ನಮ್ಮ ಮಕ್ಕಳಿಗೆ ಎಂಥ ಶಿಕ್ಷಣ ಕೊಡಬೇಕು?
ವಲವಿ, ಬಿಜಾಪೂರ
೧೯೮೩ ಅಥವಾ ೧೯೮೪ ನೇ ಇಸ್ವಿ ಇರಬಹುದೇನೋ? ಸರಿಯಾಗಿ ನೆನಪಿಲ್ಲ. ನಮ್ಮ ಶಾಲೆಯಲ್ಲಿ (ಆಗ ನಾನು ೮/೯ ತರಗತಿಯಲ್ಲಿ ಒದುತ್ತಿರಬಹುದು ) ಪೈಥಾಗೋರಸನ ಪ್ರಮೇಯವನ್ನು ನನ್ನ ಗುರುಗಳು ಹೇಳುತ್ತಾ ಈ ಸೂತ್ರವನ್ನು ಪೈಥಾಗೊರಸನಕ್ಕಿಂತಲೂ ಮೊದಲು ಹೇಳಿದವನು ಭಾಸ್ಕರಾಚಾರ್ಯ ಎಂದು ವಿವರಿಸುತ್ತಾ ಅವನ ಲೀಲಾವತಿ ಗ್ರಂಥದಲ್ಲಿ ಈ ಸಾಲುಗಳನ್ನು ಹೇಳಲಾಗಿದೆ ಎಂದು ಪೈಥಾಗೋರಸನ ಪ್ರಮೇಯದ ರೀತಿಯಲ್ಲಿ ಬಿಡಿಸಬಹುದಾದ ಒಂದು ಲೆಕ್ಕವನ್ನು ತಿಳಿಸಿದ್ದರು. ಆಗ ನಾನು, ಸರ್ ಹಾಗಿದ್ದರೆ ಅದನ್ನು ಪುಸ್ತಕದಲ್ಲೇಕೆ ಬರೆದಿಲ್ಲ?? ಎಂದು ಸಹಜವಾಗಿ ಕೇಳಿದ್ದೆ. ಆಗವರು ನಮ್ಮನ್ನು ನಾವು(ಭಾರತೀಯರನ್ನು) ಹೊಗಳಿಕೊಳ್ಳುವ ಜಾಯಮಾನ ನಮಗಿಲ್ಲ ಎಂದಿದ್ದರು. ಅವರು ವ್ಯಂಗವಾಗಿ ಇದನ್ನು ಹೇಳಿದರೋ ಸಹಜವಾಗಿ ಹೇಳಿದರೋ ನನಗಂತೂ ಅರ್ಥವಾಗಿರಲಿಲ್ಲ.
ಮುಂದೆ ನಾನು ಶಿಕ್ಷಕಿಯಾಗಿ ಗಣಿತ ವಿಷಯದ ತರಬೇತಿಗಾಗಿ ಹೋದಾಗ ಶ್ರೀಮತಿ ಮಂಜುಳಾ ಜೋಷಿ ಎನ್ನುವ ತರಬೇತುದಾರರು ಇದೇ ವಿಷಯವನ್ನು ಮತ್ತು ಭಾಸ್ಕರಾಚಾರ್ಯರ ಅವೇ ಸಾಲುಗಳನ್ನು ಪೈಥಾಗೊರಸನ ಪ್ರಮೇಯ ಕುರಿತು ಹೇಳುವಾಗ ಪುನಃ ಹೇಳಿದರು. (ಬಹುಶಃ ೨೦೦೨/೨೦೦೩ ರಲ್ಲಿ ಹೇಳಿರಬಹುದು.) ಆಗಲೂ ನಾನು ಮೇಲಿನ ಪ್ರಶ್ನೆ ಕೇಳಿದೆ. ಆಗ ಬಿಜೆಪಿ ಸರ್ಕಾರ ಪಠ್ಯ ಪುಸ್ತಕ ಬದಲಾವಣೆ ಮಾಡಲು ಹೊರಟು ಕೇಸರೀಕರಣಗೊಳಿಸುತ್ತಿದೆ ಎಂಬ ಬೊಬ್ಬೆ ಎಲ್ಲೆಡೆ ಶುರುವಾಗಿತ್ತು. ಹಾಗಾಗಿ ಶ್ರೀಮತಿ ಜೋಷಿಯವರು ನಾವು ಹಾಗೆ ಹೇಳಿಕೊಳ್ಳಲು ಬಿಡುತ್ತಿಲ್ಲ ಸರ್ಕಾರವೇನು ಮಾಡಬೇಕು? ಎಂದು ಪ್ರಶ್ನಿಸಿ ಚರ್ಚೆಯನ್ನು ಹುಟ್ಟುಹಾಕಿದ್ದರು. ಬಹುತೇಕ ಶಿಕ್ಷಕರು ನಮ್ಮ ಪೂರ್ವಿಕರ ಸಾಧನೆಗಳನ್ನು ನಮ್ಮ ಮಕ್ಕಳಿಗೆ ತಿಳಿಸುವದರಿಂದ ಅವರು ಸ್ಪೂರ್ತಿಗೊಳ್ಳುತ್ತಾರೆ ಆತ್ಮವಿಶ್ವಾಸ ಬೆಳೆಸಿಕೊಳ್ಳುತ್ತಾರೆಂದು ವಾದಿಸಿದರು. ಅಂದರೆ ತರಬೇತಿಗೆ ಹಾಜರಾಗಿದ್ದ ೧೦೦ ಶಿಕ್ಷಕರಲ್ಲಿ ಸುಮಾರು ೮೦/೯೦ ಜನ ಹೀಗೆ ವಾದಿಸಿದರೆಂದರೆ ಜನರಿಗೆ ತಮ್ಮ ಪೂರ್ವಿಕರ ಮಹತ್ವದ ಲಸ ಸಂಶೋಧನೆಗಳನ್ನು ತಮ್ಮ ಪರಂಪರೆಯನ್ನು ಮುಂದಿನ ಪೀಳಿಗೆ ತಿಳಿಯಲಿ ಎಂಬ ಆಶಯ ಇದೆ ಎಂದಾಯ್ತು. ಆದರೂ ಅಂಥ ಕೆಲಸಗಳು ನಡೆದಾಗ ಕೆಲವರು ನಿಲ್ಲಿಸಲು ಕೇಸರೀಕರಣವೆಂದು ಬೊಬ್ಬೆ ಹೊಡೆಯುತ್ತಾರೆ. ಪುರೋಹಿತಶಾಹಿಯ ಹುನ್ನಾರವೆಂದು, ಇನ್ನು ಕೆಲವರು ಬ್ರಾಹ್ಮಣಿಕೆಯ ಹೇರಿಕೆ ಎಂದೂ ಏನೇನೋ ಅಲ್ಲಸಲ್ಲದ ಅಪಪ್ರಚಾರ ಮಾಡುತ್ತಾರೆ. ಅದು ಹ್ಯಾಗೋ ಇವರ ದನಿ ಮೇಲಾಗಿ ಪಠ್ಯಪುಸ್ತಕಗಳಲ್ಲಿ ಅದೇ ಬ್ರಿಟೀಷರನ್ನು ಯುರೋಪಿಯನ್ನರನ್ನು ಹೊಗಳುವಂಥ ಪಾಠಗಳೇ ಪಠ್ಯ ಪುಸ್ತಕದಲ್ಲಿ ಬಂದು ಬಿಡುತ್ತವೆ.
ಸ್ವಾಮಿ ನಿರ್ಭಯಾನಂದರು ಬಿಜಾಪುರದಲ್ಲಿನ ಗುರುನಮನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ “ನಮ್ಮ ಮಕ್ಕಳಿಗೆ ನಾವಿವತ್ತು ಎಂಥ ಶಿಕ್ಷಣ ಕೊಡುತ್ತಿದ್ದೇವೆಂದರೆ ನಾನು ಮೂರ್ಖ. ನಮ್ಮಪ್ಪ ಮೂರ್ಖ. ನಮ್ಮ ತಾತ ಮುತ್ತಾತರೆಲ್ಲ ಮೂರ್ಖರೇ.ನಮ್ಮ ಪರಂಪರೆಯೇ ಮೂರ್ಖರ ಪರಂಪರೆ. ವಿದೇಶಿಯರು ನಮ್ಮನ್ನು ಒದ್ದು ಆಳಿದ್ದು ಏಕೆಂದರೆ ಅವರು ತುಂಬಾ ಜಾಣರು. ಅವರು ನಮ್ಮನ್ನು ಆಳಲು ಹುಟ್ಟಿದ್ದಾರೆ. ನಾವು ಆಳಿಸಿಕೊಳ್ಳಲು ಹುಟ್ಟಿದ್ದೇವೆ. ಇಂಥ ಅರ್ಥ ಬರುವ ಶಿಕ್ಷಣ ನಾವಿಂದು ಕೊಡುತ್ತೀದ್ದೇವೆ.” ಎಂದು ಹೇಳಿದರು. ಬಹುಶಃ ಇವತ್ತಿನ ವಿದ್ಯಮಾನಗಳನ್ನು ನೋಡಿದಾಗ ಇದು ನಿಜವೆಂದು ನನಗೆ ಅನಿಸುತ್ತದೆ. ಇಷ್ಟೆಲ್ಲ ನಾನು ಬರೆಯಲು ಕಾರಣ ಲಡಾಯಿ ಬ್ಲಾಗನಲ್ಲಿ ಒಂದು ಲೇಖನದಲ್ಲಿ ಸುರೇಶ್ ಭಟ್ ಬಾಕ್ರಬೈಲು ಎಂಬವರು ೯ ನೇ ತರಗತಿಯ ಪುಸ್ತಕ ವಿಮರ್ಶಿಸುತ್ತಾ ಒಬ್ಬ ಬಾಲಕ ನನ್ನ ವಿಜ್ಞಾನ ಪುಸ್ತಕದಲ್ಲಿ ಸಂಸ್ಕೃತ ಪದಗಳಿರುವದರಿಂದ ಓದುವದು ಕಷ್ಟವಾಗಿದೆ ಎಂದನಂತೆ. ಲೇಖಕರ ಮಾತುಗಳಲ್ಲೆ ಕೇಳಿ.
[[•ಪುಟ 88 ಮತ್ತು 89ರಲ್ಲಿ (ಅಧ್ಯಾಯ 5, ಬೆಳಕಿನ ಸ್ವಭಾವ): ಅನೇಕ ಪ್ರಯೋಗಗಳಿಂದ ಬೆಳಕಿನ ವೇಗವನ್ನು 2.999796 ಗಿ 103 ಞ/ ಎಂದು ದೃಢವಾಗಿ 19ನೆ ಶತಮಾನದಲ್ಲಿ ಲೆಕ್ಕಾಚಾರ ಮಾಡಲಾಗಿದೆ. ಆದರೆ ಕ್ರಿ.ಶ. 14ನೆ ಶತಮಾನದಲ್ಲಿ ಬರೆದ ಸಾಯನಾಚಾರ್ಯ ವ್ಯಾಖ್ಯಾನ ಋಗ್ವೇದ ಸಂಹಿತ, ಮಂಡಲ-1, ಸೂಕ್ತ 50ರ 4ನೆ ಮಂತ್ರದಲ್ಲಿ ಬೆಳಕಿನ ವೇಗದ ಲೆಕ್ಕಾಚಾರವನ್ನು ಪ್ರಸ್ತಾಪಿಸಲಾಗಿದೆ.
