ಡಬ್ಬಿಂಗ್ ವಿರೋಧ ಎಂಬ ಮೂಲಭೂತವಾದ
– ಡಾ. ಶ್ರೀಪಾದ ಭಟ್
ಇದೀಗ ಕನ್ನಡ ಸಿನಿಮಾ ರಂಗದ ಕೆಲವರು ಹಾಗೂ ಕೆಲ ಕನ್ನಡ ಪರ ಹೋರಾಟಗಾರರು ಡಬ್ಬಿಂಗ್ ವಿರೋಧಿಸಿ ಹೋರಾಟ ನಡೆಸಿದ್ದಾರೆ, ಪ್ರತಿಭಟನೆಗಳು ನಡೆದಿವೆ. ಯಾರ ವಿರುದ್ಧ ಯಾರು ಪ್ರತಿಭಟಿಸುತ್ತಿದ್ದಾರೆ? ಪ್ರತಿಭಟನೆಯ ಪರಿಸ್ಥಿತಿ ಯಾಕೆ ಬಂದಿದೆ ಎಂಬ ಪ್ರಶ್ನೆಗೆ ಒಂದಕ್ಕಿಂತ ಹೆಚ್ಚು ಉತ್ತರಗಳಿವೆ. ಈ ಪ್ರತಿಭಟನೆ ಸರ್ಕಾರದ ವಿರುದ್ಧವೇ? ಡಬ್ಬಿಂಗ್ ಆದ ಚಿತ್ರ, ಧಾರಾವಾಹಿ, ಇತರೆ ಟಿವಿ ಕಾರ್ಯಕ್ರಮ ನೋಡುವ ಪ್ರೇಕ್ಷಕರ ವಿರುದ್ಧವೇ? ಅಥವಾ ಡಬ್ಬಿಂಗ್ ಚಿತ್ರ ತಯಾರಿಸುವ ಜನರ ವಿರುದ್ಧವೇ? ಡಬ್ಬಿಂಗ್ ವಿರೋಧಿ ಪ್ರತಿಭಟನೆ ಅಂತಿಮವಾಗಿ ಸಾಧಿಸುವುದೇನು? ‘ಕನ್ನಡದಲ್ಲಿ ಡಬ್ಬಿಂಗ್ ತಯಾರಿಸಿದರೆ ನೋಡಿ, ಪರಿಣಾಮ ನೆಟ್ಟಗಿರುವುದಿಲ್ಲ’ ಎಂದು ಇವರೆಲ್ಲರಿಗೂ ಎಚ್ಚರಿಕೆ ಕೊಟ್ಟು ಹೆದರಿಸುವುದೇ? ಬಹುಶಃ ಇದೇ ಉದ್ದೇಶ ಇರಬಹುದು. ಯಾಕೆಂದರೆ ‘ನಿಮ್ಮ ಡಬ್ಬಿಂಗ್ ಸಿನಿಮಾಗಿಂತ ಅತ್ಯುತ್ತಮ ಚಿತ್ರವನ್ನು ಸ್ವತಃ ತಯಾರಿಸಿ ಪ್ರೇಕ್ಷಕರನ್ನು ಸೆಳೆಯುತ್ತೇವೆ. ಯಾರು ಗೆಲ್ಲುತ್ತಾರೋ ನೋಡೋಣ’ ಎಂಬ ಆರೋಗ್ಯಕರ ಸ್ಪರ್ಧೆಯಂತೂ ಇದರಲ್ಲಿ ಕಾಣುತ್ತಿಲ್ಲ. ಕನ್ನಡ ಚಿತ್ರರಂಗದ ಇಂಥ ಬಂದ್ನಿಂತದ, ಪ್ರತಿಭಟನೆಗಳಿಂದ ಕರ್ನಾಟಕದಲ್ಲಿರುವ ಪ್ರೇಕ್ಷಕರಿಗಂತೂ ಖಂಡಿತ ನಷ್ಟವಿಲ್ಲ. ಕಷ್ಟವಾಗುವುದು ವಾಹನ ಸವಾರರಿಗೆ ಹಾಗೂ ವಿವಿಧ ಕೆಲಸಕಾರ್ಯಕ್ಕೆ ಅಡ್ಡಿಯಾಗುವ ಕಾರಣ ಜನಸಾಮಾನ್ಯನಿಗೆ. ಉಳಿದಂತೆ ಕಲಾವಿದರು, ತಂತ್ರಜ್ಞರು ಹಾಗೂ ಚಿತ್ರ ಕಾರ್ಮಿಕರಿಗೇ ಅದರ ನೇರ ಹೊಡೆತ ಬೀಳುವುದು. ಇದು ಎಲ್ಲರಿಗೂ ತಿಳಿದಿದೆ. ಆದರೂ ವಿರೋಧ ಏಕೆ? ‘ಕನ್ನಡದ ಭಾಷೆ, ಸಂಸ್ಕೃತಿ ನಾಶವಾಗುತ್ತದೆ ಮತ್ತು ಕನ್ನಡದ ತಂತ್ರಜ್ಞರು, ಕಾರ್ಮಿಕರು ಹಾಗೂ ಕಲಾವಿದರಿಗೆ ಅವಕಾಶಗಳಿರುವುದಿಲ್ಲ’ ಎಂಬುದು ಡಬ್ಬಿಂಗ್ ವಿರೋಧಿಗಳ ವಾದ.
ಹೌದೇ? ವಾಸ್ತವ ಗಮನಿಸಿದರೆ ಡಬ್ಬಿಂಗ್ ವಿರೋಧಿಗಳೇ ಕನ್ನಡದ ಬೆಳವಣಿಗೆಗೆ ಅಡ್ಡಿಯಾಗುತ್ತಿದ್ದಾರೆ ಅನಿಸದಿರದು. ಕನ್ನಡ ಸಿನಿಮಾ ಜಗತ್ತಿಗೆ ಈಗ 79 ವರ್ಷ ವಯಸ್ಸು. ಈ ಅವಧಿಯಲ್ಲಿ ಪ್ರೇಕ್ಷಕ ವರ್ಗ ಬದಲಾಗಿದೆ. ಜನರ ನಿರೀಕ್ಷೆ, ಅಭಿರುಚಿ ಕೂಡ ಬದಲಾಗಿದೆ. 80 ವರ್ಷದ ಅಜ್ಜನೊಬ್ಬ ಮೊಮ್ಮಕ್ಕಳ ಜೊತೆ ಬೆರೆಯಲು ಬಳಸುವ ಸಮಕಾಲೀನತೆಯ ಉಪಾಯವನ್ನು ಮಾತ್ರ ಕನ್ನಡ ಚಿತ್ರರಂಗ ಅಳವಡಿಸಿಕೊಳ್ಳದೇ ತನ್ನ ವೃದ್ಧಾಪ್ಯವನ್ನೇ ಸಮರ್ಥಿಸಿಕೊಳ್ಳುತ್ತಿದೆ. ಕನ್ನಡ ಪ್ರೇಕ್ಷಕ ವರ್ಗ ಗಾಂಧಿನಗರದ ಹಣವಂತ ನಿರ್ಮಾಪಕ ಜನ ತಿಳಿದಿರುವಂತೆ ಬರೀ ದ್ವಂದ್ವ ಸಂಭಾಷಣೆಯನ್ನೋ ಉದ್ದುದ್ದ ಕತ್ತಿ, ಮಚ್ಚು, ಲಾಂಗುಗಳನ್ನಷ್ಟೇ ಬಯಸುವಂಥದ್ದಲ್ಲ. ಬೇರೆ ಬೇರೆ ಮಾಧ್ಯಮಗಳ ಮೂಲಕ ಅವರ ಮೇಲೂ ಜಾಗತಿಕ ಪರಿಣಾಮ ಉಂಟಾಗುತ್ತಲೇ ಇರುತ್ತದೆ. ಹೊಸದನ್ನು ಅವರೂ ಸದಾ ಬಯಸುತ್ತಾರೆ. ತಥಾಕಥಿತ ಕೌಟುಂಬಿಕ ಕಥಾ ಹಂದರದ ಚಿತ್ರಗಳು ಬೇಸರವಾದಾಗ ‘ಓಂ’ ನಂಥ ಚಿತ್ರಗಳು ಅವರಿಗೆ ಭಿನ್ನ ಅನುಭವ ಕೊಡಬಹುದು. ಕಾಲೇಜು ಹುಡುಗ-ಹುಡುಗಿಯ ಕಿತ್ತು ಹೋದ ಪ್ರೇಮ ಕಥೆಗಳನ್ನು, ತಾಯಿ ಮಮತೆಯ ಹಳಸಲು ಸನ್ನಿವೇಶಗಳನ್ನು ನೋಡಿ ಬೇಸತ್ತಾಗ ‘ಆ ದಿನಗಳೋ’ ಮತ್ತೊಂದು ‘ದುನಿಯಾ’ವೋ ಬದಲಾವಣೆ ನೀಡಬಹುದು. ಅಂದ ಮಾತ್ರಕ್ಕೆ ನಮ್ಮ ಜನಕ್ಕೆ ಏನು ಬೇಕು ಎಂಬುದು ನಮಗೆ ಗೊತ್ತು ಎಂಬಂತೆ ಸದಾ ಕಾಲ ಹಳೆ ಪಾತ್ರೆ, ತಗಡುಗಳನ್ನು ಕೊಡುತ್ತ ಹೋದರೆ ಕೊಡುವುದನ್ನೆಲ್ಲ ಪಡೆಯಲು ಜನರೇನೂ ಮೂರ್ಖರಲ್ಲ.
ಕನ್ನಡದ ಕಲಾತ್ಮಕ ಚಿತ್ರಗಳನ್ನು ಬಿಟ್ಟರೆ ಹೊಸ ಪ್ರಯೋಗ, ಕಥೆಗಳು ನಮ್ಮವರಿಗೆ ಹೊಳೆಯುವುದೇ ಇಲ್ಲ. ತಾರೇ ಜಮೀನ್ ಪರ್ನಂಲಥ ನವಿರಾದ ಚಿತ್ರ ನಿರ್ಮಾಣ ಸ್ವಂತ ಚಿತ್ರ ತಯಾರಿಸುವ ನಮ್ಮ ಡಬ್ಬಿಂಗ್ ವಿರೋಧಿ ಪ್ರತಿಭೆಗಳಿಗೇಕೆ ಸಾಧ್ಯವಿಲ್ಲ? ಭಾಷೆಯ ಕಾರಣದಿಂದ ಇಂಥ ಚಿತ್ರಗಳಿಂದ ನಮ್ಮ ಸಾಕಷ್ಟು ಜನ ವಂಚಿತರಾಗಿದ್ದಾರೆ. ಚಿತ್ರ ಮಂದಿರಕ್ಕೆ ಜನ ಹಣ ಕೊಟ್ಟು ಬರುತ್ತಾರೆ. ಹಣವನ್ನೂ ಮೂರು ಗಂಟೆ ಸಮಯವನ್ನೂ ಮತ್ತೆ ಮತ್ತೆ ಕಳೆದುಕೊಳ್ಳಲು ಯಾರೂ ಬಯಸುವುದಿಲ್ಲ. ಜನ ಸಿನಿಮಾ ನೋಡುವಂತೆ ಮಾಡಲು ಭವ್ಯ ಸೆಟ್ಟುಗಳೇ ಬೇಕಿಲ್ಲ. ನಿರ್ಮಾಪಕನೊಬ್ಬ ಭಾರೀ ಹಣ ಹೂಡಿ ಒಟ್ಟಂದವಿಲ್ಲದ ಕೆಟ್ಟ ಚಿತ್ರ ನಿರ್ಮಿಸಿದರೆ ಅದಕ್ಕೆ ಪ್ರೇಕ್ಷಕ ಹೊಣೆಯಲ್ಲ. ಹೀಗಾಗಿಯೇ ಕನ್ನಡ ಸಿನಿ ಪ್ರೇಕ್ಷಕ ಈಗ ‘ಕಾದು ನೋಡುವ’ ತಂತ್ರ ಅಳವಡಿಸಿಕೊಂಡಿದ್ದಾನೆ. ಚಿತ್ರ ಬಿಡುಗಡೆಯಾದ ಮೊದಲ ಪ್ರದರ್ಶನವನ್ನೇ ನೋಡಬೇಕು, ಮೊದಲ ದಿನವೇ ನೋಡಬೇಕು ಎಂಬ ಧಾವಂತ ಈಗ ಉಳಿದಿಲ್ಲ. ಹೀಗಾಗಿ ಬಿಡುಗಡೆಯಾಗಿ ನಾಲ್ಕೇ ದಿನಗಳಿಂದ ‘ಅಮೋಘ ಐದನೇ ದಿನ’ ‘ಭಾರೀ ಜನಮನ್ನಣೆಯ ಏಳನೇ ದಿನ’ ಎಂಬಂಥ ನಗೆಪಾಟಲಿನ ಪೋಸ್ಟರುಗಳೂ ಚಿತ್ರ ಬಿಡುಗಡೆಯ ದಿನವೇ ಪ್ರಚಾರಕ್ಕೆ ಸಿದ್ಧವಾಗಿರುತ್ತವೆ! ಇಂದು ಸರಾಸರಿ ವರ್ಷಕ್ಕೆ ನೂರರ ಆಸುಪಾಸು ಸಂಖ್ಯೆಯಲ್ಲಿ ತಯಾರಾಗುವ ಬಹುತೇಕ ಕನ್ನಡ ಸಿನಿಮಾಗಳು ‘ಜೋರಾಗಿ ಓಡುವುದು’ ನಿಜ. ಅವು ಬಿಡುಗಡೆಯಾದ ವಾರದಲ್ಲೇ ಇಡೀ ರಾಜ್ಯ ಸುತ್ತಿಬಂದು ಗಾಂಧಿನಗರದ ಡಬ್ಬ ಸೇರಿಕೊಳ್ಳುತ್ತವೆ!
ಯಾವ ಪೂರಕ ಪ್ರಚಾರವೂ ಇಲ್ಲದೇ ವರ್ಷಗಟ್ಟಲೆ ತುಂಬಿದ ಗೃಹಗಳಲ್ಲಿ ಅಣ್ಣಾವ್ರ ಸಿನಿಮಾಗಳು ಪ್ರದರ್ಶಿತವಾಗುತ್ತಿದ್ದುದು ಇದೇ ಪ್ರೇಕ್ಷಕರಿಂದ ಎಂಬುದನ್ನು ಮರೆಯಬಾರದು. ಡಾ. ರಾಜ್ ಅವರ ಶಬ್ದವೇಧಿಯಂಥ ಕೊನೆ ಕೊನೆಯ ಸಿನಿಮಾ ಕೂಡ ನೂರಾರು ದಿನ ರಾಜ್ಯಾದ್ಯಂತ ಪ್ರದರ್ಶನ ಕಂಡಿತು. ಆ ಬಂಗಾರದ ಮನುಷ್ಯನನ್ನು ಇದೇ ಜನ ಈಗಲೂ ಮತ್ತೆ ಮತ್ತೆ ನೋಡಬಯಸುತ್ತಾರೆ. ಯಾಕೆ? ಭಾಷೆ, ಸಾಹಿತ್ಯ, ಸಂಗೀತ ಮತ್ತು ತಂತ್ರಜ್ಞಾನಗಳ ಮೂಲಕ ಜನರ ಭಾವಕೋಶದಲ್ಲಿ ಹೊಸ ಲೋಕವೊಂದನ್ನು ಸೃಷ್ಟಿಸುವಂತಿದ್ದಾಗ, ಜನರ ಭಾವನೆಯನ್ನು ಮೀಟುವಂತಿದ್ದಾಗ, ಆ ಮೂಲಕ ಜ್ಞಾನವನ್ನೋ ಗುಣಾತ್ಮಕ ಸಂದೇಶವನ್ನೋ ಕೊಡುವಂತಿದ್ದಾಗ ಜನರೆಂದೂ ಅಂಥ ಸಿನಿಮಾವನ್ನು ತಿರಸ್ಕರಿಸಿಲ್ಲ. ಅಂಥ ಸಿನಿಮಾದ ಭಾಷೆ-ದೇಶ ಯಾವುದೇ ಇರಲಿ, ಪ್ರೇಕ್ಷಕ ಅದನ್ನು ತನ್ನದನ್ನಾಗಿ ಮಾಡಿಕೊಳ್ಳುತ್ತಾನೆ. ಅದು ಅವನ ಹಕ್ಕು. ಅದನ್ನು ಯಾರೂ ತಮಗೆ ಕೆಲಸವಿರುವುದಿಲ್ಲ ಎಂಬಂಥ ನೆಪದ ಯಾವ ಪ್ರತಿಭಟನೆಯ ಮೂಲಕವೂ ಕಿತ್ತುಕೊಳ್ಳಲಾಗದು. ಸರಳವಾಗಿ ನೋಡಿದರೆ ಡಬ್ಬಿಂಗ್ ಎಂಬುದು ಒಂದು ಬಗೆಯ ಭಾಷಾಂತರದ ಕೆಲಸ. ಅದಕ್ಕೂ ಬೇರೆ ಬೇರೆ ಹಂತದಲ್ಲಿ ಬೇರೆ ಬೇರೆ ರೀತಿಯ ಕೆಲಸಗಳಿರುತ್ತವೆ. ಕನ್ನಡ ಸಾಹಿತ್ಯವನ್ನೇ ಈ ದೃಷ್ಟಿಯಿಂದ ಗಮನಿಸಿದರೆ ಭಾಷಾಂತರದಿಂದ ಕನ್ನಡ ಸಾಹಿತ್ಯ ಮತ್ತು ಭಾಷೆ ಸಾಕಷ್ಟು ಬೆಳೆದಿರುವುದು ಅರಿವಾಗುತ್ತದೆ.
