ವಿಷಯದ ವಿವರಗಳಿಗೆ ದಾಟಿರಿ

Archive for

15
ಜೂನ್

ಕನ್ನಡ ನಾಡೆಂಬ ಕರುಣೆಯ ಬೀಡೂ, ರಾಬಿನ್ ಚುಗ್ ಎಂಬ ಅವಿವೇಕಿಯೂ

(ಇತ್ತೀಚೆಗೆ ಫೇಸ್ ಬುಕ್ ನಡೆಯಿತು ಎನ್ನಲಾದ ವಿವಾದ ಕುರಿತು ನಿಲುಮೆ ತಂಡದ ವಿಜಯ್ ಹೆರಗು ಅವರು ವಿವಾದಿತ ವ್ಯಕ್ತಿ ರಾಬಿನ್ ಚುಗ್ ರನ್ನು  ಸ್ವತಃ ಸಂಪರ್ಕಿಸಿ ಮಾತಾಡಿ ಅದರ ವಿವರಗಳನ್ನು ದಾಖಲಿಸಿದ ಲೇಖನವಿದು. -ನಿಲುಮೆ)

ಪ್ರಿಯ ಗೆಳೆಯರೇ,

                     “ರಾಬಿನ್ ಚುಗ್”, ಈಗ ಈ ಹೆಸರು ಅಂತರ್ಜಾಲ ಬಳಕೆದಾರರಿಗೆ ಅದರಲ್ಲೂ ಫೇಸ್ಬುಕ್  ಬಳಸುವ ಕನ್ನಡಿಗರಿಗೆ ಪರಿಚಿತ ಹೆಸರು. ಈತನ ಹೆಸರು ಕೇಳಿದೊಡನೆ ಕೆಲವರಲ್ಲಿ ರೋಷ ಉಕ್ಕಿಬರುತ್ತದೆ. ಕೈಗೆ ಸಿಕ್ಕರೆ ನಾಲ್ಕೇಟು ತದುಕಬೇಕು ಅಂತ ಹಲವರಿಗೆ ಆಸೆಯಿದೆ. ಸಮಾಜದಲ್ಲಿ ಹಲವಾರು ಜನ ತಮ್ಮ ಒಳ್ಳೆಯ ಕೆಲಸಗಳಿಗೆ, ಒಳ್ಳೆಯ ಮಾತುಗಳಿಗೆ ಪ್ರಚಾರ ಗಳಿಸಿದರೆ ಇನ್ನು ಕೆಲವರು ಕೆಟ್ಟ ಕೆಲಸಗಳು ಮತ್ತು ಕೆಟ್ಟ ಮಾತುಗಳಿಂದ ಪ್ರಚಾರ ಗಳಿಸುತ್ತಾರೆ. ಹೀಗೆ ತಾನು ಬಳಸಿದ ಕೆಟ್ಟ ಮಾತಿನಿಂದ ಕುಖ್ಯಾತಿ ಗಳಿಸಿದವನು ರಾಬಿನ್ ಚುಗ್.
               ಕೆಲವು ದಿನಗಳ ಹಿಂದೆ ಕನ್ನಡಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಯುತ ಮುಖ್ಯಮಂತ್ರಿ ಚಂದ್ರುರವರು ಕರ್ನಾಟಕ ಸರ್ಕಾರಕ್ಕೆ ಕಳುಹಿಸಿದ ೨೭ ಶಿಫಾರಸುಗಳಲ್ಲಿ  “ವಲಸಿಗರು ಒಂದು ವರ್ಷದ ಅವಧಿಯ ಒಳಗೆ ಕನ್ನಡ ಕಲಿಯಬೇಕು ಹಾಗೂ ಏಳನೇ ತರಗತಿ ಹಂತದ ಕನ್ನಡ ಪರೀಕ್ಷೆ ಪಾಸು ಮಾಡಬೇಕು” ಎಂಬುದು ಅತ್ಯಂತ ಪ್ರಮುಖವಾದ ಹಾಗೂ ವಿವಾದಾತ್ಮಕವಾದ ಶಿಫಾರಸು.
