ವಿಷಯದ ವಿವರಗಳಿಗೆ ದಾಟಿರಿ

Archive for

27
ಜೂನ್

ಪ್ರಜಾಪ್ರಭುತ್ವ ಭಾರತದಲ್ಲಿ ಗಾಂಧಿತ್ವದ ಮೌಲ್ಯಗಳು

– ಅರಹೊಳೆ ಸದಾಶಿವರಾಯರು

ಪ್ರತೀ ವರ್ಷವೂ ನಾವು ಗಣರಾಜ್ಯದಿನ, ಸ್ವಾತಂತ್ರ್ಯ ದಿನ, ಗಾಂಧಿ ಜಯಂತಿ ಹಾಗೂ ಗಾಂಧೀಜಿ ಪುಣ್ಯತಿಥಿಗಳನ್ನು ಆಚರಿಸುತ್ತೇವೆ-ಒಂದು ರೀತಿಯ ಅನಿವಾರ್ಯತೆಯಿಂದ ಆಚರಿಸಿದಂತೆ. ಈ ಸಂದರ್ಭಗಳಲ್ಲಿ ಮಾತ್ರ ನಮಗೆ, ಗಾಂಧೀಜಿಯವರ ತತ್ವ-ಚಿಂತನೆಗಳು ಪ್ರವಾಹೋಪಾದಿಯಲ್ಲಿ ನೆನಪಾಗುತ್ತವೆ ಮತ್ತು ಆ ಕ್ಷಣದಲ್ಲಿಯೇ ಅವುಗಳು ಮರೆತೂ ಹೋಗುತ್ತವೆ. ಈ ಹಿನ್ನೆಲೆಯಲ್ಲಿ ನಮ್ಮನ್ನು ನಾವು ಚಿಂತನೆಗೊಡ್ಡಿಕೊಂಡಾಗ, ಒಂದು ರೀತಿಯ ಖೇದಾಶ್ಚರ್ಯಗಳು ಹುಟ್ಟುತ್ತವೆ.

ಪರಿಮಿತಿಯರಿತಾಶೆ, ಪರವಶತೆಯಳಿದ ಸುಖ

ವಿರತಿಯೊಡವೆರೆದ ಲೋಕೋದ್ಯೋಗಯುಕ್ತಿ

ಪರಿಕಿಸುತ ಜೀವಿತವ ಸತ್ಯವನೆ ಪಿಡಿವ ಮತಿ

ವರಗಳೀ ನಾಲ್ಕೆ ವರ-ಮಂಕುತಿಮ್ಮ

ಪರಿಮಿತವಾದ ಆಸೆ ಇರಬೇಕು, ವ್ಯಾಮೋಹ ತೊರೆದ ಸುಖವಿರಬೇಕು, ವಿರಕ್ತಿಯಿಂದ ಕೂಡಿದ ಉದ್ಯೋಗ ಯುಕ್ತಿ ಇರಬೇಕು. ಜೀವನವನ್ನು ಪರೀಕ್ಷಿಸುತ್ತಾ, ಸತ್ಯವನ್ನು ಪ್ರೀತಿಸುವ ಬುದ್ದಿ ಇರಬೇಕು.ಇದು ಕನ್ನಡದ ಭಗವದ್ಗೀತೆಯೆಂದೇ ಜನಜನಿತವಾಗಿರುವ ಮಂಕುತಿಮ್ಮನ ಕಗ್ಗದ ಸಾಲುಗಳು. ಇದರ ಉದ್ಧರಣೆಯೊಂದಿಗೆ ನಾನು ಇಂದು ಪ್ರಸ್ತುತ ಪಡಿಸಲಿರುವ ವಿಚಾರಧಾರೆಗೆ ಮೊದಲಂಕಿತ ಇಡುತ್ತಿದ್ದೇನೆ. Read more »

27
ಜೂನ್

ಜಾತಿ ವಿನಾಶವೋ? ಸಂಪ್ರದಾಯಗಳ ವಿನಾಶವೋ?

