ವಿಷಯದ ವಿವರಗಳಿಗೆ ದಾಟಿರಿ

Archive for

22
ನವೆಂ

ಅತಿಯಾದ ಕಾಳಜಿಯೂ ಮುಳುವಾದೀತು ಜೋಕೆ…!

-ವಿಷ್ಣುಪ್ರಿಯ

ಮನುಷ್ಯನ ಕೊಳ್ಳುಬಾಕ ಸಂಸ್ಕೃತಿಯ ಲಾಭ ಮಾಡಿಕೊಳ್ಳಲು ಹವಣಿಸುವ ಕಂಪನಿಗಳು `ಆರೋಗ್ಯದ ಬಗ್ಗೆ ಮಾಹಿತಿ ಕೊಡುವ ಉಪಕರಣಗಳು’ ಎಂಬ ಹಣೆಪಟ್ಟಿಯೊಂದಿಗೆ ಹಲವಾರು ಉಪಕರಣಗಳನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಮೊದಲೇ ಈ ರೋಗಗಳಿಂದಾಗಿ ಕಂಗೆಟ್ಟಿರುವಂಥ ಜನ ಈ ಉಪಕರಣಗಳನ್ನು ಮುಗಿಬಿದ್ದು ಕೊಳ್ಳುತ್ತಾರೆ.

ಅತಿಯಾದರೆ ಅಮೃತವೂ ವಿಷ ಎನ್ನುತ್ತಾರೆ. ಕೆಲವೊಂದು ಬಾರಿ ನಮ್ಮ ವಿಪರೀತ ಕಾಳಜಿಯೇ ನಮಗೆ ಮುಳುವಾಗುವಂಥ ಪ್ರಸಂಗಗಳೂ ಬರುತ್ತವೆ. ದಪ್ಪಗಾಗುತ್ತೇವೆ ಎಂಬ ಆತಂಕದಲ್ಲಿ ಆಹಾರ ಬಿಡುತ್ತೇವೆ; ಪೋಷಕಾಂಶದ ಕೊರತೆ ಎದುರಾಗುತ್ತದೆ; ನಿತ್ರಾಣ ಆವರಿಸಿಕೊಳ್ಳುತ್ತದೆ; ಮತ್ತೆ ಅದನ್ನು ಸರಿಪಡಿಸುವುದಕ್ಕೆ ಔಷಧಿ ತೆಗೆದುಕೊಳ್ಳುತ್ತೇವೆ; ಉಪ್ಪು ತಿಂದರೆ ಬಿಪಿ ಬರುತ್ತೆ ಅಂತ ಉಪ್ಪು ತೀರಾ ಕಡಿಮೆ ತಿನ್ನುತ್ತೇವೆ; ಬಿಪಿ ಕಡಿಮೆಯಾಗುತ್ತದೆ; ಮತ್ತೆ ಗಿಡ್ಡಿನೆಸ್ ಕಾಡುತ್ತದೆ; ಅದಕ್ಕೆ ಔಷಧಿ.

ಹೌದು, ಮನುಷ್ಯ ಸದಾ ಏನೋ ಮಾಡುತ್ತೇನೆಂದು ಹೊರಡುತ್ತಾನೆ. ಅದಿನ್ನೇನೋ ಆಗುತ್ತದೆ. ಇತ್ತೀಚಿನ ದಿನಗಳಲ್ಲಿ ವಿವಿಧ ರೋಗಗಳೇ ಪ್ರಪಂಚವನ್ನು ಆಳುತ್ತಿರುವಂಥ ಸಂದರ್ಭದಲ್ಲಿ ಮಾನವ ಯಾವುದೋ ಹೊಸ ರೋಗದ ಹೆಸರು ಕೇಳಿದರೆ ಭೀತಿಗೊಳಗಾಗುತ್ತಿದ್ದಾನೆ. ಅದರಿಂದ ರಕ್ಷಣೆ ಪಡೆಯಬೇಕು ಅಂತ ಮೊದಲೇ ಔಷಧಿ ತೆಗೆದುಕೊಳ್ಳುವ ಆತುರ ತೋರುತ್ತಾನೆ. ಇದಕ್ಕಿಂತಲೂ ಹೆಚ್ಚಾಗಿ ಮನುಷ್ಯನ ಕೊಳ್ಳುಬಾಕ ಸಂಸ್ಕೃತಿಯ ಲಾಭ ಮಾಡಿಕೊಳ್ಳಲು ಹವಣಿಸುವ ಕಂಪನಿಗಳು `ಆರೋಗ್ಯದ ಬಗ್ಗೆ ಮಾಹಿತಿ ಕೊಡುವ ಉಪಕರಣಗಳು’ ಎಂಬ ಹಣೆಪಟ್ಟಿಯೊಂದಿಗೆ ಹಲವಾರು ಉಪಕರಣಗಳನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಮೊದಲೇ ಈ ರೋಗಗಳಿಂದಾಗಿ ಕಂಗೆಟ್ಟಿರುವಂಥ ಜನ ಈ ಉಪಕರಣಗಳನ್ನು ಮುಗಿಬಿದ್ದು ಕೊಳ್ಳುತ್ತಾರೆ; ಆ ಉಪಕರಣಗಳ ಪ್ರಾಮಾಣಿಕತೆಯನ್ನು, ಅವುಗಳ ವಿಶ್ವಾಸಾರ್ಹತೆಯನ್ನು ಪರಿಗಣಿಸುವ, ಈ ವಿಚಾರದ ಬಗ್ಗೆ ಅರೆಕ್ಷಣವೂ ಯೋಚನೆ ಮಾಡುವುದಕ್ಕೇ ಹೋಗುವುದಿಲ್ಲ. ಕೊಂಡುಕೊಂಡು ಬಿಡುತ್ತೇನೆ. ತಪ್ಪು ಮಾಹಿತಿ ನಿಡಿ ರೋಗ ಇದೆ ಎಂದು ಹೇಳಿತೋ ನಮ್ಮ ಆತಂಕ ಹೆಚ್ಚುತ್ತದೆ, ಒಂದು ವೇಳೆ ಇರುವ ರೋಗವನ್ನು ಸೂಚಿಸದೇ ಇದ್ದಲ್ಲಿ, ನಮ್ಮ ಸಮಸ್ಯೆ ಹಾಗೆಯೇ ಉಳಿದುಕೊಳ್ಳುತ್ತದೆ.

