ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 26, 2011

17

ನನ್ನ ಬದುಕು ಪರಿವರ್ತಿಸಿದ ಬಂಗಾರಪ್ಪ

‍ನಿಲುಮೆ ಮೂಲಕ
-ಬನವಾಸಿ ಸೋಮಶೇಖರ್, ಮಂಗಳೂರು
“1992 ನೇ ಇಸ್ವಿ.ನಾನು ಆಗಷ್ಟೇ ಎಸ್.ಎಸ್.ಎಲ್.ಸಿ.ಪರೀಕ್ಷೆ ಬರೆದು ಮುಗಿಸಿದ್ದೆ.ಫಲಿತಾಂಶ ಇನ್ನೂ ಬಂದಿರಲಿಲ್ಲ.ಅತ್ಯಂತ ಕಡು ಬಡತನದ ಕುಟುಂಬ ನಮ್ಮದು.ಒಂದು ಹೊತ್ತಿನ ತುತ್ತಿಗೂ ತತ್ವಾರ ಪಡುವಂತ ದಯನೀಯ ಮತ್ತು ಶೋಚನೀಯ ಸ್ಥಿತಿ.ತಂದೆ ನಾ ಮಗುವಾಗಿರುವಾಗಲೇ ಗತಿಸಿದ್ದರು.ಮೂರು ಜನ ಅಣ್ಣಂದಿರು, ಒಬ್ಬಳು ಸಹೋದರಿ.ದೊಡ್ಡಣ್ಣ 10-11ರ ಪ್ರಾಯದಲ್ಲಿಯೇ ಮನೆ ಬಿಟ್ಟು ಹೋದವನು ನಾಪತ್ತೆಯಾಗಿದ್ದ.ಅಮ್ಮ ಅವನಿಗಾಗಿ ಹುಡುಕಾಡಿ ಹುಡುಕಾಡಿ ಹೈರಾಣಾಗಿದ್ದರು.ಉಳಿದ ಇಬ್ಬರು ಅಣ್ಣಂದಿರಲ್ಲಿ ಒಬ್ಬ ಮಾತ್ರ ಅತ್ಯಂತ ಶ್ರಮಜೀವಿ.ಇಬ್ಬರೂ ಕೂಲಿ ಕೆಲಸ ಮಾಡಿ ತುತ್ತಿನ ಚೀಲ ತುಂಬಿಸುತ್ತಿದ್ದರು. ಅನ್ನಕ್ಕಾಗಿ ಹಾತೊರೆಯುವ ಪರಿಸ್ಥಿತಿ ಅದಾಗಿತ್ತು. ಅದಕ್ಕಾಗಿ ಒಮ್ಮೊಮ್ಮೆ ಅಕ್ಕ,ಅಣ್ಣಂದಿರೊಂದಿಗೆ ಜಗಳವಾಡಿದ್ದು ಇಂದಿಗೂ ನೆನಪಿದೆ. ಕೊನೆಯ ಮಗನಾದ ನನ್ನನ್ನು ಓದಿಸಬೇಕೆಂಬುದು ಅಮ್ಮನ ಮಹದಾಸೆ ಅಣ್ಣಂದಿರ ಹಿರಿಯಾಸೆಯಾಗಿತ್ತು.
ನಾನಾದರೋ ಮನೆಯ ದೈನ್ಯೇಸಿ ಸ್ಥಿತಿಯನ್ನು ನೋಡಿ ಮನೆ ಬಿಟ್ಟು ಹೋಗಿ ಏನಾದರೂ ಕೆಲಸ ಮಾಡಿ ಮನೆಗೆ ಆಸರೆಯೊದಗಿಸಬೇಕೆಂದು ಹಾತೊರೆದು ಮನೆ ತೊರೆದು ಬೆಂಗಳೂರಿನತ್ತ ಮುಖ ಮಾಡಿಯೇ ಬಿಟ್ಟಿದ್ದೆ. ಕೈಯಲ್ಲಿ  ಸಂಗ್ರಹಿಸಿಟ್ಟಿದ್ದ ಇಪ್ಪತ್ತು ರೂಪಾಯಿ ಇತ್ತಷ್ಟೇ.ಯಾವ್ಯಾವುದೋ ಬಸ್ ಹತ್ತಿ ನಿರ್ವಾಹಕನ ಕಣ್ ತಪ್ಪಿಸಿ ಟಿಕೇಟು ತೆಗೆಸದೇ ಬೆಂಗಳೂರಿಗೆ ಬಂದಿಳಿದಿದ್ದೆ.ಆಗ ನಾಡಿನ ದೊರೆಯಾಗಿದ್ದವರೇ ನಮ್ಮ ಸಾರೆಕೊಪ್ಪ ಬಂಗಾರಪ್ಪನವರು.ಅವರು ನಮ್ಮ ಪಕ್ಕದ ತಾಲೂಕಿನವರಾಗಿದ್ದರಿಂದಲೂ ನಮ್ಮೂರಲ್ಲಿ ಅವರ ಬಗ್ಗೆ ಅಪಾರ ಜನಪ್ರೀಯತೆ ಇದ್ದುದರಿಂದಲೂ ಅವರಲ್ಲಿಗೆ ಹೋಗಿ ಏನಾದರೂ ಸಹಾಯ ಪಡೆದು ಬೆಂಗಳೂರಲ್ಲಿ ಕೆಲಸ ಮಾಡಬಹುದೆಂದು ಯೋಚಿಸಿ ಸೊರಬದವನೆಂದು ಸುಳ್ಳು ಹೇಳಿ ಮುಖ್ಯಮಂತ್ರಿಗಳ ಗೃಹ ಕಛೇರಿಯನ್ನು ಹರಸಾಹಸ ಮಾಡಿ ಪ್ರವೇಶಿಸಿದ್ದೆ.ಸಾವಿರಾರು ಸಾರ್ವಜನಿಕರು ಅಹವಾಲು ಸಲ್ಲಿಸಲು ಸರತಿಯಲ್ಲಿ ನಿಂತು ಕಾಯುತ್ತಿದ್ದರು.ನಾನೂ ಹಾಗೆಯೇ ಮಾಡಿದೆ.
