ಪವನ್ ಪರುಪತ್ತೇದಾರ್
ಜೀವನದಲ್ಲಿ ಕೆಲೊವಂದು ಸರಿ ಬಹಳ ವಸ್ತುಗಳನ್ನು ಕಳೆದುಕೊಳ್ತಿವಿ, ಬೆಂಗಳೂರಿನ ಲೋಕಲ್ ಬಸ್ ನಲ್ಲಿ ಓಡಾಡೋವಾಗ ಪ್ರತಿ ದಿನ ಒಬ್ಬರಲ್ಲ ಒಬ್ಬರು ಮೊಬೈಲ್ ಫೋನ್ ಕಳೆದುಕೊಳ್ತಾನೆ ಇರ್ತಾರೆ. ನನ್ ಸ್ನೇಹಿತ ಒಬ್ಬ ಹೇಗೆ ಮೊಬೈಲ್ ಕಳಕೊಂಡು ಕಳ್ಳನ್ನ ಹಿಡಿಯೋಕೆ ಹೋಗಿ, ಅವರ ಹತ್ರ ಒದೆ ತಿಂದು ಬಂದಿರೋದು ಆಗಿದೆ. ಆ ಮೊಬೈಲ್ ನ ನೆನಪು ಅವನನ್ನ 15 ದಿನ ಕಾಡಿರ್ಬೋದು, ಆ ಒದೆ ತಿಂದ ನೋವು 2 ತಿಂಗಳು ಕಾಡಿರಬಹುದು ಆದ್ರೆ ಅ ಮೊಬೈಲ್ ಜಾಗದಲ್ಲಿ ತನಗಿಷ್ಟ ಅದವರನ್ನ ಕಳೆದು ಕೊಂಡರೆ ಎಷ್ಟು ಕಾಡುತ್ತೆ ಅಲ್ವಾ?? ನನ್ನ ಈ ಬರಹದಲ್ಲಿ ನನ್ನ ಆ ರೀತಿ ಕಾಡುತ್ತಿರುವ ಮಾಸದ ಒಂದು ನೆನಪಿನ ಬಗ್ಗೆ ಬರೀತಿದಿನಿ
ನಾನು ಪಿ ಯು ಸಿ ಓದ್ತಾ ಇದ್ದೆ ಆಗ, ನಮ್ಮೂರಿಂದ ಬೆಂಗಳೂರಿನ ಕಾಲೇಜ್ ಗೆ 1 ಘಂಟೆ ಪ್ರಯಾಣ, ನಮ್ಮೂರಿಂದ ತುಂಬಾ ವಿದ್ಯಾರ್ಥಿಗಳು ಬರ್ತಾ ಇದ್ರು ಎಲ್ರು ಜೊತೆಯಾಗಿ ಬಸ್ ಅಲ್ಲಿ ಮಜಾ ಮಾಡ್ಕೊತ ಒಬ್ಬರನ್ನೊಬ್ಬರು ರೇಗಿಸ್ತ ತುಂಬಾ ಖುಶಿಯಾಗಿ ಟ್ರಾವೆಲ್ ಮಾಡ್ತಾ ಇದ್ವಿ , ನಮ್ batch ನಲ್ಲೆ ಆನಂದ್ ಎಂಬ ಹುಡುಗ ನಮ್ಮುರೋನೆ ಎಲ್ಲರು ಪ್ರೀತಿಯಿಂದ ದೀದಿ ಅಂತ ಕರಿತ ಇದ್ವಿ . ಅವನು ಒಂತರ ವಿಚಿತ್ರ ಹುಡುಗ 100 ರು ಖರ್ಚು ಮಾಡಿದ್ರೆ 1000 ಅಂತಿದ್ದ 25 ಕೆ 15 ಮಾರ್ಕ್ಸ್ ಬಂದಿದ್ರೆ 23 ಅಥವಾ 24 ಅಂತಿದ್ದ. ತುಂಬಾ ಹೇಳ್ಕೊಳೋ ಸ್ವಭಾವದ ಹುಡುಗ ಆದ್ರೆ ಅವ್ನು ಯಾವತ್ತು ಒಬ್ರನ್ನ ನೋಯಿಸ್ಬೇಕು ಅನ್ಕೊಂಡಿರಲ್ಲ ನೋಯಿಸ್ತನು ಇರ್ಲಿಲ್ಲ ಇನ್ನೂ ನಾವೇ ಎಲ್ಲ ಸೇರ್ಕೊಂಡು ಅವನ್ನ ಅವನ ಕೊಚ್ಚಿಕೊಳೊ ಸ್ವಾಭಾವಗಳನ್ನ ತೊಗೊಂಡು ರೆಗಿಸ್ತ ಇದ್ವಿ ಇವನನ್ನ ಪ್ರೀತಿಯಿಂದ ದೀದಿ ಅಂತ ಕರಿತ ಇದ್ವಿ ..