ಇನ್ನು ಕೆಲವೊಂದು ಬಾರಿ ಯಾವುದೇ ಸಮಸ್ಯೆಗೆಂದು ಚಿಕಿತ್ಸೆ ಪಡೆಯುತ್ತೇವೆ. ಆದರೆ ಆ ಚಿಕಿತ್ಸೆ ಇನ್ನೊಂದು ಸಮಸ್ಯೆಗೆ ಕಾರಣವಾಗುತ್ತದೆ. ಹಲವಾರು ಬಾರಿ ಔಷಧಿಗಳು ಅಡ್ಡ ಪರಿಣಾಮ ಬೀರಿ ಆ ಸಮಸ್ಯೆಯನ್ನು ಸರಿಪಡಿಸಿಕೊಳ್ಳುವುದಕ್ಕೆ ಇನ್ನೊಂದಷ್ಟು ಸಮಯ ಹೆಣಗಾಡಬೇಕಾದಂಥ ಪರಿಸ್ಥಿತಿ ಬರುತ್ತದೆ. ಇಷ್ಟೇ ಆಗಿದ್ದರೆ ಹೀಗೆಯೋ ಸುಧಾರಿಸಬಹುದಿತ್ತು. ಆದರೆ ಕೆಲವೊಂದು ಚಿಕಿತ್ಸೆಗಳು ಕ್ಯಾನ್ಸರ್ನಂಥ ಗಂಭೀರ ರೋಗಗಳಿಗೆ ಕಾರಣವಾಗುತ್ತವೆ. ಹೀಗೆಲ್ಲ ಆಗುತ್ತದೆಯೇ? ನಿಜಕ್ಕೂ ಈ ಉಪಕರಣಗಳು ನಿಖರವಾದ ಮಾಹಿತಿಯನ್ನು ಕೊಡುವುದಿಲ್ಲವೇ? ಒಂದು ಚಿಕಿತ್ಸೆ ಇನ್ನೊಂದು ರೋಗವನ್ನು ಸೃಷ್ಟಿ ಮಾಡಿತ್ತದೆಯೇ? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ.
ಮತ್ತಷ್ಟು ಓದು »

21
ನವೆಂ

ಶ್ರೀರಾಮುಲು ಪುರಾಣದೊಳ್ ಭಾಜಪದ ಅವಸ್ಥೆ….!!

-ಅರೆಹೊಳೆ ಸದಾಶಿವರಾವ್

ಇಡೀ ಕರ್ನಾಟಕದ ರಾಜಕೀಯ ನಕ್ಷೆಯ ಮೇಲೆ ತನ್ನ ಪ್ರಭಾವ ಬೀರಿ, ಒಂದು ಹಂತದಲ್ಲಿ ಪಕ್ಷದ ಹೈಕಮಾಂಡ್‌ನ್ನೂ ತನ್ನ ಬಿಗಿ ಹಿಡಿತದಲ್ಲಿಟ್ಟುಕೊಂಡಿದ್ದ ಬಳ್ಳಾರಿಯ ಕಥೆ ನೋಡಿ. ಇಂದು ತಮ್ಮಿಂದ ಉಪಕಾರ ಪಡೆದ ಎಲ್ಲರಿಗೂ ತಲೆನೋವಾಗಿ, ಉಪಚುನಾವಣೆಗೆ ಕಾರಣವಾಗಿ, ’ಬಹಿರಂಗ’ವಾಗಿ, ಅ ಕಾರಣವಾಗಿ ಭಾಜಪದಿಂದ ಡೈವೋರ್ಸ್ ಪಡೆದು, ಶ್ರೀರಾಮುಲು ನಡೆಸಿರುವ ಕಾರುಬಾರು, ಎಲ್ಲರ ಹುಬ್ಬೇರಿಸಿದೆ.
ಅಲ್ಲಿ, ಚಂಚಲಗೂಡಿನಲ್ಲಿ ಗಣಿಯ ಹಿರಿಧಣಿ,
ಪರಪ್ಪನ ಅಗ್ರಹಾರದಲ್ಲಿ ಭಾಜಪದ ಕಣ್ಮಣಿ!
ಈ ನಡುವೆ ಶ್ರೀರಾಮುಲುದ್ದೇ ಬೇರೆ ಹಣಾಹಣಿ.
ಈಗ ಬಳ್ಳಾರಿಗೆ ಮತ್ತೆ ಚುನಾವಣೆಯ ಸಗಣಿ!!!

ಈ ಸಗಣಿ ಎಂದ ಬಗ್ಗೆ ನಿಮಗೆ ಆಶ್ಚರ್ಯವಿರಬಹುದು. ಆದರೆ ಇದು ಶ್ರೀರಾಮುಲು ತಮ್ಮ ಮುಖಕ್ಕೆ ಮೆತ್ತಿದ ಸಗಣಿಯನ್ನು ಯಾರದ್ದೋ  ಮುಖಕ್ಕೆ ಹಚ್ಚಿ, ಏನೋ ಮಾಡಲು ಹೊರಟಿದ್ದಾರೆ. ಇನ್ನುಳಿದ ಕೇವಲ ಅಲ್ಪ ಸಮಯಕ್ಕೆ ಅಲ್ಲಿ ಚುನಾವಣೆಯ ಕಾವೇರುವಂತೆ ಮಾಡಿದ ಶ್ರೀರಾಮುಲು ಒಂದು ರೀತಿಯಲ್ಲಿ ತನ್ನ ಆಪ್ತ ಜನಾರ್ದನ ರೆಡ್ಡಿಯೊಂದಿಗೆ ಸೇರಿಕೊಂಡು, ರಾಜ್ಯಕ್ಕೆ ಸಾಲು ಸಾಲಾಗಿ ಉಪಚುನಾವಣೆಗಳನ್ನೇ  ತಂದವರು ಎಂಬುದು ಗಮನಾರ್ಹ!. ಇನ್ನೇನು ಸರಕಾರ ರಚನೆಗೆ ಅಣಿಯಾಗಬೇಕು ಎಂದು ಭಾಜಪ ಶಾಲು ಕೊಡವಿಕೊಳ್ಳುವಷ್ಟರಲ್ಲಿ ಎದುರಾದದ್ದು ಬಹುಮತದ ಕೊರತೆ. ಆಗ ಪಕ್ಷೇತರರಿಗೆ ಲಾಟರಿ ಹೊಡೆಸಿ, ಅವರನ್ನು ಹೆಲಿಕಾಪ್ಟರ್‌ನಲ್ಲಿಯೇ ತಂದು, ಖರೀದಿಸಿ ಸರಕಾರ ರಚಿಸಿದ ನಂತರ, ’ಆಪರೇಷನ್ ಕಮಲ’ದ ಆಮಿಷದ ಹಬ್ಬ. ಈ ಮೂಲಕ ಮತ್ತೆ ಮತ್ತೆ ಉಪಚುನಾವಣೆಗಳನ್ನು ಬೇರೆ ಬೇರೆ ಕ್ಷೇತ್ರದಲ್ಲಿ ಜನತೆಯ ಮೇಲೆ ಹೇರಿದ್ದು, ಇದೇ ರೆಡ್ಡಿ ಮತ್ತು ಕಂಪೆನಿ.
ಮತ್ತಷ್ಟು ಓದು »

