ವಿಷಯದ ವಿವರಗಳಿಗೆ ದಾಟಿರಿ

Archive for

25
ಜುಲೈ

ಬೌದ್ಧಿಕ ದಾಸ್ಯದಲ್ಲಿ ಭಾರತ -ಪುಸ್ತಕ ವಿಮರ್ಶೆ

10486303_10203241844001574_2174162009372000721_n‘ಒಪ್ಪಿತ ಸತ್ಯ’ಗಳನ್ನು ಪ್ರಶ್ನಿಸುವ ಕೃತಿ

 – ಡಾ. ಪ್ರವೀಣ ಟಿ. ಎಲ್. & ಶಿವಕುಮಾರ ಪಿ. ವಿ. ಶಿವಮೊಗ್ಗ

   ಬೌದ್ಧಿಕ ದಾಸ್ಯದಲ್ಲಿ ಭಾರತ ಎಂಬ ಕೃತಿಯು ನಿಲುಮೆ ಪ್ರಕಾಶನದ ಚೊಚ್ಚಲ ಪುಸ್ತಕವಾಗಿ ದಿನಾಂಕ-01-03-2015ರಂದು ಲೋಕಾರ್ಪಣೆಗೊಂಡಿತು. ಈ ಕೃತಿಯು ಬಾಲಗಂಗಾಧರರವರ ವಿಚಾರಗಳ ಕನ್ನಡ ರೂಪಾಂತರವಾಗಿದೆ. ಬಾಲುರವರು ಕಳೆದ ಒಂದು ದಶಕದಿಂದಲೂ ಕನ್ನಡದ ಬುದ್ಧಿಜೀವಿ ವಲಯದಲ್ಲಿ ಚಿರಪರಿಚಿತರು. ಅವರ ಹೀದನ್ ಇನ್ ಹಿಸ್ ಬ್ಲೈಂಡ್ನೆಸ್ ಎಂಬ ಕೃತಿಯು ಸ್ಮೃತಿ-ವಿಸ್ಮೃತಿ ಭಾರತೀಯ ಸಂಸ್ಕೃತಿ ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದಗೊಂಡಿದ್ದು ಸಾಂಸ್ಕೃತಿಕ ವಿಭಿನ್ನತೆ ಹಾಗೂ ಭಾರತೀಯ ಸಮಾಜದ ಕುರಿತ ಜ್ಞಾನದ ಹುಡುಕಾಟಕ್ಕೆ ಹೊಸ ಆಯಾಮಗಳನ್ನು ನೀಡಿದೆ. ಬಹುತೇಕ ಚಿಂತಕರು ಹೇಳುವಂತೆ ಅದು ಇತರ ವೈಜ್ಞಾನಿಕ ಸಂಶೋಧನೆಗಳಿಗೆ ಮಾದರಿ ಎಂಬ ಹೆಗ್ಗಳಿಕೆ ಪಡೆದಿದೆ. ಹಾಗಾಗಿಯೇ ಅದರ ಓದಿಗೆ ಕೆಲವು ಭೌದ್ಧಿಕ ಅಗತ್ಯ ಹಾಗೂ ಪ್ರಯತ್ನಗಳು ಬೇಕಾಗುತ್ತವೆ. ಅಂತಹ ಗಹನವಾದ ಸೈದ್ಧಾಂತಿಕ ವಿಚಾರಗಳಿಗೆ ಸಾಮಾನ್ಯ ಓದುಗರಿಗೂ ಸಹ ಪ್ರವೇಶ ಕಲ್ಪಿಸಿಕೊಡುವಲ್ಲಿ ರಾಜರಾಮ ಹೆಗಡೆಯವರ ಸರಳ ನಿರೂಪಣೆಯ 31 ಚಿಕ್ಕ ಅಂಕಣಗಳ ಪ್ರಸ್ತುತ ಕೃತಿಯು ಯಶಸ್ವಿಯಾಗಿದ್ದು ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಮರು ಮುದ್ರಣವನ್ನೂ ಕಂಡಿದೆ.

   ಭಾರತವು ವಸಾಹತುಶಾಹಿ ಆಳ್ವಿಕೆಯಿಂದ ಮುಕ್ತವಾಗಿ ಅರವತ್ತಕ್ಕೂ ಹೆಚ್ಚು ವರ್ಷಗಳೇ ಕಳೆದಿವೆ. ಆದರೆ ಐರೋಪ್ಯರ ಆಳ್ವಿಕೆಯಿಂದ ಸ್ವತಂತ್ರವಾದರೂ ಸಹ ಅವರ ಚಿಂತನೆಯ ದಾಸ್ಯದಿಂದ ಇನ್ನೂ ಸ್ವತಂತ್ರರಾಗಿಲ್ಲ. ವಸಾಹತು ಪ್ರಜ್ಞೆಯು ನಮ್ಮೆಲ್ಲರನ್ನು ಇನ್ನೂ ಐರೋಪ್ಯರ ದಾಸ್ಯದಲ್ಲಿಯೇ ಬಂಧಿಸಿಟ್ಟಿದೆ ಎಂದು ಈ ಕೃತಿಯು ಪ್ರತಿಪಾದಿಸುತ್ತದೆ. ದಿಗಿಲು ಬಡಿಸುವ ಈ ಹೇಳಿಕೆಯೇ ನಮ್ಮ ಸಮಾಜದ ಕುರಿತ ಈವರೆಗಿನ ಭೌದ್ಧಿಕ ಬೆಳವಣಿಗೆಯ ಬಗ್ಗೆ ಮೂಲಭೂತ ಅನುಮಾನ ಹುಟ್ಟಿಸುತ್ತದೆ. ಇಂತಹ ಹೇಳಿಕೆಗಳು ವಸಾಹತೋತ್ತರವಾದಗಳಲ್ಲಿ ಈಗಾಗಲೇ ಬಂದಿವೆ. ಆದರೆ ಅವುಗಳೂ ಸಹ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಐರೋಪ್ಯ ಚಿಂತನೆಗಳ ಮಿತಿಯಲ್ಲಿ ಬಳಲುತ್ತಿವೆ. ಅಂತಹ ಮಿತಿಗಳನ್ನು ದಾಟುವ ಪ್ರಸ್ತುತ ಕೃತಿಯ ಮೇಲಿನ ಪ್ರತಿಪಾದನೆಯು ಬಹುಮುಖ್ಯವೆನಿಸುತ್ತದೆ. ನಾವು ತೀರಾ ಸಹಜವೆಂಬಂತೆ ಒಪ್ಪಿರುವ ‘ಸತ್ಯ’ಗಳನ್ನು ಪ್ರಶ್ನಿಸಿ ಆ ಭೌದ್ಧಿಕದಾಸ್ಯದ ಸ್ವರೂಪ ಹೇಗಿದೆ? ಅದು ನಮ್ಮ ದಿನನಿತ್ಯದ ಸಮಸ್ಯೆಗಳಾಗಿ ವಿಭಿನ್ನ ರೂಪಗಳಲ್ಲಿ ಹೇಗೆ ಪ್ರವೇಶ ಪಡೆಯುತ್ತದೆ? ಅದರಿಂದಾಗುತ್ತಿರುವ ಅನಾಹುತಗಳೇನು? ಎಂಬುದನ್ನು ಕೃತಿಯಲ್ಲಿನ ಒಂದೊಂದು ಲೇಖನಗಳು ವಿಭಿನ್ನ ಸಮಸ್ಯೆಯನ್ನು ಎತ್ತಿಕೊಂಡು ಎಳೆಎಳೆಯಾಗಿ ಬಿಡಿಸಿಡುತ್ತವೆ. ಅದು ಕೃತಿಯ ನಾಲ್ಕು ಹಂತಗಳಲ್ಲಿ ನಡೆಯುತ್ತದೆ. ಮತ್ತಷ್ಟು ಓದು »

25
ಜುಲೈ

ನಿಲುಮೆ ಪ್ರಕಾಶನದ, “ಕೊಟ್ಟ ಕುದುರೆಯನೇರಲರಿಯದೆ” ಹಾಗೂ “ಬುದ್ಧಿಜೀವಿಗಳ ಮೂಢನಂಬಿಕೆಗಳು” ಪುಸ್ತಕಗಳ ಬಿಡುಗಡೆ ಸಮಾರಂಭಕ್ಕೆ ಆಹ್ವಾನ

Nilume Full Program