ವಿಷಯದ ವಿವರಗಳಿಗೆ ದಾಟಿರಿ

Archive for

7
ನವೆಂ

ಹೈಟೆಕ್ ಬಹಿಷ್ಕಾರ…!

– ರಾಕೇಶ್ ಶೆಟ್ಟಿ

‘ಬೇರೆ ಬೇರೆ ವಿಷಯಗಳಲ್ಲಿ ಒಟ್ಟಿಗೆ ಸೇರಿ ಕೆಲಸ ಮಾಡಿದ ಗೆಳೆಯರು ಈಗ ಜನಲೋಕಪಾಲ ವಿಷಯವಾಗಿ ತಾತ್ವಿಕ ಭಿನ್ನಭಿಪ್ರಾಯಗಳನ್ನು ಇಟ್ಟುಕೊಂಡು ವಿರುದ್ಧವಾಗಿ ಮಾತನಾಡುತ್ತಿರುವುದು ಬೇಸರತರಿಸಿದೆ ‘ ಅಂತ ಆ ಗೆಳೆಯ ಕಳೆದ ಆಗಸ್ಟಿನಲ್ಲಿ ಫೆಸ್ಬುಕ್ಕಿನಲ್ಲಿ ಬರೆದುಕೊಂಡಿದ್ದರು.ಅದಕ್ಕೆ ನಾನು ‘ಸಾಮಾಜಿಕ ಕಳಕಳಿಯಿರುವ ಎಲ್ಲ ಮನಸ್ಸುಗಳು ಅಂತಿಮವಾಗಿ ಬಯಸುವುದು ಒಳ್ಳೆಯ ಸಮಾಜವನ್ನಷ್ಟೇ,ತಾತ್ವಿಕ ಭಿನ್ನಭಿಪ್ರಾಯ್ಗಳನ್ನ ವೈಯುಕ್ತಿಕವಾಗಿ ನೋಡಬೇಡಿ’ ಅನ್ನುವಂತೆ ಬರೆದಿದ್ದೆ.ಅವರೂ ಅದನ್ನ ಇಷ್ಟ ಪಟ್ಟಿದ್ದರು.

ಅದಾಗಿ ಬಹುಷಃ ೩-೪ ದಿನಗಳು ನಾನು ಊರಿನಲ್ಲಿ ಇರಲಿಲ್ಲ,ವಾಪಸ್ಸು ಬಂದವನು ಫೇಸ್ಬುಕ್ ತೆಗೆದಾಗ ಗೊತ್ತಾಗಿದ್ದು , ತಾತ್ವಿಕ ಭಿನ್ನಾಭಿಪ್ರಾಯಗಳನ್ನ ವೈಯುಕ್ತಿಕ ಮಟ್ಟಕ್ಕೆ ಆ ಗೆಳೆಯ ಮಾತ್ರವಲ್ಲದೆ ಅವನ ‘ಬಳಗ’ವೂ ತೆಗೆದುಕೊಂಡು ನನಗೆ ಅವರ ಗೂಗಲ್ ಗುಂಪಿನಿಂದ,ಫೆಸ್ಬುಕ್ಕ್ ಗೆಳೆತನದಿಂದ ‘ಹೈಟೆಕ್ -ಬಹಿಷ್ಕಾರ’ ಹಾಕಿದೆ ಅಂತ…! ಈ ಹೈಟೆಕ್ ಬಹಿಷ್ಕಾರ ಹಾಕಿಸಿಕೊಳ್ಳುವಂತೆ ನಡೆದಿದ್ದಾರೂ ಏನು ಅಂತ ನೋಡ ಹೊರಟರೆ….

ಅಣ್ಣಾ ಹಜ಼ಾರೆ ಜನಲೋಕಪಾಲ ಮಸೂದೆಗಾಗಿ ಜಂತರ್ ಮಂಥರ್ನಲ್ಲಿ ಉಪವಾಸ ಕುಳಿತ ದಿನಗಳಿವೆಯಲ್ಲ ಅವು ಈ ದೇಶದಲ್ಲಿ ಇನ್ನೇನು ಬದಲಾವಣೆ ಸಾಧ್ಯವೇ ಇಲ್ಲ ಅನ್ನುವಂತಿದ್ದ ಜನರ ಮನಸ್ಸಿಗೆ ಆಶಾಭಾವನೆ ಮೂಡಿಸಿದ ದಿನಗಳು.ಆಗ ’ಈ ಹೋರಾಟ ಗೆಲ್ಲಲೇ ಬೇಕು’ ಅಂದವರು ಅದ್ಯಾಕೋ ಮತ್ತೆ ಅಣ್ಣಾ ’ರಾಮ ಲೀಲಾ ಮೈದಾನ’ಕ್ಕೆ ಬಂದು ನಿಂತಾಗ ’ಪ್ರಜಾಪ್ರಭುತ್ವದ ಬುಡಕ್ಕೆ ಬೆಂಕಿ ತಗುಲಿದೆ’ ಅನ್ನಲಾರಂಭಿಸಿದರು.ಆಗಲೇ ಅಣ್ಣಾ ಹೋರಾಟವನ್ನು ಬೆಂಬಲಿಸುತಿದ್ದವರು-ವಿರೋಧಿಸುವ ಗೆಳೆಯರ ನಡುವೆ ತಾತ್ವಿಕ ಭಿನ್ನಾಭಿಪ್ರಾಯಗಳ ಚರ್ಚೆ ಫ಼ೇಸ್ಬುಕ್ಕಿನಲ್ಲಿ ಶುರುವಾಗಿದ್ದು.ಈ ಹೋರಾಟ ಸರಿಯಿಲ್ಲ ಅನ್ನಲು ಅವರುಗಳು ಏನೇನು ಅಂಶ ಮುಂದಿಡುತಿದ್ದರೋ, ಹೋರಾಟ ಹೇಗೆ ಸರಿ ಅಂತ ನಾವುಗಳು ನಮ್ಮ ವಾದ ಮುಂದಿಟ್ಟಿದ್ದೆವು. ಮತ್ತಷ್ಟು ಓದು »

5
ನವೆಂ

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ : ಬಣ್ಣದ ಬದುಕು 9 – ಯುದ್ಧಕಾಲದ ಅಭಾವಗಳ ಬಿಸಿ

“ಈ ವರ್ಷವಾದರೂ ನಮ್ಮ ಮೇಳಕ್ಕೆ ಬನ್ನಿ.” ಶೆಟ್ಟರು ಮನೆಗೆ ಬಂದ ಕಾರಣ ನನಗೆ ಅರ್ಥವಾಯಿತು.”ನಿಮ್ಮಂತಹ ಕಲಾವಿದರು ಹೀಗೆ ಸುಮ್ಮನಿರುವುದು ಸರಿಯಲ್ಲ. ನೀವು ಮೇಳದಲ್ಲಿದ್ದರೆ ಉಳಿದವರಿಗೂ ಮಾರ್ಗದರ್ಶನ ಆದೀತು.”

