ವಿಷಯದ ವಿವರಗಳಿಗೆ ದಾಟಿರಿ

Archive for

8
ಜೂನ್

ಕಳ್ಳ…! ನಮ್ಮ ಅನ್ನ ಕದ್ದ ಕಳ್ಳ..!

-ರವಿ ಮುರ್ನಾಡು

          ಹೊಡೆಯಬೇಡಿ ನನ್ನನ್ನು… ಹೊಡೆಯಬೇಡಿ…. ಇನ್ನು ಮುಂದೆ ಕದಿಯುವುದಿಲ್ಲ…! ಹಾಗಂತ, ತೊದಲು ನುಡಿಯಲ್ಲಿ ಪ್ರಾರ್ಥಿಸಿದ್ದೆ. ಹೊಡೆತ ನಿಂತಿತ್ತು. “ಕಳ್ಳ” ಅನ್ನುವ ಹಣೆಪಟ್ಟಿ ತೆಗೆಯಲಾಗಲಿಲ್ಲ. ಅವರೆಲ್ಲಾ ಕೆಕ್ಕರುಗಣ್ಣಿನಲ್ಲಿ ದುರುಗುಟ್ಟಿ ನೋಡುತ್ತಿದ್ದರು. ಇನ್ನು ಅನ್ನ ಕದ್ದರೆ, ಕಣ್ಣಿಗೆ ಮೆಣಸು ಹಾಕಿ ಹೊಡೆದೇವು ಜೋಕೆ ಅಂದರು. ಆಯಿತು, ನಾನು ಕದಿಯಲಿಲ್ಲ. ಅನ್ನದ ಆಸೆಗೆ ಮೂಗು ಸುವಾಸನೆಯನ್ನು ಅರಸುತ್ತಿತ್ತು. ಹೊಟ್ಟೆ ಅರ್ಧವಾದರೂ ಏಟಿಗೆ  ಹೆದರಿ ಹಸಿಯದೆ ಸುಮ್ಮನಾಯಿತು.

ಅನ್ನ ಕದ್ದ ಕತೆಗಳು ಸಿನೇಮಾದಲ್ಲಿ ಬಣ್ಣಗಳಾದವು. ಜಗತ್ತಿನ ಅತ್ತ್ಯುನ್ನತ ಪ್ರಶಸ್ತಿಗಳ ಕಿರೀಟ ಹೊತ್ತ ಹಲವು ಸಾಹಿತ್ಯ ಪ್ರಾಕಾರಗಳು ಇದರ ಹಿಂದೆ ಇತಿಹಾಸದ ಪುಟ ಸೇರಿದವು. ಇಂದಿಗೂ ಕಣ್ಣಿಗೆ ಕಾಣದ ಅನ್ನ ಕದಿಯುವ ಸರದಿಗಳು ಈ ಸಮಾಜದಲ್ಲಿ ಹೀಗೆ ಸಾಲು ಸಾಲಾಗಿ ಜೀವಂತವಾಗಿವೆ. ಇಂತಹ ಸಿನೇಮಾ ನೋಡುವಾಗ ಮತ್ತು ಸಾಹಿತ್ಯಗಳನ್ನು ಓದುವಾಗ ಅದರೊಳಗೆ ಆಕಸ್ಮಿಕವಾಗಿ  ನಾನೇ ಪಾತ್ರಧಾರಿಯಾಗುತ್ತೇನೆ. ಅಲ್ಲೆಲ್ಲಾ ಮಾತನಾಡುತ್ತೇನೆ. ನನ್ನ ಹಾಗೇ ನನ್ನದೇ ನೆರಳಿನ ನರ್ತನ…!. ನನ್ನದೇ  ಜಗತ್ತಿನ ಒಂದು ಪ್ರಶ್ನೆ . ನಾನೊಬ್ಬ ಅನ್ನ ಕದ್ದ ಕಳ್ಳನೇ?. ಹಿಗ್ಗಾ ಮುಗ್ಗಾ ಹೊಡೆದರು. ಬೆಳಿಗ್ಗಿನಿಂದ ಸಂಜೆಯವರೆಗೆ ದುಡಿದ ಅವರ ಅನ್ನವನ್ನು ನಾನು ಕದ್ಡೆ ಅನ್ನುವ  ಕಾರಣಕ್ಕಾಗಿ ಕಂಡ ಕಂಡಾಗಲೆಲ್ಲ ಕಳ್ಳ ಎಂದು ಮೂದಲಿಸಿದರು. ಅವರ ಮಕ್ಕಳೆಲ್ಲಾ ಹಿಯ್ಯಾಳಿಸಿದರು. ಕಣ್ಣುಗಳು ತೇವಗೊಳ್ಳುತ್ತವೆ…. ಏಕೆ ಅನ್ನ ಕದ್ದೆ ಅಂತ ಅವರು ಕೇಳಲಿಲ್ಲ. ಸುರುಳಿ ಬಿಚ್ಚುತ್ತಿದೆ ಮನಸ್ಸು …!