               ಈ  ಶಿಫಾರಸು ಎಷ್ಟರ ಮಟ್ಟಿಗೆ ಸೂಕ್ತ? ಇದರ ಸಾಧಕ-ಬಾಧಕಗಳೇನು? ಇದನ್ನು ಜಾರಿಗೊಳಿಸಲು ಸಾಧ್ಯವೇ? ಇದರಿಂದ ಕರ್ನಾಟಕದ ಹೊರಗೆ ನೆಲೆಸಿರುವ ಕನ್ನಡಿಗರು ಎದುರಿಸಬಹುದಾದ ಸವಾಲುಗಳೇನು? ಎಂಬೆಲ್ಲಾ ಪ್ರಶ್ನೆಗಳು ಕಣ್ಣ ಮುಂದೆ ನಿಲ್ಲುತ್ತವೆ.
                    ಇದನ್ನೆಲ್ಲಾ ಒತ್ತಟ್ಟಿಗಿಟ್ಟು ರಾಬಿನ್ ಚುಗ್ ಎಂಬ ಈ ರಾಜಾಸ್ಥಾನೀ ಯುವಕನ ಬಗ್ಗೆ ಮಾತನಾಡೋಣ. ವಿದ್ಯಾಭ್ಯಾಸದ ಸಲುವಾಗಿ ಸುಮಾರು ೫ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ತದನಂತರ ಇಲ್ಲಿನ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ‘ಬೆಂಗಳೂರ್ ಮಿರರ್’ ಎಂಬ ರದ್ದಿ ಪತ್ರಿಕೆಯೊಂದು ಕನ್ನಡಾಭಿವೃದ್ಧಿ ಪ್ರಾಧಿಕಾರದ ಈ ಶಿಫಾರಸ್ಸನ್ನು ವಲಸಿಗರನ್ನು ಪ್ರಚೋದಿಸುವ ರೀತಿಯಲ್ಲಿ ವರದಿ ಮಾಡಿ ವಲಸಿಗರಿಗೆ ಇನ್ನು ಬೆಂಗಳೂರಿನಲ್ಲಿ ಉಳಿಗಾಲವಿಲ್ಲ ಎಂಬಂತೆ ಬಿಂಬಿಸಿ ಸುದ್ದಿ ನೀಡಿತು. ಇದನ್ನು ತನ್ನ ಫೇಸ್ಬುಕ್ ಪ್ರೊಫೈಲಿನಲ್ಲಿ ಶೇರ್ ಮಾಡಿದ ರಾಬಿನ್ ಚುಗ್ “F**K OFF” ಎಂದು ಪ್ರತಿಕ್ರಿಯೆ ನೀಡಿದ. ಇದೇ ತರಹದ ಹಾಗೂ ಇದಕ್ಕಿಂತ ಕೆಳಮಟ್ಟದ ಪ್ರತಿಕ್ರಿಯೆಗಳು ಬೆಂಗಳೂರ್ ಮಿರರ್ ಪತ್ರಿಕೆಯ ಅಂತರ್ಜಾಲ ಆವೃತ್ತಿಯಲ್ಲಿದೆ. ಇದರ ಕೊಂಡಿ ಇಲ್ಲಿದೆ. Read more »
15
ಜೂನ್

