ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 9, 2011

15

ಯಡಿಯೂರಪ್ಪ ರಾಜಕೀಯದಲ್ಲಿ ‘ಮಾಜಿ’ ಆಗಿದ್ದಾರೆಯೇ?

‍ನಿಲುಮೆ ಮೂಲಕ

-‘ಸಿದ್ಧಾರ್ಥ

೩೩ ವರ್ಷಗಳ ವೃತ್ತಿ ಜೀವನದಲ್ಲಿ ಅರ್ಧಾಂಶಕ್ಕೂ ಹೆಚ್ಚು ಕಾಲ ಅಧಿಕಾರಕ್ಕೆ ರಾಜಕಾರಣಿಗಳ ಪತ್ರಿಕಾ ಕಾರ್ಯದರ್ಶಿಯಾಗಿ ಆಪ್ತ ಸಿಬ್ಬಂದಿ ವರ್ಗದಲ್ಲಿ ಕೆಲಸ ಮಾಡಿರುವ ನನಗೆ ಅಧಿಕಾರ ತರುವ ಸಂತೋಷ, ಅಧಿಕಾರ ತ್ಯಾಗದಿಂದ ಬರುವ ವಿಷಾದ ಎರಡನ್ನೂ ಅತೀ ಸಂಮೀಪದಿಂದ ನೋಡಿ ಅನುಭವಿಸುವ ಅವಕಾಶ ಸಿಕ್ಕಿದೆ. ಅಧಿಕಾರ ಹೋದ ಕೂಡಲೇ, ಚುನಾವಣೆ ಸೋತ ಕೂಡಲೇ, ಆಕಾಶವೇ ಕಳಚಿ ಬಿದ್ದಂತೆ ಮೂಲೆಗೆ ಬೀಳುವ ರಾಜಕಾರಣಿಗಳನ್ನು, ಹೋದದ್ದು ಅಧಿಕಾರ ತಾನೇ? ಎಂದು sportive DV ಆಗಿ ನಗು ಮುಖ ಧರಿಸುವ ಧುರೀಣರನ್ನು ನೋಡಿದ್ದೇನೆ. ಹೊಟ್ಟೆಯಲ್ಲಿನ ನೋವು, ಮತ್ಸರ, ಈರ್ಷೆಗೆ ಸಿಲುಕಿ ಉತ್ತರಾಧಿಕಾರಿಯ ಪ್ರಮಾಣ ವಚನ ಸಮಾರಂಭಕ್ಕೆ ಗೈರುಹಾಜರಾದ ನಿರ್ಗಮಿತ ಮುಖ್ಯಮಂತ್ರಿಗಳನೇಕರನ್ನು ನೋಡಿದ್ದೇನೆ. ಅಧಿಕಾರ ಗ್ರಹಣದ ನಂತರ ಖುದ್ದಾಗಿ ಕಛೇರಿಗೆ ಕೊಂಡೊಯ್ದು ಪ್ರತಿಷ್ಠಾಪಿಸಿ ಶುಭ ಹಾರೈಸಿ ಹಗುರ ಹೃದಯದೊಂದಿಗೆ ಖಾಸಗಿ ವಾಹನದಲ್ಲಿ ಮನೆಗೆ ತೆರಳಿದ ವಿವೇಕಿಗಳನ್ನು, ಸಾಮಾನ್ಯ ಶಾಸಕರಾಗಿ ಅತೀವ ಉತ್ಸ್ಸಾಹ ದಿಂದ ಶಾಸನ ಸಭೆಗೆ ಮರಳಿ ಕ್ರಿಯಾತ್ಮಕವಾಗಿ ಕಲಾಪಗಳಲ್ಲಿ ಭಾಗವಹಿಸಿ ಮಾರ್ಗದರ್ಶನ ಮಾಡಿದ ಹಿರಿಯರನೇಕರ ಮಾತುಗಳು ನನ್ನ ಕಿವಿಗಳಲ್ಲಿ ಇನ್ನೂ ರಿಂಗಣಿಸುತ್ತಿವೆ.

 

ಇವೆಲ್ಲವೂ ನೆನಪಾದದ್ದು ಯಡಿಯೂರಪ್ಪನವರು ಅಧಿಕಾರ ಕಳೆದುಕೊಂಡ ಮರುಕ್ಷಣವೇ ಅವರ ಮನೆಯ ಮುಂದೆ ತುಂಬಿದ್ದ ಗೋಜುಗೋಜು ಜನ ಜಂಗುಳಿ ಏಕಾಏಕಿ ಮಾಯವಾದಾಗ. ಅಧಿಕಾರ ತರುವ ಜನ ಭಾಹುಳ್ಯವನ್ನು ಅಧಿಕಾರ ನಂತರದ ಜನ ವಿಯೋಗವನ್ನು ಪತ್ರಿಕೆಯೊಂದು ಛಾಯಾಚಿತ್ರಗಳ ಮೂಲಕ ಸಮರ್ಥವಾಗಿ ಪ್ರತಿಬಿಂಬಿಸಿತ್ತು. ಗಾದೆ ಮಾತೇ ಇಲ್ಲವೇ. ನಗುವಾಗ ಎಲ್ಲ ನೆಂಟರು ಅಳುವಾಗ ಯಾರೂ ಇಲ್ಲ.

