ವಿಷಯದ ವಿವರಗಳಿಗೆ ದಾಟಿರಿ

Archive for

8
ಜುಲೈ

ಶೇರ್ ಷಾ !

– ಆತ್ಮನ್ ಭಟ್,ಚಿತ್ರದುರ್ಗ

ವಿಕ್ರಮ್ ಬಾತ್ರಾಆತ ಭಾರತೀಯ ಸೇನೆಯ ಮಗದೊಬ್ಬ ಕ್ಯಾಪ್ಟನ್ ಅಷ್ಟೆ! ಆವತ್ತೂ ೭ ಜುಲೈ. ಕರೆಕ್ಟಾಗಿ ಹದಿನಾರು ವರ್ಷಗಳ ಹಿಂದಿನ’ ಫ್ಲ್ಯಾಷ್  ಬ್ಯಾಕು’. ಕಾರ್ಗಿಲ್ ಯುದ್ಧದ ರಣರಂಗ. ಅದೇ ಕಾರ್ಗಿಲ್ ಯುದ್ಧದ ಒಂದು ಗುಡ್ಡಗಾಡು. ವಂಚಕ ಹೇಡಿ ಪಾಕಿಸ್ತಾನೀ ನುಸುಳುಕೋರರ ಹಾಗೂ ಭಾರತೀಯ ಸೇನೆಯ ತುಕಡಿಯೊಂದರ ನಡುವಣ ಕಾಳಗ. Right now, ಆ ಕಾಳಗದ ಕ್ಲೈಮ್ಯಾಕ್ಸ್. ಒಬ್ಬ ಕ್ಯಾಪ್ಟನ್, ಅದೇ ಮೇಲೆ ಹೇಳಿದ್ದೆನಲ್ಲ ಆತ. ತನಗಿಂತ ಮೊದಲು ಹೋಗಬೇಕಿದ್ದ ಸುಬೇದಾರನಿಗೆ “तू बाल-बच्चेदार है, हट जा पीचे” ಅಂತ ಕೂಗಿದ. “ನಿನಗೆ ಮಕ್ಕಳು ಮರಿ ಇದಾವ. ನಡೀಲೆ ಆಚೆ!” ಅಂತ ಅರ್ಥ! ಹೋಲ್ಡ್ ಡೌನ್, ಈತನೇನು ಜೀವನ ಸಾಕಾದವನಲ್ಲ, ಈತನ ಕಾಲುಭಾಗ ಜೀವನವೂ ಮುಗಿದಿರಲಿಲ್ಲ. ಅವನಿಗಾಗ 24ರ ಹರೆಯ! ತಾನು ಮುಂದುವರೆದ. ಗುಂಡೇಟು ತಿಂದ, ಎಡವಿದ, ದಾಳಿಗೆ ಎದೆಗೊಟ್ಟ, ಆದರೂ ತ್ರಿವಿಕ್ರಮನಂತೆ ನುಗ್ಗಿದ. ಕೊನೆಗೊಮ್ಮೆ, ಅಲ್ಲೇ ‘जय माता दि ‘ ಅಂತ ಕೂಗಿ ಯುದ್ಧಾಂಕಣದಲ್ಲೇ ಕೊನೆಯುಸಿರೆಳೆದ. ಕೊನೆಯುಸಿರೆಳೆಯುವ ಮುನ್ನ ಉಸಿರಿಗೊಬ್ಬನಂತೆ ಐದು ಶತ್ರು ಸೈನಿಕರನ್ನ ಕೊಂದ. ಅವರ ತೀರ ಹತ್ತಿರಕ್ಕೆ, ಅಂದರೆ ಶತ್ರುವಿನ  ಸುಮಾರು ಒಂದು ಮಾರು ಹತ್ತಿರದಿಂದ ಅವರ ಎದೆಗೆ ಗುಂಡು ಹೊಕ್ಕಿಸಿದ. ಇವನ ಶೌರ್ಯ ಇಲ್ಲಿಗೆ ಮುಗಿಯುವುದಿಲ್ಲ, ಇಲ್ಲಿಂದ ಶುರುವಾಗುವುದೂ ಇಲ್ಲ. ಮುಂದೆ ಓದಿ. ನೆನಪಿರಲಿ, ಈತ ಭಾರತದ ಅತ್ಯುನ್ನತ ಶೌರ್ಯ ಪ್ರಶಸ್ತಿ ಪಡೆದವ. ‘ದಿ ಪರಮವೀರ ಚಕ್ರ’ವನ್ನು ಯುದ್ಧದಲ್ಲಿ ಭಾಗವಹಿಸಿದವರಿಗೆಲ್ಲ ಕೊಡುವುದಿಲ್ಲ! It is not surely a satisfactory certificate! ಆತನ ಹೆಸರೊಂದನ್ನು ಹೇಳಿಬಿಡುತ್ತೇನೆ, ಅದು ‘ವಿಕ್ರಮ್ ಬಾತ್ರಾ’!

ಮತ್ತಷ್ಟು ಓದು »