ವಿಷಯದ ವಿವರಗಳಿಗೆ ದಾಟಿರಿ

Archive for

5
ಮಾರ್ಚ್

ಸಂಸ್ಕಾರ ಮತ್ತು ವಂಶವೃಕ್ಷ: ಅಪೂರ್ಣದಿಂದ ಪೂರ್ಣದೆಡೆಗೆ

-ಎಸ್.ಎನ್.ಭಾಸ್ಕರ್‍, ಬಂಗಾರಪೇಟೆ.

ಓದುವ ಮುನ್ನ:

ಸಂಸ್ಕಾರ ಮತ್ತು ವಂಶವೃಕ್ಷಸಿದ್ದಾಂತ, ಬದ್ದತೆ, ನಿಷ್ಠೆ ಇವು ಹೆಚ್ಚು ಬಿಗಿಯಾದಷ್ಟೂ ಬೌದ್ದಿಕ ತಿಳುವು ಉಸಿರುಗಟ್ಟುತ್ತದೆ. ಗ್ರಹಿಕೆಯು ಪೂರ್ವಾಗ್ರಹಗಳಿಂದ ಹೊರತಾಗಿದ್ದಷ್ಟೂ ನಿಲುವು ಪರಿಪಕ್ವವಾಗುತ್ತದೆ. ಚಿಂತನೆ ಮತ್ತಷ್ಟು ವಿಕಸಿತವಾಗುತ್ತದೆ. ಸಾಹಿತ್ಯ, ಸೃಷ್ಟಿ ಅಥವಾ ಇಡೀ ಮನುಕುಲವೇ ಆಗಲೀ ಸತ್ಯಾನ್ವೇ಼ಣೆಯ ಹಾದಿಯಲ್ಲಿ, ಸತ್ಯ-ಅಸತ್ಯಗಳ ಪರಾಮರ್ಷೆಯಲ್ಲಿ ನಿತ್ಯ ಚಲನಶೀಲ, ಅಪೂರ್ಣದಿಂದ ಪೂರ್ಣದೆಡೆಗೆ. ಪೂರ್ಣತೆ ಎಂಬುದು ಅಂತ್ಯವಿಲ್ಲದ ಹಾದಿ, ಇದರೆಡೆಗಿನ ಪಯಣ ನಿರಂತರ. ಇಗೋ ಮುಟ್ಟಿದೆ ಇದೇ ಅಂತ್ಯ, ಇದೇ ಸತ್ಯ ಎಂದು ಗ್ರಹಿಸಿದ ಮರುಕ್ಷಣಕ್ಕೆ ಮತ್ತೊಂದು ಹಾದಿ ಕಾಲ ಬುಡದಿಂದ ಹಾಯುತ್ತಾ ಅನಂತದವರೆಗೆ ಹಾಸಿರುತ್ತದೆ. ಧುರ್ಗಮವೋ ಸುಗಮವೋ ಹೆಜ್ಜೆ ಇಟ್ಟ ನಂತರವಷ್ಟೇ ತಿಳಿಯುತ್ತದೆ. ಗ್ರಹಿಕೆಯಿಂದ ಅರಿವು, ಅರಿವಿನಿಂದ ಜ್ಞಾನ, ಹೀಗೆ ಮುಂದೆ ಮುಂದೆ ಸಾಗಿದಷ್ಟೂ ತಾತ್ಕಾಲಿಕವಾಗಿಯಾದರೂ ಪೂರ್ಣತೆಯ ಅನುಭವ ದೊರೆಯುತ್ತದೆ. ಇದೊಂದು ಅಂತ್ಯವಿಲ್ಲದ ಹಾದಿ, ಪರಿಪೂರ್ಣತೆಯ ಗಮ್ಯದೆಡೆಗೆ ಆತ್ಮದ ನಿತ್ಯಪಯಣ. ಇಲ್ಲಿ ಅನುಭೂತಿಯೆಲ್ಲವೂ ಅಮೃತ; ಗಳಿಸಿದ್ದೆಲ್ಲವೂ ಶಾಶ್ವತ.

