ನಾಡು-ನುಡಿ:ಮರುಚಿಂತನೆ – “ಜಾತಿ ಹಾಗೂ ಅಸ್ಮಿತೆ ರಾಜಕೀಯ” ಭಾಗ 4
– ಪ್ರೊ. ಜೆ.ಎಸ್. ಸದಾನಂದ, ಕುವೆಂಪು ವಿಶ್ವವಿದ್ಯಾನಿಲಯ
ಲಿಂಗಾಯತರನ್ನು ಅಥವಾ ವೀರಶೈವರನ್ನು (ಪ್ರಸ್ತುತದಲ್ಲಿ ‘ಲಿಂಗಾಯತರು ಮತ್ತು ವೀರಶೈವರು ಬೇರೆ ಬೇರೆ ಅವೆರಡು ಒಂದೆ ಅಲ್ಲ’ ಎಂಬಂತಹ ವಾದಗಳು ಅಥವಾ ಚರ್ಚೆಗಳು ಮಾಧ್ಯಮಗಳಲ್ಲಿ ಕೇಳಿಬರುತ್ತಿವೆ. ಈ ಕುರಿತು ಮೂರು ರೀತಿಯ ಅಭಿಪ್ರಾಯಗಳಿರುವುದನ್ನು ನೋಡಬಹುದು. ಅವುಗಳೆಂದರೆ, ಒಂದನೆಯದಾಗಿ, ವೀರಶೈವ ಪರಂಪರೆಯು ಹಿಂದೂ ಧರ್ಮದ ಭಾಗವಾಗಿದೆ, ಭಾರತೀಯ ಆಧ್ಯಾತ್ಮ ಚಿಂತನೆಗೆ ಅಪೂರ್ವ ಕೊಡುಗೆಯನ್ನು ನೀಡಿರುವ ಹಾಗೂ ಆಧ್ಯಾತ್ಮ ಮಾರ್ಗದ ಮೂಲಕ ಹೊಸದೊಂದು ಸಮಾಜ ನಿರ್ಮಾಣಕ್ಕೆ ಬಸವಾದಿ ಶರಣ ಪರಂಪರೆಯ ಚಿಂತನೆ ಮತ್ತು ಅವರ ಆಚರಣೆಗಳು ಕಾರಣವಾಗಿವೆ. ಹಾಗೆಯೇ ಎರಡನೆಯದಾಗಿ, ಕೆಲವು ಚಿಂತನೆಗಳು ಹಿಂದೂ ಧರ್ಮವನ್ನು ಪ್ರತಿಭಟಿಸಿ, ಸಮಾಜದಲ್ಲಿರುವ ಅನಿಷ್ಠಗಳನ್ನು ವಿರೋಧಿಸಿ, ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡಲು, ಈ ಸಮಾಜದಲ್ಲಿ ಕಲುಷಿತಗೊಂಡಿರುವ ಧಾರ್ಮಿಕ, ಸಾಮಾಜಿಕ ಪರಿಸರದ ವಿರುದ್ಧ ಹೋರಾಡಿದ, ಅನೀತಿಯುತವಾದ ಜಾತಿ ವ್ಯವಸ್ಥೆಯನ್ನು ನಾಶಮಾಡಿ ಉತ್ತಮ ಸಮಾಜವನ್ನು ರಚಿಸಬೇಕು ಎಂಬ ಗುರಿಯನ್ನು ಇಟ್ಟುಕೊಂಡು ಹುಟ್ಟಿದ ಸ್ವತಂತ್ರ್ಯ ಮತ/ಧರ್ಮವೇ ವೀರಶೈವ ಧರ್ಮವಾಗಿದೆ. ಇದಕ್ಕೆ ಪೂರಕವಾಗಿ ಜಿ.ಎಸ್.