ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 10, 2011

3

ಸಂಸ್ಕೃತಿ ಸಂಕಥನ – ೧೦: ಪ್ರೊಟೆಸ್ಟಾಂಟರೇಕೆ ಕೆಥೋಲಿಕ್ ಪ್ರೀಸ್ಟ್ಗಳ ಮೇಲೆ ಪ್ರಹಾರಮಾಡಿದರು?

‍ನಿಲುಮೆ ಮೂಲಕ

– ರಮಾನಂದ ಐನಕೈ

ಸಂಸ್ಕೃತಿ ಸಂಕಥನ – ೧೦

ಕೆಥೋಲಿಕ್ ಕ್ರಿಶ್ಚಿಯಾನಿಟಿ ರಿಲಿಜನ್ನಿನ ಸೀಮೆ ದಾಟಿ ಅನೈತಿಕವಾಗಿದೆ. ಇದಕ್ಕೆ ಕಾರಣ ಕ್ಯಾಥೋಲಿಕ್ ಪ್ರೀಸ್ಟ್ಗಳು. ಇವರು ದೇವರು ಮತ್ತು ಜನರ ನಡುವೆ ಮಧ್ಯವರ್ತಿಗಳ ಪಾತ್ರವಹಿಸಿ ಜನರ ರಿಲಿಜನ್ನಿನ ಸ್ವಾತಂತ್ರ್ಯ ಹರಣ ಮಾಡಿದ್ದಾರೆ. ಚರ್ಚ್ ಅನ್ನುವ ಸಂಸ್ಥೆಯ ಮೂಲಕ ಅಧಿಕಾರ ಚಲಾಯಿಸುತ್ತ ಸಮಾಜವನ್ನು ಶ್ರೇಣೀಕರಣಗೊಳಿಸುತ್ತಿದ್ದಾರೆ. ಸ್ವಾರ್ಥ ಹಾಗ ಅಧಿಕಾರದಾಹದಿಂದ ಜನರಲ್ಲಿ ತಾರತಮ್ಯ ಹುಟ್ಟುಹಾಕುತ್ತಿದ್ದಾರೆ. ಪ್ರೀಸ್ಟ್ಹುಡ್ಡನ್ನು ಪಾರಂಪರಿಕ ಮಾಡಿಕೊಂಡಿದ್ದಾರೆ. ಹಾಗಾಗಿ ಕ್ಯಾಥೋಲಿಕ್ ಕ್ರಿಶ್ಚಿಯಾನಿಟಿ ಕೂಡಾ ಒಂದು ಸುಳ್ಳು  ರಿಲಿಜನ್ನಿನ ಸ್ವರೂಪ ಪಡೆದುಕೊಂಡಿದೆ. ಇದಕ್ಕೆಲ್ಲ ಮುಖ್ಯ ಕಾರಣ ಕೆಥೋಲಿಕ್ ಪ್ರೀಸ್ಟ್ಗಳು. ಪ್ರೀಸ್ಟ್ಗಳು ನಿಜವಾದ ಕಂತ್ರಿ(ಕನ್ನಿಂಗ್)ಗಳು ಎಂಬುದು  ಪ್ರೊಟೆಸ್ಟಾಂಟ್ ಸುಧಾರಣಾವಾದಿಗಳ  ಉಗ್ರ ಆರೋಪ.

