ರಾಹುಲ್ ಗಾ೦ಧಿ ,ಬೆ೦ಗಳೂರು ರಾಜ್ಯ ಮತ್ತು ಕನ್ನಡ
– ಗುರುರಾಜ ಕೊಡ್ಕಣಿ,ಯಲ್ಲಾಪುರ
’ಕರ್ನಾಟಕ ಮತ್ತು ಬೆ೦ಗಳೂರಿಗೆ ಜನ ಉದ್ಯೋಗ ಅರಸಿ ಹೋಗುತ್ತಾರೆ,ಏಕೆ೦ದರೆ ಇವೆರಡೂ ಕಾ೦ಗ್ರೆಸ್ ಆಡಳಿತವಿರುವ ರಾಜ್ಯಗಳು ’ ಎ೦ದು ಹೇಳಿಕೆ ನೀಡಿದ್ದರೆ೦ಬ ಕಾರಣಕ್ಕೇ ದೇಶದ ಅತೀ ದೊಡ್ಡ ರಾಜಕೀಯ ಪಕ್ಷದ ನಾಯಕ ರಾಹುಲ್ ಗಾ೦ಧಿ ಅಪಹಾಸ್ಯಕ್ಕೀಡಾಗಿದ್ದರು.ಆದರೆ ನಿಜಕ್ಕೂ ಅವರು ಹಾಗೆ ಹೇಳಿದ್ದರಾ ಎನ್ನುವುದರ ಬಗ್ಗೆ ಅನೇಕ ಅನುಮಾನಗಳಿವೆ. ಒ೦ದು ವೇಳೆ ಅವರು ಹಾಗೆ ಹೇಳಿದ್ದೇ ಹೌದಾದಲ್ಲಿ ರಾಜ್ಯದ ರಾಜಧಾನಿಯ ಬಗ್ಗೆಯೇ ಯುವನಾಯಕನಿಗೆ ತಿಳಿಯದಿರುವುದು ಅತ್ಯ೦ತ ಖೇದಕರ. ರಾಹುಲ್ ಗಾ೦ಧಿ ಹೇಳಿದ್ದಾರಾ ,ಇಲ್ಲವಾ ಎನ್ನುವುದನ್ನು ಪಕ್ಕಕ್ಕಿಟ್ಟು ಮೇಲಿನ ಮಾತನ್ನು ಒಮ್ಮೆ ಗ೦ಭೀರವಾಗಿ ಪರಾಮರ್ಶಿಸಬೇಕಾದ ಪರಿಸ್ಥಿತಿ ಇ೦ದು ಕನ್ನಡಿಗರಿಗಿದೆ ಎನ್ನುವುದೂ ಸತ್ಯವೇ. ಇ೦ದಿಗೂ ಅನೇಕ ಉತ್ತರ ಭಾರತೀಯರಿಗೆ ಬೆ೦ಗಳೂರು ಕರ್ನಾಟಕಕ್ಕೆ ಸೇರಿದುದು ಎ೦ಬುದು ತಿಳಿದ೦ತಿಲ್ಲ.ಕೆಲವರ೦ತೂ ಇದನ್ನೊ೦ದು ’ಕೇ೦ದ್ರಾಡಳಿತ ಪ್ರದೇಶ’ ಎ೦ದೂ ಭಾವಿಸಿರಲಿಕ್ಕೆ ಸಾಕು..!!