ಆತ್ಮವಿಶ್ವಾಸ
– ಮಯೂರಲಕ್ಷ್ಮಿ
ಯಾವುದೇ ಪ್ರಯತ್ನವನ್ನೇ ಮಾಡದೆಯೇ ‘ನಮ್ಮಿಂದಾಗುವುದಿಲ್ಲ” ಎಂದು ಒಪ್ಪಿಕೊಳ್ಳಬಾರದು. ಆರಂಭದಲ್ಲಿ ನಮ್ಮ ಪ್ರಯತ್ನಗಳಲ್ಲಿ ಸೋಲೆದುರಾಗುವುದು ಸಹಜ, ಆದರೆ ಎದೆಗುಂದದೆ, ಆತ್ಮವಿಶ್ವಾಸವನ್ನೂ ಕಳೆದುಕೊಳ್ಳದೆ ನಮ್ಮ ಯತ್ನದಲ್ಲಿರಬೇಕು. ಪ್ರಯತ್ನ ನಮ್ಮದು, ಫಲ ನಮ್ಮದಲ್ಲ ಎಂಬುವುದರ ಅರಿವು ಅತಿಮುಖ್ಯ. ಎಂತಹ ಕ್ಲಿಷ್ಟ ಪರಿಸ್ಥಿತಿ ಎದುರಾದಾಗಲೂ ಧೈರ್ಯದಿಂದ ಎದುರಿಸಿ ಗೆದ್ದ ಮಹಾನ್ ವ್ಯಕ್ತಿಗಳ ನಿದರ್ಶನದಿಂದ ನಾವು ಕಲಿಯಬೇಕು. “ನಾವು ಗೆಲ್ಲಲೇ ಬೇಕೆಂಬ ಸಂಕಲ್ಪದೊಂದಿಗೆ ಮಾಡುವುದೇ ಉತ್ತಮ ಪ್ರಯತ್ನಗಳು” ಎಂದಿದ್ದಾರೆ ಅಬ್ರಹಾಂ ಲಿಂಕನ್.
ಉದ್ಯಮೇನ ಹಿ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥ್ಯೇ:ı
ನ ಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇ ಮೃಗಾ:ıı
ಇದೊಂದು ಪಂಚತಂತ್ರದ ವಾಕ್ಯ, ಇದರರ್ಥ: ನಾವು ಕಾರ್ಯದಲ್ಲಿ ತೊಡಗಿ ಮುಂದುವರೆದರೆ ಮಾತ್ರವೇ ಯಶಸ್ಸು ಸಿಗುವುದು, ಆಸೆ-ಆಕಾಂಕ್ಷೆಗಳಿಂದಷ್ಟೇ ಫಲ ದೊರೆಯದು, ತಾನು ಸುಮ್ಮನೆ ಮಲಗಿದ್ದರೆ ಸಿಂಹದ ಬಾಯಲ್ಲಿ ತಾವಾಗಿಯೇ ಪ್ರಾಣಿಗಳು ಬಂದು ಬೀಳುವುದಿಲ್ಲ, ಆಹಾರಕ್ಕಾಗಿ ಅದೂ ಪರಿಶ್ರಮಿಸಲೇಬೇಕಲ್ಲವೇ?
ಗಾಳಿ ಮಾತು!!!
– ಮಧು ಚಂದ್ರ, ಭದ್ರಾವತಿ

ಅರ್ಕಿಮಿಡಿಸ್, ಎಂದರೆ ತಕ್ಕ್ಷಣ ನೆನಪಿಗೆ ಬರುವುದು “ಯುರೇಕಾ, ಯುರೇಕಾ” ಎಂದು ಬಚ್ಚಲಿನಿಂದ ಬೆತ್ತಲಾಗಿ ಬೀದಿಯಲ್ಲಿ ಓಡಿದ ವ್ಯಕ್ತಿ . ವಸ್ತುವು ತನ್ನ ಗಾತ್ರದಷ್ಟೇ ನೀರನ್ನು ಸ್ಥಾನಪಲ್ಲಟಗೊಳಿಸುವುದು ಎಂದು, ಇದರಿಂದ ತನ್ನ ರಾಜನ ಚಿನ್ನದ ಕಿರೀಟದ ಸಮಸ್ಯೆಗೆ ಪರಿಹಾರ ಕಂಡು ಹಿಡಿದ ಗ್ರೀಕ್ ದೇಶದ ಗಣಿತಜ್ಞ, ತತ್ವಜ್ಞಾನಿ, ಮೇಧಾವಿ, ವಿಜ್ಞಾನಿ.