ಶ್ಲೋಕ:‘‘ಥಾ ಚ ಸ್ಮರ್ಯತೇ ಯೋಜನಾನಾಮ್
ಸಹಸ್ರಮ್ ದ್ವೆ ದ್ವೆ ಸತೆ ದ್ವೆ ಚ ಯೋಜನೆ!
ಏಕೇನಾ ನಿಮಿಷಾರ್ಧೇನ ಕ್ರಮಾಮಣ ನಮೋಸುತ್ತೇ’’
ಅರ್ಥ: ‘‘ಅರ್ಧ ನಿಮಿಷದಲ್ಲಿ 2202 ಯೋಜನಾಗಳನ್ನು (1 ಯೋಜನಾ=9.6025 ಮೈಲುಗಳು, 2202 ಯೋಜನಾ=21,144,705 ಮೈಲುಗಳು) ಕ್ರಮಿಸಿದ ಓ ಸೂರ್ಯ(ಯಾತ್ರಿಕ)ನೇ ನಿನಗೆ ನನ್ನ ನಮಸ್ಕಾರಗಳು.
ತೆಗೆದುಕೊಂಡ ವೇಳೆ=1/2 ನಿಮಿಷ =1/8.75=0.114286 ಸೆಕೆಂಡುಗಳು
ಈ ಶ್ಲೋಕದ ಪ್ರಕಾರ ಬೆಳಕಿನ ವೇಗವನ್ನು ಲೆಕ್ಕಾಚಾರ ಹಾಕಿದರೆ=1,85,016.169 ಮೈಲು/ಸೆಕೆಂಡು
ಬೆಳಕಿನ ಆಧುನಿಕ ಮೌಲ್ಯ=1,86,282.397 ಮೈಲು/ಸೆಕೆಂಡು.’’ ಮೊದಲನೆಯದಾಗಿ, ಸಾಯನಾಚಾರ್ಯನ ಈ ಶ್ಲೋಕಕ್ಕೆ ವೈಜ್ಞಾನಿಕ ಹಿನ್ನೆಲೆ ಇರುವಂತಿಲ್ಲ. ಏಕೆಂದರೆ ಆತ ಒಬ್ಬ ವ್ಯಾಖ್ಯಾನಕಾರನಷ್ಟೆ ಹೊರತು ವಿಜ್ಞಾನಿ ಅಲ್ಲ. ಈ ಶ್ಲೋಕದ ಹಿಂದೆ ಮುಂದೆ ಎಲ್ಲೂ ಬೆಳಕಿನ ಸ್ವಭಾವದ ವಿಷಯದಲ್ಲಿ ಯಾವುದೇ ವೈಜ್ಞಾನಿಕ ಮಂಡನೆ ಮತ್ತು ವಿವರಗಳಿಲ್ಲ. ಅದೇ ರೀತಿ ಬೆಳಕಿನ ವೇಗವನ್ನು ನಿರ್ಧರಿಸಲು ಮಾಡಿರುವ ಪ್ರಯೋಗಗಳ ವಿವರಗಳಿಲ್ಲ; ]] ಇತ್ಯಾದಿಯಾಗಿ ಟೀಕಿಸಿದ್ದಾರೆ.
ಆದರೆ,ಸಂಸ್ಕೃತದ ಇಂಥ ಉದಾಹರಣೆಗಳನ್ನು ಪುಸ್ತಕದಲ್ಲಿ ಪ್ರತ್ಯೇಕ ಚೌಕಿನಲ್ಲಿ ಕೊಟ್ಟಿರುತ್ತಾರೆ. ಇದು ಹೆಚ್ಚಿನ ಜ್ಞಾನಕ್ಕಾಗಿ ಮಾತ್ರವಿರುತ್ತದೆ ವಿನಃ ಇದನ್ನು ಕುರಿತು ಯಾವುದೇ ಪ್ರಶ್ನೆಗಳನ್ನು ಕೇಳಬಾರದು ಎಂದು ಸಂಪಾದಕರು ಪ್ರಾರಂಭದಲ್ಲಿಯೇ ತಿಳಿಸಿದ್ದಾರೆ. ಆದರೂ ಟೀಕಿಸುವ ಉದ್ದೇಶವೇನೋ ತಿಳಿಯದು? ನಮ್ಮ ಪುರಾತನ ಜ್ಞಾನವನ್ನು ಇನ್ನು ಮುಂದೆ ಮಕ್ಕಳು ತಿಳಿದುಕೊಳ್ಳುವಂತಾಯಿತು ಎಂದು ನಾವೆಲ್ಲ ಸಂತೋಷಪಟ್ಟಿದ್ದೆವು. ಆದರೆ ಸರ್ಕಾರಗಳು ಬದಲಾವಣೆಗೊಂಡಾಗ ಮೊದಲು ಬದಲು ಮಾಡುವದೇ ಪಠ್ಯಪುಸ್ತಕಗಳನ್ನು ಕಾರಣ ನಮ್ಮ ಮಕ್ಕಳು ಸುಳ್ಳು ಚರಿತ್ರೆಯನ್ನು ವಿದೇಶಿಯರ ಸಾಹಸ ಕಥೆಗಳನ್ನು ಮಾತ್ರ ಓದಿ ತಮ್ಮಲ್ಲಿ ಇರುವ ಅಲ್ಪ ಸ್ವಲ್ಪ ಆತ್ಮವಿಶ್ವಾಸವನ್ನೂ ಕಳೆದುಕೊಳ್ಳುವಂತಾಗಿದೆ.
ಲೇಖಕರಾದ ಐ. ಎಫ್ ಮಾಗಿ ಎನ್ನುವವರು ಡಿ,ಎಡ್ ತರಗತಿಗೆ ಗಣಿತದ ವಿಷಯಾಧಾರಿತ ಬೋಧನೆ ಎಂಬ ಪುಸ್ತಕದಲ್ಲಿ ಸಂಖ್ಯೆಗಳು ಬೆಳೆದು ಬಂದ ದಾರಿ ಕುರಿತು ಬಹಳ ಚನ್ನಾಗಿ ವಿವರಿಸಿದ್ದಾರೆ ಕ್ರಿ.ಶ ೩ನೇ ಶತಮಾನದಲ್ಲೇ ಸಂಖೆಗಳು (ಹಿಂದೂ ಅರೇಬಿಕ ಅಂಕಿಗಳು) ಹೇಗೆ ಬೆಳೆಯುತ್ತಿದ್ದವು ಎಂದು ಉಧಾಹರಣೆ ಸಮೇತ ತೋರಿಸಿದ್ದಾರೆ. ಆದರೆ ಭಾರತದ ಬಹಳಷ್ಟು ಜನರು ಈ ಹಿಂದೂ ಅರೇಬಿಕ ಅಂಕಿಗಳಿಗೆ ಇಂಗ್ಲೀಷ ಅಂಕಿಗಳೆಂದು ಕರೆಯುತ್ತಾರೆ. ಜನರಿಗೇನೋ ತಿಳಿದಿಲ್ಲ ಅನ್ನುತ್ತಾರೆಂದುಕೊಂಡರೆ ಭಾರತದ ಜನಗಣತಿ ಪುಸ್ತಕದಲ್ಲಿ (೨೦೦೧/೨೦೧೧ ಜನಗಣತಿ ಮಾಡುವವರ ಕೈಪಿಡಿಯಲ್ಲಿ) ಕೂಡ ಅರಬ್ಬಿ ಅಂಕಿಗಳನ್ನು ಮಾತ್ರ ಬಳಸಿ ಎಂದು ಬರೆಯಲಾಗಿದೆ. ಅಂದರೆ ಈ ಅಂಕಿಗಳನ್ನು ಅರಬ್ಬರು ಕಂಡುಹಿಡಿದರು ಎಂಬರ್ಥದಲ್ಲಿ.
ಮುಸಲ್ಮಾನರ ಕ್ರೌರ್ಯದ ಆಡಳಿತವನ್ನು ಇದ್ದಕ್ಕಿದ್ದಂತೆ ಹೇಳಿದರೆ ಜನಾಂಗೀಯ ಘರ್ಷಣೆ ಆಗುತ್ತದೆನ್ನುವವರು ಭಾರತೀಯರ ಜ್ಞಾನದ ಬಗ್ಗೆ ಹೇಳಿಕೊಂಡರೆ ಅದರಿಂದ ಯಾವ ನಷ್ಟ ನಮ್ಮ ಮಕ್ಕಳಿಗಾಗುವದೆಂದು ಹೇಳುವದಿಲ್ಲ. ಸುಮ್ಮನೇ ಇಲ್ಲದ್ದನ್ನು ಹೇಳುವದೇಕೆ? ಎಂದು ತಿಪ್ಪೆ ಸಾರಿಸುತ್ತಾರೆ. ಸುರೇಶ್ ಅವರು ಮುಂದುವರಿದು ಹೀಗೆ ಹೇಳುತ್ತಾರೆ. [[ಈ ಪಠ್ಯದಲ್ಲಿ ತುರುಕಿರುವಂತಹ ವಿಷಯಗಳು ಅವೈಜ್ಞಾನಿಕವೂ ಆಧಾರರಹಿತವೂ ಆಗಿವೆ. ಇಂತಹ ದಂತ ಕತೆಗಳನ್ನು ಪಠ್ಯಪುಸ್ತಕದಲ್ಲಿ ಅಳವಡಿಸುವುದರ ಉದ್ದೇಶ ಒಂದೇ. ಆಧುನಿಕ ವಿಜ್ಞಾನದ ಇಂತಹ ಅನೇಕ ಸಂಶೋಧನೆಗಳನ್ನು ನಮ್ಮ ಪೂರ್ವಜರು ಎಂದೋ ಮಾಡಿದ್ದರೆಂಬ ಮಿಥ್ಯೆಗಳನ್ನು ಮುಗ್ಧ ಮನಸ್ಸುಗಳಲ್ಲಿ ಬಿತ್ತಿ ಧರ್ಮಶ್ರೇಷ್ಠತೆ ಮತ್ತು ಕೋಮುಶ್ರೇಷ್ಠತೆಯ ಬೆಳೆಯನ್ನು ಕೊಯ್ಯುವುದೆ ಇದರ ಪ್ರಧಾನ ಉದ್ದೇಶವಾಗಿದೆ. ]]
ನಮ್ಮವರ ಸಾಧನೆಗಳನ್ನು ಶ್ರೇಷ್ಟವೆಂದು ಹೇಳುವದು ಮಿಥ್ಯೆಗಳನ್ನು ಮುಗ್ಧ ಮನದಲ್ಲಿ ಬಿತ್ತಿದಂತಾಗುತ್ತದೆ ಎನ್ನುವದಾದರೆ ಮುಸಲ್ಮಾನರನ್ನು ಕುರಿತು ಹೇಳುವ ಮಿಥ್ಯೆಗಳು ಸರಿಯೋ?? (ಉದಾಹರಣೆಗೆ ತಾಜಮಹಲನ್ನು ಶಹಜಹಾನ ಕಟ್ಟಿಸಿದನೆನ್ನುವದು ಮಿಥ್ಯೆಯಲ್ಲವೆ? ಹಾಗೆ ಇದು ಒಂದು ಜನಾಂಗದ ಮಕ್ಕಳಿಗೆ ಧರ್ಮ ಶೇಷ್ಟತೆ ಕೋಮು ಶ್ರೇಷ್ಟತೆಯನ್ನು ಬೆಳೆಸುವದಿಲ್ಲವೆ?? ಅವರ ( ಮುಸಲ್ಮಾನರ ವಿಷಯ ಬಂದಾಗ) ವಿಷಯದಲ್ಲಿ ಅದೆಲ್ಲ ಸರಿಯೋ???