ಶಿವರುದ್ರಪ್ಪನವರು ಹೇಳುವಂತೆ, ಕನ್ನಡನಾಡಿನ ಸಾಂಸ್ಕೃತಿಕ ಇತಿಹಾಸದಲ್ಲಿ 12ನೇ ಶತಮಾನ ಒಂದು ಸಂಕ್ರಮಣ ಕಾಲ, ಈ ಸಂಕ್ರಮಣಕ್ಕೆ ಮುಖ್ಯ ಪ್ರೇರಣೆ ವೀರಶೈವ ಧರ್ಮವಾಗಿದೆ ಹಾಗೂ ಇದು ವಿಶಾಲ ಅರ್ಥವನ್ನು ಒಳಗೊಂಡಿದೆ. ಎಂಬಂತಹ ವಿವರಣೆ. ಮತ್ತು ಮೂರನೆಯದಾಗಿ ಕಂಡುಬರುವ ಚಿತ್ರಣಗಳಲ್ಲಿ ಮೇಲಿನ ಎರಡೂ ಮಾರ್ಗಗಳನ್ನು ಒಳಗೊಂಡಿರುವ ವಿವರಣೆಯನ್ನು ನೋಡಬಹುದು. ಅಂದರೆ, ವೀರಶೈವ ಪರಂಪರೆ ಮತ್ತು ವಚನಗಳು ಭಾರತೀಯ ಆಧ್ಯಾತ್ಮ ಮಾರ್ಗಕ್ಕೆ ಕೊಡುಗೆಯನ್ನು ನೀಡಿರುವುದರ ಜೊತೆಗೆ ಸಾಮಾಜಿಕ ಅನಿಷ್ಠಗಳ ವಿರುದ್ಧವೂ ಹೋರಾಡಿದೆ. ತಮ್ಮ ಭಕ್ತಿಯೊಂದಿಗೆ ಸಮಾಜದ ಪಿಡುಗುಗಳ ವಿರುದ್ಧ ಪ್ರತಿಭಟಿಸಿದೆ.
ವಚನ ಸಂಸ್ಕೃತಿಯು ಅತ್ಯಂತ ಸೂಕ್ಷ್ಮವೂ, ಸಂಕೀರ್ಣವೂ, ಬಹುಮುಖಿಯೂ, ಬಹುಸ್ತರೀಯವೂ ಆದ ಒಂದು ಸಾಮಾಜಿಕ ಪ್ರಕ್ರಿಯೆ-ಗತಿಶೀಲತೆಯಾಗಿತ್ತು. ಎಂದು ಹೇಳುವ ಮೂಲಕ ಆಧ್ಯಾತ್ಮ ಹಾಗೂ ಸಾಮಾಜಿಕ ಎಂಬ ಎರಡು ವಲಯಗಳನ್ನು ತಳುಕು ಹಾಕುವ ವಿವರಣೆಗಳನ್ನು ನೋಡಬಹುದು. ಈ ಮೂರು ರೀತಿಯ ವಿವರಣೆಗಳಲ್ಲಿ ಪ್ರಸ್ತುತ ಅಧ್ಯಯನಕ್ಕೆ ಸಂಬಂಧಿಸಿದಂತೆ ನಾವು ಮೊದಲೆರಡು ಅಂಶಗಳನ್ನು ತೆಗೆದುಕೊಂಡು ಗಮನಿಸುವುದಾದರೆ, ಪರಸ್ಪರ ವಿರುದ್ಧವಿರುವ ಎರಡು ರೀತಿಯ ಚಿಂತನೆಗಳು ವಿದ್ವತ್ ವಲಯದಲ್ಲಿ, ರಾಜಕೀಯ ವಲಯದಲ್ಲಿ, ಲಿಂಗಾಯತರು ತಮ್ಮನ್ನು ತಾವು ಗುರುತಿಸಿಕೊಳ್ಳುವಲ್ಲಿ, ಮುಖಾ-ಮುಖಿ ಆಗುತ್ತಿವೆ. ಉದಾಹರಣೆಗೆ, ಚಿದಾನಂದ ಮೂರ್ತಿ ಹಾಗೂ ಕಲ್ಬುರ್ಗಿ. ವಿರಕ್ತ ಪೀಠ/ಮಠಗಳು ಹಾಗೂ ಪಂಚಚಾರಿಪೀಠಗಳು, ಪ್ರಗತಿಪರರು ಹಾಗೂ ಸಾಂಪ್ರದಾಯವಾದಿಗಳು ಮುಂತಾದ ಚಿಂತನೆಗಳು. ಆದರೂ ಪರಸ್ಪರ ವಿರುದ್ಧವಿರುವ ಅಭಿಪ್ರಾಯಗಳು ಒಂದಾಗುತ್ತಿವೆ. ಅಂದರೆ, ಎರಡು ಮಾರ್ಗಗಳು ತಮ್ಮನ್ನು ಲಿಂಗಾಯತರು ಎಂದೇ ಹೇಳಿಕೊಳ್ಳುತ್ತಿದ್ದಾರೆ. ಲಿಂಗಾಯಿತರಲ್ಲಿರುವ ಹತ್ತು ಹಲವು ಜಾತಿಗಳ ನಡುವೆ ಸಮಾನ ಅಂಶ ಯಾವುದು? ಆ ಎಲ್ಲ ಜಾತಿಗಳು ಒಟ್ಟಾಗಿ ಲಿಂಗಾಯಿತ ಅಸ್ಮಿತೆಯನ್ನು ಕಂಡುಕೊಳ್ಳಲು ಸಾಧ್ಯವೆ? ಎನ್ನುವ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟ ಸಾಧ್ಯ. ವಿಭಿನ್ನ ಆಚರಣೆ, ವಿಭಿನ್ನ ಕಟ್ಟು ಕಟ್ಟಲೆಗಳು, ಇರುವ ಹಲವು ಜಾತಿಗಳ ನಡುವೆ ಇರುವ ಸಾಮ್ಯತೆ ಏನು ಎನ್ನುವುದನ್ನು ಸ್ಪಷ್ಟಪಡಿಸಲು ಸಾಧ್ಯವಾಗುವುದೇ ಇಲ್ಲ. ಲಿಂಗಧಾರಣೆಯೂ ಸಹ ಸಮಾನ ಆಂಶವಾಗುವುದಿಲ್ಲ ಏಕೆಂದರೆ ಲಿಂಗಾಯಿತರಲ್ಲದ ಕೆಲವು ಜಾತಿಗಳಲ್ಲೂ ಲಿಂಗಧಾರಣೆಯ ಪದ್ಧತಿ ಇದೆ.
ದಲಿತ ಅಸ್ಮಿತೆಯ ಸಮಸ್ಯೆ
ದಲಿತ ಎನ್ನುವುದು ಒಂದು ಜಾತಿಯಲ್ಲ ಎನ್ನುವುದು ನಿಜವಾದರೂ ಜಾತಿವ್ಯವಸ್ಥೆಯ ಸಿದ್ಧಾಂತ ದಲಿತ ಸಂಘಟನೆಯ ಭೌದ್ಧಿಕ ತಳಹದಿಯಾಗಿದೆ ಎನ್ನುವುದು ನಿರ್ವಿವಾದ ಸಂಗತಿಯಾಗಿದೆ. ಅಂದರೆ ದಲಿತ ಎನ್ನುವುದೇ ಒಂದು ಜಾತಿಯಲ್ಲದಿದ್ದರೂ ಜಾತಿ ಅಸ್ಮಿತೆಯೇ ದಲಿತ ಸಂಘಟನೆಗಳಿಗೆ ಮುಖ್ಯ ಆಧಾರವಾಗಿದೆ. ಜಾತಿಯ ಕಾರಣದಿಂದಾಗಿ ನಾವು ಮುಖ್ಯವಾಹಿನಿಯಿಂದ ಬದಿಗೆ ಸರಿಸಲ್ಪಟ್ಟಿದ್ದೇವೆ ಎನ್ನುವ ಭಾವನೆಯನ್ನು ಹೊಂದಿದ ಜಾತಿಗಳು ‘ಜಾತಿ’ಗಳಾಗಿ ದಲಿತ ಅಸ್ಮಿತೆಯನ್ನು ಪಡೆದುಕೊಳ್ಳುತ್ತವೆ.