ನನ್ನ ಪಾಳಿ ಬಂದಾಗ ಅವರೊಡನೆ ನನ್ನ ತಾಪತ್ರಯ ಹೇಳಿಕೊಳ್ಳಬೇಕೆಂಬಷ್ಟರಲ್ಲಿ ದುಃಖ ಉಮ್ಮಳಿಸಿ ಬಿಕ್ಕಿ ಬಕ್ಕಿ ಅತ್ತು ಬಿಟ್ಟೆ.ಯಾರು ನೀನು? ಎಲ್ಲಿಂದ ಬಂದಿದ್ದಿ? ಏನು ನಿನ್ನ ವಿಷಯ? ಎಂದೆಲ್ಲ ಜೋರು ಧ್ವನಿಯಲ್ಲಿ ಪ್ರಶ್ನಿಸಿದಾಗ ನಾ ದಂಗಾಗಿ ಹೋಗಿದ್ದೆ! ನಾನು ಬನವಾಸಿಯಿಂದ ಮನೆ ಬಿಟ್ಟು ಬಂದ ವಿಷಯವನ್ನೂ ನನ್ನ ವೃತ್ತಾಂತವನ್ನೂ ತಿಳಿಸಿ ನನಗೊಂದು ಕೆಲಸ ಕೊಡಿಸಬೇಕೆಂಬ ಬೇಡಿಕೆ ಇಟ್ಟಿದ್ದೆ. ಓದುವುದು ಬಿಟ್ಟು ಇಲ್ಲಿಗೇಕೆ ಬಂದೇ? ಬೆಂಗಳೂರಲ್ಲೇನಿದೆ? ಇತ್ಯಾದಿಯಾಗಿ ಮೇಲಿಂದ ಮೇಲೆ ನನ್ನ ಪ್ರಶ್ನಿಸಿದ್ದರು.ಯಾವುದೇ ಕಾರಣಕ್ಕೂ ಓದುವುದನ್ನು ನಿಲ್ಲಿಸಕೂಡದು,ಸೀದಾ ಬನವಾಸಿಗೆ ಬಸ್ ಹತ್ತಬೇಕೆಂದು ತಾಕೀತು ಮಾಡಿದರು.ನನ್ನ ಬಗ್ಗೆ ಅತೀವ ಕಾಳಜಿ ವಹಿಸಿ ಪಕ್ಕದಲ್ಲಿಯೆ ಇದ್ದ ಆಪ್ತ ಕಾರ್ಯದರ್ಶಿ ವಿಜಯ ಪ್ರಕಾಶ (ಈಗವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿ.ಇ.ಓ.)ಅವರಿಗೆ ಕಿವಿಯಲ್ಲಿ ಏನೇನೋ ಹೇಳಿದರು.ನನ್ನನ್ನು ಒಳಗೆ ಪ್ರತ್ಯೇಕ ಕೋಣೆಯಲ್ಲಿ ಇರುವಂತೆ ಸೂಚಿಸಿ ಚಹಾ ನೀಡುವಂತೆ ಸಿಬ್ಬಂದಿಗೆ ಸೂಚಿಸಿದ್ದರು.ನಂತರ ವಿಜಯ ಪ್ರಕಾಶ್ ಅವರು ನನ್ನ ಕೈಗೆ ಆಗ ಎರಡು ಸಾವಿರ ಇತ್ತು ಯಾವುದೇ ಕಾರಣಕ್ಕೂ ಮತ್ತೆ ಬೆಂಗಳೂರಿಗೆ ಬರಬೇಡ,ಸಾಹೇಬರು ನಿನ್ನ ಬಗ್ಗೆ ತುಂಬಾ ಅನುಕಂಪಿತರಾಗಿರುವರು.ಅವರ ಮಾತನ್ನು ನಡೆಸಬೇಕೆಂದರೆ ನೀನು ಎಷ್ಟೇ ಕಷ್ಟ ಬಂದರೂ ಓದುವುದನ್ನು ಬಿಡಬೇಡ ಎಂದು ಹೇಳಿ ಬನವಾಸಿ ಬಸ್ ಅನ್ನು ಹತ್ತಿಸಿದ್ದರು.
ನಂತರ ನನ್ನ ಬದುಕಿನ ದಿಕ್ಕೇ ಬದಲಾಯಿತು.ಮತ್ತೆಂದಿಗೂ ಅವರ ಬಳಿ ಸಹಾಯಕ್ಕಾಗಿ ನಾ ಹೋಗಲಿಲ್ಲ.ಅಂದು ಅವರು ಹಾಗೆ ನಡೆದು ಕೊಳ್ಳದೇ ಹೋಗಿದ್ದರೆ ನಾನು ಎಮ್.ಎ.,ಬಿ.ಇಡಿ ಸ್ನಾತಕೋತ್ತರನಾಗಲು ಸಾಧ್ಯವಿರಲಿಲ್ಲ.ನನ್ನ ವ್ಯಕ್ತಿತ್ವ ಅರಳುತ್ತಿರಲಿಲ್ಲ.ನಾನ್ಯಾವುದೋ ಬಾರಲ್ಲೋ ಹೋಟೇಲಿನಲ್ಲೋ ಒಂದು ಚಾಕರಿ ಮಾಡಿಕೊಂಡಿರಬಹುದಿತ್ತು ಅಷ್ಟೇ.ಅವರ ಖಾಳಜೀ ತುಂಬಿದ ಹಾರೈಕೆ ನನ್ನನ್ನು ಓದಿಗೆ ಪ್ರೇರೇಪಿಸಿತು,ಸ್ಪೂರ್ಥಿ ತುಂಬಿತು.
ಎಂಥ ಕಷ್ಟ ಬಂದರೂ ವಿದ್ಯೆಯಿಂದ ಹಿಂದೆ ಸರಿಯಬಾರದೆಂದು ನಿರ್ಧರಿಸಿದೆ.ಬೆಟ್ಟದಂಥ ಕಷ್ಟಗಳನ್ನು ಎದುರಿಸಿದೆ.ಓದಿ ನೌಕರಿ ಪಡೆಯುವಂತಾಯಿತು.ಕರ್ನಾಟಕದ ಮುಖ್ಯಮಂತ್ರಿಯಿಂದ ಪ್ರೇರಣೆ ಹೊಂದಿ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಲ್ಲಿ ಸೇವೆ ಪ್ರಾರಂಭಿಸಿರುವೆ.ನನ್ನ ಅಮ್ಮನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾ ಸಂಸಾರಿಯಾಗಿದ್ದುಕೊಂಡು ನನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದೇನೆ.ಬಂಗಾರಪ್ಪಾಜೀ ನಾ ನಿಮ್ಮನ್ನು ಮರೆಯಲುಂಟೇ?ನನ್ನೀ ನುಡಿ ನಮನದ ಮೂಲಕ ತಮ್ಮ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ.”
**********************
chitrakrupe: megamedianews.in
17 ಟಿಪ್ಪಣಿಗಳು Post a comment
  1. Mohan V Kollegal's avatar
    Mohan V Kollegal
    ಡಿಸೆ 27 2011