ಭಾರತೀಯ ಸಂಸ್ಕೃತಿಯ ಕುರಿತು ಬರೆಯುತ್ತಿರುವಾಗ ಈ ತಲೆಬರಹದ ಪ್ರಸ್ತುತತೆಯ ಕುರಿತು ಪ್ರಶ್ನೆ ಏಳುವುದು ಸಹಜ. ಆದರೆ ಇದಕ್ಕೆ ಔಚಿತ್ಯ ಇದೆ. ಕಳೆದ ನಾನೂರು ವರ್ಷಗಳಿಂದ ಭಾರ ತೀಯ ಸಂಸ್ಕೃತಿ ಹಲವಾರು ತಪ್ಪು ದೃಷ್ಟಿಕೋನಗಳಿಂದ ಅರ್ಥ ವ್ಯತ್ಯಾಸಗಳನ್ನು ಹೊಂದುತ್ತ ಬಂದಿದೆ. ನಮ್ಮ ಸಮಾಜ ವಿಜ್ಞಾನಗಳೂ ಇದೇ ತಪ್ಪುದಾರಿಯಲ್ಲಿ ಸಾಗಿವೆ. ಹಾಗಾಗಿ ಪ್ರೊ. ಬಾಲ ಗಂಗಾಧರರು ಹೇಳುವ ಪ್ರಕಾರ ಈಗೇನಾದರೂ ನಿಜವಾದ ಭಾರತೀಯ ಸಂಸ್ಕೃತಿಯನ್ನು ಅರಿಯ ಬೇಕೆಂದರೆ ಮೊದಲು ಪ್ರಾಶ್ಚಾತ್ಯ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು. ಅಷ್ಟರಮಟ್ಟಿಗೆ ಪಾಶ್ಚಾತ್ಯ ದೃಷ್ಟಿಕೋನಗಳು ನಮ್ಮ ಸಂಸ್ಕೃತಿಯನ್ನು ವ್ಯಾಖ್ಯಾನಿಸಿವೆ.

ಉದಾಹರಣೆಗೆ ಪ್ರೊಟೆಸ್ಟಾಂಟ್ ಸುಧಾರಣಾ ವಾದಿಗಳು ಕ್ಯಾಥೋಲಿಕ್ ಪ್ರೀಸ್ಟ್ಗಳನ್ನು ಹೇಗೆ ಮತ್ತು ಯಾಕೆ ಕೀಳಾಗಿ ಕಂಡರು ಎಂಬುದನ್ನು ಅಗತ್ಯವಾಗಿ ಅರಿತುಕೊಳ್ಳಬೇಕು. ಅದನ್ನು ತಿಳಿದಾಗ ಮಾತ್ರ ಭಾರತದಲ್ಲಿ ಬ್ರಾಹ್ಮಣರಿಗೆ ‘ಖಳನಾಯಕ’ ಪಟ್ಟ ಹೇಗೆ ಬಂತೆಂಬ ನಿಷ್ಠುರ ಸತ್ಯವನ್ನು ಬಯಲಿ ಗೆಳೆಯಲು ಸಾಧ್ಯವಾಗುತ್ತದೆ.

