ವಿಷಯದ ವಿವರಗಳಿಗೆ ದಾಟಿರಿ

Archive for

25
ಜೂನ್

ಅಲ್ಲಿ ಆಲ್ಫಾ ಅಂತಿದೆ ನೋಡಿ, ಮೊದಲ ಪ್ರಯತ್ನಕ್ಕೆ ಸಹಕಾರ ನೀಡಿ

– ಕಾಲಂ 9

ಗೂಗಲ್ ಸಂಸ್ಥೆಯು ಇತ್ತೀಚಿಗೆ ತನ್ನ ಭಾಶಾಂತರ ಸೇವೆಯ ಕನ್ನಡ ಅವತರಣಿಕೆಯ ಆಲ್ಫಾ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇಂಗ್ಲಿಷ್ ಭಾಷೆಯಿಂದ ಕನ್ನಡಕ್ಕೆ ಯಾಂತ್ರೀಕೃತ ಭಾಶಾಂತರಕ್ಕೆ ಇದು ಮೊದಲ ಪ್ರಯತ್ನ. ಆದರೆ ಇದು ಕನ್ನಡದ ಕೊಲೆ ಎಂದು ಉದಯವಾಣಿಯು ‘ವಾಷಿಂಗ್ಟನ್‍ನಿಂದ’ ವರದಿ ಮಾಡಿದ್ದಾರೆ.

ಉದಯವಾಣಿಯ ವಾಷಿಂಗ್ಟನ್ ವರದಿಗಾರರಲ್ಲಿ ನನ್ನ ಮನವಿ: ನೀವು ಪುಕ್ಕಟೆ ಪ್ರಯತ್ನಕ್ಕೆ ಸಿಟ್ಟಾಗುವ ಮೊದಲು ಸಾಧ್ಯವಾದರೆ ಮೌಂಟೆನ್ ವ್ಯೂ ನಲ್ಲಿರುವ ಗೂಗಲ್ ಕಛೇರಿಗೆ ಒಮ್ಮೆ ಹೋಗಿ ಭಾಷಾಂತರ ಪ್ರಾಜೆಕ್ಟ್ ಬಗ್ಗೆ ಸ್ವಲ್ಪ ಕೇಳಿ. ಅಥವಾ translate.google.com ಪುಟದ ಕೊನೆಗಿರುವ About Google Transate ಕೊಂಡಿಯನ್ನೊಮ್ಮೆ ಬಳಸಿ ಅದರ ಬಗ್ಗೆ ಸ್ವಲ್ಪ ಓದಿ. ಮೊದಲನೆಯದಾಗಿ ಇದೂ ಇನ್ನೂ ಆಲ್ಫಾ ಆವೃತ್ತಿ. ಇನ್ನೂ ಬೀಟ ಆವೃತ್ತಿಯ ನಂತರ ಸೇವೆಯು ಸಾಧಾರಣ ಬಳಕೆಗೆ ಲಭ್ಯವಾಗುತ್ತದೆ. ಆಲ್ಫಾ ಆವೃತ್ತಿಯ ಬಗ್ಗೆ ಗೂಗಲಿಸಿದರೆ ನಿಮಗೆ ಹಾಗೆಂದರೇನೆಂಬುದು ತಿಳಿಯುತ್ತದೆ. Read more »

25
ಜೂನ್

ಪ್ರೀತು, ಪ್ರೀತಿ ಮತ್ತು ಅವನು..