18
ನವೆಂ

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ : ಬಣ್ಣದ ಬದುಕು 11 -ಮದ್ದಿಗೆ ಒದಗಿದ ಸಿದ್ದೌಷದ…..

ವೆಂಕಟರಮಣ ಭಟ್ಟರನ್ನು ಮೂಡಬಿದರೆಗೆ ಕರೆತರಲು ಜನ ಕಳುಹಿಸಿದೆ. ಅವರು ಬಂದರು.

“ಏನಾಗಬೇಕಿತ್ತು, ಜ್ಞಾನದಾಸಕ್ತನೇ, ಆನು ಬಂದುದರಿಂದ ಆಗಲೇನಿಹುದು?” ಎಂದರು. ಪ್ರಾಸಬದ್ಧವಾಗಿ ಮಾತನಾಡುವುದು ಅವರಿಗೊಂದು ಶ್ರಮದ ಕಾರ್ಯವಲ್ಲ.

ಕಾಗದ ಲೇಖನಿಗಳನ್ನು ಸಿದ್ಧವಾಗಿರಿಸಿಕೊಂಡೇ, ಅವರಲ್ಲಿ ನನ್ನ ಅಗತ್ಯಗಳನ್ನು ವಿವರಿಸಿದೆ.

ಪ್ರಸಂಗ ರಚನೆ

 “ಕಥೆಯನ್ನು ಹೇಳಿ” ಎಂದುದಕ್ಕೆ, ಆ ಕಥೆಯನ್ನು ವಿವರಿಸಿದೆ.
ನನ್ನ ಕಥಾ ವಿವರಣೆ ಒಂದರ್ಧ ಗಂಟೆಯ ಹೊತ್ತು ಮಾತ್ರ ನಡೆದಿರಬಹುದು.

“ಹೂಂ ಬರೆದುಕೊಳ್ಳಿ” ಎಂಬ ಅಪ್ಪಣೆ ಆಯಿತು.

ನಾನು ಬರೆದುಕೊಳ್ಳತೊಡಗಿದೆ.
ಮತ್ತಷ್ಟು ಓದು »

17
ನವೆಂ

ಸಂಸ್ಕೃತಿ ಸಂಕಥನ – ೧೧ -ಬ್ರಾಹ್ಮಣರಿಗೆ ಖಳನಾಯಕರ ಪಟ್ಟ ಕಟ್ಟಿದ ಇತಿಹಾಸ

– ರಮಾನಂದ ಐನಕೈ

ಬ್ರಾಹ್ಮಣರಿಗೆ ಖಳನಾಯಕರ ಪಟ್ಟ ಕಟ್ಟಿದ ಇತಿಹಾಸ

ಇತ್ತೀಚೆಗೆ ನಾಡಿನ ಪ್ರಸಿದ್ಧ ವ್ಯಕ್ತಿಯೊಬ್ಬರು ವೇದಿಕೆಯ ಮೇಲೆ ಮಾತನಾಡುತ್ತ ಈ ದೇಶ ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ವೈದಿಕಶಾಹಿ ಆಡಳಿತ ಕಂಡಿದೆ. ಇವೆಲ್ಲವುಗಳಲ್ಲಿ ವೈದಿಕಶಾಹಿ ಆಡಳಿತ ಭಯಂಕರವಾಗಿತ್ತು ಎಂದಿದ್ದಾರೆ.  ನನ್ನ ಇತಿಹಾಸ ಜ್ಞಾನದ ಪ್ರಕಾರ ಮುಸ್ಲಿಂ,ಕ್ರಿಶ್ಚಿಯನ್ ಹಾಗೂ ಕೆಲವು ಕಾಲ ಮೌರ್ಯರು, ಗುಪ್ತರು ಮುಂತಾದ ರಾಜರುಗಳು ಆಳಿದ್ದನ್ನು ಓದಿದ್ದೇನೆ. ಈ ವೈದಿಕಶಾಹಿಗಳು ಯಾರು? ಇವರು ಎಷ್ಟನೇ ಇಸವಿಯಿಂದ ಎಷ್ಟನೇ ಇಸವಿಯವರೆಗೆ ಆಳಿದರು? ಇವರ ಆಡಳಿತದ ಹಾಗೂ ಯುದ್ಧದ ವಿವರಗಳೇನು? ಈ ಕುರಿತು ಗ್ರಂಥ, ಶಾಸನ, ನಾಣ್ಯ ಇತ್ಯಾದಿಗಳು ಇವೆಯೇ ಎಂಬ ಉತ್ತರ ಬೇಕು. ಸುಮ್ಮ ಸುಮ್ಮನೇ ವೇದಿಕೆಯ ಮೇಲೆ ಮಾತನಾಡುವುದು ಈ ದೇಶದ ವಾಕ್ ಸ್ವಾತಂತ್ರ್ಯದ ಫಲ. ಪ್ರಗತಿಪರರೆನಿಸಿಕೊಂಡವರು ವೇದಿಕೆ ಹತ್ತಿದಾಕ್ಷಣ ಪುರೋಹಿತಶಾಹಿ, ವೈದಿಕಶಾಹಿ ಮುಂತಾದ ಪದಪುಂಜಗಳೇ ಹೊರಗೆ ಬರುತ್ತವೆ. ಇದಕ್ಕೆ ಆಧಾರ ಇದೆಯೇ? ಇವೆಲ್ಲ ಪರೋಕ್ಷವಾಗಿ ಬ್ರಾಹ್ಮಣರನ್ನು ಪ್ರಹಾರ ಮಾಡಲು ಉಪಯೋಗಿಸುವ ಪ್ರತಿಮೆಗಳು. ಇದರಿಂದ ಕಂಡಿತ ತೆ ಸಾಧ್ಯವಿಲ್ಲ.

ಸೆಕ್ಯುಲರ್ ಬುದ್ಧಿಜೀವಿಗಳ ದೃಷ್ಟಿಯಲ್ಲಿ ಭಾರತದಲ್ಲಿ ಬ್ರಾಹ್ಮಣರು ಖಳನಾಯಕರು. ಇವರನ್ನು ಪುರೋಹಿತಶಾಹಿಗಳು, ವೈದಿಕಶಾಹಿ ಗಳು ಎಂಬಿತ್ಯಾದಿಯಾಗಿ ಚಿತ್ರಿಸುತ್ತಿದ್ದಾರೆ. ಬ್ರಾಹ್ಮಣರು ಪ್ರಾಚೀನ ಭಾರತವನ್ನು ಆಳಿದವರು, ದಬ್ಬಾಳಿಕೆ ಮಾಡಿದವರು, ತರತಮದ ಸಾಮಾಜಿಕ ವ್ಯವಸ್ಥೆಯ ಶಿಲ್ಪಿಗಳು ಇವೇ ಮುಂತಾಗಿ ಬಾಯಿಗೆ ಬಂದಂತೆ ಹಲುಬುತ್ತಿದ್ದಾರೆ. ನಿದು ನಿಜವೇ? ಇವರಿಗೆ ಈ ತಿಳುವಳಿಕೆ ಏಕೆ ಬಂತು? ಎಲ್ಲಿಂದ ಬಂತು? ಬ್ರಾಹ್ಮಣರು ನಿಜವಾಗಿಯೂ ಪುರೋ ಹಿತಶಾಹಿಗಳೇ?

ಮತ್ತಷ್ಟು ಓದು »

17
ನವೆಂ

ಈ ಪರಿಯ ಬದುಕು………….

– ಅರೆಹೊಳೆ ಸದಾಶಿವರಾವ್

ಮನುಷ್ಯ ಜೀವನದ ಬಹು ಚೋದ್ಯಗಳಲ್ಲೊಂದು ಮನುಷ್ಯ ಸಂಬಂಧಗಳು. ಇದನ್ನು ನಾನು ಚೋದ್ಯವೆಂದು ಕರೆದದ್ದು ನಿಮಗೆ ಪ್ರಶ್ನಾರ್ಥಕವಾಗಿ ಕಾಣಬಹುದು. ಏಕೆಂದರೆ ಮನುಷ್ಯ ಸಂಬಂಧಗಳಿಗೆ ಅದರದ್ದೇ ಆದ ಹಲವು ವ್ಯಾಖ್ಯೆಗಳಿರುವಾಗ ಮತ್ತು ಅದಕ್ಕೆ ಸಾಕಷ್ಟು ಉತ್ತರ, ಪುರಾವೆ ಅನುಭವಗಳೂ ಇರುವಾಗ ಅದನ್ನು ಚೋದ್ಯವೆಂದು ಗುರುತಿಸುವ ಔಚಿತ್ಯದ ಬಗ್ಗೆ ಪ್ರಶ್ನೆಗಳೇಳುವುದು ಸಹಜ.

ಇವತ್ತಿನ ಸಂಬಂಧ ಕೇವಲ ವ್ಯಾವಹಾರಿಕ ನೆಲಗಟ್ಟಿನ ಮೇಲೆ ಅಸ್ತಿತ್ವ ಕಂಡುಕೊಳ್ಳುತ್ತಿರುವುದರ ದುರಂತವೆಂದರೆ, ಯಾವ ಸಂಬಂಧಗಳಿಗೂ ಬೆಲೆ ಇಲ್ಲದ ದುಸ್ಥಿತಿ ತಲುಪಿದೆ. ಬಾಂಧವ್ಯ ಎಂಬುದು ಸಂಘಜೀವಿ ಮನುಷ್ಯನ ಬದುಕಿಗೆ ಅನಿವಾರ್ಯ ಎಂದಿದ್ದ ಕಾಲದಿಂದ, ಇಂದು ಅದಕ್ಕೂ ಮೊದಲು ವ್ಯವಾಹಾರ, ಅದರಿಂದ ನಮಗೆ ಸಿಗಬಹುದಾದ ಲಾಭ-ನಷ್ಟದ ಮಾತುಕತೆ ಮುಖ್ಯವಾಗುವ ತನಕ ಬದಲಾಗಿದೆ.