ಎಲ್ಲಾ ದೇಶಗಳು ತನ್ನವರ ಸಾಧನೆಗಳನ್ನು ಹಾಡಿ ಹೊಗಳುತ್ತವೆ. ಉದಾಹರಣೆಗೆ ತಮ್ಮದು ಸೂರ್ಯ ಮುಳುಗದ ನಾಡು ಎಂದು ಬ್ರಿಟೀಷರು ಹೇಳಿಕೊಳ್ಳುತ್ತಿರಲಿಲ್ಲವೆ?? ಪ್ರತಿ ದೇಶದವರು ತಮ್ಮವರನ್ನು ವೈಭವೀಕರಿಸಿಕೊಳ್ಳುತ್ತಾರೆ ಯಾಕೆ ಗೊತ್ತಾ? ತಮ್ಮ ಇತಿಹಾಸದಿಂದ ತಮ್ಮ ಮಕ್ಕಳು ಸ್ಪೂರ್ತಿಗೊಳ್ಳಲಿ ದೇಶಾಭಿಮಾನ ಬೆಳೆಸಿಕೊಳ್ಳಲಿ ಎಂದು. ಆದರೆ ನಮ್ಮಲ್ಲಿ ಮಾತ್ರ ವಿರುದ್ಧ ಪ್ರಕ್ರಿಯೆಗಳಿವೆ. ಭಾರತ ಮಾತ್ರ ಎಲ್ಲ ವಿಷಯಗಳಲ್ಲಿ ಹೀಗೇಕೆ?? ಆರ್ಯರು ಹೊರಗಿನಿಂದ ಬಂದು ದ್ರಾವಿಡರನ್ನು ದಕ್ಷಿಣಕ್ಕೆ ತಳ್ಳಿದರೆಂಬ ಕಥೆಗಳಿಂದ ಜನಾಂಗೀಯ ಘರ್ಷಣೆಗಳಾಗಿಲ್ಲವೆ??
ಕೊನೆಯದಾಗಿ,ನಮ್ಮ ಮಕ್ಕಳು ಗಣಿತ ಕಲಿಯಲು ಭಯವನ್ನು ತೋರಿಸಿದಾಗ ಶಿಕ್ಷಕರು ಮಗು ಜಗತ್ತಿಗೆ ಗಣಿತ ಕಲಿಸಿದ ದೇಶ ನಮ್ಮದು. ಗಣಿತವು ನಮ್ಮ ರಕ್ತದಲ್ಲಿ ನಮ್ಮ ಡಿ.ಎನ್.ಎ ದಲ್ಲಿ ಹಾಸು ಹೊಕ್ಕಾಗಿದೆ. ಗಣಿತ ಭಾರತೀಯರಿಗೆ ಯಾವತ್ತೂ ಕಬ್ಬಿಣದ ಕಡಲೆಯಲ್ಲಪ್ಪಾ. ನೀನು ಸ್ವಲ್ಪ ಆಸಕ್ತಿ ತೋರಿಸಿದರೆ ನಿನಗೆ ಬಂದೇ ಬರುತ್ತದೆ ಎಂದು ಹೇಳಿದರೆ ಎಂಥ ವಿದ್ಯಾರ್ಥಿಯೂ ಕೂಡ ಆಸಕ್ತಿ ತೋರಿಸುತ್ತಾನೆ . ಆತ್ಮವಿಶ್ವಾಸ ಬೆಳೆಸಿಕೊಳ್ಳುತ್ತಾನೆ. ಅದಕ್ಕಾಗಿಯಾದರೂ ನಮ್ಮ ಪೂರ್ವಿಕರ ಸಾಧನೆಗಳನ್ನು ನಾವು ಹೇಳಿಕೊಳ್ಳಬೇಕಲ್ಲವೆ?? ನಮ್ಮ ಮಕ್ಕಳಿಗೆ ತಿಳಿಸಬೇಕಲ್ಲವೆ?? ಇದರಿಂದಂತೂ ಯಾವ ಜನಾಂಗೀಯ ಘರ್ಷಣೆಗಳಾಗುವದಿಲ್ಲವಲ್ಲಾ??





ಅರುಣ್ ಶೌರಿಯವರ “Eminent Historians” ಪುಸ್ತಕ ಓದಿದರೆ, ಈ ರೀತಿ ಭಾರತ ಮತ್ತು ಭಾರತಕ್ಕೆ ಸಂಬಂಧಿಸಿದ್ದನ್ನೆಲ್ಲಾ ಹೀಗಳೆಯಲು ಕಾರಣಗಳು ತಿಳಿಯುತ್ತವೆ.
ಇದೇ ಪುಸ್ತಕ ಕನ್ನಡದಲ್ಲಿ “ಮಹಾನ್ ಇತಿಹಾಸಕಾರರು” ಹೆಸರಿನಲ್ಲಿ ಅನುವಾದಗೊಂಡಿದೆ.
ಇದೇ ವಿಷಯಕ್ಕೆ ಸಂಬಂಧಿಸಿದ, ಪ್ರತಾಪ್ ಸಿಂಹ ಅವರು ಕನ್ನಡಪ್ರಭ ಅಂಕಣದಲ್ಲಿ ಬರೆದ ಈ ಅತ್ಯುತ್ತಮ ಲೇಖನವನ್ನು ಓದಿ: http://www.kannadaprabha.com/edition/printkp.aspx?artid=146406
ತಲೆಯಲ್ಲಿ ಮಾವೋವಾದಿ ಕಮ್ಯುನಿಷ್ಟ್ ಲದ್ದಿಯನ್ನು ತುಂಬಿಕೊಂಡಿರುವ ಈ ಬಕರಿ ಬೈಲು ಮಹಾಶಯನಿಗೆ ಹೀಗೆ ಕಾಣುವುದು ಸಹಜವೆ!. ಇದು ಈ ಗುಂಪಿನ ( ವಾಂತಿಭಾರತಿ ಗ್ಯಾಂಗ್ ನ ‘ಮಾನವತಾ’ವಾದಿಗಳು) ಇತರ ಎಡ ಲದ್ದಿ ಗಿರಾಕಿಗಳಿಗೂ ಅನ್ವಯಿಸುತ್ತದೆ. ಅವರಿಗೆ ರಾಷ್ಟ್ರಪ್ರೇಮ, ರಾಷ್ಟ್ರೀಯತೆ ವರ್ಜ್ಯ, ಆದರೆ ಗಂಜಿ ಸಂಪಾದನೆ ಮಾತ್ರ ಸರಕಾರಿ ಕೃಪಾಪೋಷಿತವೇ ಆಗಬೇಕು. ಮಾತು ಮಾತಿಗೆ ಶ್ರಮಿಕರ, ಶ್ರಮ ಸಂಸ್ಕೃತಿಯ ಭೀಕರ ಭಾಷಣ, ಬರವಣಿಗೆ. ತಾವು ಬದುಕುವುದು ಉಳಿದವರ ಬೆವರಿನ ಅನ್ನ ಉಂಡು!. ಈ ದೇಶವ ಕಾಡುವ ದರಿದ್ದಗಳು ಇವು. ತಮ್ಮ ಎಂದಿನ ತಿಕ್ಕಲು ನೀತಿಯಿಂದ ನಾಶವಾಗುವ ಹಂತ ಮುಟ್ಟಿ, ಈಗ ಕಾಂಗೈ, ಆಪ್ ಎಂದೆಲ್ಲ ಹೊಸ ಗಂಜಿಕೇಂದ್ರಗಳನ್ನು ಹುಡುಕಿಕೊಳ್ಳುತ್ತಿವೆ. ಇನ್ನು ಕೆಲವು ಎಡ ದರಿದ್ರಗಳು ಆಪ್ ಗೆ ತಗಲಿಕೊಳ್ಳುವ, ತಮ್ಮ ಎಂದಿನ ‘ಮಾನವೀಯ’ ‘ಉನ್ನತ’ ವಿಚಾರಗಳನ್ನು ಅದರ ಮೂಲಕ ಹರಡಲು ಸುರು ಮಾಡಿ, ಆಮೇಲೆ ಅದನ್ನೂ ಇತಿಹಾಸಕ್ಕೆ ಸೇರಿಸುವ ಯೋಜನೆ ಹಾಕಿಕೊಂಡಿವೆ.
ಸಾಯನಾಚಾರ್ಯ ಅದು ಹೇಗೆ ಕರಾರುವಾಕ್ಕಾಗಿ ಲೆಕ್ಕಾಚಾರ ಮಾಡಿದ ಎಂಬ ಬಗ್ಗೆ ಯಾವುದೇ ಕುತೂಹಲವಿಲ್ಲ ಈ ಪಂಡಿತ ಮಹಾಶಯರಿಗೆ. ತಾವು ಹುಟ್ಟಿದ ನಾಡಿನಲ್ಲಿ ಇಂತವನೊಬ್ಬನಿದ್ದ ಎಂಬ ಬಗ್ಗೆ ಹೆಮ್ಮೆಯಿಲ್ಲ. ಪ್ರತಿಭಾವಂತನ ಪ್ರತಿಭೆಗಿಂತ ಜಾತಿ, ಮತ ಮುಖ್ಯ ಈ ಜನಕ್ಕೆ. ಈ ಎಡಬಿಡಂಗಿಗಳು ಬರೆದ ಲೇಖನಗಳನ್ನು ಓದಬೇಕು ನೀವು. ಫಾರೂಖ್ ಶೇಖ್ ಸತ್ತಾಗ ಲೇಖನ ಬರೆದರೆ ಅವರಿಗೆ ಪಾರೂಖ್ ಶೇಖ್ ನ ಮತ ಮುಖ್ಯ, ಬಾಲು ಮಹೇಂದ್ರ ತೀರಿಕೊಂಡಾಗ ಬರೆದರೆ ಬಾಲೂರ ಜಾತಿ ಮುಖ್ಯ!. ಬಾಯಲ್ಲಿ ಹೇಳಿಕೊಳ್ಳುವುದು ಜಾತಿ ಕಂದರ ಕಡಿಮೆ ಮಾಡಬೇಕು..ಆದರೆ ಕೈಯಲ್ಲಿ ಹಿಡಿದಿರುವುದು ಹೊಂಡ ತೋಡುವ ಪಿಕಾಸಿ!. ನಾಚಿಕೆಯಾಗಬೇಕು ಈ ಗಂಜಿ ಗಿರಾಕಿಗಳಿಗೆ.