ರೋಮ್ನಲ್ಲಿ ಕ್ಯಾಥೋಲಿಕರು ಕ್ರಿಶ್ಚಿಯಾನಿಟಿ ಸಂಘಟಿಸುವ ಸಂದರ್ಭದಲ್ಲಿ ಅಲ್ಲಿಯೂ ಭಾರತ ದಂತಹುದೇ ಬಹುಸಂಸ್ಕೃತಿ ಇತ್ತು. ನೂರಾರು ಸಂಪ್ರದಾಯಗಳು, ದೇವರುಗಳು, ನಂಬಿಕೆಗಳು, ಆಚರಣೆಗಳು ಇದ್ದವು. ಈ ಸಂಸ್ಕೃತಿಯನ್ನು ರಿಲಿ ಜನ್ನಿನ ಕಕ್ಷೆಯೊಳಗೆ ತರುವುದು ಸುಲಭ ಸಾಧ್ಯ ವಾಗಿರಲಿಲ್ಲ. ಆದ್ದರಿಂದ ಕ್ಯಾಥೋಲಿಕರು ತಮ್ಮ ರಿಲಿಜನ್ನಿನ ಬೌದ್ಧಿಕತೆಗಳ ಮೂಲಕ ಅದೊಂದು ಭ್ರಷ್ಟಗೊಂಡ, ಅವನತಿ ಹೊಂದಿದ ಪೇಗನ್ ರಿಲಿಜನ್ ಎಂದರು. ಅವರದ್ದೆಲ್ಲ ಅನೈತಿಕ ಆಚರಣೆ ಗಳು, ಮೂಢನಂಬಿಕೆಗಳು, ಗಾಡ್ಗೆ ಅಪ್ರಿಯ ವಾದ  ಕ್ರಿಯೆಗಳು ಎಂದು ಶಂಖ ಊದುತ್ತ  ‘ನಿಜ ವಾದ ರಿಲಿಜನ್ ನಮ್ಮ ಹತ್ತಿರವಿದೆ. ನೀವು ಬಂದರೆ ದೇವರಿಗೆ ನೇರವಾದ ಮಾರ್ಗ ತೋರಿಸುತ್ತೇವೆ, ಇಲ್ಲವಾದಲ್ಲಿ ನರಕದಲ್ಲಿ ಸಾಯುತ್ತೀರಿ’ ಎಂಬ ಭಯ ಹುಟ್ಟಿದರು. ಈ ಮೂಲಕ ಕ್ರಿಶ್ಚಿಯಾನಿಟಿ ಯತ್ತ ಜನರನ್ನು ಆಕಷರ್ಿಸಿದರು. ಈ ತಂತ್ರ ನಗರ ಗಳಲ್ಲಿ ಫಲಪ್ರದವಾಯಿತು. ಆದರೆ ಹಳ್ಳಿಗಳಲ್ಲಿ ಅಲ್ಲಿನ ಸಂಪ್ರದಾಯಗಳೇ ಆಚರಣೆಯಲ್ಲಿದ್ದವು. ಹಾಗಾಗಿ ಕೆಥೋಲಿಕರು ತಮಗಿಂತ ಪೂರ್ವದ ಹಾಗೂ ಸಮಕಾಲೀನ ರೋಮನ್ ಸಂಪ್ರದಾಯ ಗಳನ್ನು ಪಾಲಿಸುವವರನ್ನು ಪೇಗನ್ನರು ಎಂದು ಕರೆದರು. ಅಂದರೆ ಹಿಂದುಳಿದವರು ಅಥವಾ ಸುಳ್ಳು ರಿಲಿಜನ್ ಹೊಂದಿದವರು ಎಂದು.

ಹೀಗೆ ರೋಮ್ ಸಂಸ್ಕೃತಿಯನ್ನು ಪರಿವರ್ತನೆ ಮಾಡಿ ಕೆಥೋಲಿಕ್ ಕ್ರಿಶ್ಚಿಯಾನಿಟಿ ಕಟ್ಟುವಾಗ ಸ್ವಾಭಾವಿಕವಾಗಿ ರೋಮಿನ ಕೆಲವು ಸಾಂಪ್ರದಾಯಿಕ ಲಕ್ಷಣಗಳು ಅದರಲ್ಲಿ ಸೇರಿಕೊಂಡು ಬಿಟ್ಟವು. ಚರ್ಚ್ ಎನ್ನುವ ಸಂಸ್ಥೆ  ಉಗಮವಾಯಿತು. ರೋಮ್  ಪೋಪನ ಸಾಮ್ರಾಜ್ಯವಾಯಿತು. ರಿಲಿಜನ್ನ ಪ್ರಚಾರದಲ್ಲಿ ಪ್ರೀಸ್ಟ್ಗಳು, ಚರ್ಚ್ಗಳು ತೊಡಗಿಕೊಂಡವು. ಪ್ರೀಸ್ಟ್ ಕಸುಬು ಪ್ರೀಸ್ಟ್ಹುಡ್ ಆಗಿ ಪರಿವರ್ತನೆಯಾಯಿತು. ಕೆಥೋಲಿಕ್ ಪಂಥ ಹೀಗೆ ಶತಮಾನಗಳಕಾಲ ಮೆರೆಯುತ್ತ ಬಂತು.