    ಸಾಂದರ್ಭಿಕವಾಗಿ ಮೂಡಿ ಬಂದಿರುವ ಅತ್ಯುತ್ತಮ ಲೇಖನ. ನಿಮ್ಮ ಕಷ್ಟಗಳು, ಜೊತೆಗೆ ಬಂಗಾರಪ್ಪನವರು ಅನುಕಂಪಿಸಿ ನಿಮಗೆ ದಾರಿ ತೋರಿದ್ದು ಓದಿ ಒಮ್ಮೆ ಹಾಗೇ ಗದ್ಗದಿತನಾದೆ. ಇವೇ ನಿಜವಾದ ಹೆಜ್ಜೆ ಗುರುತುಗಳು. ಬದುಕಿನಲ್ಲಿ ವ್ಯಕ್ತಿತ್ವ ಮತ್ತು ಮನಸ್ಸನ್ನು ಅರಳಿಸಿಕೊಳ್ಳಬೇಕು. ನಡೆವ ದಾರಿಗೆ ಶುದ್ಧ ಹೆಜ್ಜೆಗಳನ್ನು ಇಟ್ಟಾಗ ಬದುಕಿನ ಈಟಿಗೆ ಎದೆಗೊಡುವ ಧೈರ್ಯ ನಮ್ಮದಾಗುತ್ತದೆ. ಬಂಗಾರಪ್ಪನವರೂ ಹಾಗೆ. ಯಾವುದೇ ಸಭೆ ಇರಲಿ, ಕಾರ್ಯಕ್ರಮವಿರಲಿ ವಿಷಯಗಳನ್ನು ಗೊಂದಲವಿಲ್ಲದೇ ಸ್ವಚ್ಛಂದವಾಗಿ ಪ್ರಕಟಿಸುತ್ತಿದ್ದರು, ಅನ್ಯಾಯದ ವಿರುದ್ಧ ಗಟ್ಟಿಯಾಗಿ ಮಾತನಾಡಿದವರು. ತಮ್ಮ ಸಂಬಂಧಿಕರನ್ನೂ ಬಿಟ್ಟವರಲ್ಲ. ಅಂತಹ ಆತ್ಮಕ್ಕೆ ಚಿರಶಾಂತಿ ದೊರಕಲಿ… ಸಕಾಲಿಕ ಲೇಖನಕ್ಕೆ ವಂದನೆಗಳು….

