ವಿಷಯದ ವಿವರಗಳಿಗೆ ದಾಟಿರಿ

Archive for

22
ಜೂನ್

ಮಂಜುನಾಥನ ದಯೆ ಇರಲಿ!!!

 ಅರೆಹೊಳೆ ಸದಾಶಿವ ರಾವ್

ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ,

ನಿನಗೊಂದು  ಪತ್ರ ಬರೆಯಬೇಕಾದ ಅನಿವಾರ್ಯತೆ ಬಂದೀತು ಎಂದು ನಾವು ಅಂದುಕೊಂಡಿರಲಿಲ್ಲ. ಒಂದು ನಂಬುಗೆ ಇದೆ. ಅದೆಂದರೆ, ನಿನ್ನ ಬಳಿ  ಯಾವುದೇ ಭಕ್ತ ಬಂದು, ತನ್ಮಯತೆಂದ ಏನಾದರೂ ಕೇಳಿಕೊಂಡರೆ, ಕಷ್ಟ ಪರಿಹಾರವಾಗಿ, ಕೋರಿಕೆ ನೆರವೇರುತ್ತದೆ ಎಂದು. ಆದರೆ ತಪ್ಪು ಮಾಡಿದವರನ್ನು ನೀನೇ ನೋಡಿಕೊಳ್ಳುತ್ತಿ ಎಂದು ಒಮ್ಮೆ ಬಾಮಾತಿನಲ್ಲಿ ಹೇಳಿದರೂ, ಮತ್ತೆ ಅದನ್ನು ಹಿಂಪಡೆಯಲು ನಿನ್ನ ಬಳಿಯೇ ಬರಬೇಕಾಗುತ್ತದೆ. ವಿಷಯವನ್ನು ನಿನ್ನ ಮಡಿಲಿಗೆ ಹಾಕಿ ಬಿಟ್ಟರೆ, ಫಲಾಫಲ ನಿನ್ನ ಇಚ್ಛೆಯಂತೆ ನಡೆಯುತ್ತದೆ ಮತ್ತು ಇದು ಇಡೀ ಕುಟುಂಬಕ್ಕೇ ಅನ್ವುಸುತ್ತದೆ.

ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ಇಡೀ ರಾಜ್ಯ ಅಥವಾ ದೇಶದ ಕುಟುಂಬವೇ ಒಂದಾಗಿ ಒಬ್ಬ ಯಜಮಾನನನ್ನಾಗಿ ಆಯ್ಕೆ ಮಾಡಿ ಕಳುಹಿಸುತ್ತೇವೆ. ನಮ್ಮ ದುರಾದ್ರಷ್ಟವೆಂದರೆ ಅದಾದ ಮೇಲೆ ನಮಗೆ ಅಂತಹ ಯಜಮಾನನ ಮೇಲೆ ಯಾವುದೇ ನಿಯಂತ್ರಣ ಇರುವುದಿಲ್ಲ. ಆಗೆಲ್ಲಾ ನಾವು ನಮ್ಮನ್ನು ದೇವರೇ ಕಾಪಾಡಬೇಕು ಎಂದುಕೊಂಡು ನಿನ್ನ ತಲೆಯ ಮೇಲೆ ಭಾರ ಹಾಕಿ ಸುಮ್ಮನುಳಿಯುತ್ತೇವೆ.

ಗೌಡರ ವಂಶ ಇರಬಹುದು, ಯಡ್ಯೂರಪ್ಪನವರ ವಂಶವಿರಬಹುದು, ಎಲ್ಲರ ಮೇಲೂ ನಾವು ವಿಶ್ವಾಸ ಇಟ್ಟು, ದೇಶದ ಪರಮಾಧಿಕಾರಗಳ ವಿವಿಧ ಹಂತಗಳನ್ನು ನೀಡಿದವರು. ಆದರೆ ಅವರೆಲ್ಲಾ ಅಧಿಕಾರ ಸಿಕ್ಕ ನಂತರ, ಈ ಎಲ್ಲದೂ ತಮಗೆ ಕಟ್ಟಿಟ್ಟದ್ದು ಎಂಬಂತೆ ವರ್ತಿಸಿದ್ದು ಮಾತ್ರ ನಿಜ. ಎಲ್ಲರೂ ಅವರವರ ಮಟ್ಟಿಗೆ ರಾಜ್ಯದ ಬೊಕ್ಕಸದಿಂದ ಸಾಧ್ಯವಾದಷ್ಟೂ ಎತ್ತಿದವರೇ ಎಂದು ಇಬ್ಬರೂ ಆರೋಪಿಸಿಕೊಳ್ಳುತ್ತಿದ್ದಾರೆ. ಸತ್ಯ ಏನು ಎನ್ನುವುದು ರಾಜ್ಯದ ಎಲ್ಲರಿಗೂ ಗೊತ್ತಿದೆ. ಯಡ್ಯೂರಪ್ಪ ಮತ್ತು ಕುಮಾರ ಸ್ವಾಮಿ-ಇಬ್ಬರೂ ಎಲ್ಲೆಲ್ಲಾ ಸಾಧ್ಯವೋ ಅಲ್ಲೆಲ್ಲಾ ಮೆಂದವರೇ ಎಂಬುದೇ ಈ ಸತ್ಯ!(ನಿನಗೆ ಗೊತ್ತಿಲ್ಲದ್ದೇನಲ್ಲ ಬಿಡು) Read more »