ಹದಿನಾರನೇ ಶತಮಾನದಲ್ಲಿ ಪ್ರೊಟೆಸ್ಟಾಂಟ್ ಸುಧಾರಣಾವಾದಿಗಳು ರಿಲಿಜನ್ನಿನ ಪುನರ್ ಪರಿ ಶೀಲನೆ ಮಾಡಲು ಮುಂದಾದರು. ರಿಲಿಜನ್ ಅಂದರೆ ಸುಳ್ಳು ಮತ್ತು ಸತ್ಯಗಳ ಸಂಬಂಧವೆಂಬಂತೆ ಬಿಂಬಿಸಿದರು. ಮನುಷ್ಯ ಮತ್ತು ಗಾಡ್ನ ಸಂಬಂಧವೇ ಮನುಷ್ಯನನ್ನು ಮೃಗಗಳಿಂದ ಪ್ರತ್ಯೇಕಿಸಿದೆ. ಏಕೆಂದರೆ ಮನುಷ್ಯನಿಗೆ ತಾನು ಗಾಡ್ನ ಸೇವಕ ಎಂದು ತಿಳಿದಿದೆ. ಆದರೆ ಮೃಗಗಳಿಗೆ ಈ ಅರಿವು ಇಲ್ಲ. ಆದ್ದರಿಂದ ರಿಲಿಜನ್ ಎನ್ನುವುದು ಕೇವಲ ಮನುಷ್ಯರಿಗಾಗಿ ಇದೆ ಎಂದರು. ಆದರೆ ಪ್ರೊಟೆಸ್ಟಾಂಟರಿಗೂ ಒಂದು ಸವಾಲು ಇತ್ತು. ಕ್ರೈಸ್ತರೊಳಗೇ ಅನೇಕ ಪಂಥಗಳಿದ್ದದ್ದರಿಂದ ಯಾವ ಪಂಥದ ರಿಲಿಜನ್ ನಿಜವಾದ ರಿಲಿಜನ್ ಎಂದು ನಿರ್ಧರಿಸುವುದು.

ಈ ಹಿನ್ನೆಲೆಯಲ್ಲಿ ಪ್ರೊಟೆಸ್ಟಾಂಟ್ರು ಕೆಥೋಲಿಕರನ್ನು ವಿರೋಧಿಸಿದರು. ಕೆಥೋಲಿಕರು ನಿಜವಾದ ರಿಲಿಜನ್ನ್ನು ಉಳಿಸಿಕೊಂಡಿಲ್ಲ. ಪ್ರಾಚೀನ ಪೇಗನ್ನರ ಹಾಗೆ  ಭ್ರಷ್ಟರಾಗಿದ್ದಾರೆ. ರಿಲಿಜನ್ನನ್ನು ಅವನತಿಗೆ ತಂದು ಗಾಡ್ಗೆ ಅಪಚಾರ ಮಾಡುತ್ತಿದ್ದಾರೆಂದು ಹೋರಾಟಕ್ಕಿಳಿದರು. ಇವರ ವಿರೋಧದ ಕಾರಣ ಸರಳವಾಗಿತ್ತು. ಕ್ಯಾಥೋಲಿಕ್ ಚರ್ಚ್ಗಳು ಏನನ್ನು ಹೇಳುತ್ತವೆಯೋ ಕ್ಯಾಥೋಲಿಕರು ಅದನ್ನೇ ನಂಬುತ್ತಾರೆ. ಈ ಚರ್ಚ್ಗಳು ಅವರ ಪ್ರೀಸ್ಟ್ಗಳ ಅಧೀನಕ್ಕೆ ಒಳಪಟ್ಟಿರುತ್ತದೆ. ಈ ಅರ್ಥದಲ್ಲಿ ಪ್ರೀಸ್ಟ್ಗಳು ಕ್ರಿಶ್ಚಿಯಾನಿಟಿಯ ಕುರಿತು ಏನನ್ನು ಹೇಳುತ್ತಾರೋ ಅದೇ ಕ್ಯಾಥೋಲಿಸಿಸಂ ಆಗಿರುತ್ತದೆ. ಆದ್ದರಿಂದ ಪ್ರೊಟೆಸ್ಟಾಂಟ್ರು ಇದನ್ನು ವಿರೋಧಿಸಿ ‘ಧರ್ಮಗ್ರಂಥಗಳು ಏನನ್ನು ಹೇಳುತ್ತವೆಯೋ ಅದೇ ನಿಜವಾದ ಕ್ರಿಶ್ಚಿಯಾನಿಟಿ’ ಎಂದು ವಾದಿಸಿದರು.