    ಉತ್ತರ
  2. ರವಿ ಮೂರ್ನಾಡು,ಕ್ಯಾಮರೂನ್, ಮಧ್ಯ ಆಫ್ರೀಕಾ's avatar
    ರವಿ ಮೂರ್ನಾಡು,ಕ್ಯಾಮರೂನ್, ಮಧ್ಯ ಆಫ್ರೀಕಾ
    ಡಿಸೆ 27 2011

    ಲೇಖನ ಮನದಾಳದಿಂದ ಬಂದಿತು.ಅನುಭವದ ಬರಹ ಬೇಗ ಮನಸ್ಸಿನಲ್ಲಿ ಅಚ್ಚೊತ್ತುತ್ತದೆ.ಒಂದು ತನ್ನ ಬದುಕಿನ ವ್ಯವಸ್ಥೆ,ಆ ಕಾರಣ ಬದುಕಿನ ಅಸ್ತವ್ಯಸ್ತತೆ.ಅದಕ್ಕೊಂದು ದಾರಿ , ಮತ್ತೊಮೆ ಬದುಕು ಅರಳಿಸಿದ ಸ್ಫೂರ್ತಿ.ವಿಸ್ತಾರವಾಗಿ ಬದುಕನ್ನು ಚಿತ್ರಸಿದ ಲೇಖನ. ಪ್ರಕಟಿಸಿ ಉಣಬಡಿಸಿದ ನಿಲುಮೆಗೆ ಧನ್ಯವಾದಗಳು.

    ಉತ್ತರ
  3. Prasad V Murthy's avatar
    ಡಿಸೆ 27 2011

    ಸೋಮಣ್ಣ ಎಷ್ಟೋ ಜನರಿಗೆ ಗೊತ್ತಿರದ ಬಂಗಾರಪ್ಪನವರ ಅಂತಃಕರಣದ ವ್ಯಕ್ತಿತ್ವ ಪರಿಚಯ ಮಾಡಿತು ನಿಮ್ಮ ಈ ಲೇಖನ.. ಕಷ್ಟದಲ್ಲಿ ವಿದ್ಯಾರ್ಜನೆ ಮಾಡಿ ಕಷ್ಟಗಳನ್ನೇ ಮೆಟ್ಟಿಲಾಗಿ ಮಾಡಿಕೊಂಡ ಹೊರಾಟವೇ ಬದುಕೆಂದು ಪಾಠ ಹೇಳಿದ ವರ್ಣಮಯ ವ್ಯಕ್ತಿತ್ವದ ಬಂಗಾರಪ್ಪನವರನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದೆ ನಿಮ್ಮ ಲೇಖನ.. ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಆ ದೇವರು.. ನಿಮ್ಮ ನುಡಿನಮನ ನಮ್ಮೆಲ್ಲರ ಮನಸ್ಸನ್ನು ತೇವಗೊಳಿಸಿ ಬಂಗಾರಪ್ಪನವರಿಗೆ ನನ್ನ ಅಶ್ರುತರ್ಪಣ ಸಲ್ಲಿಸಲು ಪ್ರೇರೇಪಿಸುತ್ತದೆ.. ಅವರ ಮನೆಯವರಿಗೆ ಈ ದುಃಖವನ್ನು ಬರಿಸಲು ಶಕ್ತಿ ಕೊಡಲಿ..