ಅದು ಕಾರ್ಮಿಕರ ಲೈನ್‍ ಮನೆ. ಓಗರೆಯ ಐದು ಮನೆಗಳಿದ್ದವು. ಕೊಡಗಿನ ಸೋಮವಾರಪೇಟೆಯಲ್ಲಿ ಹೆಚ್ಚು ಇಂತಹ ಕಾರ್ಮಿಕರ ಮನೆಗಳು ಕಂಡು ಬರುತ್ತವೆ. ದೊಡ್ಡ ದೊಡ್ಡ ಕಾಫಿ ತೋಟಗಳು ಅದು. ಕಾಫೀ  ಕೊಯ್ಲಿನ ಸಮಯದಲ್ಲಿ ಹೊರ ಜಿಲ್ಲೆಗಳಾದ ಮೈಸೂರು,ಹಾಸನ ಸೇರಿದಂತೆ, ಕೇರಳ,ತಮಿಳುನಾಡಿನಿಂದಲೂ ಕಾರ್ಮಿಕರು ಠಿಕಾಣಿ ಹೂಡುತ್ತಾರೆ. ಸುಂಟಿಕೊಪ್ಪ ಪಟ್ಟಣದಿಂದ ಎಂಟು ಕಿ. ಮೀ. ದೂರ ” ಕಾರೆಕೊಲ್ಲಿ” ಕಾಫಿ ಎಸ್ಟೇಟಿಗೆ. ಅಲ್ಲಿಂದ   “ಕಂಟ್ರೋಲ್‍” ಎಸ್ಟೇಟಿಗೆ ಮೂರು ಕಿ.ಮೀ. ದೂರ .  ಸುಂಟಿಕೊಪ್ಪದಿಂದ ಮಡಿಕೇರಿ ದಾರಿ ಮಧ್ಯೆಯೂ  ಬಸ್ಸಿನಲ್ಲಿ ಇಳಿದು ಇಲ್ಲಿಗೆ ಹೋಗಬಹುದು. ಅದು ನಮಗೆ ಗೊತ್ತಿಲ್ಲ. ನಾವೆಲ್ಲರೂ ನಡೆದು ಹೋಗಿಯೇ ಈ ಎಸ್ಟೇಟಿಗೆ ತಲಪುತ್ತಿದ್ದದ್ದು. ಅದು ಕಾರೆಕೊಲ್ಲಿ ಎಸ್ಟೇಟ್ ಮೂಲಕ. ಇಲ್ಲಿಯೇ ನನ್ನ ಅಜ್ಜಿ ಮನೆ. Read more »

8
ಜೂನ್

ಐ ಹೇಟ್ ಕ್ರಿಕೆಟ್..!!!???

