– ರೂಪಾ ಎಲ್ ರಾವ್
ತಿಳಿಯದೆ ನಮಗೆ ತಿಳಿಯದೇ ಬದುಕುವ ದಾರಿ ತಿಳಿಯದೆ?
ಹೀಗಂತ ಯುವಜನ ಎಲ್ಲರನ್ನ ಹೆಚ್ಚಾಗಿ ಪೋಷಕರನ್ನ ಧಿಕ್ಕರಿಸಿ ಹೋಗುತ್ತಿದ್ದರೆ, ಪೋಷಕರು ಅಸಹಾಯಕರಾಗಿ ತಾವು ಅತಿಯಾಗಿ ಮುದ್ದು ಮಾಡಿ ಬೆಳೆಸಿದ ಫಲದ ಅಧೋಗತಿಯನ್ನ ನೋಡುತ್ತಿದ್ದಾರೆ…… ಮಾತಿಗೆ ಮುಂಚೆ ನಿಂಗೆ ಏನೂ ಗೊತ್ತಿಲ್ಲ, ಅನ್ನುವ ಮಾತು ಕೇವಲ ಒಂದು ವರೆ ದಶಕದ ಹಿಂದೆ ಸಕಲಕಲಾವಲ್ಲಭರಂತಿದ್ದ ಈ ಮಧ್ಯವಯಸ್ಕ ಜೀವಿಗಳನ್ನ ಈ ಇಂಟರ್ನೆಟ್ , ಮೊಬೈಲ್ ಬ್ಲೂ ಟೂತ್ , ಅನ್ನುವ ನಿರ್ಜೀವ ಪದಗಳು ನಿಸ್ಸಾಹಯಕರನ್ನಾಗಿ ಮಾಡುತ್ತಿದೆ.
ನನ್ನ ಮಗ ಈಗಲೇ ಮೊಬೈಲ್ ಕೇಳ್ತಿದಾನೆ, ನನ್ ಮಗಳಿಗೆ ಕಂಪ್ಯೂಟರ್ ಗೇಮ್ ಅಂದ್ರೆ ತುಂಬಾ ಇಷ್ಟ , ನನ್ ಮಗ ಇಂಟರ್ನೆಟ್ ನಲ್ಲಿ ಪ್ರಾಜೆಕ್ಟ್ ಮಾಡ್ತಿದಾನೆ. ಹೀಗೆಲ್ಲಾ ಕೊಚ್ಚಿಕೊಳ್ಳುತ್ತಾ ಮಹತ್ತರವಾದುದೇನೋ ಸಾಧಿಸುತ್ತಿದ್ದಾರೆ ಎಂದುಕೊಳ್ಳುತಿದ್ದ ಮಕ್ಕಳು ಇಂದು ಅಪ್ಪ ಅಮ್ಮನ್ನ ನಿನಗೆ ಏನು ಗೊತ್ತಿದೆ, ಸುಮ್ಮನೆ ಬಾಯಿ ಮುಚ್ಚಿಕೊಂಡಿರು ಅನ್ನುವ ಮಟ್ಟಕ್ಕೆ ಬೆಳೆದಿದ್ದಾರೆ
ಹದಿ ಹರೆಯದ ಮಕ್ಕಳನ್ನು ಸ್ನೇಹಿತರನ್ನಾಗಿ ನೋಡಿಕೊಳ್ಳಬೇಕು ನಿಜ ಆದರೆ ಹಾಗಂತ ಅವರನ್ನ ಇಷ್ಟ ಬಂದ ಹಾಗೆ ನಡೆಯಲು ಬಿಟ್ಟರೆ ಏನೇನಾಗಬಹುದು ಎನ್ನುವುದಕ್ಕೆ ಎಷ್ಟೊ ಉದಾಹರಣೆಗಳು ಸುತ್ತಾ ಮುತ್ತಾ ಇವೆ ಅಂತಾಹುದರಲ್ಲಿ ವೀರೂ ಸಹ ಒಬ್ಬ (ಹೆಸರು ಬದಲಾಯಿಸಲಾಗಿದೆ) ಹತ್ತು ವರ್ಷದ ಹಿಂದೆ ನನ್ನ ಬಳಿ ಟ್ಯೂಷನ್ ಗೆ ಬರುತ್ತಿದ್ದ . ಅಪ್ಪ ಅಮ್ಮ ಸೋಪ್ ಪೌಡರ್ ಅದೂ ಇದೂ ಮಾಡಿ ಮಾರಿ ಮಗನನ್ನು ಓದಿಸುತ್ತಿದ್ದರು. ಎಷ್ಟೆ ಬಡತನವಿದ್ದರೂ ಮಗನಿಗೆ ಯಾವ ಕೊರತೆಯನ್ನೂ ಮಾಡಿರಲಿಲ್ಲ. ನಾನೂ ಕಾಲದ ಚಕ್ರದ ಜೊತೆ ಪಯಣಿಸುತ್ತಾ ಅವನನ್ನು ಮರೆತೇ ಬಿಟ್ಟಿದ್ದೆ . ಹೋದ ತಿಂಗಳು , ಅಮ್ಮ ಮಗ ಇಬ್ಬರೂ ಬಂದಿದ್ದರು .ಅಂದಿನ ಆ ಪುಟ್ಟ ವೀರು ಇಂದು ನನ್ನನ್ನು ಮೀರಿ ಬೆಳೆದಿದ್ದಾನೆ, ದೊಡ್ಡ ಹುಡುಗ…. ಒಮ್ಮೆ ಸಂತೋಷವಾಯ್ತು ಆದರೆ ಅವನ ಅಮ್ಮ ಅವನ ಬಗ್ಗೆ ಹೇಳಿದ್ದು ತುಂಬಾ ಬೇಸರ, ಜೊತೆಗೆ ಯಾವುದೋ ಜವಾಬ್ದಾರಿಯನ್ನು ನೆನಪಿಸಿತು(ನಾನೂ ಒಬ್ಬ ತಾಯಿ)
ವೀರು ಸ್ವಲ್ಪ ಕಾಲ ಚೆನ್ನಾಗಿ ಓದುತ್ತಿದ್ದ. ಅಮ್ಮ ಅಪ್ಪ ಕೇಳಿದ್ದನ್ನು ಕೊಡಿಸುತ್ತಿದ್ದರು. ಬೆಂಗಳೂರಿನಲ್ಲಿದ್ದರೆ ಹಾಳಾಗುತ್ತಾನೆ ಎಂಬ ಕಾರಣದಿಂದ ಅವನನ್ನು ದೂರದ ದಾವಣಗೆರೆಯಲ್ಲಿ ಅಜ್ಜಿಯ ಮನೆಯಲ್ಲಿ ಓದಲು ಬಿಟ್ಟಿದ್ದರು. ಅಲ್ಲಿ ವೀರು ಕೈತಪ್ಪಿ ಹೋಗಿದ್ದ. ಹತ್ತನೇ ತರಗತಿಯಲ್ಲಿ ಸುಮಾರಾಗಿ ಮಾರ್ಕ್ಸ್ ತೆಗೆದುಕೊಂಡಿದ್ದ ಹುಡುಗ . ಪಿಯುಸಿಗೆ ಬರುವ ವೇಳೆಗೆ ದುಶ್ಚಟಗಳಿಗೆ ದಾಸನಾಗಿ ಹೋಗಿದ್ದ. ಒಂದಿಡೀ ವರ್ಷ ಕಾಲೇಜಿಗೆ ಹೋಗದೆ ಕಾಲ ತಳ್ಳಿದ, ವಿಷಯ ಗೊತ್ತಾಗಿ ಬೈಯ್ಯಲೆಂದು ಬಂದ ಅಪ್ಪ ಅಮ್ಮನಿಗೆ ಸೆಡ್ದು ಹೊಡೆದ. ಎಲ್ಲೋ ಮೂರು ಕಾಸಿಗೆ ಸಿಗುವ ಪಿಯುಸಿ ಮಾರ್ಕ್ಸ್ ಕಾರ್ಡ್ ಒಂದನ್ನು ಮುವತ್ತು ಸಾವಿರವೆಂದು ಹೇಳಿ ತಾಯಿಯ ಬಳಿ ದುಡ್ದು ಹೊಡೆದ . ಹೀಗೆ ಒಂದಲ್ಲ ಹತ್ತು ತೊಂದರೆಗಳನ್ನು ಸೃಷ್ಟಿ ಮಾಡಿದ್ದ ಅವನನ್ನು ನನ್ನ ಬಳಿಗೆ ಕರೆತಂದಿದ್ದರು. ನಾನೂ ಅರ್ಧ ಘಂಟೆ ಬುದ್ದಿ ಹೇಳಿ ಕೌನ್ಸೆಲಿಂಗ್ ಮಾಡಿದೆ. ಆಗ ಗಮನಿಸಿದ್ದು ಅವನ ಬಳಿಇದ್ದ ದುಬಾರಿ ಮೊಬೈಲ್ ಮತ್ತು ಟು ವೀಲರ್. ಜೊತೆಗೆ ಅವನ ತಾಯಿಗೊ ಬುದ್ದಿ ಹೇಳಿದೆ ಈ ವಯಸಿಗೆ ದುಡ್ಡು, ಮೊಬೈಲ್, ಬೈಕ್ ಎಲ್ಲಾ ಕೊಟ್ಟು ಹಾಳು ಮಾಡೀದೀರ ” ಆಕೆ ಮುಸು ಮುಸು ಅತ್ತರು. . ಅವನೂ ಒಳ್ಳೆಯ ಹುಡುಗನಾಗಿರುತ್ತೇನೆ ಅಂತ ವಚನ (?) ಕೊಟ್ಟು ಕಣ್ಣಲ್ಲಿ ಸ್ವಲ್ಪ ನೀರು ತರಿಸಿಕೊಂಡ.
ಅದೆಲ್ಲಾ ಹಳೆ ಕತೆ
ಈಗ ಅವರಮ್ಮ ಫೋನ್ ಮಾಡಿದ್ದರು
ಅಮ್ಮನಿಗೆ ಹೊಡೆದು ಹುಡುಗ ದಾವಣಗೆರೆಯಲ್ಲಿ ಕೂತಿದ್ದಾನಂತೆ. ಆಕೆಯ ಕೈ ಊದಿದೆ .ಈ ಆಘಾತಕ್ಕೆ ಅಪ್ಪನಿಗೆ ಹಾರ್ಟ್ ಅಟಾಕ್ ಆಗಿದೆ.
” ರೂಪ ಹೇಗಾದರೊ ಮಾಡಿ ಫೋನ್ ಮಾಡಿ ಕರೆಸು ಅಂತ ಅತ್ತುಕೊಂಡರು. ಊಟ ತಿಂಡಿ ಇಲ್ಲದೆ ಹೇಗಿದಾನೋ ಅಂತ ಒದ್ದ್ದಾಡಿಕೊಂಡರು..”
ಆಗಲೇ ಮೇಲಿನಂತೆ ಅನ್ನಿಸಿದ್ದು.
ಹದಿಹರಿಯದ ಮಕ್ಕಳು ಜೇಡಿ ಮಣ್ಣಿನಂತೆ, ಆಗ ನಾವು ಹೇಗೆ ಆಕಾರಕೊಡುತ್ತೇವೋ ಆ ರೀತಿ ಬೆಳೆಯುತ್ತಾರೆ. ಆದರೆ ಆಕಾರ ಕೊಡುವ ವಿಧಾನವೇ ತಿಳಿಯದಿದ್ದಲ್ಲಿ . ಈಗಿನ ಮಕ್ಕಳು ಹತ್ತು ಹನ್ನೆರೆಡು ವಯಸಿಗೆಲ್ಲಾ ಎಲ್ಲಾ ತಿಳಿದುಕೊಂಡಿರುತ್ತಾರೆ. ಇವರುಗಳನ್ನು ಹೇಗೆ ಬೆಳೆಸುವುದು ಇದೆಲ್ಲಾ ಸಧ್ಯಕ್ಕಿರುವ ಯಕ್ಷಪ್ರಶ್ನೆ

*********
ಖಂಡಿತ ಹೌದು, ಎಲ್ಲ ಮಕ್ಕಳಿಗೂ ತಮ್ಮದೇ ಆದ ಸ್ವಾತಂತ್ರ್ಯ ಇರಬೇಕು, ಆದರೆ ಅವರ ಜೀವನದ ಸೋಲಿಗೆ ಮುನ್ನುಡಿಯಾಗಬಾರದು…