ವಿಷಯದ ವಿವರಗಳಿಗೆ ದಾಟಿರಿ

Archive for

9
ಜೂನ್

ಬೆಂಗಳೂರು ಕೇಂದ್ರಾಡಳಿತ ಪ್ರದೇಶವಾಗಲಿ

– ಶ್ರೀ ಹರ್ಷ ಸಾಲಿಮಠ

ಇದೊಂದು ಮಾತನ್ನು ಅತ್ಯಂತ ತೀವ್ರ ಸಂಕಟದಿಂದ ಹೇಳುತ್ತಿದ್ದೇನೆ. ಕಾಲಿಗೆ ಗ್ಯಾಂಗ್ರಿನ್ ಆದಾಗ ಕಾಲನ್ನು ಕತ್ತರಿಸುತ್ತಾರಲ್ಲ ಹಾಗೆ.  ನೋವಾಗುತ್ತದೆ ಆದರೆ ಬದುಕಲು ಅದು ಅನಿವಾರ್ಯ. ಕನ್ನಡ/ಕರುನಾಡು ಉಳಿಯಬೇಕೆಂದರೆ ಈ ಕೆಲಸ ಆಗಬೇಕಾಗಿದೆ.

ಬೆಂಗಳೂರಲ್ಲಿ ಕನ್ನಡ ಸಿಗುವುದಿಲ್ಲ.ಕನ್ನಡಿಗರು ಕಾಣೆಯಾಗುತ್ತಿದ್ದಾರೆ ಎಂಬ ಮಾತನ್ನು ಅತಿಶಯೋಕ್ತಿ ಎಂದುಕೊಂಡಿದ್ದೆ.ಇತ್ತೀಚಿನ ನನ್ನ ಕೆಲ ಅನುಭವಗಳು ಇದು ಸತ್ಯವೆಂದು ಬಿಂಬಿಸಿವೆ. ನಾನು ಎರಡು ಕಂಪನಿಗಳಿಗೆ ಇಂಟರ್‍ ವ್ಯೂ ಪ್ಯಾನೆಲಿಸ್ಟ್ ಆಗಿದ್ದೇನೆ. ಎರಡು ಕಾಲೇಜುಗಳಿಗೆ ಅಕಡೆಮಿಕ್ ಕನ್ಸಲ್ಟಂಟ್ ಆಗಿದ್ದೇನೆ. ನನ್ನ ಅನುಭವ ಮತ್ತು ವಿಶ್ಲೇಷಣೆಯಿಂದ ಇದೊಂದು ಅಭಿಪ್ರಾಯವನ್ನು ಮುಂದಿಡುತ್ತಿದ್ದೇನೆ.

