ವಿಷಯದ ವಿವರಗಳಿಗೆ ದಾಟಿರಿ

Archive for

22
ಜೂನ್

ಮಾಸದ ನೆನಪುಗಳು

ಪವನ್ ಪರುಪತ್ತೇದಾರ್ 

ಜೀವನದಲ್ಲಿ ಕೆಲೊವಂದು ಸರಿ ಬಹಳ ವಸ್ತುಗಳನ್ನು ಕಳೆದುಕೊಳ್ತಿವಿ, ಬೆಂಗಳೂರಿನ ಲೋಕಲ್ ಬಸ್ ನಲ್ಲಿ ಓಡಾಡೋವಾಗ ಪ್ರತಿ ದಿನ ಒಬ್ಬರಲ್ಲ ಒಬ್ಬರು ಮೊಬೈಲ್ ಫೋನ್ ಕಳೆದುಕೊಳ್ತಾನೆ ಇರ್ತಾರೆ. ನನ್ ಸ್ನೇಹಿತ ಒಬ್ಬ ಹೇಗೆ ಮೊಬೈಲ್ ಕಳಕೊಂಡು ಕಳ್ಳನ್ನ ಹಿಡಿಯೋಕೆ ಹೋಗಿ, ಅವರ ಹತ್ರ ಒದೆ ತಿಂದು ಬಂದಿರೋದು ಆಗಿದೆ. ಆ ಮೊಬೈಲ್ ನ ನೆನಪು ಅವನನ್ನ 15 ದಿನ ಕಾಡಿರ್ಬೋದು, ಆ ಒದೆ ತಿಂದ ನೋವು 2 ತಿಂಗಳು ಕಾಡಿರಬಹುದು ಆದ್ರೆ ಅ ಮೊಬೈಲ್ ಜಾಗದಲ್ಲಿ ತನಗಿಷ್ಟ ಅದವರನ್ನ ಕಳೆದು ಕೊಂಡರೆ ಎಷ್ಟು ಕಾಡುತ್ತೆ ಅಲ್ವಾ?? ನನ್ನ ಈ ಬರಹದಲ್ಲಿ ನನ್ನ ಆ ರೀತಿ  ಕಾಡುತ್ತಿರುವ ಮಾಸದ  ಒಂದು ನೆನಪಿನ ಬಗ್ಗೆ ಬರೀತಿದಿನಿ

        ನಾನು ಪಿ ಯು ಸಿ ಓದ್ತಾ ಇದ್ದೆ ಆಗ, ನಮ್ಮೂರಿಂದ  ಬೆಂಗಳೂರಿನ ಕಾಲೇಜ್ ಗೆ 1 ಘಂಟೆ ಪ್ರಯಾಣ,  ನಮ್ಮೂರಿಂದ ತುಂಬಾ ವಿದ್ಯಾರ್ಥಿಗಳು  ಬರ್ತಾ ಇದ್ರು ಎಲ್ರು ಜೊತೆಯಾಗಿ ಬಸ್ ಅಲ್ಲಿ ಮಜಾ ಮಾಡ್ಕೊತ ಒಬ್ಬರನ್ನೊಬ್ಬರು ರೇಗಿಸ್ತ ತುಂಬಾ ಖುಶಿಯಾಗಿ ಟ್ರಾವೆಲ್ ಮಾಡ್ತಾ ಇದ್ವಿ , ನಮ್ batch ನಲ್ಲೆ ಆನಂದ್ ಎಂಬ ಹುಡುಗ ನಮ್ಮುರೋನೆ ಎಲ್ಲರು ಪ್ರೀತಿಯಿಂದ ದೀದಿ ಅಂತ ಕರಿತ ಇದ್ವಿ . ಅವನು ಒಂತರ ವಿಚಿತ್ರ ಹುಡುಗ 100 ರು ಖರ್ಚು ಮಾಡಿದ್ರೆ 1000 ಅಂತಿದ್ದ 25 ಕೆ 15 ಮಾರ್ಕ್ಸ್ ಬಂದಿದ್ರೆ 23 ಅಥವಾ 24 ಅಂತಿದ್ದ.  ತುಂಬಾ ಹೇಳ್ಕೊಳೋ ಸ್ವಭಾವದ ಹುಡುಗ ಆದ್ರೆ ಅವ್ನು ಯಾವತ್ತು ಒಬ್ರನ್ನ ನೋಯಿಸ್ಬೇಕು ಅನ್ಕೊಂಡಿರಲ್ಲ ನೋಯಿಸ್ತನು ಇರ್ಲಿಲ್ಲ ಇನ್ನೂ ನಾವೇ ಎಲ್ಲ ಸೇರ್ಕೊಂಡು ಅವನ್ನ ಅವನ ಕೊಚ್ಚಿಕೊಳೊ ಸ್ವಾಭಾವಗಳನ್ನ ತೊಗೊಂಡು ರೆಗಿಸ್ತ ಇದ್ವಿ ಇವನನ್ನ ಪ್ರೀತಿಯಿಂದ ದೀದಿ ಅಂತ ಕರಿತ ಇದ್ವಿ .. ಮತ್ತಷ್ಟು ಓದು »
22
ಜೂನ್

ನಮ್ಮ ಹಾಗೂ ನಮ್ಮಪ್ಪನ ನಡುವಿನ ಭಿನ್ನಾಭಿಪ್ರಾಯಗಳು…

ಸತ್ಯಚರಣ್ ಎಸ್.ಎಂ

ಸ್ನೇಹಿತರೇ. ಮೊನ್ನೆ ಮೊನ್ನೆ ಆಂಗ್ಲರಿಂದ ಆಮದು ಮಾಡಿಕೊಂಡ “Father’s Day” ನಡೆಯಿತಲ್ವೇ.. ಆ ಸಂದರ್ಭಕ್ಕೆ ನನಗೆ ನನ್ನ ಈ ಕೆಳಗಿನ ಬರಹ ಹಿಂದೆ ಬರೆದದ್ದು ನೆನಪಾಗಿ, ಮತ್ತೆ ನಿಮ್ಮ ಮುಂದೆ ಇಡೋಣ ಅಂತನಿಸಿ, ಇಲ್ಲಿ ಇಡುವಂತಾಯ್ತು.. ಹೆಚ್ಚಿಗೆ ಬದಲಾಯಿಸದೇ, ಅಂದು ಬರೆದದನ್ನ ಹಾಗೇ ಇಡುತ್ತಿದ್ದೇನೆ.. 🙂

ಇದೊಂತರ ವಿಚಿತ್ರ “ವಿಷಯ” ಚರ್ಚೆಗೋಸ್ಕರ ಆದ್ರೆ.. ಅಂತ ಅನಿಸುತ್ತದೆ ನನ್ನ ಮನಸ್ಸಿಗೆ..
ಪ್ರಪಂಚದ ಬುಧ್ಧಿವಂತರೆಲ್ಲಾ ಒಂದು ತರಹದ ಉತ್ತರ ನೀಡಿದರೆ ಹೃದಯವಂತರೆಲ್ಲಾ ಇನ್ನೊಂದು ತರಹ ಮಾತಾಡುತ್ತಾರೆ ಈ ವಿಷಯದಲ್ಲಿ.