ನಾನು ಮೇಳದ ತಿರುಗಾಟಕ್ಕೆ ಹೋಗುವುದನ್ನು ನಿಲ್ಲಿಸಿದ ಕಾರಣವನ್ನು ಅವರಿಗೆ ವಿವರಿಸಲೇ ಬೇಕಾಯಿತು. ಆದರೆ, ಆ ತಲೆನೋವಿಗೂ ಅವರು ಚಿಕಿತ್ಸೆ ಬಲ್ಲವರಾಗಿದ್ದರು.

“ನಾನು ಈ ವರ್ಷ ಎರಡು ಮೇಳಗಳನ್ನು ನಡೆಸಬೇಕೆಂದಿದ್ದೇನೆ. ಒಂದು ಮೇಳಕ್ಕಂತೂ ಸರಿಯಾದ ವ್ಯವಸ್ಥಾಪಕನ ಅಗತ್ಯವಿದೆಯಲ್ಲ!” ಎಂದರವರು.

“ಅಂದರೆ?”

“ಅಂದರೆ, ಒಂದು ಮೇಳದ ವ್ಯವಸ್ಥಾಪಕನ ಕೆಲಸವನ್ನು ನೀವು ವಹಿಸಿಕೊಳ್ಳಿ. ಲಾಭ ನಷ್ಟಕ್ಕೆ ಮಾತ್ರ ನಾನು. ಉಳಿದ ಎಲ್ಲ ವಿಚಾರಗಳಿಗೂ ನೀವೇ ಅದರ ಯಜಮಾನರಾಗಿ. ನಿಮ್ಮ ಮನಸ್ಸಿನಂತೆ ಆಟಗಳನ್ನು ಆಡಿ ಪ್ರದರ್ಶಿಸುವ ಅನುಕೂಲ; ನನಗೆ ಒಬ್ಬ ವ್ಯವಸ್ಥಾಪಕನ ಸೌಕರ್ಯ. ನೀವೇ ಹೊಸ ಮೇಳವನ್ನು ನಡೆಸಿರಿ. ಆಗದೇ?”

ವ್ಯವಹಾರಶೂನ್ಯನಾದ ನನ್ನನ್ನು ನಂಬಿ ಸಾವಿರಾರು ರೂ.ಗಳನ್ನು ಸುರಿಯುವುದೆ? ನನ್ನ ಅಸಮರ್ಥತೆಯನ್ನು ಸ್ಪಷ್ಟವಾಗಿ ಹೇಳಿದೆ.

“ಮೊದಲೇ ಹೇಳಿದೆನಲ್ಲ. ನಷ್ಟವಾದರೆ ನನಗೇ ಇರಲಿ.”

“ಆಗಲಿ ನೋಡೋಣ.”

ಮತ್ತಷ್ಟು ಓದು »

5
ನವೆಂ

ಭೌತಿಕ…ಭೌಗೋಳಿಕ…ಬೌದ್ದಿಕ ಅಸೂಯೆಯ ಕಲಾತ್ಮಕ ಅನಾವರಣ…!

– ಕುಮಾರ ರೈತ

ಭಾರತ ಮತ್ತು ಚೀನಾ ಸಂಘರ್ಷ ಇಂದು ನೆನ್ನೆಯದಲ್ಲ….ಅದಕ್ಕೆ ಸುದೀರ್ಘ ಇತಿಹಾಸವಿದೆ. ಹಿಂದಿ-ಚೀನಿ ಭಾಯಿ ಭಾಯಿ ಎನ್ನುತ್ತಲೇ ಬೆನ್ನ ಹಿಂದೆ ದ್ರೋಹ ಬಗೆದ ದೇಶವದು. ನಮ್ಮ ದೇಶದ ಗಡಿ ಭಾಗದ ವಿಸ್ತಾರ ಭೂ ಪ್ರದೇಶವನದು ಅಕ್ರಮಿಸಿಕೊಂಡಿದೆ. ಭಾರತೀಯರಿಗೆ ಪುಣ್ಯಸ್ಥಳವಾದ ಮಾನಸ ಗಂಗೋತ್ರಿಗೆ ಹೋಗಬೇಕಾದರೆ ಚೀನಾ ಪರವಾನಗಿ ಪಡೆಯಬೇಕಾದ ದುಸ್ಥಿತಿ ಉಂಟಾಗಿದೆ. ಅದರ ನೆಲದ ದಾಹ ಇನ್ನೂ ಹಿಂಗಿಲ್ಲ. ಈಶಾನ್ಯ ರಾಜ್ಯಗಳ ಗಡಿ ವಿಷಯದಲ್ಲಿ ತಂಟೆ ತೆಗೆಯುತ್ತಲೇ ಇದೆ. ಈ ನಿಟ್ಟಿನಲ್ಲಿಯೇ ಮುಂಜಾಗ್ರತೆಯಿಂದ ಒಂದು ಲಕ್ಷಕ್ಕೂ ಹೆಚ್ಚಿನ ಸೈನಿಕರನ್ನು ಈ ಗಡಿಭಾಗಗಳಲ್ಲಿ ನಿಯೋಜಿಸಲು ಭಾರತ ಸರಕಾರ ನಿರ್ಧರಿಸಿದೆ. ಸ್ನೇಹದ ಮುಖವಾಡ ಧರಿಸಿ ಸಂಚು ರೂಪಿಸಬಹುದಾದ ಚೀನಾಕ್ಕೆ ಭಾರತದ ಮೇಲಿನ ಭೌತಿಕ…ಭೌಗೋಳಿಕ…ಬೌದ್ದಿಕ ಅಸೂಯೆಯನ್ನು ‘ಏಳಮ್ ಅರಿವು’ ಚಿತ್ರ ಕಲಾತ್ಮಕವಾಗಿ ಅನಾವರಣಗೊಳಿಸಿದೆ. ಇದೇ ಈ ಚಿತ್ರದ ಕೇಂದ್ರ ಪ್ರಜ್ಞೆ…! ತಮಿಳಿನ ಏಳಮ್ ಅರಿವು ಎಂದರೆ ಏಳನೇ ಅರಿವು..ಅಥವಾ ಜ್ಞಾನ ಎಂದರ್ಥ..!

