ವಿಷಯದ ವಿವರಗಳಿಗೆ ದಾಟಿರಿ

Archive for

24
ಜೂನ್

ಜೀವನ ಬಂಡೆ ಕಲ್ಲಾ?

ಸುಬ್ರಹ್ಮಣ್ಯ ಬಿ ಎಸ್

ಇಂತಹದ್ದೊಂದು ಪ್ರಶ್ನೆ ಇಷ್ಟೊಂದು ಚಿಕ್ಕ ವಯಸ್ಸಿಗೆ ( ಹೌದ !!) ಉದ್ಭವಿಸಿದ್ದು ನನ್ನ ಮೊಬೈಲ್ ಗೆ ಸಂದೇಶವೊಂದು ಬಂದಾಗ…

ತಟ್ಟನೆ ಚುಟುಕಾಗಿ ಉತ್ತರಿಸಬೇಕಾದ ಪ್ರಶ್ನಾ ಸರಣಿ ಹೊತ್ತ ಸಂದೇಶ ನನ್ನ ಮೊಬೈಲ್ ಫೋನ್ಗೆ ಬಂತು. ನಿಯಮ ಇಷ್ಟೇ , ಪ್ರಶ್ನೆ ( ಸರಿಯಾಗಿ ಹೇಳಬೇಕೆಂದರೆ ಪದ ) ಓದಿದಾಗ ಮೊದಲಬಾರಿಗೆ ಅದೇನು ಹೊಳೆಯುತ್ತದೋ ಹೇಳಿ ಬಿಡಬೇಕಿತ್ತು.

ಮೊದಲನೆಯದು “ಪ್ರೀತಿ “- ಮನಸ್ಸಿನಲ್ಲಿ ಪಟ ಪಟ ಸದ್ದು ಮಾಡ್ತಾ ಜೋಡಿ ಹಕ್ಕಿಗಳು ಕಣ್ಮುಂದೆ ಬಂದ್ಬಿಡೋದೇ…? ಹೌದು ಇನ್ನೇನು , ಅಪ್ಪ ಅಮ್ಮಂದಿರ , ಸಂಸಾರ ,ಬಂಧುಬಳಗದ ವಿರೋಧ ಇಲ್ದಿದ್ರೆ ಪ್ರೀತಿ ಜೋಡಿ ಹಕ್ಕಿನೇ ತಾನೇ? ಸ್ವಚ್ಚಂದ ಆಗಸದಲ್ಲಿ ಪಟ ಪಟ ರೆಕ್ಕೆ ಬಿಚ್ಚಿ ಹಾರಿ ಇಬ್ಬರೇ ಕಾಲ ಕಳೀಬಹುದಲ್ವಾ?

ಎರಡನೆಯದು “ಜೀವನ” -ಅದ್ಯಾಕೋ ದೊಡ್ಡ ಬಂಡೆ ಕಲ್ಲುಗಳು ಕಣ್ಮುಂದೆ ಬರಬೇಕೆ? ಯಾಕೆ ಬಂತು? ನಾನೇನು ಬಂಡೆಕಲ್ಲುಗಳ ಕೆಲಸ ಮಾಡೋನಲ್ಲ.. ಚಿಕ್ಕ ಕಲ್ಲೆತ್ತಿ ಹೊಡೆದಿದ್ದೂ ಕಮ್ಮಿನೇ , ಮತ್ಯಾಕೆ? ಬಸ್ಸಿನೊಳಗೆ ಕುಳಿತ ನನಗೆ ಆ ರಾತ್ರಿಯ ಕತ್ತಲಲ್ಲಿ ಸುತ್ತ ಮುತ್ತ ಬಂಡೆಗಳೇನು ಕಾಣಿಸೋ ಹಾಗಿರಲಿಲ್ಲ..ಹಾಗಂತ ಜೀವನದಲ್ಲಿ ತುಂಬಾ ಕಷ್ಟ ಅನುಭವಿಸಿ ,ಜೀವಿಸಲು ಶ್ರಮಪಟ್ಟು ಜೀವನವೆಂದರೆ ಕಠಿಣ ಅನ್ನೋವಷ್ಟು ವಯಸ್ಸಾಗಲಿ ,ಸಾಧನೆಯಾಗಲಿ ಮಾಡಿಲ್ಲ. ಜುಜುಬಿ ಇಪ್ಪತ್ನಾಲ್ಕಕ್ಕೆ ಜೀವನ ಅಂದಾಗ ಬಂಡೆ ಕಲ್ಲು ಕಣ್ಣೆದುರಿಗೆ ಬಂದ್ರೆ ಸ್ವಲ್ಪ ಯೋಚನೆ ಮಾಡದಿದ್ದರೆ ಹೇಗೆ ? Read more »

24
ಜೂನ್

ಸರದಾರ್ ಅಂಕಲ್ …!

