ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 13, 2013

4

ಮತಾಂಧ ಭಯೋತ್ಪಾದಕರೊಡನೆ ವೇದಿಕೆ ಹಂಚಿಕೊಂಡರೂ ಇವರು “ಜಾತ್ಯಾತೀತ”ರೇ!!

‍ನಿಲುಮೆ ಮೂಲಕ

– ನರೇಂದ್ರ ಕುಮಾರ್

Chidambaram with Talibaniಮುಲ್ಲಾ ಅಬ್ದುಲ್ ಸಲಾಂ ಜ಼ಯೀಫ಼್ ಎನ್ನುವ ಹೆಸರು ಭಾರತದಲ್ಲಿ ಹೆಚ್ಚಿನ ಜನರಿಗೆ ತಿಳಿದಿರಲಾರದು. 1990ರ ದಶಕದಲ್ಲಿ ಆಫ಼್ಘಾನಿಸ್ತಾನದಲ್ಲಿ ತಾಲಿಬಾನ್ ಸ್ಥಾಪನೆಯಾಯಿತು. ಆಫ಼್ಘಾನಿಸ್ತಾನ ಮತ್ತು ಪಾಕಿಸ್ತಾನಗಳಲ್ಲಿ ತಾಲಿಬಾನ್ ನಡೆಸಿರುವ ಮತಾಂಧ ಕೆಲಸಗಳು ಜಗತ್ಪ್ರಸಿದ್ಧ. ಆಫ಼್ಘಾನಿಸ್ತಾನದ ಹಜ಼ರತ್ ಪ್ರದೇಶದಲ್ಲಿರುವ ಬಾಮ್ವಾಮ್ ಕಣಿವೆಯಲ್ಲಿದ್ದ ೬ನೇ ಶತಮಾನದ ಬೃಹತ್ ಬುದ್ಧ ಭಗವಾನನ ಪ್ರತಿಮೆಗಳನ್ನು 2001ರಲ್ಲಿ ಭಗ್ನಗೊಳಿಸಿದಾಗ, ತಾಲಿಬಾನ್ ಹೆಸರು ಜಗತ್ತಿನಲ್ಲೆಲ್ಲಾ ಪ್ರಸಿದ್ಧವಾಯಿತು. ಜಗತ್ತಿನೆಲ್ಲೆಡೆಯಿಂದ ಬುದ್ಧನ ಪ್ರತಿಮೆಗಳನ್ನು ಹಾಳುಗೆಡವಿದ ಕಾರ್ಯವನ್ನು ಖಂಡಿಸಲಾಯಿತು. ಆದರೆ, ತಾಲಿಬಾನ್ ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳಲಿಲ್ಲ. ಮೇಲೆ ಹೇಳಿದ “ಮುಲ್ಲಾ ಅಬ್ದುಲ್ ಸಲಾಂ ಜ಼ಯೀಫ಼್” ಎನ್ನುವವರು ಈ ತಾಲಿಬಾನ್‌ನ ಸಂಸ್ಥಾಪಕರಲ್ಲಿ ಒಬ್ಬರು. ತಾಲಿಬಾನ್ ಸಂಸ್ಥಾಪನೆ ಮಾಡಿದ ಮುಲ್ಲ ಮೊಹಮ್ಮದ್ ಓಮರ್ ಹೆಸರು ಸ್ವಲ್ಪಮಟ್ಟಿಗೆ ಎಲ್ಲರಿಗೂ ತಿಳಿದಿರುತ್ತದೆ. ಈ ಮುಲ್ಲಾ ಅಬ್ದುಲ್ ಸಲಾಮ್ ಜ಼ಯೀಫ಼್, ಮುಲ್ಲಾ ಓಮರ್^ನ ಬಲಗೈ ಭಂಟನಾಗಿದ್ದ. 2001ರಲ್ಲಿ ಅಮೆರಿಕಾದಲ್ಲಿ ಭಯೋತ್ಪಾದಕ ಕೃತ್ಯ ನಡೆಸಿದ ನಂತರದಲ್ಲಿ, ಒಸಾಮಾ ಬಿನ್ ಲಾಡೆನ್ನಿಗೆ ಆಫ್ಘಾನಿಸ್ತಾನದಲ್ಲಿ ಆಶ್ರಯ ಒದಗಿಸಿದವರು ಇವರೇ!

