ವಿಷಯದ ವಿವರಗಳಿಗೆ ದಾಟಿರಿ

Archive for

28
ಜೂನ್

ಪತ್ರಿಕೋದ್ಯಮದಲ್ಲಿ ಪಕ್ಕಕ್ಕೆ ಹೋದವರ ನೆಲೆ-ಬೆಲೆ

– ಕಾಲಂ ೯

ಕನ್ನಡ ಪತ್ರಿಕೋದ್ಯಮದಲ್ಲಿಂದು ನೇತೃತ್ವ ಪರೀಕ್ಷೆಯ ಕಾಲ. ಹೇಗೋ ಪತ್ರಿಕೆ ನಡೆಸುವ ಕಾಲ ಪಕ್ಕಕ್ಕೆ ಸರಿದಿದೆ. ವೈಎನ್ಕೆ ಅಂಥಾ ಯಶಸ್ವೀ ಸಂಪಾದಕರೇ ಸಂಜೆ ಆರಾಗುತ್ತಿದ್ದಂತೆಯೇ ’Phd’ ಕಾಲ ಬಂತೆಂದು ಚಡಪಡಿಸಿ ಎದುರಿಗಿದ್ದವರನ್ನು ಎಬ್ಬಿಸಿಕೊಂಡು ಗಯಾಬ್ ಆಗಿಬಿಡುವ ಕಾಲವೊಂದಿತ್ತು. ವಾರಕ್ಕೊಂದೆರಡು ಸಲ ಬಂದು ಹೋಗುವ ಸಂಪಾದಕರೂ ಇದ್ದರು. ಈಗ ಹಾಗಲ್ಲ. ಯಾರೇ ಸಂಪಾದಕರಾಗಲಿ ತಮ್ಮನ್ನು ಪೂರ್ತಿಯಾಗಿ  activate ಮಾಡಿಕೊಳ್ಳಲೇ  ಬೇಕು. ಎಲ್ಲ ಪುಟಗಳ ಮೇಲೆ ನಿಗಾ ಇಡಬೇಕು. ತಾಂತ್ರಿಕತೆಯನ್ನು ಬೆರಳ ತುದಿಗೆ ಸಿದ್ಧಿಸಿಕೊಳ್ಳಬೇಕು.

ಇಂತಹದೊಂದಿಷ್ಟು ಗುಣ – ಗತ್ತು ಎಲ್ಲ ಇದ್ದೂ ಹೊರಬಿದ್ದಿರುವ ’ಸಂಪಾದಕರು’ ಈಗೇನು ಮಾಡುತ್ತಿದಾರೆ? ಅವರೆತ್ತ ದೃಷ್ಟಿ ನೆಟ್ಟು ಕೂತಿದ್ದಾರೆ? ಈ ಬಗ್ಗೆ ಒಂದಿಷ್ಟು ಇಣುಕು ನೋಟ ಇಲ್ಲಿದೆ.

ಹೆಚ್. ಆರ್. ರಂಗನಾಥ್: ವಿಜಯ ಕರ್ನಾಟಕದ ದರಸಮರದಲ್ಲ್ಲಿಸಿಲುಕಿ ಪ್ರಸಾರ ಸಂಖ್ಯೆ ೫೨ ಸಾವಿರಕ್ಕೆ ಇಳಿದು ನೆಲಕಚ್ಚಿದ್ದ ’ಕನ್ನಡಪ್ರಭ’ಕ್ಕೆ ರಭಸ ಕೊಟ್ಟು ೨ ಲಕ್ಷ ಪ್ರಸಾರ ದಾಟಿಸಿದ ಸಂಪಾದಕ.

ಸುದ್ದಿಯ ವಾಸನೆ ಹಿಡಿಯುವ ಕಲೆಯಲ್ಲಿ ವಿಶಿಷ್ಠತೆ ತೋರಿಸುವ ರಂಗನಾಥ್ ಸುವರ್ಣ ನ್ಯೂಸ್ ಗೆ ಇಡೀ ತಂಡ ಸಮೇತವೇ ಹಾರಿದರು. ನಿರೀಕ್ಷೆಗಳು ಕುಣಿದೆದ್ದವು. ‘ಸುವರ್ಣ ಕರ್ನಾಟಕ’ ಪತ್ರಿಕೆ ರೂಪ ಪಡೆಯಲೇ ಇಲ್ಲ. ಸುವರ್ಣ ನ್ಯೂಸ್ ಏರುಗತಿಯಲ್ಲಿದ್ದಾಗಲೇ ಹೊರ ಬರಬೇಕಾಯ್ತು. ರಂಗ ಅವರು ಈಗಾಗಲೇ Writemen media pvt ltd ಅಂತ ಹೊಸ ಮೀಡಿಯಾ ಕಂಪೆನಿ ಆರಂಭಿಸಿದ್ದಾರೆ. ಟಿವಿ೫ ಜೊತೆ ಸೇರಿ ಕನ್ನಡ ಚಾನೆಲ್ ಟಿವಿ5 ಕನ್ನಡ ಸುದ್ದಿವಾಹಿನಿಯ ಸಾರಥ್ಯ ವಹಿಸಲಿದ್ದಾರೆ. Read more »

28
ಜೂನ್

ಹಿಂದಿ ಹೇರಿಕೆಯಲ್ಲೂ ಸುಣ್ಣ ಬೆಣ್ಣೆ..!

