ವಿಷಯದ ವಿವರಗಳಿಗೆ ದಾಟಿರಿ

Archive for

23
ಜೂನ್

ರಾಜಕಾರಣದಲ್ಲಿ ಆಣೆ ಮತ್ತು ಆಣೆಯ ರಾಜಕಾರಣ

ಸಂತೋಷ್ ಕುಮಾರ್ ಪಿ.ಕೆ

ಇತ್ತೀಚಿನ ರಾಜಕಾರಣದ ಬೆಳವಣಿಗೆಯಲ್ಲಿ ಹೆಚ್.ಡಿ.ಕುಮಾರ ಸ್ವಾಮಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪ ಇವರ ನಡುವೆ ಸಂಧಾನವೇರ್ಪಟ್ಟಿಲ್ಲ ಎಂಬುದನ್ನು ಸಾಬೀತುಪಡಿಸಲು ಧರ್ಮಸ್ಥಳದ ಮಂಜುನಾಥ ಕ್ಷೇತ್ರದಲ್ಲಿ ಆಣೆ ಮಾಡಲು ಸನ್ನದ್ದರಾಗಿರುವುದು ಬಹುಟೀಕೆಗೆ ಒಳಗಾಗಿದೆ. ಇದು ಮೇಲ್ನೋಟಕ್ಕೆ ಕೇವಲ ಆಣೆ ಪ್ರಮಾಣದ ಸಮಸ್ಯೆಯಂತೆ ಕಂಡರೂ ಸಹ ಆ ಸಮಸ್ಯೆಯ ಆಳ ಅಗಲ ನಾವು ಊಹಿಸಲು ಸಾಧ್ಯವಿರದ ಮಟ್ಟಿಗೆ ಇದೆ. ಬಹುತೇಕ ಚಿಂತಕರು, ಲೇಖಕರು ಹಾಗೂ ವಿದ್ವಾಂಸರನ್ನೊಳಗೊಂಡು ಆ ಆಣೆ ಮಾಡುವ ಪ್ರವೃತ್ತಿಯನ್ನು ಕಟುವಾಗಿ ಟೀಕಿಸುತ್ತಿದ್ದಾರೆ, ಇಲ್ಲಿ ಕೇವಲ ಆಣೆ ಪ್ರಮಾಣದ ವಿಚಾರವನ್ನುವಿವಮರ್ಶಿಸಿದರೆ ಒಂದೊ, ರಾಜಕಾರಣಿಗಳ ಮೇಲೆ ಕೋಪ ಮಾಡಿಕೊಳ್ಳಬೇಕಾಗುತ್ತದೆ, ಇಲ್ಲವೆ ಅಂತಹ ಪ್ರೃತ್ತಿಯೇ ಕೆಟ್ಟದೆಒಳ್ಳೆಯದೋ ಎಂಬ ನಿರಪಯುಕ್ತ ಚರ್ಚೆಯನ್ನು ಮಾಡಬೇಕಾಗುತ್ತದೆ. ಆದ್ದರಿಂದ ಆಣೆ ಮಾಡುವ ಪ್ರವೃತ್ತಿಯನ್ನು ಪ್ರಶ್ನೆಮಾಡುವ ನೆಪದಲ್ಲಿ ನಮ್ಮ ರಾಜ್ಯಾಂಗದ ಅಥವಾ ಸೆಕ್ಯುಲರಿಸಂ ಸಮಸ್ಯೆಯನ್ನು ಇಲ್ಲಿ ಚರ್ಚಿಸಲು ಪ್ರಯತ್ನಿಸುತ್ತೇನೆ. ಹಾಗಾಗಿ ಆಣೆ ಮಾಡುವುದರಲ್ಲಿ ತಪ್ಪೇನಿದೆ ಎಂಬುದನ್ನು ನೋಡುವಾ ಅಥವಾ ಆಣೆ ಮಾಡುವುದು ನಮಗೇಕೆ ತಪ್ಪಾಗಿ ಗೋಚರಿಸುತ್ತಿದೆ ಎಂಬುದನ್ನು ಅವಲೋಕಿಸುವ. Read more »

23
ಜೂನ್

ಅಮೇರಿಕದಲ್ಲೀಗ ನಾಯಿ ಬೆಕ್ಕುಗಳಿಗೂ ಸಕ್ಕರೆ ಖಾಯಿಲೆ

ಗೋವಿಂದ ಭಟ್ 

ಮನುಷ್ಯನನ್ನು ದೇವರು ಸದಾ ಚಟುವಟಿಕೆಯಲ್ಲಿರುವಂತೆ ರೂಪಿಸಿದ್ದಾನೆ. ಜೀವನದ ಎರಡು ತುದಿಗಳಲ್ಲಿ ಅಂದರೆ ಹುಟ್ಟು ಸಾವಿನ ಆಸುಪಾಸು ಹೊರತು ಪಡಿಸಿದರೆ ಉಳಿದ ಸಮಯದಲ್ಲಿ ಸದಾ ತನ್ನ ಕಾಲಿನ ಮೇಲೆ ನಿಲ್ಲುವಂತೆ ಚಲಿಸುವಂತೆ ನಮ್ಮನ್ನು ವಿನ್ಯಾಸಗೊಳಿಸಲಾಗಿದೆ. ಆದರೆ ನಮಗೆ ಹೊರಿಸಿಕೊಳ್ಳುವುದೆಂದರೆ ಇಷ್ಟ. ನಡೆಯುವುದು ಕಷ್ಟ. ನಾಲ್ಕು ಹೆಜ್ಜೆ ಹೋಗಲೂ ವಾಹನವನ್ನೇ ಅವಲಂಬಿಸಲು ಇಷ್ಟ ಪಡುತ್ತೇವೆ. ಕಾಸಿಲ್ಲದವ ಮಾತ್ರ ನಡೆಯುವುದು ಎಂದು ನಮ್ಮವರ ಖಚಿತ ನಿಲುವು. ನಮಗೆ ಎಲ್ಲಕ್ಕೂ ಮಾದರಿಯಾದ ಅಮೇರಿಕದವರು ಶೌಚಾಲಯಕ್ಕೂ ಕಾರಲ್ಲಿ ಹೋಗುವರೋ ಅನ್ನುವ ಗುಮಾನಿ.

ಅಮೇರಿಕದಲ್ಲಿ ಚಲನಾತೀತ ಮನುಷ್ಯರಿಗೆ ಮಾತ್ರವಲ್ಲ ಅವರ ನಾಯಿ ಬೆಕ್ಕುಗಳಿಗೂ ಈಗ ಸಕ್ಕರೆ ಖಾಯಿಲೆ ಹಬ್ಬಲು ಪ್ರಾರಂಭಿಸಿದೆ. ಈ ಸಕ್ಕರೆ ಖಾಯಿಲೆ ಬಗೆಗೆ ಯೋಚಿಸಿದಾಗ ನನಗೆ ನೆನಪಿಗೆ ಬರುವುದು ತೇಜಸ್ವಿ ಕಥೆಯೊಂದರ ಪಾತ್ರಧಾರಿ. ಅವರು ತನಗೆ ಪರಂಗಿಯವರ ಸೀಕು ಉಂಟೆಂದು ಡಾಕ್ಟ್ರು ಹೇಳಿದರೆಂದು ಹೆಂಡತಿಯೊಂದಿಗೆ ಬಹಳ ಹೆಮ್ಮೆ ಪಟ್ಟುಕೊಳ್ಳುತ್ತಾರೆ. ಸಕ್ಕರೆ ಖಾಯಿಲೆ ಸಾಕುನಾಯಿಗಳಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಶೇಕಡಾ ಮೂವತ್ತಮೂರರಷ್ಟು  ಏರಿದರೆ ಬೆಕ್ಕುಗಳಲ್ಲಿ ಶೇಕಡಾ ಹದಿನಾರು. ಹೋಲಿಕೆಯಲ್ಲಿ ಆ ದೇಶದಲ್ಲಿ ಮನುಷ್ಯರಲ್ಲಿ ಬರೇ ಶೇಕಡಾ ಹತ್ತು ಹೆಚ್ಚುವರಿಯಾಗಿ ಈ ಸೀಕು ಗುರುತಿಸಲ್ಪಟ್ಟಿದೆ. Read more »