ವಿಷಯದ ವಿವರಗಳಿಗೆ ದಾಟಿರಿ

Archive for

7
ಜುಲೈ

ಕನ್ನಡ ಪುಸ್ತಕೋದ್ಯಮ ಎದುರಿಸುತ್ತಿರುವ ಸವಾಲುಗಳು

– ರಾಜಕುಮಾರ.ವ್ಹಿ.ಕುಲಕರ್ಣಿ
ಮುಖ್ಯಗ್ರಂಥಪಾಲಕ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ,ಬಾಗಲಕೋಟ

ಕನ್ನಡ ಪುಸ್ತಕಈ ವಿಷಯ ಮೊನ್ನೆ ಗೊತ್ತಾಯಿತು. ಲೇಖಕ ಮತ್ತು ಪ್ರಕಾಶಕರಾಗಿರುವ ನನ್ನ ಸ್ನೇಹಿತರೋರ್ವರಿಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಪುಸ್ತಕ ಖರೀದಿಗೆ ಸಂಬಂಧಿಸಿದಂತೆ ಪತ್ರ ಬಂದಿತ್ತು. ಆ ಪತ್ರದಲ್ಲಿ ಉಲ್ಲೇಖಿಸಿದಂತೆ ಪುಸ್ತಕದ ಮೂರು ನೂರು ಪ್ರತಿಗಳನ್ನು ಕಳುಹಿಸಿಕೊಡುವಂತೆ ಹಾಗೂ ಪುಸ್ತಕದ ಪ್ರತಿ ಪುಟಕ್ಕೆ 40 ಪೈಸೆಗಳ ಬೆಲೆ ನಿಗದಿಪಡಿಸಲಾಗಿರುವುದನ್ನು ಸೂಚಿಸಲಾಗಿತ್ತು. ನನ್ನ ಸ್ನೇಹಿತನ ಪುಸ್ತಕ ಒಟ್ಟು ನೂರು ಪುಟಗಳಲ್ಲಿದ್ದು ಅದರ ಮುಖ ಬೆಲೆ ಎಪ್ಪತ್ತು ರೂಪಾಯಿಗಳಾಗಿತ್ತು. ಹೀಗಿದ್ದೂ ಆತ ಒಂದು ಪ್ರತಿಗೆ ನಲವತ್ತು ರೂಪಾಯಿಗಳಂತೆ 300 ಪ್ರತಿಗಳನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಮಾರಾಟ ಮಾಡಬೇಕಾದ ಅನಿವಾರ್ಯತೆ ಎದುರಾಯಿತು. ಈ ಪುಸ್ತಕದ ಮಾರಾಟದಿಂದ ಅವನಿಗೇನಾದರೂ ಲಾಭವಾಗಿರಬಹುದೆ ಎನ್ನುವ ಸಂದೇಹ ನನ್ನನ್ನು ಕಾಡುತ್ತಿರುವ ಹೊತ್ತಿನಲ್ಲೇ ಆತ ಪ್ರಕಟಣೆಯ ಮೇಲೆ ಆದ ಖರ್ಚಿನ ಲೆಕ್ಕ ಒಪ್ಪಿಸಿದ. ಪುಸ್ತಕದ ಒಟ್ಟು ಸಾವಿರ ಪ್ರತಿಗಳ ಪ್ರಕಟಣೆಗಾಗಿ ಆತ ಮುದ್ರಕರಿಗೆ ಕೊಟ್ಟ ಹಣ ಬರೊಬ್ಬರಿ ಮೂವತ್ತು ಸಾವಿರ ರೂಪಾಯಿಗಳು.ಈ ನಡುವೆ ಪುಸ್ತಕದ ಬಿಡುಗಡೆ ಕಾರ್ಯಕ್ರಮಕ್ಕಾಗಿ ನಾಲ್ಕೈದು ಸಾವಿರ ರೂಪಾಯಿಗಳು ಖರ್ಚಾದವು. ಸಾವಿರ ಪ್ರತಿಗಳು ಕೈಸೇರಿದಾಗ ಅವುಗಳಲ್ಲಿ ನೂರರಿಂದ ನೂರೈವತ್ತು ಪ್ರತಿಗಳು ಗೌರವ ಪ್ರತಿ ರೂಪದಲ್ಲಿ ಪುಕ್ಕಟ್ಟೆಯಾಗಿ ಕೈಬಿಟ್ಟವು. ಮೂರು ನೂರು ಪ್ರತಿಗಳನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಮಾರಾಟ ಮಾಡುವುದರಿಂದ ಬರುವ ಹಣ ಹನ್ನೆರಡು ಸಾವಿರ ರೂಪಾಯಿಗಳು. ಪರಿಚಯದ ಪುಸ್ತಕ ಮಾರಾಟಗಾರರನ್ನು ಸಂಪರ್ಕಿಸಿದಾಗ ಎರಡು ನೂರು ಪ್ರತಿಗಳೇನೋ ಶೇಕಡಾ 20ರ ರಿಯಾಯಿತಿ ದರದಲ್ಲಿ ಮಾರಾಟವಾದರೂ ಅವರಿಂದ ಬರಬೇಕಾದ ರೂ.11,200/- ಇನ್ನೂ ಆತನ ಕೈಸೇರಿಲ್ಲ. ಸುಮಾರು ಮೂರು ನೂರು ಪ್ರತಿಗಳು ಮಾರಾಟವಾಗದೆ ಹಾಗೇ ಉಳಿದುಕೊಂಡಿವೆ.

