ವಿಷಯದ ವಿವರಗಳಿಗೆ ದಾಟಿರಿ

Archive for

17
ಮಾರ್ಚ್

ಈ ಸಾವು ನ್ಯಾಯವೇ?

– ರಾಕೇಶ್ ಶೆಟ್ಟಿ

ಡಿ.ಕೆ ರವಿಲ್ಯಾಂಡ್ ಮಾಫಿಯಾ,ಸ್ಯಾಂಡ್ ಮಾಫಿಯಾಗಳ ವಿರುದ್ಧ ಸಮರ ಸಾರಿ,ತನ್ನ ದಕ್ಷತೆಯ ಕಾರಣದಿಂದಲೇ ಕೋಲಾರ ಜಿಲ್ಲಾಧಿಕಾರಿ ಸ್ಥಾನದಿಂದ ಎತ್ತಂಗಡಿ ಮಾಡಿಸಲ್ಪಟ್ಟಿದ್ದ ದಕ್ಷ ಯುವ ಅಧಿಕಾರಿ ಡಿ.ಕೆ ರವಿಯಂತವರು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ? ನನಗಂತೂ ನಂಬಲಾಗುತ್ತಿಲ್ಲ.ನಿನ್ನೆ ಅವರ ಮರಣದ ಸುದ್ದಿ ತಿಳಿದಾಗಿನಿಂದ ಮನಸ್ಸು ಖಿನ್ನವಾಗಿದೆ.ಸತ್ಯ,ನ್ಯಾಯಕ್ಕಾಗಿ ಹೋರಾಡುವವರು ಹೀಗೆ ದುರಂತ ಅಂತ್ಯ ಕಾಣುತ್ತಾರೆಯೇ? ಅಂತವರ ಕುಟುಂಬದವರಿಗೆ ನೋವು ಕಟ್ಟಿಟ್ಟ ಬುತ್ತಿಯೇ?

ಕೋಲಾರದಿಂದ ರವಿಯವರನ್ನು ವರ್ಗಾವಣೆ ಮಾಡಿದಾಗ ಇಡೀ ಜಿಲ್ಲೆಯೇ ಬಂದ್ ಆಗಿತ್ತು.ಒಂದಿಡಿ ಜಿಲ್ಲೆಯ ಜನರ ಜೊತೆ ಅಧಿಕಾರಿಯೊಬ್ಬ ಬಾಂಧವ್ಯ ಈ ಮಟ್ಟಿಗಿರುವುದು ಇತ್ತೀಚಿನ ದಿನಗಳಲ್ಲಿ ಅಪರೂಪವೇ ಸರಿ.ಕೋಲಾರದಿಂದ ಎತ್ತಂಗಡಿಯಾಗಿ ಬಂದ ಮೇಲಾದರೂ ಈ ಮನುಷ್ಯ ತಣ್ಣಗಾಗುತ್ತಾರೆ ಎಂದುಕೊಂಡಿದ್ದವರಿಗೆ,ರವಿಯವರು ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಹುದ್ದೆ ವಹಿಸಿಕೊಂಡ ಮೇಲೆ ನಡೆಸಿದ ದಾಳಿಗಳು ಮತ್ತೆ ನಿದ್ದೆಗೆಡಿಸಿದ್ದವೇನೋ! ಐದೂವರೆ ತಿಂಗಳ ಹಿಂದೆ ತೆರಿಗೆ ಇಲಾಖೆಗೆ ಬಂದ ರವಿಯವರು ಈ ಕಡಿಮೆ ಅವಧಿಯಲ್ಲಿ ದೊಡ್ಡ ದೊಡ್ಡ ಬಿಲ್ಡರ್ ಗಳ ತೆರಿಗೆ ವಂಚನೆಯನ್ನು ಬಯಲಿಗೆಳೆದಿದ್ದರು.ವೃತ್ತಿಯಲ್ಲಿ ಖಡಕ್ ಆಗಿದ್ದ ರವಿಯವರು ಜನರೊಂದಿಗೆ ಸಾಮಾನ್ಯರಂತೆ ಬೆರೆಯುತಿದ್ದವರು. Read more »