– ಮಹೇಶ. ಎಮ್. ಆರ್

ಇವತ್ತಿನ (೨೬-೦೬-೧೧) ಪ್ರಜಾವಾಣಿ ದಿನಪತ್ರಿಕೆಯಲ್ಲಿ ಮಿನಿಸ್ಟ್ರಿ ಆಫ್ ಮೈಕ್ರೊ, ಸ್ಮಾಲ್ ಆಂಡ್ ಮಿಡಿಯಮ್ ಎಂಟರಪ್ರೈಜಸ್ ಅವರು ತಮ್ಮ ಕಾಯರ್ ಬೋರ್ಡ್ ಎಂಬ ಸಂಸ್ಥೆಯ ಮೂಲಕ ಒಂದು ಜಾಹೀರಾತನ್ನು ಕೊಟ್ಟಿದ್ದಾರೆ. ಅದು ಸಂಪೂರ್ಣ ಹಿಂದಿಯಲ್ಲಿರೋದು ಕಾಣುತ್ತೆ. ಅವರ ಮಾಹಿತಿ ಪ್ರಜಾವಾಣಿ ಓದುವ ಅಥವಾ ಆ ಜಾಹೀರಾತನ್ನು ನೋಡುವ ಬಹುತೇಕ ಜನರಿಗೆ, ಕಣ್ಣಿಗೆ ಬಿದ್ದರೂ ಮಾಹಿತಿ ತಿಳಿಸುವ ಹಂತಕ್ಕೆ ಅದು ಹೋಗುವುದಿಲ್ಲ ಎಂಬುದು ಸತ್ಯ. ಹೀಗಾಗಿ ಮಾಹಿತಿ ಕೊಡುವ ಉದ್ದೇಶಕ್ಕಿಂತ ಅದರಲ್ಲಿ ಹಿಂದಿ ಹೇರಿಕೆಯ ಉದ್ದೇಶನೇ ಎದ್ದು ಕಾಣುತ್ತೆ. ಇನ್ನು ಈ ಜಾಹೀರಾತು ಕೊಟ್ಟ ಕಾಯರ್ ಬೋರ್ಡ ಅನ್ನೋ ಸಂಸ್ಥೆಯ ಕೇಂದ್ರ ಕಚೇರಿ ಕೇರಳದ ಕೊಚ್ಚಿಯಲ್ಲಿದೆ. ಕೇರಳದ ಬಾಶೆ ಮಲಯಾಳಂ, ಹೀಗಾಗಿ ಅಲ್ಲಿನೂ ಇದೇ ರೀತಿ ಹಿಂದಿಯಲ್ಲಿ ಕೊಟ್ಟಿದ್ದಾರಾ ಅಂತ ನೋಡಿದ್ರೆ,, ಅಲ್ಲಿನ ಮಲಯಾಳ ಮನೋರಮಾ ದಿನಪತ್ರಿಕೆಯಲ್ಲಿ ಇದೇ ಜಾಹೀರಾತು ಸಂಪೂರ್ಣ ಆಂಗ್ಲ್ ಬಾಶೆಯಲ್ಲಿತ್ತು. ವಿಚಿತ್ರ ಅಂದ್ರೆ, ಕಾಯರ್ ಬೋರ್ಡ ತಮ್ಮೂರಿನಲ್ಲಿ ಆಂಗ್ಲ ಬಾಶೆಯಲ್ಲಿ ಜಾಹೀರಾತು ಹಾಕಿಸಿ, ನಮ್ಮೂರಿನಲ್ಲಿ ಹಿಂದಿಯಲ್ಲಿ ಜಾಹೀರಾತು ಹಾಕಿಸಿದ್ದು.! ಎರಡು ಹಿಂದಿಯೇತರ ದಿನಪತ್ರಿಕೆಗಳೇ. ಒಂದು ಪ್ರಾದೇಶಿಕ ದಿನಪತ್ರಿಕೆಯಲ್ಲಿ ಆಂಗ್ಲ ಮತ್ತೊಂದರಲ್ಲಿ ಹಿಂದಿ ಹಾಕಿದ್ದು ಯಾಕೆ ಅನ್ನೋದಶ್ಟೆ ಪ್ರಶ್ನೆ. ಎರಡೂ ಕಡೆ ಪ್ರಾದೇಶಿಕ ಬಾಶೆನೇ ಇರಬೇಕಿತ್ತು ಅನ್ನೋದು ಮಾತ್ರ ವಿವಾದಕ್ಕೆ ಎಡೆ ಇಲ್ಲದ ವಾದ.! ಅಂದಹಾಗೆ ಬೆಂಗಳೂರಿನಲ್ಲೂ ಅದರ ಪ್ರಾದೇಶಿಕ ಕಚೇರಿ ಇದೆ.

Read more »