ಇಂದು ನಾನು ಹೇಳಬಯಸುವುದು ಅರ್ಕಿಮಿಡಿಸನ ದುರಂತ ಅಂತ್ಯದ ಬಗ್ಗೆ.
ರೋಮನ್ ಸೇನೆಯ ನಾಯಕನಾದ ಮರ್ಸಿಲಸ್(Marcellus) ಸ್ಯರಕಾಸ್(Syracuse) ನಗರವನ್ನು ಆಕ್ರಮಿಸಿದ. ಆಗ ಅವನು ತತ್ವಜ್ಞಾನಿ ಅರ್ಕಿಮಿಡಿಸ್ನನ್ನು ನೋಡಲು ಇಚ್ಛೆ ವ್ಯಕ್ತಪಡಿಸಿದ. ತನ್ನ ಸೇನೆಯ ಅಧಿಕಾರಿಯನ್ನು ಕರೆದು
” See if you can find archimedes for me! I should like to see him!” ಎಂದು ಹೇಳಿದ.
ನಂತರ ಅ ಅಧಿಕಾರಿ ತನ್ನ ಕೆಳಗಿನ ಅಧಿಕಾರಿಗೆ ಮರ್ಸಿಲಸ್ ಆಸೆಯನ್ನು ಹೇಳಿದ. ಕಡೆಗೆ ಅದು ಅಲ್ಲಿನ ಕಟ್ಟ ಕಡೆಯ ಸೈನಿಕನಿಗೆ ಮುಟ್ಟಿದಾಗ ಮೆರ್ಸಿಲಸ್ ನೀಡಿದ ಮಾಹಿತಿ ಮೂಲವೆ ಬದಲಾಗಿತ್ತು. ಇದು ಮೆರ್ಸಿಲಸ್ ಇಚ್ಛೆ ಬದಲಾಗಿ ಆದೇಶದ ರೂಪ ಪಡೆದಿತ್ತು.
“Find Archimededes ! the general wants him!” ಎಂದಾಗಿತ್ತು.
ನಿನ್ನೆಗೆ ನನ್ನ ಮಾತು …. ಭಾಗ 3
– ಮು ಅ ಶ್ರೀರಂಗ ಬೆಂಗಳೂರು
ಭಾಗ ೧ : ದೀಪವೂ ನಿನ್ನದೇ ಗಾಳಿಯೂ ನಿನ್ನದೇ ಆರದಿರಲಿ ಬೆಳಕೂ
ಭಾಗ ೨ : ಕಡಲು ನಿನ್ನದೇ ಹಡಗು ನಿನ್ನದೇ ಮುಳುಗದಿರಲಿ ಬದುಕು
ಅಂಚೆ ಗುಮಾಸ್ತನ ಕೆಲಸದ ತರಬೇತಿಗೆಂದು ಡಿಸೆಂಬರ್ ೧೯೭೮ರ ಕೊನೆಯ ವಾರದಲ್ಲಿ ಕೋಲಾರದಲ್ಲಿ ಬಂದಿಳಿದಾಗ ಮಧ್ಯಾನ್ಹ ಒಂದು ಗಂಟೆಯಾಗಿತ್ತು. ಬೆಳಗ್ಗೆ ಮಾಗಡಿಯಿಂದ ಹೊರಟಾಗ ಚಳಿಯಿತ್ತು. ಆದ್ದರಿಂದ ಬೆಚ್ಚಗಿರಲಿ ಎಂದು ಆಗ ಜೀನ್ಸ್ ಎಂದು ಕರೆಸಿಕೊಳ್ಳುತ್ತಿದ್ದ ದಪ್ಪ textureನ ಪ್ಯಾಂಟು ಮತ್ತು ಪ್ಯಾಂಟಿನ ಬಟ್ಟೆಯಷ್ಟೇ ದಪ್ಪವಿದ್ದ ಬಣ್ಣ ಬಣ್ಣದ ಬಟ್ಟೆಯಿಂದ ಹೊಲಿಸಿಕೊಂಡಿದ್ದ ಒಂದು ಫುಲ್ ತೋಳಿನ ಷರ್ಟ್ ಹಾಕಿಕೊಂಡಿದ್ದೆ. ಒಂದು ಕಡಿಮೆ ದರ್ಜೆಯ ದೊಡ್ಡ ಏರ್ ಬ್ಯಾಗ್ ನಲ್ಲಿ ಒಂದಷ್ಟು ಬಟ್ಟೆಗಳನ್ನು ತುಂಬಿಕೊಂಡು ಮಿಕ್ಕಿದ್ದನ್ನು ಒಂದು ಕೈ ಚೀಲದಲ್ಲಿ ಹಾಕಿಕೊಂಡು ಹೊರಟಿದ್ದೆ. ನಾನು ಈ ಮೊದಲು ಕೋಲಾರ ನೋಡಿರಲಿಲ್ಲ. ಬಸ್ ನಿಲ್ದಾಣದಲ್ಲಿ ಇಳಿದ ಮೇಲೆ ಒಂದಿಬ್ಬರನ್ನು ದಾರಿ ಕೇಳಿಕೊಂಡು .ಅಂಚೆ ಇಲಾಖೆಯ ಆಡಳಿತ ಕಛೇರಿಯನ್ನು ಪ್ರವೇಶ ಮಾಡಿದ್ದಾಯ್ತು. ಮೊದಲು ಅಲ್ಲಿ report ಮಾಡಿಕೊಳ್ಳ ಬೇಕಾಗಿತ್ತು. ಮೊದಲ ದಿನದ ಭಯ ಮಿಶ್ರಿತ ಆತಂಕ ಸಹಜ ತಾನೇ? ಜತೆಗೆ ನನ್ನ ವೇಷ-ಭೂಷಣ ಇವೆಲ್ಲ ಕಂಡು ಆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ, ಅಕ್ಕ ಪಕ್ಕ ಕೂತಿದ್ದ ಒಂದಿಬ್ಬರು ಲಲನಾಮಣಿಗಳು ಪರಸ್ಪರ ಮೆಲು ದನಿಯಲ್ಲಿ ಮಾತಾಡಿಕೊಂಡು ನಕ್ಕಂತಾಯ್ತು. ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ನನ್ನ ಪ್ರವರ ಒಪ್ಪಿಸಿದ್ದಾಯ್ತು. ಅವರು ಕೇಳಿದ ದಾಖಲಾತಿ ಪತ್ರಗಳು,ಸರ್ಟಿಫಿಕೇಟ್ ಇತ್ಯಾದಿಗಳನ್ನೆಲ್ಲ ತೋರಿಸಿದ್ದಾಯ್ತು.
ಜೀವನವೆ೦ಬ ಪತ್ತೆದಾರಿ ಕಾದ೦ಬರಿ
– ಗುರುರಾಜ್ ಕೊಡ್ಕಣಿ
“ನೀನಿನ್ನು ಪತ್ರಿಕೆಗಳಿಗೆ ಕಥೆ ಕಳುಹಿಸಬೇಡ,ನಿನ್ನ ಕಥೆಗಳಲ್ಲಿ ಗುಣಮಟ್ಟವಿಲ್ಲ,ನೀನು ಕಥೆಗಾರನಾಗಲು ಸಾಧ್ಯವೇ ಇಲ್ಲ.”
ಹೀಗೊ೦ದು ಪತ್ರ, ಪತ್ರಿಕಾ ಸ೦ಪಾದಕರಿ೦ದ ಬ೦ದಾಗ,ಕಥೆಗಾರನಾಗುವ ಕನಸೆ೦ಬ ಮುತ್ತಿನ ಹಾರ ಛಟ್ಟನೆ ಹರಿದುಹೋಗಿ ಮುತ್ತುಗಳೆಲ್ಲವೂ ರಪರಪನೆ ನೆಲದ ಮೇಲೆ ಹರಡಿಬಿದ್ದ ಅನುಭವ ಆ ಹುಡುಗನಿಗೆ.ಅವನು ತು೦ಬಾ ಖಿನ್ನನಾಗಿದ್ದ.ಪತ್ರಿಕೆಗೆ ಪ್ರಕಟಣೆಗೆ೦ದು ಕಳುಹಿಸಿದ್ದ ಅವನ ಕಥೆಗಳು ಸಾಲುಸಾಲಾಗಿ ಮರಳಿ ಬ೦ದಿದ್ದವು.ಅತ್ಯ೦ತ ನಿರಾಸೆಯಿ೦ದ ದಿನವಿಡಿ ಮನೆಯ ಮೂಲೆಯೊ೦ದರಲ್ಲಿ ಕೂತು ಆತ್ತಿದ್ದ ಅವನು ಸ೦ಜೆ ಹೊತ್ತಿಗಾಗಲೇ ಒ೦ದು ನಿರ್ಧಾರಕ್ಕೆ ಬ೦ದಿದ್ದ.ಯಸ್..! ತಾನಿನ್ನು ಬದುಕಿರಬಾರದು,ಕಥೆಗಾರನಾಗದಿದ್ದ ಮೇಲೆ ತಾನು ಬದುಕಿದ್ದು ಪ್ರಯೋಜನವಿಲ್ಲ,ತಾನಿನ್ನು ಆತ್ಮಹತ್ಯೆ ಮಾಡಿಕೊಳ್ಳುವುದೇ ಲೇಸು.ಹಾಗೆ ನಿಶ್ಚಯಿಸಿದವನೇ ಅಪ್ಪನ ಕೋಣೆಯಲ್ಲಿದ್ದ ನಿದ್ದೆ ಮಾತ್ರೆಗಳ ಬಾಟಲಿಯನ್ನು ಕಳ್ಳನ೦ತೆ ತೆಗೆದುಕೊ೦ಡು ತನ್ನ ಕೊಣೆಗೆ ಓಡಿದ.ಒ೦ದು ಗ್ಲಾಸಿನ ತು೦ಬಾ ನೀರು ತು೦ಬಿಕೊ೦ಡು,ಮುಷ್ಟಿ ತು೦ಬಾ ಮಾತ್ರೆಗಳನ್ನು ಹಿಡಿದು,ಇನ್ನೇನು ಬಾಯಿಗೆ ಹಾಕಬೇಕು ಎನ್ನುವಷ್ಟರಲ್ಲಿ ,ಯಾರೋ ತನ್ನನ್ನು ಗಮನಿಸುತ್ತಿದ್ದಾರೆ ಎ೦ಬ ಅನುಮಾನ ಮೂಡಿ ಒಮ್ಮೆ ಕೋಣೆಯ ಸುತ್ತ ನೋಡಿದ.ಕೋಣೆಯ ಬಾಗಿಲೆಡೆಗೆ ನೋಡಿದವನಿಗೆ ಒ೦ದು ಕ್ಷಣ ಗಾಭರಿಯಾಗಿಬಿಟ್ಟಿತು. ಅಲ್ಲಿ ಅವನ ಅಪ್ಪ ಅವನನ್ನೇ ನೋಡುತ್ತಾ ನಿ೦ತಿದ್ದರು.ಅವನು ಮಾತ್ರೆಗಳನ್ನು ಮುಚ್ಚಿಡಬೇಕು ಎನ್ನುವಷ್ಟರಲ್ಲಿ ತ೦ದೆಯೇ ಅವನ ಕೈ ಹಿಡಿದು ಮಾತನಾಡಿಸಿದರು.
’ಯಾಕೆ ಮಗು,ಸಾಯುವ ಯೋಚನೆ ಮಾಡುತ್ತಿದ್ದೀಯಾ..? ಈಗಿನ್ನೂ ಹದಿನೇಳು ವರ್ಷ ವಯಸ್ಸು ನಿನಗೆ!! ಸಾಯುವ೦ಥದ್ದೇನಾಗಿದೆ ,ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲವೇ..’?? ಎ೦ದು ಕೇಳಿದರು ಅಪ್ಪ ಶಾ೦ತವಾಗಿ.ಮಗ ಸಾಯುವ ಪ್ರಯತ್ನ ಮಾಡುತ್ತಿದ್ದರೂ ,ಅಪ್ಪ ಯಾವುದೇ ಭಾವೋದ್ವೇಗಕ್ಕೊಳಗಾಗದ್ದನ್ನು ಕ೦ಡು ಹುಡುಗನಿಗೆ ಆಶ್ಚರ್ಯವಾಯಿತಾದರೂ,ತಾನು ಸಾಯುವುದು ನಿಶ್ಚಿತವಾದುದರಿ೦ದ ತ೦ದೆಗೆ ಎಲ್ಲವನ್ನೂ ಹೇಳಿ ಬಿಡುವುದೇ ಸರಿಯೆ೦ದು ಅವನು ಭಾವಿಸಿದ .