ದುರಂತ ನೋಡಿ, ಇತ್ತೀಚೆಗೆ ಮಾದ್ಯಮಗಳು ಮತ್ತು ದೂರಸಂಪರ್ಕ ಕ್ರಾಂತಿ ಪ್ರಪಂಚದ ಗಾತ್ರವನ್ನು ಕುಗ್ಗಿಸಿದೆ. ಬೆರಳ ತುದಿಯಲ್ಲಿಯೇ ಜಗತ್ತಿನ ಯಾವುದೋ ಮೂಲೆಂದ ಮತ್ತೆಲ್ಲಿಗೋ ಸಂಪರ್ಕ ಸಾಧ್ಯವಾಗಿಸಿ, ಭೌತಿಕ ದೂರವನ್ನು ಕಿರಿದುಗೊಳಿಸಿ, ನಿಜಾರ್ಥದಲ್ಲಿ ಪ್ರಪಂಚವನ್ನು ಒಂದು ಪುಟ್ಟ ಅಂಗಣವಾಗಿಸಿದೆ. ಆದರೆ ಇದನ್ನು ಹಿಂಬಾಲಿಸಿ ಸಂಬಂಧಗಳು ಮಾತ್ರ ಮೊದಲಿಗಿಂತಲೂ ಜಟಿಲವಾಗಿವೆ, ದೂರವಾಗಿವೆ, ವೈಮನಸ್ಸುಗಳು ಅಗಾಧವಾಗಿವೆ. ದಾರಿಯ ದೂರವನ್ನು ಕಿರಿದುಗೊಳ್ಳಿಸಿದ ಹೊರತಾಗಿಯೂ, ಮಾನಸಿಕವಾಗಿ ನಾವೆಲ್ಲರೂ ದೂರ, ಬಹುದೂರ ಸಾಗುತ್ತಿದ್ದೇವೆ. ಆಚೀಚೆ ಮನೆಯವರೇ ನಮಗೆ ಅಪರೂಪ-ಅಪರಿಚಿತರಾಗುತ್ತಿದ್ದರೆವಾಗುತ್ತಿದ್ದರೆ, ಟಿವಿ, ಮೋಬೈಲ್, ಇಂಟರ್ನೆಟ್‌ಗಳೇ ಪರಮಾಪ್ತವಾಗುತ್ತಿವೆ. ದುರಂತವೆಂದರೆ ಈ ಎಲ್ಲದರಿಂದ ನಾವು ಮಾನವಿ ಯತೆಂದ ಅಮಾನವಿಯತೆಗೆ, ಸಾಮಾಜಿಕ ಸ್ವಾಸ್ಥದಿಂದ ಸ್ವಹಿತದೆಡೆಗೆ, ಸ್ವಾಸ್ಥ್ಯದಿಂದ ಅಸ್ವಾಸ್ಥ್ತ್ಯದೆಡೆಗೆ ದಾಪುಗಾಲಿನಲ್ಲಿ ಪಯಣಿಸುತ್ತಿದ್ದೇವೆ.

ಮತ್ತಷ್ಟು ಓದು »

16
ನವೆಂ

ಭಾರತೀಯರು ಹಲ್ಲಿ ಹಾಗು ಜಿರಳೆಗಳನ್ನ ಏಕೆ ತಿನ್ನುತ್ತಾರೆ

-ಡಾ ರಾಕೇಶ್ ಬಿ.ಎಚ್.

ಭಾರತೀಯರು ಹಲ್ಲಿ ಹಾಗು ಜಿರಳೆಗಳನ್ನ ಏಕೆ ತಿನ್ನುತ್ತಾರೆ?

ಮೇಲಿನ ಈ ಪ್ರಶ್ನೆ ನೋಡಿ ಆಶ್ಚರ್ಯ ಆಯ್ತಾ? ಅರೆ, ಭಾರತೀಯರು ಯಾವಗಿಂದನಪ್ಪ ಇದನ್ನೆಲ್ಲಾ ತಿನ್ನೋಕೆ ಶುರು ಮಾಡಿದ್ರು ಅಂತ? ಇದನ್ನ ನನ್ನ ಹೆಂಡತಿ ನಂಗೆ ಕೇಳ್ದಾಗ ನಾನು ತಮಾಷೆಗೆ ಅಂತ ನಕ್ಕೆ. ಆದ್ರೆ ಇದು ನಾವುಗಳು ನಮ್ಮ ಮಕ್ಕಳನ್ನ ಓದಿಸೋ ಕಾಲ ಬಂದಾಗ ಅವರ ಟೆಕ್ಸ್ಟ್ ಬುಕ್ಕಿನಲ್ಲಿ ಈ ರೀತಿ ಪ್ರಶ್ನೆ ಕಾಣುವ ಸಾಧ್ಯತೆಗಳು 99%ಗಿಂತ ಜಾಸ್ತಿ ಇದೆ ಅಂತ ಹೇಳಿದಾಗ ಕುತೂಹಲ ಆಯ್ತು. ಹೇಗೆ ಅನ್ನೋ ಕುತೂಹಲ ನಿಮಗೂ ಇದೆಯಲ್ವಾ? ಅವಳು ಹೇಳಿದ ಸರಳ ಲಾಜಿಕ್ ಹೇಳ್ತೀನಿ ಕೇಳಿ.

ಗಾಂಧಿ ತಾತನ ಕಾಲದಿಂದಾನು ಭಾರತ ಹಳ್ಳಿಗಳಿರುವ ರಾಷ್ಟ್ರ ಅಂತಾನೆ ನಾವೆಲ್ಲಾ ಕಲಿತಿರೋದು ಹಾಗು ಅದು ಸತ್ಯ ಕೂಡ. ಯಾಕಂದ್ರೆ ತಲತಲಾಂತರದಿಂದಾನು ನಮ್ಮ ಪೂರ್ವಜರು ಹಳ್ಳಿಯಲ್ಲೇ ಇದ್ದುಕೊಂಡು ವ್ಯವಸಾಯವನ್ನೇ ಜೀವನ ಮಾಡಿಕೊಂಡವರು. ಹಾಗಾಗಿ ಉತ್ತಿ ಬಿತ್ತು ಬೆಳೆ ತೆಗೆಯೋರು ಮತ್ತು ಹೆಚ್ಚಾಗಿ ಅದೇ ಅವರ ದೈನಂದಿನ ಊಟ ಕೂಡ ಆಗಿರುತ್ತಿತ್ತು. ಸಹಜವಾಗಿ 90 ಕ್ಕೂ ಹೆಚ್ಚು ಜನ ಸಸ್ಯಹಾರಿಗಳಾಗಿದ್ದರು.
ಬೌಗೋಳಿಕವಾಗಿ ಜಗತ್ತಿನ ಏಳನೇ ದೊಡ್ಡ ರಾಷ್ಟ್ರವಾಗಿದ್ದು, ವ್ಯವಸಾಯವೇ ಅತಿ ಪ್ರಮುಖ ಆದಾಯವಾಗಿದ್ದು ಹಾಗು ಅಷ್ಟೊಂದು ಜನ ಸಸ್ಯಹಾರಿಗಳಿದ್ದು ತೀರ ಹಲ್ಲಿ ತಿನ್ನೋ ಮಟ್ಟಕ್ಕೆ ನಾವು ಇಳಿತೀವ? ವಿಪರ್ಯಸವಾದ್ರು ಇದು ಸತ್ಯ ಕಣ್ರೀ. ಜಾಸ್ತಿ ತಲೆ ಉಪಯೋಗಿಸೋದೆನು ಬೇಡ, ಯಾಕೆಂದ್ರೆ ಉತ್ತರ ನಮ್ಮ ಕಣ್ಣು ಮುಂದೆ ಬಿದ್ದು ಹೊರಳಾಡ್ತಾ ಇದೆ. ನೀವೇ ಯೋಚನೆ ಮಾಡಿ, ಸಸ್ಯಹಾರಿಗಳಾಗೆ ಉಳಿಬೇಕೂಂದ್ರೆ ಸಸ್ಯಗಳನ್ನ ಬೆಳಿಬೇಕು, ಹೌದ? ಸಸ್ಯಗಳನ್ನ ಬೆಳೆಬೇಕು ಅಂದ್ರೆ ಭೂಮಿ ಬೇಕು, ಹೌದ? ಮತ್ತಷ್ಟು ಓದು »