ಅಧಿಕಾರ ಶಾಶ್ವತವಲ್ಲ. ನಿಜ. ಆದರೆ ಪರಿಸ್ಥಿತಿಯ ಒತ್ತಡಗಳಿಗೆ ಸಿಲುಕಿ ಅಧಿಕಾರ ತ್ಯಜಿಸಲೇ ಬೇಕಾಗಿ ಬಂದಾಗ ವ್ಯಕ್ತಿಯೊಬ್ಬ ಯಾವ ರೀತಿ ನಡೆದುಕೊಳ್ಳುತ್ತಾನೆ ಎಂಬ ಸಂಗತಿ ಆ ವ್ಯಕ್ತಿಯ ಮಾನಸಿಕ ಸಮಚಿತ್ತತೆಯನ್ನು ತೋರಿಸುತ್ತದೆ.

ಹೈ ಕಮಾಂಡ್‌ನೊಂದಿಗೆ ಬಹಿರಂಗವಾಗಿಯೇ ಗುದ್ದಾಟ ನಡೆಸಿ ಕಡೆಗೆ ಸ್ಥಾನ ತ್ಯಜಿಸಲೇ ಬೇಕಾಗಿ ಬಂದ ಪ್ರಸಂಗದಲ್ಲಿ ಕೋಪೋದ್ರಿಕ್ತರಾದ ಯಡಿಯೂರಪ್ಪ ಹಿರಿಯರೊಬ್ಬರ ಲ್ಯಾಪ್ ಟಾಪ್ ಜಖಂ ಮಾಡಿದರು, ಸಹೋದ್ಯೋಗಿಯೊಬ್ಬರ ಕೆನ್ನೆಗೆ ಬಾರಿಸಿದರು, ಮಕ್ಕಳನ್ನು ಎದುರಿಗೆ ನಿಲ್ಲಿಸಿ ಸಮಾ ಸಮಾ ಬೈದರು ಎಂಬ ಪತ್ರಿಕಾ ವರದಿಗಳನ್ನು ಓದಿ ಅಧಿಕಾರ ತ್ಯಾಗದ ಹಲವಾರು ದುಷ್ಟಾಂತಗಳನ್ನು ಸ್ವಯಂ ಕಂಡು ಅನುಭವಿಸಿದ್ದ ನನಗೆ ಆಶ್ಚರ್ಯವೇನೂ ಅನಿಸಿರಲಿಲ್ಲ, ಅಂತರಿಕ್ಷದಲ್ಲಿ ರಾರಾಜಿಸುತ್ತಿದ್ದ ಪಕ್ಷಿಗೆ ಏಕಾಏಕಿ ರೆಕ್ಕೆ ಪುಕ್ಕ ಕಿತ್ತು ನೆಲಕ್ಕೆ ದೂಡಿದಾಗ ಆಗಬಹುದಾದ ವೇದನೆಯನ್ನು ಯಾರೂ ಊಹಿಸಬಲ್ಲರು.

ಆದರೆ ನನಗೆ ನಿಜಕ್ಕೂ ಆಶ್ಚರ್ಯಕರವಾಗಿ ಕಂಡದ್ದು ಯಡಿಯೂರಪ್ಪನವರ ಆನಂತರದ ವರ್ತನೆ. ತಮ್ಮ ಸ್ವ್ವಭಾವಕ್ಕೆ ವಿರುದ್ದವಾಗಿ ಅವರು ಮರಳಿ ಜಿಗಿದು ಬಂದರು. ಇಂಗ್ಲೀಷ್‌ನಲ್ಲಿ bounce back ಎನ್ನುತ್ತಾರಲ್ಲ ಹಾಗೆ. ಯಾವುದೇ ಕೋಪ ತಾಪ, ಸಿಟ್ಟು ಸೆಡವುಗಳನ್ನು ಬಹಿರಂಗವಾಗಿ ಪ್ರದರ್ಶನಮಾಡದೆ, ರಾಗ ದ್ವೇಷಗಳನ್ನು ಮನಸ್ಸಿನಲ್ಲಿಯೇ ಹತ್ತಿಕ್ಕಿ ನಗುವಿನ ಮುಖವಾಡ ಧರಿಸಿದರು. ನಸು ನಗುತ್ತಲೇ ಉತ್ತರಾಧಿಕಾರಿ ಮತ್ತವರ ಸಂಪುಟ ಸದಸ್ಯರ ಪ್ರಮಾಣವಚನ ಸಮಾರಂಭಗಳಲ್ಲಿ ಭಾಗವಹಿಸಿದರು. ಕಡು ವೈರಿಗಳೆನಿಕೊಂಡವರನ್ನು ತಬ್ಬಿ ಮಾತಾಡಿದರು, ಮಿತ್ರರನ್ನು ಆಲಂಗಿಸಿದರು, ಅಷ್ಟೇ ಏಕೆ ಪತ್ರ ಕರ್ತರನ್ನೂ ಹತ್ತಿರ ಕರೆದು ಹೆಗಲ ಮೇಲೆ ಕೈ ಹಾಕುವ ಸ್ನೇಹ ಭಾವ ಪ್ರದರ್ಶಿಸಿದರು. ಕರ್ನಾಟಕ ರಾಜಕಾರಣದ ದುರಂತ ನಾಯಕ ಎಂದು ಹಿರಿಯ ಪತ್ರ ಕರ್ತ ಮತ್ತಿಹಳ್ಳಿ ಮದನ ಮೋಹನ ರಾಯರು ಪರಿತಾಪ ವ್ಯಕ್ತ ಪಡಿಸಿದ್ದು ಸರಿಯೇ ಇದ್ದಿತು.

