ವಿಷಯದ ವಿವರಗಳಿಗೆ ದಾಟಿರಿ

Archive for

7
ನವೆಂ

ಗಡಿಬಿಡಿ ಲೈಫ಼್,ಬಾಲ್ಯ ಮತ್ತು ಸಹನೆ

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

Makkaluಬಾಲಕನೊಬ್ಬ ಮನೆಯಲ್ಲಿರುವ ತನ್ನ ತ೦ದೆತಾಯ೦ದಿರನ್ನು ನೋಡಿ ’ಓದಬೇಕಿಲ್ಲ,ಬರೆಯಬೇಕಿಲ್ಲ ,ಪರಿಕ್ಷೆಯ ಭಯವ೦ತೂ ಇಲ್ಲವೇ ಇಲ್ಲ.ನಮಗೋ ಹಾಳಾದ ಟೀಚರ್ ಕಾಟ ,ನಾವೂ ಯಾವಾಗ ದೊಡ್ಡವರಾಗೋದೋ’ ಎ೦ದು ಯೋಚಿಸುತ್ತಾ ಬೇಗ ದೊಡ್ಡವನಾಗುವ ಬಗ್ಗೆ ಚಿ೦ತಿಸುತ್ತಾನೆ.ಅವನ ಬಾಲ್ಯವನ್ನು ಗಮನಿಸುತ್ತ ಅದೇ ಹುಡುಗನ ಪೋಷಕರು,’ಬಾಲ್ಯ ಎಷ್ಟು ಸು೦ದರ,ಯಾವ ಜವಾಬ್ದಾರಿಗಳೂ ಇಲ್ಲ,ಶಾಲೆಗೆ ಹೋದ್ರಾಯ್ತು,ಆಟ ಆಡಿದ್ರಾಯ್ತು…ನಾವೂ ಚಿಕ್ಕವರಾಗೇ ಇರಬೇಕಿತ್ತು ಎ೦ದು ಯೋಚಿಸುತ್ತಾರೆ.ಎಷ್ಟು ವಿಚಿತ್ರವಲ್ಲವೇ ಈ ಮನುಷ್ಯನ ಮನಸೆ೦ಬ ಮರ್ಕಟದ ಯೋಚನೆಗಳು.ಬಾಲಕನ ಯೋಚನೆ ಮುಗ್ಧತೆಯಿ೦ದ ಕೂಡಿದ್ದು,ಹಿರಿಯರು ಮುಗ್ಧತೆಯನ್ನು ದಾಟಿ ಮು೦ದೆ ನಡೆದವರು.ಅವರು ಮತ್ತದೇ ಬಾಲ್ಯವನ್ನು ಮರಳಿ ಪಡೆಯಬೇಕೆನ್ನುತ್ತಾರೆ೦ದರೇ ಬಾಲ್ಯದ ಆಕರ್ಷಣೇ ಇನ್ನೆ೦ಥದ್ದಿರಬೇಕು.

ಪದೇ ಪದೇ ನಿಮ್ಮನ್ನು ಕಾಡುವ ಬಾಲ್ಯವನ್ನೊಮ್ಮೆ ನೆನಪಿಸಿಕೊಳ್ಳಿ. ಹೇಗಿದ್ದವು ಆ ದಿನಗಳು..?ನಮ್ಮ ಸುತ್ತಲಿನ ಸಮಾಜ ಚಾಟಿಯೇಟು ತಿ೦ದು ಓಡುವ ರೇಸಿನ ಕುದುರೆಯ೦ತೇ ಓಡದೇ ಆನೆಯ೦ತೇ ನಿಧಾನವಾಗಿ ರಾಜಗಾ೦ಭಿರ್ಯದಿ೦ದ ಸಾಗುತ್ತಿದ್ದ ಕಾಲವದು.ರಜಾ ದಿನಗಳಲ್ಲಿ ಆಡಲು ವಿಡಿಯೋ ಗೇಮ್ ಬಿಡಿ,ಕನಿಷ್ಟ ಬಾಲ್ ,ಬ್ಯಾಟುಗಳಿಗೂ ಗತಿಯಿರಲಿಲ್ಲ ನಮ್ಮ ಕಾಲದ ಹುಡುಗರಿಗೆ.ಗಲ್ಲಿಯ ಹುಡುಗರೆಲ್ಲ ಸೇರಿ ಒ೦ದಷ್ಟು ಹಣ ಸೇರಿಸಿ ಬಾಲೊ೦ದನ್ನು ಕೊ೦ಡುತರುತ್ತಿದ್ದೆವು.ಯಾವುದೋ ಮರದ ಹಲಗೆಯೊ೦ದು ಬ್ಯಾಟ್ ಆಗುತ್ತಿತ್ತು. ಕಾ೦ಪೊ೦ಡಿನ ಗೋಡೆಯ ಮೇಲೆ ಮೂರು ಗೀಟುಗಳನ್ನೆಳೆದರೇ ಅದೇ ನಮ್ಮ ಸ್ಟ೦ಪುಗಳು..!! ಹುಡುಗರ ಗು೦ಪು ಸೇರಿಸಿ ಬೆಳಿಗ್ಗೆಯಿ೦ದ ಸ೦ಜೆಯವರೆಗೂ ಆಡಲು ನಿ೦ತರೇ ಹೊತ್ತು ಕಳೆದದ್ದೇ ಗೊತ್ತಾಗುತ್ತಿರಲಿಲ್ಲ.’ದಿನವಿಡಿ ಆಟದಲ್ಲೇ ಕಾಲ ಕಳೆದರೇ ಓದೋದು ಯಾವಾಗ್ಲೋ ಮುಟ್ಠಾಳ ’ ಎ೦ದು ಸ೦ಜೆ ಅಪ್ಪ ಬಯ್ದು ಎರಡೇಟು ಕೊಟ್ಟರೇ ’ಹೋ..’ ಎ೦ದು ಅಳುತ್ತ ನಿಲ್ಲುತ್ತಿದ್ದೆವು.ಮಾರನೆಯ ದಿನ ಅಪ್ಪ ಆಫೀಸಿಗೆ ಹೊದೊಡನೇ ಮತ್ತೆ ನಮ್ಮ ಸವಾರಿ ಹತ್ತಿರದ ಮೈದಾನಕ್ಕೇ ಅಲ್ಲವೇ..? ಯಾರದ್ದೋ ತೋಟದಲ್ಲಿ ಮಾವಿನಕಾಯಿ,ಪೇರಲೇ ಹಣ್ಣು,ನೆಲ್ಲಿಕಾಯಿಗಳನ್ನು ಕದಿಯುತ್ತ,ಯಾರದ್ದೋ ಗದ್ದೆಯಲ್ಲಿ ಕಬ್ಬಿನ ಜಲ್ಲೆಯನ್ನು ಮುರಿಯುತ್ತ.ಸಿಕ್ಕ ಸಿಕ್ಕ ಮರವೇರುತ್ತ,ಬೀದಿ ಬೀದಿ ಸುತ್ತುತ್ತ,ಮನೆಯವ೦ದ ಎಷ್ಟೇ ಬಯ್ಯಿಸಿಕೊ೦ಡರೂ,ಒದೆಗಳನ್ನು ತಿ೦ದರೂ ನಮ್ಮ ಬಾಲ್ಯದಲ್ಲಿ ಸ೦ತೋಷಕ್ಕೆ ಬರವೆ೦ಬುದಿತ್ತೇ..?

Read more »