ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 17, 2011

1

ಈ ಪರಿಯ ಬದುಕು………….

‍ನಿಲುಮೆ ಮೂಲಕ

– ಅರೆಹೊಳೆ ಸದಾಶಿವರಾವ್

ಮನುಷ್ಯ ಜೀವನದ ಬಹು ಚೋದ್ಯಗಳಲ್ಲೊಂದು ಮನುಷ್ಯ ಸಂಬಂಧಗಳು. ಇದನ್ನು ನಾನು ಚೋದ್ಯವೆಂದು ಕರೆದದ್ದು ನಿಮಗೆ ಪ್ರಶ್ನಾರ್ಥಕವಾಗಿ ಕಾಣಬಹುದು. ಏಕೆಂದರೆ ಮನುಷ್ಯ ಸಂಬಂಧಗಳಿಗೆ ಅದರದ್ದೇ ಆದ ಹಲವು ವ್ಯಾಖ್ಯೆಗಳಿರುವಾಗ ಮತ್ತು ಅದಕ್ಕೆ ಸಾಕಷ್ಟು ಉತ್ತರ, ಪುರಾವೆ ಅನುಭವಗಳೂ ಇರುವಾಗ ಅದನ್ನು ಚೋದ್ಯವೆಂದು ಗುರುತಿಸುವ ಔಚಿತ್ಯದ ಬಗ್ಗೆ ಪ್ರಶ್ನೆಗಳೇಳುವುದು ಸಹಜ.

ಇವತ್ತಿನ ಸಂಬಂಧ ಕೇವಲ ವ್ಯಾವಹಾರಿಕ ನೆಲಗಟ್ಟಿನ ಮೇಲೆ ಅಸ್ತಿತ್ವ ಕಂಡುಕೊಳ್ಳುತ್ತಿರುವುದರ ದುರಂತವೆಂದರೆ, ಯಾವ ಸಂಬಂಧಗಳಿಗೂ ಬೆಲೆ ಇಲ್ಲದ ದುಸ್ಥಿತಿ ತಲುಪಿದೆ. ಬಾಂಧವ್ಯ ಎಂಬುದು ಸಂಘಜೀವಿ ಮನುಷ್ಯನ ಬದುಕಿಗೆ ಅನಿವಾರ್ಯ ಎಂದಿದ್ದ ಕಾಲದಿಂದ, ಇಂದು ಅದಕ್ಕೂ ಮೊದಲು ವ್ಯವಾಹಾರ, ಅದರಿಂದ ನಮಗೆ ಸಿಗಬಹುದಾದ ಲಾಭ-ನಷ್ಟದ ಮಾತುಕತೆ ಮುಖ್ಯವಾಗುವ ತನಕ ಬದಲಾಗಿದೆ.