    ಉತ್ತರ
  4. ಬಂಗಾರಪ್ಪ ಒಬ್ಬ ಸ್ವಾಭಿಮಾನಿ ರಾಜಕಾರಣಿ. ತನ್ನ ಹಠ ಮತ್ತು ಛಲದ ನಿಲುವುಗಳಿಂದ ಗುರುತಿಸಿಕೊಂಡವರು. ದೀನ ದಲಿತರ ಬಗೆಗಿನ ಅವರ ಹೃದಯ ಮಿಡಿತದ ಹಲವು ಕತೆಗಳನ್ನು ಕೇಳರಿದಿದ್ದೇನೆ. ಅವರ ಅಭಿಮಾನಿ ಗುಂಪುಗಳೂ ಕೂಡ ಹೇಗೆ ಈ ದಿಷೆಯಿಂದಲೇ ಬಂದಂತವು ಅನ್ನುವುದು ನಿಜ. ತನ್ನ ಕೊನೆ ಉಸಿರು ಇರುವವರೆಗೂ ರಾಜಕೀಯದಲ್ಲಿ ಸಕ್ರಿಯ ನಾಗಿರಬೇಕೆಂಬ ಒಂದು ದಿಟ್ಟ ನಿಲುವು ಕೂಡ ಅವರದಾಗಿತ್ತು ಎನ್ನುವುದಕ್ಕೆ ಅವರು ಜೆಡಿಎಸ್ ಸೇರಿದಾಗಿನ ಅವರ ಮಾತುಗಳು.
    ಅಂಥಹ ಒಬ್ಬ ಸಮಾಜಮುಖಿ, ಸಮಾಜವಾದಿ ನಾಯಕನ ಹೃದಯ ವೈಶಾಲ್ಯದ ಅಲೆಯಲ್ಲಿ ನೀವು ತೇಲಿದ್ದೀರ ಎಂಬ ಕಟುಸತ್ಯ ಅರಿತಾಗ ನನಗೆ ನಾನೇ ದಿಗ್ಭ್ರಮೆಗೊಂಡೆ. ನಿನ್ನೆ ನಿಮ್ಮ ಜೊತೆ ಮಾತಿಗೆ ನಿಂತಾಗಲೂ ಈ ಸತ್ಯ ನನಗೆ ತಿಳಿದಿರಲಿಲ್ಲ. ಏನೇ ಇರಲಿ ಮರೆಯಲಾಗದ ನಂಟು ಇದು. ಬಂಗಾರಪ್ಪ ಒಬ್ಬ ರಾಜಕಾರಣಿಯಾಗಿ ನಿಮ್ಮ ಮನದಾಳದಲಿ ಉಳಿದಿಲ್ಲ ಎನ್ನುವುದು ದಿಟ. ಅವರೊಂದು ಬದುಕು ರೂಪಿಸಿ ಕೊಟ್ಟ ಉತ್ಸವ ಮೂರ್ತಿಯಾಗಿ ಇಂದಿಗೂ ಎಂದೆಂದಿಗೂ ನಿಲ್ಲುತ್ತಾರೆ. ಹೃದಯ ತುಂಬಿ ಬಂತು ನಿಮ್ಮ ನಿಜ ಜೀವನದ ಒಂದು ಕರುಣಾಜನಕ ಕತೆ ಕೇಳಿ. ಅಂದು ಅವರು ನಿಮಗೆ ತುಂಬಿದ ಛಲದ ಉತ್ಸಾಹ ಇಂದು ನನಗೊಬ್ಬ ಅತ್ಯುತ್ತಮ ಗೆಳೆಯನನ್ನು ಪಡೆಯುವಲ್ಲಿ ದಾರಿ ಮಾಡಿಕೊಟ್ಟಿದಂತೂ ನಗ್ನ ಸತ್ಯ.

    ಉತ್ತರ
  5. Somashekhar Banavasi's avatar
    ಡಿಸೆ 27 2011

    ನನ್ನ ಸಕಾಲಿಕ ಲೇಖನವನ್ನು ನಿಲುಮೆಯಲ್ಲಿ ಪ್ರಕಟಿಸಿದ್ದಕ್ಕಾಗಿ ಮನದಾಳದ ಅಭಿವಂದನೆ ಸಲ್ಲಿಸುತ್ತೇನೆ.ಇದಕ್ಕೆ ಕಾರಣರು ರವಿ ಮೂರ್ನಾಡು ಸರ್ ಅವರು ಇರಬಹುದು ಅಥವಾ ಇನ್ನಾರೆ ಮಹನೀಯರಿರಬಹುದು.ನನ್ನ ಬರವಣೆಗೆಯ ಛಾಪನ್ನು ಗೊತ್ತು ಮಾಡಿ ನಿಲುಮೆಯಲ್ಲಿ ಪ್ರಕಟಿಸಿದ್ದು ನನ್ನ ಭಾಗ್ಯವೆಂದು ಭಾವಿಸುತ್ತೇನೆ.ಬಂಗಾರಪ್ಪಾಜೀವರಿಗೆ ನಾ ಗೊತ್ತಿಲ್ಲದೇ ಇರಬಹುದು. ಸಾಗರದಷ್ಟು ಆಳವಾದ ವ್ಯಾಪಕ ಅಭಿಮಾನಿಗಳನ್ನು ಹೊಂದಿದವರು ಅವರು.ಅಂಥವರಲ್ಲಿ ನಾನೂ ಒಬ್ಬ.ಅವರು ಇನ್ನಿಲ್ಲದ ಸಂದರ್ಭದಲ್ಲಿ ಅವರಿಗೆ ನನ್ನ ನುಡಿ ನಮನ ಸಲ್ಲಿಸಲೇಬೇಕಾಗಿರುವುದು ನನ್ನ ಆದ್ಯ ಕರ್ತವ್ಯವೆಂದು ಭಾವಿಸಿದೆ ಮತ್ತು ಈ ಮೂಲಕ ನನ್ನ ಇತಿ ವೃತ್ತಾಂತವನ್ನೂ ಹೇಳಿಕೊಳ್ಳಬೇಕಾದ ಪ್ರಮೇಯ ಬಂದೊದಗಿತು.ರವಿ ಮೂರ್ನಾಡು,ಮೋಹನ್ ಬಗಲಿ,ಪ್ರಸಾದ್ ಮತ್ತು ಪುಷ್ಪರಾಜ್ ಈ ಎಲ್ಲ ಮಹನೀಯರೂ ನನ್ನ ನುಡಿ ಪುಷ್ಪಗಳಿಗೆ ಮನ ಭಾರವಾಗಿಸಿಕೊಂಡಿದ್ದಾರೆ ಆ ಮೂಲಕ ಬಂಗಾರಪ್ಪಾಜೀಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.ಜೊತೆಗೆ ನನ್ನ ಮನದಾಳದ ಆಶಯವನ್ನೂ ಸಮರ್ಥವಾಗಿ ಬಿಂಬಿಸಿದ್ದಾರೆ.ನಿಮ್ಮೆಲ್ಲರಿಗೆ ಮತ್ತೊಮ್ಮೆ ಧನ್ಯವಾದಗಳು.

    ಉತ್ತರ
  6. kolebasava's avatar
    kolebasava
    ಡಿಸೆ 27 2011

    ಕಣ್ಣಿಗೆ ಏನೋ ಸಿಂಪಡಿಸಿಕೊಂಡವರಂತೆ ಬಲವಂತದಿಂದ ಬಿಕ್ಕಿ ಬಿಕ್ಕಿ ಜುಜುಬಿ ಕಣ್ಣಿರು ಸುರಿಸಿ ಲಾಭದ ಜಾಡು ಹುಡುಕೋ ಜನರ ಮದ್ಯೆ ನಿಮ್ಮ ನೆನಕೆ ಅರ್ಥಪೂರ್ಣ ಸೋಮಶೇಕರ್

    ಉತ್ತರ
  7. Abdul Satthar Kodagu's avatar
    Abdul Satthar Kodagu
    ಡಿಸೆ 27 2011

    ಮನಮುಟ್ಟಿತು ಲೇಖನ. ನಿಮ್ಮ ನುಡಿನಮನ ಅರ್ಥಪೂರ್ಣವಾಗಿದೆ. ನಿಮ್ಮ ಯಶಸ್ಸಿಗೆ ನನ್ನದೊಂದು ಶುಭಾಶಯ.

    ಉತ್ತರ
  8. charles bricklayer's avatar
    charles bricklayer
    ಡಿಸೆ 27 2011

    ಕರ್ನಾಟ(ಕ)ದ ಜನತೆ ಇಷ್ಟೇ ಉಪಕಾರ ಸ್ಮರಣೆಯನ್ನು ಇಟ್ಟುಕೊಂಡಿದ್ದರೆ ಬಂಗಾರಪ್ಪನವರಿಗಾಗಲಿ, ದೇವರಾಜ ಅರಸು ಅವರಿಗಾಗಲಿ ಅಥವಾ ಕರ್ನಾಟ(ಕ)ಕ್ಕೇ ಆಗಲಿ ಈ ಪರಿಸ್ಥಿಥಿ ಬರುತ್ತಿರಲಿಲ್ಲ.

    ಉತ್ತರ
    • sorabadava's avatar
      sorabadava
      ಡಿಸೆ 29 2011

      ಆದರೆ ಸೊರಬದ ಜನಕ್ಕೆ ತುಂಬಾ ‘ಉಪಕಾರ’ ‘ಸ್ಮರಣೆ’ ಇದೆ; ಅದಕ್ಕೇ ಸೊರಬ ಹೀಗಿದೆ!