ಹ..ಹಾ.. ನಾನು ಯಾವ ಗುಂಪಿಗೆ ಸೇರುತ್ತೇನೋ ಗೊತ್ತಿಲ್ಲ… ಆದರೆ, ನನ್ನ ಮನಸ್ಸಿನಲ್ಲಿರೋ, ಮನಸ್ಸಿಗೆ ಹಿಂದೆ ಬಂದಿದ್ದ ಯೋಚನೆಗಳೆಲ್ಲ ಒಂದೆಡೆ ಹಾಕಿ, ಅದರ ಸಾರ ತೆಗೆಯೋ ಪ್ರಯತ್ನ ಇದು ಅನ್ಕೋತೀನಿ.. ಮುಂದಿನ ದಿನಗಳಲ್ಲಿ ನನ್ನ ವಿಚಾರಧಾರೆ ಯಾವ ದಿಕ್ಕಿನಲ್ಲಿ ಹರಿಯುತ್ತೋ ಗೊತ್ತಿಲ್ಲ.. ಸದ್ಯದ್ದು ಏನಿದೆಯೋ ಅದನ್ನು ನಿಮ್ಮ ಮುಂದೆ ಇಡ್ತಾ ಇದ್ದೇನೆ.. ಮತ್ತಷ್ಟು ಓದು »

21
ಜೂನ್

“ಪ.ಗೋ. ಕಾಲಂ” ಜಗತ್ತಿನಲ್ಲಿ ಪತ್ರಕರ್ತನಿಗೊಂದು “ಸರ್ಟಿಫಿಕೇಟ್”

-ರವಿ ಮುರ್ನಾಡು

  ಪ.ಗೋ. ಜಗತ್ತಿನ ಪದಗಳ  ಹಂದರದಲ್ಲಿ ಒಬ್ಬ ” ವಿಲನ್‍” ಸೃಷ್ಠಿಯಾಗುತ್ತಾನೆ . ಅವನನ್ನು ಬುದ್ಧಿವಂತ ಹುಚ್ಚ ಅನ್ನುತ್ತೇವೆ. ಅದು ಕೊಡಿಯಾಲ್‍ ಬೈಲ್‍ ನವಭಾರತ ಪತ್ರಿಕೆಯಿದ್ದಾಗ ಪತ್ರಿಕಾ ಪ್ರಸರಣಾ ವಿಭಾಗದ ಮುಖ್ಯಸ್ಥ ಕಾಮತ್‍. ಅದಕ್ಕೆ ದಿವಂಗತ ಪ.ಗೋ.ರವರು “ಹಿತ್ತಾಳೆ ದೂರುಗಂಟೆ” ಅಂತ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ತಮ್ಮ ” ವಿಚಿತ್ರ ಸೃಷ್ಠಿಯ ಲೋಕದಲ್ಲಿ ಮತ್ತು ಅಂಕಣ ಬರಹಗಳು” ಸಂಕಲನದಲ್ಲಿ  ಹಿತ್ತಾಳೆ ದೂರುಗಂಟೆಯ ಪಾತ್ರಧಾರಿ  ವಿಲಕ್ಷಣವಾಗಿ ಎದ್ದು ನಿಲ್ಲುವಂತದ್ದು. ಹೀಗೂ ಉಂಟೆ…?! ಅನ್ನುವ ಒಂದು ಪ್ರಶ್ನೆ. ಪತ್ರಿಕಾ ಕಾರ್ಯಾಲಯದಲ್ಲಿ ಅಚಾನಕ್ಕಾಗಿ ಸೃಷ್ಠಿಯಾಗುತ್ತವೆ, ಇಲ್ಲದಿದ್ದರೆ ಸೃಷ್ಠಿಸುತ್ತಾರೆ . ಎಲ್ಲಾ  ಖಾಸಾಗಿ ಸಂಸ್ಥೆಯಲ್ಲಿ  ಇಂತಹ “ಶಕುನಿ”ಗೊಂದು ಹುದ್ದೆ ಉಂಟೇ ಉಂಟು. ಪ.ಗೋ.ರವರು ಮೌನವಾಗಿ ನವಭಾರತ ಕಚೇರಿ ಬಿಟ್ಟು ಹೋದಾಗ, ಕಚೇರಿಯ ಬಾಗಿಲಿಗೆ ತುಕ್ಕು ಹಿಡಿಯಬಾರದಿತ್ತೋ ಆನ್ನಿಸಿತು. ಬದುಕಿನ ಗೋಡೆ ಬಿರುಕಿಟ್ಟ ಸನ್ನಿವೇಶಕ್ಕೆ, ಪತ್ರಿಕಾ ಬದುಕಿಗೆ ಛೀಮಾರಿ ಹಾಕುವಷ್ಟು ವ್ಯಥೆಯಾಗುವಂತದ್ದು.