ಆಧುನಿಕ ಕಾದಂಬರಿ, ಕಾವ್ಯ, ನಾಟಕ ಮೊದಲಾದ ಪ್ರಕಾರಗಳು, ಬಗೆಬಗೆಯ ವಾದಗಳು, ಸಿದ್ಧಾಂತಗಳೆಲ್ಲ ಕನ್ನಡಕ್ಕೆ ಬಂದುದು ಭಾಷಾಂತರದ ಮೂಲಕ. ಭಾಷಾಂತರವೇ ಬೇಡ, ಇದರಿಂದ ಕನ್ನಡದ ಸೃಜನಶೀಲತೆ ಹಾಳಾಗುತ್ತದೆ ಎಂದು ಸಿನಿಕತನವನ್ನೋ ಸಂಕುಚಿತ ಮನೋಭಾವವನ್ನೋ ತೋರಿಸಿದ್ದರೆ ಕನ್ನಡ ಭಾಷೆಯ ಬೆಳವಣಿಗೆ ಇಂದಿನಷ್ಟೂ ಇರುತ್ತಿರಲಿಲ್ಲ. ಒಂದು ಕಡೆ ಭಾಷಾಂತರದಿಂದ ಕನ್ನಡದ ಸಮೃದ್ಧಿಯೂ ಹೆಚ್ಚಿತು, ಸೃಜನಶೀಲತೆಯೂ ಸ್ಪರ್ಧಾತ್ಮಕವಾಗಿ ಬೆಳೆಯಿತು. ಇದು ಗುಣಾತ್ಮಕ ಸಂಗತಿ. ಇದರ ಪಾಠವನ್ನು ಡಬ್ಬಿಂಗ್ ವಿರೋಧಿಗಳು ಅರ್ಥಮಾಡಿಕೊಳ್ಳುವುದು ಒಳಿತು. ಯಾವುದೇ ಜ್ಞಾನವಿರಲಿ, ಆಡಳಿತವಿರಲಿ ಅವೆಲ್ಲ ಆಯಾ ದೇಶ-ಭಾಷೆಗಳಲ್ಲೇ ಇರುವುದು ಸೂಕ್ತ ಎಂದು ದಶಕಗಳ ಹಿಂದೆಯೇ ವಿಶ್ವಸಂಸ್ಥೆ ಎಲ್ಲ ದೇಶಗಳಿಗೂ ಸೂಚಿಸಿದೆ. ಕನ್ನಡ ಇದರಿಂದ ಹೊರತಾಗಲು ಸಾಧ್ಯವಿಲ್ಲ. ಡಿಸ್ಕವರಿ, ನ್ಯಾಶನಲ್ ಜಿಯೋಗ್ರಫಿಕ್, ಆನಿಮಲ್ ಪ್ಲಾನೆಟ್ನಂ ಥ ವಾಹಿನಿಗಳು ತಯಾರಿಸುವ ಕಾರ್ಯಕ್ರಮಗಳನ್ನು ಇನ್ನು ನೂರು ವರ್ಷದ ಮೇಲಾದರೂ ಡಬ್ಬಿಂಗ್ ಇಲ್ಲದೇ ಕನ್ನಡ ಚಿತ್ರ, ಕಿರು ಚಿತ್ರ ನಿರ್ಮಾಪಕರು ತಯಾರಿಸಿ ‘ನೋಡಿರಪ್ಪಾ’ ಎಂದು ಕೊಡಬಲ್ಲರೇ? ಡಬ್ಬಿಂಗ್ ಇಲ್ಲದ ಅಂಥ ಕಾರ್ಯಕ್ರಮಗಳನ್ನು ಕನ್ನಡದಲ್ಲೇ ನೋಡುವ ಭಾಗ್ಯ ಕನ್ನಡಿಗರಿಗೆ ಎಂದಾದರೂ ದೊರೆಯಬಲ್ಲದೇ? ಸದ್ಯ ಡಬ್ಬಿಂಗ್ನ ಲ್ಲೂ ಇವು ಲಭ್ಯವಿಲ್ಲ. ಆದರೆ ಹಿಂದಿ, ತಮಿಳು, ತೆಲುಗು ಇತ್ಯಾದಿ ಭಾಷೆಗಳಲ್ಲಿದೆ.
ಕನ್ನಡಕ್ಕೆ ಮಾತ್ರ ಇನ್ನೂ ಅದೊಂದು ಕನಸು. ಯಾಕೆ ಇಂಥ ಜ್ಞಾನ ಕನ್ನಡದಲ್ಲಿ ಲಭಿಸಬಾರದು? ಸಂಭಾಷಣೆ ರೂಪದ ಕನ್ನಡ ಭಾಷೆ ಮಾತ್ರವಲ್ಲ, ಆಧುನಿಕ ತಂತ್ರಜ್ಞಾನದಲ್ಲೂ ಕನ್ನಡದ ಉದ್ಧಾರದ ಮಾರ್ಗ ಇದರಿಂದ ತೆರೆಯುತ್ತದೆ. 1843ರ ವೇಳೆಯಿಂದ ಮುದ್ರಣ ಮಾಧ್ಯಮದೊಂದಿಗೆ ಆಧುನಿಕ ತಂತ್ರಜ್ಞಾನವನ್ನು ತನ್ನದನ್ನಾಗಿ ಮಾಡಿಕೊಳ್ಳುತ್ತ ಬಂದ ಕನ್ನಡ ಬೆರಳಚ್ಚು ಯಂತ್ರ, ದಶಕಗಳ ಹಿಂದೆ ಕಂಪ್ಯೂಟರ್ ಕೀಲಿಮಣೆ ವಿನ್ಯಾಸದವರೆಗೆ ಹೊಸ ತಂತ್ರಜ್ಞಾನಕ್ಕೆ ಹೆಗಲೆಣೆಯಾಗಿ ಬೆಳೆಯುತ್ತ ಬಂದಿತು. ಆದರೆ ನಾವೀಗ ತುಂಬ ಹಿಂದಿದ್ದೇವೆ. ಕನ್ನಡವನ್ನು ಕಂಪ್ಯೂಟರಿನಲ್ಲಿ ಮುದ್ರಿಸಲು ಇಂದು ಅನೇಕ ಲಿಪಿಗಳು ಲಭ್ಯವಿದ್ದರೂ ಅವುಗಳ ಸಾಫ್ಟ್ವೇ ರ್ ಅಥವಾ ಯಂತ್ರಾಂಶ ಬಹುತೇಕ ಟ್ರಾನ್ಸ್ಲಿಮಟರೇಶನ್ ಮಾದರಿಯದು. ಕೀಲಿಮಣೆಯೂ ಇಂಗ್ಲಿಷ್ನೇದೇ. ಕೆಲವು ಮೊಬೈಲ್ಗನಳಲ್ಲಿ ಕೀಲಿಮಣೆಯಲ್ಲಿ ಕನ್ನಡದ ಲಿಪಿ ಇದ್ದರೂ ಅದರೊಳಗೆ ಅಡಕವಾದ ಯಂತ್ರಾಂಶ ಮತ್ತೆ ಇಂಗ್ಲಿಷ್ ಕೀಲಿಗೆ ಸಂವಾದಿಯನ್ನೇ ಹುಡುಕಿ ಕೊಡುವಂಥದ್ದು. ಇದೇ ಯಂತ್ರಾಂಶ ಅಳವಡಿಸಿಕೊಂಡು ಕನ್ನಡದ ವಿವಿಧ ಅಕ್ಷರ ವಿನ್ಯಾಸ ಮೂಡಿಸುವ ಪ್ರಜಾ, ಬರಹ, ಶ್ರೀಲಿಪಿ, ನುಡಿ, ಕಾವೇರಿ, ತುಂಗಾ ಇತ್ಯಾದಿ ನೂರಾರು ಲಿಪಿಗಳಿದ್ದರೂ ಒಂದು ವಿನ್ಯಾಸದಲ್ಲಿ ಮೂಡಿಸಿದ್ದನ್ನು ಮತ್ತೊಂದು ವಿನ್ಯಾಸಕ್ಕೆ ಪರಿವರ್ತಿಸಿದರೆ ಅನೇಕ ಅಕ್ಷರಗಳು ಬಿದ್ದುಹೋಗುತ್ತವೆ ಅಥವಾ ಒಡೆಯುತ್ತವೆ. ಇಂಗ್ಲೀಷಿನಲ್ಲಿ ಇಂಥ ಅನೇಕ ಅಕ್ಷರ ವಿನ್ಯಾಸಗಳಿದ್ದರೂ ಅವುಗಳ ವಿನ್ಯಾಸ ಪರಿವರ್ತನೆಯಿಂದ ಭಾಷೆಗೆ ಏನೂ ಅಪಚಾರವಾಗುವುದಿಲ್ಲ. ಇದಕ್ಕೆ ಅದರದ್ದೇ ಆದ ಆಪಟೇರಿಂಗ್ ಸಿಸ್ಟಂ ಅಥವಾ ಕಾರ್ಯ ವ್ಯವಸ್ಥೆ ಇರುವುದೇ ಕಾರಣ. ಕರ್ನಾಟಕ ಅದರಲ್ಲೂ ಬೆಂಗಳೂರು ಮಹಾನ್ ಮಾಹಿತಿ ತಂತ್ರಜ್ಞಾನ ಕೇಂದ್ರವಾಗಿ, ಕನ್ನಡದ್ದೇ ಜಗದ್ವಿಖ್ಯಾತ ಕಂಪ್ಯೂಟರ್ ತಂತ್ರಜ್ಞರನ್ನು ಹೊಂದಿದ್ದರೂ ಇನ್ನೂ ಕನ್ನಡದ್ದೇ ಆದ ಕಾರ್ಯವ್ಯವಸ್ಥೆ ಹೊಂದಿಲ್ಲದಿರುವುದು ವ್ಯಂಗ್ಯವೋ ದುರಂತವೋ ಅರ್ಥವಾಗುವುದಿಲ್ಲ. ತಮಿಳು, ಹಿಂದಿಯಂಥ ಭಾಷೆಗಳು ಈ ಸಮಸ್ಯೆಯನ್ನು ಎಂದೋ ನಿವಾರಿಸಿಕೊಂಡಿವೆ.
ಹಾಗಾಗಿ ಅಂತರ್ಜಾಲದಲ್ಲಿರಲಿ, ಆಧುನಿಕ ತಂತ್ರಜ್ಞಾನದಲ್ಲಿರಲಿ ಅವರ ಭಾಷೆ ಸರಾಗವಾಗಿ ಎಲ್ಲೆಂದರಲ್ಲಿ ಸುಳಿದಾಡುತ್ತಿದೆ. ಧ್ವನಿ ಗುರುತಿಸುವ ಸಾಫ್ಟ್ವೇ್ರ್, ಮಲ್ಟಿ ಮೀಡಿಯಾ ಸಾಫ್ಟ್ವೇರರ್, ಕೈಬರಹ-ಹಸ್ತಪ್ರತಿ ಗುರುತಿಸುವ ಸಾಫ್ಟ್ವೇಧರ್-ಇವೆಲ್ಲ ಭವಿಷ್ಯದಲ್ಲಿ ಕನ್ನಡ ಉಳಿಸಲು ಅನಿವಾರ್ಯ. ಇವೆಲ್ಲ ಇನ್ನೂ ಕನ್ನಡದಲ್ಲಿ ಲಭ್ಯವಿಲ್ಲ. ಕನ್ನಡದ ಈ ಕೊರತೆ ತುಂಬುವುದು ತಡವಾದಷ್ಟೂ ಆಧುನಿಕರಿಂದ ಅದು ಅಷ್ಟಷ್ಟು ದೂರವಾಗುತ್ತಲೇ ಹೋಗುತ್ತದೆ. ಸರ್ಕಾರವೇ ಎಲ್ಲವನ್ನೂ ಮಾಡಲಾಗುವುದಿಲ್ಲ. ಈ ಬಗೆಯ ಸಾಫ್ಟವೇರ್ ಅಭಿವೃದ್ಧಿಗೆ ಅಗತ್ಯ ಹಣವನ್ನು ಉದ್ಯಮಗಳು ನೀಡಬೇಕು. ಅಪಾರ ಹಣವಿರುವ ಚಿತ್ರೋದ್ಯಮ ಡಬ್ಬಿಂಗ್ ಕಲೆಯನ್ನೂ ಉತ್ತೇಜಿಸಿದರೆ, ಡಬ್ಬಿಂಗ್ ನಿರ್ಮಾಪಕರು ಇಂಥ ಇನ್ನಷ್ಟು ತಂತ್ರಜ್ಞಾನವನ್ನು ಅನಿವಾರ್ಯವಾಗಿ ಉತ್ತೇಜಿಸುತ್ತಾರೆ. ಇತರೆ ಭಾಷೆಗಳು ಇಂಥ ತಂತ್ರಜ್ಞಾನದಲ್ಲಿ ಮುಂದುವರೆಯಲೂ ಡಬ್ಬಿಂಗ್ ಪರೋಕ್ಷ ಕಾರಣ ಎಂಬುದು ಬಹುಶಃ ಕನ್ನಡ ಭಾಷೆ, ಸಂಸ್ಕøತಿ ಉಳಿಸುವ ಹೋರಾಟಗಾರರಿಗೆ ಎಂದೂ ಅರ್ಥವಾಗುವುದಿಲ್ಲ. ಡಬ್ಬಿಂಗ್ ಬೇಡ, ಬೇಕಾದರೆ ರೀಮೇಕ್ ಇರಲಿ, ಎಂಬುದು ವಿರೋಧಿಗಳ ಮತ್ತೊಂದು ಮಾತು. ರೀಮೇಕ್ನಿಂುದ ಇವೆಲ್ಲ ಸಿದ್ಧಿಸಲಾರದು. ಡಬ್ಬಿಂಗ್ ವಿರೋಧಿಗಳು ಬಹುಶಃ ತಮ್ಮ ಸಾಮಥ್ರ್ಯವನ್ನು ತಾವೇ ಅನುಮಾನಿಸುತ್ತಿದ್ದಾರೆ. ನಿಜವಾದ ಕಲಾವಿದ, ಕಾರ್ಮಿಕ, ತಜ್ಞನಿಗೆ ಯಾವಾಗಲೂ ಎಲ್ಲೆಡೆಯೂ ಮನ್ನಣೆ ಇದ್ದೇ ಇದೆ. ಕೆಟ್ಟದಾಗಿ ತೆಗೆದ ಸ್ವಂತ ಸಿನಿಮಾದಂತೆಯೇ ಅರ್ಥವಿಲ್ಲದ ಡಬ್ಬಿಂಗ್ ಕೆಲಸವನ್ನೂ ಜನ ಕಸದಬುಟ್ಟಿಗೆ ಎಸೆಯುತ್ತಾರೆ. ಡಬ್ಬಿಂಗ್ನಿಂಗದ ಕನ್ನಡಕ್ಕೆ ಅಪಕಾರಕ್ಕಿಂತ ಉಪಕಾರವೇ ಹೆಚ್ಚಿದೆ. ಡಬ್ಬಿಂಗ್ ಕನ್ನಡಕ್ಕೆ ಇನ್ನೂ ಹೆಚ್ಚು ನೀಡಬಲ್ಲುದು. ಮಚ್ಚು-ಲಾಂಗು-ಹಳೆಪಾತ್ರೆ-ತಗಡುಗಳೇ ಕನ್ನಡ ಭಾಷೆ, ಸಂಸ್ಕøತಿಯಲ್ಲ. ಒಳ್ಳೆಯದು ಎಲ್ಲಿದ್ದರೂ ಬರಲಿ ಎಂದು ಶತಮಾನಗಳಿಂದ ಆಶಿಸಿದ ದೇಶ ನಮ್ಮದು. ಡಬ್ಬಿಂಗ್ ವಿರೋಧದ ನೆಪದಲ್ಲಿ ಅನ್ಯ ಭಾಷೆಯ ಆಗಮನವನ್ನು ‘ತಮ್ಮ ಮೇಲಿನ ದಾಳಿ’ ಎಂದು ಭಾವಿಸುವವರು ನಟಿಯರನ್ನು, ತಂತ್ರಜ್ಞರನ್ನು, ಕೊನೆಗೆ ಲೈಟ್ ಬಾಯ್ಗಮಳನ್ನೂ ಪರಭಾಷೆಯಿಂದ ಆಹ್ವಾನಿಸುವುದೇಕೆ?
ಕನ್ನಡದ ಚಿತ್ರವೊಂದು ಅಮೆರಿಕ, ಇಂಗ್ಲೆಂಡ್, ಜರ್ಮನಿ, ಜಪಾನ್, ಆಸ್ಟ್ರೇಲಿಯಾಗಳಲ್ಲಿ ಬಿಡುಗಡೆಯಾದರೆ ಸಂಭ್ರಮಿಸುವ ಹಾಗೂ ಕನ್ನಡದ ಸಾಹಿತ್ಯ ಕೃತಿಗಳು ಅನ್ಯ ಭಾಷೆಗಳಿಗೆ ಹೆಚ್ಚು ಹೆಚ್ಚು ಭಾಷಾಂತರವಾಗಬೇಕೆಂದು ಬಯಸುವ ನಾವು ಅನ್ಯರೂ ನಮ್ಮ ಸಿನಿಮಾ, ಸಾಹಿತ್ಯ ತಮ್ಮಲ್ಲೂ ಇರಲಿ ಎಂದು ಬಯಸುವಂತೆ ಸಿನಿಮಾ, ಸಾಹಿತ್ಯ ನೀಡಬೇಕಲ್ಲವೇ? ಈಗಾಗಲೇ ಕನ್ನಡದ ಅನೇಕ ಸಿನಿಮಾಗಳು ಅನ್ಯ ಭಾಷೆಗಳಿಗೆ ಡಬ್ಬಿಂಗ್ ಆಗಿವೆ, ಆಗುತ್ತಿವೆ. ಅಂಥ ಗುಣಮಟ್ಟದ ಪ್ರಶ್ನೆ ಬಂದಾಗ ಆರೋಗ್ಯಕರ ಸ್ಪರ್ಧೆ ಉಂಟಾಗುತ್ತದೆ. ತಾನೂ ಹೊರ ಹೋಗುವುದಿಲ್ಲ, ಅನ್ಯರೂ ನಮ್ಮ ಮನೆಗೆ ಬರಬಾರದು ಎಂಬುದು ಒಂದು ಬಗೆಯ ಅಸ್ಪøಶ್ಯತೆ. ಮಹಾರಾಷ್ಟ್ರವೆಲ್ಲ ಮರಾಠಿಗರದು ಎಂದು ಅನ್ಯ ಭಾಷಿಕರನ್ನು ಹೊಡೆದೋಡಿಸುವ ಶಿವಸೇನೆಯ ನಿಲುವಿನಲ್ಲೂ ತಮ್ಮ ತಮ್ಮ ಮತಗಳೇ ಶ್ರೇಷ್ಠ ಎಂದು ಹೊಡೆದಾಡುವ ಮತೀಯ ಮೂಲಭೂತವಾದಿಗಳ ನಿಲುವಿನಲ್ಲೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ಡಬ್ಬಿಂಗ್ ವಿರೋಧವೂ ಬಹುಶಃ ಇದೇ ಮಾರ್ಗದಲ್ಲಿ ನಡೆಯುತ್ತಿದೆ. ಅಷ್ಟಕ್ಕೂ ಡಬ್ಬಿಂಗ್ ಚಿತ್ರಗಳಿಗೂ ಮುಕ್ತ ಅವಕಾಶ ನೀಡಿದ ನಮ್ಮ ನೆರೆಯ ತಮಿಳು, ತೆಲುಗು ಚಿತ್ರರಂಗಕ್ಕೆ ಇಲ್ಲದ ಭೀತಿ ಕನ್ನಡ ಚಿತ್ರರಂಗಕ್ಕೆ ಮಾತ್ರವೇ ಏಕೆ?





“ಆಧುನಿಕ ಕಾದಂಬರಿ ಕಾವ್ಯ ನಾಟಕ ಮೊದಲಾದ ಪ್ರಕಾರಗಳು ಬಗೆಬಗೆಯ ವಾದಗಳು ಕನ್ನಡಕ್ಕೆ ಬಂದುದು ಭಾಷಾಂತರದ ಮೂಲಕ…”— ಈ ಮಾತು ಅರ್ಧ ಸತ್ಯ. ಸುಮಾರು ೧೦೦-೧೨೫ ವರ್ಷಗಳ ಹಿಂದೆ ಬಂಗಾಳಿ ಬಾಷೆಯಿಂದ ಕೆಲವು ಕಾದಂಬರಿಗಳು ಕನ್ನಡಕ್ಕೆ ಅನುವಾದವಾಗಿದ್ದು ನಿಜ. ಆದರೆ ನಂತರ ಕನ್ನಡದಲ್ಲಿ ಕಥೆ ಕಾದಂಬರಿಗಳು ಮಾಸ್ತಿ,ಶಿವರಾಮಕಾರಂತ,ಕುವೆಂಪು ಇವರುಗಳಿಂದ ಸಶಕ್ತವಾಗಿ ರಚಿತವಾದವು. ಬಿ ಎಂ ಶ್ರೀ ಅವರ ಇಂಗ್ಲಿಷ್ ಗೀತಗಳು (ಇಂಗ್ಲಿಷ್ ನಿಂದ ಭಾವಾನುವಾದಗೊಂಡಿದ್ದರೂ ಸಹ) ಅದೇ ನವೋದಯ ಕಾವ್ಯಕ್ಕೆ ನಾಂದಿ ಆಯ್ತು. ನಂತರ ನಮ್ಮ ಸಾಹಿತಿಗಳು ಹಿಂತಿರುಗಿ ನೋಡಲಿಲ್ಲ. ಇನ್ನು ಇಂಗ್ಲಿಷ್ ಸಾಹಿತ್ಯದ ನವ್ಯ ವಿಮರ್ಶೆಯಿಂದ ಅಡಿಗ,ಗೋಕಾಕರು ಪ್ರಭಾವಿತರಾಗಿ ಅದನ್ನು ತಮ್ಮಲ್ಲಿ ಜೀರ್ಣಿಸಿಕೊಂಡು ನವ್ಯ ಕಾವ್ಯ ರಚಿಸಿದರು; ಇಂಗ್ಲಿಷ್ ನವ್ಯಕಾವ್ಯದ ಭಾಷಾಂತರ ಮಾಡುತ್ತಾ ಕೂರಲಿಲ್ಲ. ಸಣ್ಣ ಕಥೆ,ನಾಟಕಗಳ ಬಗ್ಗೆಯೂ ಈ ಮಾತು ಸತ್ಯ. “ಡಬ್ಬಿಂಗ್ ವಿರೋಧ ಎಂಬ ಮೂಲಭೂತವಾದ” ಈ ಲೇಖನವೇ ಗೊಂದಲದ ಗೂಡಾಗಿದೆ. ಸಾಹಿತ್ಯ ಮತ್ತು ಸಿನಿಮಾಗಳನ್ನು ಮಿಶ್ರಣ ಮಾಡಿ ತಯಾರಿಸಿದ ಅಪಕ್ವ ವಾದ. ಸಾಹಿತ್ಯ ಮತ್ತು ಸಿನಿಮಾವನ್ನು ಭಾಷಾಂತರ ಮತ್ತು ಡಬ್ಬಿಂಗ್ ಜತೆ ಇಟ್ಟು ತೌಲನಿಕ “ಅಧ್ಯಯನ”(?) ಮಾಡುವುದೇ ಹಾಸ್ಯಾಸ್ಪದ. ಕರ್ನಾಟಕದ ಮೂರು ಮನೆಗಳಿರುವ ಹಳ್ಳಿಯಿಂದ ಹಿಡಿದು ರಾಜಧಾನಿ ಬೆಂಗಳೂರಿನ ತನಕ ನಮ್ಮ ಕಿವಿಗಳಿಗೆ ಕನ್ನಡ ಭಾಷೆಯ ದನಿಯೇ ಕೇಳಿಸುವುದೇ ದಿನ ಕ್ರಮೇಣ ಕಡಿಮೆಯಾಗುತ್ತಿರುವ ಸದ್ಯದ ಪರಿಸ್ಥಿತಿಯಲ್ಲಿ “ಡಿಸ್ಕವರಿ ಚಾನೆಲ್, ಅನಿಮಲ್ ಪ್ಲಾನೆಟ್” ಮುಂತಾದ ಜ್ಞಾನದ ಮಾತಾಡಿ ಕನ್ನಡದ ಕತ್ತು ಹಿಸುಕುವ ಕೆಲಸ ಸರಿಯೇ? ಇನ್ನು ಆ “ಜ್ಞಾನ ವಾಹಿನಿಗಳ” ಭಾಷೆ ಅಮೀರ್ ಖಾನ್, ಶಾರುಕ್ ಖಾನ್, ರಜನಿಕಾಂತ್ ,ಮುಂತಾದವರ ಮಸಾಲೆ ಚಿತ್ರಗಳನ್ನು ಡಬ್ಬಿಂಗ್ ಮಾಡಿದಷ್ಟು ಸುಲಭವಲ್ಲ ಎಂಬುದು ನೆನಪಿಡ ಬೇಕಾದ ಅಂಶ. ಡಬ್ಬಿಂಗ್ ಎನ್ನುವುದು ರೀಮೇಕ್ ಗಿಂತ ಸೋಮಾರಿಯಾದ ಕೆಲಸ.
+100
“ಕನ್ನಡ ಭಾಷೆಯ ದನಿ” ಎಂದು ಓದಿಕೊಳ್ಳಬೇಕಾಗಿ ವಿನಂತಿ.
ಡಬ್ಬಿಂಗ್ ಬಂದರೆ ಕನ್ನಡ ಚಿತ್ರೋದ್ಯಮವನ್ನೇ ದಿನನಿತ್ಯದ ಅನ್ನಕ್ಕೆ ಅವಲಂಬಿಸಿರುವ ಸಹಸ್ರಾರು ಕಾರ್ಮಿಕರ ಹೊಟ್ಟೆಗೆ ಏಟು ಬೀಳುತ್ತದೆ. ಡಬ್ಬಿಂಗ್ ಬೇಕು ಅನ್ನುವವರು ಈ ಅಸಹಾಯಕ ಕಾಯಕ ಯೋಗಿಗಳಿಗೆ ಪರ್ಯಾಯ ಉದ್ಯೋಗದ ವ್ಯವಸ್ಥೆ ಮಾಡಿಯಾರೆ?
ಶ್ರೀರಂಗರವರೇ, ಡಬ್ಬಿಂಗ್ ಬಂದಮೇಲೆ ನಮ್ಮ ಸಿನಿಮಾದ ಕಲಾವಿದರು ಸ್ವಂತ ಸಿನಿಮಾ ಮಾಡುವುದು ಬಿಟ್ಟು ಬರೇ ಡಬ್ಬಿಂಗ್ ಮಾಡುತ್ತಾ ಕೂರುತ್ತಾರಾ ?
ಸಿನಿಮಾ, ಕಿರುತೆರೆಗಳ ಹಾವಳಿಯಿಂದ ನಮ್ಮ ಯಕ್ಷಗಾನ, ನಾಟಕ, ಜನಪದ ಕಲೆಗಳು ಅಳಿದು ಹೋಗುತ್ತಿವೆ. ಡಬ್ಬಿಂಗ್ ನಿಷೇಧದ ಜೊತೆ ನಮ್ಮ ಭಾಗದಲ್ಲಿ ಸಿನಿಮಾ, ಕಿರುತರೆಗಳನ್ನೂ ನಿಷೇಧ ಮಾಡಿ.
ಮಹೇಶ ಅವರೆ ನಿಮ್ಮ ಮಾತು ನಿಜ. ಡಬ್ಬಿಂಗ ಬೇಡ ಅನ್ನುವವರು ಈ ಬಗ್ಗೆ ಯೋಚಿಸಲಿ. ಸ್ಪರ್ಧೆ ಇದ್ದಾಗ ಮಾತ್ರ ನಿಜವಾದ ಪ್ರತಿಭೆ ಹೊರಬರಲು ಸಾಧ್ಯವಿದೆ. ವರ್ಷಕ್ಕೆ ನೂರಾರು ಚಿತ್ರ ಮಾಡಿ ತೋಪೆದ್ದು ಹೋಗುವದಕ್ಕಿಂತ ಒಂದೇ ಎರಡೇ ಚಿತ್ರಗಳನ್ನಾದರೂ ಸುಂದರವಾಗಿ ನಿರ್ಮೀಸುವದನ್ನು ನಮ್ಮ ನಿರ್ಮಾಪಕರು ಯೋಚಿಸುವದು ಒಳಿತು. ಇನ್ನು ಡಬ್ಬಿಂಗ ಬೇಕೆನ್ನುತ್ತ ಕೆಲವರು ವಾದ ಮಾಡುತ್ತಾ ಕುಳಿತರೆ ಇರುವ ಅಲ್ಪ ಸ್ವಲ್ಪ ಕನ್ನಡ ಪ್ರೆಕ್ಷಕರನ್ನೂ ಕಳೆದುಕೊಳ್ಳುತ್ತಾರೆ. ಕನ್ನಡದಲ್ಲಿ ಚಿತ್ರ ನಿರ್ಮಾಣ ಮಾಡಿದರೆ ತೊಪೆದ್ದು ಹೋಗುವದು ಗ್ಯಾರಂಟಿ ಅಂತಾದರೆ ಚಿತ್ರ ನಿರ್ಮಿಸಲು ಯಾರು ಬರುತ್ತಾರೆ. ಆವಾಗ ಕನ್ನಡ ಭಾಷೆಯ ಗತಿ ಏನಾಗುತ್ತದೆ? ಚಿತ್ರ ನೆಂಟಿರುವವರ ಹೊಟ್ಟೆಪಾಡು ಆವಾಗ ಏನಾಗುತ್ತದೆ? ನಾನು ಸ್ಪರ್ಧೆಗೆ ಹೋಗುಲ್ಲ ನಾನು ಶ್ರಮ ಪಡುವದಿಲ್ಲ. ನನಗೆ ಮಾತ್ರ ಮಾತ್ರ ಫಸ್ಟ ಪ್ರೈಸ್ ಬೇಕೆ ಬೇಕು ಎಂದು ಹುಡುಗರ ಹಟದಂತಿದೆ ಕನ್ನಡ ನಟರ ವಾದ.
“ಆವಾಗ ಕನ್ನಡ ಭಾಷೆಯ ಗತಿ ಏನಾಗುತ್ತದೆ? ”
ಕನ್ನಡ ಭಾಷೆ ೨ ಸಾವಿರವರುಷ ಸಿನಿಮ ಇಲ್ಲದೆ ಬದುಕಿದೆ ಬರುತ್ತಿದೆ ಬದುಕುವುದು.
ಬಹುಸಂಖ್ಯಾತ ಕನ್ನಡ ಸಿನಿಮಾಗಳಲ್ಲಿ ಕನ್ನಡ ಸಂಸ್ಕೃತಿಯೇ ಇಲ್ಲ!
ಕನ್ನಡ ಭಾಷೆಗೆ ಬರಹಗಾರರು, ಜಾನಪದ ಹಾಗು ಅದನ್ನು ಆಡಿಕೊಂಡು ಉಳಿಸಿಕೊಂಡಿರುವ ಜನಸಾಮಾನ್ಯರ ಮುಂದೆ ಈ ಸಿನಿಮ ಹಿಂಡು ತ್ಯಾಜ್ಯ!
ಮಾನ್ಯರೇ, ಇದು ಒಳ್ಳೆಯ ಚಿಂತನಾರ್ಹ ಲೇಖನ. ಈಗ ವಿವಿಧ ಕಾರಣಗಳಿಂದ ಕನ್ನಡ ಕೇವಲ ಮಾತನಾಡುವ ಭಾಷೆಯಾಗಿದೆ. ಬಹುತೇಕ ಈಗ ಜನಪ್ರೀಯ ಮಾಧ್ಯಮವೆಂದರೆ, ಚಿತ್ರ ಮಾಧ್ಯಮ. ಮತು ಕಿರುತೆರೆ ಮಾಧ್ಯಮ, ವಿಧ್ಯಾವಂತನಾಗಿರಲಿ, ಅವಿಧ್ಯಾವಂತನೇ ಆಗಿರಲಿ ಮನೋರಂಜನೆಗಾಗಿ ಉಳಿದಿರುವುದು ಇದೊಂದೇ ಮಾಧ್ಯಮಗಳು. ಡಬ್ಬಿಂಗ್ ಬೇಡವೆಂದರೆ, ಕನ್ನಡ ಹೇಗೆ ಉಳಿಯುತ್ತದೆ. ಮುಂದೆ ನಮ್ಮ ಕನ್ನಡ ಭಾಷೆ ಉಳಿಯಬೇಕಾದರೆ,ಡಬ್ಬಿಂಗ್ ಬೇಕೇ ಬೇಕು. ಹಾಗೇನಾದರೂ, ಡಬ್ಬಿಂಗ್ ಬೇಡವೆಂದು ಇದನ್ನೇ ಹಟ ಹಿಡಿದರೆ, ಪ್ರಮುಖವಾಗಿ ಟಿ.ವಿ. ಮಾಧ್ಯಮವಿರುವುದರಿಂದ, ಅನಿವಾರ್ಯವಾಗಿ ಅಂದರೆ ಬಲವಂತವಾಗಿಯಾದರೂ ಕನ್ನಡಿಗರು ಅನ್ಯ ಭಾಷೆಯನ್ನು ಕಲಿಯಬೇಕಾಗುತ್ತದೆ. ಡಬ್ಬಿಂಗ್ ವಿರೋಧಿಗಳು ಇದನ್ನು ಪ್ರಮುಖವಾಗಿ ಗಮನಿಸಬೇಕು. ಇದರೊಂದಿಗೆ ನಮ್ಮ ಕಲಾವಿದರಿಂದಲೂ ಎಲ್ಲಾ ರೀತಿಯ ಚಿತ್ರಗಳು ಬರಲಿ. ಆರೋಗ್ಯದಾಯಕ ಸ್ಪರ್ಧೆ ಇರಲಿ. ನಮ್ಮ ಕನ್ನಡ ಉಳಿಯುತ್ತದೆ. ಬಹುತೇಕ ಕನ್ನಡಿಗರೂ ಸಹ ಒಂದು ಪರಿಪಾಠವನ್ನು ಇಟ್ಟುಕೊಂಡಿದ್ದಾರೆ, ಕನ್ನಡ ಚಿತ್ರಗಳು ಹೇಗೆ ಇರಲಿ ಯಾವುದೇ ನಟ ನಟಿಯರ ಚಿತ್ರವಾಗಿರಲಿ ಒಂದು ಬಾರಿ ನೋಡಬೇಕಂಬ ಮನಸ್ಸಿನಿಂದ ನೋಡುತ್ತಿದ್ದಾರೆ. ಇದರೊಂದಿಗೆ ಇನ್ನೊಂದು ಪ್ರಮುಖವಾಗಿ ಗಮನಿಸಬೇಕಾದ ಅಂಶಗಳೆಂದರೆ, ರಾಜ್ಯದ ಜಿಲ್ಲೆಗಳಲ್ಲಿ ಮತ್ತು ಬೆಂಗಳೂರು ನಗರದಲ್ಲಿ ಉತ್ತಮ ಚಿತ್ರ ಮಂದಿರಗಳಲ್ಲಿ ಕನ್ನಡ ಚಿತ್ರಗಳು ಬಿಡುಗಡೆಯಾಗುವಂತೆ ನೋಡಿಕೊಳ್ಳಲಿ. ಚಿತ್ರ ಮಂದಿರದ ವಾತಾವರಣವೂ ಚೆನ್ನಾಗಿರಲಿ. ಪರ ರಾಜ್ಯದ ಮತ್ತು ಅನ್ಯ ಭಾಷೆಯ ಚಲನ ಚಿತ್ರಗಳು ಡಬ್ಬಿಂಗ್ ಇಲ್ಲದೇ ನಮ್ಮ ರಾಜ್ಯದಲ್ಲಿ ಬಿಡುಗಡೆಯಾಗುವುದು ಬೇಡ. ಅದೇ ರೀತಿ ನಮ್ಮ ಕನ್ನಡ ಚಿತ್ರಗಳು ಡಬ್ಬೀಗ್ ಮಾಡಿ ಆಯಾ ರಾಜ್ಯದ ಭಾಷೆಗೆ ಬಿಡುಗಡೆ ಮಾಡಲು ಕ್ರಮ ತೆಗೆದುಕೊಳ್ಳುವುದು ಸೂಕ್ತ.
ಡಬ್ಬಿಂಗ್ ಬೇಡ ಎನ್ನುವ ವಾದದ ಹಿಂದೆ, “ಕನ್ನಡದ ಚಿತ್ರಗಳು ಕಳಪೆ” ಎನ್ನುವ ಕೀಳರಿಮೆಯ ಭಾವನೆ ಕಾಣಿಸುತ್ತದೆ.
ಕನ್ನಡದ ಚಿತ್ರಗಳು ಉತ್ತಮವಾಗಿದ್ದರೆ, ಡಬ್ಬಿಂಗ್ ಆದ ಚಿತ್ರಗಳನ್ನು ಯಾರು ವೀಕ್ಷಿಸುತ್ತಾರೆ?
ಉತ್ತಮವಾದದ್ದನ್ನು ಜನರು ಆಯ್ದುಕೊಳ್ಳುತ್ತಾರೆ. ನಾವು ಡಬ್ಬಿಂಗ್ ವಿರೋಧಿಸಿದರೂ, ಉತ್ತಮವಾದ ಚಿತ್ರಗಳನ್ನು ಜನರು ವೀಕ್ಷಿಸುತ್ತಾರೆ.
ಅದು “ತ್ರೀ ಈಡಿಯಟ್ಸ್” ಇರಬಹುದು, ಅಥವಾ “ಟೈಟಾನಿಕ್” ಇರಬಹುದು – ಜನರಿಗೆ ಉತ್ತಮ ಚಿತ್ರ ನೋಡುವ ಹಂಬಲವಿರುತ್ತದೆ, ಅದನ್ನು ಯಾರೂ ಬದಲಾಯಿಸಲಾಗದು. ಆ ಚಿತ್ರಗಳು ನಮ್ಮ ಭಾಷೆಯಲ್ಲಿ ಬರದಿದ್ದರೆ, ಅವರು ಹಿಂದಿಯನ್ನೋ ಇಲ್ಲವೇ ಇಂಗ್ಲಿಷನ್ನೋ ಕಲಿಯುವಂತೆ ನಾವೇ ಒತ್ತಾಯಿಸಿದಂತಾಗುತ್ತದೆ. ಹೀಗೆ ಮಾಡುವುದರಿಂದ ಕನ್ನಡಕ್ಕೇನು ಲಾಭ!?
ಇದೂ ಒಂದು ರೀತಿಯ ಮಡಿವಂತಿಕೆಯೇ. “ನಮ್ಮ ದೇವಸ್ಥಾನದಲ್ಲಿ ಅನ್ಯರಿಗೆ ಪ್ರವೇಶವಿಲ್ಲ; ಅನ್ಯರು ಬಂದರೆ, ನಮ್ಮ ದೇವಸ್ಥಾನ/ದೇವರು ಅಪವಿತ್ರವಾಗಿಬಿಡುತ್ತದೆ” ಎನ್ನುವಂತಹ ವಾದವಿದು. ಕನ್ನಡ ಚಿತ್ರೋದ್ಯಮ ಅಷ್ಟೊಂದು ದುರ್ಬಲವೇ? ಡಬ್ಬಿಂಗ್ ಚಿತ್ರಗಳು ಬಂದರೆ ಕನ್ನಡ ಚಿತ್ರೋದ್ಯಮವೇ ಹಾಳಾಗಿಬಿಡುತ್ತದೆಯೇ? ಡಬ್ಬಿಂಗ್ ಅನ್ನು ಸಮರ್ಥವಾಗಿ ಎದುರಿಸಲು, ಕನ್ನಡದಲ್ಲಿ ಅತ್ಯುತ್ತಮ ಚಿತ್ರಗಳನ್ನು ನಿರ್ಮಿಸುವ ಆತ್ಮವಿಶ್ವಾಸವೇ ಉಡುಗಿ ಹೋಗಿದೆಯೇ!?
ಡಬ್ಬಿಂಗ್ ಬಂದರೆ ಕನ್ನಡ ಚಿತ್ರೋದ್ಯಮವನ್ನೇ ದಿನನಿತ್ಯದ ಅನ್ನಕ್ಕೆ ಅವಲಂಬಿಸಿರುವ ಸಹಸ್ರಾರು ಕಾರ್ಮಿಕರ ಹೊಟ್ಟೆಗೆ ಏಟು ಬೀಳುತ್ತದೆ. ಡಬ್ಬಿಂಗ್ ಬೇಕು ಅನ್ನುವ ಸಾಫ್ಟ್ವೇರ್ ಕೂಲಿಗಳು ಈ ಅಸಹಾಯಕ ಕಾಯಕ ಯೋಗಿಗಳಿಗೆ ಪರ್ಯಾಯ ಉದ್ಯೋಗದ ವ್ಯವಸ್ಥೆ ಮಾಡಿಯಾರೆ?
ಉತ್ತರ ಕನ್ನಡ ಜಿಲ್ಲೆಯಾದ್ಯಂತ ಹನ್ನೊಂದು ವೃತ್ತಿಪರ ಯಕ್ಷಗಾನ ಮೇಳಗಳಿದ್ದವು. ಸಿನಿಮಾ , ಕಿರುತೆರೆಗಳ ಹಾವಳಿಯಿಂದ ಈಗ ಒಂದೂ ಇಲ್ಲ. ಅಸಹಾಯಕ ಯಕ್ಷಗಾನ ಕಲಾವಿದರು ಮತ್ತು ಕಾರ್ಮಿಕರಿಗೆ ಪರ್ಯಾಯ ಉದ್ಯೋಗಗಳನ್ನು ಯಾರು ಮಾಡಿಕೊಟ್ಟರು? ಅಸಹಾಯಕ ಯಕ್ಷಗಾನ ಕಲಾವಿದರ ಸಲುವಾಗಿ ನಮ್ಮ ಭಾಗದಲ್ಲಿ ಸಿನಿಮಾ , ಕಿರುತೆರೆಗಳನ್ನೂ ನಿಷೇಧಿಸಬೇಕು.
Nagshetty Shetkar
೧. ಕಂಪ್ಯೂಟರ್ ಬಂದು, ಟೈಪ್ ರೈಟರ್ಗಳನ್ನೂ ಇಟ್ಟು ಕೊಂಡು ಕೋರ್ಟು, ಕಛೇರಿಗಳ ಮುಂದೆ ದುಡಿಮೆಮಾಡುತ್ತಿದ್ದವರು ಕೆಲಸಗಳನ್ನು ಕಳೆದು ಕೊಂಡರು.
೨. ಟಿವಿ ಬಂದು ನಾಟಕ, ಬಯಲಾಟಗಳ ಕಲಾವಿದರಿಗೆ ಕೆಲಸ ಕಡಿಮೆಯಾಗಿದೆ
೩. ಜಗತ್ತಿನಾದ್ಯಂತ ಇಂಟರ್ನೆಟ್ ಇಂದ ಅಚ್ಚು ಆಗುತ್ತಿದ ಪುಸ್ತಕ, ಪತ್ರಿಕೆಗಳ ಸಂಖ್ಯೆ ಕಡಮೆಯಾಗಿ, ಮುದ್ರಣ ಉದ್ಯಮವೇ ಕಷ್ಟವನ್ನು ಅನುಭವಿಸುತ್ತಿದೆ.
ಸಿನಿಮ ಮಂದಿ ಏನು ಬಡವರಲ್ಲ. ನಿರ್ಮಾಪಕರು, ನಟರು ಕೋಟಿಕೋಟಿ ಲಾಭವನ್ನು ಮಾಡಿ, ಇತರೆ ಕಾರ್ಮಿಕರಿಗೆ ಎರಡು ಕಾಸುಕೊಡುವ ಉದ್ಯಮ.
ಸಿನಿಮಾಗಳು ಇಲ್ಲದೆ ಕನ್ನಡ ಭಾಷೆಗೆ ೨ ಸಾವಿರವರುಷಗಳ ಸಾಹಿತ್ಯ ಪರಂಪರೆ ಇದೆ.
ಆ ಮಹತ್ತಿನ ಸಾಹಿತ್ಯ, ಸಂಗೀತ ಹಾಗು ಕಲೆಗೆ ಮಾರಕವಾದ ಸಿನಿಮ ಸರ್ವನಾಶವಾಗಲಿ!
ಕನ್ನಡ ಸಂಸ್ಕೃತಿಯೆಂದರೆ ಮಚ್ಚು-ಕೊಚ್ಚು ಇಲ್ಲವೇ “ಜಿಯ ತೇರಿ, ಜಿಯ ಮೇರಿ” ಎಂಬ ಹಾಡುಗಳಲ್ಲ!
ಮಾಯಸ ಅವರಿಗೆ —
ನಿಮ್ಮ ವಾದವನ್ನೇ ಮುಂದುವರಿಸಿದರೆ ಕರ್ನಾಟಕದಲ್ಲಿ ಕನ್ನಡಿಗರಿಗೇ ಉದ್ಯೋಗ ಸಿಗುವಂತಿರಬೇಕು ಎಂಬ ಸರೋಜಿನಿಮಹಿಷಿಯವರ ವರದಿಯನ್ನೂ ನಿರಾಕರಿಸಬಹುದು. ಅರ್ಹತೆ ಇದ್ದರೆ ಕನ್ನಡಿಗರಿಗೆ ಅಮೇರಿಕಾದಲ್ಲೂ ಕೆಲಸ ಸಿಗುತ್ತದೆ. ಕೇವಲ ಕರ್ನಾಟಕದಲ್ಲೇ ಕೆಲಸ ಬೇಕು ಎಂಬ ಸಂಕುಚಿತ ಮನೋಭಾವನೆ ಏಕೆ ಎಂದೂ ವಾದಿಸಬಹುದು. ಇಂದು ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ನಗರಗಳಲ್ಲಿ ಕನ್ನಡ ಉಸಿರಾಡುತ್ತಿರುವುದು ಕನ್ನಡ ಪರ ಸಂಘಟನೆಗಳು ಮತ್ತು ಕೊನೆಯ ಪಕ್ಷ ಕನ್ನಡ ಸಿನಿಮಾಗಳ ಹೆಸರಿನಲ್ಲಾದರೂ ಒಂದುಗೂಡುತ್ತಿರುವ ಕನ್ನಡಿಗರಿಂದ. ಕೇವಲ ಕನ್ನಡ ಸಾಹಿತ್ಯ,ಸಂಗೀತ,ನಾಟಕಗಳಿಂದ ಅಲ್ಲ. ಅಕಾಡೆಮಿ,ಪರಿಷತ್ತು,ಪ್ರಾಧಿಕಾರಗಳಂತಹ ಬಿಳಿ ಆನೆಗಳಿಂದ ಅಲ್ಲ. ಭಾಷೆ ಬೆಳೆಯುವದಕ್ಕೂ ಮತ್ತು ಆ ಭಾಷೆ ತನ್ನ ತಾಯ್ನಾಡಿನಿಂದಲೇ ಮರೆಯಾಗದಂತೆ ಉಳಿಸಿ ಬೆಳೆಸುವ ಸಂಘಟನೆಯ ಕೆಲಸಕ್ಕೂ ವ್ಯತ್ಯಾಸವಿದೆ. ಇನ್ನು ಕನ್ನಡ ಸಿನಿಮಾಗಳ ಮಾರುಕಟ್ಟೆ ಮತ್ತು ಹಿಂದಿ,ತೆಲುಗು ಮತ್ತು ತಮಿಳು ಸಿನಿಮಾಗಳ ಮಾರುಕಟ್ಟೆಗಳಿಗೆ ಇರುವ ಅಗಾಧ ವ್ಯತ್ಯಾಸದ ಬಗ್ಗೆ ಈಗಾಗಲೇ ನಿಲುಮೆಯಲ್ಲಿ ಬಂದ ಡಬ್ಬಿಂಗ್ ಪರ ಇರುವ ಹಿಂದಿನ ಲೇಖನಗಳಲ್ಲಿ ಸಾಕಷ್ಟು ಚರ್ಚೆ ಆಗಿದೆ ಬಿಡುವಾದಾಗ ನೋಡಿ.
ಸರೋಜಿನಿ ಮಹಿಷಿ ವರದಿ ಸಂವಿಧಾನಕ್ಕೆ ವಿರುದ್ಧವಾಗಿದ್ದು ಅದನ್ನು, ಆ ಕಾರಣದಿಂದಲೇ ಜಾರಿಗೊಳಿಸಲು ಆಗುತ್ತಿಲ್ಲ. ನಿಮಗಿದು ಗೊತ್ತಿಲ್ಲ ಅನ್ನಿಸುತ್ತೆ!
ಮಿಕ್ಕ ವಾದಗಳು ಬೊಗಳೆ!
ಕನ್ನಡದ ನಾಯಕ ನಟರಿಗೆ ಮೊದಲು ನೆಟ್ಟಗೆ ಕನ್ನಡ ಭಾಷೆಯ ಉಚ್ಚಾರಣೆ ಕಲಿಸಿ, ಕನ್ನಡ ಬಾರದ ನಟಿಮಣಿಗಳ ಆಮದು ತಡೆಯಿರಿ, frame frame ಬಟ್ಟಿ ಇಳಿಸಿದ ರಿಮೇಕ್ ನಿಲ್ಲಿಸಿ, ತಪ್ಪುತಪ್ಪು ಕನ್ನಡದಲ್ಲಿ ಹಾಡುವ ಅಕನ್ನಡ ಗಾಯಕರನ್ನು ತೊಲಗಿಸಿ, ಆಮೇಲೆ ನಿಮ್ಮ ಮಾತಿಗೆ ಒಂದು ಬೆಲೆ.
ಸೋನು ನಿಮಗಮ್ ಬಾಯಲ್ಲಿ ಕನ್ನಡದ “ಎರಡು” “ಯರಡು” , “ಒಲವು” “ವಲವು” ಆದರೂ ತಮಗೆ ಚಿಂತೆಯಿಲ್ಲ!
ಶ್ರೀರಂಗ ಅವರೇ,
ನೀವು ಹೇಳುತ್ತಿರುವುದು ನನಗೆ ಅರ್ಥವಾಗುತ್ತಿಲ್ಲ. ಡಬ್ಬಿಂಗ್^ನಿಂದ ಕನ್ನಡಕ್ಕೆ ಯಾವ ರೀತಿ ತೊಂದರೆಯಾಗುತ್ತದೆ ಎನ್ನುವುದು ನನಗಿನ್ನೂ ಮನವರಿಕೆಯಾಗಿಲ್ಲ.
ಒಂದು ಉದಾಹರಣೆ ತೆಗೆದುಕೊಂಡು ಇದನ್ನು ಚರ್ಚಿಸೋಣ.
ನೆನ್ನೆ ನಾನೊಂದು ಆಂಗ್ಲ ಭಾಷೆಯ ಚಿತ್ರವನ್ನು ನೋಡಿದೆ. ಅದರ ಹೆಸರು: “Gods Must be crazy”
ಅದೊಂದು ಬಹಳ ಉತ್ತಮವಾದ ಚಲನಚಿತ್ರ. ಅದು ಕನ್ನಡದಲ್ಲಿ ಚಿತ್ರೀಕರಣಗೊಳ್ಳುತ್ತದೆ ಎನ್ನುವ ಭರವಸೆ ನನಗಿಲ್ಲ.
ಈಗ ಕನ್ನಡಿಗರು ಆ ಚಿತ್ರವನ್ನು ಹೇಗೆ ನೋಡಬೇಕು? ಎಲ್ಲಾ ಕನ್ನಡಿಗರೂ ಆಂಗ್ಲ ಭಾಷೆ ಕಲಿಯಲು ಸಾಧ್ಯವೇ?
ಅದನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿದರು ಎಂದಿಟ್ಟುಕೊಳ್ಳೋಣ. ಆಗ ಕನ್ನಡಿಗರಿಗೂ ಒಂದು ಉತ್ತಮ ಚಿತ್ರ ನೋಡುವ ಅವಕಾಶ ಸಿಗುತ್ತದೆ. ಇದರಿಂದ ಕನ್ನಡಕ್ಕಾಗಲೀ, ಕನ್ನಡಿಗರಿಗಾಗಲೀ ಹೇಗೆ ತೊಂದರೆಯಾಗುತ್ತದೆ?
ssnk ಅವರಿಗೆ — ಕನ್ನಡ ಸಿನಿಮಾಗಳಿಲ್ಲದೆ ಇರುವಾಗಲೂ ಕನ್ನಡದ ಸಾಹಿತ್ಯ , ಕನ್ನಡ ನಾಡು ನುಡಿಯ ಅಭಿವೃದ್ಧಿ ಆಗಿದೆ. ಈ ಅಂಶವನ್ನು ಈಗಾಗಲೇ ನಿಲುಮೆಯ ಓದುಗರೊಬ್ಬರು ಹೇಳಿದ್ದಾರೆ ಆದ್ದರಿಂದ ಅದರ ಬಗ್ಗೆ ಪುನಃ ವಿಸ್ತರಿಸಿ ಹೇಳುವ ಅಗತ್ಯವಿಲ್ಲ. ಆದರೆ ಒಂದೆರೆಡು ಅಂಶಗಳನ್ನು ನಾವು ಮರೆಯಬಾರದು. ಈಗ ಕಾಲ ಬದಲಾಗಿದೆ. ಕನ್ನಡ ಭಾಷೆಗೆ ನಾನಾ ಕಡೆಗಳಿಂದ, ನಾನಾ ಕಾರಣಗಳಿಂದ ,ನಾನಾ ರೀತಿಯಿಂದ ಕಂಟಕ ಒದಗಿ ಬರುತ್ತಿದೆ. ನಮ್ಮನ್ನಾಳುವ ಸರ್ಕಾರಗಳ ರಾಜಕೀಯ ಇಚ್ಚಾ ಶಕ್ತಿಯ ಕೊರತೆಯಿಂದ ಕನ್ನಡ ಅಧಿಕೃತವಾಗಿ ಕರ್ನಾಟಕದ ಸರ್ಕಾರದ ಆಡಳಿತ ಭಾಷೆಯಾಗಿದ್ದರೂ ಅದು ನಾಮ್ ಕೆ ವಾಸ್ತೆ ಎಂಬಂತಾಗಿದೆ. ಪ್ರತಿ ವರ್ಷ ನವಂಬರ್ ತಿಂಗಳಲ್ಲಿ ಮಾತ್ರ ಸರ್ಕಾರಕ್ಕೆ ಕನ್ನಡದ ನೆನಪಾಗುತ್ತದೆ. . ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಕಾವಲು ಸಮಿತಿಗಳನ್ನು ಸರ್ಕಾರವೇ ನೇಮಿಸಿರುವುದು ಇದಕ್ಕೆ ಸಾಕ್ಷಿ. ಕನ್ನಡ ಭಾಷೆ ಎಷ್ಟರಮಟ್ಟಿಗೆ ಕರ್ನಾಟಕದಲ್ಲಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಛೇರಿಗಳಲ್ಲಿ,ಇತರ ಸಂಸ್ಥೆಗಳಲ್ಲಿ ಅನುಷ್ಠಾನಕ್ಕೆ ಬಂದಿದೆ ಎಂಬ ವರದಿಯನ್ನು ಸರ್ಕಾರ ತರಿಸಿಕೊಳ್ಳುತ್ತದೆ ಮತ್ತು ಆ ನಂತರ ಮರೆಯುತ್ತದೆ !!. ಇನ್ನು ಕನ್ನಡ ಚಿತ್ರೋದ್ಯಮ ಕನ್ನಡ ಸಿನಿಮಾ ನಿರ್ಮಾಪಕರು ಮತ್ತು ಪ್ರೇಕ್ಷಕರಿಂದಲೇ ಬೆಳೆಯಬೇಕು. ಕಾರಣ ಸೀಮಿತ ಮಾರುಕಟ್ಟೆ. ಈ ಬಗ್ಗೆ ಸಾಕಷ್ಟು ಬಾರಿ ಓದುಗರು ನಿಲುಮೆಯಲ್ಲಿ ಚರ್ಚಿಸಿದ್ದಾರೆ. ಅದನ್ನು ಪುನರಾವರ್ತನೆ ಮಾಡುವ ಅಗತ್ಯವಿಲ್ಲ. . gods must be crazy ಒಳ್ಳೆಯ ಸಿನಿಮಾ ಇರಬಹುದು. ಆದರೆ ಅಂತಹವು ಎಷ್ಟಿರಬಹುದು?. ಈ ಬಗ್ಗೆ ನಾನು ಈ ದಿನ ವಿವರವಾಗಿ ಪ್ರತಿಕ್ರಿಯಿಸಿದ್ದೇನೆ ನೋಡಿ. ಎಫ್ ಡಿ ಐ (ಫಾರಿನ್ ಡೈರೆಕ್ಟ್ ಇನ್ವೆಸ್ಟ್ಮೆಂಟ್) ನಿಂದ ನಮ್ಮ ಕಿರಾಣಿ ಅಂಗಡಿಗಳಿಗೆ ಆಗುವ ತೊಂದೆರೆಯೇ ಡಬ್ಬಿಂಗ್ ಸಿನಿಮಾಗಳಿಂದ ಕನ್ನಡ ಸಿನಿಮಾಗಳಿಗೆ, ಇಲ್ಲಿಯ ನಟ ನಟಿಯರಿಗೆ ಮತ್ತು ಸಿನಿಮಾ ರಂಗದ ಇತರರಿಗೆ ಆಗುತ್ತದೆ. ಕಿರಾಣಿ ಅಂಗಡಿಯಲ್ಲಿ ನಾನು ನೀವು ಎರಡು ಮೂರು ರೂಪಾಯಿಗಳಿಗೆ ಚೌಕಾಸಿ ಮಾಡಿ ಕೊತ್ತಂಬರಿ ಸೊಪ್ಪು,ಹಸಿ ಮೆಣಸಿನಕಾಯಿ, ಕರಿಬೇವಿನ ಸೊಪ್ಪು ತರಬಹುದು. Wall Mart ನ ಅಂಗಡಿಗಳಲ್ಲಿ ಆ ರೀತಿ ತರಲಾಗುತ್ತದೆಯೆ? ಡಬ್ಬಿಂಗ್ ಪರ ವಾದಿಸುವವರ ಮುಖ್ಯ ಅಂಶಗಳು (೧) ಇತ್ತೀಚಿಗೆ ಕನ್ನಡದ ಎಲ್ಲಾ ಸಿನಿಮಾಗಳು ಕೆಟ್ಟು ಕೆರ ಹಿಡಿದು ಹೋಗಿದೆ (೨) ಡಬ್ಬಿಂಗ್ ಗೆ ವಿರೋಧ ಬಂದಿರುವುದು ಕನ್ನಡ ಸಿನಿಮಾರಂಗದ ಒಂದೆರೆಡು big house ಮತ್ತು big boss ಗಳ ಸ್ವಂತ ಹಿತಾಸಕ್ತಿ ಅಷ್ಟೇ. ಆದರೆ ಇವೆರೆಡೂ ಅರ್ಧ ಸತ್ಯಗಳು. ಡಬ್ಬಿಂಗ್ ವಿರೋಧಿಗಳನ್ನು ಭಯೋತ್ಪಾದಕರು ಮೂಲಭೂತವಾದಿಗಳು ಎಂಬಂತೆ ಈಗ ಕಾಣುತ್ತಿದ್ದಾರೆ.
+1
ಮಾಯಸ ಅವರಿಗೆ — ಸರೋಜಿನಿ ಮಾಹಿಷಿ ಅವರ ವರದಿ ಸಂವಿಧಾನ ವಿರೋಧಿ ಎಂದು ತಮ್ಮ ಅಭಿಪ್ರಾಯವಾದರೆ ಭಾರತದ ಕೇಂದ್ರ ಸರ್ಕಾರ ಮತ್ತು ಇತರ ರಾಜ್ಯ ಸರ್ಕಾರಗಳು ಕಾಲಾನುಕಾಲಕ್ಕೆ ವೋಟಿಗಾಗಿ ತರುತ್ತಿರುವ ಯೋಜನೆಗಳು,ಮಾಡುತ್ತಿರುವ ಕಾನೂನುಗಳೆಲ್ಲವೂ ಸಂವಿಧಾನ ಬದ್ಧವೆ? ಲೋಕಸಭೆಯಲ್ಲಿ ಒಂದು ತಿದ್ದುಪಡಿಗೆ ಹೆಚ್ಚು ಮತ ಬಿದ್ದರೆ ಅದೇ ಒಂದು ಕಾನೂನಾಗುತ್ತದೆ. ಇಲ್ಲವಾದರೆ ಇದುವರೆಗೆ ಸುಮಾರು ಎಂಬ್ಬತ್ತರಷ್ಟು ತಿದ್ದುಪಡಿಗಳು ಸಂವಿಧಾನಕ್ಕೆ ಹೇಗೆ ಆಗುತ್ತಿದ್ದವು? ನಮ್ಮದು ಜಾತ್ಯಾತೀತ ಮತ್ತು ಧರ್ಮಾತೀತ ಸರ್ಕಾರವೆಂದು ಹೆಮ್ಮೆ ಪಡುವ ಅದರ ನಾಯಕರು ಅಲ್ಪ ಸಂಖ್ಯಾತ ಮತ್ತು ಬಹು ಸಂಖ್ಯಾತ ಇತ್ಯಾದಿಗಳ ಹೆಸರಿನಲ್ಲಿ ಮಾಡುತ್ತಿರುವ ವೋಟ್ ಬ್ಯಾಂಕ್ ಆಧಾರಿತ ಕಾನೂನುಗಳೆಲ್ಲ ಸಂವಿಧಾನ ಪರವಾಗಿದೆಯೆ? ಇನ್ನು ನನ್ನ ಇತರೆ ಮಾತುಗಳು ಬೊಗಳೆ ಎಂದು ತಾವು ಭಾವಿಸಿದ್ದರಿಂದ ನನಗೇನು ಬೇಸರವಿಲ್ಲ. ಆದರೆ ಈಗ್ಗೆ ಮೂರ್ನಾಲಕ್ಕು ದಿನಗಳ ಹಿಂದೆ ಬೆಳಗಾವಿಯಲ್ಲಿ ಎಂ ಇ ಎಸ್ ನ ರಾಜಕಾರಣಿಯೊಬ್ಬರ ವರ್ತನೆಗೆ ಮೊದಲು ವಿರೋಧ ವ್ಯಕ್ತವಾದದ್ದು ಕನ್ನಡ ಪರ ಸಂಘಟನೆಗಳಿಂದ. ಸಾಹಿತ್ಯ ರತ್ನಗಳಿಂದ ಅಲ್ಲ ಮತ್ತು ಸಂವಿಧಾನ ಬದ್ಧವಾಗಿ ಯೋಚಿಸುವ ವಿಶಾಲ ಹೃದಯಿಗಳಿಂದ ಅಲ್ಲ,ರಾಜಕಾರಣಿಗಳಿಂದ ಅಲ್ಲ. ಎಂ ಇ ಎಸ್ ವಿರುದ್ಧ ಮಾತಾಡಲು ನಮ್ಮ ರಾಜಕೀಯ ಪಕ್ಷಗಳಿಗೆ ಆಗದೆ ಇರುವುದು ಏಕೆಂದರೆ ಎಲ್ಲಿ ತಮಗೆ ಆ ಪಕ್ಷದ ಬೆಂಬಲ ತಪ್ಪಿ ಹೋಗುತ್ತದೆಯೋ ಎಂಬ ಭಯ. ಮಹಾಜನ್ ವರದಿಯ ಪ್ರಕಾರ ಬೆಳಗಾವಿ ಮತ್ತು ಕಾಸರಗೋಡು ಮುಗಿದ ಅಧ್ಯಾಯಗಳು. ಆದರೆ ಕಾಸರಗೋಡಿನ ಬಗ್ಗೆ ಕನ್ನಡಿಗರು ಸುಮ್ಮನಿರುವಾಗ ಬೆಳಗಾವಿಯ ಬಗ್ಗೆ ಮಾತ್ರ ಏಕೆ ಇನ್ನೂ ತಕರಾರು? ಈ ಹಿಂದೆ ಒಂದು ಪ್ರತಿಕ್ರಿಯೆಯಲ್ಲಿ ನಾನು ಹೇಳಿದ ಹಾಗೆ ತಮಿಳುನಾಡು ಸರ್ಕಾರ ಹಿಂದಿಯನ್ನು ಪೂರ್ತಿ ಕೈ ಬಿಟ್ಟು ದ್ವಿಭಾಷಾ ಸೂತ್ರ ತಂದು ಎಷ್ಟೋ ದಶಕಗಳಾದವು. ಆದರೆ ಬೆಂಗಳೂರಿನಲ್ಲಿರುವ ಕೇಂದ್ರೀಯ ಶಾಲೆಗಳಲ್ಲಿ ಓದುತ್ತಿರುವ ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿರುವ ಕನ್ನಡಿಗರ ಮಕ್ಕಳಿಗೆ ಆ ಶಾಲೆಗಳಲ್ಲಿ ಕನ್ನಡ ಕಲಿಯುವ ಅವಕಾಶ ಎಷ್ಟರಮಟ್ಟಿಗೆ ಇರಬಹುದು. ಒಮ್ಮೆ ಯೋಚಿಸಿ. ತಾವು ಮತ್ತು ತಮ್ಮಂತೆ ಡಬ್ಬಿಂಗ್ ಪರವಾಗಿ ವಾದಿಸುವವರೆಲ್ಲರೂ ಹಿಂದಿಯಲ್ಲಿ three idiots ತರಹದ ಉತ್ತಮ ಸಿನಿಮಾಗಳೇ ಬರುತ್ತಿವೆ ಎಂದು ಭಾವಿಸಿದ್ದೀರೆಂದು ಕಾಣುತ್ತದೆ. ಹಿಂದಿಯಲ್ಲಿಯೂ ಎಂಥ “ಲಡಕಾಸಿ” ಸಿನಿಮಾಗಳು ಇವೆ ಎಂಬುದನ್ನು ತಿಳಿಯ ಬೇಕಾದರೆ ಮತ್ತು ನೋಡಬೇಕಾದರೆ ಡಿ ಡಿ -೧ (D D -೧)ರಲ್ಲಿ ಪ್ರತಿ ಸೋಮವಾರದಿಂದ ಬುಧವಾರದ ತನಕ ರಾತ್ರಿ ಹನ್ನೊಂದು ಗಂಟೆಯಿಂದ ಹನ್ನೆರೆಡು ಗಂಟೆಗಳ ತನಕ (ಮೂರು ಭಾಗಗಳಲ್ಲಿ) , ಪ್ರತಿ ಶನಿವಾರ ರಾತ್ರಿ ೯-೩೦ ಮತ್ತು ಭಾನುವಾರ ಮಧ್ಯಾನ ೧೨ ಗಂಟೆಯಿಂದ ಬರುವ ಸಿನಿಮಾಗಳನ್ನು ಒಂದು ತಿಂಗಳುಗಳ ಕಾಲ ನೋಡಿ ಸಾಕು ನಿಮಗೇ ತಿಳಿಯುತ್ತದೆ. ನಾವು ಕರ್ನಾಟಕದ ಸಿನಿಮಾ ಮಂದಿರಗಳಲ್ಲಿ ನೋಡುತ್ತಿರುವುದು ಹಿಂದಿಯಲ್ಲಿ ಸೂಪರ್ ಹಿಟ್ ಆದ ಸಿನಿಮಾಗಳನ್ನು ಮಾತ್ರ. ಇದು ತೆಲುಗು ತಮಿಳು ಮತ್ತು ಇಂಗ್ಲಿಷ್ ಭಾಷೆಯ ಸಿನಿಮಾಗಳಿಗೂ ಅನ್ವಯವಾಗುತ್ತದೆ. ಇನ್ನು ಸೋನು ನಿಗಮ್ ಮತ್ತು ಕನ್ನಡ ನಟರ ಕನ್ನಡದ ಪದಗಳ ಭಾಷೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದೀರಿ. ಚಲನಚಿತ್ರಗಳಲ್ಲಿ ನಟಿಸುವ ನಟ ನಟಿಯರು ಮತ್ತು ಹಾಡು ಹೇಳುವ ಗಾಯಕರು ಕನ್ನಡ ಪಂಡಿತರೂ ಆಗಿರಬೇಕೆಂದು ಹೇಳುವುದು ಮೊಂಡು ವಾದ ಆಗಬಹುದಷ್ಟೇ. ಆದರೆ ಇಂದಿನ ಅತ್ಯಾಧುನಿಕ ತಂತ್ರಜ್ಞಾನದ ಕಾಲದಲ್ಲಿ ಆ ತಪ್ಪುಗಳನ್ನು ಸರಿಪಡಿಸಿ ನಂತರ ಸಿನಿಮಾ ಬಿಡುಗಡೆ ಮಾಡಬೇಕು. ಮಾಡದೇ ಇರುವುದು ನಿರ್ದೇಶಕನ ತಪ್ಪು.ಆತನ ತಪ್ಪಿಗೆ ಕ್ಷಮೆ ಇಲ್ಲ. ಇನ್ನು ನಟ ನಟಿಯರ hole sale ಆಮದು ತಪ್ಪು. ಅದರಿಂದ ಕನ್ನಡದ ಪ್ರತಿಭೆಗಳು ಮುರುಟಿಹೋಗುತ್ತವೆ. ಅದಕ್ಕೆ ಒತ್ತಡ ಹಾಕಬಹುದು. ಆದರೆ ಪೂರ್ತಿ ನಿಲ್ಲಿಸುವುದು ಬಹುಶಃ ಸಾಧ್ಯವಾಗಲಾರದೆನೋ?. ಆದರೆ ಇದು ಡಬ್ಬಿಂಗ್ ಪರವಾದ ವಾದಕ್ಕೆ ಸಮರ್ಥ ಕಾರಣವಾಗಲಾರದು. .