22
ಜೂನ್

ಮಾಸದ ನೆನಪುಗಳು

ಪವನ್ ಪರುಪತ್ತೇದಾರ್ 

ಜೀವನದಲ್ಲಿ ಕೆಲೊವಂದು ಸರಿ ಬಹಳ ವಸ್ತುಗಳನ್ನು ಕಳೆದುಕೊಳ್ತಿವಿ, ಬೆಂಗಳೂರಿನ ಲೋಕಲ್ ಬಸ್ ನಲ್ಲಿ ಓಡಾಡೋವಾಗ ಪ್ರತಿ ದಿನ ಒಬ್ಬರಲ್ಲ ಒಬ್ಬರು ಮೊಬೈಲ್ ಫೋನ್ ಕಳೆದುಕೊಳ್ತಾನೆ ಇರ್ತಾರೆ. ನನ್ ಸ್ನೇಹಿತ ಒಬ್ಬ ಹೇಗೆ ಮೊಬೈಲ್ ಕಳಕೊಂಡು ಕಳ್ಳನ್ನ ಹಿಡಿಯೋಕೆ ಹೋಗಿ, ಅವರ ಹತ್ರ ಒದೆ ತಿಂದು ಬಂದಿರೋದು ಆಗಿದೆ. ಆ ಮೊಬೈಲ್ ನ ನೆನಪು ಅವನನ್ನ 15 ದಿನ ಕಾಡಿರ್ಬೋದು, ಆ ಒದೆ ತಿಂದ ನೋವು 2 ತಿಂಗಳು ಕಾಡಿರಬಹುದು ಆದ್ರೆ ಅ ಮೊಬೈಲ್ ಜಾಗದಲ್ಲಿ ತನಗಿಷ್ಟ ಅದವರನ್ನ ಕಳೆದು ಕೊಂಡರೆ ಎಷ್ಟು ಕಾಡುತ್ತೆ ಅಲ್ವಾ?? ನನ್ನ ಈ ಬರಹದಲ್ಲಿ ನನ್ನ ಆ ರೀತಿ  ಕಾಡುತ್ತಿರುವ ಮಾಸದ  ಒಂದು ನೆನಪಿನ ಬಗ್ಗೆ ಬರೀತಿದಿನಿ

        ನಾನು ಪಿ ಯು ಸಿ ಓದ್ತಾ ಇದ್ದೆ ಆಗ, ನಮ್ಮೂರಿಂದ  ಬೆಂಗಳೂರಿನ ಕಾಲೇಜ್ ಗೆ 1 ಘಂಟೆ ಪ್ರಯಾಣ,  ನಮ್ಮೂರಿಂದ ತುಂಬಾ ವಿದ್ಯಾರ್ಥಿಗಳು  ಬರ್ತಾ ಇದ್ರು ಎಲ್ರು ಜೊತೆಯಾಗಿ ಬಸ್ ಅಲ್ಲಿ ಮಜಾ ಮಾಡ್ಕೊತ ಒಬ್ಬರನ್ನೊಬ್ಬರು ರೇಗಿಸ್ತ ತುಂಬಾ ಖುಶಿಯಾಗಿ ಟ್ರಾವೆಲ್ ಮಾಡ್ತಾ ಇದ್ವಿ , ನಮ್ batch ನಲ್ಲೆ ಆನಂದ್ ಎಂಬ ಹುಡುಗ ನಮ್ಮುರೋನೆ ಎಲ್ಲರು ಪ್ರೀತಿಯಿಂದ ದೀದಿ ಅಂತ ಕರಿತ ಇದ್ವಿ . ಅವನು ಒಂತರ ವಿಚಿತ್ರ ಹುಡುಗ 100 ರು ಖರ್ಚು ಮಾಡಿದ್ರೆ 1000 ಅಂತಿದ್ದ 25 ಕೆ 15 ಮಾರ್ಕ್ಸ್ ಬಂದಿದ್ರೆ 23 ಅಥವಾ 24 ಅಂತಿದ್ದ.  ತುಂಬಾ ಹೇಳ್ಕೊಳೋ ಸ್ವಭಾವದ ಹುಡುಗ ಆದ್ರೆ ಅವ್ನು ಯಾವತ್ತು ಒಬ್ರನ್ನ ನೋಯಿಸ್ಬೇಕು ಅನ್ಕೊಂಡಿರಲ್ಲ ನೋಯಿಸ್ತನು ಇರ್ಲಿಲ್ಲ ಇನ್ನೂ ನಾವೇ ಎಲ್ಲ ಸೇರ್ಕೊಂಡು ಅವನ್ನ ಅವನ ಕೊಚ್ಚಿಕೊಳೊ ಸ್ವಾಭಾವಗಳನ್ನ ತೊಗೊಂಡು ರೆಗಿಸ್ತ ಇದ್ವಿ ಇವನನ್ನ ಪ್ರೀತಿಯಿಂದ ದೀದಿ ಅಂತ ಕರಿತ ಇದ್ವಿ .. Read more »
22
ಜೂನ್

