ವಿಷಯದ ವಿವರಗಳಿಗೆ ದಾಟಿರಿ

Archive for

18
ಜೂನ್

ಹನಿ ಹನಿ ಮುತ್ತು..

-ಅಬ್ದುಲ್ ಸತ್ತಾರ್

 
ಅಂತೂ ಇಂತೂ ಇವತ್ತಿನ ಕೆಲಸ ಮುಗಿಯಿತು ಅನ್ನೋ  ಸಮಾಧಾನದಿಂದ  ಈಗಷ್ಟೇ  ಹೊರಬಂದಿದ್ದೆ.
ಬೆಳಗ್ಗಿನಿಂದ  ಈ ಸಂಜೆ ವರೆಗೂ  ಆಫೀಸಿನ ನಾಲ್ಕು ಗೋಡೆಗಳ, ಬಿಳೀ ಬಲ್ಪಿನ ಮತ್ತು ತಣ್ಣನೆ ಏಸಿಯ ಮಧ್ಯೆ ಕುಳಿತು  ಹೊರಬಂದಾಗಲೇ ಗೊತ್ತಾಗಿದ್ದು, ಜಿಟಿ ಜಿಟಿ ಮಳೆ ಬರುತ್ತಾ ಗಾಳಿ ತಂಪು ತಂಪಾಗಿ ಇಡೀ ಸಿಟಿ ಹಾಯಾಗಿದೆ ಅಂತ. ಕೆಲವರು ಖುಷಿಯಿಂದ ಬರೋ ಪಿರಿ ಪಿರಿ ಮಳೆಗೆ ಮುಖಕೊಟ್ಟು ಖುಸಿಯಿಂದ ಶಿಳ್ಳೆ ಹಾಕುತ್ತಾ ನಡೆಯುತ್ತಿದ್ದರೆ ಕೆಲವರು ಸಿಕ್ಕ ಸಿಕ್ಕ ಗ್ರೋಸರಿ, ಬಿಲ್ಡಿಂಗಿನ ಟೋಪಿ ಅಡಿಯಲ್ಲಿ ಮಳೆನಿಲ್ಲುತ್ತೆ ಅನ್ನೋ ಆಸೆಯಿಂದ ನೋಡುತ್ತಾ, ಫೋನಲ್ಲಿ ಮಾತಾಡುತ್ತಾ ನಿಂತಿದ್ದಾರೆ. ಟ್ರಾಫಿಕ್ಕಿನಲ್ಲಿ ಬ್ಲಾಕಾಗಿ ನಿಂತಿರೋ ಗಾಡಿಗಳು ಬೇರೆ ಬೇರೆ ರೀತಿ ಚಾಲೆಂಜಿಗೆ ನಿಂತವರಂತೆ ಹಾರನ್ ಮಾಡುತ್ತಾ ಮನೆಸೇರೋ ಆತುರದಲ್ಲಿವೆ. exfo ಅನ್ನೋ ಗ್ರೋಸರಿ ಅಡಿಯಲ್ಲಿ ನಿಂತಿದ್ದ ನಾನು ಹಾಗೇ ಶರ್ಟಿನ ಗುಂಡಿ ತೆಗೆದು ಬೀಳುತ್ತಿರೋ ಮಳೆಹನಿಗೆ ಕೈಚಾಚಿದೆ.
ಎಷ್ಟೊಂದು ಹಾಯ್ ಹಾಯ್ ಎನಿಸಿತು. ಒಂದುಕ್ಷಣ ಮನಸ್ಸೊಳಗೆ ಏನೋ ಒಂದು ಮಿಂಚುಹರಿಯಿತು. ಈಗ ಸಿಕ್ಕ ಈ feel ಎಲ್ಲೊ ಸವಿದಿದ್ದ ನೆನೆಪಾಯಿತು.
ಹೌದು, ನೆನಪಾಗಿದ್ದು ಮನೆ ಮತ್ತು ಊರು. ಸಣ್ಣವನಿದ್ದಾಗ ಬರೋಬ್ಬರಿ ಮೂರ್ನಾಲ್ಕು ತಿಂಗಳು ಬಿಡದೆ ಸುರಿಯುತ್ತಿದ್ದ ಜಿಟಿ ಜಿಟಿ ಮಳೆಗೆ ಇದೆ ರೀತಿ ಕೈ ಚಾಚುತ್ತ, ಮನೆ ಮುಂದಿನ ಹೆಂಚಿನ ದೋಣಿಯಿಂದ ಬೀಳೋ ನೀರಿನ ಹರಿವಲ್ಲಿ ಪೇಪರ್ ದೋಣಿ ಬಿಟ್ಟಿದ್ದು, ಶೀತಕ್ಕೆ ಹೊರಗೋಗಬೇಡ ಅನ್ನೋ ಅಮ್ಮನ ಬೊಬ್ಬೆ, ಅಕ್ಕ ತಂದು ಕೊಡುತ್ತಿದ್ದ ಬೇಯಿಸಿದ ಹಲಸಿನ ಬೀಜ, ಪಕ್ಕದ ಮನೆ ಪಾರು ಕಿಟಕಿಯಿಂದ ಕೈ ಬೀಸಿ ಹಾಯ್ ಅಂದದ್ದು, ಮಳೆಗೆ ನಾನೂ ಸುಸ್ತಾಗಿದ್ದೇನೆ ಅನ್ನೋ ಹಾಗೆ ಮಲ್ಲಗೆ ಹೋಗುತ್ತಿದ್ದ ಕೃಷ್ಣಾ ಬಸ್ಸು ಎಲ್ಲವೂ ನೆನಪಾಯಿತು. Read more »