ದುರಂತ ನೋಡಿ, ಇತ್ತೀಚೆಗೆ ಮಾದ್ಯಮಗಳು ಮತ್ತು ದೂರಸಂಪರ್ಕ ಕ್ರಾಂತಿ ಪ್ರಪಂಚದ ಗಾತ್ರವನ್ನು ಕುಗ್ಗಿಸಿದೆ. ಬೆರಳ ತುದಿಯಲ್ಲಿಯೇ ಜಗತ್ತಿನ ಯಾವುದೋ ಮೂಲೆಂದ ಮತ್ತೆಲ್ಲಿಗೋ ಸಂಪರ್ಕ ಸಾಧ್ಯವಾಗಿಸಿ, ಭೌತಿಕ ದೂರವನ್ನು ಕಿರಿದುಗೊಳಿಸಿ, ನಿಜಾರ್ಥದಲ್ಲಿ ಪ್ರಪಂಚವನ್ನು ಒಂದು ಪುಟ್ಟ ಅಂಗಣವಾಗಿಸಿದೆ. ಆದರೆ ಇದನ್ನು ಹಿಂಬಾಲಿಸಿ ಸಂಬಂಧಗಳು ಮಾತ್ರ ಮೊದಲಿಗಿಂತಲೂ ಜಟಿಲವಾಗಿವೆ, ದೂರವಾಗಿವೆ, ವೈಮನಸ್ಸುಗಳು ಅಗಾಧವಾಗಿವೆ. ದಾರಿಯ ದೂರವನ್ನು ಕಿರಿದುಗೊಳ್ಳಿಸಿದ ಹೊರತಾಗಿಯೂ, ಮಾನಸಿಕವಾಗಿ ನಾವೆಲ್ಲರೂ ದೂರ, ಬಹುದೂರ ಸಾಗುತ್ತಿದ್ದೇವೆ. ಆಚೀಚೆ ಮನೆಯವರೇ ನಮಗೆ ಅಪರೂಪ-ಅಪರಿಚಿತರಾಗುತ್ತಿದ್ದರೆವಾಗುತ್ತಿದ್ದರೆ, ಟಿವಿ, ಮೋಬೈಲ್, ಇಂಟರ್ನೆಟ್‌ಗಳೇ ಪರಮಾಪ್ತವಾಗುತ್ತಿವೆ. ದುರಂತವೆಂದರೆ ಈ ಎಲ್ಲದರಿಂದ ನಾವು ಮಾನವಿ ಯತೆಂದ ಅಮಾನವಿಯತೆಗೆ, ಸಾಮಾಜಿಕ ಸ್ವಾಸ್ಥದಿಂದ ಸ್ವಹಿತದೆಡೆಗೆ, ಸ್ವಾಸ್ಥ್ಯದಿಂದ ಅಸ್ವಾಸ್ಥ್ತ್ಯದೆಡೆಗೆ ದಾಪುಗಾಲಿನಲ್ಲಿ ಪಯಣಿಸುತ್ತಿದ್ದೇವೆ.

ಇಂಥಹ ಬದುಕಿನ ಅಂತರಿಕ ಬದಲಾವಣೆಗಳಿಂದಾಗಿ ಮನುಷ್ಯತ್ವ ಮತ್ತು ಮನುಷ್ಯ ಸಹಜ ಸಂಬಂಧಗಳು ಕಮರುತ್ತಿವೆ. ಮಾಧ್ಯಮಗಳಲ್ಲಿ ನೀವು ಗಮನಿಸುತ್ತಿರಬಹುದು. ದಿನ ಬೆಳಗಾದರೆ ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರಗಳು ನಡೆಯುತ್ತಿರುತ್ತವೆ. ಎಲ್ಲಿಯೋ ಒಂದು ಅಪಘಾತವಾಗುತ್ತದೆ. ಅಲ್ಲಿ ಸಾಕಷ್ಟು ಸಾವು ನೋವುಗಳಾಗುತ್ತವೆ. ಆದರೆ ಅಂತ ಸ್ಥಳಗಳಲ್ಲಿ ಸೇರುವ ಜನರಲ್ಲಿ ಅನೇಕರು, ಸಹಾಯ ಹಸ್ತದ ಬದಲು ಸಿಕ್ಕ ಒಡವೆ, ಆಭರಣ ಹಾಗೂ ಇತರ ಬೆಲೆಬಾಳುವ ವಸ್ರುಗಳನ್ನು ದೋಚಿದ ಬಗ್ಗೆ ಓದಿದ್ದೇವೆ, ಕಂಡಿದ್ದೇವೆ, ಕೇಳಿದ್ದೇವೆ. ಅಂದರೆ ನಮ್ಮೊಳಗಿನ ಎಲ್ಲಾ ಸಂಬಂಧಗಳನ್ನೂ ಆರ್ಥಿಕ ವ್ಯಾಮೋಹ ಹೊಸಕಿಹಾಕಿಬಿಟ್ಟಿರುತ್ತದೆ.