ನಮ್ಮ ಹಾಗೂ ನಮ್ಮಪ್ಪನ ನಡುವಿನ ಭಿನ್ನಾಭಿಪ್ರಾಯಗಳು…

ಸತ್ಯಚರಣ್ ಎಸ್.ಎಂ

ಸ್ನೇಹಿತರೇ. ಮೊನ್ನೆ ಮೊನ್ನೆ ಆಂಗ್ಲರಿಂದ ಆಮದು ಮಾಡಿಕೊಂಡ “Father’s Day” ನಡೆಯಿತಲ್ವೇ.. ಆ ಸಂದರ್ಭಕ್ಕೆ ನನಗೆ ನನ್ನ ಈ ಕೆಳಗಿನ ಬರಹ ಹಿಂದೆ ಬರೆದದ್ದು ನೆನಪಾಗಿ, ಮತ್ತೆ ನಿಮ್ಮ ಮುಂದೆ ಇಡೋಣ ಅಂತನಿಸಿ, ಇಲ್ಲಿ ಇಡುವಂತಾಯ್ತು.. ಹೆಚ್ಚಿಗೆ ಬದಲಾಯಿಸದೇ, ಅಂದು ಬರೆದದನ್ನ ಹಾಗೇ ಇಡುತ್ತಿದ್ದೇನೆ.. 🙂

ಇದೊಂತರ ವಿಚಿತ್ರ “ವಿಷಯ” ಚರ್ಚೆಗೋಸ್ಕರ ಆದ್ರೆ.. ಅಂತ ಅನಿಸುತ್ತದೆ ನನ್ನ ಮನಸ್ಸಿಗೆ..
ಪ್ರಪಂಚದ ಬುಧ್ಧಿವಂತರೆಲ್ಲಾ ಒಂದು ತರಹದ ಉತ್ತರ ನೀಡಿದರೆ ಹೃದಯವಂತರೆಲ್ಲಾ ಇನ್ನೊಂದು ತರಹ ಮಾತಾಡುತ್ತಾರೆ ಈ ವಿಷಯದಲ್ಲಿ.

ಹ..ಹಾ.. ನಾನು ಯಾವ ಗುಂಪಿಗೆ ಸೇರುತ್ತೇನೋ ಗೊತ್ತಿಲ್ಲ… ಆದರೆ, ನನ್ನ ಮನಸ್ಸಿನಲ್ಲಿರೋ, ಮನಸ್ಸಿಗೆ ಹಿಂದೆ ಬಂದಿದ್ದ ಯೋಚನೆಗಳೆಲ್ಲ ಒಂದೆಡೆ ಹಾಕಿ, ಅದರ ಸಾರ ತೆಗೆಯೋ ಪ್ರಯತ್ನ ಇದು ಅನ್ಕೋತೀನಿ.. ಮುಂದಿನ ದಿನಗಳಲ್ಲಿ ನನ್ನ ವಿಚಾರಧಾರೆ ಯಾವ ದಿಕ್ಕಿನಲ್ಲಿ ಹರಿಯುತ್ತೋ ಗೊತ್ತಿಲ್ಲ.. ಸದ್ಯದ್ದು ಏನಿದೆಯೋ ಅದನ್ನು ನಿಮ್ಮ ಮುಂದೆ ಇಡ್ತಾ ಇದ್ದೇನೆ.. Read more »