15
ನವೆಂ

ಮಂಗಳಪ್ರಯಾಣಕ್ಕೆ ಸಿದ್ಧತೆ..

-ವಿಷ್ಣುಪ್ರಿಯ

ಮೂವರು ರಷ್ಯನ್ನರು, ಒಬ್ಬ ಫ್ರೆಂಚ್, ಒಬ್ಬ ಇಟಾಲಿಯನ್-ಕೊಲಂಬಿಯನ್ ಮತ್ತು ಒಬ್ಬ ಚೀನೀ ಬಾಹ್ಯಾಕಾಶ ವಿಜ್ಞಾನಿಗಳನ್ನು ಒಳಗೊಂಡಂಥ ತಂಡ ಮಾಸ್ಕೋದಲ್ಲಿನ ಈ ಮಂಗಳನ ತದ್ರೂಪಿನಲ್ಲಿ 520 ದಿನಗಳ ಕಾಲ ಇದ್ದು ಬಂದಿದ್ದಾರೆ. ಇಲ್ಲಿ ಮಂಗಳನಲ್ಲಿರಬಹುದಾದಂಥ ಎಲ್ಲ ರೀತಿಯ ವಾತಾವರಣವೂ ಇದೆ, ಆದರೆ ಗುರುತ್ವಾಕರ್ಷಣಶಕ್ತಿಯೊಂದನ್ನು ಹೊರತುಪಡಿಸಿ! ಹೀಗಾಗಿ ತೂಕವಿಲ್ಲದೇ ಇರುವ ಅನುಭವ ಮಾತ್ರ ಸಿಕ್ಕಿಲ್ಲ.

ಅದು ಒಂದು ಸಂಪೂರ್ಣ ಮುಚ್ಚಲ್ಪಟ್ಟ ಕೋಣೆ; ಗಾಳಿ ನುಸುಳುವುದಕ್ಕೆ ಒಂಚೂರೂ ಜಾಗವಿಲ್ಲ; ನೀರಂತೂ ಪ್ರವೇಶಿಸುವುದಕ್ಕೇ ಆಗದು; ಒಳಗಣ ಶಾಖಕ್ಕೆ ಸಾಮಾನ್ಯ ಜೀವ ಬೆಂದು ಹೋಗುವಂಥ ಪರಿಸ್ಥಿತಿ; ಆದರೂ ಆರು ಜನ ಅದರೊಳಗಿದ್ದರು; ಒಂದೆರಡು ದಿನವಲ್ಲ; ಬರೋಬ್ಬರಿ 520 ದಿನಗಳು! ಕೃತಕ ಆಮ್ಲಜನಕದ ಉಸಿರಾಟ, ಸಂಸ್ಕರಿತ ಆಹಾರ; ಇವಿಷ್ಟನ್ನೇ ಸೇವಿಸಿಕೊಂಡು ಅಷ್ಟೂ ದಿನ ಈ ಕೋಣೆಯೊಳಗಿದ್ದರು; ಕೆಲವು ದಿನಗಳ ಹಿಂದಷ್ಟೇ ಈ ಆರೂ ಜನರು ಈ ಕೋಣೆಯಿಂದ ಹೊರಬಂದಾಗ ಅವರು ಒಂದಷ್ಟು ಸೊರಗಿದ್ದಾರೆಯೋ ಎಂದೆನಿಸುತ್ತಿತ್ತು; ಆದರೂ ಸಹ ಅವರ ಮುಖದಲ್ಲಿ ಮಂದಹಾಸ ಮಿನುಗುತ್ತಿತ್ತು; ಹೊಸದೊಂದು ಸಾಹಸಕ್ಕೆ ಅಣಿಯಾದ, ಯುದ್ಧವನ್ನು ಜಯಿಸಬಲ್ಲೆ ಎಂಬ ದೃಢವಿಶ್ವಾಸ ಹೊಂದಿರುವ ರಣಕಲಿಯ ಕಳೆ ಅವರಲ್ಲಿತ್ತು.

ಅವರು ಬಾಹ್ಯಾಕಾಶ ವಿಜ್ಞಾನಿಗಳು. 2030ರಲ್ಲಿ ಮಂಗಳಗ್ರಹದ ಮೇಲೆ ಪಾದಾರ್ಪಣೆ ಮಾಡಲು ಸಿದ್ಧವಾಗುತ್ತಿರುವ ಅವರು ಇದ್ದದ್ದು, ಮಂಗಳನಲ್ಲಿ ಇರಬಹುದಾದಂಥ ವಾತಾವರಣವನ್ನು ಕೃತಕವಾಗಿ ಸೃಷ್ಟಿಸಲ್ಪಟ್ಟಂಥ ಕೋಣೆಯೊಳಗೆ. ಮೂವರು ರಷ್ಯನ್ನರು, ಒಬ್ಬ ಫ್ರೆಂಚ್, ಒಬ್ಬ ಇಟಾಲಿಯನ್-ಕೊಲಂಬಿಯನ್ ಮತ್ತು ಒಬ್ಬ ಚೀನೀ ಬಾಹ್ಯಾಕಾಶ ವಿಜ್ಞಾನಿಗಳನ್ನು ಒಳಗೊಂಡಂಥ ತಂಡ ಮಾಸ್ಕೋದಲ್ಲಿನ ಈ ಮಂಗಳನ ತದ್ರೂಪಿನಲ್ಲಿ 520 ದಿನಗಳ ಕಾಲ ಇದ್ದು ಬಂದಿದ್ದಾರೆ. ಇಲ್ಲಿ ಮಂಗಳನಲ್ಲಿರಬಹುದಾದಂಥ ಎಲ್ಲ ರೀತಿಯ ವಾತಾವರಣವೂ ಇದೆ, ಆದರೆ ಗುರುತ್ವಾಕರ್ಷಣಶಕ್ತಿಯೊಂದನ್ನು ಹೊರತುಪಡಿಸಿ! ಹೀಗಾಗಿ ತೂಕವಿಲ್ಲದೇ ಇರುವ ಅನುಭವ ಮಾತ್ರ ಸಿಕ್ಕಿಲ್ಲ. ಮತ್ತಷ್ಟು ಓದು »