ನೆರೆ ದೇಶದ ದ್ವೇಷದ ವಿಷಯವನ್ನು ತೆಗೆದುಕೊಂಡಾಗ ಅದನ್ನು ಹಸಿಹಸಿಯಾಗಿ ನಿರೂಪಿಸಿ ಮೂರನೇ ದರ್ಜೆ ಸಿನಿಮಾ ಮಾಡಿಬಿಡುವ ಸಾಧ್ಯತೆಗಳೆ ಹೆಚ್ಚು. ಆದರೆ ಇಂಥ ಅಪಾಯದಿಂದ ‘ಏಳಮ್ ಅರಿವು’ ಹೊರತಾಗಿದೆ. ಈ ಕಾರಣಕ್ಕಾಗಿಯೂ ಈ ಸಿನಿಮಾ ಪ್ರಸ್ತುತ ಪ್ರಾಮುಖ್ಯತೆ ಪಡೆಯುತ್ತದೆ. ಭಾರತ-ಚೀನಾ ನಡುವೆ ಎರಡು ಸಾವಿರ ವರ್ಷಕ್ಕೂ ಹಿಂದಿನಿಂದಲೂ ವಾಣಿಜ್ಯ ವ್ಯವಹಾರವಿದೆ. ಆದರೆ ಇದಕ್ಕಿಂತಲೂ ಮಿಗಿಲಾಗಿ ಇಲ್ಲಿನ ಶ್ರೀಮಂತ ಬೌದ್ದಿಕತೆ ಮೇಲೆ ಚೀನಾ ಕಣ್ಣಿಟ್ಟಿತ್ತು. ಅಲ್ಲಿಯ ಸಾಮ್ರಾಟರ ನೆರವಿನಿಂದ ಇಲ್ಲಿಗೆ ಪ್ರವಾಸಿಗರಾಗಿ ಬರುತ್ತಿದ್ದವರು  ಇಲ್ಲಿನ ಬಹುಮುಖ್ಯ ವಿಷಯ-ವಿಚಾರ-ವಿಜ್ಞಾನಗಳ ಜ್ಞಾನ ಸಂಗ್ರಹಿಸಿ ಸಾಗಿಸುತ್ತಿದ್ದರು.  ಚೀನಾ ಕುರಿತು ಮಹಾಭಾರತದಲ್ಲಿಯೂ ಉಲ್ಲೇಖಗಳಿವೆ. ಆದರೆ ಇಲ್ಲಿಂದ ಅಲ್ಲಿಗೆ ಯಾರೂ ಪ್ರವಾಸಿಗರಾಗಿ ಹೋದವರಲ್ಲ. ಪ್ರಚಾರಕರಾಗಿ ಹೋದರು. ಬೌದ್ಧ ಧರ್ಮದ ಪ್ರಚಾರವನ್ನು ಅಲ್ಲಿ ಕೈಗೊಂಡರು.

ಮತ್ತಷ್ಟು ಓದು »

4
ನವೆಂ

ಇದಾವ ಪರಿಯ ‘ಜನಚೇತನ ???

-ಅರೆಹೊಳೆ ಸದಾಶಿವರಾವ್

ಭಾರತದ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿಯವರು ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ, ಇಡೀ ಮಂಗಳೂರೇ ಸ್ತಬ್ಧ!!. ಬಜಪೆಂದ ಮಂಗಳೂರಿನ ನೆಹರೂ ಮೈದಾನದ ತನಕ ರಸ್ತೆಯ ಇಕ್ಕೆಲಗಳಿಗೂ ಆದಿನ ಒಂದು ರೀತಿಯ ವಿಶ್ರಾಂತಿ. ಎಲ್ಲೆಲ್ಲೂ ಪಾರ್ಕಿಂಗ್ ಇಲ್ಲ, ರಸ್ತೆಯ ಇಕ್ಕೆಲಗಳಲ್ಲೂ ಪೋಲೀಸರೇ ಪೋಲಿಸರು!
ಅಡ್ವಾಣಿ ಬರುತ್ತರೆಂದಾಗಲೇ ಪೋಲಿಸರಿಗೆ
ಶುರುವಾಗಿತ್ತು ಒಂದು ರೀತಿಯ ಚಳಿ-ಮಳೆ!
ಹಾಗಾಗಿ ಎದುರು ಸಿಕ್ಕವರಿಗೆಲ್ಲಾ ಸಿಕ್ಕಿದ್ದು ಕೇವಲ
ಪೋಲಿಸ್ ಭಾಷೆಯ ಬೈಗುಳದ ಸುರಿಮಳೆ!!

ಇದು ವಿಐಪಿಗಳು ಯಾವುದೇ ಊರಿಗೂ ಬಂದರೂ ಇರುವ ಸಾಮಾನ್ಯ ತೊಂದರೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಹಾಗಾಗಿ ಇದರ ಬಗ್ಗೆ ಹೇಳುವುದು ಕೇಳುವುದು ಏನೂ ಬೇಕಿಲ್ಲ ಬಿಡಿ. ಆದರೆ ಇಲ್ಲಿ ಭಾರತೀಯ ಜನತಾ ಪಕ್ಷದ ಈ ನೇತಾರನ ಈ ಪರಿಯ ಜನ ಚೇತನ ಯಾತ್ರೆಯ ಬಗ್ಗೆ ಬರೆಯದಿದ್ದರೆ ಅದೇನೋ ಒಂದು ರೀತಿಯ ಕಿರಿ ಕಿರಿ ಕೊರೆಯುತ್ತಲೇ ಇರುತ್ತದೆ.