ಯಡಿಯೂರಪ್ಪ ಇತರ ರಾಜಕಾರಣಿಗಳಿಗಿಂತ ಪ್ರತ್ಯೇಕವಾಗಿ ನಿಂತ್ತದ್ದು ನಿಲ್ಲುವುದು ಅವರದೇ ಆದ ರಾಜಕೀಯ ತಂತ್ರ ವೈಖರಿಗಳಿಂದ. ಇನ್ನೇನು ಮುಳುಗಿಯೇ ಹೋದರು ಎಂಬಂತಹ ಪರಿಸ್ಥಿತಿಯಲ್ಲ್ಲೂ ಫೀನಿಕ್ಸ್‌ನಂತೆ ಮೈಕೊಡವಿ ಮೇಲೆದ್ದು ಬಂದ ವ್ಯಕ್ತಿತ್ವ ಅವರದ್ದು. ತಮ್ಮ ಪ್ರತಿಕೂಲವಾಗಿ ಬಂದ ಸನ್ನಿವೇಶವನ್ನೆ ತಮ್ಮ ಲಾಭಕ್ಕೆ ಪರಿವರ್ತಿಸಿಕೊಂಡ ಯಶಸ್ವಿ ರಾಜಕಾರಣಿ ಅವರು.

ಈಗಲೂ ಅವರು ಮಾಡಿದ್ದೂ ಅದನ್ನೇ. ಯಡಿಯೂರಪ್ಪ ನಿರ್ಗಮನದಿಂದ ತೆರವಾಗುವ ಮುಖ್ಯಮಂತ್ರಿ ಸ್ಥಾನದಲ್ಲಿ ಕೂತು ತಮ್ಮ ಜೀವನದ ಕನಸ್ಸನ್ನು ನನಸು ಮಾಡಿಕೊಳ್ಳಲು ಸೈಡ್ ವಿಂಗ್‌ನಲ್ಲಿ ಎಲ್ಲವನ್ನು ಅಣಿಮಾಡಿಕೊಳ್ಳುತ್ತಿದ್ದ ಅನಂತ ಕುಮಾರ್ ರವರ ಕನಸ್ಸನ್ನು ಹೊಸಕಿ ಹಾಕುವಲ್ಲಿ ಯಡಿಯೂರಪ್ಪರವರ ಕೈಚಳಕ ಅಸಾದೃಶ್ಯ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬಂತೆ ಈ ಕಾರ್ಯಕ್ಕೆ ಅವರು ಆರಿಸಿಕೊಂಡದ್ದು ಅನಂತ ಕುಮಾರ ರವರ ವಿಶ್ವಾಸ ಬಣದ ನಾಯಕರನ್ನೇ.

ಎಷ್ಟಾದರು ಯಡಿಯೂರಪ್ಪ ಕರ್ನಾಟಕದಲ್ಲಿ ಬಿಜೆಪಿ ಕಾಲೂರಿ ನಿಲ್ಲಲು ಕಾರಣೀಭೂತರು. ವಿಧಾನ ಸಭೆಯಲ್ಲಿ ತಮ್ಮ ಪಕ್ಷದ ಬಲ ಎರಡರಿಂದ ನೂರತ್ತಕ್ಕೆ ಏರುವಲ್ಲಿ ಯಡಿಯೂರಪ್ಪ ಅವರ ಜೀವಿತದ ಹೋರಾಟವೇ ಕೊಡುಗೆ ಎಂಬ ಮಮಕಾರ ಗೌರವಗಳಿಗೆ ಇನ್ನು ಚ್ಯುತಿ ಬಂದಿಲ್ಲ. ಇದನ್ನೇ ಊರುಗೋಲಾಗಿಟ್ಟು ಕೊಂಡು ಅವರು ಜಗದೀಶ್ ಶೆಟ್ಟರ್ ಅವರನ್ನು ಮಣಿಸಿದರು. ಲಿಂಗಾಯಿತರ ಪಂಗಡವನ್ನು ಒಡೆಯಲು ಅನಂತ ಕುಮಾರ್ ಸ್ವಯಂ ಲಿಂಗಾಯಿತರೇ ಆದ ಜಗದೀಶ್ ಶೆಟ್ಟರ್ ರವರನ್ನು ಮುಖ್ಯ ಮಂತ್ರಿಯ ಅಭ್ಯರ್ಥಿಯಾಗಿ ಮುಂದೆ ಮಾಡಿದರೂ ಯಡಿಯೂರಪ್ಪ ಬೆನ್ನಿಗಿರುವ ಲಿಂಗಾಯಿತರ ಗುಂಪನ್ನು ಒಡೆಯಲಾಗಲಿಲ್ಲ. ಮುಖ್ಯಮಂತ್ರಿ ಚುನಾವಣೆಯಲ್ಲಿ ಪರಾಭವಗೊಂಡು ಉಪಮುಖ್ಯಮಂತ್ರಿಯೂ ಆಗದೆ ಮಾಮೂಲಿ ಮಂತ್ರಿಯಾಗಿ ಕುಂಡಿ ಸುಟ್ಟ ಬೆಕ್ಕಿನಂತೆ ಜಗದೀಶ್ ಶೆಟ್ಟರು ಸದಾನಂದ ಸಂಪುಟದ ಒಳಗೆ ಸೇರಬೇಕಾಗಿ ಬಂದ ಪ್ರಸಂಗ ಕರ್ನಾಟಕದ ರಾಜಕಾರಣದಲ್ಲಿ ಯಡಿಯೂರಪ್ಪನವರೇ ಈಗಲೂ ನಂ.ಒನ್ ಎಂಬ ವಾಸ್ಥವ ಸ್ಥಿತಿಯನ್ನು ಸಾಬೀತು ಪಡಿಸಿತು.