ಮತ್ತಷ್ಟು ಓದು »

6
ಜುಲೈ

ಹೀಗೊ೦ದು ’ಆತ್ಮ’ಕಥನ…

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

ಆತ್ಮಆತ್ಮ: ಬಹುಶ: ಮನುಷ್ಯನ ಕುತೂಹಲವನ್ನು ಈ ಎರಡೂವರೆ ಅಕ್ಷರಗಳ ಶಬ್ದ ಕೆರಳಿಸಿರುವಷ್ಟು ಇನ್ಯಾವ ಪದವೂ ಕೆರಳಿಸಿರಲಿಕ್ಕಿಲ್ಲ. ಏಕೋ,ಏನೋ,ಅನಾದಿ ಕಾಲದಿ೦ದಲೂ ಮಾನವನಿಗೆ ’ಆತ್ಮ’ದ ಬಗ್ಗೆ ತೀರದ ತವಕ.ಆತ್ಮ ಜ್ಞಾನವನ್ನು ಪಡೆಯುವ ಅಗಾಧ ಹ೦ಬಲ. ಸತ್ತ ನ೦ತರ ಏನಾಗುತ್ತದೆ?ದೇಹ ನಶಿಸಿದ ನ೦ತರವೂ ಆತ್ಮವೆನ್ನುವುದು ಉಳಿಯಲಿದೆಯೇ? ಅಸಲಿಗೆ ಆತ್ಮವೆ೦ದರೆ ಏನು? ಇ೦ಥಹ ಹತ್ತಾರು ಪ್ರಶ್ನೆಗಳ ಉತ್ತರಕ್ಕಾಗಿ ಸಾವಿರಾರು ವರ್ಷಗಳಿ೦ದಲೂ ಮನುಷ್ಯ ಹುಡುಕಾಡುತ್ತಿದ್ದಾನೆ. ತನಗೆ ತಿಳಿದ೦ತೆ ಅರ್ಥೈಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆತ್ಮ,ಪ್ರೇತಾತ್ಮ,ಪವಿತ್ರಾತ್ಮ,ಪರಮಾತ್ಮ ಎ೦ದೆಲ್ಲ ವಿ೦ಗಡಿಸಿದ್ದಾನೆ.ಅವನಿಗೆ ಪ್ರೇತಾತ್ಮವೆ೦ದರೆ ಭಯ,ಪರಮಾತ್ಮನೆ೦ದರೆ ಭಕ್ತಿ.ಹೀಗೆ ಭಯಭಕ್ತಿಗಳಿದ್ದರೂ ಆತ್ಮದ ಅಸ್ತಿತ್ವದ ಬಗ್ಗೆ ಖಚಿತವಾಗಿ ಹೇಳಲಾರ.ತಿಳಿದುಕೊಳ್ಳುವ ಪ್ರಯತ್ನವನ್ನ೦ತೂ ಕೈಬಿಡಲಾರ.ಆತ್ಮಜ್ಞಾನಕ್ಕಾಗಿ ಪುರಾಣಗಳನ್ನು ತಡಕಾಡುತ್ತಾನೆ.ವಾಜಶ್ರವನ ಪುತ್ರ ನಚಿಕೇತನ೦ತೆ ಕಾಲಜ್ಞಾನಿಯಾಗ ಬಯಸುತ್ತಾನೆ. ಸಾಧ್ಯವಾಗದಿದ್ದಾಗ ಉತ್ತರಕ್ಕಾಗಿ ವಿಜ್ಞಾನದ ಮೊರೆ ಹೋಗುತ್ತಾನೆ.