ನಮ್ಮದು ಒಂದು ಕ್ರಿಕೆಟ್ ಟೀಂ ಇತ್ತು, ನಾವೆಲ್ಲ ಜೊತೆಯಾಗಿ ಕ್ರಿಕೆಟ್ ಅಡ್ತ ಇದ್ವಿ. ಅದ್ರಲ್ಲಿ ದೀದಿನೆ ನಮ್ಮ ಟೀಂ captain ಇವನು ಹೆಸರಿಗೆ ಮಾತ್ರ ನಮ್ಮ ಟೀಂ ನ ನಾಯಕ ಆದ್ರೆ ಬೌಲಿಂಗ್ ಮಾಡಕ್ಕೆ ಇವನಿಗೆ ಬರ್ತಾ ಇರ್ಲಿಲ್ಲ, batting ಆಡಕ್ಕೆ ಇವನಿಗೆ ಬಿಡ್ತಾ ಇರ್ಲಿಲ್ಲ, ಸೊ last batting fix. ಒಟ್ಟಾರೆ ಇವನು ಟೀಂ ಅಲ್ಲಿ ಇರ್ತ ಇದ್ದ ಅದೂ captain ಆಗಿ ಆದ್ರೆ fielding ಬಿಟ್ಟು ಬೇರೆ ಯಾವ ವಿಭಾಗದಲ್ಲೂ ಇವನ contribution ಅಷ್ಟು ಇರ್ತ ಇರ್ಲಿಲ್ಲ. ಆದ್ರೆ ಯಾವತ್ತು ಅವನನ್ನ ಡ್ರಾಪ್ ಕೂಡ ಮಾಡ್ತಿರಲಿಲ್ಲ. ತುಂಬಾ important ವಿಷಯ ಅಂದ್ರೆ ಇವನೇ ಯಾವಾಗಲು ಅಂಪೈರ್ ಆಗ್ತಾ ಇದ್ದಿದ್ದು ಹುಡುಗ್ರುಗೆ ಬಿಸಿಲಲ್ಲಿ ನಿಂತ ಕೊಳ್ಳೋಕೆ ಆಗದೆ ಇವನ್ನ ನಿಲ್ಲಿಸ್ತ ಇದ್ರು …
ಅಂತು ಇಂತೂ ಆನಂದ degree ಮುಗ್ಸಿ ಆಯಿತು, ಅದ್ರು ಅವನ childish nature ಹಾಗೇ ಇತ್ತು. ನಮಗೆ ಅವನ ಆ nature ಬಹಳ ಇಷ್ಟ ಕೂಡ ಆಗಿತ್ತು. ನಮ್ಮ ಕ್ರಿಕೆಟ್ ಆಟ ಸ್ವಲ್ಪ ಕಮ್ಮಿ ಆಗಿತ್ತು ಅದ್ರು ಅವಾಗಾವಾಗ ಬೇರೆ ಬೇರೆ ಊರಲ್ಲಿ ಹೋಗಿ ಮ್ಯಾಚ್ ಅಡ್ತ ಇದ್ವಿ. ವೀಕೆಂಡ್ಸ್ ಅಲ್ ಮಾತ್ರ. ಹೀಗೆ ಇರ್ಬೇಕಾದ್ರೆ ಒಂದಿನ ನಾನು ನನ್ನ ಸೆಮಿಸ್ಟರ್ exam ಗೆ ಓದ್ತಾ ಇದ್ದೆ ಫ್ರೆಂಡ್ ಮನೆಗೆ combind study ಮಾಡಕ್ಕೆ ಹೋಗ್ತಾ ಇರ್ಬೇಕಾದ್ರೆ ಆನಂದ ಸಿಕ್ಕಿ ಹೇ ಶಾಸು(ನನ್ನ ನಮ್ ಫ್ರೆಂಡ್ಸ್ ಹಾಗೇ ಕರಿಯೋದು ) ಬಾ ಮಗ tea ಕುಡಿ ಅಂದ, ಕೆಲಸಕ್ಕೆ ಸೇರ್ತಾ ಇದೀನಿ ಮಗ interviw ಗೆ ಹೋಗ್ತಾ ಇದೀನಿ ಅಂದ, ನಾನು ಅವನಿಗೆ wish ಮಾಡಿ ಟೀ ಕುಡಿದು ಸಂಜೆ ಸಿಕ್ತೀನಿ, ಕೆಲಸ ಸಿಕ್ಕಿದ ಮೇಲೆ ಪಾರ್ಟಿ ಕೊಡಬೇಕು ಅಂತ ಹೇಳಿ ಹೊರಟಿದ್ದೆ ಸಂಜೆ ನಾನು ಓದ್ತಾ ಕುತಿರೋವಾಗ ಒಂದು ಮೆಸೇಜ್ ಬಂತು ” didi is no more he left us due to an accident near electronic city ” ತಕ್ಷಣ ನನಗೆ ಶಾಕ್ ಹೊಡೆದಂತಾಗಿ ತಕ್ಷಣ ಅವ್ರ ಮನೆ ಬಳಿ ಹೋದೆ, ಅಲ್ಲಿ ಶಾಂತವಾಗಿ ಚಿರನಿದ್ರೆಗೆ ಜಾರಿದ್ದ ದೀದಿ.. ನಮ್ ಸ್ನೇಹಿತರ ಗುಂಪೆಲ್ಲ ಅಲ್ಲೇ ಇತ್ತು. ಸಂಜೆ interviw ಅಲ್ಲಿ ಸೆಲೆಕ್ಟ್ ಆಗಿ ಊರಿಗೆ ಬಂದಿದ್ದ ಯಾರೋ ಅವನ ಫ್ರೆಂಡ್ ಮತ್ತೆ ಬೆಂಗಳೂರಿಗೆ ಹೋಗಬೇಕು ಏನೋ ತರಬೇಕು ಅಂತ ಇವನ್ನ ಕರೆದಿದ್ದಕ್ಕೆ ಮತ್ತೆ ಅವನ ಜೊತೆ ಹೋಗಿದ್ದಾನೆ. ಹೋಗುವಾಗ ದೀದಿ ಗೆ ವಾಪಾಸ್ ಮನೆಗೆ ಬರೋ ಯೋಚನೆ ಇರಲಿಲ್ಲ ಅನ್ಸುತ್ತೆ ನಮ್ಮನ್ನೆಲ್ಲ ಬಿಟ್ಟು ಹೋದ. ಆದರೆ ಅವನ ಜಂಭ ಅವನ ದರ್ಪ ಇವೆಲ್ಲ ನನಗೆ ಮಾತ್ರ ಅಲ್ಲ ನಮ್ಮ ಗೆಳೆಯರ ಗುಂಪಿನಲ್ಲಿ ಯಾರು ಸಹ ಮರೆಯಲು ಸಾಧ್ಯವೇ ಇಲ್ಲ. ನನಗೆ ಮಾತ್ರವಲ್ಲ ಪ್ರತಿಯೊಬ್ಬ ವ್ಯಕ್ತಿಗೂ ಈ ರೀತಿ ಅನುಭವಗಳು ಆಗಿರುತ್ತದೆ ಎನ್ನುವುದು ನನ್ನ ನಂಬಿಕೆ. ಈಗಲೂ ಅವರ ಮನೆ ಮುಂದೆ ಓಡಾಡುವಾಗ, ನಮ್ಮ ಮಾಮೂಲಿ ಅಡ್ಡದಲ್ಲಿ ಕೂತು ಹರಟೆ ಹೊಡೆಯುವಾಗ, ಕ್ರಿಕೆಟ್ ಆಡುವಾಗ, ಯಾರಾದ್ರು ಅವನದೇ ರೀತಿಯ ಹುಡುಗರನ್ನ ನೋಡಿದಾಗ ಅವನು ನೆನಪಾಗ್ತಾನೆ. ದೀದಿಯ ನೆನೆಪು ಮಾಸದ ನೆನಪಾಗಿ ನನ್ನಎದೆಯಲ್ಲಿ ಕೊಂಚ ಜಾಗವನ್ನು ಆಕ್ರಮಿಸಿಕೊಂಡಿದೆ. ಈ ರೀತಿಯ ನೆನಪುಗಳು ನಿಮ್ಮ ಮನದಲ್ಲೂ ಉಳಿದಿರಬಹುದು ಅಲ್ಲವೇ ಗೆಳೆಯರೇ
ಗೆಳೆತನವೆ ಸಿರಿತನ ಪವನ್ :-
********************************************
ಚಿತ್ರಕೃಪೆ: itijain.blogspot.com
ಪವನ್ ನಿಮ್ಮ ನಿರೂಪಣಾ ಶೈಲಿ ಚೆನ್ನಾಗಿದೆ.ಅಂದರೆ ನಿಮ್ಮ ಬರವಣಿಗೆ ಪ್ರಬುದ್ಧ ಪಥದತ್ತ ಸಾಗುತ್ತಿದೆ . ನಿಮಗೆ ಶುಭವಾಗಲಿ.
Nice Pavan, ನೆನಪನ್ನೆಲ್ಲ ಕೆದಕಿ ಚೆನ್ನಾಗಿ ಗುಡ್ಡೆಹಾಕಿದ್ದೀಯ. ನಿರೂಪಣೆ ಚೆನ್ನಾಗಿದೆ