ಹಣ, ಹಣ ಮತ್ತು ಕೇವಲ ಹಣ ಮಾತ್ರವೇ ಮುಖ್ಯವಾಗಿರುವುದರ ದುರಂತ ಇದು. ಬದುಕಿನ ಅಗತ್ಯತೆ ಮತ್ತು ಅವಶ್ಯಕತೆಗೆ ಅನುಗುಣವಾಗಿ ನಾವು ಬದುಕುತ್ತಿಲ್ಲ. ಇಂದು ನಮಗೆ ಎಲ್ಲವೂ ಬೇಕು-ಒಂದು ರೀತಿಯ ಸನ್ಯಾಸಿ ಸಂಸಾರಿಯಾದ ಕಥೆ ಇದ್ದಂತೆ. ಒಬ್ಬ ಸನ್ಯಾಸಿ ಮನೆಯಲ್ಲಿ ಇಲಿಗಳ ಕಾಟ ತಾಳಲಾರದೇ ಬೆಕ್ಕೊಂದನ್ನು ತಂದು, ಬೆಕ್ಕಿಗೆ ಹಾಲಿಗಾಗಿ ದನ ತಂದು, ದನ ನೋಡಿಕೊಳ್ಳುಲು ಹೆಂಡತಿಯನ್ನೇ ತಂದುಕೊಂಡ ಕಥೆಯ ಹಾಗೆ ನಮ್ಮ ನಿರೀಕ್ಷೆಗಳು ಇಂದು ಅಂತ್ಯ”ಲ್ಲದ ಹಂತ ಮುಟ್ಟಿ ಬಿಟ್ಟಿದೆ.

ಇನ್ನೊಂದು ನಮ್ಮನ್ನು ಅತಿಯಾಗಿ ಸೋಲಿಸಿದ ಅವಸ್ಥೆ ಎಂದರೆ ನಮ್ಮೊಳಗಿನ ಕೊಳ್ಳುಬಾಕ ಸಂಸ್ಕೃತಿ. ಇತ್ತೀಚೆಗೆ ಎಲ್ಲೆಂದರಲ್ಲಿ ಮಾಲ್‌ಗಳು ತಲೆ ಎತ್ತಿವೆ. ಒಂದು ಮಾಲ್ ಎಂದರೆ ಅದು ಕೇವಲ ಜೀವನದ ಒಂದು ಮಗ್ಗುಲನ್ನು ವೈಭವೋಪೇತವಾಗಿ ತೋರಿಸುವ, ಬದುಕಿನ ಮತ್ತೊಂದು ಮುಖವನ್ನು ಮರೆಮಾಚುವ ಒಂದು ರೀತಿಯ ಬದುಕನ್ನು ಅಡ”ಡುವಂತೆ ಮಾಡುವ ಸ್ಥಳ ಎಂಬುದು ನನ್ನ ಅನುಭವ.!. ನೀವು ಗಮನಸಿ, ನಗರ ಪ್ರದೇಶಗಳ ಮಕ್ಕಳು ಇಂದು ರಜಾದಿನದಲ್ಲಿ ಏನು ಮಾಡುತ್ತೀರೆಂದು ಕೇಳಿದರೆ, ಥಟ್ಟೆಂದು ಉತ್ತರಿಸುವ ಮಾತು ಅಚ್ಚರಿ ಹುಟ್ಟಿಸುತ್ತದೆ. ಆ ಮಾಲ್‌ಗೆ ಹೋದೆ, ಈ ಮಾಲ್ ನಲ್ಲಿ ಶಾಪಿಂಗ್ ಮಾಡಿದೆ……ಹೀಗೆ ನಗರದಲ್ಲಿರುವ ದೊಡ್ಡ ಮಾಲ್‌ಗಳ ಹೆಸರು ಹೇಳುವುದು ಅವರಿಗೆ ಹೆಮ್ಮೆಯ ವಿಷಯ.

