ತುಳು ಭಾಷೆಯನ್ನು ‘ಕನ್ನಡ’ ಅಳಿಸುತ್ತಿದೆಯೋ..? ಉಳಿಸಿದೆಯೋ..?
-ತುಳುನಾಡು(ಅಫೀಶಿಯಲ್) ಫೇಸ್ಬುಕ್ ಪೇಜ್
ಕೆಲವು ತುಳುವಾದಿಗಳು ಕರ್ನಾಟಕ ರಾಜ್ಯದಿಂದ ಹೊರ ಬರುವ ಅಥವಾ ಪ್ರತ್ಯೇಕ ತುಳು ರಾಜ್ಯದ ಕಲ್ಪನೆಯನ್ನು ಇಟ್ಟುಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ..! ಇದಕ್ಕೆ ಅವರು ನೀಡುವ ಅತೀ ದೊಡ್ಡ ಕಾರಣ ಕನ್ನಡ ಭಾಷೆಯಿಂದ ತುಳು ಭಾಷೆಗೆ ಕಂಟಕ ಇದೆ ಅನ್ನೋದು..!! ಅದಕ್ಕೆ ಹಲವಾರು ಕಾರಣಗಳೂ ಇವೆ. ಇದು ಸತ್ಯ ಕೂಡ..! ತುಳು ಭಾಷೆಗೆ ಸಿಗಬೇಕಾಗಿದ್ದ ಪ್ರಾಶಸ್ತ್ಯಗಳು, ಸ್ಥಾನಮಾನಗಳು ಇನ್ನೂ ದೊರಕದೆ ಇರುವುದು ದುರ್ದೈವವೇ ಸರಿ. ಹಾಗಂತ ಇದೆಲ್ಲಾ ಕನ್ನಡಿಗರ ‘ಕುತಂತ್ರ’ ಅನ್ನುವವರು ಶತಃ ಮೂರ್ಖರೇ ಸರಿ…!
ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣ ಯಾರು ಅಂತ ಹುಡುಕುತ್ತಾ ಹೊರಟರೆ, ಇದಕ್ಕೆ ಕಾರಣ ತುಳುವರೇ ಹೊರತು ಬೇರಾರೂ ಅಲ್ಲ ಅನ್ನೋದು ಸ್ಪಷ್ಟವಾಗಿ ಗೋಚರಿಸುತ್ತದೆ.
ತುಳುನಾಡನ್ನು ಕನ್ನಡೀಕರಣಗೊಳಿಸಿ ಅಂತ ಯಾರೂ ನಮ್ಮ ಮೇಲೆ ದಬ್ಬಾಳಿಕೆ ಮಾಡಿಲ್ಲ. ಎಲ್ಲಾ ತುಳುವರು ಮನಸ್ಸು ಮಾಡಿದರೆ, ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸುವುದು ಹಾಗೂ ಕರ್ನಾಟಕದಲ್ಲಿ ತುಳು ಭಾಷೆ ನಾಳೆಯೇ ಆಡಳಿತ ಭಾಷೆ ಆಗೋದರಲ್ಲಿ ಅನುಮಾನವೇ ಇಲ್ಲ.