ವಿಷಯದ ವಿವರಗಳಿಗೆ ದಾಟಿರಿ

Archive for

11
ನವೆಂ

“ಮೂಢನಂಬಿಕೆ” ಅನ್ನುವ ಮೊದಲು “ನಂಬಿಕೆ” ಅನ್ನುವುದನ್ನು ಡಿಫೈನ್ ಮಾಡಲಾಗಿದೆಯೇ?

– ರಾಕೇಶ್ ಶೆಟ್ಟಿ

Anti Superstition Bill Karntakaಸೋ-ಕಾಲ್ಡ್ ಪ್ರಗತಿಪರರು,ಬುದ್ಧಿಜೀವಿಗಳು,ಚಿಂತಕರು ಮತ್ತು ಸರ್ಕಾರಿ ಸಾಹಿತಿಗಳು ಸೇರಿಕೊಂಡು ಹೊರತಂದಿರುವ “ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ವಿಧೇಯಕ – ೨೦೧೩” ಅನ್ನು ಓದಿದ ಮೇಲೆ ಮತ್ತದಕ್ಕೆ ಸಿಎಂ ಸಿದ್ದರಾಮಯ್ಯ ಬೆಳಗಾವಿ ಅಧಿವೇಶನದಲ್ಲಿ ಇದನ್ನು ವಿದಾಯಕವಾಗಿ ಮಂಡಿಸುತ್ತೇನೆ ಅಂತೇಳಿ ಮತ್ತೆ ಯು-ಟರ್ನ್ ತೆಗೆದುಕೊಂಡಾಗ,ನನಗೆ ನೆನಪಾಗಿದ್ದು “ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಿತ್ತಂತೆ…!” ಅನ್ನೋ ಗಾದೆ.

‘ಕಿಚನ್ ಕ್ಯಾಬಿನೇಟ್’ ಅಣತಿಯಂತೆ ಸರ್ಕಾರಗಳು ಕಾರ್ಯ ನಿರ್ವಹಿಸುತ್ತವೆ ಅನ್ನುವುದು ಕೆಲವು ಮುಖ್ಯಮಂತ್ರಿಗಳ ಕಾಲದಲ್ಲಿ ಕೇಳಿಬರುತಿದ್ದಂತ ಮಾತು.ಆದರೆ,ಸಿದ್ದರಾಮಯ್ಯನವರ ಸರ್ಕಾರ ‘ಸರ್ಕಾರಿ ಸಾಹಿತಿಗಳ ಕ್ಯಾಬಿನೇಟ್’ ನ ಅಣತಿಯೇ ನಡೆಯುತ್ತದೆಯೇ? ಹಾಗೆಯೇ ಅನ್ನಿಸುತ್ತಿದೆ.ಸಮಾಜ ವಿಜ್ನಾವನ್ನು ಅಕಾಡೆಮಿಕ್ ಆಗಿ ಕಲಿಸುತಿದ್ದ ಸಂಶೋಧನಾ ಕೇಂದ್ರದ ಮೇಲೆ ವಕ್ರ ದೃಷ್ಟಿ ಬೀರಿದ ಸರ್ಕಾರವೇ ಈಗ ಸಾಮಾಜಿಕ ಸಮಸ್ಯೆಗಳ ಬಗ್ಗೆ ಕರಡು ಸಿದ್ದ ಮಾಡಿ ಅಂತ ಕೇಳಿಕೊಂಡು ಅದನ್ನು ಜಾರಿಗೆ ತರಲು ಹೊರಟಿರುವುದು ಹಾಸ್ಯಾಸ್ಪದವಾಗಿದೆ.

ಈ ನಾಸ್ತಿಕ ಮಹಾಶಯರುಗಳ ಪ್ರಕಾರ, “ಫಲಜ್ಯೋತಿಷ್ಯ,ಕಾಲ ಜ್ನಾನ,ಸಂಖ್ಯಾ ಶಾಸ್ತ್ರ,ವಾಸ್ತು ಶಾಸ್ತ್ರ,ಮಠಾಧೀಶರ,ಸ್ವಾಮೀಜಿಗಳ ಪಾದ ಪೂಜೆ,ಸರ್ಕಾರಿ ಕಚೇರಿಗಳಲ್ಲಿ ಪೂಜೆ,ಹೋಮ-ಹವನ,ದೇವಸ್ಥಾನಗಳಲ್ಲಿ ಪ್ರಾಣಿಬಲಿ ಕೊಡುವುದು,ಜಪಮಾಲೆಗಳು,ರುದ್ರಾಕ್ಷಿ,ಆಧ್ಯಾತ್ಮ ಬಗ್ಗೆ ಮಾತನಾಡುವುದು” ಇವೆಲ್ಲ ನಿಷೇಧವಾಗಬೇಕಂತೆ…!
ಮತ್ತಷ್ಟು ಓದು »