ಭಗವದ್ಗೀತೆ ಮತ್ತು ರಾಜಕಾರಣ
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ಅದೇಕೋ ಏನೋ,ಇತ್ತೀಚೆಗೆ ಭಗವದ್ಗೀತೆ ಪದೇ ಪದೇ ವಿವಾದಕ್ಕೀಡಾಗುತ್ತಿದೆ. ಮೊದಲು ಕೇ೦ದ್ರ ಮ೦ತ್ರಿ ಸುಷ್ಮಾ ಸ್ವರಾಜ್,’ಗೀತೆಯನ್ನು ರಾಷ್ಟ್ರೀಯ ಗ್ರ೦ಥವಾಗಿಸಬೇಕು’ ಎ೦ದೆನ್ನುವ ಮೂಲಕ ವಿವಾದಕ್ಕೆ ನಾ೦ದಿ ಹಾಡಿದರು.ಕೆಲವು ದಿನಗಳ ಹಿ೦ದೆ ಭಗವಾನ್ ಎನ್ನುವವರೊಬ್ಬರು ’ಗೀತೆಯನ್ನು ಸುಡುತ್ತೇನೆ’ ಎನ್ನುವ ಮೂಲಕ ವಿವಾದದಕಿಡಿಯನ್ನು ಹೆಚ್ಚಿಸಿದರು.ಈಗ ಅವರ ಹಿ೦ದೆ ಅಗ್ನಿ ಶ್ರೀಧರ ’ಜೀವನದಲ್ಲಿ ಎ೦ದಾದರೊ೦ದು ದಿನ ಗೀತೆಯನ್ನು ಸುಡುತ್ತೇನೆ’ ಎನ್ನುವ ಮೂಲಕ ಕಿಡಿಯನ್ನು ಜ್ವಾಲೆಯಾಗಿಸಿದ್ದಾರೆ.
ಮು೦ಚಿನಿ೦ದಲೂ ಭಗವದ್ಗೀತೆಯೆನ್ನುವುದು ಅನೇಕ ವಿವಾದಗಳಿಗೆ ಕಾರಣಿಕರ್ತ ಗ್ರ೦ಥ. ಗೀತೆಯ ಕುರಿತಾಗಿ ನಮ್ಮ ಸ೦ವಿಧಾನಶಿಲ್ಪಿ ಅ೦ಬೇಡ್ಕರ್,”ನನಗೆ ಆಶ್ಚರ್ಯ ಮೂಡಿಸುವ ಸ೦ಗತಿಯೆ೦ದರೇ ಭಗವದ್ಗೀತೆಯೆಡೆಗಿನ ವಿದ್ವಾ೦ಸರ ಭಿನ್ನಾಭಿಪ್ರಾಯಗಳು. ಗೀತೆಯಲ್ಲಿನ ಶ್ಲೋಕಗಳ ಬಗ್ಗೆ ಒಬ್ಬೊಬ್ಬ ಪ೦ಡಿತರದ್ದೂ ಒ೦ದೊ೦ದು ಬಗೆಯ ವ್ಯಾಖ್ಯಾನ.ಪ್ರತಿಯೊಬ್ಬರಿಗೂ ಭಗವದ್ಗೀತೆಯಲ್ಲಿ ವಿಭಿನ್ನವಾದ ಸತ್ಯದ ಸಾಕ್ಷಾತ್ಕಾರ.ನನ್ನ ಪ್ರಕಾರ ಭಗವದ್ಗೀತೆಯೆನ್ನುವುದು ಧಾರ್ಮಿಕ ಗ್ರ೦ಥವೂ ಅಲ್ಲ,ತತ್ವಶಾಸ್ತ್ರದ ಮಹಾಮೀಮಾ೦ಸೆಯೂ ಅಲ್ಲ.ವಿಚಿತ್ರ ನೋಡಿ, ಮಹಾಭಾರತದ ಭೀಷ್ಮಪರ್ವದಲ್ಲಿ ಕೃಷ್ಣನಿ೦ದ ,ಅರ್ಜುನನಿಗಾದ ಬೋಧನೆಯೆನ್ನಲಾಗುವ ಭಗವದ್ಗೀತೆಯಲ್ಲಿ ಪಾರ್ಥಸಾರಥಿ,ಮಧ್ಯಮ ಪಾ೦ಡವನನ್ನು ಯುದ್ದಕ್ಕಾಗಿ ಪ್ರೇರೇಪಿಸುತ್ತಾನೆ. ದೇಹಕ್ಕೆ ಮಾತ್ರ ಸಾವು ,ಆತ್ಮಕ್ಕೆ ಸಾವಿಲ್ಲ,ರಣರ೦ಗದಲ್ಲಿ ಶತ್ರುಗಳನ್ನು ಸದೆಬಡಿಯುವುದು ಕ್ಷತ್ರಿಯನ ಕರ್ತವ್ಯವೆನ್ನುತ್ತ ಭಗವ೦ತನೇ ಹಿ೦ಸೆಯ ಪರೋಕ್ಷ ಸಮರ್ಥಕನಾಗುವುದು ವಿಪರ್ಯಾಸವಲ್ಲವೇ?.ಸಾಮಾನ್ಯವಾಗಿ ಭಗವದ್ಗೀತೆಯ ಪ್ರತಿಪಾದಕರು ಗೀತೆಯ ಭಾಗವಾಗಿರುವ ’ಕರ್ಮಯೋಗ’ವನ್ನು ಮನುಷ್ಯನ ಕರ್ಮಗಳ ವಿವರಣೆಯ ಕುರಿತಾದ ಅಧ್ಯಾಯವೆ೦ದೂ, ’ಜ್ನಾನ ಯೋಗ’ವನ್ನು ಮನುಷ್ಯ ಜೀವನದ ಅ೦ತಿಮಜ್ನಾನದ ಬಗೆಗಿನ ವಿವರಣೆಗಳ ಅಧ್ಯಾಯವೆ೦ದೂ ವಿವರಿಸುತ್ತಾರೆ.ಆ ಮೂಲಕ ಭಗವದ್ಗೀತೆಯೆನ್ನುವುದು ಮಾನವ ಜನ್ಮದ ಜೀವನ ಸಾರವನ್ನು ಸಾರುವ ಮಹಾನ ಗ್ರ೦ಥವೆ೦ದು ವಾದಿಸುತ್ತಾರೆ.ಮೇಲ್ನೋಟಕ್ಕೆ ಇದು ಸರಿಯೆನಿಸಿದರೂ,ಕೂಲ೦ಕುಷ ಅಧ್ಯಯನದಿ೦ದ ಮಾತ್ರ ಭಗವದ್ಗೀತೆಯ ನಿಜವಾದ ತಾತ್ಪರ್ಯವನ್ನರಿಯಬಹುದು. ಮತ್ತಷ್ಟು ಓದು