ವಿಷಯದ ವಿವರಗಳಿಗೆ ದಾಟಿರಿ

Archive for

1
ನವೆಂ

ಕನ್ನಡಕ್ಕೆ ಕನ್ನಡಿ ಹಿಡಿದವನ ನೆನೆಯುತ್ತ

– ನವೀನ್ ನಾಯಕ್

Kittelಕನ್ನಡದ ಬೆಳವಣಿಗೆಗೆ ಎಷ್ಟೋ ಮಹನೀಯರು ತಮ್ಮ ಜೀವನದ ಬಹಳ ಸಮಯವನ್ನು ಈ ಮಹತ್ಕಾರ್ಯಕ್ಕೆ ಉಪಯೋಗಿಸಿದ್ದಾರೆ. ಅವರೆಲ್ಲರ ಪರಿಶ್ರಮದಿಂದ ನಮ್ಮ ಕನ್ನಡ ಇಂದಿಗೆ ಹೆಮ್ಮೆಯ ಸ್ಥಾನ ಪಡೆದಿದೆ.

ದ.ರಾ ಬೇಂದ್ರೆಯವರಿಂದಲೇ, “ಕನ್ನಡಕ್ಕೆ ಕನ್ನಡಿ ಹಿಡಿದು ದುಡಿದವ ನೀನು” ಅನ್ನಿಸಿಕೊಂಡ ಆ ವ್ಯಕ್ತಿ ಯಾರು? ಅವರ ಸಾಧನೆ ಏನು? ಎಂಬ ಕುತೂಹಲವೇ. ಆ ವ್ಯಕ್ತಿ ಜರ್ಮನಿಯಲ್ಲಿ ಜನಿಸಿ ಧಾರವಾಡಕ್ಕೆ ಬಂದು ಕನ್ನಡದ ಇತಿಹಾಸದಲ್ಲಿ ಹಲವಾರು ಸಾಹಸ ಮೆರೆದವರು. ಅವರೇ ರೆವರೆಂಡ್ ಎಫ್ ಕಿಟೆಲ್.

ರೆವರೆಂಡ್ ಎಫ್ ಕಿಟೆಲ್‍ರವರು ಜರ್ಮನಿಯ ಹ್ಯಾನೋವರ್ ಪ್ರಾಂತ್ಯದಲ್ಲಿರುವ ಫ್ರೀಸ್ಲ್ಯಾಂಡ್ ನಲ್ಲಿ 1832 ರಲ್ಲಿ ಗಾಜ್ ಫ್ರೀಟ್ ಮತ್ತು ಟ್ಯುಡೋವ್ ಹೆಲೇನ್ ಹ್ಯೂಬರ್ಟ ದಂಪತಿಗೆ ಜನಿಸಿದರು. ಇವರು ಭಾರತಕ್ಕೆ ಬರುವಾಗಲೇ ಹೀಬ್ರೂ, ಗ್ರೀಕ್, ಲ್ಯಾಟೀನ್,ಫ್ರೆಂಚ್, ಮತ್ತು ಇಂಗ್ಲಿಷ್ ಭಾಷೆಯ ಜ್ಞಾನ ಹೊಂದಿದ್ದರು. ಭಾರತಕ್ಕೆ ಬರುವಾಗಲೇ ಕನ್ನಡವನ್ನು ಕಲಿಯಬೇಕೆಂದು ಮಹದಾಸೆಯನ್ನು ಹೊಂದಿದ್ದರು. ಕಿಟೆಲ್ ರವರು 1850ರಲ್ಲಿ ಬಾಸೆಲ್ ಮಿಶನ್ ಸಂಸ್ಥೆಗೆ ಸೇರಿದರು. ಈ ಮಿಶನ್ ಸಂಸ್ಥೆ 1852 ರಲ್ಲಿ ಕಾಪ್ ಮನ್ ಮತ್ತು ಕಿಟೆಲ್ ರವರನ್ನು ದಕ್ಷಿಣ ಭಾರತದ ದಾವಣಗೆರೆಗೆ ಮತಪ್ರಚಾರಕ್ಕೆ ಕಳುಹಿಸಿಕೊಟ್ಟರು. ಧಾರವಾಡಕ್ಕೆ ಬಂದ ಕಿಟೆಲರಿಗೆ ಸಾಹಿತ್ಯಾಭ್ಯಾಸ ಮಾಡಿ ಹೆಸರುವಾಸಿಯಾಗಿದ್ದ ರೇ.ವೀಗಲ್ ರವರ ಭೇಟಿ ಮಾಡಬೇಕೆಂದುಕೊಂಡಿದ್ದರು. ಅದು ಸಾದ್ಯಾವಾಗದೇ ಇದ್ದಾಗ, ಅದೇ ಊರಿನ ಇನ್ನೊಬ್ಬ ಅಧಿಕಾರಿ ಕೆ ಮೋರಿಕ್ ರವರ ಪರಿಚಯ ಮಾಡಿಕೊಂಡರು. ಕನ್ನಡ ಕಲಿಯಲು ಅದೆಷ್ಟು ಅವರಿಗೆ ಉತ್ಸಾಹವಿತ್ತೆಂದರೆ ಬರೀ ಕಾಲ್ನಡಿಗೆಯಲ್ಲೇ ಗುಡ್ಡಗಾಡುಗಳಲ್ಲಿ, ಕಾಡುಗಳಲ್ಲಿ ಅಲೆದು ಊರೂರು ಅಲೆದು ಆ ಪ್ರದೇಶಗಳ ಆಡು ಭಾಷೆಯನ್ನು ಕಲಿತರು.

ಮತ್ತಷ್ಟು ಓದು »