ಇಂದು ಕರ್ನಾಟಕದ ಪರಿಸ್ಥಿತಿ ನೋಡಿ. ಏನೋ ಮಾಡಲು ಹೋದ ಭಾಜಪ ಎಂಬ ಆಡಳಿತಾರೂಢ ಪಕ್ಷ, ಕಂಡ ಕಂಡಲ್ಲಿ ಗಳಿಸಿಕೊಂಡದ್ದು ಭ್ರಷ್ಟಾಚಾರದ ಹಣೆ ಪಟ್ಟಿ. ಸಂಪುಟದ ಹೆಚ್ಚಿನ ಸಚಿವರ ಮೇಲೆ ಒಂದಲ್ಲ ಒಂದು ರೀತಿಯ ಆಪಾದನೆ ಬಂದಾಗ, ದೆಹಲಿಯ ನಾಯಕರು ತೇಪೆ ಹಚ್ಚುವ ನೆಪದಲ್ಲಿ ಯಡ್ಯೂರಪ್ಪನವರಿಗೆ ಮತ್ತೆ ಮತ್ತೆ ಅಧಿಕಾರದಲ್ಲಿ ಮುಂದುವರಿಯುವ ಅವಕಾಶವನ್ನು ಕೊಟ್ಟರೇ ಹೊರತು, ಆಗಿದ್ದೇನು ಎಂದು ನೋಡುವ ಪ್ರಾಥಮಿಕ ಜ್ಞಾನವನ್ನೂ ತೋರಲಿಲ್ಲ. ಒಂದೆಡೆ ರೆಡ್ಡಿ ಬಣ, ಮತ್ತೊಂದೆಡೆ ಯಡ್ಡಿಬಣ, ಇದೆರಡಲ್ಲದೇ ಬೇರೆ ಬೇರೆ ಇನ್ನಿತರ ಬಣಗಳು, ಹೊರ ಪ್ರಪಂಚದಲ್ಲಿ ಕೈ ಕೈ ಹಿಡಿದು, ಕಮಲವನ್ನು ಒಡೆದು ‘ದಳ ದಳ’ವನ್ನೂ ಬೇರೆ ಮಾಡಿದ್ದಂತೂ ಸತ್ಯ. ಎಷ್ಟೇ ಸಲ ಇದರ ಬಗ್ಗೆ ವರಿಷ್ಠರಿಗೆ ದೂರು ಹೋದರೂ, ವರಿಷ್ಠರದ್ದು ಅಲ್ಲಿ ಜಾಣ ಕುರುಡು.

ಭಾಜಪದಲ್ಲಿ ಎಲ್ಲವೂ ಸರಿ ಇಲ್ಲ ಅಂದುಕೊಂಡವರೇ
ಎಲ್ಲರೂ; ಅಲ್ಲಿ ಏನೂ ಸರಿ ಇಲ್ಲ ಎಂದುಕೊಳ್ಳಲಾರದೇ
ಹೋದವರೇ ವರಿಷ್ಠರು; ಅದಕ್ಕೇ ಯಡ್ಯೂರಪ್ಪನವರು
ಮಾಡುತ್ತಾ ಹೋದರು ತಪ್ಪು ಒಂದಲ್ಲ ನೂರು!!
ಮತ್ತಷ್ಟು ಓದು »

4
ನವೆಂ

“ಫೇಸ್ಬುಕ್‍” ನಿಸ್ತಂತು ಕನ್ನಡ ಸಾಹಿತ್ಯ – ಒಂದು ಇಣುಕು ನೋಟ!