ಇಷ್ಟಾಗಿಯೂ ಅವನ ಪ್ರಶ್ನೆಗೆ ಉತ್ತರ ಸಿಕ್ಕಿತಾ? ಗೊತ್ತಿಲ್ಲ.ಆದರೆ ಆತ್ಮಜ್ಞಾನದ ಅರ್ಥೈಸುವಿಕೆಯ ಹಾದಿಯಲ್ಲಿ ವಿಜ್ಞಾನ ಮತ್ತು ಧಾರ್ಮಿಕತೆಯ ಕವಲುಗಳು ಸಾಗಿರಬಹುದಾದ ದೂರದ ಸಣ್ಣದೊ೦ದು ಪರಾಮರ್ಶೆಯ ಉದ್ಧಟತನ್ನು ತೋರುವ ಪ್ರಯತ್ನವನ್ನು ನಾನಿಲ್ಲಿ ಮಾಡುತ್ತಿದ್ದೇನೆ.

ಮತ್ತಷ್ಟು ಓದು »

4
ಜುಲೈ

ಯುವಾಬ್ರಿಗೇಡ್ ನ ಲೋಕಕಲ್ಯಾ(ಣ)ಣಿ ಕಾರ್ಯ

– ಯುವಾ ಬ್ರಿಗೇಡ್

ತರುಣಶಕ್ತಿ ತಣಿಯಲಿ ಪೃಥ್ವಿಆಕಾಶಾತ್ ವಾಯುಃ ವಾಯೋರಗ್ನಿಃ ಅಸ್ಮೀರಾಶಃ ಅರಭ್ಯಪೃಥಿವೀಂ ಶೃಧಿವ್ಯಾ ಓಷಧಯಃ ಓಷಧಿಭ್ಯೋನ್ನಮ್ ಹಾಗಂತ ವೇದವಾಕ್ಯ ಸೃಷ್ಟಿಯ ಕ್ರಮ ಅದು. ಆಕಾಶದಿಂದ ವಾಯು ಅದರಿಂದ ಅಗ್ನಿ ಆ ಮೂಲಕ ನೀರು ಭೂಮಿ ಸಸ್ಯಗಳು ಅನ್ನ ಮತ್ತು ಕೊನೆಗೆ ಪುರುಷ. ಸೃಷ್ಟಿಯಲ್ಲಿ ನಮ್ಮದು ಕೊನೆಯ ಅವತರಣ. ನಮ್ಮ ಉಳಿವಿಗೆ ಬೇಕಾದ್ದೆಲ್ಲ ಮೊದಲಿಗೆ ನಿರ್ಮಾಣಗೊಂಡಿತು.ನಮ್ಮ ಹಿರಿಯರೂ ಭಗವಂತ ಕೊಟ್ಟಿದ್ದನ್ನೆಲ್ಲಾ ದೇವರೆಂಬಂತೆ ಪೂಜಿಸಿದರು. ವೃಕ್ಷ ಪೂಜೆ, ಭುಮಿ ಪೂಜೆ, ಯಾಗ ಯಜ್ಞ, ನದೀ ಪೂಜೆ, ಯಾವುದನ್ನು ಮಾಡಿಲ್ಲ ಹೇಳಿ? ದುರದೃಷ್ಟವೆಂದರೆ ಹೀಗೆ ಪೂಜೆಯಷ್ಟೇ ಮಾಡಿದೆವು. ಅದನ್ನು ಉಳಿಸಿಕೊಳ್ಳಬೇಕೆಂಬ ಪ್ರಜ್ಞೆ ಮಾತ್ರ ತೊರೆದುಬಿಟ್ಟೆವು.