      ಉತ್ತರ
  9. bhadravathi's avatar
    bhadravathi
    ಡಿಸೆ 27 2011

    ಯಾವುದೇ ವಿಶೇಷ ಕಾರಣ ವಿಲ್ಲದೆಯೇ ನಾನು ಬಂಗಾರಪ್ಪನವರ ಅಭಿಮಾನಿಯಾಗಿದ್ದೆ. ಒಮ್ಮೆ ಭದ್ರವತಿಗೆ ಚುನಾವಣಾ ಪ್ರಚಾರಕ್ಕೆ ಬಂದ ಅವರು ಬರುವಾಗ ಮೂರ್ನಾಲ್ಕು ಘಂಟೆ ತಡವಾಗಿ ಬಂದರೂ ಅವರ ಭಾಷಣಕ್ಕಾಗಿ ಕಾದು ಕೂತು ಅಪ್ಪನಿಂದ ಹೋಂ ವರ್ಕ್ ಬಿಟ್ಟು ಬಂಗಾರಪ್ಪನ ಹಿಂದೆ ಹೋಗ್ತೀಯ ಎಂದು ಒದೆಸಿಕೊಂಡಿದ್ದೆ. ನಿಮ್ಮ ಕಷ್ಟ ತುಂಬಿದ ಬಾಲ್ಯದ ದಿನಗಳನ್ನ ಓದಿ ಕಣ್ಣಲ್ಲಿ ನೀರು ತುಂಬಿ ಬಂತು. times of india ದಲ್ಲಿ ಬಂಗಾರಪ್ಪನವರ ಬಗ್ಗೆ ಒಂದು ವರದಿ ಬಂದಿದೆ. ಆದರೆ ಒಬ್ಬನೇ ಒಬ್ಬ ಓದುಗನೂ ಅವರ ಬಗ್ಗೆ ಒಳ್ಳೆಯ ರೀತಿಯಲ್ಲಿ ಬರೆದಿಲ್ಲ, ಕಾರಣ ಏನಿರಬಹುದೋ ದೇವರೇ ಬಲ್ಲ.

    ಉತ್ತರ
  10. ಬಹಳ ಚೆನ್ನಾಗಿ ಮೂಡಿಬಂದಿದೆ ನಿಮ್ಮ ಅನುಭವ , ಓದಿ ಮನಸ್ಸು ಭಾರವಾಯಿತು.ನಿಮ್ಮ ಯಶಸ್ಸಿನ ಹಿಂದೆ ಅವರ ಸಲಹೆ ಸಹಾಯದ ಇರುವುದನ್ನು ಸ್ಮರಿಸಿದ ನಿಮ್ಮ ಕಾರ್ಯ ಶ್ಲಾಘನೀಯ.”
    “ಎಂಥ ಕಷ್ಟ ಬಂದರೂ ವಿದ್ಯೆಯಿಂದ ಹಿಂದೆ ಸರಿಯಬಾರದೆಂದು ನಿರ್ಧರಿಸಿದೆ.ಬೆಟ್ಟದಂಥ ಕಷ್ಟಗಳನ್ನು ಎದುರಿಸಿದೆ.ಓದಿ ನೌಕರಿ ಪಡೆಯುವಂತಾಯಿತು.ಕರ್ನಾಟಕದ ಮುಖ್ಯಮಂತ್ರಿಯಿಂದ ಪ್ರೇರಣೆ ಹೊಂದಿ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಲ್ಲಿ ಸೇವೆ ಪ್ರಾರಂಭಿಸಿರುವೆ.ನನ್ನ ಅಮ್ಮನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾ ಸಂಸಾರಿಯಾಗಿದ್ದುಕೊಂಡು ನನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದೇನೆ”
    ಮೇಲಿನ ನಿಮ್ಮ ಮಾತುಗಳು ಎಲ್ಲರಿಗೂ ಅನ್ವಯಿಸುತ್ತದೆ . ಅದನ್ನು ಅರಿತರೆ ಸಮಾಜ ಆರೋಗ್ಯಕರವಾಗಿರುತ್ತದೆ. ನಿಮ್ಮ ನಿರೂಪಣೆಗೆ ಧನ್ಯವಾದಗಳು.
    ಮೇಲಿನ
    .