– ಹರೀಶ್ ಶೆಟ್ಟಿ , ಶಿರ್ವ

ಸರದಾರ್ ಅಂಕಲ್ ರವರ ಮನೆ ನಮ್ಮ ಬಿಲ್ಡಿಂಗ್‌ನ ಬದಿಯಲ್ಲಿ ಇತ್ತು, ಅವರ ಮನೆ ಹಾಗು ನಮ್ಮ ಬಿಲ್ಡಿಂಗ್ ಒಟ್ಟು ಸೇರಿ ಇತ್ತು. ಅವರು ಹಾಗು ಅವರ ಕುಟುಂಬಸ್ತಿಯರು ನಮ್ಮ ಬಿಲ್ಡಿಂಗ್ ನ ಗ್ರೌಂಡ್ ಫ್ಲೋರ್‌ನಲ್ಲಿ ಇದ್ದ ಕಾಮಾನ್ ಬಾತ್ ರೂಮ್/ಟೊಯಿಲ್ಟ್  ಉಪಯೋಗಿಸುತ್ತಿದ್ದರು. ಸರದಾರ್ ಅಂಕಲ್ ಐವತ್ತು ವರುಷ ದಾಟಿದ ಹರೆಯದ ಗಟ್ಟಿ ಮುಟ್ಟಾದ ಹಾಗು ತುಂಬಾ ಶಾರ್ಟ್ ಟೆಂಪೆರ್(ಕೋಪಿಷ್ಠ ) ಮನುಷ್ಯ. ಕೋಪ ಅವರ ಮೂಗಿನಲ್ಲಿ ೨೪ ಗಂಟೆ ಇರುತಿತ್ತು. ಅವರ ಕೋಪದ ಸ್ವಭಾವದಿಂದಾಗಿ ನಮ್ಮ ಬಿಲ್ಡಿಂಗ್‌ನವರು ಅವರತ್ರ ಮಾತಾಡಲಿಕ್ಕೆ ಸಹ ಹೆದರುತ್ತಿದ್ದರು. ಸರದಾರ್ ಅಂಕಲ್ ಹಾಗು ನಮ್ಮ ಬಿಲ್ಡಿಂಗ್‌ನಲ್ಲಿರುವ ಜನರ ಮಧ್ಯೆ ಯಾವಾಗಲು ನೀರಿಗಾಗಿ ಹಾಗು ಬಾತ್ ರೂಮ್ / ಟೊಯಿಲ್ಟ್‌ಗಾಗಿ ಜಗಳ ಆಗುತಿತ್ತು. ಆ ದಿನಗಳಲ್ಲಿ ನಮ್ಮ ಬಿಲ್ಡಿಂಗ್‌ನಲ್ಲಿ ನೀರಿನ ತುಂಬಾ ಕೊರತೆ ಇತ್ತ. ಮುನಿಸಿಪಾಲಿಟಿಯವರು ನೀರು ಬಿಟ್ಟು ಬಿಟ್ಟು  ಬಿಡುತ್ತಿದ್ದರು. ಆ ನೀರು ಒಂದನೇ ,ಎರಡನೆ ಹಾಗು ಮೂರನೇ ಮಹಡಿಯವರಿಗೆ ಬರುತ್ತಿರಲಿಲ್ಲ. ನೀರು ಖಾಲಿ ಗ್ರೌಂಡ್ ಫ್ಲೋರಿನ ಬಾತ್ ರೂಮ್‌ನಲ್ಲಿ ಬರುತ್ತಿತ್ತು. ಒಂದನೇ, ಎರಡನೆ ಹಾಗು ಮೂರನೇ ಮಹಡಿಯವರು ತನ್ನ ತನ್ನ ಬಕೆಟ್ಗಳು ಹಿಡಿದು ಕೆಳಗೆ ಗ್ರೌಂಡ್ ಫ್ಲೋರಿನ ಬಾತ್ ರೂಮ್‌ಗೆ ನೀರಿಗಾಗಿ ಬರುತ್ತಿದ್ದರು. ಇಲ್ಲಿ  ಸಮಸ್ಯೆ ಏನೆಂದರೆ ಆ ದಿನದಲ್ಲಿ ನೀರು ಎಂಟು ಗಂಟೆಯಿಂದ ಹತ್ತು ಗಂಟೆಯವರಗೆ ಬರುತ್ತಿತ್ತು. ಆದರೆ ಸರದಾರ್ ಅಂಕಲ್ ಎಂಟು ಮುಕ್ಕಾಲು (8 .45 ) ತನಕ ಯಾರನ್ನು ಬಾತ್‌ರೂಮ್‌ನ ಒಳಗೆ ಬರಲು ಬಿಡುತಿರಲಿಲ್ಲ. ಸರದಾರ್ ಅಂಕಲ್‌ನವರು ತನ್ನ ಮೆಚ್ಚಿನ ಸೋಪ್ “ಲೈಫ್ ಬೌಯ್”ನಿಂದ ಸ್ನಾನ ಮಾಡಿ, ತನ್ನ ಬಟ್ಟೆ ತೊಳೆದು ಹಾಗು ತನ್ನ ಮನೆಗೆ ಪೈಪ್‌ನಿಂದ ನೀರು ತುಂಬಿಸಿದ ನಂತರವೇ ಬೇರೆಯವರಿಗೆ ನೀರಿನ ಗತಿ. ಇದರಿಂದ ಒಂದನೇ , ಎರಡನೆ ಹಾಗು ಮೂರನೇ ಮಹಡಿಯವರಿಗೆ ತುಂಬಾ ಕಷ್ಟವಾಗುತಿತ್ತು. ಸರದಾರ್ ಅಂಕಲ್ ಯಾರನ್ನೂ, ಅವರ ಬಾತ್‌ರೂಮ್‌ನಲ್ಲಿದಾಗ ಒಳಗೆ ಬಿಡುತಿರಲಿಲ್ಲ. ಇದರಿಂದ ದಿನಾಲೂ ಏನಾದರೂ ಜಗಳ ಆಗುತಿತ್ತು.
Read more »