‘ದಲಿತ ಪ್ರಜ್ಞೆ’ಯು ದಲಿತ ಚಳುವಳಿಗಳ ಹುಟ್ಟಿಗೆ ಪ್ರಮುಖ ಕಾರಣವಾಗಿದೆ. ದಲಿತರಲ್ಲಿ ಈ ‘ದಲಿತ ಪ್ರಜ್ಞೆ’ಯನ್ನು ಮೂಡಿಸುವುದು ದಲಿತ ಚಳುವಳಿಗಳ ಮುಖ್ಯ ಉದ್ದೇಶವೂ ಆಗಿದೆ. ಹಾಗಿದ್ದರೂ ಸಹ ಬಹುತೇಕ ಸಾಮಾನ್ಯ ದಲಿತರು ತಮ್ಮ ‘ಸಾಂಪ್ರದಾಯಿಕ ಪ್ರಜ್ಞೆ’ಯಲ್ಲೇ ಇನ್ನೂ ಇದ್ದಾರೆ ಎಂದು ಚಿಂತಕರು ಹೇಳುತ್ತಾರೆ. ಅಂದರೆ ಇವರ ಪ್ರಕಾರ ಸಾಮಾನ್ಯ ದಲಿತರು ಇನ್ನೂ ತಮ್ಮ ಸಂಪ್ರದಾಯಿಕ ಜಾತಿಗಳ ಹೆಸರುಗಳಿಂದಲೇ ಗುರುತಿಸಿಕೊಳ್ಳುತ್ತಾರೆ ವಿನಃ ‘ದಲಿತರು’ ಎಂದು ಗುರುತಿಸಿಕೊಳ್ಳುವುದಿಲ್ಲ (Guru Gopal. 1998: 64). ಇದರಿಂದ ದಲಿತರಲ್ಲಿ ‘ದಲಿತ ಪ್ರಜ್ಞೆ’ ಇರುವ ದಲಿತರು ಮತ್ತು ‘ಸಾಂಪ್ರದಾಯಿಕ ಪ್ರಜ್ಞೆ’ ಇರುವ ದಲಿತರು ಎಂಬ ಎರಡು ಗುಂಪುಗಳು ಹಾಗೂ ಈ ಗುಂಪುಗಳ ನಡುವೆ ಅಂತರವಿದೆ ಎಂಬ ಸಂಗತಿಯು ಬೆಳಕಿಗೆ ಬರುತ್ತದೆ. ಈ ಎರಡು ಗುಂಪುಗಳ ನಡುವೆ ಇರುವ ಈ ಅಂತರದಿಂದಾಗಿ ‘ದಲಿತ ಪ್ರಜ್ಞೆ’ ಇರುವ ಶಿಕ್ಷಿತ ದಲಿತರು ‘ತಮ್ಮ’ ಮತ್ತು ‘ಸವರ್ಣೀಯರ’ ಕುರಿತು ನೀಡುವ ಚಿತ್ರಣವು ದಲಿತರ ಅನುಭವವನ್ನು ಒಳಗೊಂಡಿದೆಯೇ? ‘ದಲಿತ ಪ್ರಜ್ಞೆ’ ಇರುವ ಶಿಕ್ಷಿತ ದಲಿತರು ‘ತಮ್ಮ’ ಮತ್ತು ‘ಸವರ್ಣೀಯರ’ ಕುರಿತು ನೀಡುವ ಚಿತ್ರಣಕ್ಕೂ ಹಾಗೂ ಪಶ್ಚಿಮದ ಚಿಂತಕರು ನೀಡುವ ಚಿತ್ರಣಕ್ಕೂ ಏನಾದರೂ ವ್ಯತ್ಯಾಸ ಇದೆಯೇ? ಒಂದುವೇಳೆ ಶಿಕ್ಷಿತ ದಲಿತರು ಮತ್ತು ಪಶ್ಚಿಮದ ಚಿಂತಕರು ದಲಿತರ ಮತ್ತು ಸವರ್ಣೀಯರ ಕುರಿತು ನೀಡುವ ಚಿತ್ರಣದಲ್ಲಿ ವ್ಯತ್ಯಾಸವಿಲ್ಲ ಎಂದಾದರೆ ‘ದಲಿತ ಪ್ರಜ್ಞೆ’ ಇರುವ ಶಿಕ್ಷಿತ ದಲಿತರು ದಲಿತ ಚಳುವಳಿಗಳ ಕುರಿತ ಅಧ್ಯಯನವನ್ನು