ್ತಷ್ಟು ಓದು 