ಇವತ್ತಿಗೂ ಮಾತಾಡುತ್ತಿದೆ…. ಮನುಷ್ಯ ಬದುಕಿಗೆ  ಸವಾಲು ಹಾಕಿದ ಮಾತು.  “ನಾನು ಪತ್ರಿಕೆ ಹುಟ್ಟು ಹಾಕುವ ಕನಸು ಕಂಡಿದ್ದು ತಪ್ಪಾಯಿತು..!” ಅಂತ. ಬದುಕಿನ ಸ್ಥಿತ್ಯಂತರದಲ್ಲಿ ಒಮ್ಮೊಮ್ಮೆ ಕನಸುಗಳು ಈಟಿ ಇರಿದಂತೆ ಅಣಕಿಸುತ್ತವೆ. ಮಂಗಳೂರಿನ ಕಡಲ ಮರಳ ಕಣಗಳಿಗೆ ಇದರ ಪರಿಚಯ ಉಂಟು. ಅಲೆಗಳು ದಡಕ್ಕೆ ಬಡಿದು ಎಚ್ಚರಿಸಿ ಹೋಗುತ್ತಿವೆ… ಆ ಒಂದು ಜಗತ್ತಿನ ವಿಸ್ತಾರದಲ್ಲಿ ಜೀವನದ ಸಾರ್ಥಕ್ಯಕ್ಕೆ  ಮನಸ್ಸುಗಳು ತೆರೆದುಕೊಳ್ಳಲಿಲ್ಲ . ಪಡ್ಯಾನ ಗೋಪಾಲಕೃಷ್ಣರ  ರೆಕ್ಕೆ ಮುರಿದ ಮಾತುಗಳ ಹಕ್ಕಿಯ ಕಲರವ ಕೇಳಿಸುತ್ತಲೇ ಇದೆ…. ಕನಸುಗಳ ಮೂಟೆ ಹೊತ್ತ ದೋಣಿ ಕಡಲ ಮಧ್ಯದಲ್ಲಿ ಈಜುತ್ತಿದೆ….! ಮತ್ತಷ್ಟು ಓದು »

21
ಜೂನ್

ಜಾತಿ ಎಂಬ ಜಾಡ ಹಿಡಿದು…

– ವಸಂತ್ ಕೋಡಿಹಳ್ಳೀ ಲಕ್ಕೂರು

ಮನುಷ್ಯ ಹುಟ್ಟುತ್ತಾ ಹುಟ್ಟುತ್ತಾ ಸ್ವಾತಂತ್ರ ಜೀವಿ!, ಅವನು ಬೆಳೆದಂತೆಲ್ಲ ಸಮಾಜದ ಕಟ್ಟುಪಾಡುಗಳು ಅವನ ಸ್ವಾತಂತ್ರವನ್ನು ಕಸಿದುಕೊಳ್ಳುತ್ತಾ ಬರುತ್ತದೆ. ಕರ್ನಾಟಕದ ಶ್ರೇಷ್ಟ ಕವಿ ಕುಂವೆಂಪುರವರು ತನ್ನ ವಿಶ್ವಮಾನವ ಸಂದೇಶದಲ್ಲಿ ಹೀಗೆ ಹೇಳುತ್ತಾರೆ. “ಪ್ರತಿಯೊಂದು ಮಗುವೂ ಹುಟ್ಟುತ್ತಲೆ ವಿಶ್ವಮಾನವ. ಬೆಳೆದಂತೆ ನಾವು ಅದನ್ನು ‘ಅಲ್ಪಮಾನವ’ನನ್ನಾಗಿ ಮಾಡುತ್ತೇವೆ. ಎಂದರೆ ಹುಟ್ಟುವಾಗ ಎಲ್ಲರೂ ವಿಶ್ವಮಾನವರಾಗಿಯೇ ಹುಟ್ಟುತ್ತಾರೆ. ಬೆಳೆದಂತೆ ನಾವು ಅವರನ್ನು ಜಾತಿ, ಧರ್ಮ, ಬಾಷೆ, ದೇಶ, ಜನಾಂಗ ಎಂಬಲ್ಲ ಕಟ್ಟು ಪಾಡುಗಳಿಂದ ಬಂಧಿಸುತ್ತೇವೆ. ಬಹುಶಃ ಅವನು ಹುಟ್ಟಿದ ಸಮಜ ಅವನನ್ನು ಅಲ್ಪನನ್ನಾಗಿಸುತ್ತದೆ. ಇಲ್ಲಿ ‘ಸಮಾಜ’ವೆಂಬುದು ಮನುಷ್ಯ ಕಳಂಕವಲ್ಲವೇ

ಸರಿ ನಾನು ಕವಲುದಾರಿಗಳಲ್ಲಿ ಸಾಗಿ ಮನುಷ್ಯನ ನಿಗೂಢ ಜಾಡು ಹಿಡಿದು. ಅವನ ಕೆಲವು ಪದರುಗಳನ್ನು ಇಲ್ಲಿ ಮಂಡಿಸಲು ಪ್ರಯತ್ನಿಸುತ್ತೇನೆ. ಕುವೆಂಪುರವರು ಒಂದು ಜನಾಂಗ ಮತ್ತೊಂದು ಜನಾಂಗವನ್ನು ಮೆಟ್ಟಿ ತುಳಿಯುವುದು ವಿರಾಟ್ ಶಕ್ತಿ, ವಿರೋಧಿ ಕೃತ್ಯ, ಹೇಡಿತನ ಎಂದು ಬಣ್ಣಿಸುತ್ತಾರೆ. ಸಮಾಜದ ನೆರಳಿನಲ್ಲಿ ನಮ್ಮ ಬೆಳವಣಿಗೆಗಾಗಿ ತಮ್ಮ ಜೀವನದ ಮೌಲ್ಯಗಳನ್ನು ಸರಿದೂಗಿಸುವ ನೆಪದಲ್ಲಿ “ಜಾತಿ, ಬಾಷೆ, ಸಂಸ್ಕೃತಿಗಳ ಮೊರೆ ಹೋಗುವುದಂತೂ ಸರಿ ?. ಅಂದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬಂತೆ ವಿಂಗಡಿಸಿ ಉನ್ನತವಾದ ಸ್ತಾನಗಳನ್ನು ಮೇಲಿನ ಮೂರೂ ವರ್ಗದವರು ಪಡೆದುಕೊಂಡು ಶೂದ್ರರನ್ನು ಇಂದಿಗೂ ತುಳಿಯುತ್ತಾ ಶೋಷಣೆ ಗೈಯುವುದು ಯಾವ ನ್ಯಾಯ ? ಮತ್ತಷ್ಟು ಓದು »

20
ಜೂನ್

ಇದರ ಕತೆ ಇಷ್ಟೇ ಕಣಪ್ಪೋ….

ಉಮೇಶ್ ದೇಸಾಯಿ

ಹೌದು ಆ ಕತೆಬರೆದವ ಸಹ ಈ ತಿರುವು ಊಹಿಸಿರಲಿಕ್ಕಿಲ್ಲ. ನಾವು ಆರಿಸಿ ಕಳಿಸಿದ ಪಕ್ಷ ಅದರ ಮುಖಂಡ ಇಂದು ಆಣೆ ಪ್ರಮಾಣ ಮಾಡುತ್ತಾರಂತೆ ಅವರ ಹಿಂದಿನ ಸಿಎಮ್ಮು..