– ಸಂತೋಷ್ ಕುಮಾರ್ ಪಿ.ಕೆ, ಶಂಕರಘಟ್ಟ

ಇತ್ತೀಚೆಗೆ ಶಿವಮೊಗ್ಗದಲ್ಲಿ ಜಾತಿ ವಿನಾಶ ಸಮಾವೇಶವೊಂದು ಜರುಗುತ್ತಿರುವುದು ಒಳ್ಳೆಯ ಸುದ್ದಿ. ಸಮಾಜದಲ್ಲಿರುವ ಅನ್ಯಾಯ ಶೋಷಣೆಗಳನ್ನು ಹೋಗಲಾಡಿಸಲು ಚಳುವಳಿಗಳು, ಸಮಾವೇಶಗಳು ಯಾವ ಸ್ವರೂಪದಲ್ಲಾದರೂ ನಡೆಯಲೇಬೆಕು. ಅದು ಭೌದ್ದಿಕ ಚಳುವಳಿಯಾಗಲಿ, ಸಾಮಾಜಿಕ ಚಳುವಳಿಯಾಗಲೀ ಎರಡೂ ಸಹ ಅಷ್ಟೇ ಪ್ರಮುಖವಾದವು. ಶಿವಮೊಗ್ಗದಲ್ಲಿ ನಡೆಯುತ್ತಿರುವ ಸಮಾವೇಶ ಜಾತಿಯನ್ನು ನಾಶಮಾಡಲು ಅಂತರಜಾತಿವಿವಾಹಿತರನ್ನು ಹಾಗೂ ಅದಕ್ಕೆ ಸಂಬಂಧಿಸಿದ ಸಮಾನ ಮನಸ್ಕರನ್ನು ಒಟ್ಟಿಗೆ ಸೇರಿಸುವ ಪ್ರಯತ್ನವನ್ನು ಮಾಡುತ್ತಿದೆ. ಅದರ ಜೊತೆ ಜೊತೆಗೆ ಭೌದ್ಧಿಕ ಚಳುವಳಿಯೂ ಸಹ ಆಗಿಂದಾಗ್ಗೆ ನಡೆಯುತ್ತಲೇ ಇದೆ. ಅಂತಹ ಚಳುವಳಿಯ ಕುರುಹಾಗಿ ಹಲವಾರು ಲೇಖನಗಳು ಮಾದ್ಯಮಗಳಲ್ಲಿ ಬರುತ್ತಿವೆ. ಹಾಗೆ ಬಂದಂತಹ ಒಂದು ಲೇಖನದ ವಿಮರ್ಶೆಯನ್ನು ಇಲ್ಲಿ ಮಾಡಲು ಪ್ರಯತ್ನಿಸಲಾಗುವುದು. ಇಂತಹ ಪ್ರಯತ್ನ ಏಕೆಂದರೆ ಕಳೆದ ೬೦, ೭೦ ವರ್ಷಗಳಿಂದಲೂ ಇಂತಹ ಚಳುವಳಿ ಸಮಾವೇಶ ನಡೆಯುತ್ತಿದ್ದರೂ ಜಾತಿ, ಶೋಷಣೆ, ಅನ್ಯಾಯ ದಿನೆದಿನೇ ಹೆಚ್ಚಾಗುತ್ತಿವೆ. ಕೇವಲ ಹಳೆಯ ಹಲಸಲು ವಿಚಾರಗಳನ್ನೇ ಪುನರಾವರ್ತಿಸುವ ಬದಲು ಸಮಸ್ಯೆ ಎಲ್ಲಿಂದ ಉಗಮವಾಗುತ್ತಿದೆ ಎಂಬುದನ್ನು ತುರ್ತಾಗಿ ಅರಿಯಬೇಕಾಗಿದೆ. ಆದ್ದರಿಂದ ಪ್ರಸಕ್ತ ಕಾಲಘಟ್ಟದಲ್ಲಿ ಇದುವರೆಗೂ ನಾವು ಕೇಳಿಕೊಂಡು ಬಂದಂತಹ ವಿಚಾರಗಳನ್ನು ಹಾಗೂ ಇಂದು ಹೇಳುತ್ತಿರು ವ ವಿಚಾರಗಳನ್ನು ಜೊತೆಗೆ ನಮ್ಮನ್ನು ನಾವೇ ಪುನರಾವಲೋಕಿಸುವ ಸಂದರ್ಭ ಇಂದು ನಮ್ಮ ಮುಂದಿದೆ.