ಪಕ್ಯ…!

– ಹರೀಶ್ ಶೆಟ್ಟಿ, ಶಿರ್ವ

ಪಕ್ಯ…ಪಕ್ಯ ನನ್ನ ಬಿಲ್ಡಿಂಗ್ನಲ್ಲಿ ಗ್ರೌಂಡ್ ಫ್ಲೂರ್ ನಲ್ಲಿ ಇರುತಿದ್ದ. ಅವನ ತಂದೆ ದೊಡ್ಡ ಕುಡುಕ ಹಾಗು ಪ್ರಯೋಜನ ಇಲ್ಲದವ, ಪಕ್ಯನ ತಾಯಿ ಅಲ್ಲಿ ಇಲ್ಲಿ ದುಡಿದು ಹೇಗಾದರೂ ಜೀವನ ಸಾಗಿಸುತಿದ್ದರು. ಪಕ್ಯ ನನ್ನಿಂದ ಎರಡು ಮೂರೂ ವರುಷ ದೊಡ್ಡವ. ಪಕ್ಯ ಚಿಕ್ಕಂದಿನಿಂದಲೂ ಮಂದ ಬುದ್ದಿ (Special Abnormal child), ಜೀವ ದೊಡ್ಡದಾದರೂ ಅವನ ಬುದ್ದಿ ಬೆಳವಣಿಗೆ ಆಗಲಿಲ್ಲ, ಪಕ್ಯನಿಗೆ ಇಬ್ಬರು ತಂಗಿಯರಿದ್ದರು . ೧೨ ವರುಷ ದಲ್ಲಿಯೇ ಪಕ್ಯನ ಜೀವ ೬ ಫೀಟ್ ಉದ್ದ ಆಗಿತ್ತು, ಆದರೆ ಅವನ ಬುದ್ದಿ ಚಿಕ್ಕ ಮಕ್ಕಳ ಹಾಗೆ. ಪಕ್ಯ ಇಡಿ ದಿನ ಅಲ್ಲಿಂದ ಇಲ್ಲಿ ಇಲ್ಲಿಂದ ಅಲ್ಲಿ ತಿರುಗುತ ಇರುತ್ತಿದ, ಅವನ ತಾಯಿ ಹೊಟ್ಟೆ ಪಾಡಿಗಾಗಿ ದುಡಿಯಲ್ಲಿಕೆ ಹೋಗುತತ್ತಿದ್ದಳು, ಅವನ ತಂದೆಗೆ ಕುಡಿಯುದರಲ್ಲಿ ಪುರ್ಸ್ಹೊತ್ತು ಇರುತ್ತಿರಲಿಲ್ಲ .
ಎಲ್ಲ ಮಕ್ಕಳು ಪಕ್ಯನಿಗೆ ತುಂಬಾ ತೊಂದರೆ ಕೊಡುತ್ತಿದ್ದರು ಹಾಗು “ಹೇವೇಡ(ಮೆಂಟಲ್) ಹೇಯ್ ವೇಡ” ಚಡಾಯಿಸುತತ್ತಿದ್ದರು.. ಪಕ್ಯ ಆ ಮಕ್ಕಳಿಗೆ ಏನು ಮಾಡ್ತಿರಲಿಲ್ಲ, ಯಾಕೆಂದರೆ ಅವರು ಏನು ಹೇಳುತಾರೆ ಅವನಿಗೆ ತಿಲಿಯುತತ್ತಿರಲಿಲ್ಲ. ಕೆಲವು ಮಕ್ಕಳು ಅವನಿಗೆ ಕಲ್ಲಿನಿಂದ ಹೊಡೆಯುದು ಸಹ ಇದ್ದರು, ಇದರಿಂದ ಪಕ್ಯ ಕೋಪ ಗೊಳಗಾಗಿ ಅವರ ಇಂದೇ ಕಲ್ಲು ಇಡಿದು ಹೋಗುತಿದ್ದ. ನನಗೆ ಯಾವಾಗಲು ಪಕ್ಯನ ಮೇಲೆ ತುಂಬಾ ದಯಾ ಬರುತಿತ್ತು , ನಾನು ನನ್ನ ಅಮ್ಮನಿಗೆ ಕೆಳುತಿದ್ದೆ “ಅಮ್ಮ ಆಯಗ್ ಯಿನಾ ಆತ್oಡ್” ..ಅಮ್ಮ ನನಗೆ ಸಮಾಧಾನಿಸುತಿದ್ದರು ” ಆಯೇ ದೆವೆರೆನ ಸ್ಪೆಷಲ್ ಮಗೆ, ಅಇಕ್ ಆಯೇ ಅಂಚ” , ನಾ ಕೇಳುತ್ತಿದ್ದೆ “ಅಂಚಂಡ ಜೋಕುಲು ಆಯಾಗ್ ಪೆಟ್ಟು ದ್ಯಾಗ್ ಪಾಡನು” , ಅಮ್ಮ ನನಗೆ ಹೇಳುತಿದ್ದರು ” ಅವ್ವು ಬುದ್ದಿದಾಂತಿನ ಜೋಕುಲು , ಈ ಮಿನಿ ಅಂಚ ಮಲ್ಪೋಡಚಿ ಆವಾ”(ಅವರು ಬುದ್ದಿ ಇಲ್ಲದ ಮಕ್ಕಳು ನೀನು ಹಾಗೆ ಮಾಡ ಬೇಡ ). Read more »
15
ಜೂನ್

ಹಣ ಕೊಟ್ಟು ಅತಿಥಿಯಾಗಿ..!