– ರವಿ ಮುರ್ನಾಡು

ನವೆಂಬರ‍್ ತಿಂಗಳು ಬಂತಲ್ಲ…!  ಸಂತಸದ ಸಂಗತಿಯೆಂದರೆ, ಮಾನ್ಯ ಕಂಬಾರರು  ಜ್ಞಾನಪೀಠ ಪ್ರಶಸ್ತಿ ತಂದು,ಈ “ನವೆಂಬರ‍್ ಕನ್ನಡದ ಹಬ್ಬ” ವನ್ನು ಶ್ರೀಮಂತಗೊಳಿಸಿದರು. ಹನ್ನೊಂದು ತಿಂಗಳು ನಿದ್ದೆಗೆ ಬಿದ್ದು, ಒಂದು ತಿಂಗಳು ಭಾರೀ ಪ್ರಚಾರ ಪಡೆದುಕೊಳ್ಳುವ ಈ “ಕನ್ನಡದ ಹಬ್ಬ” ಅಂದಾಗ ಅದರ ಇನ್ನಿಲ್ಲದ ದೌರ್ಬಲ್ಯಗಳು ಬೀದಿಗೆ ಬರುತ್ತವೆ. ಕನ್ನಡದ ಕಾರ್ಯಕ್ರಮಗಳಲ್ಲಿ ವಿದೇಶಿ ಮೇಕಪ್‍ ಮೆತ್ತಿಕೊಂಡು, ಅರೆಬರೆಯ ಫ್ಯಾಷನ್‍ ಷೋ ವೇದಿಕೆಯಲ್ಲಿ ಇಂಗ್ಲೀಷ್‍- ಹಿಂದಿ ಹಾಡಿಗೆ ನೃತ್ಯ ಮಾಡುವ  ಅವೇಶಗಳು ಮೈಮೇಲೆ ಬರುತ್ತವೆ. ರಾಷ್ಟ್ರದಲ್ಲಿ ಸಾಹಿತ್ಯಕ್ಕಾಗಿ ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡಿಗರ ಆಡಂಭರ ಇದು !. ಅಭಿಮಾನದ ಬಗ್ಗೆ ಮಾತು ಒಕ್ಕಣಿಸುವಾಗ ಹೊರಗೆಡವಲಾರದ ನೋವು. ದೇಶದ ಇತರ ರಾಜ್ಯಗಳ ಜನರಲ್ಲಿರುವ ಅವರ ಮಣ್ಣಿನ ಭಾಷಾಭಿಮಾನಕ್ಕೆ ಹೋಲಿಸಿದಾಗ, ನಮ್ಮಲ್ಲಿ ಪ್ರಚಾರಕ್ಕೆ ಅಭಿಮಾನದ ಸೋಗು ಹಾಕಿದ ಉದಾಹರಣೆಗಳೇ ಹೆಚ್ಚು. ಒಂದು ಕಡೆ ರಾಜ್ಯದ ಹೃದಯ ಭಾಗಗಳೇ ತಾಯಿ ಭಾಷೆಯನ್ನು ಹರಾಜಿಗಿಟ್ಟಿವೆ. ಇನ್ನೊಂದೆಡೆ ನೆಲ ನಮ್ಮದು ಅಂತ ಕಾಳಗಕ್ಕಿಳಿದು, ಜೈಲೊಳಗೆ ಬಂಧಿಯಾದಂತೆ, ಕನ್ನಡ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತಿದೆ.  ಯಾಕೆ ಹೀಗೆ? ಈ ನವೆಂಬರ‍್ ತಿಂಗಳಲ್ಲಿ ಮಾತ್ರ ಏಕೆ ಕನ್ನಡಕ್ಕೆ ಆವೇಶ..?
ಎಲ್ಲವನ್ನು ಮೌನದ ಕನ್ನಡಿಯಲ್ಲಿ ನೋಡಿದಾಗ ಕನ್ನಡದ ಭಾವಚಿತ್ರ ಒಡೆದ ಗಾಜಿನಂತೆ ನೂರಾರು ಬಿರುಕುಗಳು ಅಟ್ಟಹಾಸಗೈಯ್ಯುತ್ತಿವೆ. ಹೊರ ರಾಜ್ಯಗಳಿಂದ ಉದ್ಯೋಗಕ್ಕಾಗಿ ಬಂದ ಪರಭಾಷಿಗರು ಕನ್ನಡದ ಬಗ್ಗೆ ಹಿಗ್ಗಾಮುಗ್ಗ ಮಾತಾಡಿದರು. ಕನ್ನಡದ ಮನಸ್ಸುಗಳು ನೋವು ಅನುಭವಿಸಿದ್ದು  ಯಾವತ್ತಿಗೂ ಮರೆತಿಲ್ಲ. ಎಲ್ಲಿ ಹೋದವು ಭಾಷಾಭಿವೃದ್ಧಿಗೆ ಸರಕಾರ ತಂದ ನೀತಿಗಳು ?. ಶಾಲಾ-ಕಾಲೇಜುಗಳಲ್ಲಿ ಭಾಷೆಯ ಬಗೆಗಿನ ಲಘು ವಿಚಾರಗಳು ವಿದ್ಯಾರ್ಥಿಗಳಲ್ಲಿ ಅಸಡ್ಡೆಗೆ ದಾರಿ ತೋರಿಸುತ್ತಿದೆ. ಕನ್ನಡ ಸಂಘಟನೆಗಳಲ್ಲಿ ಮುತುವರ್ಜಿ ವಹಿಸಿ ಬೀದಿ-ಬೀದಿಯಲ್ಲಿ ಕನ್ನಡದ ಆವೇಷ ಉಕ್ಕಿಸುವ ಉಮ್ಮಸ್ಸು ಮಂಕಾಗಿದೆ. ಗಣ್ಯ ವ್ಯಕ್ತಿಗಳ ರಣ ಕಹಳೆ ಮೊಳಗಿಸುವ ಕನ್ನಡದ ಬಗೆಗಿನ ಮಾತುಗಳು ಜಡ ಹಿಡಿದು ಮಲಗಿವೆ. ಇದು ಇಂದಿನ ಕನ್ನಡದ ದೌರ್ಬಲ್ಯಗಳಲ್ಲಿ ಮೊದಲು ಕಾಣುವಂತಹದ್ದು. ಆಂಗ್ಲ ಮತ್ತು ಹಿಂದಿ ಭಾಷೆಗಳ ನಡುವೆ ಬೇಧಭಾವ  ಭಿತ್ತಿದ ಹಲವು ಉದಾಹರಣೆಗಳು ಹಲವು ವಿಧದಲ್ಲಿ ಅಭಿಮಾನ ಕುಸಿಯುವಂತೆ ಮಾಡಿದೆ ಅಂತ ಖೇಧ ವ್ಯಕ್ತಪಡಿಸುವುದು ಅನಿರ್ವಾಯ.  ಪ್ರಶಸ್ತಿ ಕೊಡುವುದು ಪ್ರಚಾರಕ್ಕೆ ಅಲ್ಲ. ಅದು ಹೊಣೆಗಾರಿಕೆಯನ್ನು ಹೆಚ್ಚಿಸಲಿಕ್ಕೆ. ಪ್ರಶಸ್ತಿ ಅನ್ನುವ ಪದದ  ಇನ್ನೊಂದು ಅರ್ಥ ಇದು. ಟಿ.ವಿ.ಮಾಧ್ಯಮ, ಆಕಾಶವಾಣಿ ಮಾಧ್ಯಮಗಳಂತೂ ಕನ್ನಡದ ಹೆಸರಿಟ್ಟು ಕನ್ನಡಿಗರನ್ನೇ ಬೀದಿಗೆ ತರುತ್ತಿವೆ. ಇದರ ಬಗ್ಗೆ ಪ್ರಶ್ನಿಸಿದವರಿಗೆ ಕನ್ನಡದ ನೆಲದಲ್ಲೇ ಕನ್ನಡತನದ ಚುಕ್ಕಾಣಿ ಹಿಡಿದವರ ಉತ್ತರ ಮೌನ.

ಮತ್ತಷ್ಟು ಓದು »

3
ನವೆಂ

“ಕತ್ತ್ಲಲ್ಲಿ ಕರಡೀಗೆ ಜಾಮೂನು ತಿನಿಸೋಕೆ ಯಾವತ್ತು ಹೋಗ್ಬಾರ್ದು ರೀ….”