ಇಲ್ಲಿಯವರೆಗೆ ಕಂಪನಿಗಳಿಗಾಗಿ ಸುಮಾರು ಸೂರು ಜನರ ಸಂದರ್ಶನ ನಡೆಸಿದ್ದೇನೆ. ದಯವಿಟ್ಟು ನಂಬಿ. ಇಲ್ಲಿಯವರೆಗೆ ಒಬ್ಬನೇ ಒಬ್ಬ ಕನ್ನಡಿಗ ಸಂದರ್ಶನಕ್ಕಾಗಿ ಬಂದಿಲ್ಲ! ನಾನು ಮತ್ತು ಪ್ಯಾನೆಲ್ ನಲ್ಲಿರುವ ಕೆಲವರು ಕನ್ನಡಿಗ ಗೆಳೆಯರು ಕನ್ನಡದ ಹುಡುಗರು ಬಂದರೆ ಕೊಂಚ ದಡ್ಡರಿದ್ದರೂ ಸರಿ ಶತಾಯಗತಾಯ ಮುಂದಕ್ಕೆ ತಳ್ಳಬೇಕೆಂದು ಯೋಜಿಸಿಕೊಂಡಿದ್ದೆವು. ಆದರೆ ಕನ್ನಡದ ಒಬ್ಬ ಹುಡುಗನಾದರೂ ಬಂದರೆ ತಾನೆ? ಬಂದವರು ಬಹುತೇಕರು ತೆಲುಗರು ಮತ್ತು ಬಿಹಾರಿಗಳು! ಕೃಷ್ಣದೇವರಾಯ ವಿಶ್ವವಿದ್ಯಾಲಯದ ಲ್ಲಿ ಬಿಎಎಸ್ಸಿ  ಪದವಿ ಮುಗಿಸಿ ಎರಡು ವರುಷಗಳ ಸುಳ್ಳು ಅನುಭವ ಹಾಕಿಕೊಂಡು ಬರುತ್ತಾರೆ. ಕಂಪನಿಗಳಾದರೋ ಇವರು ಸುಳ್ಳರು ಎಂದು ತಿಳಿದೂ ತೆಗೆದುಕೊಳ್ಳುತ್ತವೆ. ಏಕೆಂದರೆ ಈಗ ಬಹುತೇಕ ಕಂಪನಿಗಳು ಸರ್ವಿಸ್ ಮತ್ತು ಮೇಂಟೆನೆನ್ಸ್ ಕೆಲಸಗಳನ್ನು ನಡೆಸುತ್ತಿವೆ. ಈ ಕೆಲಸಕ್ಕೆ ಹೆಚ್ಚಿನ ಕೌಶಲ್ಯ ಅಗತ್ಯವಿಲ್ಲ. ಒಂದೆರಡು ತಿಂಗಳಲ್ಲಿ ಯಾರಾದರೂ ಕಲಿಯಬಹುದು. ಗಿರಾಕಿಗಳಿಗೆ ತೋರಿಸಲು ಬಿಲ್ಲಿಂಗಿಗಾಗಿ ಕೆಲವು ನೌಕರರ ಅವಶ್ಯಕತೆ ಇರುತ್ತದೆ. ಹಾಗಾಗಿ ಕೌಶಲ್ಯದ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಳ್ಳದೇ ಕಂಪನಿಗಳು ಇವರನ್ನು ಕೊಳ್ಳುತ್ತವೆ. ಇವರು ಕಡಿಮೆ ಸಂಬಳಕ್ಕೆ ರಾತ್ರಿ ಪಾಳಿಗೂ ಕೆಲಸ ಮಾಡಲು ತಯಾರಿರುವುದರಿಂದ ಕಂಪನಿಗಳಿಗೂ ಲಾಭ!
ಮತ್ತಷ್ಟು ಓದು »

9
ಜೂನ್

ಗತಂ ಗತಂ

ಪವನ್ ಪಾರುಪತ್ತೇದಾರ್

ನಮಮ್ಮನಿಗೆ ಇದ್ದಕ್ಕಿದ್ದ ಹಾಗೆ ಅಕ್ಕನ ನೆನಪಾಗಿ ನನ್ನ ಕೇಳಿದ್ರು ಕರೆದು ಕೊಂಡು ಹೋಗು ಅಂತ, ನನಗು ಮಾಡಕ್ ಏನು ಕೆಲಸ ಇಲ್ಲದ ಕಾರಣ electronic ಸಿಟಿ ಕಡೆ ಪ್ರಯಾಣ ಮಾಡಿದೆ. ನಾನು ಅವರ ಮನೆಗೆ ಹೋಗಿ ಸುಮಾರು ೪ ವರ್ಷ ಗಳಾಗಿತ್ತು. ಹೋಗಿ ಅವರ ಮನೆ ಸೇರಿದ ತಕ್ಷಣ ಉಭಯ ಕುಶಲೋಪರಿಗಳನ್ನು ಮುಗಿಸಿ ಚೌ ಚೌ ಬಿಸ್ಕತ್ತು ತಿನ್ನುತ್ತ ಮಾತನಾಡುತ್ತಿರುವಾಗ ನಮ್ಮ ಅಣ್ಣ ನಮ್ಮ ತಾಯಿಗೆ ಹೇ ನಿನ್ನ 2nd year BA ದು ಒಂದು ಪುಸ್ತಕ ಹಾಗೆ ಇಟ್ಟಿದಿನಿ ಕಣೆ ಅಂದ ( ಹೆಚ್ಹು ಸಲಿಗೆ ಚಿಕ್ಕಮ್ಮ ಆದರು ಹೋಗೆ ಬಾರೆ ಎಂದೆ ಮಾತನಾಡುತ್ತಾರೆ )

