ವಿಷಯದ ವಿವರಗಳಿಗೆ ದಾಟಿರಿ

Archive for

29
ಜೂನ್

ಸರ್ಕಾರಿ ಇಂಗ್ಲಿಶ್ ಶಾಲೆ – ಬೇಲಿಯೇ ಎದ್ದು ಹೊಲವ ಮೇಯ್ದೊಡೆ ಕಾಯುವರಾರು ?

 –ವಸಂತ್ ಶೆಟ್ಟಿ
ಜನರ ಅಪೇಕ್ಷೆಗಳನ್ನು ಈಡೇರಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಜನರಿಂದ ಬೇಡಿಕೆ ಬಂದ್ರೆ ಆರನೇ ತರಗತಿಯಿಂದ ಎಲ್ಲೆಡೆ ಇಂಗ್ಲಿಶ್ ಮಾಧ್ಯಮದ ಶಾಲೆಗಳನ್ನು ತೆರೆಯಲು ಸರ್ಕಾರ ತಯಾರಾಗಿದೆ ಅನ್ನುವ ಹೇಳಿಕೆಯನ್ನು ಪ್ರಾಥಮಿಕ ಮತ್ತು ಪ್ರೌಡಶಾಲೆ ಸಚಿವರಾದ ಕಾಗೇರಿಯವರು ಹೇಳಿದ್ದು ಮೊನ್ನೆ ಮೊನ್ನೆ ಪತ್ರಿಕೆಗಳಲ್ಲಿ ಕಂಡೆ. ಬೇಲಿಯೇ ಎದ್ದು ಹೊಲವ ಮೇಯೊದು ಅಂದ್ರೆ ಇದೇನಾ ಅನ್ನಿಸ್ತಾ ಇತ್ತು. ಒಂದೆಡೆ ಪಾಲಿಕೆ ವ್ಯಾಪ್ತಿಯ ಕನ್ನಡ ಶಾಲೆಗಳನ್ನು ಸಿ.ಬಿ.ಎಸ್.ಈ ತೆಕ್ಕೆಗೆ ಕೊಡಿಸಿ ತಮ್ಮ ಜನ್ಮ ಪಾವನವಾಯ್ತು ಅನ್ನುವ ಸಚಿವರೊಬ್ಬರು, ಇನ್ನೊಂದೆಡೆ ಜನರ ಅಪೇಕ್ಷೆ ಈಡೇರಿಸಲು ಎಲ್ಲೆಡೆ ಇಂಗ್ಲಿಶ್ ಶಾಲೆಗಳನ್ನು ತೆರೆಯುವುದಾಗಿ ಹೇಳುವ ಈ ಸಚಿವರು. ಇವರ ಹೊಣೆಗಾರಿಕೆ ಇಲ್ಲದ ಈ ನಡೆಗಳು ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಗಟ್ಟಿಯಾದ ಸಮಾಧಿಯೊಂದನ್ನು ಸದ್ದಿಲ್ಲದೇ ಕಟ್ಟುತ್ತಿವೆ ಅನ್ನಬಹುದು.
ಇದೇ ಸಂದರ್ಭದಲ್ಲಿ ತಾಯ್ನುಡಿ ಶಿಕ್ಷಣದ ಬದಲು ಇಂಗ್ಲಿಶ್ ಬೇಕೆನ್ನುವವರ ವಾದವಾದರೂ ಏನು ಅಂದರೆ ನನಗೆ ಕಾಣುವುದು ಕೆಳಗಿನ ಕೆಲವು ಮಾತುಗಳು. ಅವುಗಳಿಗೆ ನನ್ನ ಅನಿಸಿಕೆ ಏನು ಅನ್ನುವುದನ್ನು ಈ ಸಂದರ್ಭದಲ್ಲಿ ಬರೆದಿರುವೆ.
ಕನ್ನಡ ಮಾಧ್ಯಮ ಬೇಕು ಅನ್ನುವವರದ್ದು ಬೂಟಾಟಿಕೆ. ಕನ್ನಡ ಮಾಧ್ಯಮ ಬೇಕು ಅನ್ನುವ ಸಾಹಿತಿಗಳು, ಚಿಂತಕರು, ಕನ್ನಡ ಪರ ಹೋರಾಟಗಾರರು, ರಾಜಕಾರಣಿಗಳು ತಮ್ಮ ಮಕ್ಕಳನ್ನು ಸೇರಿಸುವುದು ಇಂಗ್ಲಿಶ್ ಮಾಧ್ಯಮದ ಸಿ.ಬಿ.ಎಸ್.ಈ/ಐ.ಸಿ.ಎಸ್.ಈ ಶಾಲೆಗಳಿಗೆ, ಆದರೆ ಸಾಮಾನ್ಯ ಜನರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸಬೇಕು. ತಮ್ಮ ಮಕ್ಕಳು ಯಾವ ಮಾಧ್ಯಮದಲ್ಲಿ ಕಲಿಯಬೇಕು ಅನ್ನುವುದನ್ನು ಪಾಲಕರ ನಿರ್ಧಾರಕ್ಕೆ ಬಿಡಿ.   Read more »
29
ಜೂನ್

ಭ್ರಷ್ಟಾಚಾರ ಮತ್ತು ಕಪ್ಪು ಹಣದ ಬಗ್ಗೆ ದನಿ ಎತ್ತಿದ್ದಕ್ಕೆ ಜನಸಾಮಾನ್ಯನಿಗೆ ಯು.ಪಿ.ಎ ಇ೦ದ ಶಿಕ್ಷೆ…!!!

ಮಂಜುನಾಥ್ ಮಠದ್

(ಬೆಲೆಯೇರಿಕೆಯಿಂದ ಕಂಗೆಟ್ಟಿರುವ ಜನಸಾಮಾನ್ಯನ ಮನದಾಳದ ಮಾತು ಈ ಲೇಖನವಾಗಿ ಮೂಡಿ ಬಂದಿದೆ – ನಿಲುಮೆ )

ಭ್ರಷ್ಟಾಚಾರ ಮತ್ತು ಕಪ್ಪು ಹಣದ ಬಗ್ಗೆ ದನಿ ಎತ್ತಿದ ಬಾಬ ರಾಮ್ ದೇವ್ ಅವರನ್ನು  ರಾತ್ರೋರಾತ್ರಿ ಬ೦ಧಿಸಿ,ಲೋಕ ಪಾಲ್ ಮಸೂದೆ ಜಾರಿಗೆ ತರಲು ಯತ್ನಿಸುತ್ತಿರುವ ಅಣ್ಣಾ ಹಜಾರೆಯವರನ್ನು ವ೦ಚಿಸುತ್ತಿರುವ ಕೇ೦ದ್ರದ ಯು.ಪಿ.ಎ ಸರ್ಕಾರ, ಅದರ ವಿರುದ್ದ  ದನಿ ಎತ್ತಿದ ಜನ ಸಾಮಾನ್ಯನ ಮೇಲೂ ಡೀಸೆಲ್,ಅಡುಗೆ ಅನಿಲ,ಸೀಮೇಎಣ್ಣೆ ದರಗಳನ್ನು ಹೆಚ್ಚಿಸುವ ಮೂಲಕ ತನ್ನ ಸೇಡನ್ನು ತೀರಿಸಿಕೊ೦ಡಿದೆ.

’ಆಮ್ ಆದ್ಮಿ’ ಮತ್ತು ’ಮಹಾತ್ಮ ಗಾ೦ಧಿ’ ಹೆಸರನ್ನು ಜಪಿಸಿಯೇ ಅಧಿಕಾರಕ್ಕೆ ಬ೦ದ ’ಸೊನಿಯಾ ಗಾ೦ಧಿ’ ನಿಯ೦ತ್ರಿಯ ಕೇ೦ದ್ರದ ಯು.ಪಿ.ಎ ಸರ್ಕಾರ ಮತ್ತು ಅರ್ಥಶಾಸ್ತ್ರಜ್ನರಾಗಿರುವ ಪ್ರಧಾನ ಮ೦ತ್ರಿ ಮನಮೋಹನ್ ಸಿ೦ಗ್  ಇ೦ದು   ಖಾಸಗಿ ಕ೦ಪನಿಗಳಿಗೆ ನಷ್ಟವಾಗುತ್ತದೆ ಎ೦ಬ ಒ೦ದೇ ಒ೦ದು ಕಾರಣ ನೀಡಿ ಅಧಿಕಾರಕ್ಕೆ ಬ೦ದ ಮೂರು ವರ್ಷಗಳಲ್ಲಿ  ಸುಮಾರು 8 ಬಾರಿ ಪೆಟ್ರೋಲ್ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಿ  ದಿನೋಪಯೋಗಿ ವಸ್ತುಗಳ  ಬೆಲೆ ನಿಯ೦ತ್ರಣಕ್ಕೆ ತರಲಾಗದೆ ’ಆಮ್ ಆದ್ಮಿ’ ಗೆ ಹೊರೆಯಾಗಿ ಪರಿಣಮಿಸಿದೆ.

60 ವರ್ಷಗಳ ಕಾಲ ದೇಶವನ್ನಾಳಿದ  ಪಕ್ಷವೊಂದರ ಧುರೀಣರು  ಕೋಟ್ಯಾ೦ತರ ರೂಪಾಯಿಗಳನ್ನು ಲೂಟಿ ಮಾಡಿ ಹೊರ ದೇಶಗಳ ಬ್ಯಾ೦ಕ್ ಗಳಲ್ಲಿಟ್ಟು ದೇಶಕ್ಕೆ ವ೦ಚಿಸುತ್ತಿದ್ದಾರೆ. ಅ೦ತಹ ಕಪ್ಪು ಹಣವನ್ನು ವಾಪಾಸ್ ತ೦ದು ಜನರ ಮೇಲಾಕುವ ತೆರಿಗೆ ಗಳನ್ನು ಕಡಿತ ಗೊಳಿಸಬಹುದು ಎ೦ಬ ಸಾಮಾನ್ಯ ವ್ಯಕ್ತಿಗೆ ಅರ್ಹವಾಗುವ ಅರ್ಥ ಶಾಸ್ತ್ರ ನಮ್ಮ ಮಾನ್ಯ ಪ್ರಧಾನಿಗಳಿಗೇಕೆ ಅರ್ಥವಾಗುತ್ತಿಲ್ಲ…? Read more »