-ರಾಕೇಶ್ ಬಿ ಎಚ್

ನಮ್ಮ ದೇಶದಲ್ಲಿ ಪ್ರಶಸ್ತಿಗಳಿಗೆ ಬರ ಅನ್ನೋದೇ ಇಲ್ಲ. ವರ್ಷದಲ್ಲಿ ಏನಿಲ್ಲ ಅಂದರೂನು ದಿನಕ್ಕೊಂದು ಪ್ರಶಸ್ತಿಯನ್ನ ನಮ್ಮ ಘನತೆವೆತ್ತ ರಾಷ್ಟ್ರಾಧ್ಯಕ್ಷರು ನೀಡುತ್ತಲೇ ಇರ್ತಾರೆ. ಅವುಗಳಲ್ಲಿ ಎಷ್ಟು ಪ್ರಶಸ್ತಿಗಳು ಯೋಗ್ಯರಿಗೆ ಹೋಗುತ್ತವೆ ಅನ್ನೋದು ಮಾತ್ರ ನಿಘೂಡ!! ಇದೇ ಕಾರಣಕ್ಕೋ ಏನೋ ನಮ್ಮ ಪತ್ರಿಕೆಗಳು ಯಾರಾದರು ಪ್ರಶಸ್ತಿಗಳಿಗೆ ಭಾಜನರಾದರೆ, “ಶ್ರೀ ಯವರಿಗೆ ದಕ್ಕಿದ ಪ್ರಶಸ್ತಿ”  ಅಂತಾನೋ , ಇಲ್ಲ “ಪ್ರಶಸ್ತಿಯನ್ನ ಗಿಟ್ಟಿಸಿಕೊಂಡ ಶ್ರೀ..” ಅನ್ನೋ ಮುಖಪುಟ ವರದಿಯನ್ನ ಹಾಕ್ತಾರೆ. ನಮ್ಮ ವೈದ್ಯಕೀಯ ಭಾಷೇಲಿ ಹೇಳೋದಾದ್ರೆ ಖಾಯಿಲೆ ಬಿದ್ದ ವ್ಯಕ್ತಿ ಕಷ್ಟ ಪಟ್ಟು ಸ್ವಲ್ಪ ಊಟ ಮಾಡಿ ಅದೇನಾದ್ರೂ ವಾಂತಿ ಆಗ್ಲಿಲ್ಲ ಅಂದ್ರೆ ದಕ್ಕಿಸ್ಕೊಂಡ ಅಂತ ಹೇಳ್ತಿವಿ. ಅಂದ್ರೆ ಕಷ್ಟಪಟ್ಟು ಒಳಗೆ ಹಾಕಿಕೊಳ್ಳೋ ಕ್ರಿಯೆ. ಅದೇ ರೀತಿ ಗಿಟ್ಟಿಸಿಕೊಳ್ಳೋದು ಅನ್ನೋದು ಕೂಡ self explanatory  ಪದ. ಹೀಗೆ ನೈತಿಕತೆಯಿಲ್ಲದ ಪ್ರಶಸ್ತಿಗಳ ಮಧ್ಯೆ ನಮ್ಮ ಭಾರತೀಯ ಮಿಲಿಟರಿ ಕೊಡುವ ”ಶೌರ್ಯ ಚಕ್ರ” ಪ್ರಶಸ್ತಿ ಭಿನ್ನವಾಗಿ ನಿಲ್ಲುತ್ತೆ. ಪ್ರಶಸ್ತಿಯ ಮಾನದಂಡವು ಕೂಡ ಅಷ್ಟೇ, ವೈರಿಯ ಜೊತೆ ನೇರವಾಗಿ ಅಲ್ಲದಿದ್ದರೂ, ಧೈರ್ಯ ಸಾಹಸದಿಂದ ಮಾಡುವಂತ self sacrifice ಗೆ ಈ ಪ್ರಶಸ್ತಿ ಮೀಸಲು. ತನ್ನ ಜೀವವನ್ನು ಲೆಕ್ಕಿಸದೆ ಭಯೋತ್ಪಾದಕರನ್ನ ಹೊಡೆದು ಹಾಕಿದ ಕಾಶ್ಮೀರದ ಕನ್ಯೆ ನಮ್ಮ ಕಣ್ಣ ಮುಂದೆ ನಿಲ್ಲೋದು ಈ ಪ್ರಶಸ್ತಿಯ ದೆಸೆಯಿಂದಲೇ. ಅಂತಹ ಎಷ್ಟೋ ವ್ಯಕ್ತಿಗಳನ್ನ ನಾವು ವೈಯಕ್ತಿಕವಾಗಿ ಭೇಟಿ ಮಾಡೋದು ಸಾಧ್ಯವೇ ಇಲ್ಲ. ಅವರುಗಳ ಕಥೆ ಕೇಳಿ ಹೆಮ್ಮೆ ಪಡೋದೇ ದೊಡ್ಡ ವಿಷಯ ಅನ್ಸುತ್ತೆ. ಆದರೆ ಈ ವ್ಯಕ್ತಿಗಳನ್ನ ಇದ್ದಕ್ಕಿದ್ದಂಗೆ ನೆನೆಯೋಕೆ ಕಾರಣ, ಆ ರೀತಿಯ ವ್ಯಕ್ತಿಯೋರ್ವನನ್ನ ನೋಡಿ, ಮಾತಾಡಿಸಿ, ಅವನ ಕಥೆ ಕೇಳಿ ಬೆಚ್ಚಿ ಬೀಳೋ ಪ್ರಸಂಗ ಬಂದಾಗ. ಆ ವ್ಯಕ್ತಿ ನಮ್ಮ ಆಸ್ಪತ್ರೆಯ ಕಥನಗಳ ಒಂದು ಪುಟ. ಅವನ ಪದಗಳಲ್ಲೇ ನನಗೆ ಕಥೆಯನ್ನ ವಿವರಿಸಿದ ಚಿತ್ರಣವನ್ನ ನಿಮಗೆ ಕಟ್ಟಿ ಕೊಡುವ ಪ್ರಯತ್ನ ಮಾಡ್ತೀನಿ.  ಮತ್ತಷ್ಟು ಓದು »
3
ನವೆಂ

