ನಿಜವಾದ ಜ್ಞಾನ
ನಿಜವಾದ ಜ್ಞಾನವೆಂದರೆ ಓದಿ ತಿಳಿಯುವುದೋ? ಹಿರಿಯರ ಅನುಭವಗಳಿಂದ ಅರಿಯುವುದೋ? ಹೀಗೊಂದು ಜಿಜ್ಞಾಸೆ ಕಾಡುವುದುಂಟು. ಲಿಪಿಗಳ ಅನ್ವೇಷಣೆಯೇ ಇರದಿದ್ದ ಕಾಲದಲ್ಲಿ ಎಲ್ಲವನ್ನೂ ಅಸಾಮಾನ್ಯ ಸ್ಮರಣ ಶಕ್ತಿಯಿಂದ ಅರಿತು ಕಲಿಯುತ್ತಿದ್ದರು. ನಂತರ ಪುಸ್ತಕಗಳ ಸಹಾಯದಿಂದ ಓದಿ, ಬರೆದು ಕಲಿಯಲು ಸಮಯವೇನೋ ಹಿಡಿಯುತ್ತಿತ್ತು, ಆದರೆ ಅದು ಸಹಜವಾಗಿರುತ್ತಿತ್ತು. ಇಂದಿನ ನಮ್ಮ ಕಲಿಕಾ ರೀತಿಯಲ್ಲಿ ಆ ಸಹಜತೆಯನ್ನು ನಾವು ಕಾಣುತ್ತೇವೆಯೇ? ಒತ್ತಡವಿಲ್ಲದೆ ಕಲಿಯಲು ನಮ್ಮ ಮಕ್ಕಳಿಗೆ ಸಾಧ್ಯವಾಗುತ್ತಿಲ್ಲ. ನಮ್ಮ ಶಿಕ್ಷಣದಿಂದ ನಾವು ಗಳಿಸುವ ಪದವಿಗಳು ನಿಜವಾದ ಜ್ಞಾನವಾಗುವುದೇ? ನಮ್ಮ ಇಂದಿನ ವಿದ್ಯಾರ್ಥಿಗಳು ಮಾಹಿತಿಯನ್ನು ನಿಜವಾದ ಅಧ್ಯಯನದಿಂದ ಪಡೆಯುತ್ತಿದ್ದಾರೆಯೇ? ಇಲ್ಲ, ಓದಿ ಕಲಿಯುವ ತಾಳ್ಮೆ ಈಗಿಲ್ಲ. ಇಂದಿನ ಮಾಹಿತಿ ತಂತ್ರಜ್ಞಾನದ ಈ ವೇಗದ ಯುಗದಲ್ಲಿ ಎಲ್ಲವೂ ಕಣ್ಣ ಮುಂದೆ ಕೈಬೆರಳುಗಳ ಚಲನೆಯಿಂದಲೇ ಸಾಧ್ಯವಾಗುತ್ತಿದೆ. Where is the wisdom we have lost in knowledge?
Where is the knowledge we have lost in information?
ಒಂದು ಪುಟ್ಟ ಉದಾಹರಣೆ, ಟೊಮ್ಯಾಟೋ ಎನ್ನುವುದು ತರಕಾರಿಯಲ್ಲ, ಒಂದು ಹಣ್ಣು ಎನ್ನುವುದು ಜ್ಞಾನ ವಾದರೆ, ಇದನ್ನು ಹಣ್ಣುಗಳೊಂದಿಗೆ ಬೆರೆಸಿ ತಿನ್ನಲಾಗುವುದಿಲ್ಲ ಎಂಬುದು ಅರಿವು
ಚಿತ್ರಕೃಪೆ :vedanta-atlanta.org