ಹಾಗೆಂದೇ ಯಡಿಯೂರಪ್ಪ ಸದ್ಯಕ್ಕೆ ಅಧಿಕಾರ ವಂಚಿತರಾದರೂ ರಾಜ್ಯದ ಮಟ್ಟಿಗೆ ಈಗಲೂ ಅವರೇ ಪ್ರಶ್ನಾತೀತ ನಾಯಕರು. ಅವರು ಎಷ್ಟೇ ಭ್ರಷ್ಟರೆಂದು ಲೋಕಾಯುಕ್ತ, ಪ್ರತಿಪಕ್ಷಗಳು ಹಾಗೂ ಪತ್ರಿಕೆಗಳು ಸಾರಿ ಸಾರಿ ಹೇಳಿದರು ಕೂಡ ಬಲಾಡ್ಯ ಲಿಂಗಾಯಿತರ ಬೆಂಬಲಕ್ಕೆ ಅವರೇ ಸಂಪೂರ್ಣವಾಗಿ ಭಾದ್ಯರು. ಯಡಿಯೂರಪ್ಪನವರಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಯಾವ ನಾಯಕಮಣಿಯು ಬಿಜೆಪಿ ಏಕೆ ಇತರೆ ಯಾವುದೇ ಪಕ್ಷಗಳಲ್ಲಿಯೂ ಕಾಣುತ್ತಿಲ್ಲ. ಈಗಲೂ ಜನಬೆಂಬಲ ಬಿಜೆಪಿ ಪಕ್ಷಕ್ಕೆ ಇದೆ ಎಂಬುದಕ್ಕೆ ಇದುತನಕ ಗೆದ್ದ ಎಲ್ಲಾ ವಿಧಾನ ಸಭಾ ಉಪಚುನಾವಣೆಗಳಲ್ಲಿ, ಜಿಲ್ಲಾ ಪಂಚಾಯತ್ ತಾಲ್ಲೂಕು ಪಂಚಾಯತ್ ಚುನಾವಣೆಗಳ ಪಲಿತಾಂಶವನ್ನು ಗಮನಿಸಿದರೆ ಸಾಕು. ಚುನಾವಣೆಗಳಲ್ಲಿ ಕೆಂಪು ನೋಟಿನ ಹೊಳೆ ಹರಿಸಿ ಗೆಲ್ಲುವ ತಂತ್ರವನ್ನು ರೂಢಿಸಿಕೊಂಡಿದ್ದರೆ ಅದು ಬಿಜೆಪಿ ಪಕ್ಷ ಮಾತ್ರ. ಹಾಗೆಂದೇ ಮುಂದಿನ ಚುನಾವಣೆಯಲ್ಲಿಯೂ ಯಡಿಯೂರಪ್ಪ ಅವರ ಕೈಚಳಕಕ್ಕೆ ಭೂಮಿಕೆ ಸಿದ್ದವಾಗಿಯೇ ಇದೆ. ಮೊನ್ನೆಯ ರಹಸ್ಯ ಮತದಾನದಲ್ಲಿ ಯಡಿಯೂರಪ್ಪ ಅವರ ವಿರುದ್ಧ ಹೋಗಿದ್ಧ ಶಾಸಕರು ಮರಳಿ ಅವರ ತೆಕ್ಕೆಗೆ ಬರುವ ಆ ಮೂಲಕ ಅನಂತ ಕುಮಾರ್ ಬಣ ಖಾಲಿಯಾಗುವ ಯಾವುದೇ ಸಂಶಯವಿಲ್ಲ.

ಬಿಜೆಪಿಗೆ ಸಂವಾದಿಯಾಗ ನಿಲ್ಲಬಲ್ಲ ಮತ್ತೊಂದು ಪಕ್ಷ ಕಾಂಗ್ರೆಸ್ ಆಂತರಿಕ ಕಲಹಗಳಿಂದ, ನಾಯಕರುಗಳ ಪರಸ್ಪರ ಸೆಣಸಾಟಗಳಿಂದ ಜರ್ಜರಿತಗೊಂಡಿದೆ. ೧೯೯೯ರಲ್ಲಿ ಶೇ ೪೨ ರಷ್ಟಿದ್ದ ಈ ಪಕ್ಷದ ಓಟ್ ಷೇರ್ ಈಗ ದಯನೀಯ ೨೨ಕ್ಕೆ ಬಂದಿಳಿದಿದೆ. ಆಪರೇಷನ್ ಕಮಲ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ಹಲವಾರು ನಾಯಕರು ಪಕ್ಷ ತ್ಯಜಿಸಿ ಬಿಜೆಪಿ ಇಲ್ಲವೇ ಜೆಡಿಎಸ್ ಪಾಲಾಗಿದ್ದಾರೆ. ಬಹುದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ನಿಷ್ಠೆ ಬದಲಿಸಿದ್ದಾರೆ. ಬಹುತೇಕ ನಿದ್ರಾವಸ್ಥೆಯಲ್ಲಿರುವ ಈ ಪಕ್ಷವನ್ನು ಮುಂದಿನ ಚುನಾವಣೆಯ ವೇಳೆಗಾದರೂ ಮರಳಿ ಮುಖ್ಯ ವಾಹಿನಿಗೆ ತರಲು ಡಾ: ಜಿ. ಪರಮೇಶ್ವರ್ ಇರಲಿ ಸಾಕ್ಷಾತ್ ಪರಮೇಶ್ವರನೇ ಬಂದರೂ ಅಸಾದ್ಯದ ಕೆಲಸವಾಗಿ ಕಾಣುತ್ತಿದೆ.

ಇನ್ನು ಜನತಾದಳ ಕುಟುಂಬವೊಂದರ ಯಜಮಾನಿಕೆಯಲ್ಲಿ ಸಿಲುಕಿ ಹಾಕಿಕೊಂಡಿರುವ ಈ ಪಕ್ಷಕ್ಕೆ ಅನ್ಯ ನಾಯಕರೇ ಇಲ್ಲ. ದೇವೇಗೌಡರ ಧನಿ ದಿನೇ ದಿನೇ ಕ್ಷೀಣವಾಗುತ್ತಿದೆ. ವಯಸ್ಸಿನ ಪ್ರಭಾವ ಅವರ ಮೇಲೆ ಪಕ್ಷದ ಮೇಲೆ ನಿಚ್ಚಳವಾಗಿ ಕಾಣುತ್ತಿದೆ. ಯಾವ ಹೋಮವಾಗಲಿ ಪೂಜೆ ಪುನಸ್ಕಾರಗಳಾಗಲಿ ಜನತಾದಳಕ್ಕೆ ಮರಳಿ ಅಧಿಕಾರಗಳಿಸಿಕೊಡುವ ಸಾದ್ಯತೆ ಕಾಣುತ್ತಿಲ್ಲ. ಹೊಸ ತಲೆ ಮಾರಿನ ನಾಯಕನಾಗಿ ಬೆಳೆಯ ಬಹುದಾಗಿದ್ದ ಕುಮಾರಸ್ವಾಮಿ ಏನೇ ತಿಪ್ಪರಲಾ ಹಾಕಿದರು ವಿಶ್ವಾಸ ದ್ರೋಹದ ಕಳಂಕದಿಂದ ಹೊರಬರಲಾಗುತ್ತಿಲ್ಲ. ಕಳೆದ ವರ್ಷ ಹಣ ಅಧಿಕಾರದ ಆಮಿಷ ತೋರಿಸಿ ಯಡಿಯೂರಪ್ಪ ಸರ್ಕಾರದ ವಿರುದ್ಧ ೧೬ ಬಿಜೆಪಿ ಶಾಕರನ್ನು ಬಂಡಾಯ ಎಬ್ಬಿಸುವಲ್ಲಿ ಯಶಸ್ವಿಯಾದ ಕುಮಾರಸ್ವಾಮಿ ತದ ನಂತರ ಅವರನ್ನು ನಡಿನೀರಿನಲ್ಲಿ ಕೈಬಿಟ್ಟರೆಂಬ ಆರೋಪ ಈಗಲೂ ಜೀವಂತವಿದೆ. ಬೇರೆ ಪಕ್ಷದ ಶಾಸಕರಿರಲಿ ಅವರ ಪಕ್ಷದವರೇ ಅವರನ್ನು ನಂಬದ ಪರಿಸ್ಥಿತಿ ಉಂಟಾಗಿದೆ.

ನಿಜ ಮುಂದಿನ ದಿನಗಳು ಯಡಿಯೂರಪ್ಪನವರಿಗೆ ಸವಾಲಾಗಲಿದೆ. ಒಂದು ಕಡೆ ತಮ್ಮ ಮೇಲಿನ ಆರೋಪಗಳ ವಿರುದ್ಧ ಕಾನೂನು ಸಮರವನ್ನು ಪರಿಣಾಮಕಾರಿಯಾಗಿ ಎದುರಿಸಿ ನಿಲ್ಲುವುದು, ತಮ್ಮಿಂದ ಕಳಚಿ ಹೋಗಬಹುದಾದ ಶಾಸಕರನ್ನು ಹೇಗಾದರೂ ಮಾಡಿ ಬಿಗಿಹಿಡಿತದಲ್ಲಿಟ್ಟುಕೊಳ್ಳುವುದು, ಯಾವ ಕಾರಣಕ್ಕೂ ಅನಂತಕುಮಾರ್ ಕೈಮೇಲಾಗದಂತೆ ನೋಡಿಕೊಳ್ಳುವುದು.
ಆದರೆ ಕ್ರಿಯಾಶಿಲ ವ್ಯಕ್ತಿಯೊಬ್ಬನಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಆನಬೆಂಬಲವೊಂದಿದ್ದರೆ ಸಾಕು ನಾರು ಸಾವಿರ ಮೊಕದ್ದಮೆಗಳನ್ನು ಲೀಲಾ ಜಾಲವಾಗಿಎದುರಿಸ ಬಹುದು ಎಂಬುದಕ್ಕೆ ಉಧಾಹರಣೆಯಾಗಿದ್ದಾರೆ ನಮ್ಮ ನೆರೆ ರಾಜ್ಯದ ಮುಖ್ಯಮಂತ್ರಿ ಜಯಲಲಿತ. ಜಯಲಲಿತ ವಿರುದ್ಧ ಅಕ್ರಮ ಆಸ್ತಿಗಳಿಕೆಯ ಮೊಕದ್ದಮೆ ೧೧೮ adjournment ಗಳ ನಂತರವೂ ಎರಡು ದಶಕಗಳಿಂದ ಅಭಾದಿತವಾಗಿ ನಡೆಯುತ್ತಲೆ ಇದ್ದು ಜಯಲಲಿತ ಮತ್ತೆ ಮತ್ತೆ ಅಧಿಕಾರಕ್ಕೇರುತ್ತಲೇ ಬಂದಿದ್ದಾರೆ.