ಎಸ್. ಕೆ ಭಗವಾನ್ ದಿನಾಂಕ 3 ಜೂನ್ 2011 ರಂದು ಪ್ರಜಾವಾಣಿಯಲ್ಲಿ  ಬರೆದ ಅವರ ಲೇಖನದ ಒಟ್ಟಾರೆ ವಾದ ಈ ರೀತಿಯಾಗಿತ್ತು,  ಜಾತಿಯನ್ನು ಇದುವರೆಗೂ ದೂರಿದ್ದು ಸಾಕು, ಇನ್ನು ಅದನ್ನು ನಾಶ ಮಾಡಲೇಬೇಕು. ಜಾತಿ ನಾಶವಾದರೆ ಹಲವಾರು ಸವಲತ್ತುಗಳು ಸಹ ಸುಮುದಾಯಗಳಿಗೆ ದೊರೆಯುತ್ತವೆ ಎಂದು ಲೇಖಕರು ಹೇಳುತ್ತಾರೆ. ಆದರೆ ಹಾಗೆ ಹೇಳುವ ಮುನ್ನ ಕೆಳಕಾಣಿಸಿರುವ ಪ್ರಶ್ನೆಗಳಿಗೆ ಯಾರಾದರೂ ಉತ್ತರಿಸಲೇಬೇಕು. Read more »

27
ಜೂನ್

ನನ್ನ ಇಂಜಿನಿಯರಿಂಗ್ ಬದುಕಿನ ಕಡೆಯ 22 ಘಂಟೆಗಳು…!!!

– ಪವನ್ ಪಾರುಪತ್ತೇದಾರ್

ಅಂದು ದಿನಾಂಕ ಜೂನ್ 16 2011 ಮಧ್ಯಾಹ್ನ 2 ಘಂಟೆ ಆಗಿತ್ತು ಇಂಜಿನಿಯರಿಂಗ್ ಬದುಕಿನ ಕಟ್ಟ ಕಡೆಯ ಪರೀಕ್ಷೆಗೆ ಕೇವಲ 22 ಘಂಟೆ ಮಾತ್ರ ಉಳಿದಿತ್ತು, ೪ ವರ್ಷಗಳ ಕಠಿಣ ಪರಿಶ್ರಮದ ನಂತರ ಕೊನೆಯ ಸೆಮಿಸ್ಟರ್ ನ ಪ್ರಾಜೆಕ್ಟ್ ವರ್ಕ್ ನಮ್ಮ ಭವಿಷ್ಯವನ್ನು ನಿರ್ಧಾರ ಮಾಡುವುದು. ಅದನ್ನು ಬಹಳ ಕಷ್ಟ ಪಟ್ಟು ಜಯನಗರದಲ್ಲಿನ ಒಂದು consultacy ಅಲ್ಲಿ ಮಾಡಿದ್ದೆವು. ಸಮಾಜದಲ್ಲಿ ಮತದಾನ ಮಾಡುವುದರಲ್ಲಿ ಆಗುವ ಲೋಪದೋಷಗಳನ್ನು ಸರಿಪಡಿಸಲೆಂದು ನಾವು finger print recognisation sensor ಉಪಯೋಗಿಸಿ ಒಂದು ಮಾಡೆಲ್ ರೆಡಿ ಮಾಡಿದ್ದೆವು.ನಾನು ಸಂದೀಪ್ ರಘು ಮತ್ತು ಮಂಜು ಸೇರಿ ಈ ಮಾಡೆಲ್ ಮಾಡಿದ್ದೆವು.