ಇಂತಹ (ಕು)ಖ್ಯಾತಿ ಹೊಂದಿರುವ ಮುಲ್ಲಾ ಅಬ್ದುಲ್ ಸಲಾಂ ಜ಼ಯೀಫ಼್ ಜೊತೆಗೆ ಇರುವವರನ್ನು ಏನನ್ನಬೇಕು? ಅದರಲ್ಲೂ, ಭಾರತ ಸರಕಾರದಲ್ಲಿ ಎರಡನೇ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು, ಇವನೊಡನೆ ವೇದಿಕೆ ಹಂಚಿಕಂಡರೆ? ಮೊನ್ನೆ ಭಾನುವಾರ ಗೋವಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಿ.ಚಿದಂಬರಂ ಅವರು, ಮುಲ್ಲಾ ಅಬ್ದುಲ್ ಸಲಾಂ ಜ಼ಯೀಫ಼್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಭಾಗವನಿಸಿದರು. ಈ ಕಾರ್ಯಕ್ರಮದಲ್ಲಿ ಜ಼ಯೀಫ಼್ ಭಾಷಣವನ್ನೂ ಮಾಡಿದರು!

ಈ ಸುದ್ದಿಯ ಕೊಂಡಿ ಇಲ್ಲಿದೆ: http://www.dailypioneer.com/todays-newspaper/taliban-founder-shares-dais-with-pc-netizens-rap-govt.html

ಭಯೋತ್ಪಾದಕರ ಪಟ್ಟಿಯಲ್ಲಿ ಹೆಸರಿದ್ದ ವ್ಯಕ್ತಿಗೆ ಭಾರತದೊಳಗೆ ಬರಲು ವೀಸಾ ಹೇಗೆ ಸಿಕ್ಕಿತೆಂಬುದು ಎಲ್ಲರ ಪ್ರಶ್ನೆ? ಮತ್ತು ಇಂತಹವರಿದ್ದ ಕಾರ್ಯಕ್ರಮದಲ್ಲಿ ಭಾರತ ಸರಕಾರದ ಮಂತ್ರಿಯೊಬ್ಬರು ಭಾಗವಹಿಸಿದ್ದು ಜಗತ್ತಿಗೆ ಏನು ಸಂದೇಶ ನೀಡುತ್ತದೆ? ಭಯೋತ್ಪಾದನೆಯೊಡನೆ ಸಮರ ಮಾಡಬೇಕಾದವರೇ, ಭಯೋತ್ಪಾದಕರಿಗೆ ಮಣೆ ಹಾಕಿದರೆ…..!? ಅಥವಾ ಜ಼ಯೀಫ಼್ ಅವರು ಚಿದಂಬರಂ ಅವರಿಗೆ “ಜಾತ್ಯಾತೀತ”ತೆಯ ಕುರಿತಾಗಿ “ಸಹಿಷ್ಣುತೆ”ಯ ಕುರಿತಾಗಿ ಪ್ರವಚನ ನೀಡಿರಬಹುದೇ?

ಪಿ.ಚಿದಂಬರಂ ಅವರಾಗಲೀ, ಯುಪಿಎ ಸರಕಾರದ ಯಾವ ಮಂತ್ರಿಗಳೇ ಆಗಲಿ, ಅಪ್ಪಿತಪ್ಪಿಯೂ ಹಿಂದು ಸಂನ್ಯಾಸಿಗಳೊಡನೆ ಒಡನಾಡುವುದಿಲ್ಲ. ಏಕೆಂದರೆ, ಇದರಿಂದ ಅವರು “ಕೋಮುವಾದಿ”ಗಳಾಗಿ ಬಿಡುತ್ತಾರೆ. ಆದರೆ, ಮತಾಂಧ-ಭಯೋತ್ಪಾದಕರು ಇವರಿಗೆಲ್ಲಾ ಆಪ್ತಮಿತ್ರರು. ಅಂತಹವರೊಡನೆ ಒಡನಾಡಿದರೂ ಇವರ “ಜಾತ್ಯಾತೀತ”ತೆಗೆ ಭಂಗವಿಲ್ಲ! ಪ್ರಾಯಶಃ ಅಂತಹವರೊಡನೆ ಒಡನಾಡುವುದೇ ನಿಜವಾದ “ಜಾತ್ಯಾತೀತ”ತೆ!?

4 ಟಿಪ್ಪಣಿಗಳು Post a comment
  1. Rajesh j's avatar
    Rajesh j
    ನವೆಂ 13 2013

    Sariyaada maatu sir

    ಉತ್ತರ
  2. ವಿಜಯ್ ಪೈ's avatar
    ವಿಜಯ್ ಪೈ
    ನವೆಂ 13 2013

    ಬಹುಶ: ಈ ದೇಶದಲ್ಲಿರುವ ಝಯೀಫ್ ಸಹೋದರರಿಗೆ ನಾವೆಲ್ಲ ಒಂದೇ, ನಮ್ಮ ಬಗ್ಗೆ ತಪ್ಪು ತಿಳಿದುಕೊಳ್ಳಬೇಡಿ ಎಂದು ಸಹೋದರತ್ವದ ಸಂದೇಶ ಕೊಡುತ್ತಿರಬೇಕು..!. ಈ ಝಯೀಫ್ ನಂಥವನು ನಮ್ಮ ದೇಶಕ್ಕೆ ಏನೂ ತೊಂದರೆಯಿಲ್ಲದೆ ಬರುತ್ತಾನೆ..ನಮ್ಮ ದೇಶದ ಉನ್ನತ ಸ್ಥಾನದಲ್ಲಿರುವವರ ಜೊತೆ ವೇದಿಕೆ ಹಂಚಿಕೊಳ್ಳುತ್ತಾನೆ ಎಂದರೆ..ಈ ದೇಶದ ಭದ್ರತಾ ವ್ಯವಸ್ಥೆಯ ಮಟ್ಟವನ್ನು ಈ ಸರಕಾರ ಯಾವ ಹಂತಕ್ಕೆ ಮುಟ್ಟಿಸಿದೆ ಎಂದು ಗೊತ್ತಾಗುತ್ತದೆ.

    ಉತ್ತರ
  3. ವಿಜಯ್ ಪೈ's avatar
    ವಿಜಯ್ ಪೈ
    ನವೆಂ 13 2013

    ಬರ್ಕಾ ದತ್ತಾಗೆ ಒಬ್ಬ Sateash Jain ಎನ್ನುವಾತ ಏನನ್ನೋ ಟ್ವೀಟಿಸಿದ್ದನಂತೆ. ಆ ಮನುಷ್ಯ ಮೋದಿ ಹಿಂಬಾಲಿಸುವವರ ಲಿಸ್ಟ್ ನಲ್ಲಿ ಇದ್ದನಂತೆ.. ಅದಕ್ಕೆ ‘ಪ್ರಗತಿಪರ, ಪ್ರಜ್ಞಾವಂತ, ಸಾಕ್ಷಿಪ್ರಜ್ಞೆ’ಯುಳ್ಳ ಜರ್ನಲಿಸ್ಟ್ (?) ಒಬ್ಬ ಹೀಗೆ ಬರೆದಿದ್ದ..

    [The fact that PM Candidate Narendra Modi continues following Sateash Jain (@actindia) even 6 months after this act of abuse would mean that Narendra Modi approves of people like Sateash Jain who sexually abuse women on twitter.] ಅಂತ!..

    ಇಷ್ಟು ಕಾಳಜಿ ಇರುವವ ಈಗ ಚಿದಂಬರಂ ವಿಷಯದಲ್ಲಿ ಏನು ಹೇಳುತ್ತಾನೊ!

    ಉತ್ತರ
  4. SSNK's avatar
    ನವೆಂ 13 2013

    ಇದು ಇವರ ಪೊಳ್ಳು ಜಾತ್ಯಾತೀತವಾದವನ್ನು ಬಯಲು ಮಾಡುತ್ತದೆ ಅಷ್ಟೇ.
    ರಾಜಕಾರಣಿಗಳಿಗೆ “ಜಾತ್ಯಾತೀತ” ಎನ್ನುವ ಪದ ಚುನಾವಣೆಯಲ್ಲಿ ಮತಗಳನ್ನು ಬಾಚಿಕೊಳ್ಳುವ ಸಲಕರಣೆ.
    ಬ್ರಿಟಿಷರು ಕಾಂಗ್ರೆಸ್ಸನ್ನು “ಕೋಮುವಾದಿ” ಎಂದು ಕರೆಯುತ್ತಿದ್ದರು. ಅವರ ದೃಷ್ಟಿಯಲ್ಲಿ ಗಾಂಧೀಜಿಯವರೂ “ಕೋಮುವಾದಿ”ಯೇ!!
    ಸ್ವಾತಂತ್ರ್ಯಾ ನಂತರದಲ್ಲಿ ಬ್ರಿಟಿಷರ ಸ್ಥಾನವನ್ನು ಕಾಂಗ್ರೆಸ್ ಆಕ್ರಮಿಸಿತು. ಬ್ರಿಟಿಷರ ಕೈಯ್ಯಲ್ಲಿದ್ದ “ಕೋಮುವಾದ” ಎಂಬ ಬೆದರುಬೊಂಬೆ ಕಾಂಗ್ರೆಸ್ಸಿನ ಕೈಯ್ಯಿಗೆ ಬಂದಿತು.
    ಬ್ರಿಟಿಷರು ಕಾಂಗ್ರೆಸ್ಸಿನ ಸ್ವಾತಂತ್ರ್ಯ ಹೋರಾಟವನ್ನು ಹಿಮ್ಮೆಟ್ಟಿಸಲು ಆ ಬೆದರು ಬೊಂಬೆಯನ್ನು ಬಳಸಿದರೆ, ಸ್ವಾತಂತ್ರ್ಯಾನಂತರದಲ್ಲಿ ನೆಹರು ಮತ್ತವರ ಬೆಂಬಲಿಗರು “ಅಲ್ಪಸಂಖ್ಯಾತರ ಮತಗಳನ್ನು ಕದಿಯಲು” ಬಳಸಿದ್ದಾರೆ.
    ಅವರಿಗೆ ಅಲ್ಪಸಂಖ್ಯಾತರ ಕುರಿತಾಗಿ ಅಷ್ಟೊಂದು ಕಾಳಜಿ ಇದ್ದಿದ್ದರೆ, ಸ್ವಾತಂತ್ರ್ಯ ಬಂದ ೬೫ ವರ್ಷಗಳ ನಂತರವೂ ಅಲ್ಪಸಂಖ್ಯಾತರು ಇಷ್ಟಂದು ಹಿಂದುಳಿದವರಾಗಿ, ಬಡವರಾಗಿ ಇರುವುದೇಕೆ? ಇಂದು ಅವರೂ ಸಹ ಆರಕ್ಷಣೆ (Reservation) ಕೇಳುತ್ತಿದ್ದಾರೆಂದರೆ ಅವರು ಮುಂದುವರೆದಿಲ್ಲವೆಂದೇ ಅರ್ಥವಲ್ಲವೇ?
    ಈಗಲಾದರೂ ಅಲ್ಪಸಂಖ್ಯಾತರು ಈ “ಪೊಳ್ಳು ಜಾತ್ಯಾತೀತವಾದ”ದ ಕುರಿತಾಗಿ ಎಚ್ಚೆತ್ತುಕೊಳ್ಳಲಿ.
    ಕಾಂಗ್ರೆಸ್ ಎಂದೂ ಅಲ್ಪಸಂಖ್ಯಾತರಿಗೆ ಒಳಿತು ಮಾಡುವ ಉದ್ದೇಶ ಹೊಂದಿಲ್ಲ. ಕಾಂಗ್ರೆಸ್ಸಿನ ಸರಕಾರವಿರುವ ತನಕ ಅಲ್ಪಸಂಖ್ಯಾತರ ಏಳಿಗೆಯಾಗುವುದಿಲ್ಲ.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments