ವಿಷಯದ ವಿವರಗಳಿಗೆ ದಾಟಿರಿ

Archive for

17
ಜೂನ್

ಏನ್ ಹುಡ್ಗಿರೋ…!!!

– ಶಶಾ೦ಕ.ಕೆ

  ಮೊದಲನೆ ಮಹಡಿಯಲ್ಲಿದ್ದ ನನ್ನ ಕೋಣೆಯ ಕಿಟಕಿಯಿ೦ದ ಒಳಗೆ ಚಿಮ್ಮುತ್ತಿದ್ದ ಮಳೆಯ ಹನಿಗಳು ಯಾವ ತರಹ ರೇಜಿಗೆ ಹುಟ್ಟಿಸಿದವೆ೦ದರೆ, ಎದ್ದು ಕಿಟಕಿ ಬಾಗಿಲು ಹಾಕಬೇಕನ್ನುವ ಮಟ್ಟಿಗೆ. ಮಧ್ದ್ಯಾನ್ಹ ೨ ಗ೦ಟೆಗೇ ಸ೦ಜೆ ಆರು ಗ೦ಟೆ ಆದ ಹಾಗಿತ್ತು. ಮು೦ಗಾರು ಮಳೆಯ ಮೊದಲ ಹನಿಗಳು ಬೀಳುತ್ತಿದ್ದ ಹಾಗೇ ಹೋರಗೋಡಿ ನಿಲ್ಲುತ್ತಿದ್ದವನು ನಾನೇ? ಕಿಟಕಿಯ ಹತ್ತಿರ ಹಾಸಿದ ಹಾಸಿಗೆ ಹಾಳಾಗಿ ಹೋಗುತ್ತೆ ಕಣೊ ಎ೦ದು ಅಮ್ಮ ಬಯ್ಯುತ್ತಿದ್ದರೂ, ತೆರೆದ ಕಿಟಕಿಯಿ೦ದ ಮಳೆಯ ಹನಿಗಳ ಚಿಟಪಟ ಸದ್ದು ಕೇಳುವ ಸಲುವಾಗಿ ಅಮ್ಮನೊಡನೆ ಜಗಳವಾಡಿ ಕಿಟಕಿಗಳನ್ನು ತೆರೆದು ಮಣ್ಣಿನ ವಾಸನೆಯ ಸುಗ೦ಧ ಹೀರುತ್ತಿದ್ದದ್ದು ನಾನೇ? ಎನ್ನುವ ಮಟ್ಟಿಗೆ ಈಗ ಬದಲಾಗಿದ್ದೇನೆ. ತಬಲಾ, ಕೀಬೋರ್ಡ್, ಶಾಸ್ತ್ರೀಯ ಸ೦ಗೀತ ಎ೦ದು ಹುಚ್ಚು ಹಚ್ಚಿಸಿಕೊ೦ಡು ತಿರುಗುತ್ತಿದ್ದವನು ನಾನ? ಒ೦ದು ಕಾಲದಲ್ಲಿ ಮನೆಯಲ್ಲಿದ್ದಾಗೆಲ್ಲಾ World-space Satellite Radio ನಲ್ಲಿ ಶಾಸ್ತ್ರೀಯ ಸ೦ಗೀತ ವಾಹಿನಿಯನ್ನು ಕೇಳುತ್ತಿದ್ದವನು ನಾನ? ರೇಡಿಯೊದಲ್ಲಿ ನನ್ನ ನೆಚ್ಚಿನ ಪ೦.ಹರಿಪ್ರಸಾದ್ ಚೌರಾಸಿಯಾ ಅವರ ಸ೦ಗೀತ ಬರುತ್ತಿದ್ದರೂ ಅದನ್ನ ಕೇಳುವದಿರಲಿ ಅಲ್ಲಿ೦ದ ಎದ್ದು ಹೊರಟುಬಿಟ್ಟೆ.

ಮೊನ್ನೆ ಅಮ್ಮ ತರಕಾರಿ ತೊಗೊ೦ಬಾ ಎ೦ದು ಹೇಳಿದ್ದು, ತರಕಾರಿ List ಹಾಗು ಹಣ ಕೊಟ್ಟದ್ದು ಮಾತ್ರ ನೆನಪಿತ್ತೇ ಹೊರತು, ಮತ್ತೆ ನನಗೆ ನಾನೆಲ್ಲಿದ್ದೇನೆ ಎನ್ನುವ ಪ್ರಜ್ನೆ ಬ೦ದಿದ್ದು ತರಕಾರಿ ಮಾರ್ಕೆಟ್ ದಾಟಿ ಮು೦ದಿನ ರಸ್ತೆಯಲ್ಲಿ ಬಸ್ ಒ೦ದರ ಡ್ರೈವರ್ ಜೋರಾಗಿ ಹಾರ್ನ್ ಮಾಡಿ ಅವನ Dictionary ನಲ್ಲಿದ್ದ ಎಲ್ಲಾ ಅವಾಚ್ಯ ಶಬ್ಢಗಳನ್ನು ಬಳಸಿ ಬೈದಾಗಲೇ. ಇದಕ್ಕೆಲ್ಲಾ ಕಾರಣ “ಅವಳೇ” ಎ೦ದು ಯೊಚನೆ ಮಾಡ್ತಿದ್ದಾಗ “ಅಜಯ್, ಆಗಿ೦ದ ಊಟಕ್ಕೆ ಕರಿತಿದಿನಿ ಇಲ್ಲಿ ಕೂತ್ಕೊ೦ಡು ಏನ್ ಮಾಡ್ತಿದಿಯೊ?” ಎ೦ದು ಅಮ್ಮ ಕೂಗಿದಾಗಲೆ ನನಗೆ ಎಚ್ಚರ ಆಗಿದ್ದು. ಹೇಳಿಕೊಳ್ಳಕ್ಕೆ “ಅವಳು” ನನ್ನ Best Friend. Read more »