– ಅಬ್ದುಲ್ ಸತ್ತಾರ್

ಎಂತಹಾ ಹಾಯೆನಿಸುವ ವಾತಾವರಣವೆಂದರೆ ಆ ಸಂಜೆ ಎಲ್ಲಾ  ವಯಸ್ಕರೂ  ಅಲ್ಲಿ ಸೇರಿದ್ದರು. ಮುದಿಗೆಳೆಯಾ ಗೆಳತಿಯರು ಉಲ್ಲಾಸದಿಂದ ಎದುಸಿರು  ಬಿಡುತ್ತಾ ಆ ಕಲ್ಲು ಹಾಸಿನ ಮೇಲೆ ಓಡುತ್ತಿದ್ದರೆ ಕೆಲವರು ನಡೆಯುತ್ತಿದ್ದರು.
ವಿಶಾಲವಾದ ಆ ಪಾರ್ಕಿನ ಸುರಕ್ಷಿತ ಸ್ತಳದಲ್ಲಿ ಜೋಡಿಹಕ್ಕಿಗಳು ಮುನಿಸಿನಿಂದ,  ಸರಸದಿಂದ, ವಿರಸದಿಂದ ಒಟ್ಟಿಗೇ ಸೇರಿದ್ದವು.
ಆ ಕಲ್ಲು ಬೆಂಚಿನಲ್ಲಿ  ಅವನೂ ಅವಳೂ ದೂರ ದೂರ  ಕೂಳಿತಿದ್ದಾರೆ.  ಕೊನೆಗೂ  ಸುಮ್ಮನೆ ಕೂತು ಸುಖವಿಲ್ಲೆಂದು ಅವನು ಅವಳನ್ನೊಮ್ಮೆ ಕಣ್ಣಲ್ಲಿ ಕಣ್ಣಿಟ್ಟು
ನೋಡಿದ.  ಅವಳು ಹತ್ತಿರ ಬಂದು ಅವನಿಗೆ ತಾಗಿಕುಳಿತು ಕಯ್ಯನ್ನ ಅವನ  ಹೆಗಲಿಗೇರಿಸಿದ್ದಳು. ಅವನು ಸುತ್ತ-ಮುತ್ತಲೋಮ್ಮೆ ನೋಡಿ ಅವಳ ಕೈಯನ್ನ ಮೆಲ್ಲಗೆ ಹೆಗಲಿನಿಂದ ಜಾರಿಸಿ ಸರಿಯಾಗಿ ಕೂರಲು ಹೇಳಿದ. ಅವಳು ಮುನಿಸಿಕೊಂಡು ಮುಖ ಆ ಕಡೆ ಮಾಡಿದಳು.
“ಸಾರಿ ಪ್ರೀತು, ಇದು ಪಬ್ಲಿಕ್ಕು ಅಂತಾ..”
“ಹೋಗೊಲೋ, ನಿನಗೆ ನನ್ನ ನೋವು ಮಾಡೋದಲ್ದೆ ಮತ್ತೇನು ಗೊತ್ತು?, ನೀ ತುಂಬಾ ಕೆಟ್ಟವ್ನಪ್ಪ…”
ಅಲ್ಲಿ ಮೌನ.
“ಪ್ರೀತು, ಇದು ನಮ್ಮ ಕೊನೇ ಹದಿನೈದ್ನೆ ತಾರೀಖು. ಗೊತ್ತೇ ಇಲ್ಲದಂಗೆ ನಮ್ಮ ಮೂರು ವರ್ಷ ಕಳೆದು ಹೊಯ್ತಲ್ಲೇ..”
ಅವನ ಈ ಮಾತನ್ನ ಮನಸ್ಸಲ್ಲೇ ಗುನುಗುತ್ತಿದ್ದ ಅವಳ ಕಣ್ಣು ಸ್ವಲ್ಪವೇ ಹನಿಗೂಡಿತು.
“ನನ್ನ ಮರೀತಿಯೇನೋ? ಮುಂದೆ ಸಿಕ್ಕಾಗ ಈ ರೀತಿ ನೋವು ಮಾಡ್ದೆ ನನ್ನ ಒಪ್ಕೋತೀಯಲ್ವ?,ನಂಗೆ ತಡ್ಕೋಲ್ಳೊಕ್ಕಾಗಲ್ಲ”
25
ಜೂನ್

ಆಧುನಿಕ ಬೇತಾಳನೂ ವಿಕ್ರಮಾದಿತ್ಯನೂ ಮತ್ತು ಕಾಲೇಜು ಹುಡುಗರು…

ಸಾತ್ವಿಕ್ ಎನ್ ವಿ

ಯಥಾ ಪ್ರಕಾರ ಹಠಬಿಡದೇ ಸೆಪ್ಟೆಂಬರ್ ಮಾರ್ಚ್ ಸೆಪ್ಟೆಂಬರ್ ಎಕ್ಸಮ್ ಬರೆಯೋ ರಿಪಿಟರ್ ವಿದ್ಯಾರ್ಥಿ ಥರಾ ವಿಕ್ರಮ ರಾಜನು ಮರದಲ್ಲಿದ್ದ ಬೇತಾಳವನ್ನು ಪ್ರೈಮರಿ ಶಾಲೆಯ ಮಕ್ಕಳ ಮಣ ಭಾರದ ಪುಸ್ತಕದ ಚೀಲದಂತೆ ಹೆಗಲಿಗೇರಿಸಿ ನಡೆಯುತ್ತಿದ್ದನು. ವಶೀಲಿ ಗೊತ್ತಿಲ್ಲದ ಸರ್ಕಾರಿ ನೌಕರನಂತೆ ದುಡಿಯುವುದನ್ನು ನೋಡಿ ಬೇತಾಳನಿಗೆ ಅಯ್ಯೋ ಪಾಪ ಎನಿಸಿ ‘ ವಿಕ್ರಮ ಮಹಾರಾಜ ನಿನ್ನ ಕರ್ತವ್ಯ ಪ್ರಜ್ಞೆ ಮೆಚ್ಚಿದ್ದೇನೆ. ದಾರಿಸಾಗಲು ಕಥೆಯೊಂದನ್ನು ಹೇಳುತ್ತೇನೆ. ಮೊಬೈಲ್ ಅಲ್ಲಿ ಮಾತಾಡುತ್ತಾ ಸಾಗೋ ಪ್ರೇಮಿಯ ಹಾಗೆ ನಿನಗೆ ದಾರಿ ಸಾಗಿದ್ದೇ ಗೊತ್ತಾಗುವುದಿಲ್ಲ’ ಎಂದಿತು. ವ್ರತ ನಿಷ್ಠನಾದ ವಿಕ್ರಮ ಮಾತಾಡದೇ ಇದ್ದರೂ ಹುಡುಗಿಯರ ಮೌನವನ್ನೇ ಒಪ್ಪಿಗೆ ಎಂದು ಭಾವಿಸುವ ಪ್ರಿಯಕರನಂತೆ ತನ್ನ ಪಾಡಿಗೆ ತಾನು ಕಥೆ ಹೇಳಲು ಪ್ರಾರಂಭಿಸಿತು.

ಪುಣ್ಯ ಭರತ ಭೂಮಿಯಲ್ಲಿ ಕನ್ನಡನಾಡು ಎಂಬ ರಾಜ್ಯ. ಅಂತಿಪ್ಪ ರಾಜ್ಯದಲ್ಲಿ ತಂಗಳೂರು ವಿಶ್ವವಿದ್ಯಾನಿಲಯವೆಂಬ ವಿದ್ಯಾದೇಗುಲವಿತ್ತು. ಅಲ್ಲಿ ಉತ್ತಮ ದರ್ಜೆಯ ವಿದ್ಯಾಭ್ಯಾಸ ಸಿಗುತ್ತಿದ್ದ ಕಾರ್‍ಅಣ ಇಡೀ ದೇಶದಲ್ಲಿಯೇ ಪ್ರಸಿದ್ಧವಾಗಿತ್ತು. ಅಂಥ ವಿ ವಿ ಗೆ ಸುಭಗನೆಂಬ ವಿದ್ಯಾರ್ಥಿ ಕಲಿಯಲು ಸೇರಿದನು. ಕ್ರೀಡೆ, ಸಾಹಿತ್ಯ, ವಿಷಯಗಳಲ್ಲಿ ಒಳ್ಳೆಯ ಆಸಕ್ತಿ ಇತ್ತು. ಉತ್ತಮ ವಿದ್ಯಾರ್ಥಿಯಾದ ಈತನು ಬೇರೆ ವಿದ್ಯಾರ್ಥಿಗಳಿಗೆ ಅಸೂಯೆ ಮೂಡಿಸುವಷ್ಟು ಮಟ್ಟಿಗೆ ಬೆಳೆದನು. ವಿಭಾಗದಲ್ಲಿಯೂ ತೀವ್ರ ಚಟುವಟಿಕೆಯಿಂದ ಕೂಡಿದ್ದ ಇತನಿಗೆ ತನ್ನ ಸಮಾಜದ ಕೊಳಕುತನಗಳನ್ನು ಕಿತ್ತುಹಾಕಬೇಕೆಂಬ ತುಡಿತ. ಎಳೆ ವಯಸ್ಸು ಹುರಿಗಟ್ಟಿದ ದೇಹ, ಕನಸು ಬಿತ್ತುವ ಉಪನ್ಯಾಸಕರು ಇನ್ನೇನೂ ಬೇಕು ಸ್ವರ್ಗಕ್ಕೆ ಕಿಚ್ಚು ಹಚ್ಚಲು. Read more »