 ಅವರ ಪಂಥಾಹ್ವಾನ ಸ್ವೀಕರಿಸಿ ಧರ್ಮಸ್ಥಳದಲ್ಲಿ ಒಂದುದಿನ ಮೊದಲೇ ಹೋಗಿ  ತಯಾರಿಯಲ್ಲಿರುತ್ತಾರಂತೆ. ಈ ಬಿಜೆಪಿ ಸರಕಾರ ಏಳುತ್ತ ಬೀಳುತ್ತ ಮೂರು ವರ್ಷ ಕಳೆದಿದೆ. ಈಗ ಮಾಜಿ ಸಿಎಮ್ಮು ಈಗಿನ ಸಿಎಮ್ಮ ಬಗ್ಗೆ ಮೂರುವರ್ಷದಲ್ಲಿ ಮುನ್ನೂರು ಬಾರಿ ಅಪವಾದ ಹೊರಿಸಿ ದಾಖಲೆ ಬಿಡುಗಡೆ ಮಾಡಿದ್ದಾರೆ.
ಹಾಲಿ ನಮ್ಮ ಸಿಎಮ್ಮು ಅದಕ್ಕೆ ಪ್ರತ್ಯುತ್ತರವಾಗಿ ತಮ್ಮ ರಾಜಕೀಯ ಕಾರ್ಯದರ್ಶಿ ಮೂಲಕ ಮಾಜಿ ವಿರುಧ್ದ ಅನೇಕ ದಾಖಲೆ ಬಿಡುಗಡೆ ಮಾಡಿದಾರೆ. ಒಟ್ಟಿನಲ್ಲಿ ಈ ಮೂರುವರ್ಷದಲ್ಲಿ ನಾಡಿನಜನತೆಗೆ ಭರಪೂರ್ ಮನರಂಜನೆ ಕೊಟ್ಟಿದ್ದಾರೆ. ಈಗ ಕ್ಲೈಮಾಕ್ಸ್ ಹೊತ್ತು .
ಇಲ್ಲಿ ನಾಯಕರೂ ಇಲ್ಲ ಖಳರೂ ಇಲ್ಲ. ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಆಯುಧಗಳಿಗೆ ಅವಕಾಶ ಇಲ್ಲ. ಹೀಗಾಗಿ ಅಲ್ಲಿ ರಕ್ತಪಾತಕೆ ಆಸ್ಪದವಿಲ್ಲ. ಆದರೆ ದೇವರ ಸನ್ನಿಧಿಯಲ್ಲಿ ಸುಳ್ಳು ಹೇಳಿದರೆ/ಸುಳ್ಳು ಆಣೆ ಹಾಕಿದವ ರಕ್ತ ಕಾರಿಕೊಂಡು ಸಾಯುತ್ತಾನೆ ಅಂತ ಪ್ರತೀತಿ. ಈಗ ಈ ಹಾಲಿ ಅಥವಾ ಮಾಜಿ ಇಬ್ಬರಲ್ಲಿ ಒಬ್ಬರು ರಕ್ತಕಾರುವುದಂತೂ ನಿಕ್ಕಿ. ಮತ್ತಷ್ಟು ಓದು »
20
ಜೂನ್

ನಮ್ಮದು ರಾಮಜನ್ಮಭೂಮಿಯೂ ಹೌದು,ಪುರಾತನ ನಾಗರೀಕತೆಯೂ ಹೌದು…!

– ಕೆ.ಎಸ್ ರಾಘವೇಂದ್ರ ನಾವಡ

ಇದು ಬಹಳ ಆಸಕ್ತಿದಾಯಕವಾದ ಸಾಧಾರಸಹಿತವಾದ ಬರಹ. ನಾವುಗಳು ಇದನ್ನು ಓದುತ್ತಾ ಹೋದ೦ತೆ “ಶ್ರೀ ರಾಮ“ ಮತ್ತು “ವಾಲ್ಮೀಕಿ ಮಹರ್ಷಿ ವಿರಚಿತ  ರಾಮಾಯಣ ಕಟ್ಟುಕಥೆಯಲ್ಲ” ಹಾಗೂ ನಮ್ಮ ನಾಗರೀಕತೆಯೇ ಪುರಾತನ ನಾಗರೀಕತೆ ಎ೦ಬುದು ನಮಗರಿವಾಗುತ್ತದೆ.ಈ ಲೇಖನದಲ್ಲಿ ವೈಜ್ಞಾನಿಕವಾಗಿ ಅದನ್ನು ಸಾದರ ಪಡಿಸಲು ಪ್ರಯತ್ನಿಸಿದ್ದೇನೆ. ನಾಸಾದವರು ತಿಳಿಸಿದ೦ತೆ, ಶ್ರೀ ರಾಮ ಜನಿಸಿದ್ದನೇ? ಶ್ರೀ ರಾಮಾಯಣ ನಡೆದಿತ್ತೇ ಎನ್ನುವ ಪ್ರಶ್ನೆಗಳಿಗೆ ಈ ಲೇಖನ ಅತ್ಯುತ್ತಮ ಹಾಗೂ ನ೦ಬಲರ್ಹವಾದ ದಾಖಲೆ.

ಮಹರ್ಷಿ ವಾಲ್ಮೀಕಿಗಳು ಶ್ರೀರಾಮನು ಅಯೋಧ್ಯೆಯ ರಾಜನಾಗಿ ಪಟ್ಟಾಭಿಷೇಕದ ನ೦ತರ ಮೊದಲ ಬಾರಿಗೆ  ಶ್ರೀರಾಮಾಯಣವನ್ನು ಬರೆದರೆ೦ಬುದು ನಮಗೆ ತಿಳಿದ ವಿಷಯ.ಆದ್ದರಿ೦ದ ಇದೇ ಮೂಲ ರಾಮಾಯಣ.ಮಹರ್ಷಿ ವಾಲ್ಮೀಕಿಗಳು ಮಹಾ ಜ್ಯೋತಿಷಿಗಳಾಗಿದ್ದರು. ಅವರು ರಾಮಾಯಣದ ಮಹತ್ತರ ದಿನಗಳ ಬಗ್ಗೆ ಆ ದಿನಗಳಲ್ಲಿ ಗ್ರಹ ಹಾಗೂ ನಕ್ಷತ್ರಗಳು ಯಾವ ಯಾವ ಮನೆಗಳಲ್ಲಿದ್ದವು ಎ೦ಬುದರ ಸಮೇತ ವಿವರಿಸುತ್ತಾರೆ. ಪ್ರತಿ ದಿನವೂ ಗ್ರಹಗತಿಗಳು ಬದಲಾಗುತ್ತಿರುತ್ತವೆ ಎ೦ಬುದು ನಮಗೆ ವೇದ್ಯವಿರುವ ವಿಚಾರ.“ಪ್ಲಾನೆಟರಿಯಮ್“ ಎನ್ನುವ ಸಾಫ್ಟ್ ವೇರ್ ನಲ್ಲಿ ಮಹರ್ಷಿ ವಾಲ್ಮೀಕಿ  ಹೆಸರಿಸಿರುವ  ಗ್ರಹಗತಿಗಳನ್ನು ಬರೆಯುವುದರ ಮೂಲಕ ಅದಕ್ಕೆ ಸರಿಯಾದ ಆ೦ಗ್ಲ ವಾರ್ಷಿಕ ದಿನಗಳನ್ನು ಪಡೆಯಬಹುದು. ಇದನ್ನು ನಾಸಾದವರು ಸಿಧ್ಢಪಡಿಸಿದ್ದಾರೆ.

ಭಾರತೀಯ ಕ೦ದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಪುಷ್ಕರ್ ಭಟ್ನಾಗರ್ ಈ ಸಾಫ್ಟ್ ವೇರ್ ಅನ್ನು ಯು.ಎಸ್. ನಿ೦ದ ಪಡೆದುಕೊ೦ಡರು. ಇದನ್ನು ಸೂರ್ಯಗ್ರಹಣ, ಚ೦ದ್ರಗ್ರಹಣ ಹಾಗೂ ಭೂಮಿಯಿ೦ದ ಇತರೆ ಗ್ರಹಗಳಿರುವ ದೂರವನ್ನು ಲೆಕ್ಕ ಹಾಕಲು ಬಳಸುತ್ತಿದ್ದರು.ಭಟ್ನಾಗರ್ ಅವರು ಅದರಲ್ಲಿ ಮಹರ್ಷಿ ವಾಲ್ಮೀಕಿ ಬರೆದಿರುವ ಎಲ್ಲಾ ಗ್ರಹಗಳ ಮಾಹಿತಿಗಳನ್ನು ಆಯಾ ದಿನಗಳಿಗೆ ಸ೦ಬ೦ಧಿಸಿದ೦ತೆ ನೀಡಲಾಗಿ, ಅದರಿ೦ದ ಮಹತ್ತರವಾದ ಹಾಗೂ ಉತ್ತಮ ಫಲಿತಾ೦ಶವನ್ನು ಪಡೆದರು. ಬಹುತೇಕವಾಗಿ ಶ್ರೀ ರಾಮನ ಜನನದಿ೦ದ ಹಾಗೂ ಅವನು ವನವಾಸವನ್ನು ಪೂರೈಸಿ ಅಯೋಧ್ಯೆಗೆ ಮರಳಿ ಬರುವವರೆಗಿನ ಎಲ್ಲಾ ಮಾಹಿತಿಗಳನ್ನು ಆ೦ಗ್ಲ ವಾರ್ಷಿಕ ದಿನಾ೦ಕದ೦ತೆ ಪಡೆದರು.
ಮತ್ತಷ್ಟು ಓದು »

20
ಜೂನ್

‘ಅನ್ಯಾಯ’ದ ಮನೆಯೊಳಗಿನ ಆಶಾಕಿರಣ.

– ಚಿತ್ರಾ ಸಂತೋಷ್

ದೆಹಲಿಯ ಜಿ.ಬಿ. ರಸ್ತೆಯಲ್ಲಿ ನನ್ನ ಪುಟ್ಟ ವಯಸ್ಸು, ಬದುಕು ಮೂರಾಬಟ್ಟೆಯಾಯಿತು ಅನಿಸಿತ್ತು. ನನ್ನ ವಿರುದ್ಧ ನಡೆಯುತ್ತಿರುವ ಅನ್ಯಾಯಗಳಿಗೆ ನನಗೆ ದನಿಯೆತ್ತಲೂ ನನ್ನ ಜೊತೆ ಯಾರಿರಲಿಲ್ಲ. ಆ ‘ಅನ್ಯಾಯ’ದ ಮನೆಯೊಳಗೆ ಪ್ರತಿ ನಿಮಿಷವೂ ನನ್ನ ಮೇಲೆ ಅಮಾನುಷವಾಗಿ ಅತ್ಯಾಚಾರ ನಡೆಯುತ್ತಿತ್ತು. ಐದು ವರ್ಷ ಆ ‘ಸೆರೆಮನೆ’ ಅನುಭವಿಸಿದೆ.
ಅಮ್ಮ ಅಂದ್ರೆ ನನಗೆ ತುಂಬಾ ಪ್ರೀತಿ. ಅವಳಿಗೆ ಒಂದಿಷ್ಟು ನೋವಾದರೂ ಮನಸ್ಸು ಸಹಿಸುತ್ತಿರಲಿಲ್ಲ. ಕೆಲವೊಮ್ಮೆ ಅಮ್ಮ ಮನೆಯಲ್ಲಿದ್ದ ಕಷ್ಟಗಳನ್ನು ನೆನೆದು ಅಳುತ್ತಿದ್ದಳು. ತುಂಬಾ ಸಲ ಅಮ್ಮ ಅಳುವುದನ್ನು ನೋಡಿ ನಾನೂ ಕಣ್ಣೀರಾಗುತ್ತಿದ್ದೆ. ತಲೆಗೆ ಸೆರಗು ಹೊದ್ದು ಅಳುವ ಅವಳನ್ನು ನೋಡಲಾಗದೆ ಸಮಾಧಾನಿಸುತ್ತಿದ್ದೆ. ಬದುಕು ಬರಿದಲ್ಲ, ಅಮ್ಮ ದೊಡ್ಡವಳಾದ ಮೇಲೆ ನಾ ನಿನ್ನ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಭರವಸೆ ತುಂಬುತ್ತಿದ್ದೆ. ಕೆಲವೊಮ್ಮೆ ನನಗೆ ದಿನನಿತ್ಯದ ಶಾಲೆಯ ಖರ್ಚು ಭರಿಸಲೂ ಕಷ್ಟವಾಗುತ್ತಿತ್ತು. ಆದರೂ, ಸಂಜೆ ಶಾಲೆಯಿಂದ ಹೊರಟಾಗ ಅಮ್ಮ ಏನು ತಿಂಡಿ ಮಾಡಿಟ್ಟಿರುತ್ತಾಳೆ ಅಂದುಕೊಂಡೇ ಹೊರಡುತ್ತಿದ್ದೆ.ಸಂಜೆಯಾಗುತ್ತಿದ್ದಂತೆ ಮನಸ್ಸೆಲ್ಲಾ ಮನೆಯಲ್ಲಿರುತ್ತಿತ್ತು. ಅಮ್ಮನ ನೋಡುವ ತವಕವಿತ್ತು. ಅಂದು ಸಂಜೆ ಎಂದಿನಂತೆ ಶಾಲೆಯಿಂದ ಹೊರಟಿದ್ದೆ. ಸುಮಾರು ಐದು ಗಂಟೆ. ಸೂರ್ಯ ಮುಳುಗಲು ಇನ್ನೂ ಕೆಲ ಸಮಯವಿತ್ತು. 

 

 

 

ನನ್ನ ಬೆಲೆ ೩೦೦ ರೂ!
ಅಮ್ಮ ಜಗುಲಿ ಮೇಲೆ ಕುಳಿತಿದ್ದಳು. ನನಗೆ ಅಮ್ಮನ ಕಾಣುವ ಹಂಬಲ, ಅವಳಿಗೆ ಮಗಳನ್ನು ಕಾಣುವ ವಾತ್ಸಲ್ಯ. ನನ್ನನ್ನೇ ಎದುರು ನೋಡುತ್ತಿದ್ದ ಆಕೆಯ ಮುಖದಲ್ಲಿ ನಾನು ಗೇಟು ದಾಟಿ ಹೋಗುತ್ತಿದ್ದಂತೆ ನಗು ಅರಳಿತು. ‘ಬಾ ಮಗಳೇ’ ಎಂದು ತೆಕ್ಕೆಗೆಳೆದುಕೊಂಡಳು. ಸೂರ್ಯ ಮುಳುಗಲು ಕ್ಷಣಗಳನ್ನು ಎಣಿಸುತ್ತಿದ್ದ. ಅಮ್ಮನೆದುರು ಕುಳಿತ ವ್ಯಕ್ತಿಯ ಹೆಸರು ಪ್ರವೀಣ್ ಪಂಡಿತ್. ಹೆಸರಷ್ಟೇ ಗೊತ್ತಿತ್ತು. ಅಮ್ಮ ಅವನ ಜೊತೆ ಅಷ್ಟು ಕೊಡು, ಇಷ್ಟು ಕೊಡು ಎಂದು ಚೌಕಾಸಿ ಮಾಡುತ್ತಿದ್ದಳು. ನನಗೊಂದೂ ಅರ್ಥವಾಗಲಿಲ್ಲ. ಅಮ್ಮ ಹೇಳಿದ ದುಡ್ಡಿಗೆ ಆತ ಒಪ್ಪಲೇ ಇಲ್ಲ. ಕೊನೆಗೆ ೩೦೦ ರೂ. ಕೊಡುತ್ತೇನೆ ಅಂದ. ಅಮ್ಮ ಒಪ್ಪಿಕೊಂಡು, “ಮಗಳೇ ನೀನು ಅಂಕಲ್ ಜೊತೆ ದೆಹಲಿಗೆ ಹೋಗಬೇಕು” ಎಂದು ಹೇಳಿದಳು.

ಮತ್ತಷ್ಟು ಓದು »

19
ಜೂನ್

ಕನ್ನಡ ಪರ ದನಿಯೆತ್ತಿದರೆ ತಾಲಿಬಾನಿಗಳಾ!?

(ಮಾತೃ ಭಾಷೆಗೆ ಅಪಮಾನಕಾರಿ ಹೇಳಿಕೆ ನೀಡಿದ ವಲಸಿಗರ ಬೆನ್ನು ಬಿದ್ದಿದ್ದಕ್ಕೆ ಕನ್ನಡ ಅಭಿಮಾನಿಗಳಿಗೆ ಸಿಕ್ಕ ಬಿರುದು ’ಇಂಟರ್ನೆಟ್ ತಾಲಿಬಾನಿಗಳು’ ,ಮತ್ತು ಅದನ್ನ ದಯಪಾಲಿಸಿದ್ದು ಕ್ಷ-ಕಿರಣ ಅನ್ನುವ ಬ್ಲಾಗು.ಮಾತೃ ಭಾಷೆಯ ಮಹತ್ವದ ಮತ್ತು ಆ ವಿಷಯದ ಅರಿವಿಲ್ಲದೆ ಬರೆಯುವವರ ಮೇಲೆ ನಿಲುಮೆಗೆ ಅನುಕಂಪವಿದೆ.ಆ ಬರಹಕ್ಕೆ ಹೊಳೆನರಸೀಪುರ ಮಂಜುನಾಥ್ ಅವರ ಉತ್ತರ ಇಲ್ಲಿದೆ – ನಿಲುಮೆ)

– ಹೊಳೆನರಸೀಪುರ ಮ೦ಜುನಾಥ. ಬೆ೦ಗಳೂರು.

ಸನ್ಮಾನ್ಯ ರಾಕೇಶ ಮಥಾಯಿಸ್, ತಮ್ಮ ಬ್ಲಾಗಿನಲ್ಲಿ ತಾವು ಬರೆದಿರುವ ಅಪ್ಪಟ ಕನ್ನಡಾಭಿಮಾನಿ ಬರಹಕ್ಕೆ ನನ್ನ ಪ್ರತ್ಯುತ್ತರ ಹೀಗಿದೆ ನೋಡಿರಿ.