“ಸರೋಜಿನಿ ಮಾಹಿಷಿ ಅವರ ವರದಿ ಸಂವಿಧಾನ ವಿರೋಧಿ ಎಂದು ತಮ್ಮ ಅಭಿಪ್ರಾಯವಾದರೆ ಭಾರತದ ಕೇಂದ್ರ ಸರ್ಕಾರ ಮತ್ತು ಇತರ ರಾಜ್ಯ ಸರ್ಕಾರಗಳು ಕಾಲಾನುಕಾಲಕ್ಕೆ ವೋಟಿಗಾಗಿ ತರುತ್ತಿರುವ ಯೋಜನೆಗಳು,ಮಾಡುತ್ತಿರುವ ಕಾನೂನುಗಳೆಲ್ಲವೂ ಸಂವಿಧಾನ ಬದ್ಧವೆ? ”
ಸ್ವಾಮಿ, ಸರೋಜಿನಿ ಮಹಿಷಿ ವರದಿಯ ಅನುಷ್ಠಾನ ಸಂವಿಧಾನವಿರುದ್ಧ!
ಮಿಕ್ಕ ಸಾವಿರಾರು ಯೋಜನೆಗಳ ತಂಟೆ ತಕರಾರು ನಾನು ಇತ್ತ ಪ್ರಸ್ತಾಪಿಸಿಲ್ಲ!
ಭಾರತದಲ್ಲಿ ಸಂವಿಧಾನಕ್ಕೆ ವಿರುದ್ಧವಾದ ಸಕಲ ಯೋಜನೆ, ಕಾನೂನು, ನಡವಳಿಕೆ ಹಾಗು ಇತರೆ ಅಂಶಗಳು ಕರಣೀಯವಲ್ಲ! ಅಂತಹ ಸಂವಿಧಾನಕ್ಕೆ ವಿರುದ್ಧವಾದ ಕ್ರಿಯೆಗಳಲ್ಲಿ “ಸಂಭಾಷಣಾ-ಭಾಷಾಂತರ” (ಡಬ್ಬಿಂಗ್) ಕೂಡ ಒಂದು.
ಪ್ರತಿಯೊಬ್ಬ ಭಾರತೀಯ ಪ್ರಜೆಗೆ ಒಂದು ತುಳು/ತಮಿಳು/ತೆಲುಗು/ಒಡಿಯಾ ಮುಂತಾದ ಯಾವುದೇ ಅಕನ್ನಡ-ಭಾಷೆಯ ಸಿನಿಮಾವನ್ನು ಕನ್ನಡಕ್ಕೆ ಸಂಭಾಷಣಾ-ಭಾಷಾಂತರಗೊಳಿಸಿ ವೀಕ್ಷಿಸುವುದು ಹಾಗು ಪ್ರದರ್ಶಿಸುವುದು ಸಂವಿಧಾನದತ್ತ ಮೂಲಭೂತ ಹಕ್ಕು!
ಅಷ್ಟೇ!
ಮಾಯಸ ಅವರೆ ನಿಮ್ನ ಹೆಸರು ಯಾವ ಭಾಷೆಯದು? ಕುತೂಹಲದಿಂದ ಕೇಳುತ್ತಿದ್ದೇನೆ. ಇಲ್ಲಿಯ ಡಬ್ಬಿಂಗ್ ವಿಚಾರಕ್ಕೂ ನಾನು ಕೇಳುತ್ತಿರುವ ಪ್ರಶ್ನೆಗೂ ಸಂಬಂಧವಿಲ್ಲಾರಿ. ಸುಮ್ಮನೇ ಕುತೂಹಲವಷ್ಟೇ. ಮಾಯಸ ಎಂದರೇನು? ಅಥವಾ ಪೆನ್ ನೇಮ್ ಥರ ಇದು ಕಮೆಂಟ್ ನೇಮ್ ಇರಬಹುದಾ? ಇರಲಿ . ಮಾನ್ಯ ದರ್ಗಾರವರು ವಚನಗಳ ಬಗ್ಗೆ (ಅನ್ನಪೂರ್ಣಾ ಅವರ ಪ್ರಶ್ನೆಗೆ ಇರಬಹುದು) ಉತ್ತರಿಸುತ್ತಾ ನಿಮ್ಮ ಸೋಪಜ್ಣತೆಗೆ ನನಗೆ ಇಷ್ಟವಾಯಿತು ಎನ್ನುತ್ತಾರೆ. ಸೋಪಜ್ನತೆ ಎಂದರೇನು? ತಿಳಿದಿದ್ದರೆ ಉತ್ತರಿಸಿದರೆ ನನಗೆ ಅನುಕೂಲವಾಗುತ್ತದೆ. ನಾನು ನಿಘಂಟುವಿನಲ್ಲಿ ಹುಡುಕಿದೆ ಆದರೆ ಸಿಕ್ಕಿಲ್ಲ. ನಮ್ಮ ಪಕ್ಕದ ಮನೆಯ ಹುಡುಗಿ ಹೆಸರು ಪ್ರಜಕ್ತಾ . ಇದರರ್ಥವೇನು? ಇದನ್ನು ಎಂಡಮೂರಿಯವರ ಒಂದು ಕಾದಂಬರಿಯಲ್ಲಿ ಕೂಡ ಓದಿದ್ದೇನೆ. ನೀವೆ ಉತ್ತರಿಸಬೆಕೆಂದೇನಿಲ್ಲ ನಿಲುಮೆಯ ನನ್ನ ಬೇರೆ ಸ್ನೇಹಿತರೂ ಉತ್ತರಿಸಬಹುದು. ಇದನ್ನು ಸಹ ನಿಘಂಟುವಿನಲ್ಲಿ ಹುಡುಕಿದೆ ಉತ್ತರ ಸಿಗಲಿಲ್ಲ.
ಸೋಪಜ್ಞತೆ ಎಂದು ಓದಿಕೊಳ್ಳಬೇಕಾಗಿ ವಿನಂತಿ.
http://dsalsrv02.uchicago.edu/cgi-bin/philologic/getobject.pl?c.1:1:4058.apte
ಸ + ಉಪಜ್ಞ = ಸೋಪಜ್ಞ = ಉಪಜ್ಞದ ಜೊತೆ
ಸೋಪಜ್ಞತೆ ಪದವನ್ನು ಸಂಸ್ಕೃತಭಾಷೆಯ ನಿಘಂಟಿನಲ್ಲಿ ಹುಡುಕಿ.
ನನ್ನ ಹೆಸರು ‘ಮಾಯ್ಸ’ ಇದರ ಬೇರು “ಮಾಯಿಸ” . ಮಿಕ್ಕಿದ್ದು ಹುಡುಕಿಕೊಳ್ಳಿ!
ದರ್ಗಾ ಸರ್ ಅವರು ಸುಖಾ ಸುಮ್ಮನೆ ಮೆಚ್ಚುಗೆಯ ಮಾತುಗಳನ್ನಾಡುವವರಲ್ಲ. ಅವರ ಮೆಚ್ಚುಗೆಯ ಹಿಂದೆ ಆಳವಾದ ಗ್ರಹಿಕೆ ಹಾಗೂ ಸಂವೇದನೆ ಇರುತ್ತದೆ. ಅದನ್ನು ಗ್ರಹಿಸದ ಅನ್ನಪೂರ್ಣ ಅವರು (ಬಹುಶ ನಿಮ್ಮಲ್ಲೇ ಒಬ್ಬರಿರಬೇಕು ಆ ಹೆಸರಿನಲ್ಲಿ ಕಮೆಂಟು ಮಾಡಿದವರು) ದರ್ಗಾ ಸರ್ ಅವರ ಬಗ್ಗೆ ಕೆಳದರ್ಜೆಯ ಆಪಾದನೆಗಳನ್ನು ಮಾಡಿದರು. ಸ್ವಪೋಜ್ನತೆ ಇಲ್ಲದವರ ತರಹ ವರ್ತಿಸಿದರು.
‘ಸ್ವಪೋಜ್ನತೆ’ ಅಲ್ಲ, ‘ಸ್ವೋಪಜ್ಞತೆ’.
ಶೆಟ್ಕರ್ ಅವರೆ ದರ್ಗಾ ಸರ್ ಹೊಗಳಿದ್ದಾರೆ ಅಥವಾ ತೆಗಳಿದ್ದಾರೆ ಎಂಬ ಕುರಿತು ನಾನು ಪ್ರಶ್ನೆ ಕೇಳಿಯೇ ಇಲ್ಲ. ಅನ್ನಪೂರ್ಣಾ ಯಾರು ಎಂದು ಸಹ ನಾನು ಕೇಳಿಲ್ಲ. ನನ್ನ ಪ್ರಶ್ನೆ ಇರುವದು ಸೋಪಜ್ಞತೆ ಇದರ ಅರ್ಥವೇನು? ನೀವು ಏನೇನೋ ಹೇಳುತ್ತಿದ್ದೀರಿ. ನನ್ನ ಪ್ರಶ್ನೆಗೆ ಉತ್ತರ ಮಾತ್ರ ಕೊಡುವದಿಲ್ಲ. ನೀವು ಯಾವಾಗಲೂ ಹೀಗೆ ಮಾಡುತ್ತೀರಿ.
“ಸೋಪಜ್ಞತೆ ಇದರ ಅರ್ಥವೇನು?”
‘ಸೋಪಜ್ಞತೆ’ ಅಲ್ಲ, ‘ಸ್ವೋಪಜ್ಞತೆ’. ಸ್ವಂತ ವಿಚಾರ ಸ್ವಂತ ಭಾವ ಇರುವವರು ಸ್ವೋಪಜ್ಞರು. ಉದಾಹರಣೆಗೆ ದರ್ಗಾ ಸರ್.
🙂 ..
ಮಾರ್ಮಿಕವಾದ ನಗು ಯಾಕೆ? ದರ್ಗಾ ಸರ್ ಅವರ ಸ್ವೋಪಜ್ಞತೆ ಬಗ್ಗೆ ನಿಮಗೂ ಅನುಮಾನವೇ? ನಿಮ್ಮಂತಹ ಸ್ವಮೋಹಿಗಳಿಗೆ ನಿಮ್ಮನ್ನಲ್ಲದೆ ಯಾರನ್ನೂ ಮೆಚ್ಚುವ ಗುಣವಿಲ್ಲ.
ಆಯ್ತು ನನಗೆ ಸ್ವಮೋಹ .
ತಾವು ಸನ್ಯಾಸಿ! ಯಾವ ಮಠ ನಿಮ್ಮದು? ನಿಮ್ಮಲ್ಲಿ ಅಡ್ಡವೋ ಉದ್ದವೋ ಪಲ್ಲಕ್ಕಿ?
ನಾನು ಶರಣ. ಸಂನ್ಯಾಸಿಗಳು ವೈದಿಕ ಮತದವರು. ಬೋಗಸ್ ಜನ.
“ಸಂನ್ಯಾಸಿಗಳು ವೈದಿಕ ಮತದವರು. ಬೋಗಸ್ ಜನ.”
🙂
ಮಾಯಸ ಅವರಿಗೆ — ಸಂವಿಧಾನದ ಯಾವ ನಿಯಮ ಅಥವಾ ತಿದ್ದುಪಡಿಯ ಮೂಲಕ ಡಬ್ಬಿಂಗ್ ಮೂಲಭೂತವಾದ ಹಕ್ಕು ಎಂದು ತಿಳಿಸಿದರೆ ಅನುಕೂಲವಾಗುತ್ತದೆ.
ವಿಚಾರ ಹಾಗು ಅಭಿವ್ಯಕ್ತಿ ಸ್ವಾತಂತ್ರ್ಯ !
ಸಂಭಾಷಣಾ-ಭಾಷಾಂತರ ಒಂದು ಅಭಿವ್ಯಕ್ತಿ ಹಾಗು ವಿಚಾರಮಾಧ್ಯಮ!
ಉದಾಹರಣೆ:
ನರೇಂದ್ರ ಮೋದಿಯವರಿಗೆ ಕನ್ನಡ ಬರುವುದಿಲ್ಲ. ಅವರ ಭಾಷಣದ ದೃಶ್ಯಾವಳಿಯನ್ನು ಅವರ ಸಂಭಾಷಣೆಯನ್ನು ಕನ್ನಡಕ್ಕೆ ಸಂಭಾಷಣಾಭಾಷಾಂತರಗೊಳಿಸಿ ವೀಕ್ಷಿಸುವ ಹಾಗು ಪ್ರದರ್ಶಿಸುವ ಹಕ್ಕು ಪ್ರತಿಪ್ರಜೆಗೂ ಇದೆ.
ನರೇಂದ್ರ ಮೋದಿಯವರ ವಿಚಾರವನ್ನು ಸಾರುವ ಒಂದು ಕಥಾನಕವನ್ನು ಗುಜರಾತಿಭಾಷೆಯಲ್ಲಿ ಚಿತ್ರೀಕರಿಸಿದ್ದಾರೆ. ಅದು ತುಂಬಾ ಚೆನ್ನಾಗಿದೆ. ಅವರ ಸಂಭಾಷಣೆಯನ್ನು ಕನ್ನಡಕ್ಕೆ ಸಂಭಾಷಣಾಭಾಷಾಂತರಗೊಳಿಸಿ ವೀಕ್ಷಿಸುವ ಹಾಗು ಪ್ರದರ್ಶಿಸುವ ಹಕ್ಕು ಪ್ರತಿಪ್ರಜೆಗೂ ಇದೆ
Maaysa ಅವರಿಗೆ –ತಾವು ಚಲನಚಿತ್ರಗಳಿಂದ ಸಾಕ್ಷ್ಯ ಚಿತ್ರಕ್ಕೆ ನೆಗೆದಿದ್ದೀರಿ (jump) ಡಬ್ಬಿಂಗ್ ಎಂಬ spring boardನ ಸಹಾಯದಿಂದ!!. ಇಪ್ಪತೈದು ಮೂವತ್ತು ವರ್ಷಗಳ ಹಿಂದೆ ಚಿತ್ರ ಮಂದಿರಗಳಲ್ಲಿ ಚಲನ ಚಿತ್ರ ಪ್ರಾರಂಭಕ್ಕೆ ಮುಂಚೆ films division ಎಂಬ ಸರ್ಕಾರಿ ಸಂಸ್ಥೆಯವರು ಹತ್ತು ಹದಿನೈದು ನಿಮಿಷಗಳ ಸಾಕ್ಷ್ಯ ಚಿತ್ರವನ್ನು ಕಡ್ಡಾಯವಾಗಿ ತೋರಿಸಬೇಕಾಗಿತ್ತು. ಅವು ಆಯಾ ರಾಜ್ಯಗಳ ಭಾಷೆಯಲ್ಲಿ voice over ಆಗಿ ಪರಿವರ್ತನೆಯಾಗುತಿತ್ತು. ತಮಗೆ ನೆನಪಿರಬಹುದು.
ನಿಮಗೆ ಅರ್ಥವಾಗಿಲ್ಲ ..
ಎರಡು ಉದಹಾರಣೆಗಳು:
– ಒಂದು ಅನಿರ್ದೇಶಿತ ದೃಶ್ಯಾವಳಿ,
– ಮತ್ತೊಂದು ರಚಿತ, ನಿರ್ದೇಶಿತ, ಕಲಾತ್ಮಕ, ಕಥಾನಕವಾದ ಸಿನಿಮ ಎಂಬ ದೃಶ್ಯಾವಳಿ
ಎರಡೂ ಒಂದೇ ವಿಚಾರದ ಬೇರೆ ಬೇರೆ ಅಭಿವ್ಯಕ್ತಿಗಳು. ಅದರ ಹಕ್ಕು ಸಂವಿಧಾನದತ್ತ ಹಾಗು ಸಂವಿಧಾನದಿಂದ ರಕ್ಷಿತ!
ಡಬ್ಬಿಂಗ್ ಸಂದರ್ಭದಲ್ಲೂ ನಿಮಗೆ ನಮೊನದ್ದೇ ಧ್ಯಾನ! ನಾಚಿಕೆಗೇಡು.
ಇದರಲ್ಲಿ ನಾಚಿಕೆಗೇಡೇನು?
ಗುಜರಾತಿ ಭಾಷಿಕರಲ್ಲಿ ಇಂದು ಅತ್ಯಂತ ಪ್ರಖ್ಯಾತವ್ಯಕ್ತಿ ಅವರು. ಗುಜರಾತಿ ಭಾಷೆಯಲ್ಲಿ ಇರವ ಆತನ ವಿಚಾರಗಳನ್ನು ತಿಳಿಯಲು ಸಂಭಾಷಣಾ-ಭಾಷಾಂತರ ಬೇಕು.
ಹಿಟ್ಲರ್ ಕೂಡ ಅವನ ಕಾಲದಲ್ಲಿ ಬಹಳ ಜನಪ್ರಿಯನೇ ಆಗಿದ್ದ.
ಆಗಲಿ.
ಹಿಟ್ಲರ್ ಭಾಷಣವನ್ನು ಹಾಗು ಅವನು ಪ್ರತಿಪಾದಿಸಿದ ತತ್ವವನ್ನು ಬಣ್ಣಿಸುವ ಸಿನಿಮಾಗಳನ್ನು ಕನ್ನಡಕ್ಕೆ ಸಂಭಾಷಣಾಭಾಷಾಂತರಗಳಿಸಿಸಿ ವೀಕ್ಷಿಸಿಸುವ ಹಾಗು ಪ್ರದರ್ಶಿಸುವ ವಿಚಾರ ಹಾಗು ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇದೆ ಭಾರತದಲ್ಲಿ.
ರಂಜಾನ್ ದರ್ಗಾರವರು ಕೂಡಾ ಈ ಕಾಲದಲ್ಲಿ ಬಹಳ ಜನಪ್ರಿಯರೇ ಆಗಿದ್ದಾರೆ 🙂
ದರ್ಗಾ ಸರ್ ಅವರ ಕನ್ನಡ ಭಾಷಣಗಳ ಧ್ವನಿ ಮುದ್ರಿಕೆಗಳನ್ನು ಗುಜರಾಥಿಗೆ ಡಬ್ ಮಾಡುವ ಯೋಚನೆ ಇದೆಯಾ ನಿಮಗೆ?
ಶೆಟ್ಕರ್ ರವರೇ, ದರ್ಗಾರವರ ಕನ್ನಡ ಭಾಷಣಗಳ ಧ್ವನಿ ಮುದ್ರಿಕೆಗಳನ್ನು ಗುಜರಾಥಿಗೊಂದೇ ಅಲ್ಲ, ಜಗತ್ತಿನ ಎಲ್ಲಾ ಭಾಷೆಗಳಿಗೆ ಡಬ್ ಮಾಡುವ ಯೋಚನೆ ಇದೆ. ಆದರೆ ಜಗತ್ತಿನ ಯಾವುದೇ ಭಾಷಣಕಾರರ ಧ್ವನಿ ಮುದ್ರಿಕೆಗಳನ್ನು ಕನ್ನಡ ಭಾಷೆಗೆ ಡಬ್ ಮಾಡುವುದಿಲ್ಲ. ಏಕೆಂದರೆ ಅದರಿಂದ ದರ್ಗಾವರಿಗೆ ತೊಂದರೆ ಆಗುತ್ತದೆ.
“ದರ್ಗಾರವರ ಕನ್ನಡ ಭಾಷಣಗಳ ಧ್ವನಿ ಮುದ್ರಿಕೆಗಳನ್ನು ಗುಜರಾಥಿಗೊಂದೇ ಅಲ್ಲ, ಜಗತ್ತಿನ ಎಲ್ಲಾ ಭಾಷೆಗಳಿಗೆ ಡಬ್ ಮಾಡುವ ಯೋಚನೆ ಇದೆ.”
ಉತ್ತಮ ಯೋಚನೆ. ಬಹುಬೇಗ ಈ ಕುರಿತು ಕಾರ್ಯೋನ್ಮುಖರಾಗಿ. ದರ್ಗಾ ವಾಣಿ ಎಲ್ಲೆಡೆ ಬಿತ್ತರಿಸಲಿ.
ಸಿನೆಮಾ ಡಬ್ಬಿಂಗ್ ಬೇಡ ಅಂತ ಹೇಳಿದ್ದೇವೆಯೇ ಹೊರತು ಆಡಿಯೋ ವಿಡಿಯೋ ಟೇಪುಗಳ ಡಬ್ಬಿಂಗ್ ಬೇಡ ಅಂತ ಯಾರೂ ಹೇಳಿಲ್ಲ. ಡಬ್ಬಿಂಗ್ ನಿಂದ ಸಿನೆಮವನ್ನೇ ನಂಬಿರುವ ಸಹಸ್ರಾರು ಕಾರ್ಮಿಕರ ಹೊಟ್ಟೆಗೆ ಪೆಟ್ಟು ಬೀಳುತ್ತದೆ. ಸಿನೆಮ ಉದ್ಯೋಗದಲ್ಲಿರುವ ದಿನಗೂಲಿ ಕಾರ್ಮಿಕರು ಬೀದಿ ಪಾಲಾಗುತ್ತಾರೆ.
ಇಲ್ಲ , ಬೇರೆ ಬೇರೆ ಭಾಷೆಗಳ ಉನ್ನತ ವಿಚಾರಗಳುಳ್ಳ ಭಾಷಣಗಳು ಡಬ್ ಆದರೆ ದರ್ಗಾರವರ ಭಾಷಣವನ್ನು ಯಾರು ಕೇಳುತ್ತಾರೆ. ದರ್ಗಾರವರ ಭಾಷಣಗಳನ್ನು ಕೇಳುವವರಿಲ್ಲದೆ ಹೋಗುತ್ತದೆ. ಹಾಗಾಗಿ ಬೇರೆ ಒಳ್ಳೆಯ ವಿಚಾರಗಳನ್ನು ಕನ್ನಡಕ್ಕೆ ಡಬ್ ಮಾಡುವುದಿಲ್ಲ. ಕನ್ನಡ ಸಿನಿಮಾದವರು ಮತ್ತು ದರ್ಗಾರವರ ಮಧ್ಯೆ ಬೇದ ಭಾವ ಮಾಡುವುದು ಸರಿಯಲ್ಲ
ಮೊಸರಲ್ಲೂ ಕಲ್ಲು ಹುಡುಕುವವರು ನೀವೆ ಇರಬೇಕು.
ಅಲ್ಲ .. ಇವರು ಮೊಸರಲ್ಲಿ ತಾವೇ ಕಲ್ಲು ಹಾಕಿ, ಅದನ್ನು ಹುಡುಕಿ ದೂರುವವರು .. ಕಲಹೀ!
ನಿಮ್ಮ ಮಾತು ಸರಿ . ತಾವೇ ಕಲ್ಲು ಹಾಕಿ ನಂತರ ಹುಡುಕಿ ತೋರುವವರು.
ಮಹೇಶ್,
ನೀವು ಸಂಸ್ಕೃತ ವಿಶ್ವವಿದ್ಯಾಲಯ ಬೇಡವೆಂದು ವಾದಿಸಿದರೂ, ಸಂಸ್ಕೃತ ಪದಗಳನ್ನೇ ಹೆಕ್ಕಿ ತೆಗೆದೆಸೆಯುವುದು ಸೋಜಿಗವಾಗಿದೆ! 😉
ಯಾವ ಮಹೇಶ್?
ಸಂಸ್ಕೃತ ವಿಶ್ವವಿದ್ಯಾಲಯ ಬೇಡ ಅಂದರೆ ಸಂಸ್ಕೃತ ಬೇಡ ಅಂದಲ್ಲ!
ಸಂಸ್ಕೃತ ವಿಶ್ವವಿದ್ಯಾಲಯ ಹೆಚ್ಚು ಹೆಚ್ಚು ತೆಗೆದು ಅದರಲ್ಲಿ ಕಾಮ್ಮುನಿಸ್ಟ್ರನ್ನು ಹಾಗು secularistರನ್ನು ತರಬೇತಿ ಕೊಟ್ಟು ದಂಡಿ ದಂಡಿ ‘ಡುಂಡಿ’ ತರಹದ ಪುಸ್ತಕ ಬರೆಸಿ!
ಸಂಸ್ಕೃತ ವಿಶ್ವವಿದ್ಯಾಲಯ ಬೇಡ. ಅದನ್ನು ಗೌರವಿಸುವವರಿಗೆ ಅದನ್ನು ಅಭ್ಯಾಸ ಮಾಡಲು ಬೇಕಾದಷ್ಟು ಜಾಗಗಳಿವೆ
ಈ ಮಾಯ್ಸ ಒಬ್ಬ troll. ಅವನ ತಲೆಹರಟೆ ಕಮೆಂಟುಗಳಿಗೆ ಪ್ರೋತ್ಸಾಹ ಕೊಡಬೇಡಿ ಮಿ. ಶ್ರೀರಂಗ.
ಶ್ರೀರಂಗರೇ,
ದಯವಿಟ್ಟು Nagshetty Shetkar ಮಾತು ಕೇಳಿ. ಅವರ ಸಭ್ಯವಚನಗಳು ತುಂಬಾ ಸುಸಂಸ್ಕೃತ!
ಬಸವಣ್ಣ, ಅಲ್ಲಮ ಆದಿಯಾಗಿ ಘನ ಶರಣ ಪರಂಪರೆಯ ಕುಲುಮೆಯಲ್ಲಿ ಶುದ್ಧಗೊಂಡ ವ್ಯಕ್ತಿತ್ವ ನನ್ನದು.
ಬಸವಣ್ಣ ಹಾಗು ಅಲ್ಲಮ ಆದಿಯ ಪರಂಪರೆ ಏನು ?
ಅದರಲ್ಲಿ ಶುದ್ಧಗೊಳ್ಳುವುದು ಎಂದರೇನು? ಮಿಕ್ಕವರೆಲ್ಲ ಹೇಗೆ ಅಶುದ್ಧರು? ಅತಃ ಯಾಕೆ ಕೀಳುಗಾಣ್ವರು ಹಾಕು ಅಸಹ್ಯರು ತಮ್ಮಿಂದ?
ತಿದ್ದು: ಅತಃ ಯಾಕೆ ಕೀಳುಗಾಣ್ವರು ಹಾಗು ಅಸಹ್ಯರು ತಮ್ಮಿಂದ?
((ಬಸವಣ್ಣ, ಅಲ್ಲಮ ಆದಿಯಾಗಿ ಘನ ಶರಣ ಪರಂಪರೆಯ ಕುಲುಮೆಯಲ್ಲಿ ಶುದ್ಧಗೊಂಡ ವ್ಯಕ್ತಿತ್ವ ನನ್ನದು.)) maha sharanare illive nimma vyktitva torisuva kamentu odikolli ಬಾಲು ಭಟ್ ಅವರು ಇಸ್ಲಾಮ್ ಬಗ್ಗೆ ಮಾಡಿರುವ ಕಮೆಂಟುಗಳೇ ಸಾಕು ಅವರನ್ನು ಬೆತ್ತಲು ಮಾಡಲು. ಇಸ್ಲಾಂ ಅನ್ನು ಕಾರಣವಿಲ್ಲದೆ ದ್ವೇಷಿಸುವ ಬಾಲು ಭಟ್ ಅವರ ಮಾನಸಿಕ ಸ್ಥಿತಿ ಬಗ್ಗೆ ಯಾವ ಅನುಮಾನವೂ ಇಲ್ಲ, ಈತ ಸಮಾಜಕ್ಕೆ ದೊಡ್ದ ಅಪಾಯ. [“ಭೈರಪ್ಪನವರು ಈ ಎಪ್ಪನ ತರಹ ಬೊಗಳೆ ಬಿಟ್ಟಿಲ್ಲ.” ನಿಮ್ಮವರ ಹೂಸು ನಿಮಗೆ ಗಂಧಕ್ಕಿಂತ ಹೆಚ್ಚು ಪರಿಮಳ!]] [[ ಜ್ಞಾನಪೀಠ ಪ್ರಶಸ್ತಿ ಪಡೆದು ಬೂಕರ್ ಪ್ರಶಸ್ತಿಯ ಅಂತಿಮ ಸುತ್ತನ್ನು ಪ್ರವೇಶಿಸಿದ್ದ ನಮ್ಮ ಕಾಲದ ಅತ್ಯಂತ ಶ್ರೇಷ್ಠ ದಾರ್ಶನಿಕ ಸಾಹಿತಿ ಅನಂತಮೂರ್ತಿಯವರೇ ಭೈರಪ್ಪನವರ ಸಾಹಿತ್ಯಕ್ಕೆ ಮೂರು ಕಾಸಿನ ಬೆಲೆ ಕೊಟ್ಟಿಲ್ಲ.]] ” ಹೌದಾ?!! ನಿಮ್ಮ ಬಳಿ ಸಾಕ್ಷಿ ಆಧಾರಗಳಿವೆಯಾ? ಅಥವಾ ಭೈರಪ್ಪನವರ ಕಾದಂಬರಿಗಳೇ ಆಧಾರವಾ? [[ ದರ್ಗಾ ಸರ್ ಅವರು ವಚನಗಳ ಬಗ್ಗೆ ಬರೆದ ಸತ್ಯಗಳನ್ನು ಘೆಂಟ್ ಬಾಲಂಗೋಚಿಗಳು ಎದುರಿಸಲು ಧೈರ್ಯ ಸಾಲದೆ ಫೇಕ್ ಐಡಿ ಮೂಲಕ ಸ್ನೈಪರ್ ಅಟಾಕ್ ಮಾಡಿದರು. ಆದರೆ ದರ್ಗಾ ಸರ್ ಅವರು ಯಾವ ಸತ್ಯಗಳ ಪರವಾಗಿ ನಿಂತರೋ ಆ ಸತ್ಯಗಳಿನ್ನೂ ಅಳಿದಿಲ್ಲ. ಪ್ರಗತಿಪರರ ಧೀಮಂತಿಕೆಗೆ ಅಂತ್ಯವಿಲ್ಲ]] [[ನರಸತ್ತ ನಿಸ್ತೇಜ ನಿರ್ವೀರ್ಯ ಕುಹುಕ ಪಂಡಿತರು ಕುಮಾರ್ ಅವರ ರೂಪದಲ್ಲಿ ತಮ್ಮ ಮನಸ್ಸಿನ ನಂಜನ್ನು ಕಾರುತ್ತಿದ್ದಾರೆ.] [[ನಮೋಸುರ ಸುರೆಯ ಧಾರೆಯನ್ನೇ ಹರಿಸಬಹುದು, ಆದರೆ ರಾಕ್ಷಸನ ಬೆಂಬಲಕ್ಕೆ ದರ್ಗಾ ಸರ್ ಎಂದಿಗೂ ನಿಲ್ಲುವುದಿಲ್ಲ.]] ಘೆಂಟ್ ಬಾಲಂಗೋಚಿಗಳ ಇಂದಿನ ನಮ್ಮ ಸಮಾಜಶಾಸ್ತ್ರೀಯ ಚರ್ಚೆಯನ್ನು ತಿಪ್ಪೆಗುಂಡಿಗೆ ಎಸೆಯೋಣ“ನನಗೆ ಇದರ ಬಗ್ಗೆ ತುಂಬಾ ಅನುಮಾನವಿದೆ” ಅದೇನು ಅಂತ ಬೊಗಳ್ರೀ ಭಟ್ಟರೆ! ನಿಮಗೆ ಒಪ್ಪಿಗೆ ಆಗುವಂತಹ ಉತ್ತರ ಕೊಡಲು ನಾನೇನು ನಮೋ ಸಾಕಿದ ಸೈಬರ್ ಕೂಲಿ ಅಲ್ಲ.
“ನಿಮ್ಮದು ಎಡಬಿಡಂಗಿ ಸ್ಥಿತಿ.”
@jayaraj, ಮುಖ್ಯವಾದ ಕಮೆಂಟ್ ಬಿಟ್ಟುಬಿಟ್ಟಿದ್ದೀರಿ. ಶರಣ ಎಂಬ ಪದವನ್ನುಚ್ಚರಿಸಲು ಯೋಗ್ಯತೆಯಿಲ್ಲದ ನಾಲಗೆಯಿಂದ ಬಂದ ಮಾತುಗಳಿವು.
“ಭೈರಪ್ಪ ಎಂಬ ಬಲಪಂಥೀಯ ಬಲೂನ್ ಅನ್ನು ಷಣ್ಮುಖ ಅವರು ‘ವಸಾಹತುಶಾಹಿ ಚಿತ್ರಣಗಳ ಪುನರುತ್ಪಾದನೆ’ ಎಂಬ ಸೂಜಿ ಮೊನೆಯಿಂದ ಚುಚ್ಚಿ ಪುಸ್ ಮಾಡಿದ್ದಾರೆ. ಆದರೆ ಇದನ್ನು ಈ ದರವೇಸಿ ಸೈಟಿನಲ್ಲಿ ಮಾಡುವ ಬದಲು ಪ್ರಜಾವಾಣಿಯಲ್ಲಿ ಮಾಡಿದ್ದರೆ ಬೆಸ್ಟ್ ಇತ್ತು.”
ಯೋಗ್ಯತೆ ಎಂಬುದು ವೈದಿಕಶಾಹಿಯ ಸ್ವತ್ತೇ? ಷಣ್ಮುಖ ಅವರ ‘ವಸಾಹತುಶಾಹಿ ಚಿತ್ರಣಗಳ ಪುನರುತ್ಪಾದನೆ’ ಲೇಖನವನ್ನು ಓದದೆ ಯೋಗ್ಯತೆ ಬಗ್ಗೆ ಲೆಕ್ಚರ್ ಕೊಡ್ತೀರಲ್ಲ!
“ಯೋಗ್ಯತೆ ಎಂಬುದು ವೈದಿಕಶಾಹಿಯ ಸ್ವತ್ತೇ”
ಹೌದು. ‘ಯೋಗ್ಯತೆ’ಯ ಬಗ್ಗೆ ವೈದಿಕ ಸಾಹಿತ್ಯ ಹೇರಳವಾದ ವ್ಯಾಖ್ಯಾನಗಳನ್ನು ಕೊಡುವುದು.
ವಚನಸಾಹಿತ್ಯ ಯೋಗ್ಯತೆ ಇರಲಿ, ಇರದಿರಲಿ ಸಮಾನವಾಗಿ ಕಾಣು ಹಾಗು ಸಮಾನ ಗೌರವಾವಕಾಶಗಳನ್ನೂ ಕೊಡು ಎನ್ನುವುದು.
ವೈದಿಕಶಾಹಿ ಎಂದರೆ ವೇದಾಧಾರದ ಆಡಳಿತ! ಅದನ್ನು ಬಳಸುವ ಕೋಟಿಕೋಟಿ ಮಂದಿ ಭಾರತದಲ್ಲಿ ಇದ್ದಾರೆ!
Please read hole sale as whole sale. Sorry for spelling mistake.
ಡಬ್ಬಿಂಗ್ ಬಂದರೆ ಕನ್ನಡ ಚಿತ್ರರಂಗದ ಕಾರ್ಮಿಕ ವರ್ಗದವರು ಬೀದಿಗೆ ಬರುತ್ತಾರೆ ಎಂಬ ವಾದವೆಲ್ಲ ಹಳಸಲು. ಕಂಪ್ಯೂಟರ್ ಬರುವ ಮೊದಲು ಇದೇ ವಾದವನ್ನು ಮಾಡಲಾಗಿತ್ತು. ಮೊಬೈಲ್ ಬರುವಾಗ ಪಬ್ಲಿಕ್ ಟೆಲಿಫೋನ್ ಬೂಥ್ ನವರು ಬೀದಿಗೆ ಬರುತ್ತಾರೆ ಎಂದು ಆಗೆಲ್ಲ ವಾದಿಸುತ್ತಿದ್ದರು. ನಮ್ಮೂರಲ್ಲಿ ಯಾರ ಮನೆಯಲ್ಲೂ ಆಗ ಟೀವಿ ಇರಲಿಲ್ಲ. ಮೊತ್ತ ಮೊದಲು ಟೀವಿ ಬಂದಾಗ ಹಿರಿಯರೆಲ್ಲ ದಿಗಿಲುಗೊಂಡಿದ್ದರು, ಟೀವಿ ನೋಡಿ ಮಕ್ಕಳೆಲ್ಲ ಫೇಲ್ ಆಗುತ್ತಾರೆ ಎಂಬ ಭಯವಾಗಿತ್ತದು. ಹೀಗೆ ಬದಲಾವಣೆಗೆ ತೆರೆದುಕೊಳ್ಳದ ಜನ ಬೊಭ್ಭಿಡುವ ರೀತಿ ಇದು ಅಷ್ಟೆ. ವೈದಿಕ ಧರ್ಮದ ಆಶ್ರಯದಿಂದಲೇ ಬೆಳೆದುಬಂದ ಶರಣ ಧರ್ಮ, ಬೌದ್ಧ ಧರ್ಮಗಳು ವೈದಿಕ ಧರ್ಮವನ್ನೆಂದೂ ನಾಶಮಾಡಲಿಲ್ಲ. ಬದಲಾಗಿ ಒಟ್ಟೊಟ್ಟಿಗೆ ಸಾಮರಸ್ಯದಿಂದ ಎರಡೂ ಬದುಕುತ್ತಿವೆ. ಎಷ್ಟೋ ಮಂದಿ ವೈದಿಕರು ಶರಣ ವಚನವನ್ನು ಅಭ್ಯಸಿಸಿದ್ದಾರೆ, ಎಷ್ಟೋ ಶರಣರು ಮೈಸೂರಿನಲ್ಲಿ ವೇದಾಭ್ಯಾಸ ಮಾಡುವದನ್ನು ಸ್ವತಃ ಕಂಡಿದ್ದೇನೆ. ಬದಲಾವಣೆ, ಪರಿವರ್ತನೆ ಜಗದ ನಿಯಮ. ಯಾವುದನ್ನೆ ಆಗಲಿ ಕಟ್ಟಿ ಹಾಕುವದರಿಂದ ಯಾವ ಉಪಯೋಗವೂ ಆಗಲಾರದು. ’ಸ್ಟ್ರಗಲ್ ಫಾರ್ ಎಕ್ಸಿಸ್ಟನ್ಸ” ಸರ್ವೈವಲ್ ಆಫ್ ಫಿಟ್ಟೆಸ್ಟ್’ ಎಂಬ ವಾದಗಳಂತೆ ಬದಲಾವಣೆಗೆ ತೆರೆದುಕೊಂಡು ಪೈಪೋಟಿಯಲ್ಲಿ ಭಾಗಿಯಾದಾಗ ಮಾತ್ರ ಉತ್ತಮ ಮಟ್ಟದ ಯಶಸ್ಸು ಸಾಧ್ಯ. ಮೀಸಲಾತಿಯಿಂದ ಸ್ಥಾನ ಬಡೆದ ದಲಿತನಿಗಿಂತಲೂ ಬಂಡವಾಳಶಾಹಿ ಪ್ರಪಂಚದಲ್ಲಿ ನೌಕರಿ ಪಡೆಯುವ ದಲಿತನು ಹೆಚ್ಚು ಪಳಗಿರುತ್ತಾನೆ. ಹಾಗೆಯೆ ಕನ್ನಡ ಚಿತ್ರರಂಗ ಪೈಪೋಟಿಗಿಳಿದಾಗ ಮಾತ್ರ ಕನ್ನಡ ಚಿತ್ರರಂಗದ ಯಶಸ್ಸು ಸಾಧ್ಯ.
ಬಾಲಚಂದ್ರ ಭಟ್ ಅವರಿಗೆ–
ತಾವು ಬದಲಾವಣೆ ಮತ್ತು ಆಕ್ರಮಣ ಎಂಬ ಎರಡು “ಪರಿಸ್ಥಿತಿ”ಗಳನ್ನೂ ಒಂದೇ ಎಂದು ಭಾವಿಸಿದ್ದೀರಿ ಎಂದು ನನಗೆ ಅನಿಸಿದೆ. ಡಬ್ಬಿಂಗ್ ಅನ್ನು ಯಾವ ಕೋನದಿಂದ ನೋಡಿದರೂ “ಬದಲಾವಣೆ” ಎಂದು ಒಪ್ಪಿಕೊಳ್ಳಲಾಗುವುದಿಲ್ಲ. ಇತರ ಭಾಷೆಯ ಚಲನ ಚಿತ್ರಗಳು ಕನ್ನಡಕ್ಕೆ ಡಬ್ಬಿಂಗ್ ಆಗುವುದು ಆಕ್ರಮಣವಾಗುತ್ತದೆ ; ಬದಲಾವಣೆ ಅಲ್ಲ. ಡಬ್ಬಿಂಗ್ ಪರ ಇರುವವರ ಒಂದು ಮುಖ್ಯ ವಿಚಾರಧಾರೆ/ಆರೋಪ ಏನೆಂದರೆ ಕನ್ನಡ ಚಿತ್ರಗಳ ಗುಣ ಮಟ್ಟ ಈಗ ಸುಮಾರು ಹತ್ತು ವರ್ಷಗಳಿಂದ ಕುಸಿದಿದೆ. ಡಬ್ಬಿಂಗ್ ಬಂದರೆ ಕುಸಿದಿರುವ ಗುಣಮಟ್ಟವನ್ನು ಮೇಲೆತ್ತಬಹುದು ಎಂಬ ವಾದ./ಸಮಜಾಯಿಷಿ. ನಿಜ.ಸುಮಾರು ಹತ್ತು ವರ್ಷಗಳಿಂದ ಈಚೆಗೆ ಹೆಚ್ಚಿನ ಸಂಖ್ಯೆಯ ಕನ್ನಡ ಚಿತ್ರಗಳು ಹೀರೋ/ಹೀರೋಯಿನ್ ಒರಿಯೆಂಟೆಡ್ ಆಗಿ ಹಾಡು ಕುಣಿತಗಳೇ ಕಥೆಗಿಂತ ಪ್ರಾಮುಖ್ಯತೆ ವಹಿಸಿವೆ. ಇದು ಸ್ಥಿತ್ಯಂತರದ ಕಾಲ. ಮಲೆಯಾಳ ಚಿತ್ರರಂಗದಲ್ಲೂ ಈ ರೀತಿ ಆಗಿತ್ತು. ಈಗ್ಗೆ ಇಪ್ಪತ್ತು ಇಪ್ಪತೈದು ವರ್ಷಗಳ ಹಿಂದೆ ಮಲೆಯಾಳಿ ಸಿನಿಮಾ =ನೀಲಿ ಚಿತ್ರಗಳು ಎಂಬ ಮಟ್ಟಕ್ಕೆ ಹೋಗಿದ್ದೂ ಉಂಟು. ಡಬ್ಬಿಂಗ್ ಶುರುವಾದರೆ ನಮ್ಮವರ ಆಡಳಿತ ಚೆನ್ನಾಗಿಲ್ಲ,ಬೇರೆ ದೇಶಗಳವರು ಬಂದು ನಮ್ಮನ್ನು ಆಳಲಿ ಎಂದು ಆಹ್ವಾನ ಕೊಟ್ಟಂತೆ ಆಗುವುದಿಲ್ಲವೇ?.
+1
ಡಬ್ಬಿಂಗ್ ಪರವಾದಿಗಳು ಕನ್ನಡ ಚಿತ್ರರಂಗ ನಿಷೇಧ ಮಾಡಿ ಅಂತ ಹೇಳುತ್ತಿದ್ದಾರಾ? ಕನ್ನಡ ಸಿನಿಮಾಗಳನ್ನೂ ನೋಡುತ್ತೇವೆ, ಅದರ ಜೊತೆಗೆ ಡಬ್ ಆದ ಕಾರ್ಯಕ್ರಮಗಳನ್ನು, ಸಿನಿಮಾಗಳನ್ನು ನೋಡುತ್ತೇವೆ ಅನ್ನುತ್ತಿದ್ದೇವೆ ಅಷ್ಟೇ. ಕನ್ನಡ ಸಿನಿಮಾದವರ ಮೇಲೆ ಯಾವ ರೀತಿ ಆಕ್ರಮಣ ಮಾಡ್ತಾ ಇದ್ದ ಹಾಗಾಯಿತು ?
ಶ್ರೀರಂಗ ಅವರೆ ಯಾವ ಪುರುಷಾರ್ಥಕ್ಕಾಗಿ ನಾವು ಕನ್ನಡ ಕಲಿಯಬೇಕು. ಕನ್ನಡದಲ್ಲಿ ಜಗತ್ತಿನ ಉತ್ತಮೋತ್ತಮವಾದ ಚಲನಚಿತ್ರ ನೋಡಲು ಅವಕಾಶವಿಲ್ಲ. ವಿಜ್ಞಾನ ತಂತ್ರಜ್ಞಾನ ಕುರಿತ ಕಾರ್ಯಕ್ರಮಗಳಿಲ್ಲ. ನಿಸರ್ಗ, ಪ್ರಾಣಿಗಳು ಪಕ್ಷಿಗಳ ಬಗ್ಗೆ ಸಾಗರಜೀವಿಗಳ ಬಗ್ಗೆ ಪ್ರಸಾರವಾಗುವ ಜ್ಞಾನಾತ್ಮಕ ಕಾರ್ಯಾಕ್ರಮಗಳು ನಮಗರ್ಥವಾಗುವದಿಲ್ಲ. ಎಕೆಂದರೆ ನನಗೆ ಮತ್ತು ನನ್ನಂಥವರಿಗೆ ಹಿಂದಿ ಇಂಗ್ಲೀಷ ಎರಡೂ ಬರುವದಿಲ್ಲ. ಕೇವಲ ಮೂಕ ಚಲನಚಿತ್ರ ವೀಕ್ಷಿಸುವ ಸೌಭಾಗ್ಯ ನಮ್ಮದು. ಕನ್ನಡಿಗರು ತಾವೂ ಇಂಥ ಕಾರ್ಯಕ್ರಮ ತಯಾರಿಸುವದಿಲ್ಲ. ಬೆರೆಯವರು ಕಷ್ಟಪಟ್ಟು ಮಾಡಿದ್ದನ್ನೂ ನೋಡಲು ಬಿಡುವದಿಲ್ಲ. ಕೇವಲ ನಮ್ಮ ಖ್ಯಾತ ನಟರೆನಿಸಿಕೊಂಡವರ ಮೂತಿ ಮಾತ್ರ ನಾವು ವೀಕ್ಷಣೆ ಮಾಡಬೇಕು. ಡಬ್ಬಲ ಮೀನಿಂಗ್ ಇರುವ ಹಾಡುಗಳನ್ನು ಅಸಹ್ಹಿಸುತ್ತ ಕೇಳುತ್ತಿರಬೇಕು. ಹೀಗಿದ್ದ ಮೇಲೆ ಯಾವ ಪುರುಷಾರ್ಥಕ್ಕೆ ನಾವು ಕನ್ನಡ ಕಲಿಯಭೇಕೂ???????????
ನಿಲುಮೆಯ ನನ್ನ ಸ್ನೇಹಿತರೆ ನಿಮ್ಮ ಮಕ್ಕಳಿಗೆ ತಪ್ಪಿಯೂ ಕನ್ನಡ ಕಲಿಸಬೇಡಿ ಯಾಕೆಂದರೆ ಅವರು ನನ್ನಂತೆ ಎಲ್ಲಿಯೂ ಸಲ್ಲದವರಾಗುತ್ತಾರೆ. ಯಾವ ಜ್ಞಾನ ಪಡೆಯಲೂ ಶಕ್ಯವಿಲ್ಲದವರಾಗುತ್ತಾರೆ.