ನನ್ನ ಮಗಳು ಆರನೆಯ ತರಗತಿಯಲ್ಲಿ ಓದುತ್ತಿದ್ದಾಳೆ. ನಿನ್ನೆಯಷ್ಟೇ ನಡೆದ ಘಟನೆ ಇದು. ಆಕೆಯ ತರಗತಿಯಲ್ಲಿ ಯಾವುದೋ ಒಬ್ಬ ಸಹಪಾಠಿ ತನ್ನ ಮೊತ್ತೊಬ್ಬ ಸಹಪಾಠಿ ಗೆಳೆಯನಲ್ಲಿ, ತನ್ನ ತಂದೆ ತೆಗೆದುಕೊಂಡ ಮೊಬೈಲ್ ಬಗ್ಗೆ ಹೇಳುತ್ತಾ ಅದಕ್ಕೆ ಮೂರೂವರೆ ಸಾವಿರ ರೂಪಾಯಿ ಎಂದನಂತೆ. ಅದನ್ನು ಕೇಳಿದ ಇನ್ನೊಬ್ಬ ಗಹಗಹಿಸಿ ನಕ್ಕು ತಮಾಷೆ ಮಾಡಿದನಂತೆ, ಕೇವಲ ಮೂರೂವರೆ ಸಾವಿರ…?. ನನ್ನ ಅಪ್ಪನ ಬಳಿ ಹದಿನೆಂಟುಸಾವಿರದ ಮೊಬೈಲ್ ಇದೆ!!!. ನಾವು ಬಾಲ್ಯದಲ್ಲಿ ನಮ್ಮ ಮೈಮೇಲಿನ ಬಟ್ಟೆ, ಜೀವನ ಶೈಲಿಂದ ತೀರಾ ಬಡತನದಲ್ಲಿ ಶಾಲೆಗೆ ಹೋಗುತ್ತಿದ್ದರೂ, ಅಪರೂಪಕ್ಕೊಮ್ಮೆ  ಸಹಪಾಠಿಗಳ ನಡುವೆ ಅವಮಾನವಾಗಿರಬಹುದಾದರೂ, ಅದೆಂದೂ ನಮ್ಮ ಅಂತಸ್ತನ್ನು “ಯಾಳಿಸುವ ಮಟ್ಟ ಮುಟ್ಟುತ್ತಿರಲಿಲ್ಲವಾಗಿತ್ತು. ಇಂದು ಮಕ್ಕಳ ಮನೋಸ್ಥಿತಿಯೂ ಶ್ರೀಮಂತಿಕೆ, ಐಷಾರಾ”ಗೆ ಈ ಪರಿ ಒಗ್ಗಿಕೊಂಡದ್ದು ದುರಂತವೇ ಸರಿ.

ಇನ್ನೂ ಒಂದು ಉದಾಹರಣೆಯನ್ನು ಇಲ್ಲಿ ಹೇಳಬೇಕೆನಿಸುತ್ತದೆ. ಮಗಳ ತರಗತಿಯಲ್ಲಿರುವ ಇನ್ನೋರ್ವ ಶ್ರೀಮಂತ ಹುಡಗನಿಗೆ ಒಂದೇ ಕೆಲಸ- ಎಲ್ಲರ ಬಳಿಯೂ ಇರುವ ಕಾರುಗಳ ಬಗ್ಗೆ ಕೇಳುವುದು. ಕಾರಿಲ್ಲದವರಿಗೆ ತಮಾಷೆ ಮಾಡಿ, ಕಾರಿದ್ದವರ ಎಲ್ಲಾ ಕಾರುಗಳನ್ನು ಡಬ್ಬಾ ಕಾರುಗಳೆಂದು ಹೀಯಾಳಿಸಿ, ತನ್ನಪ್ಪನ ಬಳಿ ಇರುವ ಕಾರ್ ಬಗ್ಗೆ ಹೇಳುತ್ತಾ ಅದೇ ಅತ್ಯುತ್ತಮ ಎಂದು ಬಿಂಬಿಸುವುದು. ಇಲ್ಲಿ ವಿಪರ್ಯಾಸವೆಂದರೆ, ನಮ್ಮ ನಮ್ಮೊಳಗಿನ ನಮ್ಮ ತನದ ಹೊರತಾಗಿ, ನಾವು ಮಕ್ಕಳಿಗೆ ಹೇಳಿಕೊಡುವ ಇನ್ನಿತರ ವಿಷಯಗಳು. ಇಂತಹ ಸನ್ನಿವೇಶದಲ್ಲಿ ನಮ್ಮ ಮಕ್ಕಳಿಗೆ ನಾವು ಉಚಿತ-ಅನುಚಿತದ ಬಗ್ಗೆ ತಿಳಿಹೇಳದಿದ್ದರೆ ಮೇಲೆ ಹೇಳಿದ ಹಾಗಾಗುತ್ತದೆ. ಬದುಕಿನ ಮತ್ತೊಂದು ಮಗ್ಗುಲು ಇವರಿಗೆ ಅಪರಿಚಿತಾವಗಿ ಉಳಿದುಬಿಡುತ್ತದೆ. ಇವರು ಹೀಗಾದಾಗ, ಮುಂದೊಮ್ಮೆ ಆಗಬಹುದಾದ ತೀರಾ ಸಣ್ಣ ಏಟನ್ನೂ ತಡೆದಯಕೊಳ್ಳಲಾರದ ಸ್ಥಿತಿ ತಲುಪಿಬಿಡುತ್ತಾರೆ.

ಹೀಗೆ ಮಾನವ ಬದುಕಿನ ಬಾಲ್ಯದಿಂದಲೇ ಸಂಬಂಧಗಳನ್ನು ಆರ್ಥಿಕ ಸ್ಥಿತಿಯ ಮೇಲೆ ಅಳತೆ ಮಾಡುವ ಮನ:ಸ್ಥಿತಿಗೆ ಮಗು ಒಗ್ಗಿಕೊಂಡರೆ, ಭವಿಷ್ಯದಲ್ಲಿ ನಾವು ಯಾವ ರೀತಿಯ ಸಂಘ ಜೀವತ್ವವನ್ನು ನಿರೀಕ್ಷಿಸಬಹುದು?  