ಅರೆಹೊಳೆ ಸದಾಶಿವ ರಾವ್

ಆಶ್ಚರ್ಯವಾಗಬಹುದು ನಿಮಗೆ ಈ ಲೇಖನದ ರ್ಶೀಕೆ ನೋಡಿ. ಇದು ಇತ್ತೀಚಿನ ಒಂದು ಹವ್ಯಾಸವಾಗಿ ಬಿಟ್ಟಿದೆ. ಇತ್ತೀಚೆಗೆ ನನಗೊಂದು ಸಭೆಗೆ ಅತಿಥಿಯಾಗಿ ಭಾಗವಹಿಸಲು ಕರೆ ಬಂತು. ಸಂತಸದಿಂದ ಒಪ್ಪಿಕೊಂಡೆ. ಅಂತಹಾ ವಿಶೇಷ ವ್ಯಕ್ತಿ ನಾನಲ್ಲ ಎಂಬ ಅರಿವಿದ್ದೂ ಒಪ್ಪಿಕೊಂಡೆ. ಒಂದು ವಾರ ಕಳೆದಿತ್ತು. ಆಯೋಜಕರಿಂದ ಮತ್ತೆ ಕರೆ ಬಂತು. ಅತಿಥಿಯಾಗಿ ಒಪ್ಪಿಕೊಂಡಿದ್ದಕ್ಕೆ ಧನ್ಯವಾದಗಳನ್ನು ಹೇಳಿದರು. ಮುಂದುವರಿದು ಕಾರ್ಯಕ್ರಮದ ಒಟ್ಟೂ ಖರ್ಚಿನ ಬಗ್ಗೆ ನಾನು ಕೇಳದೆಯೇ ಹೇಳುತ್ತಾ, ನಿಮ್ಮಿಂದ ನಾವು ಕನಿಷ್ಟ ಇಂತಿಷ್ಟು ನಿರೀಕ್ಷಿಸುತ್ತಿದ್ದೇವೆ ಎಂದರು. ಒಮ್ಮೆ ಆಶ್ಚರ್ಯವಾದರೂ, ನಾನು ಅತಿಥಿಯಾಗಿ ಬರುತ್ತಿದ್ದೂ, ನಾನೇ ವಂತಿಗೆ ನೀಡಬೇಕಾದ ಅನಿವಾರ್ಯತೆಯ ಬಗ್ಗೆ ಪ್ರಶ್ನಿಸಿದೆ. ನಾವು ಇದೇ ಸಂಪ್ರದಾಯ ಪಾಲಿಸುತ್ತಿದ್ದೇವೆ ಎಂಬ ಉತ್ತರ ಬಂತು. ಕ್ಷಮಿಸಿ, ನಾನು ಈ ಸಂಪ್ರದಾಯ ಪಾಲಿಸುವುದಿಲ್ಲ ಎಂದೆ. ಸರಿ, ಮತ್ತೆ ಸಂಪರ್ಕಿಸುತ್ತೇವೆ ಎಂದು ಫೋನ್ ಇಟ್ಟರು… ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ನಾಪತ್ತೆ!

ಇದು ಇತ್ತೀಚೆಗೆ ಬೆಳೆದು ಬಂದಿರುವ ಸಂಪ್ರದಾಯ. ಇತ್ತೀಚೆಗೆ ನಾವೂ ಒಂದು ಕಾರ್ಯಕ್ರಮ ಆಯೋಜಿಸಿದ್ದೆವು.  ಸಮಾಜದಲ್ಲಿ ಉನ್ನತ ಸ್ಥಾನ ಹೊಂದಿದ್ದ   ಒಬ್ಬರಲ್ಲಿ ನಾವು ಅತಿಥಿಯಾಗಿ ಬರುವಂತೆ ವಿನಂತಿಸಿದೆವು. ನಿರ್ದಿಷ್ಠ ದಿನಾಂಕದಂದು ಅವರಿಗೆ ಬೇರಾವುದೋ ಕಾರ್ಯಕ್ರಮ ಇದ್ದುದಕ್ಕೆ ಬರಲಾಗುವುದಿಲ್ಲ ಎಂದರು. ಸರಿ, ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾದರೂ ಬರುವಂತೆ ಅವರನ್ನು ವಿನಂತಿಸಿದೆವು. ಅದಕ್ಕೆ ಥಟ್ಟಂತ ಆ ವ್ಯಕ್ತಿ ಆಗದು, ಆ ದಿನ ನಾನು ಫ್ರೀ ಆಗಿದ್ದರೂ, ಬರಲಾಗದು, ನನ್ನ ‘ಸ್ಥಾನ ಮಾನ’ ನೋಡಬೇಕಲ್ಲವೇ ಎಂದು ಬಿಟ್ಟರು!!. ಕೊನೆಗೆ ಸರಿ ಎಂದು ನಾವು ಹೋದ ದಾರಿಗೆ ಸುಂಕವಿಲ್ಲದಂತೆ ಮರಳ ಹೊರಟಾಗ, ಮುಂದೆ ಏನಾದರೂ ಇಂತಾದ್ದೇ ‘ದೊಡ್ಡ’ ಮಟ್ಟದ  ಕಾರ್ಯಕ್ರಮ ಇದ್ದರೆ ಬನ್ನಿ, ಅತಿಥಿಯಾಗಿಯೂ ಬರುತ್ತೇನೆ ಮತ್ತು ಸ್ವಲ್ಪ ಧನ ಸಹಾಯವನ್ನೂ ಮಾಡುತ್ತೇನೆ ಎಂದರು. ಧನ್ಯೋಸ್ಮಿ ಎಂದುಕೊಂಡೆವು!! Read more »