ಸಂಸ್ಕೃತಿ ಸಂಕಥನ – ೯

– ರಮಾನಂದ ಐನಕೈ

ವರ್ಶಿಪ್ ಅಂದರೆ ನಮ್ಮ ಪೂಜೆ ಅಲ್ಲ

ಜನಸಾಮಾನ್ಯರ ಮಾತು ಹಾಗಿರಲಿ, ಯಾವುದೇ ಭಾರತೀಯ ತಿಳುವಳಿಕಸ್ತನ ಹತ್ತಿರ ‘ಪೂಜೆ’ ಅಂದರೆ ಏನೆಂದು ಕೇಳಿದರೆ ‘ವರ್ಶಿಪ್’ ಎಂದು ಉತ್ತರ ಕೊಡುತ್ತಾನೆ. ‘ವರ್ಶಿಪ್’ ಅಂದರೆ ಏನೆಂದು ಕೇಳಿದರೆ  ‘ಪೂಜೆ’ ಅನ್ನುತ್ತಾನೆ. ಅದು ಸ್ವಾಭಾವಿಕ. ಏಕೆಂದರೆ ನೂರಾರು ವರ್ಷಗಳಿಂದ ನಮ್ಮ ಜ್ಞಾನ ಇಷ್ಟು ಹದಕ್ಕೆ ಬಂದಿದೆ. ಹೆಚ್ಚು ವಾದ ಮಾಡಿದರೆ ನಿಘಂಟು ತೆರೆದು ತೊರಿಸುತ್ತಾರೆ. ಅಲ್ಲಿ ವರ್ಶಿಪ್ ಅಂದರೆ ಅರ್ಚನೆ, ಪೂಜೆ, ಆರಾಧನೆ ಎಂಬಿತ್ಯಾದಿ ಅರ್ಥಗಳಿವೆ. ನಾವಿಲ್ಲಿ ಚರ್ಚಿಸುತ್ತಿರುವುದು ತರ್ಜುಮೆಯ ಕುರಿತಾಗಲ್ಲ ಅಥವಾ ಪದಗಳ ಅರ್ಥ ವ್ಯತ್ಯಾಸಗಳ ಬಗ್ಗೆಯೂ ಅಲ್ಲ. ಇಂಥ ತಪ್ಪು ಗೃಹಿಕೆಗಳು ಒಂದು ಸಂಸ್ಕೃತಿಯ ಮೇಲೆ ಮಾಡುವ ತಪ್ಪು ಪರಿಣಾಮಗಳ ಕುರಿತು.

ಪಾಶ್ಚಾತ್ಯರು ಭಾರತಕ್ಕೆ ಬಂದು ಇಲ್ಲಿನ ಆಚರಣೆಗಳನ್ನು ನೋಡಿ ‘ಭಾರತೀಯರು ವರ್ಶಿಪ್ ಮಾಡುತ್ತಿಲ್ಲ, ಬದಲಾಗಿ ನೂರಾರು ದೇವರುಗಳನ್ನು ಪೂಜೆ ಮಾಡುತ್ತಾರೆ’ ಎಂದು ಗ್ರಹಿಸಿದರೆ ತೊಂದರೆ ಇಲ್ಲವಾಗಿತ್ತು. ಆದರೆ ಅವರು ಭಾರತೀಯರು ತಪ್ಪುತಪ್ಪಾಗಿ ವರ್ಶಿಪ್ ಮಾಡುತ್ತಿದ್ದಾರೆ ಎಂದು ಗ್ರಹಿಸಿದ್ದೇ ಯಡವಟ್ಟಾಗಲು ಕಾರಣ. ಏಕೆಂದರೆ ಮುಂದೆ ಅವರು ಈ ತಪ್ಪು ವರ್ಶಿಪ್ ಸರಿಪಡಿಸಲು ಪ್ರಯತ್ನಿಸಬೇಕಾಯಿತು. ಈ ಪ್ರಯತ್ನವೇ ಭಾರತೀಯ ಸಂಸ್ಕೃತಿಗೆ ಬಡಿದ ಬಾಲಗ್ರಹ ಎಂಬುದು ಬಾಲಗಂಗಾಧರರ ಬರಹಗಳನ್ನು ಓದಿದಾಗ ಅರಿವಾಗುತ್ತದೆ.

ಮತ್ತಷ್ಟು ಓದು »

2
ನವೆಂ

ನಿಲುಮೆಯ ಓದುಗರಲ್ಲಿ ಭಿನ್ನಹ….

– ಅರೆಹೊಳೆ ಸದಾಶಿವ ರಾವ್

‘ನಿಲುಮೆಯ’ ಓದುಗರೆಲ್ಲರಿಗೂ ನಮಸ್ಕಾರಗಳು
ಮು೦ದಿರುವ ಕನ್ನಡ ರಾಜ್ಯೋತ್ಸವದ ಶುಭ ಹಾರೈಕೆಗಳು.
ಇ೦ದಿನ ಪತ್ರಿಕಾ ರ೦ಗದಲ್ಲಿ ಅ೦ತರಜಾಲ ಮತ್ತು ಬ್ಲಾಗ್ ಗಳ ಕೊಡುಗೆ ನಿಜಕ್ಕೂ ಅಪಾರ ಮತ್ತು ವಿಸ್ಮಯ ಹುಟ್ಟಿಸುವಷ್ಟು ಬೆಳೆದು ನಿ೦ತಿದೆ. ಎಲ್ಲೋ ನನ್ನ ಪಾಡಿಗೆ ಪತ್ರಿಕೆಯೊ೦ದಕ್ಕೆ ಅ೦ಕಣ ಬರೆದು ಕುಳಿತಿದ್ದ ನನ್ನನ್ನು ನಿಲುಮೆಯ ನೀವೆಲ್ಲರೂ ಪ್ರೇತಿಯಿ೦ದ ಓದಿದ್ದೀರಿ….ಹರಸಿದ್ದೀರಿ…ಹಾರೈಸಿದ್ದೀರಿ. ನಿಮಗೆ ನಾನು ಋಣಿಯಾಗಿದ್ದೇನೆ.
ಮ೦ಗಳೂರಿನಲ್ಲಿ ವಿಶಿಷ್ಟವಾದ ಲಯನ್ಸ್ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಾವು ಆಯೋಜಿಸಿದ್ದು ತಮಗೂ ತಿಳಿದಿರಬಹುದು. ಅದು ಸಾಹಿತ್ಯಿಕ ವಲಯದಲ್ಲಿ ಒ೦ದು ವಿಶಿಷ್ಟ ದಾಖಲೆಯಾಗಿ ಉಳಿದಿದೆ. ಅದು ನನ್ನ ಒ೦ದು ಕನಸಾಗಿತ್ತು. ಅದಾದ ನ೦ತರ, ಶಿಕ್ಷಣ, ಕಲೆ, ಸಾಹಿತ್ಯ ಮತ್ತು ಸ೦ಸ್ಕ್ರತಿಗನ್ನು ಧ್ಯೇಯವಾಗಿಟ್ಟುಕೊ೦ಡು ಆರ೦ಭಿಸಿದ ಸ೦ಸ್ಥೆ ‘ಅರೆಹೊಳೆ ಪ್ರತಿಷ್ಠಾನ’. ಇದರ ಮೂಲಕ ನನ್ನ ಕೈಲಾದ ನೆಅರವನ್ನು ನಾಲ್ಕು ಕ್ಷೇತ್ರಗಳಲ್ಲಿ ಮಾಡುತ್ತಿದ್ದು, ಸಹ್ರದಯಿಗಳ ಪ್ರೋತ್ಸಾಹವೇ ಈ ಎಲ್ಲದಕ್ಕೂ ಕಾರಣವೆ೦ದು ನಾನು ಭಾವಿಸಿದ್ದೇನೆ.

ನನ್ನ ಮತ್ತೊ೦ದು ಹೊಸ ಕನಸಿನ ಮೂಟೆ ಹೊತ್ತು ಇ೦ದು ನಿಮ್ಮೆದುರು ಬ೦ದಿದ್ದೇನೆ. ಕೆಲವು ದಿನಗಳ ಕಾಲ ನನ್ನ ಬರಹ ಕ್ರಷಿ ನಿ೦ತು ಹೋಗಿತ್ತು. ಅದಕ್ಕೆ ಮುಖ್ಯ ಕಾರಣವೆ೦ದರೆ ನಾನು ಮತ್ತು ಒ೦ದು ಕೆಲಸವನ್ನು ಮೈ ಮೇಲೆ ಹಾಕಿಕೊ೦ಡಿದ್ದೆ. ನನ್ನ ಬಹುದಿನಗಳ ಕನ್ಸೊ೦ದಕ್ಕೆ ಜೀವ ಕೊಡುವ ಹುನ್ನಾರಿನಲ್ಲಿ ನಾನು ಅದರಲ್ಲಿ ತಲ್ಲೀನನಾಗಿದ್ದೆ. ಅದೆ೦ದರೆ ಕನ್ನಡದಲ್ಲಿ ವಿಶಿಷ್ಟವಾದ ಒ೦ದು ಅ೦ತರ್ಜಾಲ ಪತ್ರಿಕೆಯನ್ನು ಪ್ರಕಟಿಸುವ ಕನಸು. ಅದೀಗ ನನಸಾಗುವ ಹ೦ತದಲ್ಲಿದೆ…..ಅದನ್ನು ಹೇಲಲೆ೦ದೇ ನನ್ನ ಈ ಬರಹ

ಮತ್ತಷ್ಟು ಓದು »

2
ನವೆಂ

ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

2
ನವೆಂ

ಅಶ್ಫಾಕುಲ್ಲಾ ಖಾನ್” — ದೇಶಭಕ್ತಿಯ ಮೂರ್ತರೂಪ..

– ಭೀಮಸೇನ್ ಪುರೋಹಿತ್

ಆಗಸ್ಟ್ 9 – 1925.. ಅವತ್ತಿನ ರಾತ್ರಿ ಭಾರತದ ಕ್ರಾಂತಿಯ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು ದಾಖಲಾದ ದಿನ.. ಇನ್ನೂ ಮೀಸೆ ಚಿಗುರದ ನವತರುಣರು ಆಂಗ್ಲಶಾಹಿಯೆದುರಿಗೆ ತೊಡೆತಟ್ಟಿ ನಿಂತ ದಿನ ಅದು.. ಅದೇ “ಕಾಕೋರಿ” ಪ್ರಕರಣ..

ಆ ಹೊತ್ತಿಗಾಗಲೇ, ಅಮೇರಿಕಾದ “ಗದರ್” ಪಾರ್ಟಿಯ ಪ್ರಖರತೆ ಕಮ್ಮಿಯಾಗಿತ್ತು. ಭಾರತದಲ್ಲಿ, ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಗದರ್ ಪಾರ್ಟಿಯ ಹಳೆಯ ಕೆಲವು ನಾಯಕರು ಸೇರಿ “ಹಿಂದುಸ್ತಾನ್ ರಿಪಬ್ಲಿಕನ್ ಅಸೋಸಿಯೇಶನ್” ಎಂಬ ಕ್ರಾಂತಿಸಮಿತಿಯನ್ನು ಶುರು ಮಾಡಿದ್ರು. ಗದರ್ ಪಾರ್ಟಿಯ ಪತನದ ನಂತರ  ಕ್ರಾಂತಿ ತಣ್ಣಗಾಗಿದೆ ಅಂತ, ಆಂಗ್ಲರು ಈ  HRA ಅನ್ನು  ಉಪೇಕ್ಷಿಸಿದ್ದರು.. ಅವರ ಆ ಅಲಕ್ಸ್ಯವೇ ಕ್ರಾಂತಿಕಾರಿಗಳಿಗೆ ವಾರವಾಯಿತು..

ರಾಮಪ್ರಸಾದ್ ಮತ್ತು ಅಶ್ಫಾಕ್ ಇಬ್ರೂ ಜೀವಕ್ಕೆ ಜೀವ ಕೊಡೊ ಗೆಳೆಯರು.. ಅವರ ಸ್ನೇಹದ ನಡುವೆ ಧರ್ಮ ಯಾವತ್ತೂ ಅಡ್ಡಿ ಬರ್ಲಿಲ್ಲ.. ಹಾಗೆ ನೋಡಿದರೆ, ರಾಮ್, ಪಕ್ಕಾ ಅರ್ಯಸಮಾಜದ ಹಿಂದೂವಾದಿ. ಆದ್ರೆ ಅವನು ಅಶ್ಫಾಕ್ ನನ್ನು ಅಪಾರವಾಗಿ ಗೌರವಿಸುತ್ತಿದ್ದ. ಹಾಗೆಯೇ ಅಶ್ಫಾಕ್ ಕೂಡ ಯಾವಾಗಲೂ “ನನ್ನ ರಾಮ” ಅಂತಾನೆ ಜಪಿಸುತ್ತಿದ್ದ.. ಅಶ್ಫಾಕ್  ಉತ್ತರಪ್ರದೇಶದ ಷಹಜಹಾನ್ ಪುರದವನು. ಅಶ್ಫಾಕ್ ಒಬ್ಬ ಮಹಾನ್ ಉರ್ದು ಕವಿ ಕೂಡ ಆಗಿದ್ದ.. ಅತ್ಯಂತ ಉದ್ಬೋಧಕ ದೇಶಭಕ್ತಿ ಗೀತೆಗಳನ್ನು ಬರೆದ ಸಾಹಿತಿ ಅವನು.. ಅದೇ ಅಶ್ಫಾಕ್ ಬಿಸ್ಮಿಲ್ಲನ ಸಹವಾಸಕ್ಕೆ ಬಂದೊಡನೆ, ಅವನ ಪಟ್ಟಶಿಷ್ಯನಾಗಿ ದೇಶಕ್ಕೆ ಅರ್ಪಿಸಿಕೊಂಡಿದ್ದ..

ಮತ್ತಷ್ಟು ಓದು »