ವಿಜಯ್ ಸರ್ ಅವರು,
ಈ ಬಕರಿ ಮತ್ತು ಪಾದು ಭಟ್ಟರಿಗೆ ಜಾಡಿಸಿರುವುದು ಸರಿಯಾಗಿದೆ.’ವಾಂತಿ ಬರತ್ರಿ’ ಬಗ್ಗೆ ಮಾತನಾಡದೇ ಸುಮ್ಮನಿರುವುದು ಆರೋಗ್ಯದ ದೃಷ್ಟಿಯಿಂದ ಅಗತ್ಯವಾಗಿದೆ
“ವಾಂತಿಭಾರತಿ ಗ್ಯಾಂಗ್ ನ ‘ಮಾನವತಾ’ವಾದಿಗಳು”
ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಒಬ್ಬ ಪತ್ರಕರ್ತನ ಬಗ್ಗೆ ಆತ ಅಲ್ಪಸಂಖ್ಯಾತ ಎಂಬ ಕಾರಣಕ್ಕೆ ಇಷ್ಟೆಲ್ಲಾ ಅಸಹನೆ ನಿಮಗಿದೆ ಎಂದ ಮೇಲೆ ನಿಮ್ಮಿಂದ ಕೆಟ್ಟ ಭಾಷೆಯ ಹೊರತಾಗಿ ಮತ್ತೇನನ್ನೂ ನಿರೀಕ್ಷಿಸುವುದು ತಪ್ಪು.
@ಶೆಟ್ಕರ್ ಸಾಹೇಬರು..
ಅದೇ ಹೇಳಿದ್ದು.. ಸ್ವಘೋಷಿತ ‘ಸಮಾಜೋದ್ಧಾರಕ’ರಿಗೆ, ‘ಮಾನವತಾವಾದಿ’ ಗಳಿಗೆ ಜಾತಿ/ಧರ್ಮ ಬಿಟ್ಟರೆ ಮತ್ತೇನೂ ಕಾಣುವುದಿಲ್ಲ ಅಂತ! ಸ್ವಾಮಿ.. ಇಲ್ಲಿ ಯಾರು ಅಲ್ಪ ಸಂಖ್ಯಾತರು? ಭಟ್ಟರಾ? 🙂
[ನಿಮ್ಮಿಂದ ಕೆಟ್ಟ ಭಾಷೆಯ ಹೊರತಾಗಿ ಮತ್ತೇನನ್ನೂ ನಿರೀಕ್ಷಿಸುವುದು ತಪ್ಪು.]
ಅಂದಹಾಗೆ ನಿಮ್ಮಿಂದ ಏನನ್ನು ನಿರೀಕ್ಷಿಸಬಹುದು?
@ನವೀನ.. ‘ವಾಂತಿ ಬರತ್ರಿ’ ಅನ್ನುವುದು ಆ ಪತ್ರಿಕೆ(?)ಗೆ ಅತ್ಯಂತ ಸೂಕ್ತವಾದ ಮತ್ತು ಅನ್ವರ್ಥಕವಾದ ಹೆಸರು! 🙂
ಬರಹದ ಉದ್ದೇಶ ಒಳ್ಳೆಯದೇ ಆದರೂ ತಪ್ಪು ಮಾಹಿತಿ ನುಸುಳಿದೆ.
“ಈ ಸೂತ್ರವನ್ನು ಪೈಥಾಗೊರಸನಕ್ಕಿಂತಲೂ ಮೊದಲು ಹೇಳಿದವನು ಭಾಸ್ಕರಾಚಾರ್ಯ ಎಂದು ವಿವರಿಸುತ್ತಾ ಅವನ ಲೀಲಾವತಿ ಗ್ರಂಥದಲ್ಲಿ ಈ ಸಾಲುಗಳನ್ನು ಹೇಳಲಾಗಿದೆ ಎಂದು ಪೈಥಾಗೋರಸನ ಪ್ರಮೇಯದ ರೀತಿಯಲ್ಲಿ ಬಿಡಿಸಬಹುದಾದ ಒಂದು ಲೆಕ್ಕವನ್ನು ತಿಳಿಸಿದ್ದರು.”
ಭಾಸ್ಕರನ ಲೀಲಾವತಿ ಸುಮಾರು ಕ್ರಿ.ಶ. ಆರು-ಏಳನೇ ಶತಮಾನದ್ದು. ಪೈಧಾಗೊರಸ್ ಕ್ರಿ.ಪೂ. ಆರನೇ ಶತಮಾನದವನು, ಅಂದರೆ ಭಾಸ್ಕರನಿಗಿಂತ ಸಾವಿರ ವರ್ಷ ಮೊದಲಿನವನು.
ಇಲ್ಲಿ ಹೇಳಬೇಕಾಗಿದ್ದು ಬೌಧಾಯನ/ಆಪಸ್ತಂಭರ ಶುಲ್ಬ ಸೂತ್ರಗಳು ಎಂದು. ಅತಿ ಕಡಿಮೆ ಎಂದರೂ ಇವರು ಪೈಥಾಗೊರಸ್ ಗಿಂತ ಮುಂಚಿನವರು ಎಂದು ಒಪ್ಪಲಾಗಿದೆ. ಈ ಸೂತ್ರಗಳಲ್ಲಿ ಪೈಥಾಗೊರಿಯನ್ ಅಂಕಿಗಳ ಬಗ್ಗೆ ತಿಳಿಸಲಾಗಿದೆ. ಆದರೆ ಪ್ರಮೇಯವನ್ನು ಸಾಧಿಸಿ ತೋರಿಸಿಲ್ಲ ಎಂದು ಕಾಣುತ್ತದೆ. ಭಾರತದಲ್ಲಿ ಬಂದ ಇಂತಹ ಪುಸ್ತಕಗಳು ಹೆಚ್ಚಾಗಿ ಪ್ರಾಯೋಗಿಕ ವಿಷಯಕ್ಕೆ, ಬಾಯಿ ಪಾಠಕ್ಕೆ ಅನುವಾಗುವಂತೆ ಬರೆದಿದ್ದರಿಂದ ಪ್ರಮೇಯದ ಸಾಧನೆ ಅವರಿಗೆ ಗೊತ್ತಿತ್ತು ಅಥವಾ ಗೊತ್ತೇ ಇರಲಿಲ್ಲ ಎಂದು ಯಾವ ಕಡೆಗೂ ವಾದಿಸುವುದು ಕಷ್ಟವಾಗುತ್ತೆ.
ಬೌಧಾಯನ ಶುಲ್ಬ ಸೂತ್ರದಲ್ಲಿ ಬೀಜಗಣಿತದ ಸೂತ್ರದ ಮೂಲಕ ಹುಡುಕಿರುವ “Pythagorean triples”, ತಥಾಕಥಿತ ಪೈಥಾಗೊರಸ್ ಪ್ರಮೇಯದ ವಿವರ ಮತ್ತು “isosceles right triangle” ಅನ್ನು ಆಧಾರವಾಗಿರಿಸಿಕೊಂಡು ಪ್ರಮೇಯವನ್ನು ಸಾಧಿಸಿ ತೋರಿಸಲಾಗಿದೆ.
ಆಪಸ್ತಂಭ ಶುಲ್ಬ ಸೂತ್ರದಲ್ಲಿ “area computation” ಮೂಲಕ ಪ್ರಮೇಯವನ್ನು ಸಾಧಿಸಿ ತೋರಿಸಲಾಗಿದೆ.
ಇದಕ್ಕೆ ಸಂಬಂಧಿಸಿದ ಸಂಶೋಧನಾ ಲೇಖನವನ್ನು ಇಲ್ಲಿ ಓದಬಹುದು: http://www.academia.edu/4905149/_Sulba_Sutra_of_Vedic_India_and_Pythagorean_Principle_of_Mathematics_
[[ಭಾಸ್ಕರನ ಲೀಲಾವತಿ ಸುಮಾರು ಕ್ರಿ.ಶ. ಆರು-ಏಳನೇ ಶತಮಾನದ್ದು. ಪೈಧಾಗೊರಸ್ ಕ್ರಿ.ಪೂ. ಆರನೇ ಶತಮಾನದವನು, ಅಂದರೆ ಭಾಸ್ಕರನಿಗಿಂತ ಸಾವಿರ ವರ್ಷ ಮೊದಲಿನವನು]] ನನ್ನ ಲೇಖನದಲ್ಲಿನ ನನ್ನ ತಪ್ಪುಗಳನ್ನು ಎತ್ತಿ ತೋರಿಸಿದ್ದಲ್ಲದೇ ಸರಿಯಾದುದು ಯಾವುದೆನ್ನುವದನ್ನು ತಿಳಿಸಿ ಹೇಳಿದ ನೀಲಾಂಜನರವರಿಗೂ ಹಾಗೂ ಪೈಥಾಗೋರಸನ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿಯಲು ಸಹಾಯವಾಗುವಂತೆ ಕೆಲವು ಕೊಂಡಿಗಳನ್ನು ನೀಡಿ ಉಪಕರಿಸಿದ ssnk ಅವರಿಗೂ ನನ್ನ ಅನಂತ ಕೃತಜ್ಞತೆಗಳು. ಶ್ರಿಯುತ ಶೆಟ್ಕರ್ ಅವರೆ ದಯವಿಟ್ಟು ವಿಷಯದ ಬಗ್ಗೆ ಚರ್ಚಿಸಿ . ನೀಲಾಂಜನರಂತೆ ssnk ಅವರಂತೆ ನಾನು ತಪ್ಪು ಹೇಳಿದ್ದರೆ ತಿದ್ದಿರಿ. ಇರಲಿ, ಅದೇಕೋ ಕೆಲವು ಪುಸ್ತಕಗಳಲ್ಲಿ ಅದು ಹೇಗೋ ಪೈಥಾಗೋರಸನು ಭಾಷ್ಕರಾಚಾರ್ಯರಕ್ಕಿಂತ ನಂತರದವನು ಎಂದು ಬಂದು ಬಿಟ್ತಿದೆ. ಹೇಗೋ ಗೊತ್ತಿಲ್ಲ. ಹೀಗಾಗಿ ನನಗೆ ಹೇಳಿದವರು ಆರೀತಿ ಹೇಳಿರಬಹುದೇನೋ?? ಇನ್ನು ಮುಂದೆ ಈ ತಪ್ಪನ್ನು ನಾನು ತಿದ್ದಿಕೊಳ್ಳುತ್ತೇನೆ.
