ವಿಷಯದ ವಿವರಗಳಿಗೆ ದಾಟಿರಿ

Archive for

14
ಜೂನ್

ಸ್ವಲ್ಪವಾದರೂ ಸಭ್ಯತೆ ಇರಲಿ………!!!

 ಪವನ್ ಪಾರುಪತ್ತೇದಾರ್
ಬಹಳ ದಿನಗಳ ನಂತರ ಬೆಂಗಳೂರಿನಲ್ಲಿ ಓಡಾಡಬೇಕಾದ ಅನಿವಾರ್ಯತೆ ಬಂದಿತ್ತು. ಪ್ರಾಜೆಕ್ಟ್  ವರ್ಕ್ ಭೂತ ತಲೆಯ ಮೇಲೆ ಕೂತಿತ್ತು ಇಷ್ಟವಿಲ್ಲದಿದ್ದರೂ ಮಾಡಲೇಬೇಕಾದ ಕೆಲಸ ಅದು, ಇಂಜಿನಿಯರಿಂಗ್ ಮುಗಿದು ಹೋಯ್ತು ಅಂತ ಅಂದುಕೊಳ್ಳುತ್ತಿರುವಾಗಲೇ ಇದೊಂದು ಕೆಲಸ ಬಾಕಿ ಇದೆ ಎಂದು ಆಗಾಗ ಮೊಟಕುವ ಕುಟುಕುವ ವಸ್ತು ಈ ಪ್ರಾಜೆಕ್ಟ್ ವರ್ಕ್.
         ಅದೇ ಗುಂಗಿನಲ್ಲಿ ಮಡಿವಾಳ ಸಿಲ್ಕ್ ಬೋರ್ಡ್ ಅಲ್ಲಿ 201 no ಬಸ್ ಹತ್ತಿದೆ. ಅದೇನೋ ನನ್ನ ಅದೃಷ್ಟ ಬಸ್ ಖಾಲಿ ಖಾಲಿ ಆಗಿತ್ತು. ಬಂದು ಹಿಂದಿನ ಸೀಟ್ ಅಲ್ಲಿ ಕಿಟಕಿ ಪಕ್ಕ ಕೂತೆ. ೪೦ ರುಪಾಯಿ ಕೊಟ್ಟು ಪಾಸು ತೆಗೆದುಕೊಂಡರೆ ಇಡಿ ಬೆಂಗಳೂರೇ ತಿರುಗಬಹುದಾದ ಒಂದು ಸೌಕರ್ಯ ನಿಮಗೆಲ್ಲ ಗೊತ್ತಿರುವಂತೆ ಇಲ್ಲಿದೆ. ನಾನು ಅ ಪಾಸ್ ಖರೀದಿಸಿಯೇ ಓಡಾಡುತಿದ್ದೆ. ಬಸ್ ನಲ್ಲಿ ಕಡೆಯ ಸೀಟ್ ಅಲ್ಲಿ ಯುವ ಜೋಡಿಯೊಂದು ಕೂತಿತ್ತು.ನನ್ನ ಪಕ್ಕ ಒಬ್ಬ ತಾತ ಬಂದು ಕೂತರು, ಸುತ್ತಲು ಒಂದಷ್ಟು ಹಿರಿಯರು ಇದ್ದರು. ನನಗೋ, ಎಲ್ಲರಿಗು ಇದ್ದಂತೆ ಆ ಯುವ ಜೋಡಿಯನ್ನು ನೋಡುವ ಕುತೂಹಲ, ಅ ಕುತೂಹಲದಿಂದಲೇ ಆಗಾಗ ಮೆಲ್ಲಗೆ ಅವರಿಗೆ ತಿಳಿಯದಂತೆ ಅವರನ್ನು ಗಮನಿಸುತ್ತ ಇದ್ದೆ. ನಾ ಮಾತ್ರ ಅಲ್ಲ ಅಲ್ಲಿದ್ದ ಎಲ್ಲರು ತಮ್ಮ ಗಮನವನ್ನು ಅ ಕಡೆ ಇಟ್ಟುಕೊಂಡೆ ಇದ್ದರು. ಕ೦ಡಕ್ಟರ್ ಟಿಕೆಟ್ ಕೊಡುವ ನೆಪದಲ್ಲಿ ಆಗಾಗ ಹಿಂದೆ ಬಂದು ಮುಖ ಸಿಂಡರಿಸುತ್ತ  ಹೋಗುತಿದ್ದ. ನನಗಂತೂ ಇನ್ನು ಕುತೂಹಲ ಹೆಚ್ಚಾಯಿತು. ಇನ್ನು ಸ್ವಲ್ಪ ಗಮನಿಸಿದೆ ಅ ಹುಡುಗ ಹುಡುಗಿಯ ಹೆಗಲ ಮೇಲೆ ಕೈ ಹಾಕಿಕೊಂಡಿದ್ದ, ಆಗಾಗ ಕಿವಿಯಲ್ಲಿ ಏನೇನೋ ಹೇಳುತಿದ್ದ, ಒಂದೆರಡು ಬರಿ ಮುತ್ತನ್ನು ಕೊಟ್ಟ. ಹೀಗೆ ಒಂದೆರಡು ಸ್ಟಾಪ್ ಆದಮೇಲೆ ಕ೦ಡಕ್ಟರ್ ಬಂದವನೇ, ಎದ್ದೆಲ್ರಿ ಮೇಲೆ ನೀವು ಅಂದ, ಅದಕ್ಕವರು ಯಾಕೆ ಅಂತ ಬಲು ದರ್ಪದಿಂದ ಕೇಳಿದರು ಅದಕ್ಕೆ ನಮ್ಮ ಕ೦ಡಕ್ಟರ್, ನಾನು ನೋಡ್ತಾನೆ ಇದೀನಿ ಆಗ್ಲಿಂದ ಏನು ನೀವು ಮಾಡ್ತಿರೋ ಕೆಲಸ?? ಇದೆಲ್ಲ ಮಾಡೋಹಾಗಿದ್ರೆ ಲಾಲ್ ಭಾಗೋ ಕಬ್ಬನ್ ಪರ್ಕೋ ಹೋಗಿ, BTS ಬಸ್ ಏನು ಬೆಡ್ ರೂಂ ಅಂದುಕೊಂಡಿದ್ದಿರ ಅಂತ ಸರಿಯಾಗಿ ಚಾರ್ಜ್ ತೊಗೊಂಡ. ಅಷ್ಟರಲ್ಲೇ ಅಲ್ಲಿದ್ದ ಜನರು ಕೂಡ ಏನಮ್ಮ , ನಿನಗಾದ್ರು ಮಾನ ಮರ್ಯಾದೆ ಇಲ್ವಾ ಎಲ್ಲಿರೋದು ನಿಮ್ಮ ಮನೆ, ಏನು ನಿಮ್ಮ ತಂದೆ ಹೆಸರು ಅಂತ ಎಲ್ಲ ಪ್ರಶ್ನೆ ಮಾಡಲು ಶುರು ಮಾಡಿದ್ದರು. ಅಷ್ಟರಲ್ಲೇ ಮುಂದಿನ ಸ್ಟಾಪ್ ಬಂದಿತ್ತು ಇಬ್ಬರು ಇಳಿದು ಏನು ಮಾತನಾಡದೆ ಕಾಲುಕಿತ್ತರು. Read more »
14
ಜೂನ್

ಮಾರಿಯಮ್ಮ ದೇವರ ಕಾಣಿಕೆ ಡಬ್ಬವೂ – ಮಸಾಲೆ ದೋಸೆಯೂ..!

– ರವಿ ಮುರ್ನಾಡು

ದೇವರ ಕಾಣಿಕೆ ದುಡ್ಡು ತೆಗೆಯುವುದೆಂದರೇನು… ರಕ್ತ ಕಾರಿ ಸತ್ತಾರು…! ಪಕ್ಕದ ಮನೆಯ ಅಮ್ಮುಣ್ಣಿಯಮ್ಮ  ಒಮ್ಮೆ ಹೇಳಿದ್ದರು. ಈಗೇನು ಮಾಡುವುದು.? ಕಾಣಿಕೆ ದುಡ್ಡು ತೆಗೆದದ್ದು ಆಯಿತು.. .ಅಲ್ಲೆಲ್ಲಾ ಹಾವುಗಳು ಓಡಾಡುತ್ತವೆ. ನಾನು ನೋಡಿದ್ದೆ. ಭಾರೀ ಉದ್ದದ ಹಾವುಗಳು. ರಾತ್ರಿ ಬಂದರೋ? ಅಳು ಬರುವುದೊಂದೇ ಬಾಕಿ. ಅಜ್ಜಿ- ಚಿಕ್ಕಮ್ಮ ಬೆಲ್ಲದ ಮಿಠಾಯಿಗೆ ಕೊಡುವ ಹಣವನ್ನು ಒಟ್ಟು ಸೇರಿಸಿ ವಾಪಾಸು ಹಾಕುವುದಾಗಿ ಹೇಳಿದ ಮೇಲೆ ನಿದ್ದೆ ಬಂತು.

ತೆಗೆದದ್ದು ಒಂದು ರೂಪಾಯಿ..! ಅಜ್ಜಿ ಸೀರೆ ಸೆರಗಿನ ಅಂಚಿನಲ್ಲಿ ದುಡ್ಡು ಇಟ್ಟಿರುತ್ತಾರೆ. ತೋಟದಲ್ಲಿ ಕೆಲಸ ಮಾಡುವಾಗ ” ಟೀ” ಕುಡಿಯಲು ಐವತ್ತು ಪೈಸೆ, ಇಪ್ಪತ್ತೈದು ಪೈಸೆ ಹಾಗೆ. ತೆಗೆದರೆ  ಹೊಡೆತ ಬೀಳುವುದಂತು ಖಂಡಿತಾ. ದೇವರ ಕಾಣಿಕೆ ದುಡ್ಡು ವಿಷಯ ಗೊತ್ತಾದರೋ?. ಬೆಳಿಗ್ಗೆ ಕಣ್ಣು ಬಿಟ್ಟಾಗಲೂ ಇದೇ ಆಲೋಚನೆ.

ದೊಡ್ಡ ಮಾವ ವೀರಾಜಪೇಟೆಯ ಯಾವುದೋ ಹೋಟೇಲ್ಲಿನಲ್ಲಿ ಸಪ್ಲಯರ‍್ ಆಗಿದ್ದ. ಸಂತೆ ದಿನ ಭಾನುವಾರ ಎರಡು ತಿಂಗಳಿಗೊಮ್ಮೆ ಬರುವುದು. ಆ ಒಂದು ಸಂತೆ ದಿನ ಅಜ್ಜಿ, ಚಿಕ್ಕಮ್ಮ ಮತ್ತು ನಾನೂ ಸಂತೆಗೆ ಹೋಗಿದ್ದಾಗ, ಅವನೂ ಬಂದಿದ್ದ. ಎಲ್ಲಾ ಸಾಮಾನು ಖರೀದಿಸಿದ ಮೇಲೆ ನಾವು ಮಸಾಲೆ ದೋಸೆ ತಿಂದದ್ದು. ಸುಂಟಿಕೊಪ್ಪದ ಗಣೇಶ ಸಿನೇಮಾ ಥಿಯೇಟರ‍್ ಪಕ್ಕದ ಕ್ಯಾಂಟೀನಿನಲ್ಲಿ. ಭಾರೀ ಅಗಲದ ದೋಸೆ ಅದು. ತುಪ್ಪ ಹಾಕಿ ಮಾಡಿದ್ದು. ಜೊತೆಗೆ ರುಚಿರುಚಿಯಾದ ಆಲೂಗೆಡ್ಡೆ ಪಲ್ಯ ಮತ್ತು ತೆಂಗಿನಕಾಯಿ ಚಟ್ನಿಯೂ. ಈ ರುಚಿಯನ್ನು ನೆನೆದು ರಾತ್ರಿ ಊಟವೂ ಸಪ್ಪೆ..!. ಅದೇ ಮಸಾಲೆ ದೋಸೆಯ ಕನಸುಗಳು. Read more »