ನಮಮ್ಮ ಯಾವುದೊ ಅದು ಅಂದ್ರು ,ಅದಕ್ಕೆ ನಮ್ಮಣ್ಣ untouchable ಅಂತ ನೆನಪಿದ್ಯ ಅಂದ ಅಮ್ಮ ಹೌದು ಹೌದು ಇನ್ನು ಇತ್ತಿದ್ಯ good ಅಂದ್ರು. ಅದಕ್ಕವ, ನಾನು ಮಾತ್ರ ಯಾರಿಗೂ ಪುಸ್ತಕ ಕೊಡೋದಿಲ್ಲಪ ಅದನ್ನ ಯಾರಿಗದ್ರು ಕೊಟ್ರೆ ವಾಪಾಸ್ ಬರೋದೆ ಕಷ್ಟ ಅದಕ್ಕೆ ಜೋಪಾನವಾಗಿ ಜೋಡಿಸ್ತೀನಿ ಸಮಯ ಸಿಕ್ಕಾಗ ಓದ್ತಾ ಇರ್ತೀನಿ ಅಂದ. ಅಷ್ಟರಲ್ಲೇ ಅಲ್ಲೇ ಕೂತಿದ್ದ ನಮ್ಮ ದೊಡ್ಡಪ್ಪ ಕಣಗಾಲ್ ಶಂಕರ್ ನಾರಾಯಣ್ ( ಕನ್ನಡ ಚಿತ್ರ ರಂಗದ ಹೆಸರಾಂತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ರವರ ಮೊದಲನೇ ತಮ್ಮ ) ಒಂದು ಮಾತು ಹೇಳಿದರು, ” ಪುಸ್ತಕಂ ವನಿತಂ ವಿತ್ತಂ ಪರ ಹಸ್ತೇ ಗತಂ ಗತಂ ” ಆಹಾ ಎಷ್ಟು ಅರ್ಥ ಗರ್ಭಿತವಾಗಿದೆ. ಈ ಮಾತು, ಪುಸ್ತಕ ಅಗಲಿ ಹೆಣ್ಣಾಗಲಿ ಹಣ ಅಗಲಿ ಇನ್ನೊಬ್ಬರ ಕೈಗೆ ಹೋದರೆ ಅದು ಹೋದಂತಯೇ ತಿಳಿಯಬೇಕು. ಅಕಸ್ಮಾತ್ ಮತ್ತೆ ಬಂದರು ಅದು ಸರಿಯಾಗಿ ಬರುವುದು ಬಹಳ ಕಷ್ಟ , ಸರಿಯಾದ ಮಾತು. ನನ್ನ ಜೆವನದಲ್ಲೇ ಅಂತ ಸಂಗತಿಗಳು ನಡೆದಿವೆ, ನಾನು ೫ನೆ ತರಗತಿ ಓದೋವಾಗ ನನಗೆ ಬಹುಮಾನವಾಗಿ ಬಂದಿದ್ದ ಒಂದು ಜನರಲ್ knowledge ಪುಸ್ತಕವನ್ನ ತೆಗೆದುಕೊಂಡಿದ್ದ ಮೇಸ್ಟ್ರು ನಾನು ಪ್ರೌಢ ಶಾಲೆ ಸೇರುವರೆಗೂ ಕೇಳಿದ್ರು ವಾಪಾಸ್ ಕೊಡಲಿಲ್ಲ. ಮತ್ತಷ್ಟು ಓದು »

9
ಜೂನ್

ನೈಂಟಿ ಜತೆಗಿನ ನಂಟು!!!