ಸಬಾಲ್ಟ್ರನ್ ದೃಷ್ಟಿಕೋನದ ಅಧ್ಯಯನ ಎಂದು ಕರೆಯವುದು ಎಷ್ಟು ಸರಿ? ‘ದಲಿತ ಪ್ರಜ್ಞೆ’ಯಿಂದ ಹುಟ್ಟಿಕೊಂಡಿರುವ ದಲಿತ ಚಳುವಳಿಗಳು ಭಾರತೀಯ ಸಮಾಜದ ಮೇಲೆ ನಿರ್ದಿಷ್ಟವಾಗಿ ‘ದಲಿತರ’ ಮೇಲೆ ಯಾವ ಪರಿಣಾಮಗಳನ್ನು ಉಂಟುಮಾಡುತ್ತಿವೆ? ಶಿಕ್ಷಿತ ದಲಿತರು ಸೂಚಿಸುವ ‘ಸ್ವಾತಂತ್ರ್ಯ’, ‘ಸಮಾನತೆ’, ‘ನ್ಯಾಯಯುತ’ ಮತ್ತು ‘ಸಹೋದರತ್ವ’ದಿಂದ ಕೂಡಿದ ಹೊಸ ಸಮಾಜವನ್ನು ಅರ್ಥಮಾಡಿಕೊಳ್ಳುವ ಚೌಕಟ್ಟು ಯಾವುದು? ರಾಜಕೀಯವಾಗಿ ಕಾಣಿಸಿಕೊಳ್ಳುವ ದಲಿತರೊಳಗಿನ ಎಡ-ಬಲದ ಸಂಘರ್ಷ ದಲಿತ ಅಸ್ಮಿತೆ ನೇರವಾಗಿ ಸಂಬಂಧಿಸಿರದಂತೆ ಕಂಡರೂ ಸಹ (ಏಕೆಂದರೆ ಎರಡೂ ಗುಂಪಿನವರು ತಮ್ಮನ್ನು ದಲಿತರೆಂದು ಗುರುತಿಸಿಕೊಳ್ಳುತ್ತಾರೆ? ಇಂತಹ ಹಲವಾರು ಪ್ರಶ್ನೆಗಳಿಗೆ ಪ್ರಚಲಿತ ಸಿದ್ಧಾಂತಗಳು ಬೆನ್ನು ತೋರಿಸುತ್ತವೆ…(ಮುಂದುವರೆಯುವುದು…)






Professorji, you know nothing about Lingayathism. Your confusions are due to lack of scholarship. Read my thesis if you are sincere. All doubts go away like dust blown away by wind.
ಪ್ರೊ.ಸದಾನಂದವರು ನಮ್ಮ ಸಾಹೇಬರ ಅಪ್ಪಣೆಯನ್ನು ಪಾಲಿಸಬೇಕು. ಲಿಂಗಾಯಿತಸ್ಮ ವಿಷಯದಲ್ಲಿ ಈ ಜಗತ್ತಿನಲ್ಲಿ ಇಬ್ಬರೇ ಇಬ್ಬರು ಅಧಿಕೃತ ವಕ್ತಾರರಿದ್ದಾರೆ, ಸರಿಯಾದ ತಿಳುವಳಿಕೆ ಹೊಂದಿದವರಿದ್ದಾರೆ ಅವರಲ್ಲಿ ನಮ್ಮ ಶೆಟ್ಕರ್ ಸಾಹೇಬರು ಒಬ್ಬರು. ಪ್ರೊ.ಸದಾನಂದರು ಇವರ ಥಿಸಿಸ್ ನ್ನು ಓದಿ ತಮ್ಮ ಸಂದೇಹಗಳನ್ನು, ತಪ್ಪು ತಿಳುವಳಿಕೆಯನ್ನು ನಿವಾರಿಸಿಕೊಳ್ಳಬೇಕು ಎಂದು ವಿನಂತಿ!.
+1
-2
ನಮ್ಮ ಶೆಟ್ಕರ್ ಸಾಹೇಬರಿಂದ ಬೆನ್ನು ತಟ್ಟಿಸಿಕೊಂಡಿದ್ದು ನೋಡಿ ತುಂಬಾ ಸಂತೋಷವಾಗಿದೆ. ಭಾರತದಲ್ಲಿ ಯಾರೇ ಆಗಲಿ ಲಿಂಗಾಯಿತಿಸ್ಮ ಬಗ್ಗೆ ಏನೇ ಸಂದೇಹಗಳಿದ್ದರೂ ಶೆಟ್ಕರ್ ಸಾಹೇಬರ ಥೀಸಿಸನ್ನು ಓದಬೇಕು ಅಥವಾ ಅವರನ್ನು ಸಂಪರ್ಕಿಸಿ ತಮ್ಮ ದೃಷ್ಟಿಕೋಣವನ್ನು ಸರಿಪಡಿಸಿಕೊಳ್ಳಬೇಕು. ಜಾಗತಿಕ ಮಟ್ಟದಲ್ಲಿ ಸಂದೇಹ ನಿವಾರಣೆಯಾಗಬೇಕಿದ್ದರೆ ನಮ್ಮ ಸಾಹೇಬರ ಗುರುಗಳನ್ನು ಸಂಪರ್ಕಿಸಬೇಕು.
ದೃಷ್ಟಿಕೋಣವನ್ನು ಸರಿಪಡಿಸಿಕೊಳ್ಳಬೇಕು. namma kOnavannu saripadisikoLLuttEve. aadare adu muMde baMdare haayutte hiNde baMdare odeutte eNu madali??
@ವಿಜಯ್ ಪೈ +100
ಹೌದು, ದರ್ಗಾ ಸರ್ ಅವರು ಮಾರ್ಕ್ಸ್ ವಾದ, ವಚನ ವಿಜ್ಞಾನ, ಬಸವಾದ್ವೈತ, ಮಾನವ ಹಕ್ಕುಗಳು, ಸೂಫಿ ತತ್ವಗಳು, ಬ್ರಾಹ್ಮಣ್ಯದ ದೌರ್ಜನ್ಯ ಇವೆ ಮೊದಲಾದ ವಿಷಯಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವ ಅಪರೂಪದ ಚಿಂತಕ ಹೋರಾಟಗಾರ.
ಡಿಯರ್ ಶೆಟ್ಕರ್ ಸರ್,
ಲಿಂಗಾಯಿತಿಸಂ ಬಗ್ಗೆ ನಿಮ್ಮ ಥೀಸಿಸ್ ಏನು ಅನ್ನುವುದನ್ನು ನಮ್ಮಂತ ಸಾಮಾನ್ಯರಿಗೂ ಅರ್ಥವಾಗುವಂತೆ ವಿವರಿಸಿ ಬರೆದಲ್ಲಿ ಇಟ್ ವಿಲ್ ಬಿ ಆಫ್ ಗ್ರೇಟ್ ಹೆಲ್ಪ್ ಇನ್ ಸ್ಟಾಪಿಂಗ್ ದಿಸ್ ವೈದಿಕ ವೈರಸ್. ಹೋಪ್ ನೀವು ಈ ಕಾಯಕವನ್ನು ಕೈಗೊಳ್ಳುತ್ತೀರೆಂದು.
ಥ್ಯಾಂಕ್ಯೂ