ಆದರೆ ಯಡಿಯೂರಪ್ಪನವರ ಶತೃ ಅಂತ ಯಾರಾದರೂ ಇದ್ದರೆ ಅದು ಅವರೆ. ಅವರ ಮುಂಗೋಪ, ಸಿಟ್ಟು ಸೆಡವು, ಅಹಂಕಾರ, ಛಲದ ಮುಂದೆ ಯಾವುದೇ ತರ್ಕವಾಗಲಿ, ಸಿದ್ಧಾಂತವಾಗಲಿ ನಿಲ್ಲುವುದಿಲ್ಲ ಎನ್ನುತ್ತಾರೆ ತಿಳಿದವರು. ಇವರೊಂದು ರೀತಿಯಲ್ಲಿ ಬಿಜೆಪಿಯ ದೇವೇಗೌಡರು. ಪ್ರಧಾನ ಮಂತ್ರಿ ಗದ್ದಗಗೇರಿದರು ಗ್ರಾಮ ಪಂಚಾಯತಿಯ ರಾಜಕಾರಣವನ್ನು ಹೇಗೆ ಬಿಡಲಿಲ್ಲವೋ ಹಾಗೆಯೇ ವೈಯಕ್ತಿಕ ದ್ವೇಷ ಅಸೂಯೆಗಳನ್ನು ಯಾವ ಕಾರಣಕ್ಕೂ ಮೆಟ್ಟಿ ನಿಲ್ಲುವವರಲ್ಲ ಯಡಿಯೂರಪ್ಪ. ತಮ್ಮ ಗುಂಪಿನ ವಿರುದ್ಧ ಮತ ಹಾಕಿದ ಅನಾರೋಗ್ಯ ಪೀಡಿತ ಶಾಸಕ ಈಶಣ್ಣ ಗುಳಗಣ್ಣನವರ್ ಅವರಿಗೆ ಧಮಕಿ ಹಾಕಿದ ಪ್ರಸಂಗ ಯಡಿಯೂರಪ್ಪ ಏನೂ ಬದಲಾಗಲಿಲ್ಲ. ಅದೇ ಯಡಿಯೂರಪ್ಪ ಆಗಿಯೇ ಮುಂದುವರಿಯುತ್ತಿದ್ದಾರೆ ಎಂಬ ಬಾವನೆಗೆ ಪುಷ್ಟಿಕೊಡುವಂತ್ತಿದೆ. ಹೀಗಾದರೆ ಅದು ಕೇವಲ ಅವರ ವೈಯಕ್ತಿಕ ದುರಂತವಷ್ಟೇ ಅಲ್ಲ ಈ ರಾಜ್ಯದ ದುರಂತವೂ ಆಗುತ್ತದೆ.

*********

ಚಿತ್ರಕೃಪೆ : ರೆಡಿಫ್.ಕಾಂ

15 ಟಿಪ್ಪಣಿಗಳು Post a comment
  1. Sagar Raj's avatar
    ನವೆಂ 9 2011

    ನಿಮ್ಮ ಈ ವಾಕ್ಯ- “ಅವರು ಎಷ್ಟೇ ಭ್ರಷ್ಟರೆಂದು ಲೋಕಾಯುಕ್ತ, ಪ್ರತಿಪಕ್ಷಗಳು ಹಾಗೂ ಪತ್ರಿಕೆಗಳು ಸಾರಿ ಸಾರಿ ಹೇಳಿದರು ಕೂಡ ಬಲಾಡ್ಯ ಲಿಂಗಾಯಿತರ ಬೆಂಬಲಕ್ಕೆ ಅವರೇ ಸಂಪೂರ್ಣವಾಗಿ ಭಾದ್ಯರು.” ದ ಅರ್ಥ ನಮಗೆ ಅಷ್ಟು ಗೊತ್ತಾಗಲಿಲ್ಲ. ಆ ವಾಕ್ಯ ಜಾತಿ ರಾಜಕೀಯವನ್ನ ಬೆಂಬಲಿಸುತ್ತಿದೆಯೋ ಅಥವಾ “ಲಿಂಗಾಯತರೇ, ಯೆಡಿಯೂರಪ್ಪನವರಿಗೆ ಬೆಂಬಲ ನಿಲ್ಲಿಸಬೇಡಿ” ಎಂಬ ಸಂದೇಶ ರವಾನಿಸುತ್ತಿದೆಯೋ?!

    ಉತ್ತರ
  2. Ashwin S Amin's avatar
    Ashwin S Amin
    ನವೆಂ 9 2011

    Very very nice article.. Liked it so much..

    ಉತ್ತರ
  3. ಗಿರೀಶ್'s avatar
    ಗಿರೀಶ್
    ನವೆಂ 9 2011

    ಯಾರ್ ಏನ್ಮಾಡಿದ್ರೂ ಲಿಂಗಾಯತರು ಯಡಿಯೂರಪ್ಪಂಗೆ ಓಟ್ ಹಾಕ್ತಾರೆ. ಅವ್ರೆ ಮುಂದಿನ ಮುಖ್ಯಮಂತ್ರಿ ಅಂತಿರ್ಬೇಕು ಇವರ ಅಭಿಪ್ರಾಯ. ಅಪ್ಪಟ ಯಡ್ಡಿಯ ಅಭಿಮಾನಿಯೊಬ್ಬರ ಹಪಾಹಪಿಯಂತಿದೆ ಲೇಖನ.

    ಉತ್ತರ
    • smarana's avatar
      smarana
      ನವೆಂ 10 2011

      Girish, nimma abhipraya swalpa avasaraddayitu yenisuttade yella lingayataru yeddyurappange vote haakidre JDS nalli mattu Congress nalli lingayata Shasakaraadru heeyge aarisi bartidru.? sadyada vidyamaana galinda eedi lingayata samudaya vannu dhushisuwudu sari alla. nimma abhiprayada praakara okkaligaraadavaru yeddyurappange vote maadidre parvagilwe???

      ಉತ್ತರ
      • ಗಿರೀಶ್'s avatar
        ಗಿರೀಶ್
        ನವೆಂ 14 2011

        ಸ್ಮರಣರೆ,
        ದಯವಿಟ್ಟು ಕನ್ನಡ ಲಿಪಿಯಲ್ಲಿ ಬರೆಯುವಿರಾ?
        ನಾನು ಬರೆದಿರುವುದನ್ನು ಮತ್ತೊಮ್ಮೆ ಸಾವಧಾನಚಿತ್ತದಿಂದ ಪರಾಂಬರಿಸಿ ನೋಡಿ. ನಾನು ಹೇಳಿರುವುದು ಲಿಂಗಾಯತರೆಲ್ಲ ವೋಟ್ ಹಾಕುತ್ತಾರೆ ಎಂಬುದು ಲೇಖಕರ ಅಭಿಪ್ರಾಯವಿದ್ದಂತಿದೆ ಎಂದು ಬರೆದಿದ್ದೇನೆ. ಅವಸರದ ಅಭಿಪ್ರಾಯ ತಮ್ಮದು. ಎಚ್ಚೆತ್ತುಕೊಳ್ಳಿ.

        ಉತ್ತರ
  4. Ananda Prasad's avatar
    Ananda Prasad
    ನವೆಂ 9 2011

    ಕರ್ನಾಟಕದ ಇಂದಿನ ದುಸ್ಥಿತಿಗೆ ಲಿಂಗಾಯತ ಸಮುದಾಯದ ಜಾತಿ ವ್ಯಾಮೋಹವೇ ಕಾರಣ. ಜಾತಿ ವ್ಯಾಮೋಹದಲ್ಲಿ ಕಣ್ಣಿಗೆ ಕಪ್ಪು ಪಟ್ಟಿ ಧರಿಸಿಕೊಂಡು ಧೃತರಾಷ್ಟ್ರ ಪ್ರೇಮ ಮೆರೆಯುತ್ತಿರುವ ಲಿಂಗಾಯತ ಸಮುದಾಯದ ಬೆಂಬಲದಿಂದಾಗಿಯೇ ಇನ್ನೂ ಇಪ್ಪತ್ತು ವರ್ಷ ನಾನೆ ಮುಖ್ಯಮಂತ್ರಿ ಎಂಬ ದುರಹಂಕಾರದ ಮಾತನ್ನು ಆಡಲು ಕಾರಣ. ಲಿಂಗಾಯತ ಸಮುದಾಯದ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಜೆ.ಹೆಚ್. ಪಟೇಲ್, ಯಸ್. ಆರ್. ಬೊಮ್ಮಾಯಿ ಮೊದಲಾದ ಮಾಜಿ ಮುಖ್ಯಮಂತ್ರಿಗಳ ಮುಂದೆ ಯಡಿಯೂರಪ್ಪ ಅತ್ಯಂತ ಕುಬ್ಜ ನಾಯಕರಾಗಿ ಕಂಡುಬರುತ್ತಾರೆ ಮಾತ್ರವಲ್ಲ ಚರಿತ್ರೆಯಲ್ಲಿಯೂ ಅವರು ಕುಬ್ಜ ನಾಯಕರಾಗಿಯೇ ನಿಲ್ಲಲಿರುವುದು ಖಚಿತ. ಉನ್ನತ ಮೌಲ್ಯಗಳು, ಉದಾತ್ತ ಧೋರಣೆ, ಧೀಮಂತ ನಾಯಕತ್ವದ ಯಾವ ಲಕ್ಷಣಗಳೂ ಇಲ್ಲದ ಯಡಿಯೂರಪ್ಪ ಕರ್ನಾಟಕ ಕಂಡ ಅತ್ಯಂತ ಭ್ರಷ್ಟ ಹಾಗೂ ನಿರ್ಲಜ್ಜ ರಾಜಕಾರಣಿ ಎಂದರೆ ತಪ್ಪಾಗಲಾರದು.

    ಉತ್ತರ
    • Dennis's avatar
      Dennis
      ನವೆಂ 10 2011

      karanatakada lingayata samudaaya jaati vyamoohakke silukiddare Dharawada da Hiremutt avavru Gani akramagala kuritu supreem court moore hoogalu heeyge sadyvaagutittu?. Basavana Gowda paatil yetnaal lingayata mohakke biddiddare JDS heeyge seyralu saadyavaguttitu. ondu kaalakke congress anne nambidda Dalitaru Yeddyurappa navarannu adhikaarakke taralu heeyge sahakarisidaru? vokkaligaru, EEdigaru BJP ge mata haakillave? prasakta raajakiya vidyamaanagala paraamashrege nimmolage vishyagalilla yendenisuttade athava sookta margadalli vimarshisuwa aalochane agatyavide yenisuttade.

      ಉತ್ತರ
      • Ananda Prasad's avatar
        Ananda Prasad
        ನವೆಂ 11 2011

        ಲಿಂಗಾಯತ ಸ್ವಾಮೀಜಿಗಳು ಯಡಿಯೂರಪ್ಪನವರ ಬೆನ್ನ ಹಿಂದೆ ನಿಂತಿರುವುದೇ ಯಡಿಯೂರಪ್ಪನವರು ಮೇರೆ ಮೀರಿದ ಭ್ರಷ್ಟಾಚಾರದಲ್ಲಿ ತೊಡಗಲು ಕಾರಣ. ಭ್ರಷ್ಟಾಚಾರದಲ್ಲಿ ತೊಡಗಿದಾಗ ಸ್ವಾಮೀಜಿಗಳು ನಿಮಗೆ ನಮ್ಮ ಬೆಂಬಲವಿಲ್ಲ ಎಂಬ ಸಂದೇಶ ರವಾನಿಸಿದ್ದರೆ ಯಡಿಯೂರಪ್ಪನವರು ಇಂಥ ಭ್ರಷ್ಟಾಚಾರದಲ್ಲಿ ಮುಳುಗಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಸ್ವಾಮೀಜಿಗಳು ಧ್ರುತರಾಷ್ಟ್ರನಂತೆ ವ್ಯಾಮೋಹಕ್ಕೆ ಬಲಿಯಾಗಿ ತಮ್ಮ ಬೆಂಬಲ ಮುಂದುವರಿಸಿದರು

        ಉತ್ತರ
        • Dennis's avatar
          Dennis
          ನವೆಂ 11 2011

          Geylayare, nanna pratikriyege nimma maru pratikriyeyannu gamaniside neeviga modaliginta ondu taarkika hantakke bandiddiri, ee modalu idi lingayata samudayavannu teekisiddarinda naanu aa reeti heylabekayitu.

          ಉತ್ತರ
          • shajaan's avatar
            shajaan
            ನವೆಂ 11 2011

            Hey! Denny maama yeen yeddi lingayatara super staara……………..

            ಉತ್ತರ
            • Dennis's avatar
              Dennis
              ನವೆಂ 11 2011

              Twinkle twinkle Little star YEDDY maama SUPER star!!!!!

              ಉತ್ತರ
  5. charles bricklayer's avatar
    charles bricklayer
    ನವೆಂ 9 2011

    jaati vyamohakke lingaayitaru maatrave olagaagilla. karnaatakavanne looti hodeda reddigala enjalu tindu eegalu taavu praamanikarante pose kodutta bereyavara apramaanikateya bagge putagattale bareyuva v.bhat mattu r.b sir avarannu avara jaatiyavarellaru kandisi avara patrikegalannu oduvudannu bittubittidaareye?.

    backup, limewire

    youtube converter, limewire

    ಉತ್ತರ
  6. abhi082941@gmail.com's avatar
    ನವೆಂ 9 2011

    ಮುಖ್ಯಮ೦ತ್ರಿಯ ಸ್ಥಾನದ ಮಾನ ಮಾರೆಯಾದೆ ಎಲ್ಲಾ ಹಾರಜಾಗಿದೆ, ಇ೦ತಹ ಸರ್ಕಾರ ಮು೦ದೆ ಬರುವುದು ಖ೦ಡಿತ ಬೇಡ, ನಮಗೆ ಒ೦ದು ಪ್ರಾದೇಶಿಕ ಪಕ್ಶದ ಅವಶ್ಯಕತೆ ತು೦ಬ ಇದೆ ಅ೦ತ ನನ್ನ ಅನಿಸಿಕೆ

    ಉತ್ತರ
    • ರವಿ ಕುಮಾರ್ ಜಿ ಬಿ's avatar
      ರವಿ ಕುಮಾರ್ ಜಿ ಬಿ
      ನವೆಂ 14 2011

      ಪ್ರಾದೇಶಿಕ ಪಕ್ಷ ಇದ್ದು ಏನಾಯ್ತು ಈಗ? ಅದು ಬ್ರಷ್ಟಾಚಾರ ಮಾಡಿಲ್ಲವೇ? ಅದರ ಸೊ ಕಾಲ್ಡ್ ಯೆಜಮಾನರ ಅಸ್ತಿ ನೋಡಿ (ಅಕ್ರಮ ಮತ್ತು ಸಕ್ರಮ ). ಹಾಗಾಗಿ ಪ್ರಾದೇಶಿಕ ಪಕ್ಷ ಬಂದರೆ ಬ್ರಷ್ಟಾಚಾರ ತೊಲಗಿ ದೇಶ /ರಾಜ್ಯದ ಅಭಿವೃದ್ದಿ ಆಗತ್ತೆ ಅನ್ನೋದು ದಡ್ಡತನ. ನಮಗೆ ಬೇಕಿರೋದು ಲಾಲ್ ಬಹದ್ದೂರ್ ಶಾಸ್ತ್ರಿ ಅವರಂತಹ ಧೀಮಂತ ನಾಯಕರು ಮಾತ್ರ ,ಅವರಂತಹ ನಾಯಕರನ್ನ ಆರಿಸಿ ಕಲಿಸೋ ಮಹತ್ತರ ಹೊಣೆಯೂ ನಮ್ಮದೇ.

      ಉತ್ತರ
  7. abhi's avatar
    abhi
    ನವೆಂ 10 2011

    ‘nilume’ moolaka patrakarta siddrth ravaru maaji cm yeddyurappa navara kundada naayakatwa kurita vivrane samarthavaagide. yeddyurappanavara meylina aapadanegalinda avara vyaktitva masukaagide aadaru, naaykana mahatva kadime aagilla yembudannu avaru nadedu banda haadiyatta beyralu maadi toorisi gamana seylyeyuttare. naayakanige saarvajanika badukige beykada vyaktitva agatya yembudannu hecchu prastapiside, vyaktitva masukaadaruu, sankashtadalliruva naayakanige DHE shakti yembudiddare naayakanaagi uliyaballa. ulidante aatana newnyategalella keywala charchaa vishayagalaaguwawu yembudannu tamma sthuula vishleshaneya naduweyuu suukshma galannu dhakalisiddare. ee hinnale yelli savalugala naduwe saaguttiruva yeddyurappa navarannu iigale yeka pakshiyawaagi teekisuvudakkinta awara jeevana yaanada yella belavanige galannu kutuuhaladinda noodutta hooguvudu uttama yendu anisuttade.

    ಉತ್ತರ

Leave a reply to Ananda Prasad ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments