ವಿಷಯದ ವಿವರಗಳಿಗೆ ದಾಟಿರಿ

Archive for

15
ನವೆಂ

ಗಾ೦ಧಿ ಹ೦ತಕ ಗೋಡ್ಸೆ ಮತ್ತು ಆರ್.ಎಸ್.ಎಸ್ ಎನ್ನುವ ಭಯೋತ್ಪಾಧಕ ಸ೦ಘಟನೆ ..!!!

– ಗುರುರಾಜ್ ಕೊಡ್ಕಣಿ

Godse-Gandhijiಆತ ಹೇಳುತ್ತಲೇ ಹೋದ .’ನೀವು ಏನೇ ಹೇಳಿ ಸರ್,ಆರ್.ಎಸ್.ಎಸ್ ಕೂಡಾ ಒ೦ದು ರೀತಿಯ ಭಯೋತ್ಪಾದನಾ ಸ೦ಘಟನೆಯೇ,ಅ೦ಥ ಮಹಾನ ವ್ಯಕ್ತಿ ಗಾ೦ಧಿಯನ್ನು ಕೊ೦ದನಲ್ಲ ಆ ಬೋಳಿ ಮಗ ಗೋಡ್ಸೆ,ಅವನು ಆರ್.ಎಸ್.ಎಸ್ ನವನೇ.ಅ೦ದಮೇಲೆ ಅದು ಭಯೋತ್ಪಾದನಾ ಸ೦ಘಟನೆಯಲ್ಲದೇ ಮತ್ತೇನು’ ಎ೦ದ.ಆತ ನನಗೆ ಪರಿಚಿತ.ಇದುವರೆಗೂ ಆತ ಇತಿಹಾಸವನ್ನು ವಿಷಯವಾಗಿಯೋ ಅಥವಾ ಅಸಕ್ತಿಗಾಗಿಯೋ ಓದಿಕೊ೦ಡವನಲ್ಲ. ಕನಿಷ್ಟ ಪಕ್ಷ ಆತ ಒ೦ದೇ ಒ೦ದು ಕಾದ೦ಬರಿಯನ್ನು ಕೂಡಾ ಓದಿದ್ದನ್ನು ನಾನು ನೋಡಿಲ್ಲ. ಆತನಿಗೆ ’ಆರ್.ಎಸ್.ಎಸ್’ನ ವಿಸ್ತೃತ ರೂಪವಾದರೂ ತಿಳಿದಿದಿಯೋ ನನಗೆ ಅನುಮಾನ.ಕಾ೦ಗ್ರೆಸ್ಸಿನಲ್ಲಿ ಪುಢಾರಿಯಾಗಿರುವ ಆತನ ದೂರದ ಸ೦ಬ೦ಧಿಯೊಬ್ಬನ ಮಾತುಗಳನ್ನು ಕೇಳಿ ಬ೦ದಿದ್ದ.ಅದನ್ನೇ ನನ್ನ ಮು೦ದೇ ಒದರುತ್ತಿದ್ದ.ಇನ್ನು ಈತನಿಗೆ ಆರ್.ಎಸ್.ಎಸ್.ನ ಧೋರಣೆಗಳು,ಗಾ೦ಧಿ ಹತ್ಯೆಯ ಹಿನ್ನಲೆ ಇವುಗಳನ್ನು ವಿವರಿಸುವುದು ನನ್ನಿ೦ದಾಗದ ಕೆಲಸವೆ೦ದೆನಿಸಿ ’ಬರ್ತಿನಿ’ ಎ೦ದಷ್ಟೇ ಹೇಳಿ ಅಲ್ಲಿ೦ದ ಹೊರಟೆ.

ಆದರೆ ಅವನ ಮಾತಿನಲ್ಲಿನ ಎರಡು ಅ೦ಶಗಳು ನನ್ನನ್ನು ಯೋಚಿಸುವ೦ತೇ ಮಾಡಿದವು. ಅವನ೦ತೇ ಅಲೋಚಿಸುವ ಅನೇಕ ವಿದ್ಯಾವ೦ತರನ್ನು,ಜಾತ್ಯಾತೀತವಾದಿಗಳನ್ನು ನಾನು ನೊಡಿದ್ದೇನೆ.ಗೋಡ್ಸೆ ಗಾ೦ಧಿಯನ್ನು ಹತ್ಯೆಗೈದ ಎನ್ನುವುದೇನೋ ಸರಿ, ಆದರೆ ಆರ್.ಎಸ್.ಎಸ್ ಭಯೋತ್ಪಾಧನಾ ಸ೦ಘಟನೆಯಾಗಿದ್ದು ಯಾವಾಗ..? ಗೊಡ್ಸೆ ಕೆಲಕಾಲ ಆರ್.ಎಸ್.ಎಸ್ ನ ಸದಸ್ಯನಾಗಿದ್ದ ಎ೦ಬುದನ್ನೂ ಒಪ್ಪಿಕೊಳ್ಳೋಣ.ಅ೦ದ ಮಾತ್ರಕ್ಕೆ ಅರ್.ಎಸ್.ಎಸ್ ಭಯೋತ್ಪಾದನಾ ಸ೦ಘಟನೆಯಾಗಿಬಿಡಬೇಕೇ..? ಇದನ್ನು ಮೂರ್ಖರ ಆಲೋಚನಾ ಧಾಟಿಯೆನ್ನದೇ ಬೇರೆ ವಿಧಿಯಿಲ್ಲ.ಗೋಡ್ಸೆಯ ಗಾ೦ಧಿ ಹತ್ಯೆಯನ್ನೇ ಮಾನದ೦ಡವಾಗಿಟ್ಟುಕೊ೦ಡು ಆರ್.ಎಸ್.ಎಸ್ ಅನ್ನು ಭಯೋತ್ಪಾದಕ ಸ೦ಘಟನೆ ಎ೦ದು ಹೆಸರಿಸಬಹುದಾದರೇ,ಇ೦ದಿರಾ ಗಾ೦ಧಿಯವರ ಹತ್ಯೆಗೈದವನು ಸಿಖ್ಖ ಎ೦ಬ ಕಾರಣಕ್ಕೆ ಸಿಖ್ಖರೆಲ್ಲರೂ ಕೊಲೆಗಾರರು ಎನ್ನವುದು ಮೂರ್ಖತನವೆನಿಸುವುದಿಲ್ಲವೇ..? ಅಥವಾ ಇ೦ದಿರಮ್ಮನ ಹತ್ಯೆಯ ನ೦ತರ ಸಾವಿರಾರು ಸಿಖ್ಖರ ನರಮೇಧಕ್ಕೆ ಕಾರಣವಾಯಿತಲ್ಲ ಕಾ೦ಗ್ರೆಸ್ ಅದನ್ನು ’ಸಿಖ್ಖ ವಿರೋಧಿ ಪಕ್ಷ’ ಎ೦ದು ಕರೆಯಬಹುದೇ..?

ಮತ್ತಷ್ಟು ಓದು »

15
ನವೆಂ

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೨

– ಮು.ಅ ಶ್ರೀರಂಗ,ಬೆಂಗಳೂರು

S L Byrappa(“ನಿಲುಮೆ”ಯಲ್ಲಿ  ೧೦-೧೦-೨೦೧೩ರಂದು ಪ್ರಕಟವಾದ ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧ ಲೇಖನದ   ಎರಡನೇ  ಭಾಗ)

ವಂಶವೃಕ್ಷ  ಮತ್ತು  ಸಂಸ್ಕಾರ
—————————-

ಭೈರಪ್ಪನವರ ಮುಖ್ಯ ಕಾದಂಬರಿಗಳಲ್ಲಿ ಒಂದಾದ “ವಂಶವೃಕ್ಷ”ದ ವಸ್ತು,ಪಾತ್ರಗಳು,ಕಾದಂಬರಿಯ ವಿನ್ಯಾಸ ಇತ್ಯಾದಿಗಳ ಬಗ್ಗೆ ನಮ್ಮ ವಿಮರ್ಶಕರು ಈಗಾಗಲೇ ಸಾಕಷ್ಟು ವಿವರವಾಗಿ ಚರ್ಚಿಸಿದ್ದಾರೆ; ವಿವೇಚನೆ ನಡೆಸಿದ್ದಾರೆ. ಹೀಗಾಗಿ ಮತ್ತೊಮ್ಮೆ ಆ ಕಾದಂಬರಿಯ ಪೂರ್ಣ ವಿಮರ್ಶೆ ನನ್ನ ಉದ್ದೇಶವಲ್ಲ.
“ವಂಶವೃಕ್ಷ”ದ ವಿಮರ್ಶೆಗಳಲ್ಲಿ ಸಹಜವಾಗಿ ಶ್ರೀನಿವಾಸ ಶ್ರೋತ್ರಿ ಮತ್ತು ಅವರ  ಸೊಸೆ  ಕಾತ್ಯಾಯನಿಯ ಜೀವನದಲ್ಲಿ ಅವರುಗಳು ಎದುರಿಸಬೇಕಾಗಿ ಬಂದಂತಹ ಸನ್ನಿವೇಶಗಳು ಮತ್ತು ಸಂಘರ್ಷಗಳು ವಿಶೇಷವಾಗಿ ಚರ್ಚೆಗೆ ಒಳಪಟ್ಟಿರುವ ಅಂಶಗಳು. ಶ್ರೋತ್ರಿಯವರು ತಮ್ಮ ಜೀವನಕ್ಕೆ ಸನಾತನ ಧರ್ಮವನ್ನು ಅಧಾರವನ್ನಾಗಿಟ್ಟುಕೊಂಡವರು. ಅದರಲ್ಲಿ ನಂಬಿಕೆಯಿಟ್ಟವರು. ಆದರೆ ಕರ್ಮಠರಲ್ಲ. ಧರ್ಮದ ಪದಶಃ,ವಾಕ್ಯಶಃ ಅರ್ಥಗಳಿಗೆಗಷ್ಟೇ ಅಂಟಿಕೊಂಡವರಲ್ಲ.ಧರ್ಮದ ಬಗ್ಗೆ ತಮಗಿರುವ ನಂಬಿಕೆ,ವಿಶ್ವಾಸಗಳನ್ನು ಇನ್ನೊಬ್ಬರ ಮೇಲೆ ಹೇರಿದವರಲ್ಲ. ಅವರ ಮಗ ಅಕಾಲ ಮರಣಕ್ಕೆ ತುತ್ತಾದಾಗ ವಿಧವೆಯಾದ ಸೊಸೆ ಕಾತ್ಯಾಯನಿ ಆ ಕಾಲದ(೧೯೨೪ರ ಆಸುಪಾಸಿನದು)ಪದ್ಧತಿಯಂತೆ ಮಡಿ ಹೆಂಗಸು” (ತಲೆಗೂದಲು ತೆಗೆಸುವುದು, ಕೆಂಪು ಸೀರೆ ಉಡುವುದು ಇತ್ಯಾದಿ)ಆಗಲಿಲ್ಲ.

ಮತ್ತಷ್ಟು ಓದು »