– ರಶ್ಮಿ.ಕಾಸರಗೋಡು

ನೈಂಟಿ! ಅದೊಂದು ಥರಾ ಕಿಕ್ ಕೊಡುವಂತದ್ದೇ. ಅರೇ..ನೀವು ಉದ್ದೇಶಿಸುತ್ತಿರುವ ‘ಬಾಟಲಿ’ ಬಗ್ಗೆ ನಾನು ಹೇಳುತ್ತಿಲ್ಲ. ನಾನು ಹೇಳೋಕೆ ಹೊರಟಿರುವುದು 90ರ ದಶಕದ ಟಿವಿ ಕಾರ್ಯಕ್ರಮಗಳ ಬಗ್ಗೆ. ದೂರದರ್ಶನ ಅದೊಂದೇ ಚಾನೆಲ್ ಸಾಕು…ಎಲ್ಲ ತಿಳಿಯೋಕೆ, ಕಲಿಯೋಕೆ. ಹಿಂದಿ ಅರ್ಥವಾಗುತ್ತಿಲ್ಲವಾದರೂ ಟಿವಿ ಮುಂದೆ ನಾವು ಹಾಜರು. ಆವಾಗನಮ್ಮ ಮನೆಯಲ್ಲಿ ಟಿವಿ ಇರಲಿಲ್ಲ, ಆದರೂ ಒಂದು ಕಿಮೀ ನಡೆದು ಪಕ್ಕದ ಮನೆಗೆ ಟಿವಿ ನೋಡಲು ಹೋಗುತ್ತಿದ್ದೆ. ಅದೂ ಮಹಾಭಾರತ ನೋಡಲು. ಮಹಾ….ಭಾರತ್ ಅಂತ ಅದರ ಹಾಡು ಶುರುವಾಗುವ ಹೊತ್ತಿಗೆ ನಾವು ಮೂವರು (ಜತೆಗೆ ಅಣ್ಣ, ಅಕ್ಕ) ಅಲ್ಲಿ ಹಾಜರು. ಅಲ್ಲಿ ಯುದ್ಧ ನಡೆಯುತ್ತಿದ್ದರೆ ಕಣ್ಣು ಮುಚ್ಚಿ ನೋಡುವುದು, ಮರಣ ಶಯ್ಯೆಯಲ್ಲಿರುವ ಬೀಷ್ಮನನ್ನು ನೋಡಿ ಅಳುವುದು ಹೀಗೆ ಸಾಗುತ್ತಿತ್ತು ನಮ್ಮ ‘ಮಹಾ’ ಭಾರತ. ಆಮೇಲೆ ನಮ್ಮ ಮನೆಗೂ ಬ್ಲಾಕ್ ಆ್ಯಂಡ್ ವೈಟ್ ಟಿವಿ ಬಂತು. ಟಿವಿ ಬಂದ ಮೊದಲ ದಿನ ಫುಲ್ ಚಾಲೂ. ಪ್ರೋಗ್ರಾಂ ಮುಗಿದು ಬಣ್ಣ ಬಣ್ಣದ ಸ್ಟೈಪ್ ಕಾಣಿಸಿಕೊಂಡರೂ ಅದನ್ನೇ ನೋಡುತ್ತಾ ಕುಳಿತಿರುತ್ತಿದ್ದೆವು. ರುಕಾವಟ್ ಕೆ ಲಿಯೆ ಕೇದ್ ಹೈ ಅಂದ್ರೆ ಏನೂ ಅಂತಾ ಗೊತ್ತಿಲ್ಲದಿದ್ದರೂ ಸ್ವಲ್ಪ ಸಮಯದ ನಂತರ ಪ್ರೋಗ್ರಾಂ ಬರುತ್ತೆ ಅಂತಾ ಗೊತ್ತಿತ್ತು. “ಟಿವಿ ಬಂತಾ…ಇನ್ನು ಮಕ್ಕಳು ಓದಲ್ಲ ಬಿಡಿ” ಅಂತಾ ಅಮ್ಮನಿಗೆ ಚಾಡಿ ಹೇಳುವ ನೆರೆಯವರು ಬೇರೆ. ಅಂತೂ ಟಿವಿಯ ಮೂಲಕ ಹಿಂದಿ ಬೇಗನೆ ಕಲಿತುಕೊಳ್ಳುವಂತಾಯಿತು.
ಮತ್ತಷ್ಟು ಓದು »