ಅರೆಹೊಳೆ ಸದಾಶಿವರಾವ್

ಕ್ರಿಕೆಟಿಗರು ಮೈದಾನದಲ್ಲಿ ಆಡುತ್ತಿದ್ದರೆ ಮೈ ಎಲ್ಲಾ ಕಣ್ಣಾಗಿ, ದೇಶದ ಧ್ವಜವನ್ನು ಹಾರಿಸಿ ನೋಡುವ, ಮನೆಯೊಳಗೆ ಎಲ್ಲಾ ಕೆಲಸ ಬಿಟ್ಟು ಟಿ” ಮುಂದೆ ಕುಳಿತುಕೊಳ್ಳುವ ನಾವೆಲ್ಲರೂ ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ, ಬಹುಷ ನಾವೂ ಈ ಕ್ರಿಕೆಟಿಗರೆಂಬ ‘ದೇಶ ದ್ರೋ”‘ಗಳಿಗಿಂತ ಕಡಿಮೆ ಇಲ್ಲದಂತಾಗುತ್ತದೆ. ವ್ಯತ್ಯಾಸ ಎಂದರೆ ಅವರಿಗೆ ಕೈತುಂಬಾ ಹಣ ಸಿಗುತ್ತದೆ, ನಮ್ಮದು ಜೀವನದ ಅಪೂರ್ವಗಳಿಗೆಗಳು ವ್ಯರ್ಥವಾಗಿ ಕಳೆದುಹೋಗುತ್ತವೆ.

ಹಲವು “ಷಯಗಳ ಬಗ್ಗೆ ನಾ”ಲ್ಲಿ ಯೋಚಿಸಲೇ ಬೇಕು. ಇತ್ತೀಚಿನ ಐಪಿಎಲ್ ಪಂದ್ಯಾವಳಿಯ ವೇಳೆ, ರಾಯಲ್ ಚ್ಯಾಲೆಂಜರ್ಸ್, ಬೆಂಗಳೂರು ತಂಡವನ್ನು ಹಲವರು ನಮ್ಮ ತಂಡ ಎಂದೇ ಸಂಬೋಧಿಸುತ್ತಿದ್ದರು. ನಮ್ಮ ಕರ್ನಾಟಕದ ಆಟಗಾರರನ್ನೆಲ್ಲಾ ಕೈ ಬಿಟ್ಟು, ಕೇವಲ ಬೇರೆ ರಾಜ್ಯ ಮತ್ತು “ದೇಶಿ ಆಟಗಾರರನ್ನು ಮಾತ್ರ ‘ಖರೀದಿಸಿ’, ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿನ ಹೆಸರಿಟ್ಟುಕೊಂಡು, ಬೆಂಗಳೂರಿನಲ್ಲಿ ಆದ ಪಂದ್ಯಗಳಲ್ಲೆಲ್ಲಾ ಕ್ರಿಕೆಟ್ ಪ್ರೇ”ಗಳ ಹಣ ದೋಚಿದ್ದು ಬಿಟ್ಟರೆ, ಬೇರಾವ ರೀತಿಯಲ್ಲೂ ಈ ಬೆಂಗಳೂರು ತಂಡ ನಮ್ಮzಲ್ಲವಾಗಿತ್ತು!. ಆದರೂ ಅದನ್ನು ನಮ್ಮದು ಎಂದು, ನಮ್ಮದೇ ರಾಜ್ಯದ ಕ್ರಿಕೆಟಿಗರು ಬೇರೆ ತಂಡದಲ್ಲಿ ಆಡುತ್ತಿದ್ದರೂ, ನಾವು ಮಾತ್ರ ಮರುಳರಂತೆ ‘ಅಭಿಮಾನ’ದ ಪರಾಕಾಷ್ಠೆ ಮೆರೆದದ್ದು. “ಜಯ ಮಲ್ಯರಿಗಂತೂ ಖುಯಾಗಿರಬಹುದು. Read more »