ಐನ್ಸ್^ಟೈನ್, ಕಾರ್ಲ್ ಸಗಾನ್, ಜೆಫರ್^ಸನ್, ಇತ್ಯಾದಿ ಸುವಿಖ್ಯಾತರು ಭಾರತದ ವಿಜ್ಞಾನ-ಗಣಿತ-ತತ್ತ್ವಜ್ಞಾನಗಳು ಯಾವ ರೀತಿ ಪಶ್ಚಿಮದ ಮೇಲೆ ಪ್ರಭಾವ ಬೀರಿದೆ ಎನ್ನುವುದನ್ನು ಈ ಕೊಂಡಿಯಲ್ಲಿ ಓದಬಹುದು:
http://oldthoughts.wordpress.com/2009/08/25/voltaire-on-pythagorass-visit-to-india-science-from-east-to-west/
ಪೈಥಾಗೊರಸ್ ತನ್ನ ಪ್ರಮೇಯವನ್ನು ಶುಲ್ಬ ಸೂತ್ರದಿಂದಲೇ ಪಡೆದಿರಬೇಕೆಂದು ಈ ಕೊಂಡಿಯಲ್ಲಿ ಹೇಳಲಾಗಿದೆ:
http://en.wikibooks.org/wiki/Famous_Theorems_of_Mathematics/Pythagoras_theorem
ಮತ್ತು ಪೈಥಾಗೊರಸ್ ಭಾರತಕ್ಕೆ ಪ್ರವಾಸಗೈದಿದ್ದ; ಆ ಸಮಯದಲ್ಲೇ ಆತ ಗಣಿತ, ಖಗೋಳಶಾಸ್ತ್ರ ಮತ್ತು ತತ್ತ್ವಜ್ಞಾನಗಳನ್ನು ಕಲಿತ ಎಂದು ಹೇಳಲಾಗಿದೆ. ಈ ಕಾರಣದಿಂದಾಗಿಯೇ ಪೈಥಾಗೊರಸ್ ಪ್ರಚುರಪಡಿಸಿದ ತತ್ತ್ವಜ್ಞಾನದಲ್ಲಿ ಹಿಂದೂ ಕರ್ಮ ಸಿದ್ಧಾಂತವನ್ನು ಧಾರಾಳವಾಗಿ ಕಾಣಬಹುದು. ಅಲ್ಲಿಯವರೆಗೆ ಗ್ರೀಸ್ ದೇಶದಲ್ಲಾಗಲೀ, ಯೂರೋಪಿನ ಇನ್ಯಾವುದೇ ದೇಶದಲ್ಲಾಗಲೀ ಕರ್ಮಸಿದ್ಧಾಂತವನ್ನು ಯಾರೂ ತಿಳಿಸಿರಲಿಲ್ಲ ಎನ್ನುವುದು ಗಮನಿಸಬೇಕಾದ ವಿಷಯ.
ಮುಂದೆ ಬಂದಂತಹ ಅರಿಸ್ಟಾಟಲ್, ಪ್ಲೇಟೋ, ಇತ್ಯಾದಿ ತತ್ತ್ವಜ್ಞಾನಿಗಳೆಲ್ಲರಿಗೂ ಪೈಥಾಗೊರಸ್ ಗುರುವಿನ ಸ್ಥಾನದಲ್ಲಿದ್ದವನು.
“ಪೈಥಾಗೊರಸ್ ಭಾರತಕ್ಕೆ ಪ್ರವಾಸಗೈದಿದ್ದ; ಆ ಸಮಯದಲ್ಲೇ ಆತ ಗಣಿತ, ಖಗೋಳಶಾಸ್ತ್ರ ಮತ್ತು ತತ್ತ್ವಜ್ಞಾನಗಳನ್ನು ಕಲಿತ ಎಂದು ಹೇಳಲಾಗಿದೆ.”
ಹೇ ಹೇ! ಒಳ್ಳೆ ತಮಾಷೆ ಮಾಡ್ತೀರ್ರಿ! ಪೈಥಾಗೊರಸ್ ಅವನ ಹೆಸರಿನ ಪ್ರಮೇಯವನ್ನು ಕಲಿತದ್ದು ನಿಮ್ಮೂರಿನ ಮಠದ ಪಾಠಶಾಲೆಯಲ್ಲಿ ಅಲ್ವಾ!
[[ಹೇ ಹೇ! ಒಳ್ಳೆ ತಮಾಷೆ ಮಾಡ್ತೀರ್ರಿ! ಪೈಥಾಗೊರಸ್ ಅವನ ಹೆಸರಿನ ಪ್ರಮೇಯವನ್ನು ಕಲಿತದ್ದು ನಿಮ್ಮೂರಿನ ಮಠದ ಪಾಠಶಾಲೆಯಲ್ಲಿ ಅಲ್ವಾ!]]
ಶೇಟ್ಕರ್ ಅವರೇ,
ನಾನು ಪುರಾವೆ ಇಲ್ಲದೆ ಹೇಳಿದ ಮಾತಲ್ಲ ಅದು.
ಪೈಥಾಗೊರಸ್ ಭಾರತಕ್ಕೆ ಬಂದಿದ್ದ ಮತ್ತು ಇಲ್ಲಿಂದ ಗಣಿತ, ಖಗೋಳ ಮತ್ತು ತತ್ತ್ವಶಾಸ್ತ್ರಗಳನ್ನು ಕಲಿತುಕೊಂಡ ಎಂದು ಅವರ ದೇಶದವರೇ ಬರೆದಿದ್ದಾರೆ.
ನಿಮ್ಮಂತೆಯೇ ಸಂಶೋಧನ ಗ್ರಂಥ ಸಂಪಾದಿಸಿದವರೊಬ್ಬರು ಬರೆದಿರುವ ಅದರ ಕುರಿತಾಗಿ ಇಲ್ಲಿ ಬರೆದಿದ್ದಾರೆ, ಒಮ್ಮೆ ಕಣ್ತೆರೆದು (ಮನಸ್ಸನ್ನೂ ತೆರೆದು) ಓದಿ ನೋಡಿ: http://www.academia.edu/4905149/_Sulba_Sutra_of_Vedic_India_and_Pythagorean_Principle_of_Mathematics_
ಪೈಥಾಗೊರಸ್ ಭಾರತಕ್ಕೆ ಬಂದಿದ್ದ ಎಂದ ಕೂಡಲೇ ಮಠಕ್ಕೇ ಬಂದಿರಬೇಕೆಂದು ನಿಮಗೇಕೆ ಸಂದೇಹ.
ಅವನು ಯಾವುದೋ ಗುರುಕುಲಕ್ಕೆ ಹೋಗಿರಬಹುದು, ಪಂಡಿತರೊಡನೆ ಚರ್ಚಿಸಿರಬಹುದು.
ಅವನು ಭಾರತಕ್ಕೆ ಬಂದಿದ್ದ ಮತ್ತು ಆತನ ಚಿಂತನೆಯ ಮೇಲೆ ಭಾರತವು ಪ್ರಭಾವ ಬೀರಿದೆ ಎಂದ ಕೂಡಲೇ ನಿಮಗೇಕೆ ಇಷ್ಟೊಂದು ಹೊಟ್ಟೆಯುರಿ?
ನಾನೇನೂ ಇಲ್ಲಿ ಯಾವುದೇ ಜಾತೀಯ ವಿಷಯವನ್ನು ಚರ್ಚಿಸಿಲ್ಲ. ಪೈಥಾಗೊರಸ್ ಭಾರತಕ್ಕೆ ಸೇರಿದವನಲ್ಲವಾದ್ದರಿಂದ ಆತನಿಗೆ ಜಾತಿಯಿಲ್ಲ. ಹೀಗಿದ್ದಾಗ್ಯೂ, ನೀವು “ಮಠ” ಎನ್ನುವ ಪದದ ಮೂಲಕ, ಈ ಚರ್ಚೆಗೂ ಜಾತಿಯನ್ನು ಎಳೆದು ತರಲು ಪ್ರಯತ್ನಿಸುತ್ತಿದ್ದೀರಲ್ಲ, ನಿಮಗೆ ನಾಚಿಕೆಯಾಗೋಲ್ವೇ!?
ಇದೇಯೇನು ನಿಮ್ಮಂತ ಶರಣರ “ಶೇಟ್ಕರತ್ವ”? 😉
ಐನ್ ಸ್ಟೈನ್ ಮಹಾಶಯನ ಸಾಪೇಕ್ಷ ಸಿದ್ಧಾಂತ ಕೂಡ ನಿಮ್ಮ ವೈದಿಕ ಮಠಗಳಲ್ಲಿ ನೂರಾರು ವರ್ಷಗಳ ಹಿಂದೆಯೇ ತಯ್ಯಾರಾಗಿತ್ತು ಆಲ್ವಾ? ಹೇ ಹೇ! ನಿಮ್ಮಂತಹ ಮೂಢರ ದೆಸೆಯಿಂದಲೇ ನಮ್ಮ ನಾಡಿನಲ್ಲಿ ಸಹಸ್ರಾರು ವರ್ಷಗಳ ಕಾಲ ವೈಜ್ಞಾನಿಕ ಮನೋಭಾವ ಬೆಳೆಯದೇ ಹೋಗಿದ್ದು. ಬಸವಣ್ಣನವರ ನೇತೃತ್ವದಲ್ಲಿ ಶರಣರು ವೈಚಾರಿಕತೆಯನ್ನು ಬಿತ್ತುವ ಕೆಲಸ ಮಾಡಿದರು.
[[ನಿಮ್ಮಂತಹ ಮೂಢರ ದೆಸೆಯಿಂದಲೇ ನಮ್ಮ ನಾಡಿನಲ್ಲಿ ಸಹಸ್ರಾರು ವರ್ಷಗಳ ಕಾಲ ವೈಜ್ಞಾನಿಕ ಮನೋಭಾವ ಬೆಳೆಯದೇ ಹೋಗಿದ್ದು. ]]
“ಗೋರ್ಕಲ್ಲ ಮೇಲೆ ಮಳೆ ಹುಯ್ದಂತೆ” ಎಂದು ಸರ್ವಜ್ಞ ಹೇಳಿದ್ದು ನಿಮ್ಮನ್ನು ಕುರಿತೇ.
ನೀವು ಯಾವುದೇ ಆಧಾರವಿಲ್ಲದೆ ಮಾತನಾಡುವಿರಿ, ಇಲ್ಲಸಲ್ಲದ ಆರೋಪ ಮಾಡುವಿರಿ.
ನಾನು ಎತ್ತಿದ ವಿಷಯಕ್ಕೆ ಸಂಬಂಧಿಸಿದ ಪುರಾವೆಯನ್ನು ನಾನು ಈಗಾಗಲೇ ನಿಮಗೆ ಒದಗಿಸಿದ್ದೇನೆ.
ಅದನ್ನು ಒಮ್ಮೆಯೂ ಕಣ್ಣೆತ್ತಿ ನೋಡದೆ, ಐನ್ಸ್^ಟೈನ್ ವಿಷಯಕ್ಕೆ ಬಂದುಬಿಟ್ಟಿರುವಿರಿ. ನಾನು ಐನ್ಸ್^ಟೈನ್ ವಿಷಯವನ್ನು ಇಲ್ಲಿ ಹೇಳಿಲ್ಲ. ಸತ್ಯವನ್ನು ಒಪ್ಪಿಕೊಳ್ಳದ ನಿಮ್ಮ ಬುದ್ಧಿ ಎಷ್ಟು ಚೆನ್ನಾಗಿ ಬೆಳಕಿಗೆ ಬಂದಿತು ನೋಡಿ!
ನಮ್ಮ ನಾಡಿನಲ್ಲಿ ಸಹಸ್ರಾರು ವರ್ಷಗಳಿಂದ ವೈಜ್ಞಾನಿಕ ಮನೋಭಾವ ಬೆಳೆಯಲಿಲ್ಲ ಎಂದು ಆರೋಪಿಸಿರುವಿರಿ.
ನೀವದಕ್ಕೆ ಪುರಾವೆ ಒದಗಿಸಬಲ್ಲಿರೇನು?
ನೀವು ಹೇಳಿದ್ದನ್ನು ಐನ್ಸ್^ಟೈನ್ ಅವರ ಈ ಹೇಳಿಕೆ ಅಲ್ಲಗಳೆಯುತ್ತದೆ:
“We owe a lot to the Indians, who taught us how to count, without which no worthwhile scientific discovery could have been made. -Albert Einstein”
ಇದರ ಕುರಿತಾಗಿ ಈ ಕೊಂಡಿ ನೋಡಿ: http://www.inspirationalstories.com/quotes/albert-einstein-we-owe-a-lot-to-the-indians/
ಇಲ್ಲ ಶೆಟ್ಕರ್ ರವರೇ, ಐನ್ ಸ್ಟೈನ್ ರವರ ಸಾಪೇಕ್ಷ ಸಿದ್ಧಾಂತದಿಂದ ಹಿಡಿದು ಎಲ್ಲವುಗಳೂ ಕುರಾನ್ ನಲ್ಲಿ ಇವೆ. ಕುರಾನ್ ಸರಿಯಾಗಿ ಅರ್ಥ ಮಾಡಿಕೊಂಡರೆ ಇನ್ಯಾವುದೇ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವ ಅವಶ್ಯಕತೆ ಇಲ್ಲ.
ಖುರಾನ್ ನಲ್ಲಿ ಎಲ್ಲಾ ಇದೆ ಅಂತ ಸ್ವತಹ ಖುರಾನ್ ಹೇಳಿಕೊಂಡಿಲ್ಲ. ಆದರೆ ವೈದಿಕರು ಮಾತ್ರ ವಿಜ್ಞಾನದ ಸಾರಸರ್ವವೂ ವೇದಗಳಲ್ಲಿವೆ ಅಂತ ಗಲಾಟೆ ಮಾಡುತ್ತಲೇ ಇದ್ದಾರೆ.
ಸುಪ್ರಸಿದ್ಧ ಫ್ರೆಂಚ್ ಇತಿಹಾಸಕಾರ, ಲೇಖಕ ಮತ್ತು ತತ್ತ್ವಜ್ಞಾನಿಯಾದ ವೋಲ್ಟಾಯರ್ ಅವರು ಭಾರತದ ಕುರಿತಾಗಿ ಹೀಗೆ ಹೇಳಿರುವರು:
“I am convinced that everything has come down to us from the banks of the Ganges, – astronomy, astrology, metempsychosis, etc. It is very important to note that some 2,500 years ago at the least Pythagoras went from Samos to the Ganges to learn geometry…But he would certainly not have undertaken such a strange journey had the reputation of the Brahmins’ science not been long established in Europe. -Voltaire”
ಇದರ ಬಗ್ಗೆ ಈ ಕೊಂಡಿಯಲ್ಲಿ ನೋಡಿ: http://thinkexist.com/quotation/i-am-convinced-that-everything-has-come-down-to/763398.html
ಪಶ್ಚಿಮದ ಇತರ ಸುಪ್ರಸಿದ್ಧರು ಪ್ರಾಚೀನ ಭಾರತ ವೈಜ್ಞಾನಿಕ ಮನೋಭಾವದ ಕುರಿತಾಗಿ ಏನು ಹೇಳಿರುವರೆಂಬುದನ್ನು ತಿಳಿಯಲು: http://www.hinduwisdom.info/quotes1_20.htm
ssnk ಅವರೆ ನೀವು ತಿಳಿಸಿದ ಮೇಲಿನ ಲಿಂಕ್ ಅನ್ನು ನಾನು ನೋಡಿದೆ . ಬಹಳಷ್ಟು ಬಹುಶಃ ಒಂದು ಪುಸ್ತಕಕ್ಕಾಗುವಷ್ಟು ಮಾಹಿತಿ ಅದರಲ್ಲಿದೆ . ಆದರೆ…. ಕೆಲವು ಸಾಲುಗಳು ಏನು ಹೇಳುತ್ತಿವೆ ಎನ್ನುವದು ನನಗೆ ಸರಿಯಾಗಿ ಅರ್ಥವಾಗಲಿಲ್ಲ. ಈ ಲೇಖನದ ಕನ್ನಡ ಭಾಷಾಂತರ ಸಿಗಬಹುದೆ? ತಿಳಿಸಿದರೆ ನಾನು ಉಪಕೃತ.
ಶೇಟ್ಕರ್ ಅವರೇ,
ನಾವಿಲ್ಲಿ ಚರ್ಚಿಸುತ್ತಿರುವುದು ವಿಜ್ಞಾನ ಮತ್ತು ಅದಕ್ಕೆ ಸಂಬಂಧಿಸಿದ ವಿಷಯವನ್ನು. ಇಲ್ಲಿ ಲಿಂಗಾಯತ ಮತ ಅಥವಾ ಶರಣರ ಪಂಥ ಅಥವಾ “ಶೇಟ್ಕರತ್ವ” ಚರ್ಚಿಸಲಾಗುತ್ತಿಲ್ಲ.
ನೀವು “ಗಾಳಿಯಲ್ಲಿ ಹೇಳಿಕೆ ನೀಡುವುದನ್ನು” ವಿಜ್ಞಾನವು ಒಪ್ಪುವುದಿಲ್ಲ.
ನಿಜಕ್ಕೂ ನಿಮಗೆ ಈ ಚರ್ಚೆಯಲ್ಲಿ ಭಾಗವಹಿಸುವ ಆಸಕ್ತಿಯಿದ್ದರೆ, ನಿಮ್ಮ ಹೇಳಿಕೆಗಳಿಗೆ ಸರಿಯಾದ ಪುರಾವೆ ನೀಡಿ ಮತ್ತು ಅರ್ಥಪೂರ್ಣವಾಗಿ ಬರೆಯಿರಿ.
ನೀವು ಅಲ್ಲಸಲ್ಲದ ಆರೋಪ ಮಾಡುವುದನ್ನು ಮುಂದುವರೆಸಿದರೆ, “ಬಾಯಿಬಿಟ್ಟರೆ ಬಣ್ಣಗೇಡು” ಎಂಬಂತೆ, ನಿಮ್ಮ “ವೈಜ್ಞಾನಿಕ ಮನೋಭಾವದ ಅಭಾವ” ಎಲ್ಲರಿಗೂ ತಿಳಿದು ನಗೆಪಾಟಲಾಗುವಿರಿ ಎನ್ನುವ ಎಚ್ಚರವಿರಲಿ.
ಸ್ವಾಮೀ ನಾಗಶೆಟ್ಟಿ ಶೆಟ್ಕರರೆ,
ದಾಸರು, ಶರಣರು, ಬೌದ್ಧ ಬಿಕ್ಷುಗಳು, ಮೌಲ್ವಿಗಳು, ಉವಝಾಯರು, ಮಠದ ಸ್ವಾಮಿಗಳು ಮೊದಲಾದವರು ಹೇಳುವ ಆಧ್ಯಾತ್ಮ, ನಂಬಿಕೆ ಇತ್ಯಾದಿಗಳ ವೈಚಾರಿಕತೆ ಇಲ್ಲಿ ಬೇಕಾಗಿಲ್ಲ ಅನ್ನಿಸುತ್ತೆ. ಒಂದು ವೇಳೆ ಅವರಲ್ಲಿ ಯಾರಾದರೂ ಪೈಥಾಗೊರಾಸ್ ಪ್ರಮೇಯದ ವಿಷಯವೇ ಆಗಲಿ, ಪೈ ಬಗ್ಗೆ ಆಗಲಿ, ಮಾತಾಡಿದಾಗ, ಅವರು ಯಾರೇ ಆಗಿರಲಿ – ಹಾ, ಅದರಲ್ಲಿ ದಾಸರೂ ಶರಣರೂ ನಮ್ಮ ನಿಮ್ಮಂತಹ ಸಾಮಾನ್ಯ ಜನರೂ ಸೇರಿದಂತೆ- ಅದನ್ನು ತೆರೆದ ಕಿವಿಗಳಿಂದ ಕೇಳುವುದೂ ಅಷ್ಟೇ ಮುಖ್ಯ.
ವೈದಿಕತೆಯು ಮೂಢನಂಬಿಕೆಗಳನ್ನು ಭಾರತ ಉಪಖಂಡದ ಸಮಾಜದಲ್ಲಿ ಬಿತ್ತಿ ಶೋಷಣೆಯ ಫಸಲನ್ನು ಸಹಸ್ರಾರು ವರ್ಷಗಳ ಕಾಲ ತೆಗೆಯಿತು. ದಮನಿತರ ನೆತ್ತರನ್ನು ಹೀರಿ ಸುಖ ಪಡುತ್ತಿದ್ದಾಗ ವೈದಿಕಶಾಹಿಗೆ ವಿಜ್ಞಾನ ಹಾಗೂ ವೈಚಾರಿಕತೆ ಬೇಕಿರಲಿಲ್ಲ. ಇಂದು ವಿಶ್ವಾದ್ಯಂತ ವಿಜ್ಞಾನ ಮನೆಮಾತಾಗಿರುವ ಸಂದರ್ಭದಲ್ಲಿ ಪಡಪೋಸಿ ವೈದಿಕರು ಪೈಥಾಗೊರಸ್ ಮೊದಲಾದ ಸಾಧಕರ ಸಾಧನೆಗಳು ತಮ್ಮದೇ ಎಂದು ತಗಾದೆ ತೆಗೆಯುತ್ತಿರುವುದು ಅವರ ಲಜ್ಜಭಂಡತನದ ದ್ಯೋತಕವೇ ಆಗಿದೆ.
