ವಿಷಯದ ವಿವರಗಳಿಗೆ ದಾಟಿರಿ

Archive for

30
ನವೆಂ

ದಾಸರ ದಾಸ ಸಂತ ಶ್ರೀ ಭದ್ರಗಿರಿ ಅಚ್ಯುತದಾಸರು

– ರಾಘವೇಂದ್ರ ಅಡಿಗ ಎಚ್ಚೆನ್

Bhadragiri Achyuta Dasaಕನ್ನಡ ಹರಿದಾಸ ಪರಂಪರೆ, ಕೀರ್ತನಾ ಲೋಕದ ಕೊಂಡಿಯೊಂದು ಕಳಚಿದೆ. ಸಂತ, ಹಿರಿಯ ಕೀರ್ತನೆಗಾರರಾದ ‘ಕೀರ್ತನ ಕೇಸರಿ’ ಭದ್ರಗಿರಿ ಅಚ್ಯುತದಾಸರು ತಮ್ಮ 83 ನೇ ವಯಸ್ಸಿನಲ್ಲಿ ತಾವು ಕಟ್ಟಿ ಬೆಳೆಸಿದ ಹರಿಕಥಾ ಪ್ರಪಂಚವನ್ನು ತೊರೆದು ಶ್ರೀಹರಿಯತ್ತ ನಡೆದಿದ್ದಾರೆ. ಕೀರ್ತನಾ ಕಲಾಪರಿಷತ್ ಗೌರವಾಧ್ಯಕ್ಷರಾಗಿದ್ದ ಸಂತ ಭದ್ರಗಿರಿ ಅಚ್ಯುತದಾಸರು ತಮ್ಮ ವಾಕ್ ಸಾಮರ್ಥ್ಯ, ಸಂಗೀತ, ಹಾಸ್ಯ ಚಟಾಕಿಗಳ ಮೂಲಕ ಜನಮಾನಸದಲ್ಲಿ ನೆಲೆಯೂರಿದ್ದರು. ಕನ್ನಡ, ಮರಾಠಿ, ಕೊಂಕಣಿ, ತುಳು ಹೀಗೆ ನಾನಾ ಭಾಷೆಗಳಾಲ್ಲಿ ಪ್ರೌಢಿಮೆ ಸಾಧಿಸಿದ್ದ ಸಂತ ಅಚ್ಯುತದಾಸರು ತಾವು ಹರಿವಂಶ, ಭಾಗವತ, ರಾಮಾಯಣ, ಮಹಾಭಾರತದ ತಾತ್ವಿಕ ಅಂಶಗಳನ್ನು ಸಾಮಾನ್ಯರ ಮನಮುಟ್ಟುವಂತೆ ವಿವರಿಸಿ ಹೇಳುವ ಸಾಮರ್ಥ್ಯವನ್ನು ಹೊಂದಿದ್ದರು.

ಇಂದಿನ ಆಧುನಿಕ ಯುಗದಲ್ಲಿ ನಶಿಸುತ್ತಿರುವ ಸಂಕೀರ್ತನಾ ಕಲೆಯನ್ನು ಜನಪ್ರಿಯಗೊಳಿಸುವುದರಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದ ಅಚ್ಯುತದಾಸರು ತಮ್ಮ ಸಹೋದರ ದಿ. ಭದ್ರಗಿರಿ ಕೇಶವದಾಸರ ಜತೆಗೂಡಿ ಅನೇಕ ಹರಿಕಥಾ ಸಮ್ಮೇಳನಗಳನ್ನು ನಡೆಸಿದ್ದರು. ಅಣ್ಣ-ತಮ್ಮಂದಿರಿಬ್ಬರೂ ತಮ್ಮ ಸ್ವ ಪ್ರತಿಭೆಯಿಂದ ‘ಸಂತ’ ಪದವಿಗೆ ಭಾಜನರಾಗಿದ್ದರು. ಸಂತ ಭದ್ರಗಿರಿ ಕೇಶವ ದಾಸರು ವಿದೇಶಗಳಲ್ಲಿಯೂ ಆಂಗ್ಲ ಭಾಷೆಯಲ್ಲಿ ಸಂಕೀರ್ತನೆಗಳನ್ನು ನಡೆಸಿ ಪ್ರಸಿದ್ದರಾಗಿದ್ದರೆ,ಸಂತ ಭದ್ರಗಿರಿ ಅಚ್ಯುತ ದಾಸರು ಭರತ ಖಂಡವ್ಯಾಪಿ ತಮ್ಮ ಹರಿಕಥಾ ಶ್ರವಣ ಮಾಡುವ ಮೂಲಕ ನಾಡಿನ ಮೂಲೆ ಮೂಲೆಗಳಾಲ್ಲಿ ಮನೆಮಾತಾಗಿದ್ದರು.

ವ್ಯಕ್ತಿ ಪರಿಚಯ :

ಉಡುಪಿಯ ಸಮೀಪದ ಬ್ರಹ್ಮಾವರದ ಬಳಿಯಲ್ಲಿನ ಬೈಕಾಡಿ ಗ್ರಾಮದ ಪುಟ್ಟ ಹಳ್ಳಿಯಲ್ಲಿ ವೆಂಕಟರಮಣ ಪೈ ಹಾಗೂ ರುಕ್ಮಿಣಿಬಾಯಿ ದಂಪತಿಗಳಿಗೆ ನಾಲ್ಕನೆ ಮಗನಾಗಿ ಜನಿಸಿದ (1931 ಮಾರ್ಚ್ 31)ಸಂತ ಶ್ರೀ ಭದ್ರಗಿರಿ ಅಚ್ಯುತದಾಸರು ಬಾಲ್ಯದಿಂದಲೂ ಸಂಗೀತದ ಬಗ್ಗೆ ಒಲವಿದ್ದವರು. ಇದಕ್ಕೆ ಅವರು ಹುಟ್ತಿದ ಮನೆಯ ಪರಿಸರವೂ ಪೋಷಕವಾಗಿತ್ತು. ತ್ಂದೆ ವೆಂಕಟರಮಣಾ ಪೈಗಳು ಯಕ್ಷಗಾನದ ಬಗ್ಗೆ ಒಲವುಳ್ಳವರಾಗಿದ್ದರೆ ತಾಯಿ ರುಕ್ಮಿಣಿಬಾಯಿ ತಾವು ದೇವರ ಭಜನೆಗಳನ್ನು ಶುಶ್ರಾವ್ಯವಾಗಿ ಹಾಡಬಲ್ಲವರಾಗಿದ್ದರು.
ಮತ್ತಷ್ಟು ಓದು »