15
ನವೆಂ

ಬೈಲೂರ ಬಸ್ಸು ಹತ್ತಿ

ಪ್ರಶಸ್ತಿ.ಪಿ, ಸಾಗರ

ಮನೇಲಿ ಕಾರ್ಯಕ್ರಮ ಇದೆ, ಬರಲೇ ಬೇಕು ಅಂತ ಕರೆದಿದ್ರು ಅನ್ಸತ್ತೆ. ಹನ್ನೊಂದೂಕಾಲಿಗೆ ಹಸಿರು ಬಣ್ಣದ ಬಸ್ಸು ಬರತ್ತೆ , ಅದ್ರಲ್ಲಿ ಬಾ ಅಂತ ಸೂಚನೆ. ಸರಿ, ವಿಶ್ವಾಸದ ಮೇಲೆ ಕರೆದ ಮೇಲೆ ಬಿಡೋಕಾಗತ್ತಾ? ಹೂಂ ಜೈ ಅಂತ ಹನ್ನೊಂದ್ಘಂಟೆಗೇ ಬಸ್ಟಾಂಡಲ್ಲಿ ಹಾಜರು.ಎಲ್ಲಿಳ್ಯದು, ಯಾವ ಬಸ್ಸು ಎಂತನೂ ಗೊತ್ತಿಲ್ಲ. ಫೋನಲ್ಲಿ ಕೇಳಿದ್ದಷ್ಟೆ. ಹೋಗ್ಬೇಕಾಗಿರೋ ಊರ ಹೆಸ್ರನ್ನೇಳಿ ಕಂಡಕ್ಟ್ರಣ್ಣಂಗೆ ಕೇಳ್ದಾಗ “ಬೇಲೂರು ಗಾಡಿ ಬರತ್ತೆ ಹನೊಂದು ಕಾಲಿಗೆ. ಅದ್ರಲ್ಲೋಗಿ” ಅಂದ. ನಾ ಹೋಗ್ಬೇಕಾಗಿದ್ದು ಸೈದೂರು ದಾರಿ. ಬೇಲೂರಿಗೂ ಸೈದೂರಿಗೂ ಎಲ್ಲಿಂದೆಲ್ಲಿ ಸಂಬಂಧ ಅಂತ ಅರ್ಥ ಆಗ್ಲಿಲ್ಲ.ಹಂಗಂತಾ?  ಗಣೇಶ ಸ್ಟೈಲಲ್ಲಿ ತಲೆ ಕೆರ್ಕಳಕೆ ಆಗತ್ತಾ? ಅದೂ ಬಸ್ಟಾಂಡ್ ಬೇರೆ 🙂

ಹನ್ನೊಂದು ಕಾಲಾಯ್ತು. ಬಂದಿರ್ಲಿಲ್ಲ ಬಸ್ಸು. ಬಿಸಿಲು ಬೇರೆ ಏರ್ತಾ ಇತ್ತು. ಬಸ್ಟಾಂಡಲ್ಲೊಂದು ಅಂಗಡಿ ಎದ್ರಿದ್ದ ನೆರಳಲ್ಲಿ ಜಾಗ ಖಾಲಿ ಇತ್ತು. ನಂತರನೇ ನೆರಳನರಸಿ ಸುಮಾರು ಜನ್ರಿದ್ರು ಬಿಡ್ರಿ.. ಕಾದ ತಗಡ ಶೀಟು. ಕೆಳಗೆ ನಾನು. ಕೇಳಬೇಕೆ? ಸೆಖೆ ಹೊಡ್ತ. ಬೆವ್ರೊರ್ಸದು, ಗಡಿಯಾರ ನೋಡದು ಇದೇ ಕೆಲ್ಸ ಆಯ್ತು. ಹನ್ನೊಂದು ಇಪ್ಪತ್ತೈದು. ಅಲ್ಲಿದ್ದೋರಲ್ಲಿ ಅನ್ಸತ್ತೆ ಊರಿಗೋಗೋರೂ ಇದ್ರು ಹೇಳೋದು ಅವರ ಮಾತಿಂದ ಗೊತ್ತಾಯ್ತು. ಇದ್ದಿದ್ರಲ್ಲಿ ಅದೊಂದು ಸಮಾಧಾನ. ಅದೇ ಊರಿಗಂತೂ ಹೋಗ್ತಾರೆ. ಅವ್ರ ಮನೇಗೆ ಹೋಗ್ಬೋದು ಅಂತ ಮನ್ಸು ಹೇಳಕ್ಕಿಡೀತು. ಆದ್ರೂ ಕೇಳಕ್ಕೆ ಬಾಯಿ ಬರ್ಲಿಲ್ಲ. ಫಿಲ್ಮಲ್ಲಿ ಹೀರೋಗೆ ಹೀರೋಯಿನ್ ಎದ್ರು ಮಾತು ಬರಲ್ವಲ ಹಂಗೆ ಅಂದ್ಕಂಡ್ರಾ? ಥೋ..ಅವ್ರೆಲ್ಲಾ ವಯಸ್ಸಾದವ್ರು 🙂 ಮತ್ತಷ್ಟು ಓದು »

14
ನವೆಂ

ಮುಂದಿದೆ ಮಾರಿ ಹಬ್ಬ : ಯಡಿಯೂರಪ್ಪ ಅವರ ಮುಂದಿನ ರಾಜಕೀಯ ನಡೆಯೇನು?

-”ಸಿದ್ಧಾರ್ಥ

೨೪ ದಿನಗಳ ಸೆರೆಮನೆ ವಾಸದ ನಂತರ ಅಂತೂ ಇಂತೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದಾರೆ. ಇದನ್ನೇ ಒಂದು ವಿಜಯೋತ್ಸವವೆಂಬಂತೆ ಅವರ ಬೆಂಬಲಿಗರು ಬಾಣ ಬಿರುಸು, ಪಟಾಕಿಗಳನ್ನು ಸಿಡಿಸಿ ಹರ್ಷಿಸಿದ್ದಾರೆ. ಯಡಿಯೂರಪ್ಪ ಅವರು ದೇಗುಲಗಳ, ಮಠಗಳ ದರ್ಶನ ಕಾರ್ಯದಲ್ಲಿ ಮುಳುಗಿದಂತೆ ನಟಿಸುತ್ತಿದ್ದರು, ಅವರ ಅಂತರ್ಯ್ಯದಲ್ಲಿ ಮುಕ್ಕಾಗಿ ಹೋದ ವೈಬವವನ್ನು, ಅಧಿಕಾರವನ್ನು ಮರಳಿ ಪಡೆಯುವುದು ಹೇಗೆ ಎಂಬ ಲೆಕ್ಕಾಚಾರದಲ್ಲಿ ನಿರತರಾಗಿದ್ದಾರೆ. ಅದಕ್ಕೆ ಪೂರಕವೆನ್ನುವಂತೆ ಅವರ ಆಪ್ತ ಮಂತ್ರಿಗಳನೇಕರು ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಕಾರಣೀಭೂತರಾದ ಯಡಿಯೂರಪ್ಪನವರೇ ಪಕ್ಷದ ಪ್ರಶ್ನಾತೀತ ನಾಯಕರು ಆದ್ದರಿಂದ ಅವರನ್ನೇ ರಾಜ್ಯದ ಪಕ್ಷಾದ್ಯಕ್ಷರನ್ನಾಗಿ ಮಾಡಿ ಎಂಬ ಬೆದರಿಕೆ ರೂಪದ ಒತ್ತಡವನ್ನು ಹೈಕಮಾಂಡ್‌ಗೆ ರವಾನಿಸಿದ್ದಾರೆ.

ಸೆರಮನೆ ವಾಸ, ಅದೆಷ್ಟೇ ಅಲ್ಪಾವಧಿಯಾದಾಗಿರಲಿ ಅದಷ್ಟೇ ಸುಖ ವೈಬೋಗಗಳಿಂದ ಕೂಡಿರಲಿ, ಮಾನಸಿಕವಾಗಿ ಅದು ಸೆರಮನೆ ವಾಸವೇ. ಪರಿಸ್ಥಿತಿಯ ಶಿಶುವಾಗಿ ತಮ್ಮದಲ್ಲದ ತಪ್ಪಿಗೆ ಸೆರಮನೆ ವಾಸ ಕಂಡ ಯಡಿಯೂರಪ್ಪನವರಿಗೆ ಕಡ್ಡಾಯ ಬಂದನ ಒಂದು ರೀತಿಯಲ್ಲಿ ಪಾಠವಾಗಬೇಕಾಗಿತ್ತು. ಸಾಮಾನ್ಯವಾಗಿ ಸೆರೆಮನೆಯಲ್ಲಿ ಸಿಗುವ ಏಕಾಕಿತನದಲ್ಲಿ ವ್ಯಕ್ತಿಯೊಬ್ಬರ ಮನಸ್ಸು ಹಲವು ಬದಲಾವಣೆಗೆ ಒಳಪಡುತ್ತದೆ. ಸರಿ ತಪ್ಪುಗಳ ವಿಮರ್ಶೆಯ ಆತ್ಮಾವಲೋಕನಕ್ಕೆ ಅದು ಸಕಾಲವಾಗುತ್ತದೆ. ಕೆಲವೊಮ್ಮೆ ಏಕಾಂಗಿ ತನದಲ್ಲಿ ವ್ಯಕ್ತಿಯ ಮನಸ್ಸು, ಪ್ರತಿಭೆ ಅರಳುತ್ತದೆ. ಮತ್ತಷ್ಟು ಓದು »

14
ನವೆಂ

ನಾನೊಬ್ಬ ಹಿಂದೂ, ಆದ್ದರಿಂದ…..

– ಗೋವಿಂದ ರಾವ್ ವಿ ಅಡಮನೆ

ನಾನೊಬ್ಬ ಹಿಂದೂ, ಆದ್ದರಿಂದ

  • ನನಗೆ ಇಷ್ಟವಾದದ್ದನ್ನು ‘ದೇವರು’ ಎಂದು ಪೂಜಿಸುವ ಸ್ವಾತಂತ್ರ್ಯ ಇದೆ. ‘ದೇವರೇ ಇಲ್ಲ’ ಎಂದು ಸಾರ್ವಜನಿಕವಾಗಿ ಘೋಷಿಸುವ ಸ್ವಾತಂತ್ರ್ಯವೂ ಇದೆ.
  • ನಾನು ನಂಬಿರುವ ದೇವರನ್ನು ಓಲೈಸುವ ಸಲುವಾಗಿ ನನಗೆ ಇಷ್ಟವಾದ ವಿಧಿವಿಧಾನಗಳನ್ನು ನನಗೆ ಸರಿಕಂಡ ರೀತಿಯಲ್ಲಿ ಆಚರಿಸುವ ಸ್ವಾತಂತ್ರ್ಯ ನನಗೆ ಇದೆ.
  • ಸಾರ್ವಜನಿಕವಾಗಿ ದೇವರ ಅಸ್ತಿತ್ವವನ್ನು ಅಲ್ಲಗಳೆಯುತ್ತಾ ಖಾಸಗಿಯಾಗಿ ದೇವರಲ್ಲಿ ನಂಬಿಕೆ ಇಡುವ, ಖಾಸಗಿಯಾಗಿ ದೇವರನ್ನು ನಂಬದಿದ್ದರೂ ಸಾರ್ವಜನಿಕವಾಗಿ ಆಸ್ತಿಕನಂತೆ ನಟಿಸುವ ಸ್ವಾತಂತ್ರ್ಯ ನನಗೆ ಇದೆ.