ಅನಾಮತ್ತಾಗಿ ವೃಕ್ಷಕ್ಕೆ ಕೊಡಲಿ ಬೀಸಿದೆವು. ನಾಶದ ಮಹಾಪರ್ವ ನಡೆಯಿತು. ಭೂಮಿಗೆ ವಿಷವುಣಿಸಿದೆವು. ನೀರನ್ನು ಅತ್ಯಂತ ಕೆಟ್ಟದಾಗಿ ಬಳಸಿದೆವು. ಭುಮಿಯ ಮೇಲಣ ನೀರು ಖಾಲಿಯಾಗುತ್ತಿದ್ದಂತೆ ಕೊಳವೆ ಬಾವಿ ಕೊರೆಸಿದೆವು. ನೂರು ಇನ್ನೂರು ಐನೂರು ಎಂಟುನೂರು ಕೊನೆಗೆ ಸಾವಿರ ಅಡಿ ಆಳಕ್ಕೆ ಭುಮಿಯನ್ನು ಕೊರೆದು ಅನಾಯಾಸವಾಗಿ ನಿಮಿಷಗಳಲ್ಲಿ ನೀರನ್ನು ಮೇಲೆತ್ತಬಲ್ಲ ತಂತ್ರಜ್ಞಾನ ನಿರ್ಮಾಣಗೊಂಡಿತು. ನೀರು ಆಳದಿಂದ ಮೇಲಕ್ಕೆ ಬಂತು ನಿಜ; ಆದರೆ ಇಷ್ಟು ಆಳಕ್ಕೆ ನೀರು ಇಳಿಯಲು ಇಳಿಯಲು ನಡೆದಿರುವ ದೀರ್ಘ ಪ್ರಕ್ರಿಯೆ ನಮ್ಮವರಿಗೆ ಮರೆತುಹೋಗಿತ್ತು. ಸಲೀಸಾಗಿ ನೀರು ಆಳದಿಂದ ಮೇಲೆ ಬರುವಾಗ ಭೂಮಿಯ ಮೇಲ್ಪದರದ ನೀರನ್ನು ಕಷ್ಟಪಟ್ಟು ಉಳಿಸಿಕೊಳ್ಳುವುದು ಇಲ್ಲವಾಯ್ತು.ನೋಡನೋಡುತ್ತಲೇ ಬಾವಿಗಳು ಮುಚ್ಚಿದವು. ಕಲ್ಯಾಣಿ – ಪುಷ್ಕರಣಿಗಳು ಪಾಳುಬಿದ್ದವು. ಕೆರೆಗಳು ಆಕ್ರಾಂತವಾದವು. ಅಂತರ್ಗಂಗೆಗೆ ಹಾತೊರೆದ ಮನುಷ್ಯ ಕಣ್ಣೆದುರಿನ ಗಂಗೆಯ ಮರೆತ.
ಮತ್ತಷ್ಟು ಓದು »

4
ಜುಲೈ

ಏನಿದು ಯುವಾ ಬ್ರಿಗೇಡ್?

– ಯುವಾ ಬ್ರಿಗೇಡ್

Yuva Brigadeಯುವಾ ಬ್ರಿಗೇಡ್ ಭಾರತವನ್ನು ವಿಶ್ವಗುರುವನ್ನಾಗಿಸುವ ಕನಸು ಕಟ್ಟಿಕೊಂಡ 18 ರಿಂದ 30 ವಯಸ್ಸಿನ ಯುವಕರ ಪಡೆ. ಯುವ ಶಕ್ತಿಯನ್ನು ದೇಶಪ್ರೇಮದ ನಿಟ್ಟಿನಲ್ಲಿ ತಿರುಗಿಸಿ ಅದನ್ನು ರಾಷ್ಟ್ರನಿರ್ಮಾಣದ ಕಾಯಕಕ್ಕೆ ಹಚ್ಚಿ ಅದರಿಂದ ಬಂದ ಫಲಿತಾಂಶವನ್ನು ಭಾರತ ಮಾತೆಯ ಚರಣಗಳಿಗೆ ಅರ್ಪಣೆ ಮಾಡುವ ಅಭಿಲಾಷೆ ಹೊತ್ತ ಯುವಕರ ಸಮೂಹ. ಪ್ರಖರ ರಾಷ್ಟ್ರವಾದಿ ಶ್ರೀ ಚಕ್ರವರ್ತಿ ಸೂಲಿಬೆಲೆಯವರ ನೇತೃತ್ವದಲ್ಲಿ ನಾಡಿನ ಹಿರಿಯ ರಾಷ್ಟ್ರಪ್ರೇಮಿ ಸಾಧಕರ ಮಾರ್ಗದರ್ಶನದಲ್ಲಿ ಕರ್ನಾಟಕದ ಮೂಲೆ ಮೂಲೆಗೂ ತಲುಪುತ್ತಿರುವ ಈ ಸಂಘಟನೆ ಆರಂಭವಾಗಿ ಇನ್ನೂ ವರ್ಷವೂ ಕಳೆದಿಲ್ಲ ಎಂದರೆ ಅಚ್ಚರಿಯಾಗಬಹುದು.

8 ಜೂನ್ 2014 ರಂದು ಆರಂಭವಾದ ಯುವಾ ಬ್ರಿಗೇಡ್ ಇದುವರೆಗೂ ಹತ್ತಾರು ವಿಶಿಷ್ಟ ವೈವಿಧ್ಯಮಯ ಕಾರ್ಯ ಕಲಾಪಗಳ ಮೂಲಕ ವ್ಯಾಪಕವಾಗಿ ಜನಮಾನಸವನ್ನು ತಲುಪಿರುವುದು ಒಂದು ಸಾಧನೆಯೇ ಸರಿ. ಹಾಗಂತ ಇದೇನು ರಾತ್ರೋ ರಾತ್ರಿ ಸಂಭವಿಸಿದ ಘಟನೆಯಲ್ಲ. ಪ್ರಾರಂಭದಲ್ಲಿ ಫೇಸ್ ಬುಕ್ ಮುಂತಾದ ಸಾಮಾಜಿಕ ತಾಣಗಳ ಮೂಲಕ ತಾಯಿ ಭಾರತಿಯನ್ನು ವಿಶ್ವಗುರುವನ್ನಾಗಿಸುವ ಕಲ್ಪನೆಯನ್ನು ಬಿತ್ತರಿಸಿ ಮುಂದಿನ ದಿನಗಳಲ್ಲಿ ಒಂದೊಂದೇ ಯೋಜನೆಗಳ ಮೂಲಕ ಹಳ್ಳಿಗಾಡಿನ ಯುವಕನನ್ನೂ ಸಂಘಟನೆಯೊಂದಿಗೆ ಬೆಸೆದುಕೊಳ್ಳುವಂತೆ ಮಾಡಿದ ಯುವಾ ಬ್ರಿಗೇಡ್ ನ ಕಾರ್ಯಗಳನ್ನು ವೀಕ್ಷಿಸುವುದು ಒಂದು ಚೇತೋಹಾರಿ ಪಯಣವಾಗಿದೆ. ಜೂನ್ ತಿಂಗಳಲ್ಲಿ ಉದ್ಘಾಟನೆಯಾದ ಯುವಾ ಬ್ರಿಗೇಡ್ ತಂಡಕ್ಕೆ ಬಹುತೇಕ ಎಲ್ಲಾ ಜಿಲ್ಲೆಗಳಿಂದ ತರುಣರು ಆಗಮಿಸಿ ರಾಷ್ಟ್ರಕಾರ್ಯದಲ್ಲಿ ಕೈಜೋಡಿಸುವ ಪ್ರತಿಜ್ಞೆಗೈದರು.

ಜುಲೈ ತಿಂಗಳಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ ಇಡೀ ರಾಜ್ಯದಲ್ಲಿ ವಿಜೃಂಭಣೆಯಿಂದ ನಡೆಯಿತು. ಅನೇಕ ಜಿಲ್ಲಾ ಕೇಂದ್ರಗಳಲ್ಲಿ ಮಾಜಿ ಸೈನಿಕರನ್ನು ಕರೆದು ಗೌರವಿಸಲಾಯ್ತು. ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆಯ ಪರಾಕ್ರಮದ ಕುರಿತು ಸರಣಿ ಉಪನ್ಯಾಸಗಳು ನಡೆದವು. ಅನೇಕ ತರುಣರ ಹೃದಯದಲ್ಲಿ ಸೈನ್ಯ ಸೇರುವ ಆಸೆಯ ಕಿಡಿಯನ್ನು ಹೊತ್ತಿಸಲಾಯ್ತು. ಸಾರ್ವಜನಿಕರಿಗೆ ಸೇನೆಯ ಬಗ್ಗೆ ಕೃತಜ್ಞತಾ ಭಾವನೆ ಮೂಡಿ ಹೆಮ್ಮೆಯಿಂದ ತಲೆ ಎತ್ತಿ ನಿಲ್ಲಬಲ್ಲ ವಾತಾವರಣವನ್ನು ಕಲ್ಪಿಸಲಾಯ್ತು.

ಅಗಸ್ಟ್ ತಿಂಗಳಲ್ಲಿ ಯುವಾ ಬ್ರಿಗೇಡ್ ನ ರಾಜ್ಯ ಮಟ್ಟದ ಸಭೆ ನಡೆಯಿತು. ಅದರಲ್ಲಿ ರಾಜ್ಯ, ವಿಭಾಗ ಮತ್ತು ಜಿಲ್ಲೆಗಳಿಗೆ ಸಂಚಾಲಕರನ್ನು ಆರಿಸಲಾಯ್ತು. ತಾಲ್ಲೂಕು ಮಟ್ಟದಲ್ಲಿ ಯುವಾ ಬ್ರಿಗೇಡ್ ಆರಂಭಿಸಲು ತೀರ್ಮಾನ ಕೈಗೊಳ್ಳಲಾಯಿತು.

ಮತ್ತಷ್ಟು ಓದು »

3
ಜುಲೈ

ಪರಿಹಾರಭಾಗ್ಯದ ಆಸೆಗೆ ಪ್ರಾಣ ಕಳೆದುಕೊಂಡ ಶಾಸಕ

– ಪ್ರವೀಣ್ ಕುಮಾರ್ ಮಾವಿನಕಾಡು

Nilume Sulsuddi - Shasakara Aatmahatyeಶಾಸಕರು ಅಥವಾ ಮಂತ್ರಿಗಳು ಆತ್ಮಹತ್ಯೆ ಮಾಡಿಕೊಂಡರೆ ರೈತ ಸಂಘಟನೆಗಳ ವತಿಯಿಂದ ಪರಿಹಾರ ನೀಡಲಾಗುವುದು ಎನ್ನುವ ಘೋಷಣೆಯನ್ನು ನಂಬಿ ಶಾಸಕನೊಬ್ಬ ಅಧಿವೇಶನದ ನಡುವೆಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ!ಶೂನ್ಯ ವೇಳೆಯಲ್ಲಿ ಶೌಚಾಲಯದಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ ಶಾಸಕನನ್ನು ಕೆಳಗಿಳಿಸಿ ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಮಾರ್ಗಮದ್ಯದಲ್ಲಿಯೇ ಅಸುನೀಗಿದ್ದಾನೆ.

ಇದರಿಂದ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣಗೊಂಡಿದ್ದು ಇತರ ಶಾಸಕರು ರಾಜ್ಯ ಹೆದ್ದಾರಿಯಲ್ಲಿ ಟೈರ್ ಗಳನ್ನು ಸುಟ್ಟು ಪ್ರತಿಭಟನೆ ನಡೆಸಿದರು.ರೈತ ಸಂಘಟನೆಗಳ ರಾಜ್ಯ ಮುಖಂಡರು ಬಂದು ಪರಿಹಾರ ನೀಡುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದ ಶಾಸಕರು,ಮೃತ ದೇಹವನ್ನು ಪೋಸ್ಟ್ ಮಾರ್ಟಮ್ ಗೆ ಒಯ್ಯಲೂ ಅವಕಾಶ ನೀಡದೇ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು.ನಂತರ ಸ್ಥಳಕ್ಕೆ ಬಂದ ಸ್ಥಳೀಯ ರೈತ ಮುಖಂಡನ ಬೈಕ್ ಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ನಂತರ ಸ್ಥಳದಲ್ಲಿದ್ದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಬೇಕಾಯಿತು.

ಮತ್ತಷ್ಟು ಓದು »

2
ಜುಲೈ

ಭಾರತದ ಆಹಾರ ಕ್ಷೇತ್ರದಲ್ಲಿ ವಿದೇಶೀ ಬಹುರಾಷ್ಟ್ರೀಯ ಕಂಪನಿಗಳ ಕೈವಾಡ

– ಮಯೂರಲಕ್ಷ್ಮಿ,ಮೈಸೂರು

ಮ್ಯಾಗಿಭಾರತಕ್ಕೆ ವಿಷವುಣಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ವಿದೇಶೀ ಬಹುರಾಷ್ಟ್ರೀಯ ಕಂಪನಿಗಳು ನಮ್ಮ ದೇಶಕ್ಕೆ ನೀಡುತ್ತಿರುವುದಾದರೂ ಏನನ್ನು? ಶಕ್ತಿಶಾಲಿ ರಾಷ್ಟ್ರವೆನಿಸಿ ವಿಶ್ವದ ನಾಯಕತ್ವ ಹೊಂದುವ ಸಾಮರ್ಥ್ಯವಿರುವ ಭಾರತೀಯರನ್ನು ಅತಿ ಸುಲಭವಾಗಿ ಕೇವಲ ‘ಗ್ರಾಹಕ’ರನ್ನಾಗಿಸಿ ಕೋಟಿಗಟ್ಟಲೆ ಲಾಭ ಪಡೆದು ತಮ್ಮ ದೇಶವನ್ನು ಸುಭಿಕ್ಷಗೊಳಿಸುವುದು ಮತ್ತು ಬಡರಾಷ್ಟ್ರಗಳನ್ನು ಗುರಿಯಾಗಿರಿಸಿಕೊಂಡು ವ್ಯಾಪಾರ ನಡೆಸಿ ಮೋಸಗೊಳಿಸಿವುದು!