ಕನ್ನಡ ಸಾಹಿತ್ಯ ಲೋಕದಲ್ಲಿ ಓದುಗರಿಂದ, ವಿಮರ್ಷಕರಿಂದ ಅತೀ ಹೆಚ್ಚು ಚರ್ಚೆಗಳಿಗೆ, ವಾದ ವಿವಾದಗಳಿಗೆ ಕಾರಣವಾದ ಕೃತಿಗಳಲ್ಲಿ ದಿವಂಗತ ಡಾ.ಯು.ಆರ್‍ ಅನಂತಮೂರ್ತಿಯವರು ಬರೆದಿರುವ ಸಂಸ್ಕಾರ ಕಾದಂಬರಿ ಪ್ರಮುಖವಾದುದು. ಈ ಕಾದಂಬರಿಯ ಕಥಾವಸ್ತುವೇ ವಿವಾದಕ್ಕೆ ಮೂಲವಾಗಿದೆ. ಹಲವಾರು ವೇದಿಕೆಗಳಲ್ಲಿ ಈಗಾಗಲೇ ಚಿಂತನ-ಮಂಥನಗಳಿಗೆ ಸಂಸ್ಕಾರ ಕಾದಂಬರಿ ವಿಷಯ ವಸ್ತುವಾಗಿದೆ. ಇನ್ನು ಎಸ್.ಎಲ್ ಬೈರಪ್ಪ ರವರ ವಂಶವೃಕ್ಷ ಕಾದಂಬರಿಯು ಸಹಾ ಬಹುಚರ್ಚಿತವಾದ ಕಾದಂಬರಿಯಾಗಿದೆ. ಎಸ್.ಎಲ್.ಬೈರಪ್ಪ ರವರ ಅನೇಕ ಕಾದಂಬರಿಗಳ ಪೈಕಿ ಇದುವರೆಗೂ ಸುಮಾರು ಐವತ್ತಕ್ಕೂ ಹೆಚ್ಚು ಮುದ್ರಣಗಳನ್ನು ಕಂಡಿರುವ ಈ ಕಾದಂಬರಿ ಹೆಚ್ಚು ಪ್ರಸಿದ್ದವಾದ ಕೃತಿಯಾಗಿದೆ. ಸಂಸ್ಕಾರ ಮತ್ತು ವಂಶವೃಕ್ಷ ಈ ಎರಡೂ ಕಾದಂಬರಿಗಳು ಕ್ರಮವಾಗಿ ೧೯೬೫ ಮತ್ತು ೧೯೬೬ ರಲ್ಲಿ ಪ್ರಥಮವಾಗಿ ಪ್ರಕಟಗೊಳ್ಳುತ್ತವೆ.

ಮತ್ತಷ್ಟು ಓದು »

5
ಮಾರ್ಚ್

ನಿಲುಮೆ ಪ್ರಕಾಶನದ ಪುಸ್ತಕ ಬಿಡುಗಡೆ ಮತ್ತು ನಿಲುಮೆ ಫೌಂಡೇಶನ್ ನ ಉದ್ಘಾಟನಾ ಸಮಾರಂಭದ ವರದಿ

– ಹರೀಶ್ ಆತ್ರೇಯ,ಹರ್ಷಿತ್ ಜೋಸೆಫ್

Nilume Book Releaseನಿಲುಮೆ ಪ್ರಕಾಶನದಿಂದ ದಿನಾಂಕ ೧ ಮಾರ್ಚ್ ೨೦೧೫ ರಂದು ಬೌದ್ಧಿಕ ದಾಸ್ಯದಲ್ಲಿ ಭಾರತ ಎಂಬ ಪುಸ್ತಕವು ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ಬಿಡುಗಡೆಯಾಯಿತು. ಕಳೆದ ಐದು ವರ್ಷಗಳಿಂದ  ಸತತವಾಗಿ ಬೌದ್ಧಿಕ ವಿಚಾರಗಳನ್ನು ಮಂಡಿಸುತ್ತಿದ್ದ ನಿಲುಮೆ ಬ್ಲಾಗ್ ಈಗ ಪ್ರಕಾಶನ ಸಂಸ್ಥೆಯ ಹೆಸರಿನಲ್ಲಿ ನಿಲುಮೆ ಫೌಂಡೇಶನ್ ಆಗಿ ಹೊರಹೊಮ್ಮಿದೆ, ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿಯೇ ನಿಲುಮೆ ಫೌಂಡೇಶನ್ನಿನ ಉದ್ಘಾಟನೆಯಾಯಿತು.

ಬ್ರಿಟಿಷರ ಕೆಳಗೆ ದಾಸರಾಗಿ ಬಾಳಿದ (?) ಭಾರತೀಯರ ಚರಿತ್ರೆ (?) ನಮಗೆ ಗೊತ್ತಿದೆ. ರಾಜಕೀಯವಾಗಿ ನಮ್ಮನ್ನು ಆಳಿದುದು ಹೌದಾದರೂ ಬೌದ್ಧಿಕವಾಗಿ ನಾವು ಅವರಿಂದ ಆಳಿಸಿಕೊಳ್ಳಬೇಕಾದ ಸ್ಥಿತಿಗೆ ತಲುಪಿದ್ದು ಶೋಚನೀಯ. ಅವರಿಂದ ಭೌತಿಕವಾಗಿ ಆಳಿಸಿಕೊಳ್ಳುವ ಕಾಲಘಟ್ಟವನ್ನು ವಸಾಹತುಶಾಹಿ ಕಾಲವೆಂದು ಕರೆಯುವುದಾದರೆ, ಈಗಲೂ ಅವರ ಬೌದ್ಧಿಕ ಚಿಂತನೆಗಳ, ಆಲೋಚನಾ ಕ್ರಮಗಳ ರೂಪದಲ್ಲಿ ಅವರಿಂದ ಬೌದ್ಧಿಕವಾಗಿ ಆಳಿಸಿಕೊಳ್ಳುತ್ತಿದ್ದೇವೆ ಎನ್ನುವುದೂ ಸತ್ಯ. ಇವೆಲ್ಲದರಿಂದ ಹೊರಬರಬೇಕಾದರೆ ನಮ್ಮ ಸಂಸ್ಕೃತಿಯ , ಆಚರಣೆಗಳ ಅರಿವು ನಮಗೆ ಬೇಕಾಗುತ್ತದೆ. ಸತ್ಯವನ್ನು ತಿಳಿಯುವ ಮತ್ತು ತಿಳಿಸುವ ಹೊಣೆ ನಮ್ಮದಾಗಿರುತ್ತದೆ. ಇವೆಲ್ಲವನ್ನೂ ಪ್ರಚುರಪಡಿಸಲು ನಮಗೊಂದು ದಾರಿ,ಕ್ರಮ ಮತ್ತು ಮಾರ್ಗದರ್ಶನದ ಅವಶ್ಯಕತೆಯಿದೆ. ಹತ್ತು ಹಲವು ಪುಸ್ತಕಗಳು ನಮ್ಮ ಕಣ್ಣಿಗೆ ಕಾಣಬಹುದು ಮತ್ತು ನಾವು ಓದಬಹುದು ಆದರೆ ದುರದೃಷ್ಟವಶಾತ್ ಅವೆಲ್ಲವೂ ಪಾಶ್ಚಾತ್ಯದ ಕಂಗಳಿಂದ ಕಂಡ ದೃಶ್ಯಗಳಾಗಿವೆ. ಅವರು ಚಿಂತನ ಕ್ರಮವನ್ನು ಅಳವಡಿಸಿಕೊಂಡು ಲೇಖಿಸಿದ ಮಹಾ ಪ್ರಬಂಧಗಳು ನಮ್ಮ ಸಂಸ್ಕೃತಿಯ ಮೂಲವನ್ನು ಅರಿಯುವ ಪ್ರಯತ್ನವನ್ನು ಮಾಡಿಯಾವೇ? ಇದು ಪ್ರಶ್ನೆಯಾಗಿ ಉಳಿಯುತ್ತಿರುವ ಹಂತದಲ್ಲಿ ಪ್ರೊ|| ಬಾಲಗಂಗಾಧರ್ ಅವರ ಲೇಖನಗಳು ಮತ್ತು ಕ್ರಮ ಹೆಚ್ಚು ಮೌಲ್ಯಯುತವೂ ಮತ್ತು ಸರಿಯಾದ ಮಾರ್ಗವೂ ಆಗಿರುವುದು ನಿಜಕ್ಕೂ ಸಂತಸದ ಸಂಗತಿ. ಆಲೋಚನಾ ಕ್ರಮಕ್ಕೆ ಹೊಸದೊಂದು ಹೊಳಹನ್ನು ತಂದುಕೊಟ್ಟವರು ಪ್ರೊ ಬಾಲು ರವರು.
ಮತ್ತಷ್ಟು ಓದು »