ಮಧ್ಯಾಹ್ನ ಅಮ್ಮ ಮಾಡಿದ ರಾಗಿಮುದ್ದೆ ಮತ್ತು ಸೊಪ್ಪು ಹುಳಿ ಸವಿಯುತ್ತ ಇದ್ದ ನನಗೆ ಮೊಬೈಲ್ ರಿಂಗಣಿಸಿದ್ದು ತಿಳಿಯಲೇ ಇಲ್ಲ, ಕಡೆಗೆ ಅಮ್ಮ ಪವನ್ ಆಗ್ಲಿಂದ ಮೊಬೈಲ್ ಬಡ್ಕೊತಿದೆ ನೋಡೋ ಅಂದಾಗ ರಾಗಿಮುದ್ದೆಯ ಕಡೆಯ ತುಂಡು ನನ್ನ ಬಾಯಲಿತ್ತು. ಹಾ ನೋಡ್ತಿನಮ್ಮ ಎಂದು ಮೊಬೈಲ್ ಬಳಿಗೆ ಹೋಗುವಷ್ಟರಲ್ಲಿ ಕಾಲ್ ಮತ್ತೆ ಕಟ್ ಆಗಿತ್ತು. ಮೊಬೈಲ್ ನ ದಿಸ್ಪ್ಳಿ, 5 missed calls ಎಂದು ತೋರಿಸುತಿತ್ತು. ನೋಡಿದರೆ 4 ಮಿಸ್ ಕಾಲ್ ಸಂದೀಪ್ ಮತ್ತು ಒಂದು ಮಂಜುದು ಆಗಿತ್ತು.ನಾನು ಸಂದೀಪ್ ಗೆ ಕರೆ ಮಾಡಿದೆ, ಸಂದೀಪ್ ಒಂಥರಾ ಗಾಬರಿ ಹುಡುಗ, ನೋಡಲು ಸದೃಢ ಮತ್ತು ಇರೋದು ಶಿವಾಜಿನಗರದಂತ ಸುಂದರ ಏರಿಯದಲ್ಲಿ.ಮನೆಯಲ್ಲಿ ತೆಲುಗು ಭಾಷೆ ಮಾತನಾಡುವರಾದರು ಶಿವಾಜಿನಗರ ಅವನನ್ನು ಅರ್ಧ ತಮಿಳಿಗನಾಗಿ ಮಾಡಿದೆ ಮತ್ತು ಅಲ್ಲಿನ ವಾತಾವರಣ ಅವನನ್ನು ಶಾರ್ಟ್ temperd ಮಾಡಿದೆ. ಸಂದೀಪ್ ಕರೆ recieve ಮಾಡುತ್ತಲೇ ಮಚ್ಚ…… ಅಂತ ಅರಚಿದ, ನಾನು ಏನೋ, ಏನಾಯ್ತೋ, ರಿಪೋರ್ಟ್ ಚೆನ್ನಾಗಿ ಓದಿ ರೆಡಿ ಆಗಿ ಬಾ ನಾಳೆ ಸೆಮಿನಾರ್ ಗೆ ಅಂದೆ. ಅದಕ್ಕವನು ಮಾಡೆಲ್ ಇಲ್ಲಿ ಎಕ್ಕುಟ್ಟಿ ಹೋಗಿದೆ ಇನ್ನು ಸೆಮಿನಾರ್ ಎಲ್ಲಿಂದ ಕೊಡೋದೋ ಅಂದ. ಅ ಮಾತು ಕೇಳಿದ ಒಡನೆ ಇನ್ನೊಂದು ರಾಗಿಮುದ್ದೆ ತಿನ್ನಬೇಕೆನಿಸಿದ್ದ ನನ್ನ ಅಸೆ ಹಾಗೆ ಕರಗಿ ಹೋಯ್ತು 2 ಲೋಟ ನೀರು ಗಟಗಟ ಕುಡಿದು ನಂತರ ಮಾತಿಗಿಳಿದೆ.

Read more »

27
ಜೂನ್

ಹೆಸರಲ್ಲಿ ಏನಿದೆ?!

– ಹೇಮಾ ಪವಾರ್, ಬೆಂಗಳೂರು

ಕಷ್ಟಗಳು ಹೇಗ್ಹೇಗೆ ಬರುತ್ತವೆ ಎಂದು ಅಂದಾಜಿಸುವುದು  ತುಂಬಾ ಕಷ್ಟ! ಇಂತಹ ಕಂಪೆನಿಯ CEO ಎಂದು ತನ್ನ ಹೆಸರು ಹೇಳಿ ಪರಿಚಯಿಸಿಕೊಂಡ ಆ ಮನುಷ್ಯ ನನ್ನ ಕಿವಿಗಳು available mode ನಲ್ಲಿವೆ ಎಂದು ಪರಿಗಣಿಸಿದ ಹಾಗಿತ್ತು, ನಿಲ್ಲಿಸದೆ ಇಪ್ಪತ್ತುನಿಮಿಷಗಳವರೆಗೆ ಮಾತಾಡುತ್ತಿದ್ದ, ಕೇಳುತ್ತ ಕಣ್ಣು ತೆರೆದುಕೊಂಡೇ ನಿದ್ದೆ ಮಾಡುವುದುನನಗೆ ಹೊಸತಲ್ಲ ಅನ್ನಿ ಆದರೆ ಇದ್ದಕ್ಕಿದ್ದ ಹಾಗೆ ನನಗೆ ನೆನಪಾಗಿದ್ದು ನಾನವನ ಹೆಸರುಮರೆತಿದ್ದೇನೆಂದು. ಆತನ ಮಾತುಕೇಳಿಸಿಕೊಳ್ಳುತ್ತಲೆ ತಲೆಗೆ ಕೆಲಸ ಕೊಟ್ಟೆ, ಎಲ್ಲವನ್ನೂrecall ಮಾಡಿಕೊಳ್ಳ ತೊಡಗಿದೆ, ಕೆಲಸಕ್ಕೆ ಬಾರದ ಅವನ ಎಲ್ಲ ಮಾತುಗಳುನೆನಪಾಗುತ್ತಿದ್ದವು ಹೆಸರೊಂದು ನೆನಪಾಗಲೊಲ್ಲದು.

ತುಂಬಾ ಕಾಮನ್ ಎನಿಸುವ ಹೆಸರದು,ಸುರೇಶ ಮಹೇಶ ರಮೇಶ ಸತೀಶಗಳ ಹಾಗೆ ಆದರೆ ಈ ಚಾಟರ್ ಬಾಕ್ಸ್ ಯಾವ ಶ ಎಂದು ಹೊಳೆಯಲೇ ಇಲ್ಲ. ಹೆಸರು ಮನುಷ್ಯನಿಗೆ ತುಂಬಾ ಮುಖ್ಯವೆನ್ನುತ್ತಾರೆ (ಸಾಕು ನಾಯಿಬೆಕ್ಕುಗಳಿಗೂ?!), ಎಲ್ಲರಿಗು ನೆನಪಿನಲ್ಲಿರುವಂತಹ ಹೆಸರಿಡಬಾರದಿತ್ತೆ? ಇವನಿಗೆ‘ಮಾತೇಶ’ ಎಂದಿಟ್ಟಿದ್ದರೆ ಹೆಚ್ಚು ಸರಿಯಿತ್ತು ಅಂದುಕೊಳ್ಳುತ್ತಿದ್ದಂತೆ ಮುಖದಲ್ಲಿಮುಗುಳುನಗೆ ಮೂಡಿತು. ತನ್ನ ಮಾತನ್ನು ಇವಳು ಎಂಜಾಯ್ ಮಾಡುತ್ತಿದ್ದಾಳೆ ಅನ್ನಿಸಿತೇನೋ ಅವನಿಗೆ ಪಾಪ ಇನ್ನೂ ಹುರುಪಿನಿಂದ ಮಾತನಾಡ ತೊಡಗಿದ. ನನಗೆ ಅವನ ಹೆಸರು ನೆನಪಾಗದೇ, ಅವನಿಗೆ ಉತ್ತರಿಸಲೂ, ಅವನನ್ನು ಮಾತಡದಂತೆ ತಡೆಯಲೂ ಆಗದೆ ಆ ಜಾಗ ಬಿಟ್ಟು ಎದ್ದುಬಿದ್ದು ಓಡಿಬರುವ ಹಾಗಾಗುತ್ತಿತ್ತು.

ನನ್ನ ಗೆಳತಿ ಒಬ್ಬರಿದ್ದಾರೆ ಆಕೆಯ ಹೆಸರು ’ಹೂ’ ಎಂದು, ಮೊದಲನೇ ಬಾರಿ ಕೇಳಿದಾಗನಿಮ್ಮ ಹಾಗೇ ನನಗೂ ’ವಿಚಿತ್ರ’ ಎನಿಸಿತ್ತು, ಆಕೆಯ ಹಲವು ನಾರ್ಥ್ಇಂಡಿಯನ್ ಗೆಳೆಯರು ಆಕೆಯ ಹೆಸರನ್ನು ಹಿಂದಿಗೆ ಭಾಷಾಂತರಿಸಿ ‘ಫೂಲ್’ (fool) ಎಂದುಕರೆಯುತ್ತಾರೆ. ಇಂಗ್ಲಿಷ್ ನಲ್ಲಿ ಆಕೆಯನ್ನು ರೇಗಿಸುವುದು ಇನ್ನು ಸುಲಭ ’who ishoo?’ ಎಂತಲೋ ’who let the dogs out, who(o) whoo whoo’ ಎಂದು ಕಿಚಾಯಿಸತೊಡಗುತ್ತೇವೆ. ವಿದೇಶಿಯರು ಯಾರಾದರು ಕೇಳಿದರೆ, ಇವರು ಹೂ ವೇರ್ ವಾಟ್ ಅಂತೆಲ್ಲ ಹೆಸರಿಟ್ಟುಕೊಳ್ಳುತ್ತಾರ ಎಂದು ತಲೆ ಕೆರೆದುಕೊಳ್ಳಬೇಕು.

Read more »