ಸ್ವತಂತ್ರ ಪೂರ್ವದ ಭಾರತದಲ್ಲಿನ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿಲ್ಲ, ಆದರೆ ವಿದೇಶೀ ಸಾಲವಿರಲಿಲ್ಲ, ಭಾರತದಲ್ಲಿ ಸ್ವದೇಶೀ ವಸ್ತುಗಳ ಬಳಕೆ, ಸಾವಯವ ಕೃಷಿ ಮತ್ತು ಉತ್ತಮ ಆಹಾರ ಹಾಗೂ ಮೌಲ್ಯಗಳಿಂದ ಕೂಡಿದ ಜೀವನಶೈಲಿ ನಮ್ಮದಾಗಿತ್ತು. ಆದರೆ ಕೇವಲ ವ್ಯಾಪಾರೀ ಮನೋಭಾವದಿಂದ ಕೂಡಿದ ಜಾಗತೀಕರಣ ಮತ್ತು ಉದಾರೀಕರಣ ನೀತಿಗಳನ್ನು ತನ್ನದಾಗಿಸಿಕೊಂಡ ಭಾರತಕ್ಕೆ ಲಗ್ಗೆಯಿಟ್ಟ ವಿದೇಶೀ ಕಂಪನಿಗಳು ಆಹಾರ ಮತ್ತು ಕೃಷಿ ಕ್ಷೇತ್ರಗಳಲ್ಲಿ ತಮ್ಮ ಕರಾಳ ಹಸ್ತಗಳನ್ನು ಚಾಚಿದವು. ಕೊಳ್ಳುಬಾಕ ಸಂಸ್ಕೃತಿಯನ್ನು ಹೇರುತ್ತಾ ಗ್ರಾಹಕರನ್ನು ಕೇವಲ ತಮ್ಮ ವಸ್ತುಗಳನ್ನೇ ಕೊಳ್ಳುವ ಸ್ಥಿತಿಗೆ ತಲುಪಿಸಿದವು.ಭಾರತದ ಆಹಾರ ಉದ್ಯಮದಲ್ಲಿ ತನ್ನ ಅಲ್ಪ ಬಂಡವಾಳವನ್ನು ಹೂಡಿ ವಹಿವಾಟು ನಡೆಸಿ ಲಾಭ ಪಡೆದುಕೊಳ್ಳುತ್ತಿರುವ ಎಲ್ಲಾ ವಿದೇಶೀ ಕಂಪನಿಗಳಿಂದಾಗುತ್ತಿರುವ ಪರಿಣಾಮಗಳು ಊಹಿಸಲಸಾಧ್ಯ! ಇಂದು ಹಿರಿಯರೆನಿಸಿರುವ ಅಂದಿನ ಮಕ್ಕಳಾಗಿದ್ದ, ಯುವಕರಾಗಿದ್ದ ನಮ್ಮ ದೇಶದ ಸಾಮಾನ್ಯ ನಾಗರೀಕರ ಬದುಕು ಸರಳ-ಸಜ್ಜನಿಕೆಯಿಂದ ಕೂಡಿತ್ತು…ಅರಿವೇ ಗುರು ನುಡಿ ಎನ್ನುವುದ ನಂಬಿತ್ತು.. ಎಲ್ಲಕ್ಕಿಂತಾ ಹೆಚ್ಚಾಗಿ ಆಯ್ಕೆಗಳು ಅತಿ ಕಡಿಮೆಯಿದ್ದವು.ಆರೋಗ್ಯಕರ ಆಹಾರವಲ್ಲದೇ ಯಾವುದೇ ‘ಫಾಸ್ಟ್ ಫುಡ್‍ಗಳು’ ನಿತ್ಯಜೀವನದ ಭಾಗವಾಗಿರಲಿಲ್ಲಾ! ಕ್ರಮೇಣ ಎಲ್ಲವೂ ಬದಲಾಗತೊಡಗಿದವು..
ಮತ್ತಷ್ಟು ಓದು »