ನಮ್ಮ ಕೊಳ್ಳುಬಾಕ ಸಂಸ್ಕೃತಿಯ ಬಗ್ಗೆ ಹೇಳುತ್ತಿದ್ದೆ. ಇಲ್ಲಿ ಒಂದೆರಡು ಮಾತುಗಳು ಮ್ಮ ಬದುಕಿನ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಹೇಳಲೇ ಬೇಕು. ಇವತ್ತಿನದ್ದು ಒಂದು ಕೊಂಡರೆ ಒಂದು ಉಚಿತ ಪ್ರಪಂಚ. ಇತ್ತೀಚೆಗೆ ಸಭೆಯೊಂದರಲ್ಲಿ ಒಬ್ಬರು ಈ ಬಗ್ಗೆ ಹೇಳುತ್ತಿದ್ದರು. ಇಂದಿನ ನಮ್ಮ ಕೊಳ್ಳುಬಾಕ ಸಂಸ್ಕೃತಿಯ ಬಗ್ಗೆ ಹೇಳುತ್ತಾ, ಹತ್ತು, ಇಪ್ಪತ್ತು ರೂಪಾ ದರ ಕಡಿತದ ಬಗ್ಗೆ ಎಲ್ಲೋ ಇದ್ದವರು ಜಾಹಿರಾತಿನಲ್ಲಿ ನೋಡುತ್ತೇವೆ. ಬಹಳ ದೂರದಿಂದ ಅದನ್ನು ತರಲು, ಕಾರೋ, ಆಟೋವೋ ಅಥವಾ ಲಭ್ಯವಿರುವ ಅನುಕೂಲದ ಮೂಲಕ ನೂರಾರು ರೂಪಾ ಖರ್ಚು ಮಾಡಿ ಹೋಗುತ್ತೇವೆ. ಅಲ್ಲಿ ಮಾಲ್‌ನಲ್ಲಿ ಆಕರ್ಷಕವಾಗಿ ಜೋಡಿಸಿರುವ ವಸ್ತುಗಳ ಪಕ್ಕದಲ್ಲಿ ಹತ್ತು ಹಲವು ಬಗೆಯ ಇನ್ನಿತರ ವಸ್ತುಗಳೂ ಸೇರಿರುತ್ತವೆ. ಆ ಸ್ಥಳಕ್ಕೆ ಹೋಗುತ್ತಲೇ, ನಮ್ಮ ಅವಶ್ಯಕತೆಗಳ ಪಟ್ಟಿ ಬೆಳೆಯುತ್ತದೆ. ಹತ್ತಿಪ್ಪತ್ತು ರೂಪಾಗಳ ಉಳಿಸುವಿಕೆಗೆಂದು ಹೋದ ನಾವು, ಅದರ “ಹಿಂದೆ ಬೇಕು, ಬೇಡವಾದ ವಸ್ತುಗಳನ್ನೆಲ್ಲಾ ಖರೀದಿಸಿ, ಬಿಲ್‌ನ್ನು ದುಪ್ಪಟ್ಟು ಮಾಡಿಕೊಂಡು ಮನೆಗೆ ಹಿಂದಿರುಗುತ್ತೇವೆ!!. ಮೆನಗೆ ಮರಳುವಾಗ ಕೇಜಿ ಅಕ್ಕಿ ತರಲು ಹೋದವ, ಅದನ್ನು ಬಿಟ್ಟು ಬೇರೆಲ್ಲವನ್ನೂ ತರುವ ಸಂಭವಗಳೇ ಹೆಚ್ಚು!.

ಇದನ್ನೇಕೆ ಹೇಳಬೇಕಾಯ್ತೆಂದರೆ, ಇಂದು ಹೆಚ್ಚಿನೆಲ್ಲಾ ಮಾಲ್‌ಗಳು ತಮ್ಮ ಈ ರೀತಿಯ ಮಾಕೆಟಿಂಗ್ ಪ್ಲಾನ್‌ನಿಂದಾಗಿ ಜನರನ್ನು ಕೊಳ್ಳುಬಾಕರನ್ನಾಗಿಸಿ, ತಾವು ಬೆಳೆಯುತ್ತಿವೆ. ಇಲ್ಲವಾದರೆ, ಟಾಟಾ, ಬಿರ್ಲಾ, ರಿಲಯನ್ಸ್ ನಂತಹ ಕಂಪೆನಿಗಳೂ ರೀಟೈಲ್ ಮಾರ್ಕೆಟಿಂಗ್ ಎಂಬ ಹೆಸರಿನಡಿ, ‘ಕಿರಾಣಿ ಅಂಗಡಿ’ ತೆರೆಯುವುದಿಲ್ಲವಾಗಿತ್ತು.

ಬಹುಶ: ಮೇಲಿನೆಲ್ಲಾ ವಿಷಯಗಳಿಗೂ ಇಂದು ಕಾರಣವಾಗಿರುವುದು ಆರ್ಥಿಕ ಸಂಪನ್ಮೂಲ ಹೆಚ್ಚಿರುವುದೂ ಕಾರಣವೇನೋ. ಮೊದಲಿನಂತೆ ವರ್ಗ ಸಂಘರ್ಷಗಳು ಇಂದೂ ಇದ್ದರೂ, ಪ್ರತೀ ವ್ಯಕ್ತಿಯ ಸಂಪಾದನೆಯಲ್ಲಿ ಹೆಚ್ಚಳವಾಗಿದೆ!. ಸಂಪಾದನೆ ಯಾವತ್ತಿದ್ದರೂ ಅವಶ್ಯಕತೆಯನ್ನನುಸರಿಸಿ ಏರಿಳಿತ ಕಾಣಲೇ ಬೇಕು. ಇವತ್ತೇನಾಗಿದೆ ಎಂದರೆ, ಸಂಪಾದನೆಗೆ ಅನೇಕ ಮಾರ್ಗಗಳು ಹುಟ್ಟಿಕೊಂಡಿವೆ. ಎಲ್ಲಾ ಮಾರ್ಗಗಳೂ ಮುಚ್ಚಿದಾಗ, ತೆರೆದುಕೊಂಡಿರುವ ಮಾರ್ಗವೆಂದರೆ, ಅದುವೇ ಸಾಲ ಮಾರ್ಗ. ನೀವಾವುದೇ ವಸ್ತು ಕೊಳ್ಳಬೇಕೆಂದಿದ್ದರೂ ನಿಮಗೆ ಸಾಲ ಲಭ್ಯ. ಇದರಿಂದಾಗಿ ಮನುಷ್ಯನಿಗೆ ಐಷಾರಾಮಿಯಾಗಲು ಹೆಚ್ಚು ಕಷ್ಟ ಪಡಬೇಕಿಲ್ಲ. ಬ್ಯಾಂಕುಗಳು ಪೈಪೋಟಿಯಲ್ಲಿ ಮನೆ ಬಾಗಿಲಿಗೆ ಬಂದು ಸಾಲ ‘ಬಿಸಾಡು’ವ ವ್ಯವಸ್ಥೆ ಮಾಡಿದಾಗಲೇ ಈ ಸಂಬಂಧ ಹೀನ ಬದುಕು ಆರಂಭವಾತು. ಮುಂದೆ ಇದೇ ಆಭ್ಯಾಸವಾದಾಗ, ಮನುಷ್ಯ ತನ್ನ ಬೇಡಿಕೆಗೆ ಅನುವಾಗಿ ಶತಾಯ ಗತಾಯ ಸಾಲ ಮಾಡಿಯಾದರೂ ಈ ಜೀವನಕ್ಕೆ ಒಗ್ಗಿಕೊಳ್ಳುವ ಅನಿವಾರ್ಯತೆಗೊಳಪಟ್ಟ. ಪರಿಣಾಮವಾಗಿ ಈ ಪರಿಯ ಸಾಮಾಜಿಕ ಬದಲಾವಣೆ ಆರಂಭಗೊಂಡು ಮುಂದುವರಿತು, ಕೊಳ್ಳುಬಾಕ ಮನಸ್ಸು, ಸಂಸ್ಕೃತಿಯಾಗುತ್ತಾ ಹೋತು.

ಯಾಕೋ, ಇತ್ತೀಚಿನ ಸಂಬಂಧಗಳು ಮತ್ತು ಅವುಗಳು ಹುಟ್ಟಿಸಿರುವ ಭ್ರಮನಿರಸನಗಳು ಆಗೆಲ್ಲಾ ಯೋಚಿಸಲು ಕಾರಣವಾತು. ಸ್ವತಃ ಮತ್ತು ಸ್ವ ಲಾಭದ ಆಕಾಂಕ್ಷೆಯ ಮುಂದೆ ಬೇರೆಲ್ಲವೂ ಗೌಣವಾಗುತ್ತಿರುವ ವಿಷಾದನೀಯ ಪರಿಸ್ಥಿತಿಂದ, ಸಮಾಜ ಮುಖಿ ಚಿಂತನೆಗಳ ಬುಡಕ್ಕೆ ಬಿದ್ದಿರುವ ಕೊಡಲಿ ಏಟು, ಯಾಕೋ ನಿರಾಶೆ ಹುಟ್ಟಿಸುತ್ತದೆ. ಮುಖ್ಯವಾಗಿ ಚಿಂತನೆಗೆ ಹಚ್ಚುತ್ತದೆ. ಆಗೆಲ್ಲಾ ಈ ಯೋಚನೆಗಳು ಹುಟ್ಟಿಕೊಳ್ಳುತ್ತವೆ.

* * * * * * * * *

ಚಿತ್ರಕೃಪೆ : ಅಂತರ್ಜಾಲ

1 ಟಿಪ್ಪಣಿ Post a comment
  1. ಸಿಪಾಯಿ ರಾಮು's avatar
    ನವೆಂ 17 2011

    ವಿಚಾರಶೀಲ ಲೇಖನಕ್ಕೆ ಧನ್ಯವಾದಗಳು. ಲೇಖನದ ಹಲವು ಅಂಶಗಳನ್ನು ಒಪ್ಪುವೆನಾದರೂ ಕೆಲವೊಂದು ವಿಚಾರಗಳನ್ನು ಬೇರೆಯದಾದ ದೃಷ್ಟಿಕೋನವೊಂದರಿಂದ ನೋಡಬಯಸುತ್ತೇನೆ. ಟೀವಿ, ಮೊಬೈಲ್, ಇಂಟರ್ನೆಟ್-ಗಳಿಂದಾಗಿ ಮಾನವೀಯತೆಯನ್ನು, ಮನುಷ್ಯ ಸಂಬಂಧಗಳನ್ನು ಕಳೆದುಕೊಳ್ಳುತ್ತಿದ್ದೇವೆ ಎನ್ನುವುದನ್ನು ನಾನು ಒಪ್ಪುವುದಿಲ್ಲ.

    ನಾನು ಚಿಕ್ಕವನಾಗಿದ್ದಾಗ ನನ್ನ ಅಜ್ಜಿ ಇದ್ದುದು ಬೇರೆ ಊರಲ್ಲಿ. ಅವರನ್ನು ಕಾಣುತಿದ್ದುದು, ಅವರ ಜೊತೆ ಮಾತನಾಡುತ್ತಿದ್ದುದು ರಜೆ ಬಂದಾಗ ಮಾತ್ರ — ಅಂದರೆ ಸಾಮಾನ್ಯವಾಗಿ ವರ್ಷಕ್ಕೆ ಎರಡು ಸಲ ಮಾತ್ರ. ಈಗ ನನಗೆ ಮಾತನಾಡಬೇಕೆನಿಸಿದಾಗ ಫೋನ್ ಮಾಡುವೆ. ವಾರಕ್ಕೊಮ್ಮೆ ಇಂಟರ್ನೆಟ್ಟಿನಲ್ಲಿ “ಎದುರುಬದುರು” ಕುಳಿತು ಹರಟುವೆ.

    ಈಗೆರಡು ವಾರದ ಹಿಂದೆ facebookನಿಂದ ಪರಿಚಯವಾಗಿದ್ದ ಹಲವಾರು ಸ್ನೇಹಿತರೆಲ್ಲಾ ಒಟ್ಟಾಗಿದ್ದರು. ಹೊಸ ಹೊಸ ಸಂಬಂಧಗಳಿಗೆ ಇಂಟರ್ನೆಟ್ ಸಹಾಯ ಮಾಡುತ್ತಿದೆಯಲ್ಲವೆ?

    ಹೊಸ ಆವಿಷ್ಕಾರಗಳಿಂದ ಒಳಿತು ಹಾಗೂ ಕೆಡಕು ಎರಡೂ ಇರುವುದು ಸಾಮಾನ್ಯ. ನಾವು ಒಳಿತನ್ನು ಆರಿಸಿಕೊಂಡು ಕೆಡುಕುಗಳನ್ನು ಬದಿಗಿರಿಸಬೇಕು ಅಷ್ಟೆ.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments