ವಿಷಯದ ವಿವರಗಳಿಗೆ ದಾಟಿರಿ

Archive for

27
ನವೆಂ

ಯಾವುದು ನಂಬಿಕೆ?ಯಾವುದು ಮೂಢನಂಬಿಕೆ?

-ಡಾ.ಕಿರಣ್ ಎಂ ಗಾಜನೂರು

Karnataka Anti Superstition Billಕರ್ನಾಟಕ ಸರ್ಕಾರ ಮೂಢನಂಬಿಕೆಗಳ ಕುರಿತು ವಿಧೇಯಕ ಮಂಡಿಸಲು ಮುಂದಾಗಿರುವುದು ನಿಜಕ್ಕೂ ಸ್ವಾಗತಾರ್ಹ ಕ್ರಮ. ಏಕೆಂದರೆ ಭಾರತ ಸಮಾಜದಲ್ಲಿ ಬಹಳ ಹಿಂದಿನಿಂದಲೂ ಸೋ-ಕಾಲ್ಡ್ ನಂಬಿಕೆಗಳ ಹೆಸರಿನಲ್ಲಿ ಶೋಷಣೆ ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ.ಅದರಲ್ಲಿಯೂ ಯಾವುದೇ ಜನ-ಚಳುವಳಿಯಿಲ್ಲದೆ,ನಮ್ಮ ಘನಸರ್ಕಾರ ಸ್ವತಃ ಈ ನಿರ್ಧಾರಕ್ಕೆ ಮುಂದಾಗಿರುವುದು ಪ್ರಶಂಸನೀಯ.ಪಕ್ಕದ ಮಹಾರಾಷ್ಟ್ರದಲ್ಲಿ ಈ ಮಾದರಿಯ ಕ್ರಮವನ್ನು ಅಲ್ಲಿನ ಸರ್ಕಾರ ತೆಗೆದುಕೊಳ್ಳಬೇಕಾದರೆ,ಒಂದು ದೊಡ್ಡ ಜನಚಳುವಳಿಯೆ ನಡೆಯಬೇಕಾಯಿತು ಮತ್ತು ಈ ಕುರಿತು ಹೋರಾಟ ಮಾಡುತ್ತಿದ್ದ ವ್ಯಕ್ತಿಯ ಹತ್ಯೆಯು ಆಯಿತು.ಈ ನೆಲೆಯಲ್ಲಿ ಕರ್ನಾಟಕ ಸರ್ಕಾರ ಜನಪರವಾಗಿದೆ ಎಂಬುದನ್ನು ನಾವು ಒಪ್ಪಬಹುದು.ಆದರೆ,  ಭಾರತದಂತಹ ಬಹುಸಂಸ್ಕೃತಿಯ ದೇಶದಲ್ಲಿ ಈ ಕ್ರಮ ಕೇವಲ ಪ್ರಗತಿಪರ ಮತ್ತು ಕಾನೂನಾತ್ಮಕ ಅಂಶವಾಗಿರದೆ ಸಮುದಾಯ ಸತ್ವದ ಪ್ರಶ್ನೆಯು ಆಗಿರುತ್ತದೆ ಎಂಬುದನ್ನು ನಾವು ಅರಿತುಕೊಳ್ಳಬೇಕು.ಅದೂ ಅಲ್ಲದೆ ಸದರಿ ವಿಧೇಯಕದ ಕುರಿತು ನಡೆಯುತ್ತಿರುವ ಚರ್ಚೆ ಪರ-ವಿರೋಧವೆಂಬ ಸಂಕುಚಿತ ಅರ್ಥದಲ್ಲಿ ನಡೆಯುತ್ತಿದೆ.ಒಂದು ಸಂಶೋಧನೆ ಅಥವಾ ಚರ್ಚೆಯಲ್ಲಿ ಸಂಶೋಧನೆ/ಚರ್ಚೆಗೆ ಒಳಪಡಿಸಬೇಕಾದ ವಿದ್ಯಾಮಾನದ ಕುರಿತು ಸಂಶೋಧಕನಿಗೆ ಪರ ಅಥವಾ ವಿರೋಧ ಅಭಿಪ್ರಾಯಗಳು ಇರಬೇಕು ಎಂದು ನೀರಿಕ್ಷಿಸುವುದೇ ಸಂಶೋಧನೆ/ಚರ್ಚೆಯ ಲಕ್ಷಣವಲ್ಲ. ಉದಾಹರಣೆಗೆ : ಕರ್ನಾಟಕದ ಮೂಢನಂಬಿಕೆ ವಿರೋಧಿ ವಿಧೇಯಕ ಕುರಿತು ನೀವು ಇದರ ಪರವೂ ವಿರೋಧವೂ ಎಂದು ಕೇಳಿದರೆ ನಾನು ನನಗೆ ಗೊತ್ತಿಲ್ಲ ಎಂದಷ್ಟೆ ಉತ್ತರಿಸಬಲ್ಲೆ. ಏಕೆಂದರೆ ನಿಜಕ್ಕೂ ನನಗೆ ಅದು ಸರಿಯೋ/ತಪ್ಪೋ ಗೊತ್ತಿಲ್ಲ ಅಥವಾ ಪ್ರಸ್ತುತ ಚರ್ಚೆ ಮತ್ತು ಮಾಹಿತಿಯ ಆಧಾರದಲ್ಲಿ ಒಂದು ನಿರ್ಣಯಕ್ಕೆ ಬರಲೂ ಸಾಧ್ಯವಾಗುತ್ತಿಲ್ಲ. ಆದರೆ,ಒಬ್ಬ ಸಮಾಜ ಸಂಶೋಧಕನಾಗಿ ನನ್ನ ಸಮಸ್ಯೆ ಇರುವುದು ಪರವಾಗಿ ಮತ್ತು ವಿರೋಧವಾಗಿ ಮಾತನಾಡುತ್ತಿರುವ ಎರಡೂ ಗುಂಪಿನ ವಾದ ಆ ವಿದ್ಯಮಾನವನ್ನು ಸಮರ್ಥಿಸಲು ಅಥವಾ ವಿರೋಧಿಸಲು ಶಕ್ತವಾಗಿಲ್ಲ ಮತ್ತು ಆದನ್ನು ಆಚರಿಸುತ್ತಿರುವ ಜನರಿಗೆ ಅರ್ಥವಾಗುತ್ತಿಲ್ಲ ಎಂಬುದು.

Read more »