“ನಾನೊಬ್ಬ ಮಾಧ್ಯಮದ ವಿಧ್ಯಾರ್ಥಿ. ನನ್ನ ಸುತ್ತಮುತ್ತ ಮಾಧ್ಯಮ ಪ್ರಪಂಚದಲ್ಲಿ ನಡೆಯುತ್ತಿರುವ ಜಾತೀಯತೆ, ಲಾಬಿ, ಭ್ರಷ್ಠಾಚಾರ ನೋಡಿ ಕರ್ನಾಟಕ ಮಾಧ್ಯಮ ಲೋಕದ ಮೇಲೆ ಕ್ಷಕಿರಣ ಬೀರುವ ಅಗತ್ಯವಿದೆಯೆಂದೆನಿಸಿ ಪುಟ್ಟ ಪ್ರಯತ್ನ. ಈ ಹಾದಿ ಸುಗಮವಲ್ಲವೆಂಬ ಅರಿವು ನನಗಿದೆ, ಆದರೆ ಹಿಂದಿನ ಕಟ್ಟಳೆ ಪದ್ಧತಿಗೊಳಗಾಗದೆ ಆಗಸವನ್ನೇ ತೆರೆದಿಟ್ಟಿರುವ ಇಂಟರ್ನೆಟ್ ಮಾಧ್ಯಮಕ್ಕೆ ನಾನು ಋಣಿಯಾಗಿದ್ದೇನೆ.” ಎ೦ದು ನಿಮ್ಮ ಪರಿಚಯದಲ್ಲಿ ಹೇಳಿಕೊ೦ಡಿರುವ ತಮ್ಮ ಕಣ್ಣಿಗೆ ಹೊರ ರಾಜ್ಯದವರು ಕನ್ನಡ ನೆಲ, ಜಲ, ಭಾಷೆಯ ಬಗ್ಗೆ ತಳೆದಿರುವ ನಿಲುವು, ತೋರಿಸುತ್ತಿರುವ ಅಸಡ್ಡೆ, ಇವರಿ೦ದಾಗಿ ಅವಕಾಶವ೦ಚಿತರಾಗುತ್ತಿರುವ ಅಸಹಾಯಕ ವಿದ್ಯಾವ೦ತ ಕನ್ನಡಿಗರು ಕಾಣಿಸಲಿಲ್ಲವೇ?  ಹೊರರಾಜ್ಯದವರು ಕರ್ನಾಟಕದಲ್ಲಿರಬೇಕಾದರೆ ಕನ್ನಡ ಕಲಿಯಲೇಬೇಕು ಎ೦ದಿದ್ದನ್ನು ಧೈರ್ಯವಾಗಿ ಫೇಸ್ ಬುಕ್ಕಿನ೦ತಹ ಸಾಮಾಜಿಕ ತಾಣದಲ್ಲಿ “ಫಕ್ ಆಫ್” ಎ೦ದಿದ್ದನ್ನು ವಿರೋದಿಸಿದವರು ತಮ್ಮ ಕಣ್ಣಿಗೆ “ಅ೦ತರ್ಜಾಲದ ತಾಲಿಬಾನಿಗಳು” ಎನ್ನುವ ರೀತಿಯಲ್ಲಿ ಕ೦ಡಿರುವುದು ತು೦ಬಾ ಆಶ್ಚರ್ಯಕರವಾಗಿದೆ.  ಹಾಗೆಯೇ ತಮ್ಮ ಬೌದ್ಧಿಕ ದಿವಾಳಿತನವನ್ನು ಎತ್ತಿ ತೋರಿಸುತ್ತಿದೆ ಎ೦ದು ಹೇಳಲು ವಿಷಾದವಾಗುತ್ತಿದೆ.

ಕರ್ನಾಟಕ ರಕ್ಷಣಾ ವೇದಿಕೆಯವರು ನಡೆಸಿದ ಕನ್ನಡಪರ ಹೋರಾಟಗಳನ್ನು “ಪು೦ಡಾಟಗಳು” ಅನ್ನುವಷ್ಟು ಪ್ರಬುದ್ಧರಾಗಿದ್ದೀರಲ್ಲ?  ತಾವು ಯಾವ ಮಾನದ೦ಡಗಳನ್ನು ಅನುಸರಿಸಿ ಈ ನಿರ್ಧಾರಕ್ಕೆ ಬ೦ದಿರುವಿರಿ ಎ೦ಬುದನ್ನೂ ವಿವರವಾಗಿ ಕನ್ನಡನಾಡಿನ ಜನತೆಗೆ ತಿಳಿಸುವ೦ಥವರಾಗಿ.  ಇದೇ ಪ್ರಕರಣ ಪಕ್ಕದ ತಮಿಳುನಾಡಿನಲ್ಲಿಯೋ, ಮಹಾರಾಷ್ಟ್ರದಲ್ಲಿಯೋ ನಡೆದಿದ್ದರೆ ಇಷ್ಟು ಹೊತ್ತಿಗೆ ಹಾಗೆ ಮಾತನಾಡಿದವರನ್ನು ಹೊಡೆದು ಓಡಿಸಿರುತ್ತಿದ್ದರು.
ಮತ್ತಷ್ಟು ಓದು »

19
ಜೂನ್

‘ಹೆಣ್ಣಾಗುವ’ ಒಂದು ಪ್ರಸಂಗ

– ಸಾತ್ವಿಕ್ ಎನ್.ವಿ.

ನನ್ನ ಮೊಬೈಲ್ ಗೊಂದು ಮಿಸ್ಡ್ ಕಾಲ್. ಇದು ಯಾರು ಎಂದು ಕೇಳಿ ರಿಪ್ಲೇ ಮಾಡಿದೆ. ತಕ್ಷಣವೇ ಅಲ್ಲಿಂದ ಶುರುವಾಯ್ತು ಮೆಸೇಜುಗಳ ಸುರಿಮಳೆ.

ನಮ್ಮ ನಡುವಿನ ಸಂಭಾಷಣೆಯನ್ನು ಹಾಗೆಯೇ ನೀಡಿದರೆ ಚೆನ್ನ.

‘ನೀವು ರಚನ್ ಅಲ್ವಾ? ‘
‘ಅಲ್ಲ, ನಾನು ರಚನ್ ಅಲ್ಲ’
‘ನಿಮ್ಮ ಹೆಸರು ಕೇಳಬಹುದೇ?’
‘ಕ್ಷಮಿಸಿ, ಗುರುತಿಲ್ಲದವರಿಗೆ ಪರಿಚಯ ಹೇಳಲಾರೆ’
‘ಪರಿಚಯಕ್ಕೇನು, ಮಾಡಿಕೊಂಡರಾಯಿತು. ನಾನು ಮನು. ೩ನೇ ಸೆಮ್ ಇ ಅಂಡ್ ಸಿ. ಊರು ಬೆಂಗಳೂರು, ನೀವು?’

ನಾನು ಈಗ ನಿಜಕ್ಕೂ ಸಂಕಟಕ್ಕೆ ಸಿಲುಕಿದೆ. ಹೀಗೆಯೆ ಎಷ್ಟೊ ಜನ ಮಿಸ್ ಕಾಲ್ ಗಳಿಂದ ಪರಿಚಿತರಾಗಿ ಗೆಳೆಯರಾಗಿರುವುದನ್ನು ಕೇಳಿದ್ದೆ. ಆದರೂ ನನ್ನ ನಿಜ ಪರಿಚಯ ಕೊಡಲು ಹಿಂಜರಿಕೆಯಾಯಿತು. ಇದು ಆತನಿಗೆ ಅರ್ಥವಾಯಿತೋ ಎಂಬಂತೆ ಆತನೇ ಮಾತು ಮುಂದುವರಿಸಿದ. ‘ಪರವಾಗಿಲ್ಲ, ನೀವು ಹುಡುಗನೋ, ಇಲ್ಲ ಹುಡುಗಿಯೋ’ ಎಂದು ಕೇಳಿದ.

ಮತ್ತಷ್ಟು ಓದು »

18
ಜೂನ್

ಹನಿ ಹನಿ ಮುತ್ತು..

-ಅಬ್ದುಲ್ ಸತ್ತಾರ್

 
ಅಂತೂ ಇಂತೂ ಇವತ್ತಿನ ಕೆಲಸ ಮುಗಿಯಿತು ಅನ್ನೋ  ಸಮಾಧಾನದಿಂದ  ಈಗಷ್ಟೇ  ಹೊರಬಂದಿದ್ದೆ.
ಬೆಳಗ್ಗಿನಿಂದ  ಈ ಸಂಜೆ ವರೆಗೂ  ಆಫೀಸಿನ ನಾಲ್ಕು ಗೋಡೆಗಳ, ಬಿಳೀ ಬಲ್ಪಿನ ಮತ್ತು ತಣ್ಣನೆ ಏಸಿಯ ಮಧ್ಯೆ ಕುಳಿತು  ಹೊರಬಂದಾಗಲೇ ಗೊತ್ತಾಗಿದ್ದು, ಜಿಟಿ ಜಿಟಿ ಮಳೆ ಬರುತ್ತಾ ಗಾಳಿ ತಂಪು ತಂಪಾಗಿ ಇಡೀ ಸಿಟಿ ಹಾಯಾಗಿದೆ ಅಂತ. ಕೆಲವರು ಖುಷಿಯಿಂದ ಬರೋ ಪಿರಿ ಪಿರಿ ಮಳೆಗೆ ಮುಖಕೊಟ್ಟು ಖುಸಿಯಿಂದ ಶಿಳ್ಳೆ ಹಾಕುತ್ತಾ ನಡೆಯುತ್ತಿದ್ದರೆ ಕೆಲವರು ಸಿಕ್ಕ ಸಿಕ್ಕ ಗ್ರೋಸರಿ, ಬಿಲ್ಡಿಂಗಿನ ಟೋಪಿ ಅಡಿಯಲ್ಲಿ ಮಳೆನಿಲ್ಲುತ್ತೆ ಅನ್ನೋ ಆಸೆಯಿಂದ ನೋಡುತ್ತಾ, ಫೋನಲ್ಲಿ ಮಾತಾಡುತ್ತಾ ನಿಂತಿದ್ದಾರೆ. ಟ್ರಾಫಿಕ್ಕಿನಲ್ಲಿ ಬ್ಲಾಕಾಗಿ ನಿಂತಿರೋ ಗಾಡಿಗಳು ಬೇರೆ ಬೇರೆ ರೀತಿ ಚಾಲೆಂಜಿಗೆ ನಿಂತವರಂತೆ ಹಾರನ್ ಮಾಡುತ್ತಾ ಮನೆಸೇರೋ ಆತುರದಲ್ಲಿವೆ. exfo ಅನ್ನೋ ಗ್ರೋಸರಿ ಅಡಿಯಲ್ಲಿ ನಿಂತಿದ್ದ ನಾನು ಹಾಗೇ ಶರ್ಟಿನ ಗುಂಡಿ ತೆಗೆದು ಬೀಳುತ್ತಿರೋ ಮಳೆಹನಿಗೆ ಕೈಚಾಚಿದೆ.
ಎಷ್ಟೊಂದು ಹಾಯ್ ಹಾಯ್ ಎನಿಸಿತು. ಒಂದುಕ್ಷಣ ಮನಸ್ಸೊಳಗೆ ಏನೋ ಒಂದು ಮಿಂಚುಹರಿಯಿತು. ಈಗ ಸಿಕ್ಕ ಈ feel ಎಲ್ಲೊ ಸವಿದಿದ್ದ ನೆನೆಪಾಯಿತು.
ಹೌದು, ನೆನಪಾಗಿದ್ದು ಮನೆ ಮತ್ತು ಊರು. ಸಣ್ಣವನಿದ್ದಾಗ ಬರೋಬ್ಬರಿ ಮೂರ್ನಾಲ್ಕು ತಿಂಗಳು ಬಿಡದೆ ಸುರಿಯುತ್ತಿದ್ದ ಜಿಟಿ ಜಿಟಿ ಮಳೆಗೆ ಇದೆ ರೀತಿ ಕೈ ಚಾಚುತ್ತ, ಮನೆ ಮುಂದಿನ ಹೆಂಚಿನ ದೋಣಿಯಿಂದ ಬೀಳೋ ನೀರಿನ ಹರಿವಲ್ಲಿ ಪೇಪರ್ ದೋಣಿ ಬಿಟ್ಟಿದ್ದು, ಶೀತಕ್ಕೆ ಹೊರಗೋಗಬೇಡ ಅನ್ನೋ ಅಮ್ಮನ ಬೊಬ್ಬೆ, ಅಕ್ಕ ತಂದು ಕೊಡುತ್ತಿದ್ದ ಬೇಯಿಸಿದ ಹಲಸಿನ ಬೀಜ, ಪಕ್ಕದ ಮನೆ ಪಾರು ಕಿಟಕಿಯಿಂದ ಕೈ ಬೀಸಿ ಹಾಯ್ ಅಂದದ್ದು, ಮಳೆಗೆ ನಾನೂ ಸುಸ್ತಾಗಿದ್ದೇನೆ ಅನ್ನೋ ಹಾಗೆ ಮಲ್ಲಗೆ ಹೋಗುತ್ತಿದ್ದ ಕೃಷ್ಣಾ ಬಸ್ಸು ಎಲ್ಲವೂ ನೆನಪಾಯಿತು. ಮತ್ತಷ್ಟು ಓದು »