ಕೆಥೋಲಿಕರ ಚರ್ಚ್ಗಳ ಪೂಜಾವೇದಿಕೆಗಳು, ವಿಧಿ-ಆಚರಣೆಗಳು, ಪ್ರಾಚೀನ ಪೇಗನ್ನರ ವಿಧಿಗಳಿಂದ ಭಿನ್ನವಾಗೇನಿಲ್ಲ. ಆದ್ದರಿಂದ ಕ್ಯಾಥೋಲಿಕ್ ಪಂಥವು ಭ್ರಷ್ಟವಾಗಿದೆ. ಕ್ಯಾಥೋಲಿಕ್ ಕ್ರಿಶ್ಚಿಯಾನಿಟಿ ಅಂದರೆ ‘ಕ್ರೈಸ್ತರ ಪೇಗನಿಸಂ’ ಎಂದು ಕಟುವಾಗಿ ಟೀಕಿಸಿದರು.

ಕೆಥೊಲಿಕ್ ಪಂಥವು ಅನೈತಿಕವಾಗಲಿಕ್ಕೆ, ಭ್ರಷ್ಟವಾಗಲಿಕ್ಕೆ ಅದರಲ್ಲಿನ ಪ್ರೀಸ್ಟ್ಗಳೇ ಕಾರಣ ಎಂದು ಪ್ರೊಟೆಸ್ಟಾಂಟ್ರು ನೇರವಾಗಿ ಕೆಥೋಲಿಕ್ ಪ್ರೀಸ್ಟ್ಗಳ ಮೇಲೆ ಆಕ್ರಮಣಕ್ಕಿಳಿದರು. ಅದಕ್ಕೆ ಅವರದ್ದೇ ಆದ ಸಮರ್ಥನೆಗಳನ್ನು ನೀಡಿದರು.

1. ರಿಲಿಜನ್ ಅಂದರೆ ಗಾಡ್ನ ಕೊಡುಗೆ. ಪ್ರತೀ ಮನುಷ್ಯರು ಸ್ವತಂತ್ರವಾಗಿ ವರ್ಶಿಪ್ ಮಾಡುವ ಮೂಲಕ ಗಾಡ್ನ ಸಂಧಿಸಬಹುದು. ಆದರೆ ಕ್ಯಾಥೋಲಿಕ್ ಪ್ರೀಸ್ಟ್ಗಳು ತಮ್ಮ ಸ್ವಾರ್ಥಕ್ಕಾಗಿ ಗಾಡ್ ಮತ್ತು ಮನುಷ್ಯರ ನಡುವೆ ಮಧ್ಯವರ್ತಿಗಳಾಗುತ್ತಿದ್ದಾರೆ. ಈ ಮೂಲಕ ಜನರಿಗೆ ಗಾಡ್ ಸಿಗದ ಹಾಗೆ ನೋಡಿಕೊಳ್ಳುತ್ತಿದ್ದಾರೆ.

2. ಗಾಡ್ ಈ ಸೃಷ್ಟಿಯ ಕಾರಣ ಮತ್ತು ಉದ್ದೇಶಗಳನ್ನು ಅವನೇ ನಿರ್ಧರಿಸುತ್ತಾನೆ. ಆದರೆ ಕೆಥೋಲಿಕ್ ಪ್ರೀಸ್ಟ್ಗಳು ರಿಲಿಜನ್ನನ್ನು ಸಾಂಸ್ಥೀಕರಿಸುತ್ತಿದ್ದಾರೆ. ಅಂದರೆ ಚರ್ಚ್ ಅನ್ನುವ ಸಂಸ್ಥೆಯ ಮೂಲಕ ಸ್ವಂತ ನಿಯಮಗಳನ್ನು ಹೇರಲು  ಹೊರಟಿದ್ದಾರೆ.

3. ಈ ಪ್ರೀಸ್ಟ್ಗಳು ತಮ್ಮ ಲಾಭ ಮತ್ತು ಜನಪ್ರಿಯತೆಗಾಗಿ ಜನರು ಸುಳ್ಳು ಆಚರಣೆಗಳನ್ನು ಪ್ರೋತ್ರಾಹಿಸುತ್ತಿದ್ದಾರೆ. ಅಂದರೆ ಪ್ರೀಸ್ಟ್ಗಳೇ ಅನೈತಿಕ ಕಾರ್ಯ ಮಾಡುತ್ತಿದ್ದಾರೆ.

4. ಚರ್ಚ್ ಅನ್ನುವ ಸಂಸ್ಥೆಯ ಮೂಲಕ ಜನರ ಮೇಲೆ ಅಧಿಕಾರ ಚಲಾಯಿಸುತ್ತ ಜನ ಈ ಸಂಸ್ಥೆಗೆ ಕೇಂದ್ರಿಕೃತರಾಗುವಂತೆ ಮಾಡುತ್ತಿದ್ದಾರೆ.

5. ರಿಲಿಜನ್ನಿನಲ್ಲಿ ಇವರಿಗೆ ನಿಜವಾದ ಶ್ರದ್ಧೆ ಇಲ್ಲ. ಪೇಗನ್ನರ ಪೂಜಾರಿ ಕಸುಬಿಗೂ ಕೆಥೋಲಿಕರ ಪ್ರೀಸ್ಟ್ ಕಸುಬಿಗೂ ಯಾವುದೇ ವ್ಯತ್ಯಾಸವಿಲ್ಲ. ಇಬ್ಬರೂ ಅನೈತಿಕರಾಗಿದ್ದಾರೆ.

6. ಸಮಾಜದಲ್ಲಿ ಪ್ರೀಸ್ಟ್ಗಳು ಮಾತ್ರ ಶ್ರೇಷ್ಠರು, ಜನರಿಗೆ ಮಾರ್ಗದರ್ಶನ ಮಾಡುವವರು. ಉಳಿದವರೆಲ್ಲ ನಂತರದವರು ಎಂಬ ಶ್ರೇಣೀಕರಣ ಮಾಡುತ್ತಿದ್ದಾರೆ.

7. ಇವರು ಪ್ರೀಸ್ಟ್ಹುಡ್ ಪಾರಂಪರಿಕವಾಗಿ ದಾಟುವಂತೆ ಮಾಡಿ ಸಮಾಜವನ್ನು ಹಿಡಿತದಲ್ಲಿಟ್ಟು ಕೊಳ್ಳುತ್ತಿದ್ದಾರೆ. ಇದೊಂದು ರೀತಿಯ ಸರ್ವಾಧಿಕಾರೀ ಧೋರಣೆ.

ಈ ರೀತಿ ಪ್ರೊಟೆಸ್ಟಾಂಟರ ಆರೋಪಗಳ ಪಟ್ಟಿ ದೀರ್ಘವಾಗಿದೆ. ಈ ಆರೋಪಗಳ ಹಿಂದಿನ ಉದ್ದೇಶ ಅವರು ನಿಜವಾದ ರಿಲಿಜನ್ನನ್ನು ಪಾಲಿಸುತ್ತಿಲ್ಲ ಎಂಬ ಕುರಿತಾಗಿತ್ತು. ಕೆಥೋಲಿಕ್ ರಿಲಿಜನ್ ಅನ್ನುವುದು ಪ್ರೀಸ್ಟ್ಗಳ ಬೇಕಾಬಿಟ್ಟಿ ವ್ಯವಹಾರವಾಗಿದೆ ಎಂಬುದು ಪ್ರೊಟೆಸ್ಟಾಂಟರ ಗ್ರಹಿಕೆಯಾಗಿತ್ತು. ಹೀಗಾಗಿ ಅವರು ನೇರವಾಗಿ ಪ್ರೀಸ್ಟ್ಗಳ ವಿರುದ್ಧ ಯುದ್ಧ ಸಾರಿದರು. ಕೆಥೋಲಿಕ್ ಕ್ರಿಶ್ಚಿಯಾನಿಟಿಯಲ್ಲಿದ್ದ ಲೋಪಗಳಿಗೆಲ್ಲ ಪ್ರೀಸ್ಟ್ಗಳನ್ನೇ ಹೊಣೆಯಾಗಿಸಿದರು.

ಹೀಗೆ ಕ್ಯಾಥೋಲಿಕ್ ಕ್ರಿಶ್ಚಿಯಾನಿಟಿಯು ಅಲ್ಲಿನ ಪ್ರೀಸ್ಟ್ಗಳ ಸ್ವಾರ್ಥ ಮತ್ತು ಸಮಯ ಸಾಧಕತನದಿಂದ ಅವನತಿಗೆ ಬಂದಿದೆ ಎಂಬುದು ಪ್ರೊಟೆಸ್ಟಾಂಟರ ತರ್ಕ. ಹಾಗಾಗಿಯೇ ಕ್ಯಾಥೋ ಲಿಕ್ ಚರ್ಚ್ಗಳ ಮೇಲೆ ಹಾಗೂ ಪ್ರೀಸ್ಟ್ಗಳ ಮೇಲೆ ನೈಜ ದಾಳಿಯನ್ನೂ ನಡೆಸಿದರು. ಪ್ರೀಸ್ಟ್ ಗಳು ಭ್ರಷ್ಟರು ಹಾಗೂ ಅನೈತಿಕರು ಎಂಬ ಕುರಿತಾಗಿ ವಿಧವಿಧವಾದ ಚಿತ್ರಣವನ್ನು ನೀಡಿದರು.  ಈ ಪ್ರೀಸ್ಟ್ಗಳನ್ನು ನಿರ್ನಾಮ ಮಾಡಿದಂತೂ ಕೆಥೋಲಿಕ್ ಕ್ರಿಶ್ಚಿಯಾನಿಟಿಯನ್ನು ಪರಿಶುದ್ಧ ರಿಲಿಜನ್ ಆಗಿ ಮಾಡಲು ಸಾಧ್ಯವಿಲ್ಲ ಎಂಬುದು ಪ್ರೊಟೆಸ್ಟಾಂಟರ ಅಭಿಪ್ರಾಯವಾಗಿತ್ತು.

3 ಟಿಪ್ಪಣಿಗಳು Post a comment
  1. ಕೃಷ್ಣಪ್ರಕಾಶ ಬೊಳುಂಬು's avatar
    ಕೃಷ್ಣಪ್ರಕಾಶ ಬೊಳುಂಬು
    ನವೆಂ 13 2011

    ಭಾರತದ ಫ್ಯೂಡಲ್ ವ್ಯವಸ್ಥೆ ಯಾವ ರೀತಿಯಲ್ಲಿ ಭಿನ್ನವಾಗಿತ್ತು ಎಂಬುದನ್ನೂ ನೀವೇ ವಿವರಿಸಬೇಕಾಗುವುದು.

    ಉತ್ತರ
    • Murari's avatar
      Murari
      ಆಗಸ್ಟ್ 4 2015

      India never had a Priestly class like cathiolics armed with power of religious dictat from bible in the first place. So the western protestants created a so cllled priestly class” in India by assigning it to brahmins.

      ಉತ್ತರ
  2. anonymous's avatar
    anonymous
    ಆಗಸ್ಟ್ 5 2015

    “ಭಾರತದ ಫ್ಯೂಡಲ್ ವ್ಯವಸ್ಥೆ

    Was there a feudal system in India?

    “Some historians and political theorists believe that the term feudalism has been deprived of specific meaning by the many ways it has been used, leading them to reject it as a useful concept for understanding society.”

    ಉತ್ತರ

Leave a reply to Murari ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments