ವಿಷಯದ ವಿವರಗಳಿಗೆ ದಾಟಿರಿ

Archive for

31
ಜುಲೈ

ನಮ್ಮ ನಡುವೆ ಮೊಳಕೆಯೊಡೆಯುತ್ತಿರುವ ಸೆಕ್ಯುಲರ್ ಭಯೋತ್ಪಾದಕರು

– ರೋಹಿತ್ ಚಕ್ರತೀರ್ಥ

ಮೂಲಭೂತವಾದಿ ಸೆಕ್ಯುಲರಿಸಂಕನ್ನಡದ ಚಲನಚಿತ್ರ ನಿರ್ದೇಶಕರೊಬ್ಬರು ಉದುರಿಸಿದ ಅಣಿಮುತ್ತುಗಳು ಇವು: “ಭಗತ್‍ಸಿಂಗ್, ಆಜಾದ್ ಮುಂತಾದವರನ್ನು ಬ್ರಿಟಿಷರು ಗಲ್ಲಿಗೇರಿಸಿದರು. ವ್ಯವಸ್ಥೆ ತನಗಾಗದವರ ಕತ್ತಿಗೆ ನೇಣು ಬಿಗಿಯಲು ಸದಾ ಉತ್ಸುಕವಾಗಿರುತ್ತದೆ. ಒಂದೊಂದು ಕಾಲಕ್ಕೆ ಒಂದೊಂದು ಸರಿ ಅನ್ನಿಸುತ್ತದೆ. ಕಾನೂನು ಯಾವತ್ತೂ ಸಾಪೇಕ್ಷ. ಆಳುವವರ ಮರ್ಜಿಗೆ ತಕ್ಕಂತೆ ನ್ಯಾಯ, ಕಾನೂನು, ಶಿಕ್ಷೆಯ ರೂಪಗಳು ಬದಲಾಗಬಹುದು.” ಈ ನಿರ್ದೇಶಕರು ಇಷ್ಟೆಲ್ಲ ಸಂಶೋಧನೆ ಮಾಡಿದ್ದು ಯಾಕೆಂದರೆ, ಯಾಕೂಬ್ ಮೆಮೊನ್ ಎಂಬ ದೇಶದ್ರೋಹಿಯನ್ನು ಗಲ್ಲಿಗೇರಿಸಬೇಕು ಎಂದು ಸುಪ್ರೀಂ ಕೋರ್ಟು ತೀರ್ಪು ಕೊಟ್ಟಿದ್ದು ಇವರಿಗೆ ಹೃದಯಕ್ಕೆ ಗೀರು ಕೊರೆದಷ್ಟು ನೋವಾಗಿದೆಯಂತೆ. ಅವನನ್ನು ಗಲ್ಲಿಗೇರಿಸಬಾರದು, ಭರತಖಂಡದ ನೂರಿಪ್ಪತ್ತು ಕೋಟಿ ಜನಗಳ ಮಧ್ಯೆ ಅವನೊಬ್ಬ ನಮಗೆ ಭಾರವಾಗುತ್ತಾನೆಯೇ? ಅವನನ್ನು ನೆಮ್ಮದಿಯಿಂದ ಇರಗೊಡಬೇಕು – ಎನ್ನುವುದು ಈ ನಿರ್ದೇಶಕರು ಮತ್ತು ಅವರ ಜೊತೆಗಿರುವ ಹತ್ತಾರು ಬುದ್ಧಿಜೀವಿಗಳ ವಾದ ಮತ್ತು ಅಳಲು. ಅವರ ಮಾತನ್ನು ಮೇಲುಮೇಲಕ್ಕೇ ನೋಡಿ “ಆಹಾ ಎಷ್ಟು ಚೆಂದ ಹೇಳಿದ್ದಾರಲ್ಲವಾ? ಮಾನವೀಯತೆ ಅವರ ಪದಪದಗಳಲ್ಲೂ ಜಿನುಗುತ್ತಿದೆ. ಅಂತಃಕರಣದ ಪ್ರೀತಿ, ಆದರ ಅವರ ಹನಿಹನಿ ರಕ್ತದಲ್ಲೂ ತೊಟ್ಟಿಕ್ಕುತ್ತಿದೆ” ಎಂದು ಭಾವಪರವಶರಾಗಿ ಸೋತುಹೋಗುವವರೂ ನಮ್ಮಲ್ಲಿ ಬಹುಮಂದಿ ಇದ್ದಾರೆ. ಮಹನೀಯರ ಮಾತುಗಳನ್ನು ಸ್ವಲ್ಪ ನಿದ್ದೆಬಿಟ್ಟೆದ್ದು ವಸ್ತುನಿಷ್ಠವಾಗಿ ನೋಡೋಣ.

ಮತ್ತಷ್ಟು ಓದು »