ಕೋಣದ ಮುಂದೆ ತುತ್ತೂರಿ ಬಾರಿಸಿದರೆ ಒಂದು ನಾಲ್ಕು ಸಲ ಬಾರಿಸಿದ ಮೇಲಾದರೂ ಅದು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬಹುದೇನೊ, ಪ್ರಯಾಸಪಡಬಹುದೇನೊ..ಆದರೆ ಈ ಸಾಹೇಬರ ಮುಂದೆ…… :).
ಅಂದಹಾಗೆ ವಿಚಾರವಾದಿ ಸಾಹೇಬರೆ, ಬಸವಣ್ಣನವರು ಏನಾದರೂ ವಿದೇಶಕ್ಕೆ ಹೋಗಿ ಉನ್ನತ ವ್ಯಾಸಂಗ ಮಾಡಿಕೊಂಡು ಬಂದು ಇಲ್ಲಿ ಬೋಧಿಸಿದರೆ? ಅಥವಾ ವಿದೇಶಿ ಲೇಖಕರನ್ನು ಓದಿ, ಅದರ ಆಧಾರದಲ್ಲಿ, ಇಲ್ಲಿ ನೀವು ಹೇಳುವ ‘ವಿಚಾರವಾದ’ವನ್ನು ಬೋಧಿಸಿದರೆ?
ಶೆಟ್ಕರ್ ಸಾರ್ ಅವರು ಈ ಮಟ್ಟಿಗೆ ಬ್ರಾಹ್ಮಣ ದ್ವೇಷ ಮಾಡುವುದು ವಿಚಿತ್ರವಾಗಿದೆ.ಹಾಗೆಯೇ ಅವರು ವೈಚಾರಿಕತೆ ಮತ್ತು ವೈಜ್ಞಾನಿಕತೆ ಎರಡೂ ಒಂದೇ ಎನ್ನುಬ ಭ್ರಮೆಯಲ್ಲಿ ಮುಳುಗಿರುವುದನ್ನು ಗಮನಿಸಬಹುದಾಗಿದೆ
ಕಾಲೆಳೆಯುವುದನ್ನೇ ತಮ್ಮ ನಿತ್ಯ ಕಾಯಕವನ್ನಾಗಿ ಮಾಡಿಕೊಂಡಿರುವ ಮತ್ತು ತಮ್ಮ ಅಸಂಬದ್ಧ, ಅವೈಜ್ಞಾನಿಕ, ಅತಾರ್ಕಿಕ, ಜಾತೀಯ ಧ್ವೇಷದ ಪ್ರತಿಕ್ರಿಯೆಗಳ ಮೂಲಕ ಉತ್ತಮ ಚರ್ಚೆಗಳನ್ನೂ ಹಳ್ಳಹಿಡಿಸುವ ಕಲೆಯಲ್ಲಿ ನಿಷ್ಣಾತರಾಗಿರುವ ಶೇಟ್ಕರರು, ತಾವು ನಿಲುಮೆಯ ಆಸ್ಥಾನ ವಿದೂಷಕರೆಂದು ಒಪ್ಪಿಕೊಂಡಿದ್ದಾರೆ. ಶತಾವಧಾನದಲ್ಲಿ ಅಪ್ರಸ್ತುತ ಪ್ರಸಂಗಿಯ ಪಾತ್ರಕ್ಕೆ ಇವರದು ಹೇಳಿ ಮಾಡಿಸಿದ ಪ್ರತಿಭೆ. ಸರ್ಕಸ್^ನಲ್ಲಿಯೂ Joker ಸ್ಥಾನಕ್ಕೆ ಇವರಿಗಿಂತ ಮತ್ತೊಬ್ಬರು ಸೂಕ್ತ ವ್ಯಕ್ತಿ ಇರಲಾರರು.
ಚರ್ಚೆಯಲ್ಲಿ ಚರ್ಚಿಸುತ್ತಿರುವ ವ್ಯಕ್ತಿಗಳ ಏಕಾಗ್ರತೆಯನ್ನು ಇವರು ಪರೀಕ್ಷಿಸಲೆಂದೇ ಅಸಂಬದ್ಧ ಪ್ರತಿಕ್ರಿಯೆಗಳನ್ನು ದಾಖಲಿಸುತ್ತಾರೆ.
ಗಂಭೀರವಾಗಿ ನಡೆಯುವ ಚರ್ಚೆಗಳು ಕೆಲವೊಮ್ಮೆ ಬೋರ್ ಹೊಡೆಸಬಹುದು. ಅದು ಹಾಗಾಗಬಾರದೆಂದು, ಶೇಟ್ಕರರು ಪ್ರವೇಶಿಸಿ ತಮ್ಮ ಅಸಂಬದ್ಧ ಪ್ರತಿಕ್ರಿಯೆಗಳನ್ನು ನೀಡುತ್ತಾರೆ.
ಇದನ್ನೆಲ್ಲಾ ಚರ್ಚೆಯಲ್ಲಿ ಭಾಗವಹಿಸುತ್ತಿರುವ ಪ್ರಬುದ್ಧರು ಅರ್ಥ ಮಾಡಿಕೊಂಡಿದ್ದಾರೆಂದು ಭಾವಿಸುವೆ.
ನಿಜ ನರೇಂದ್ರ ಸಾರ್, ನಮ್ಮ ಶೆಟ್ಕರ್ ಸಾರ್ ಅವರ ಹಾಸ್ಯ ಪ್ರಜ್ಞವನ್ನು ಮೆಚ್ಚಲೇಬೇಕಾಗಿದೆ.ಅವರ “ಅಧ್ವಾನ” ಸಿದ್ಧಾಂತದ ಮೂಲಕ ಅವರು ಎಲ್ಲರಲ್ಲೂ ನಗು ಉಕ್ಕಿಸುವುದು ಸಾಮಾನ್ಯಸಂಗತಿಯಲ್ಲವಾಗಿದೆ
ಇದನ್ನು ಓದಿ ಶೆಟ್ಕರ್ ಸಾರ್, ನಿಮ್ಮ ನೆಚ್ಚಿನ ಪತ್ರಿಕೆಯಲ್ಲಿ ಬಂದಿದೆ
http://goo.gl/JcnJlD
ನವೀನ..
ಈ ಲೇಖನ ಬರೆದ ಪುಷ್ಪಾ ಸುರೇಂದ್ರ ವೈದಿಕರಿರಬೇಕು!. ನಮ್ಮ ಸಾಹೇಬರು ಇದರ ಮೇಲೆ ತಮ್ಮ ಕೆಂಬಣ್ಣದ ಟಾರ್ಚ ಬೆಳಕು ಬಿಳಿಸಲಿ..:)
ವಿಜಯ್ ಪೈ ಅವರ ಹೇಳಿಕೆಗೆ ನನ್ನ ಸಹಮತವಿದೆ. ಇಂಥ ಲೇಖನವನ್ನು ಪ್ರಜಾವಾಣಿ ಹೇಗೆ ಪ್ರಕಟಿಸಿತೂ???????
ಅಧ್ವಾನ ಸಿದ್ಧಾಂತ ನಿಮ್ಮ ಗ್ಹೆಂಟ್ ಗುರುವಿನದ್ದು. ನಮ್ಮದೇನಿದ್ದರೂ ಬಸಾವದ್ವೈತ.
ನನ್ನ ನಿಂದನೆ ನಿಮ್ಮ ಹುಳುಕನ್ನು ಮುಚ್ಚುವುದಿಲ್ಲ. ನಿಮ್ಮ ಪೂರ್ವಜರ ಸಾಧನೆಗಳ ಬಗ್ಗೆ ಸುಳ್ಳು ಗರ್ವ ಪಡುವ ಬದಲು ನೀವೇ ಏನಾದರೂ ಸಾಧನೆ ಮಾಡಿ ತೋರಿಸಿ. ವೈದಿಕತೆಯ ಜಡ್ಡು ನಿಮ್ಮ ಮಿದುಳನ್ನು ನಿಷ್ಕ್ರಿಯಗೊಳಿಸಿದೆ.
ತಾವು ಹೇಳುವುದು ತಮಗೂ ಅನ್ವಯಿಸುತ್ತದೆ ಎನ್ನುವುದು ಈ ಭೋಧನಾಪ್ರಿಯ ಸಾಹೇಬರಿಗೆ ಏಕೆ ಅನಿಸುವುದಿಲ್ಲವೊ?
[ನಿಮ್ಮ ಪೂರ್ವಜರ ಸಾಧನೆಗಳ ಬಗ್ಗೆ ಸುಳ್ಳು ಗರ್ವ ಪಡುವ ಬದಲು ನೀವೇ ಏನಾದರೂ ಸಾಧನೆ ಮಾಡಿ ತೋರಿಸಿ]
ನೀವ್ಯಾಕೆ ಇನ್ನು ಹನ್ನೆರಡನೆಯ ಶತಮಾನದಲ್ಲಿ ಬದುಕುತ್ತಿದ್ದಿರಿ ಎಂದು ಕೇಳಬಹುದೆ? ‘ಕಾಯಕ’ ಯೋಗ, ‘ಶರಣ’ತತ್ವ ಬೋಧನೆ ಬಿಟ್ಟು..ನಿಮ್ಮ ಉಳಿದ ಸ್ವಂತ ಸಾಧನೆ ಏನು ಅನ್ನುವುದು ಜನರಿಗೆ ತಿಳಿಸಿಕೊಡಬಹುದೆ?
ನಿಜವಾದ ಮಾತು.. ಇಲ್ಲಿ ಕೆಲವು ಜನ ಅಡಕಸುಬಿಗಳು ಚರ್ಚೆಯನ್ನು ಹಳಿತಪ್ಪಿಸಲೆಂದೇ ಪ್ರತಿಕ್ರಿಯೆ ನೀಡ್ತಾರೆ… ವಿಷಯ ಯಾವುದೇ ಇರಲ್ಲಿ.. ಪ್ರತಿಕ್ರಿಯೆ ಮಾತ್ರ ಒಂದೆ .. ರಾ.ಗಾ ತರಹ ಪ್ರಶ್ನೆ ಯಾವುದೆ ಆದರು ಉತ್ತರ ಮಾತ್ರ ಒಂದೆ.. ಇಂಥ ಅಡ್ನಾಡಿಗಳಿಗೆ ಉತ್ತರಿಸುವುದು ಸಮಯ ವ್ಯರ್ಥ ಏಕೆಂದರೆ ಇವರಬಳಿ ಬೇರೆ ವಿಷಯವಿಲ್ಲ ಕೇವಲ ಒಂದೇ ಪ್ರಲಾಪ…
ಹಾಗೆಯೇ ನಮ್ಮ ಶೆಟ್ಕರ್ ಸಾಹೇಬರ ಅವಗಾಹನೆಗೆ ಇನ್ನೊಂದು ಲೇಖನ…
http://www.prajavani.net/article/ಚೀನಾದಲ್ಲಿ-ಮಾವೊಗೆ-‘ನಮೋ-ನಮಃ’
ಓದಿ ನೋಡಿ ..ನಿಮಗೆ ಸಂತೋಷ ಕೊಡುವ (ಶೆ.೧೦ ರಷ್ಟು) ಅಂಶಗಳು ಅದರಲ್ಲಿವೆ 🙂
“1949ರ ಕ್ರಾಂತಿಗೆ ಮೊದಲು ಅಲ್ಪಸಂಖ್ಯಾತ ಬುಡಕಟ್ಟಿನವರನ್ನು ತುಂಬಾ ಕೀಳಾಗಿ ನಡೆಸಿಕೊಳ್ಳಲಾಗುತ್ತಿತ್ತು. ಅವರ ಹೆಸರಿನ ಮುಂದೆ ಚೀನಿ ಭಾಷೆಯಲ್ಲಿ ಪ್ರಾಣಿಗಳ ಸಂಕೇತವಿರುತ್ತಿತ್ತು. ಪ್ರಾಣಿಗಳಿಗಿಂತ ಕಡೆ ಎಂಬುದನ್ನು ಗುರುತಿಸಲು ಸಹಕಾರಿಯಾಗಿದ್ದ ಈ ಸಂಕೇತವನ್ನು ತೆಗೆದು ಹಾಕಲಾಯಿತು. ಹೆಂಗಸರ ಪಾದಗಳನ್ನು ಕಟ್ಟಿ ಹಾಕಿ ಕೀಳಾಗಿ ನಡೆಸಿಕೊಳ್ಳುತ್ತಿದ್ದ ಅನಿಷ್ಟ ಪದ್ಧತಿಯನ್ನು ರದ್ದು ಮಾಡಲಾಯಿತು. ಯಾವ ಸರ್ಕಾರ ಎಲ್ಲಿಯೂ ಮಾಡಲಾಗದೆ ಇದ್ದಿದ್ದನ್ನು ಮಾಡಿ ತೋರಿಸಿದ್ದು ಮಾವೊ ಕಾಲದ ಚೀನಾದ ಸಾಧನೆ.”
ಕಮ್ಯುನಿಸಂನ ಸಾಧನೆ ತಿಳಿಯಲು ಈ ಕೊಂಡಿ ನೋಡಿ: http://ssnarendrakumar.blogspot.com/2014/02/contribution-of-communism-to-civilized.html
ಮಾವೊನ ನೀತಿ ಹಾಗೂ ಸುಧಾರಣೆಗಳಿಂದ ಸುಮಾರು ಮೂರು ಕೋಟಿ ಜನ ಹಸಿವೆಯಿಂದ ಸಾವನ್ನಪ್ಪಿದ್ದು ಅದನ್ನು ಈಗ ಪಕ್ಷ ಒಪ್ಪಿಕೊಳ್ಳುತ್ತದೆ.
ಮಾವೊನ ಅವಧಿಯಲ್ಲಿ ಆದ ಆಡಳಿತದ ದುರುಪಯೋಗ ಭಾರೀ ದುರಂತಗಳಿಗೆ ಎಡೆಮಾಡಿಕೊಟ್ಟಿತ್ತು.
ತಂದೆ ತಾಯಿ, ಬಂಧು, ಬಳಗ ಎಲ್ಲವೂ ಕಮ್ಯುನಿಸ್ಟ್ ಪಕ್ಷವೇ ಎಂದು ನಂಬಿಸಿ, ಸ್ವಂತ ತಂದೆ ತಾಯಿಗಳ ಮೇಲೆಯೇ ಸುಳ್ಳು ದೂರುಗಳು ಕೊಡುವಂತೆ ಈ ಹದಿಹರೆಯದವರಿಗೆ ಪ್ರೋತ್ಸಾಹ ಕೊಟ್ಟು ಪೋಷಕರನ್ನು ಚಿತ್ರಹಿಂಸೆಗೆ ಗುರಿಮಾಡಿದ ಮಕ್ಕಳು ಎಷ್ಟೋ…….
ಕ್ರಾಂತಿಕಾರಿ ಘೋಷಣೆಗಳಿಂದ ಪ್ರೇರಿತಗೊಂಡ ಮಾವೊನ ರೆಡ್ ಗಾರ್ಡ್ಸ್ ಎಂಬ ‘ಯುವ ಶಕ್ತಿ’ ಬೌದ್ಧಾಲಯಗಳನ್ನು ಒಡೆದುಹಾಕಿ……..
ಈ ಒಂದು ಸಣ್ಣ ಲೇಖನವೇ ನಮ್ಮ ಈ ಶೆಟ್ಕರ ಸಾಹೇಬರ ‘ಹೆಕ್ಕಿ’ ತೆಗೆಯುವ ಅಜೆಂಡಾ ತೋರಿಸಿತು! :)…ಅವರ ಅಲ್ಪಸಂಖ್ಯಾತ ಪದದ ಮೇಲಿನ ಪ್ರೀತಿ ಸಂತೋಷ ಕೊಟ್ಟಿತು!. ಪಾಪ..ಇರಲಿ.
ಶೆಟ್ಕರ್ ಸಾಹೇಬರೆ, ಈಗಿನ ಚೀನಾದಲ್ಲಿ ನಿಮ್ಮ ಅಲ್ಪಸಂಖ್ಯಾತರನ್ನು ಹೇಗೆ ಪೂರ್ವಯೋಜಿತ ಕಾರ್ಯಾಚರಣೆಯಿಂದ ಬೆಂಡೆಬ್ಬಿಸುತ್ತಿದ್ದಾರೆ ಎಂಬುದನ್ನು ಸ್ವಲ್ಪ ತಿಳಿದುಕೊಂಡು, ಓದಿಕೊಂಡು ನೋಡಿ.. ಕಮ್ಯುನಿಷ್ಟ್ ರಾಷ್ಟ್ರಗಳ ಪಾಡು ತಿಳಿಯುತ್ತದೆ. ಓದಿದ ನಂತರ ನಿಮ್ಮ ಪುಂಗಿಯ ನಾದ ಸ್ವಲ್ಪ ಕಡಿಮೆಯಾದರೂ ಆಗಬಹುದು!.
Mr. Vijay, if communists were ruling India, like in china, dehumanizing practices such as untouchability, Sati paddhati, made snana etc would have been successfully eradicated.
ಶೆಟ್ಕರ್ ಅವರೆ ನಿಮ್ಮ ಫೇಸ್ಬುಕ್ ಐಡಿ ಕೊಡಿ ಮಾತನಾಡುವ 🙂 ನಂಗೆ ಗೊತ್ತು ನೀವ್ ಕೊಡಲ್ಲಾಂತ.
Garish, what are u going to tell me on FB that u can’t tell me here? Maybe u want to canvas on FB seeking vote for NaMo. But it won’t convince me. I’m pro-human.
ನಾ ಹೇಳಿರ್ಲಿಲ್ವ ಕೊಡೋ ಧೈರ್ಯ ಇಲ್ಲಾಂತ. ಮೋದಿಗೆ ನಿಮ್ಮಂತ ಕಾಡು ಪಾಲಾಗುವ ನಕ್ಸಲರ ಓಟು ಬೇಕಿಲ್ಲ. ಪಾಕಿಸ್ತಾನಿಗಳು ದೇಶದ್ರೋಹಿಗಳು ಮೋದಿಯನ್ನು ವಿರೋಧಿಸುತ್ತಾರೆ. ಅಷ್ಟು ಭಯ ನಿಮಗಿರುವುದು ಒಳ್ಳೆಯದು. 😉
ನಾನು ಶರಣ. ನನಗೆ ಧೈರ್ಯದ ಪಾಠ ಹೇಳಿಕೊಡುವ ಧಾರ್ಷ್ಟ್ಯ ತೋರಿಸಬೇಡಿ.
ನಮೋಸುರನನ್ನು ನಮ್ಮ ಕೆಜ್ರೀವಾಲ್ ಕೂಡ ವಿರೋಧಿಸುತ್ತಿದ್ದಾರೆ. ನಿಮ್ಮ ಪ್ರಕಾರ ಅವರು ದೇಶದ್ರೋಹಿ ಅಂತಾಯಿತು. ಪಟ್ಟಭದ್ರ ಭ್ರಷ್ಟರ ವಿರುದ್ಧ ಹೋರಾಟ ನಡೆಸುತ್ತಿರುವವರ ಬಗ್ಗೆ ನಿಮಗಿರುವ ಗೌರವ ಎಷ್ಟು ಅಂತ ಇದೆ ಹೇಳಿದೆ. ನಿಮ್ಮಂತಹವರ ಜೊತೆ ಫೇಸ್ಬುಕ್ ನಲ್ಲಿ ಸರಸವಾಡಬೇಕೇ ನಾನು?!!
ನೀವೇನ್ರೀ ಶೆಟ್ಕರ್, ಕೇಜ್ರೀವಾಲನ ಹಿಂದೆ ಬಿದ್ದಿದ್ದೀರಿ, ನಿಮಗಂತೂ ನೆಲೆಯೇ ಇಲ್ಲದಂತಾಗಿದೆ. ಒಮ್ಮೆ ಕೇಜ್ರಿವಾಲ ಒಮ್ಮೆ ೩ ನೇ ರಂಗ ಒಮ್ಮೆ ಕಾಂಗ್ರೆಸ್ಸು. ಅಂದಹಾಗೆ ಕೇಜ್ರಿವಾಲ ಏಕೆ ನಮೋ ಮಾತ್ರ ವಿರೋಧಿಸುತ್ತಾನೆ ಶರಣೆ ಸೋನಿಯಾಳನ್ನು ಬಿಟ್ಟು ಬಿಡುವುದರ ಹಿಂದಿನ ರಹಸ್ಯವೇನು? ಅಧಿಕಾರದಿಂದ ಇಳಿಯುವ ಮುನ್ನ ಅಂಬಾನಿಗೆ ೩೦೭ ಕೋಟಿ ಬಿಡುಗಡೆ ಮಾಡಿದ್ದು ಯಾಕೆ? ಆನಂತರ ಬೀದಿಯಲ್ಲಿ ಬೊಬ್ಬೆ ಹೊಡೆಯುತ್ತಿರುವುದು ಯಾಕೆ?
ಏನೇ ಆಗ್ಲಿ ಶೆಟ್ಕರ್ ನೀವು ನಿಲುಮೆಯಲ್ಲಿ ಪ್ರತಿಕ್ರಿಯೆ ನೀಡುವುದನ್ನು ನಿಲ್ಲಿಸಬೇಡಿ. ನಮಗೆ ಮನರಂಜನೆಯ ಅಗತ್ಯ ಹೆಚ್ಚಿರುತ್ತದೆ.
😉
hhttps://www.facebook.com/nshetkar?fref=ts ಈ ಲಿಂಕಿನಗ ಮೊದಲ ‘h’ ತೆಗೆದು ಕತ್ತರಿಸಿ ಅಂಟಿಸಿ ಒತ್ತಿದರೆ ಮಹಾನುಭಾವರ ಮುಖಪುಸ್ತಕದ ಮಹಾದರ್ಶನವಾಗುತ್ತದೆ.