    ಉತ್ತರ
  11. ಬಹಳ ಚೆನ್ನಾಗಿ ಮೂಡಿಬಂದಿದೆ ನಿಮ್ಮ ಅನುಭವ , ಓದಿ ಮನಸ್ಸು ಭಾರವಾಯಿತು.ನಿಮ್ಮ ಯಶಸ್ಸಿನ ಹಿಂದೆ ಅವರ ಸಲಹೆ ಸಹಾಯದ ಇರುವುದನ್ನು ಸ್ಮರಿಸಿದ ನಿಮ್ಮ ಕಾರ್ಯ ಶ್ಲಾಘನೀಯ.”
    “ಎಂಥ ಕಷ್ಟ ಬಂದರೂ ವಿದ್ಯೆಯಿಂದ ಹಿಂದೆ ಸರಿಯಬಾರದೆಂದು ನಿರ್ಧರಿಸಿದೆ.ಬೆಟ್ಟದಂಥ ಕಷ್ಟಗಳನ್ನು ಎದುರಿಸಿದೆ.ಓದಿ ನೌಕರಿ ಪಡೆಯುವಂತಾಯಿತು.ಕರ್ನಾಟಕದ ಮುಖ್ಯಮಂತ್ರಿಯಿಂದ ಪ್ರೇರಣೆ ಹೊಂದಿ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಲ್ಲಿ ಸೇವೆ ಪ್ರಾರಂಭಿಸಿರುವೆ.ನನ್ನ ಅಮ್ಮನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾ ಸಂಸಾರಿಯಾಗಿದ್ದುಕೊಂಡು ನನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದೇನೆ”
    ಮೇಲಿನ ನಿಮ್ಮ ಮಾತುಗಳು ಎಲ್ಲರಿಗೂ ಅನ್ವಯಿಸುತ್ತದೆ . ಅದನ್ನು ಅರಿತರೆ ಸಮಾಜ ಆರೋಗ್ಯಕರವಾಗಿರುತ್ತದೆ. ನಿಮ್ಮ ನಿರೂಪಣೆಗೆ ಧನ್ಯವಾದಗಳು.

    ಉತ್ತರ
  12. ಮಣಿಕಾಂತ್'s avatar
    ಜನ 7 2012

    bahala olleya baraha.abhinandanegalu.
    manikanth.

    ಉತ್ತರ
  13. Somashekhar Banavasi's avatar
    ಜನ 15 2012

    ನನ್ನ ಮನದಾಳದ ಭಾವನೆಗಳಿಗೆ ಸ್ಪಂದಿಸಿ ಪ್ರತಿಕ್ರಿಯಿಸಿದ ಸಹೃದಯಿ ಮಿತ್ರರುಗಳಿಗೆ ಆಭಾರಿಯಾಗಿರುವೆ.ಧನ್ಯವಾದಗಳು.

    ಉತ್ತರ
  14. Sattar@Kepu,Vitla Mangalore's avatar
    ಫೆಬ್ರ 2 2012

    ನಿಮ್ಮ ಯಶಸ್ಸಿಗೆ ನನ್ನದೊಂದು ಶುಭಾಶಯ………….

    ಉತ್ತರ
  15. sunil ks shigga's avatar
    ಫೆಬ್ರ 16 2012

    ಬಹಳ ಚೆನ್ನಾಗಿ ಮೂಡಿಬಂದಿದೆ ನಿಮ್ಮ ಅನುಭವ , ಓದಿ ಮನಸ್ಸು ಭಾರವಾಯಿತು.ನಿಮ್ಮ ಯಶಸ್ಸಿನ ಹಿಂದೆ ಅವರ ಸಲಹೆ ಸಹಾಯದ ಇರುವುದನ್ನು ಸ್ಮರಿಸಿದ ನಿಮ್ಮ ಕಾರ್ಯ ಶ್ಲಾಘನೀಯ.”ಹೃದಯ ತುಂಬಿ ಬಂತು ನಿಮ್ಮ ನಿಜ ಜೀವನದ ಒಂದು ಕರುಣಾಜನಕ ಕತೆ ಕೇಳಿ.ಬಂಗಾರಪ್ಪ ಒಬ್ಬ ಸ್ವಾಭಿಮಾನಿ ರಾಜಕಾರಣಿ.ಬಂಗಾರಪ್ಪ ಒಬ್ಬ ರಾಜಕಾರಣಿಯಾಗಿ ನಿಮನದಾಳದಲಿ ಉಳಿದಿಲ್ಲ ಎನ್ನುವುದು ದಿಟ. ಅವರೊಂದು ಬದುಕು ರೂಪಿಸಿ ಕೊಟ್ಟ ಉತ್ಸವ ಮೂರ್ತಿಯಾಗಿ ಇಂದಿಗೂ ಎಂದೆಂದಿಗೂ ನಿಲ್ಲುತ್ತಾರೆ

    ಉತ್ತರ
  16. sadananda hegde's avatar
    ಸೆಪ್ಟೆಂ 28 2012

    ಬಹುಶಃ ಬಂಗಾರಪ್ಪನವರ ಜನಪ್ರಿತೆ ಇದ್ದದ್ದೇ ಅವರ ಇಂಥ ಗುಣಕ್ಕಾಗಿ. ಹಾಗೆ ಘಟನೆಯ ನಿರೂಪಣೆ ಕೂಡ ಚೆನ್ನಾಗಿದೆ.
    -ಸದಾನಂದ ಹೆಗಡೆ ಹರಗಿ

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments