ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 24, 2016

72

ಶನಿಯ ಬೆನ್ನೇರಿದ ಕಾಕ, ಇದೆಲ್ಲ ನಾಟಕ ಯಾಕ?

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

shani-shingnapur_650x400_41460171606ನಮ್ಮ ದೇಶದಲ್ಲಿ ಖರ್ಚಿಲ್ಲದೆ ಪ್ರಸಿದ್ಧಿ ಒದಗಿಸುವ ಎರಡು ಸಂಗತಿಗಳಿವೆ. ಒಂದು ಬುದ್ಧಿಜೀವಿಯಾಗುವುದು, ಇನ್ನೊಂದು ಮಹಿಳಾವಾದಿಯಾಗುವುದು. ಬುದ್ಧಿಜೀವಿಯಾಗಬೇಕಾದರೆ ನೀವು ಸೆಕ್ಯುಲರ್ ಎಂದು (ಏನೆಂದು ಗೊತ್ತಿರದಿದ್ದರೂ) ತೋರಿಸಿಕೊಳ್ಳಬೇಕು. ಹಿಂದೂಗಳನ್ನು, ಅವರ ಆಚರಣೆ, ಪದ್ಧತಿ, ಹಬ್ಬಹರಿದಿನಗಳನ್ನು ಬಯ್ಯಬೇಕು. ಹಿಂದೂ ದೇವರನ್ನು, ದೇವಾಲಯಗಳನ್ನು ಪ್ರಶ್ನಿಸಬೇಕು. ಮುಸ್ಲಿಂ ಮತ್ತು ಕ್ರಿಶ್ಚಿಯನ್ ರಿಲಿಜನ್ನುಗಳನ್ನು ಓಲೈಸಬೇಕು. ಮೋದಿಯನ್ನು ತೆಗಳಬೇಕು. ಭಯೋತ್ಪಾದಕರನ್ನು, ನಕ್ಸಲರನ್ನು ಬೆಂಬಲಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಿಮಗೆ ಬೆನ್ನುಮೂಳೆ ಇರಬಾರದು. ಜೊತೆಗೆ, ಅರ್ಥವತ್ತಾದ ಮಾತು, ತರ್ಕಬದ್ಧವಾದ ಚಿಂತನೆ – ಇವೆರಡರ ಬಗ್ಗೆ ನೀವು ಎಂದೆಂದೂ ತಲೆ ಕೆಡಿಸಿಕೊಂಡಿರಬಾರದು. ಹಾಗೆಯೇ, ಮಹಿಳಾವಾದಿಯಾಗುವುದು ಕೂಡ ಸುಲಭ. ಮೊದಲಿಗೆ ಮಹಿಳಾವಾದ = ಪುರುಷದ್ವೇಷ ಎಂಬ ಸಮೀಕರಣ ಬರೆಯಿರಿ. ಮಹಿಳೆಗೆ ಸ್ವಾತಂತ್ರ್ಯ ಬೇಕು ಅನ್ನಿ. ಉದ್ಯೋಗದಲ್ಲಿ, ಸಂಸತ್ತಿನಲ್ಲಿ, ಬಸ್ಸಿನಲ್ಲಿ, ಚಿತ್ರಮಂದಿರದಲ್ಲಿ, ನಡೆದಾಡುವ ರಸ್ತೆಯಲ್ಲಿ – ಹೀಗೆ ಎಲ್ಲೆಲ್ಲೂ ಹೆಣ್ಣಿಗೆ ಸಮಾನತೆ ಬೇಕೆಂದು ಬೊಬ್ಬೆ ಹೊಡೆಯಿರಿ. ಉದ್ಧೇಶವೇ ಇಲ್ಲದೆ ಪ್ರತಿಭಟನೆ ಮಾಡಿದರೂ ಓಕೆ. ವಿರೋಧಿಸದವರಿಗೂ ಧಿಕ್ಕಾರ ಕೂಗಿದರೂ ಓಕೆ. ಒಟ್ಟಲ್ಲಿ ನಿಮ್ಮ ಮಾತು, ಕೂಗಾಟ, ಹಾರಾಟ, ಹೋರಾಟವೆಲ್ಲ ನಾಲ್ಕು ಜನಕ್ಕೆ ಗೊತ್ತಾಗಬೇಕು, ಪತ್ರಿಕೆ ಟಿವಿಗಳಲ್ಲಿ ಬರಬೇಕು. ಮತ್ತು ಇವೆಲ್ಲದರ ಜೊತೆ, ನೀವು, ಮೇಲೆ ಹೇಳಿದ ಬುದ್ಧಿಜೀವಿಯೂ ಆಗಿರಬೇಕಾದ್ದು ಅನಿವಾರ್ಯ. ಎರಡು ವರ್ಷಗಳ ಹಿಂದೆ ಒಂದು ಬುದ್ಧಿಜೀವಿ ಮಹಿಳಾಪರ ಲೇಖಕಿ, “ಮೋದಿಯ ಮುಖ ನೋಡಿದರೇನೇ ಆತ ಸ್ತ್ರೀದ್ವೇಷಿ ಅನ್ನೋದು ಗೊತ್ತಾಗುತ್ತದೆ” ಎಂದಿದ್ದರು. ಇಂಥ ಹೇಳಿಕೆ ಕೊಡುವವರಿಗೆ ಮಹಿಳಾಪರ ಸಂಘಟನೆಗಳಲ್ಲಿ ಒಳ್ಳೆಯ ಬೇಡಿಕೆ ಇದೆ.

ಕ್ಷಮಿಸಿ; ನನಗೆ ನಿಜವಾಗಿಯೂ ಮಹಿಳೆಯ ಬಗ್ಗೆ, ಅವರ ಹಕ್ಕು-ಸ್ವಾತಂತ್ರ್ಯಗಳಿಗಾಗಿ ನ್ಯಾಯಯುತ ಹೋರಾಟ ಮಾಡುವವರ ಬಗ್ಗೆ ಯಾವ ಕಹಿಭಾವನೆಗಳೂ ಇಲ್ಲ. ಅಂಥ ಹತ್ತಾರು ನೈಜ ಮಹಿಳಾವಾದಿಗಳು ನನಗೆ ವೈಯಕ್ತಿಕವಾಗಿ ಗೊತ್ತು. ಆದರೆ, ಮಹಿಳಾವಾದ ಎಂದರೇನೇ ಪುರುಷರನ್ನು ದ್ವೇಷಿಸುವುದು ಎಂಬ ಸಮೀಕರಣ ಬರೆದುಕೊಂಡು ಯಾರು ಹೊರಡುತ್ತಾರೋ ಅವರ ಬಗ್ಗೆ ನನಗೆ ಎಳ್ಳಷ್ಟು ಗೌರವವೂ ಇಲ್ಲ. ಯಾಕೆಂದರೆ, ಅಲ್ಲಿಂದ ಮುಂದಕ್ಕೆ ಅವರ ಚಿಂತನೆ ಹೇಗಿರುತ್ತದೆ ಎಂಬುದನ್ನು ಯಾವ ಪರೀಕ್ಷೆಗಳಿಲ್ಲದೆ ಹೇಳಿಬಿಡಬಹುದು. ಇನ್ನು ಕೆಲ ಖೊಟ್ಟಿಜೀವಿಗಳು, ಬಾಬ್ ಕಟ್ ಮಾಡಿ, ಪುರುಷರಂತೆ ಸಿಗರೇಟು ಸೇದುವುದು, ಬಾರ್‍ಗಳಲ್ಲಿ ಕುಡಿಯುವುದು, ಪೋಲಿ ಜೋಕುಗಳನ್ನು ಮಾಡಿಕೊಂಡು ಹರಟುವುದು, ಒಟ್ಟಾರೆ “ಗಂಡಸರಂತೆ ಬದುಕುವುದು, ಗಂಡಸರಾಗಿ ಬದುಕುವುದು” ಎಂಬುದನ್ನೇ ಮಹಿಳಾವಾದ ಎಂದು ಭಾವಿಸಿದ್ದಾರೆ. ಅವರ ತಿಳಿವಳಿಕೆಯ ಬಗ್ಗೆ ನನಗೆ ದ್ವೇಷವಲ್ಲ ಮರುಕವಿದೆ. ಇವರಿಬ್ಬರನ್ನೂ ಹೊರತುಪಡಿಸಿ ಇನ್ನೊಂದು ಗುಂಪೂ ಇದೆ. ಅತ್ತ ಕಮ್ಯುನಿಸ್ಟ್ ಅಲ್ಲ, ಇತ್ತ ಭಾರತೀಯ ನಾರಿಯಲ್ಲ, ಅತ್ತ ಪತಿವ್ರತೆ ಅಲ್ಲ ಇತ್ತ ವೇಶ್ಯೆ ಅಲ್ಲ, ಅತ್ತ ಸೀರೆಯನ್ನೂ ದ್ವೇಷಿಸುತ್ತೇನೆ ಇತ್ತ ಪೂರ್ತಿಯಾಗಿ ಜೀನ್ಸ್‍ಪ್ಯಾಂಟ್ ಕೂಡ ಹಾಕಲಾರೆ, ಅತ್ತ ದೊಡ್ಡದಾಗಿ ಬಿಂದಿ ಇಡುವೆ, ಇತ್ತ ಬುರ್ಖಾಗಳನ್ನು ಬೆಂಬಲಿಸುವೆ – ಹೀಗೆ ಒಂದಕ್ಕೊಂದು ಸಂಬಂಧವಿಲ್ಲದ ಸಂಗತಿಗಳನ್ನು ಒಟ್ಟಾಗಿ ನೋಡುತ್ತ, ಮಾಡುತ್ತ ತನ್ನ ಸಿದ್ಧಾಂತವನ್ನು ತಾನೇ ಮರೆತಿರುವ ಪಾರ್ಟಿಗಳಿವು. ಚಿಂತನೆ ಗಟ್ಟಿಯಾಗಿಲ್ಲದಾಗ ಭೋಳೆತನ ಮುಚ್ಚಿಕೊಳ್ಳಲು ನಾಜೂಕು ಭಾಷೆ ಅನಿವಾರ್ಯ ನೋಡಿ! ಹಾಗಾಗಿ, ಮಾತು ಬರಹಗಳಲ್ಲಿ ನಾಜೂಕುತನ ಕಲಿತಿರುವ ಇಂಥವರೊಂದಿಗೆ ವಾದಿಸಿ ಗೆಲ್ಲುವುದು ಕಷ್ಟ. ಗೆದ್ದರೂ ಅದರಿಂದ ಪ್ರಯೋಜನವೇನು ಎಂಬ ಪ್ರಶ್ನೆ ಉಳಿಯುತ್ತದೆ. ಇವರಿಗೆ ತಾವು ನಿಜವಾಗಿ ಮಹಿಳಾವಾದಿಗಳೋ ಅಲ್ಲವೋ ಎಂಬುದರಲ್ಲೂ ಒಂದಷ್ಟು ಗೊಂದಲವಿರುತ್ತದೆ. ಬುದ್ಧಿಜೀವಿಯಾಗಲು ಹೊರಟು ಕೊನೆಗೆಲ್ಲವನ್ನೂ ಮಿಸಳಬಾಜಿ ಮಾಡಿಕೊಂಡ ಚಿತ್ರಾನ್ನಮಿದುಳುಗಳು ಎನ್ನಬಹುದು.

ಈ ಹಿನ್ನೆಲೆಯಲ್ಲಿ, ಇತ್ತೀಚೆಗೆ ನೋಡಿದ ಎರಡು ಸಂಗತಿಗಳನ್ನು ತುಲನಾತ್ಮಕವಾಗಿ ನೋಡುವುದು ಒಳ್ಳೆಯದೇನೋ. ಒಂದು, ಶನಿ ಸಿಂಗ್ನಾಪುರಕ್ಕೆ ಮಹಿಳೆಯರಿಗೂ ಪ್ರವೇಶ ಬೇಕು ಎಂದಿರುವ ತೃಪ್ತಿ ದೇಸಾಯಿಯ ಪ್ರತಿಭಟನೆಗಳು. ಇನ್ನೊಂದು, ವಿದೇಶದಲ್ಲಿ ಮುಸ್ಲಿಂ ಮಹಿಳೆಯರ ಸ್ಥಿತಿಗತಿಗಳ ಬಗ್ಗೆ ನಡೆಯುತ್ತಿದ್ದ ಒಂದು ಕಾರ್ಯಕ್ರಮದಲ್ಲಿ ಬರ್ಖಾ ದತ್ ಹಂಚಿಕೊಂಡ ಮಾತುಗಳು. ಕರ್ನಾಟಕದ ನಿಪ್ಪಾಣಿಯಲ್ಲಿ ಹುಟ್ಟಿ ಕುಟುಂಬದೊಂದಿಗೆ ಪುಣೆಗೆ ಹೋಗಿ ನೆಲೆಸಿ ಕಾಲೇಜು ವಿದ್ಯಾಭ್ಯಾಸವನ್ನು ಮೊದಲ ವರ್ಷದಲ್ಲಿ ನಿಲ್ಲಿಸಿ ಪ್ರತಿಭಟನೆಗಳಲ್ಲಿ ಪೂರ್ಣಾವಧಿ ತೊಡಗಿಸಿಕೊಂಡ ತೃಪ್ತಿ ದೇಸಾಯಿಯ ಮನೆತುಂಬ ವಿವಿಧ ರಾಜಕಾರಣಿಗಳ ಜೊತೆ ಆಕೆ ತೆಗೆಸಿಕೊಂಡ ಫೋಟೋಗಳು, ಬಿರುದುಪತ್ರಗಳು, ಬಹುಮಾನಗಳು, ಸ್ಮರಣಿಕೆಗಳು ತುಂಬಿತುಳುಕುತ್ತವೆ. ಇಂಥದೊಂದು ಚಿತ್ರಣವನ್ನು ನೋಡಿದಾಗ ನಮ್ಮ ಮನಸ್ಸಲ್ಲಿ ವ್ಯಕ್ತಿಯ ಬಗ್ಗೆ ಯಾವ ಅಭಿಪ್ರಾಯ ಮೂಡುತ್ತದೆಂಬುದನ್ನು ನಾನು ಹೇಳಬೇಕಿಲ್ಲ. ರಾಜಕೀಯ ಆಕಾಂಕ್ಷೆಗಳಿರುವ ತೃಪ್ತಿ ತನ್ನ ಸಣ್ಣ ವಯಸ್ಸಿನಲ್ಲೇ ಕಾಂಗ್ರೆಸ್ ಮತ್ತು ಆಪ್ – ಎರಡೂ ಪಕ್ಷಗಳೊಂದಿಗೆ ಗುರುತಿಸಿಕೊಂಡಾಕೆ. ಆಕೆ ಪ್ರಾರಂಭಿಸಿದ ಭೂಮಾತಾ ಬ್ರಿಗೇಡ್‍ಗೆ ನಿಶ್ಚಿತವಾದ ಅಜೆಂಡಾ ಏನಿಲ್ಲ. ಸಮಾಜದಲ್ಲಿರುವ ಅನ್ಯಾಯವನ್ನು ತೊಡೆದುಹಾಕುವುದೇ ಅದರ ಏಕಮಾತ್ರ ಅಜೆಂಡಾ. ಮತ್ತು ಅನ್ಯಾಯ ಎಂದರೇನು, ಯಾರು ತಪ್ಪಿತಸ್ಥರು, ಯಾರಿಗೆ ಅನ್ಯಾಯವಾಗಿದೆ ಇತ್ಯಾದಿಯೆಲ್ಲವನ್ನೂ ಈ ಬ್ರಿಗೇಡ್‍ನ ಮಹಿಳೆಯರೇ ಏಕಪಕ್ಷೀಯವಾಗಿ ನಿರ್ಧರಿಸಿ ಕಾರ್ಯಕ್ರಮ ರೂಪಿಸುತ್ತಾರೆ. ಕೆಲವೊಮ್ಮೆ ಈ ಸಂಘಟನೆ ನ್ಯಾಯಾಲಯಕ್ಕೂ ನುಗ್ಗಿ ಕಟಕಟೆಯಲ್ಲಿ ನಿಂತ ಆರೋಪಿಗಳನ್ನು ಹಿಗ್ಗಾಮುಗ್ಗ ಥಳಿಸಿದೆ! ಬೀದಿಹೋರಾಟಗಳು, ಪ್ರತಿಭಟನೆಗಳು, ಘೋಷಣೆ ಕೂಗುವುದು ಇತ್ಯಾದಿಯಲ್ಲಿ ತೃಪ್ತಿ ಬಹಳ ಖುಷಿ ಪಡುತ್ತಾಳೆಂಬುದು ಆಕೆಯ ಸಾಧನೆಗಳ ಪಟ್ಟಿ ನೋಡಿದವರಿಗೆ ಖಾತರಿಯಾಗುತ್ತದೆ. ಶನಿ ಸಿಂಗ್ನಾಪುರದ ದೇವಸ್ಥಾನದ ಗರ್ಭಗುಡಿಯೊಳಗೆ ಸ್ತ್ರೀಯರಿಗೆ ಪ್ರವೇಶವಿಲ್ಲ ಎಂಬುದು ತಿಳಿಯುತ್ತಿದ್ದಂತೆ ಆಕೆ ತನ್ನ ಬ್ರಿಗೇಡ್‍ನ ಸೇನಾನಿಗಳನ್ನು ಕಟ್ಟಿಕೊಂಡು ನುಗ್ಗಿದಳು. ಬಲಾತ್ಕಾರದ ಪ್ರವೇಶಕ್ಕೆ ದೇವಸ್ಥಾನ ತಡೆಯೊಡ್ಡಿದಾಗ, ಹೆಲಿಕಾಪ್ಟರ್ ಬಳಸಿಕೊಂಡು ಪ್ರವೇಶ ಪಡೆಯುತ್ತೇನೆ ಎಂಬ ಮಾತೂ ಆಕೆಯಿಂದ ಬಂತು. ಒಂದು ತಿಂಗಳ ಕಾಲ ಆಕೆ ದೇವಸ್ಥಾನದ ಆವರಣವನ್ನು ಅಕ್ಷರಶಃ ರಣಾಂಗಣ ಮಾಡಿಹಾಕಿದಳು.

ತೃಪ್ತಿಯ ಹೋರಾಟದ ಹಿಂದೆ ಇದ್ದ ಚಿಂತನೆ ಇದು: (1) ದೇವಸ್ಥಾನ ಎನ್ನುವುದು ಬಸ್‍ಸ್ಟಾಂಡ್, ಪಬ್ಲಿಕ್ ಶೌಚಾಲಯ, ಮಾರುಕಟ್ಟೆಯ ಹಾಗೆಯೇ ಒಂದು ಸಾರ್ವಜನಿಕ ಸ್ಥಳ. ಉಳಿದ ಜಾಗಗಳಲ್ಲಿದ್ದಂತೆಯೇ ಇಲ್ಲೂ ಎಲ್ಲರಿಗೂ ಪ್ರವೇಶ ಇರಬೇಕು; ಸಮಾನತೆ ಬೇಕು. (2) ಎಲ್ಲ ದೇವಸ್ಥಾನಗಳೂ ಒಂದೇ. ಎಲ್ಲಕ್ಕೂ ಒಂದೇ ನಿಯಮ ಅನ್ವಯವಾಗುತ್ತದೆ. (3) ದೇಶದ ಸಂವಿಧಾನದ ಮೂಲಕ ದೇವಸ್ಥಾನಗಳ ಆಚರಣೆ, ಪದ್ಧತಿಗಳನ್ನು ಪ್ರಶ್ನಿಸಬಹುದು. (4) ಹಿಂದೂ ಎನ್ನುವುದೊಂದು ರಿಲಿಜನ್. ಇಲ್ಲಿ ಪ್ರತಿಯೊಬ್ಬನಿಗೂ ದೇವಸ್ಥಾನಕ್ಕೆ ಪ್ರವೇಶವಿರತಕ್ಕದ್ದು ಮತ್ತು ಪ್ರವೇಶ ಮಾಡಲೇಬೇಕು. ಈ ನಾಲ್ಕೂ ಅಂಶಗಳು ತೃಪ್ತಿಯ ಚಿಂತನೆ ಎಷ್ಟು ಸೀಮಿತ ಎನ್ನುವುದನ್ನು ಸೂಚಿಸುತ್ತವೆ. ಹಿಂದೂ ಧರ್ಮ ಒಂದು ರಿಲಿಜನ್ ಎಂದು ಹೊರಟಾಗಲೇ ಎಲ್ಲ ಬಗೆಯ ಸಮಸ್ಯೆಗಳೂ ಹುಟ್ಟುವುದು. ಉಳಿದ ರಿಲಿಜನ್‍ಗಳಲ್ಲಿದ್ದಂತೆ ಹಿಂದೂ ಧರ್ಮಕ್ಕೆ ಒಂದೇ ದೇವರು, ಒಂದೇ ಗ್ರಂಥ, ಕಡ್ಡಾಯ ಪ್ರಾರ್ಥನೆ, ಪ್ರಾರ್ಥನಾ ಮಂದಿರ, ಪ್ರಾರ್ಥನಾ ದಿನಗಳು – ಇವೆಲ್ಲ ಇಲ್ಲ. ಅಷ್ಟೇ ಏಕೆ, ಇಂಥಾ ವಸ್ತುಗಳ ಮೂಲಕವೇ ಪೂಜಿಸಬೇಕೆಂಬ ಕಟ್ಟಳೆಯೂ ಇಲ್ಲ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ “ನನ್ನನ್ನು ನೀರು, ಪುಷ್ಪ, ಎಲೆ ಯಾವುದರ ಮೂಲಕವೂ ಪೂಜಿಸಬಹುದು” ಎಂಬ ಸ್ವಾತಂತ್ರ್ಯ ಕೊಟ್ಟುಬಿಟ್ಟಿದ್ದಾನೆ. ಹಾಗಿರುವಾಗ, ದೇವಸ್ಥಾನಕ್ಕೆ ಹೋಗಲೇಬೇಕು, ಅದರಲ್ಲೂ ಗರ್ಭಗುಡಿಯನ್ನು ಪ್ರವೇಶಿಸಬೇಕು ಎಂಬ ತೃಪ್ತಿಯ ಬೇಡಿಕೆಯೇ ಅಸಂಬದ್ಧ. ಶನಿ ದೇವಸ್ಥಾನದ ವಿಜಯದ ನಂತರ ಆಕೆ ತ್ರ್ಯಂಬಕೇಶ್ವರ ದೇವಸ್ಥಾನದತ್ತ ಮುಖ ಮಾಡುವ ಸೂಚನೆ ಕೊಟ್ಟಿದ್ದಾಳೆ. ಅಂದರೆ ಇದರ ಹಿಂದೆ ಭಕ್ತಿ ಎನ್ನುವುದಕ್ಕಿಂತಲೂ ಯಾವುದೋ ಗುಪ್ತ ಹಿತಾಸಕ್ತಿಗಳ ಕೈವಾಡ ಇರುವುದು ಸ್ಪಷ್ಟವಾಗುತ್ತದೆ. ದೇಶದಲ್ಲಿ ಗಂಡುಹೆಣ್ಣುಗಳ ಭೇದವಿಲ್ಲದೆ ಪ್ರವೇಶ ಒದಗಿಸುವ ದೇವಸ್ಥಾನಗಳಲ್ಲಿ, ಅವೆಷ್ಟೇ ಕಾರಣಿಕದ್ದಾದರೂ, ತೃಪ್ತಿಗೆ ಆಸಕ್ತಿಯಿಲ್ಲ. ಆಕೆಗೆ ಬೇಕಾಗಿರುವುದು ಹೋರಾಟ, ಗಲಾಟೆ, ಅಬ್ಬರದ ಪ್ರಚಾರ, ಮತ್ತು ಇವೆಲ್ಲವುಗಳ ಮೂಲಕ ರಾಜಕೀಯ ಏಣಿ ಹತ್ತುವುದು, ಜೊತೆಗೆ ತನ್ನನ್ನು ಮುಂದಿಟ್ಟುಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿರುವವರಿಗೆ ಸಹಾಯ ಮಾಡುವುದು.

ಒಂದು ವಿಷಯ ಗಮನಿಸಿ: ಕಳೆದ ವರ್ಷ ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿಯಾಗುತ್ತಿದೆ ಎಂಬ ಹುಯಿಲೆಬ್ಬಿಸಿ ಪ್ರಶಸ್ತಿ ವಾಪಸಿ ಚಳವಳಿ ಮಾಡಲಾಯಿತು. ಮೂರು ತಿಂಗಳು ನಡೆದ ಈ ಪ್ರಹಸನದಲ್ಲಿ ಕೊನೆಗೆ ಕಾಕ (ಕಾಂಗ್ರೆಸ್-ಕಮ್ಯುನಿಸ್ಟ್) ಬುದ್ಧಿಜೀವಿಗಳ ಕುತಂತ್ರ ಏನಿತ್ತು ಎಂಬುದು ಜಗಜ್ಜಾಹೀರಾಯಿತು. ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂಬುದನ್ನು ಸಾಧಿಸಲು ಅವರ ಬಳಗಕ್ಕೆ ಸಾಧ್ಯವಾಗಲೇ ಇಲ್ಲ. ಅದಾಗಿ ಒಂದೆರಡು ತಿಂಗಳ ಬಳಿಕ ದೇಶದಲ್ಲಿ ಇದ್ದಕ್ಕಿದ್ದಂತೆ ದೇವಸ್ಥಾನಗಳ ಮೇಲೆ ದಾಳಿ ನಡೆಯತೊಡಗಿದೆ. ಶಬರಿಮಲೆಯಲ್ಲಿ ಹೆಂಗಸರಿಗೆ ಪ್ರವೇಶವಿಲ್ಲ ಎಂಬ ಪುಕಾರು ಹಬ್ಬಿಸಲಾಯಿತು (ನೆನಪಿರಲಿ: ಈ ಕುರಿತು ಕೋರ್ಟ್‍ನಲ್ಲಿ ದೇವಸ್ಥಾನವನ್ನು ಪ್ರಶ್ನಿಸಿ ಹಿತಾಸಕ್ತಿ ಅರ್ಜಿ ಹಾಕಿರುವವನು ಒಬ್ಬ ಮುಸ್ಲಿಂ!). ಶನಿ ಸಿಂಗ್ನಾಪುರದ ಪ್ರಹಸನದ ನೇತೃತ್ವ ತೃಪ್ತಿಯ ಹೆಗಲಿಗೆ ಬಿದ್ದಿದೆ. ತ್ರ್ಯಂಬಕೇಶ್ವರ ಕೂಡ ಇದೇ ಸಾಲಿನಲ್ಲಿ ಬಂದುನಿಲ್ಲುವ ಸೂಚನೆ ಸಿಕ್ಕಿದೆ. ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆ ವಿವಾದ ಕೂಡ ರಾಷ್ಟ್ರೀಯಮಟ್ಟದಲ್ಲಿ ಸುದ್ದಿಯಾಗುವಂತೆ ನೋಡಿಕೊಳ್ಳಲಾಯಿತು. ಕೇರಳದಲ್ಲಿ ಪಟಾಕಿ ದುರಂತ ನಡೆದ ಮೇಲೆ ದೇವಸ್ಥಾನಗಳ ಮೇಲೆ, ಅತ್ಯುಗ್ರವಾದ ಕಾನೂನುಗಳನ್ನು ತರಬೇಕು; ಅವುಗಳ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಬೇಕು ಎಂಬ ರಾಷ್ಟ್ರೀಯಮಟ್ಟದ ಚರ್ಚೆ ಶುರುವಾಗಿದೆ. ಇವುಗಳ ಹಿಂದೆ ಕಾಣದ “ಕೈ”ಯೊಂದು ಕೆಲಸ ಮಾಡುತ್ತಿರುವ ವಾಸನೆ ನಿಮಗೆ ಸಿಗುತ್ತಿದೆಯೇ?

ಇತ್ತ ಶನಿ ದೇವಸ್ಥಾನದ ಗಲಾಟೆ ನಡೆಯುತ್ತಿದ್ದಾಗಲೇ ಪತ್ರಕರ್ತೆ ಬರ್ಖಾ ದತ್, ವಿದೇಶದ ಒಂದು ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳುತ್ತ “ಭಾರತದ ಹಿಂದೂ ಹೆಂಗಸರಿಗೆ ಸ್ವಾತಂತ್ರ್ಯವಿಲ್ಲ. ಅವರಿಗೆ ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿ ಪ್ರವೇಶ ನಿರಾಕರಿಸಲಾಗುತ್ತದೆ” ಎಂಬ ಮಾತುಗಳನ್ನು ಹೇಳಿದಳು. ಈ ಮಾತುಗಳಿಗೂ ಸಂಕಿರಣದ ವಿಷಯಕ್ಕೂ ಯಾವ ಸಂಬಂಧವೂ ಇರಲಿಲ್ಲ ಎನ್ನುವುದು ಬೇರೆ ಮಾತು! ಆದರೆ ಇಂಥ ಒಂದೇ ಒಂದು ಮಾತು ಈ ಬುದ್ಧಿಜೀವಿಗಳಿಂದ ಹೊರಬಿದ್ದರೆ ಸಾಕು, ಅದನ್ನುಪಯೋಗಿಸಿಕೊಂಡು ಆರು ತಿಂಗಳ ಗಂಜಿ ಸಂಪಾದಿಸುವ ನೂರಾರು ಕ್ರಿಶ್ಚಿಯನ್ ಮಿಷನರಿಗಳು, ಎನ್‍ಜಿಓಗಳು ಇವೆ. “ಬರ್ಖಾ ಎಂಬ ಭಾರತದ ಅತ್ಯುನ್ನತ ಚಿಂತಕಿ ಹೀಗೆ ಅಭಿಪ್ರಾಯ ಪಟ್ಟಿದ್ದಾರೆ” ಎಂಬುದನ್ನೇ ಹೈಲೈಟ್ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹರಾಜುಹಾಕಲು ನಿರ್ದಿಷ್ಟ ಹದ್ದುಗಳು ಹೊಂಚುಹಾಕಿರುತ್ತವೆ. ಮತ್ತು ಇಂಥ ಆಣಿಮುತ್ತುಗಳನ್ನು ಉದುರಿಸಿದ್ದಕ್ಕಾಗಿ ಬರ್ಖಾಳಂತ ಬುದ್ಧಿಜೀವಿಗಳ ಬ್ಯಾಂಕ್ ಅಕೌಂಟುಗಳಿಗೆ ಋಣಸಂದಾಯವೂ ಆಗುತ್ತದೆ. ಅಂದರೆ, ಭಾರತದ ಹಿಂದೂ ಹೆಂಗಸರು ಅಬಲೆಯರು, ಅಸಹಾಯಕರು, ಶೋಷಿತರು; ಅವರನ್ನು ಅವರ ಧರ್ಮವೇ ಎರಡನೇ ದರ್ಜೆಯ ನಾಗರಿಕರಂತೆ ಕಾಣುತ್ತಿದೆ ಎಂದು ಬಿಂಬಿಸುವುದರಲ್ಲಿ ಒಂದು ಅಂತಾರಾಷ್ಟ್ರೀಯ ಹಿತಾಸಕ್ತಿ ಕೆಲಸ ಮಾಡುತ್ತಿದೆ. ಹಿಂದೂಗಳಿಗೆ ತಮ್ಮ ಧರ್ಮದಲ್ಲಿ ಹಲವಷ್ಟು ಕಂದಾಚಾರಗಳು ಹಾಗೂ ಮೂಢನಂಬಿಕೆಗಳಿವೆ ಎಂಬ ಭಾವನೆ ಹುಟ್ಟುವಂತೆ ಮಾಡುವುದು, ತಮ್ಮ ಬಗ್ಗೆಯೇ ಅಸಹ್ಯವಾಗುವಂತೆ ಪ್ರಚೋದಿಸುವುದು; ಅವರ ಧಾರ್ಮಿಕ ನಂಬಿಕೆಗಳ ನೆಲೆಗಟ್ಟನ್ನು ಅಲುಗಾಡಿಸುವುದು; ದೇವಸ್ಥಾನಗಳಂಥ ಶ್ರದ್ಧಾಕೇಂದ್ರಗಳ ಮೇಲಿನ ನಿಯತ್ತನ್ನು ಕದಡುವುದು.. ಹೀಗೆ ಹಲವು ಹಂತಗಳಲ್ಲಿ ಈ ಅಜೆಂಡಾವನ್ನು ಪ್ರಯೋಗಿಸಲಾಗುತ್ತಿದೆ. ಕಳೆದ ಮೂರ್ನಾಲ್ಕು ತಿಂಗಳಿಂದ ಹಿಂದೂ ದೇವಸ್ಥಾನಗಳ ಆಚರಣೆಗಳು ಕೋರ್ಟುಗಳಲ್ಲಿ ಮೇಲಿಂದ ಮೇಲೆ ಚರ್ಚೆಗೆ ಬರುತ್ತಿರುವುದು ಯಾಕೆ ಎಂದು ಯೋಚಿಸಿದರೆ ನಿಮಗೆ ಇಡೀ ಸಮಸ್ಯೆಯ ಸ್ವರೂಪ ಸ್ಪಷ್ಟಗೊಳ್ಳಬಹುದು.

ನಿಮಗೆ ಗೊತ್ತಿರಲಿಕ್ಕಿಲ್ಲ; ರಾಜಸ್ಥಾನದ ಪುಷ್ಕರ್‍ನಲ್ಲಿ ಬ್ರಹ್ಮನ ದೇವಸ್ಥಾನವಿದೆ. ಇಲ್ಲಿ ವಿವಾಹಿತ ಗಂಡಸರಿಗೆ ಪ್ರವೇಶವಿಲ್ಲ! ಕೇರಳದ ಅಟ್ಟುಕಲ್ ದೇವಸ್ಥಾನದ ಪೊಂಗಲ್ ಹಬ್ಬಕ್ಕೆ, ನಂಬಿದರೆ ನಂಬಿ, ಹತ್ತುಲಕ್ಷ ಹೆಂಗಸರು ಜಮಾವಣೆಗೊಳ್ಳುತ್ತಾರೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಕೇವಲ ಹೆಂಗಸರಷ್ಟೇ ಸೇರುವ ಧಾರ್ಮಿಕ ಕಾರ್ಯಕ್ರಮ ಎಂದು ಇದು ಗಿನ್ನೆಸ್ ಪುಸ್ತಕದಲ್ಲೂ ದಾಖಲಾಗಿದೆ. ದೇಶದ ಯಾವುದೇ ಭಗವತಿ ದೇವಸ್ಥಾನವನ್ನು ತೆಗೆದುಕೊಳ್ಳಿ; ಅಲ್ಲೆಲ್ಲಾ ಕಡೆಗಳಲ್ಲೂ ಮಹಿಳೆಯರದ್ದೇ ಪಾರುಪತ್ಯ, ಅವರಿಗೇ ಪ್ರಾಶಸ್ತ್ಯ. ಗಂಡುಹೆಣ್ಣು ಭೇದವಿಲ್ಲದೆ ಭಾರತದಲ್ಲಿ ಹೊಗಬಹುದಾದ ದೇವಸ್ಥಾನಗಳು ಹೇಗಿವೆಯೋ ಹಾಗೆಯೇ ಹೆಂಗಸರನ್ನು ಮಾತ್ರ ಒಳಬಿಟ್ಟುಕೊಳ್ಳುವ ಅಸಂಖ್ಯಾತ ದೇಗುಲಗಳಿವೆ. ತಮಗೆ ದೇವರ ಪೂಜೆಗೆ ಪ್ರವೇಶ ಕೊಟ್ಟಿಲ್ಲ ಎಂದು ಅತ್ತ ಹೆಂಗಸರನ್ನು ಈ ದೇಶ ಎಂದೂ ನೋಡಿಲ್ಲ. ಇನ್ನು ಪ್ರತಿ ದೇವಸ್ಥಾನಕ್ಕೂ ಅದರದ್ದೇ ಆದ ನಿಯಮಗಳಿರುವುದು ಕೂಡ ನಿಜ. ಕೆಲವು, ಋತುಸ್ರಾವ ನಡೆಯುತ್ತಿರುವ ಹೆಂಗಸರ ಪ್ರವೇಶಕ್ಕೆ ನಿಷೇಧ ಒಡ್ಡುತ್ತವೆ. ಆ ಕೆಟಗರಿಯಲ್ಲಿ ಬರದ 10ರೊಳಗಿನ ಹೆಣ್ಣು ಮಕ್ಕಳು ಮತ್ತು 50 ದಾಟಿದ ಹೆಂಗಸರು ಶಬರಿಮಲೆಯಲ್ಲಿ ಧಾರಾಳವಾಗಿ ಪೂಜೆ ಸಲ್ಲಿಸಬಹುದು. ದೇಶದ ಯಾವುದೇ ಬೌದ್ಧ ಮಠಗಳಿಗೆ ಭೇಟಿ ಕೊಡಿ. ಅಲ್ಲಿ ಒಳಹೋಗುವ ಮೊದಲೇ ಅಂಗಳದಲ್ಲಿ “ಇಲ್ಲಿ ಆಚರಿಸಬೇಕಾದ ಕ್ರಮಗಳು” ಎಂದು ದೊಡ್ಡ ಪಟ್ಟಿಯನ್ನೇ ಕೊಟ್ಟಿರುತ್ತಾರೆ. ಅದನ್ನು ಕಡ್ಡಾಯವಾಗಿ ಆಚರಿಸಬೇಕಾದ್ದು ಪ್ರತಿಯೊಬ್ಬ ಸಂದರ್ಶಕನ ಕರ್ತವ್ಯ. ನನಗೆ ಸಂವಿಧಾನ ಅಧಿಕಾರ ಕೊಟ್ಟಿದೆ ಎಂದು ನುಗ್ಗಿದರೆ, ಬೌದ್ಧಭಿಕ್ಷುಗಳು ಅಂಥವರ ಹೆಡೆಮುರಿಕಟ್ಟಿ ಹೊರದಾರಿ ತೋರಿಸುತ್ತಾರೆ. ಮೌಂಟ್ ಅಬುವಿನಲ್ಲಿರುವ ದಿಲ್ವಾರಾ ದೇವಸ್ಥಾನದಲ್ಲಿ ಬೆಳಗ್ಗೆ ಆರರಿಂದ ಮಧ್ಯಾಹ್ನ ಹನ್ನೆರಡವರೆಗೆ ಜೈನರಿಗೆ ಮಾತ್ರ ಪ್ರವೇಶ. ಕೊಡಗಿನ ಇಗ್ಗುತ್ತಪ್ಪ ದೇವಸ್ಥಾನದ ಒಳಪ್ರಾಂಗಣಕ್ಕೆ ಗಂಡಾಗಲೀ ಹೆಣ್ಣಾಗಲೀ ಯಾರೂ ಪ್ರವೇಶಿಸುವಂತಿಲ್ಲ! ಇದನ್ನೆಲ್ಲ ಸಂವಿಧಾನದ ನೆರಳಲ್ಲಿ ಪ್ರಶ್ನಿಸುತ್ತಾ ಹೋಗುವುದಕ್ಕಾಗುತ್ತದೆಯೇ?

ಭಾರತದಲ್ಲಿ ಹಿಂದೂ ನಂಬಿಕೆಗಳನ್ನು ಬುಡಮಟ್ಟದಿಂದ ಕೀಳಬೇಕೆಂಬ ಪ್ರಯತ್ನ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಇಡೀ ಜಗತ್ತನ್ನೇ ತಮ್ಮ ಮುಷ್ಟಿಗೆ ತೆಗೆದುಕೊಂಡಿರುವ ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿಗಳಿಗೆ ಸದ್ಯಕ್ಕೆ ಸವಾಲಾಗಿ ನಿಂತಿರುವುದು ಆಗ್ನೇಷ್ಯದಲ್ಲಿ ಹರಡಿರುವ ಬೌದ್ಧ ಮತ, ಭಾರತದ ಹಿಂದೂ ಧರ್ಮ ಮತ್ತು ಚೀನಾದ ಕಮ್ಯುನಿಸ್ಟ್ ಪಾರ್ಟಿ ಮಾತ್ರ. ಭಾರತದ ಹೊರಗೆ ನಾಯಿಬೆಕ್ಕುಗಳಂತೆ ಕಚ್ಚಾಡಿಕೊಳ್ಳುವ ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿಗಳು ಭಾರತದಲ್ಲಿ ಹಿಂದೂಗಳನ್ನು ಬಗ್ಗುಬಡಿಯಲಿಕ್ಕಾದರೂ ಒಗ್ಗೂಡಬೇಕು ಎಂದು ಇತ್ತೀಚೆಗೆ ಕೇರಳದಲ್ಲೊಬ್ಬ ಕ್ಯಾಥೊಲಿಕ್ ಫಾದರ್ ಕರೆ ಕೊಟ್ಟಿದ್ದಾನೆ! ಪರಿಸ್ಥಿತಿ ಹೀಗಿರುವಾಗ ತೃಪ್ತಿ ದೇಸಾಯಿಯ ಹಿಂದೆ ಅಡಗಿರುವ ಶಕ್ತಿಗಳನ್ನು ಗುರುತಿಸುವುದು ಕಷ್ಟವೇನೂ ಅಲ್ಲ ಬಿಡಿ. ಭಕ್ತಿಯ ಲವಲೇಶವೂ ಇಲ್ಲದೆ, ಬಲಾತ್ಕಾರದಿಂದ ಶನಿಯನ್ನು ಮುಟ್ಟುವುದೇ ಸಾಧನೆಯೆಂದು ಸಂಭ್ರಮಪಡುತ್ತಿರುವ ತೃಪ್ತಿಯಂಥ ಫಾರಿನ್ ಏಜೆಂಟುಗಳನ್ನು ಕಂಡಾಗ ನಗುವುದೋ ಅಳುವುದೋ ತಿಳಿಯದಾಗುತ್ತದೆ. ಹಿಂದೂಗಳನ್ನು ಇಂಥವರು ಒಡೆಯುವ ಬದಲು ಪರೋಕ್ಷವಾಗಿ ಜಾಗೃತಗೊಳಿಸುತ್ತಿದ್ದಾರೆ, ಒಗ್ಗೂಡಿಸುತ್ತಿದ್ದಾರೆ ಎನ್ನುವುದೇ ಸಂತೋಷದ ಸಂಗತಿ.

72 ಟಿಪ್ಪಣಿಗಳು Post a comment
  1. viewsofvenkat
    ಏಪ್ರಿಲ್ 24 2016

    ರೋಹಿತ್ ಅವರು ತೃಪ್ತಿ ದೇಸಾಯಿ ಮತ್ತು ಬರ್ಕಾ ದತ್ ಅವರ ದೃಷ್ಟಿಕೋನ ಮತ್ತು ಈ ಘಟನೆಗಳು ನಡೆಸುವುದರ ಹಿಂದಿನ ಕುತಂತ್ರ ನಿಜವೇ ಇರಬಹುದು. ಇದಕ್ಕೆ ಕಾರಣ ನಾವೇ. ನಮ್ಮಲ್ಲಿನ ಕೆಲವು ಮೂಢನಂಬಿಕೆಗಳನ್ನು ಇಂದಿಗೂ ಆಚರಣೆ ಮಾಡುತ್ತಿರುವುದರಿಂದ ದೇಸಾಯಿ, ದತ್ ಅಂತಹವರು ಹುಟ್ಟಿ ಕೊಳ್ಳುತ್ತಿದ್ದಾರೆ.

    ಈ ಹಿಂದೆ ನಾವು ಆಚರಿಸುತ್ತಿದ್ದ ಎಷ್ಟೋ ಅಸಂಬದ್ದ ಆಚರಣೆಗಳು ಕಾಲ ಬದಲಾದಂತೆಲ್ಲ ಮರೆಯಾಗಿವೆ. ಯಾವುದು ಕೂಡ ನಿಂತ ನೀರಾಗಾ ಬಾರದು. ಮೊದಲೆಲ್ಲ ನಮ್ಮ ಮನೆಯ ಹೆಣ್ಣು ಮಕ್ಕಳು ಋತುಮತಿಯರಾದರೆ ಸುಮಾರು ಮೂರರಿಂದ ಐದು ದಿನಗಳವರೆಗೆ ಮನೆಯಿಂದ ಹೊರಗಿರಬೇಕಿತ್ತು, ಆದರೆ ಈಗ ಇಂತಹದ್ದನ್ನು ಯಾರು ಮಾಡುವುದಿಲ್ಲ. ಕಾರಣ ಸುಖವಾಗಿ ಬೆಳೆಸಿರುವ ನಮ್ಮ ಮಕ್ಕಳನ್ನು ಮನೆಯಿಂದ ಹೊರಗೆ ಅಥವಾ ಯಾವುದೋ ಮೂಲೆಯಲ್ಲಿ ಮಲಗಲು ಬಿಡುವುದಿಲ್ಲ. ಎಂದಿನಂತೆ ಆ ದಿನವೂ ಮುಂದುವರಿಯುತ್ತಿದೆ ಈಗ. ಜೊತೆಗೆ ಮನೆಗಳಲ್ಲಿಯೂ ಇಂತಹ ವಿಚಾರಗಳಲ್ಲಿ ಯಾವುದೇ ತಾರತಮ್ಯ ಮಾಡುವುದಿಲ್ಲ. ಇದು ಸಮಾಜಕ್ಕೆ ಅನ್ವಯಿಸುತ್ತದೆ.

    ಪ್ರತಿಯೊಂದು ಧರ್ಮದಲ್ಲೂ ಮೂಢನಂಬಿಕೆಗಳು, ಅಸಂಬದ್ದ ಆಚರಣೆಗಳು ಇದ್ದೆ ಇವೆ. ಯಾವುದು ಕೂಡ ಇದರಿಂದ ಹೊರತಾಗಿಲ್ಲ, ಕ್ರಿಶ್ಚಿಯನ್ನರು ಶ್ರೇಷ್ಠ, ಮುಸ್ಲಿಂ ಧರ್ಮ ಇನ್ನೂ ಶ್ರೇಷ್ಠ, ಹಿಂದೂ ಧರ್ಮದಲ್ಲಿ ಹೆಣ್ಣನ್ನು ಕೀಳಾಗಿ ನೋಡುತ್ತಾರೆ ಎಂದು ಹಲವರು ಹಲವೆಡೆ ಹೇಳುವುದು ಒಂದು ರೀತಿಯ ಖಯಾಲಿ ಮಾಡಿಕೊಂಡಿದ್ದಾರೆ. ಆದರೆ ಹಿಂದೂ ಧರ್ಮ ಮತ್ತಷ್ಟು ಪ್ರಜ್ವಲಿಸ ಬೇಕಾದರೆ ಒಂದಿಷ್ಟು ಬದಲಾವಣೆ ಅವಶ್ಯ.

    ಈ ದಿಕ್ಕಿನಲ್ಲಿ ನಾವೆಲ್ಲ ಮುಂದಡಿ ಇಡೋಣ. ಬೇರೆಯವರು ನಮ್ಮನ್ನು ಅಪರಾಧಿಗಳ ಸ್ಥಾನದಲ್ಲಿ ನಿಲ್ಲಿಸುವ ಮುನ್ನ, ಆಪಾದನೆ ಮಾಡುವ ಮುನ್ನ ಅವಶ್ಯಕವಿರುವ ಬದಲಾವಣೆ ಆಗುವುದು ಒಳಿತಲ್ಲವೇ.? ನನಗೆ ನಮ್ಮ ಧರ್ಮ ಉಳಿಯಬೇಕು. ಹಿಂದೂ ಧರ್ಮ ಪ್ರಪಂಚದಲ್ಲೇ ಶ್ರೇಷ್ಠವಾಗಬೇಕು. ಇದು ನನ್ನ ಆಶಯ. ಧನ್ಯವಾದಗಳು.

    ಉತ್ತರ
    • viewsofvenkat
      ಏಪ್ರಿಲ್ 24 2016

      ಮೊದಲ ಸಾಲಿನಲ್ಲಿ ‘ರೋಹಿತ್ ಅವರು’ ಬದಲಿಗೆ ‘ರೋಹಿತ್ ಅವರೇ’ ಎಂದು ಓದಿ ಕೊಳ್ಳಿ.
      ವೆಂಕಟರೆಡ್ಡಿ(venkatareddy)

      ಉತ್ತರ
    • vinayak hampiholi
      ಏಪ್ರಿಲ್ 24 2016

      ವೆಂಕಟ್ ಅವರೇ.. ಮೂಢನಂಬಿಕೆ ಎಂದರೇನು? ಕ್ರಿಶ್ಚಿಯನ್ನರ ಪ್ರಕಾರ ಯಾವ ನಂಬಿಕೆಯು ಬೈಬಲ್ಲಿಗೆ ವಿರುದ್ಧವಾಗಿದೆಯೋ ಅದು ಮೂಢನಂಬಿಕೆ. ಉದಾಹರಣೆಗೆ ಪ್ರಾಣಿಬಲಿ ಕ್ರಿಶ್ಚಿಯನ್ನರಿಗೆ ಮೂಢನಂಬಿಕೆ. ಕಾರಣ ಬೈಬಲ್ಲಿನಲ್ಲಿ ಕ್ರಿಸ್ತನು ಇಡೀ ಮನುಕುಲದ ಪಾಪವನ್ನು ಹೊತ್ತು, ಆ ಮನುಕುಲದ ಪಾಪ ಕಳೆಯಲು ತನ್ನ ಪ್ರಾಣವನ್ನೇ ಬಲಿಯಾಗಿ ಅರ್ಪಿಸಿದನು ಎಂದು ನಂಬುತ್ತಾರೆ. ಹೀಗಾಗಿ ಇನ್ನೊಬ್ಬ ದೇವನ ಹೆಸರಿನಲ್ಲಿ ಪ್ರಾಣಿಯನ್ನು ಬಲಿಕೊಡುವದು ಆ ಕ್ರಿಸ್ತನ ಮಹಾಬಲಿದಾನವನ್ನು ಒಪ್ಪಿಲ್ಲ ಎನ್ನುವದನ್ನು ಸೂಚಿಸುತ್ತದೆ. ಹೀಗಾಗಿ ಪ್ರಾಣಿಬಲಿ ಕ್ರಿಶ್ಚಿಯನ್ ರಿಲಿಜನ್ನಿನಲ್ಲಿ ಮೂಢನಂಬಿಕೆಯಾಗಿದೆ.

      ಭಾರತೀಯ ಸಂಪ್ರದಾಯಗಳಲ್ಲಿ ಒಂದಾನೊಂದು ಆಚರಣೆಯನ್ನು ಮೂಢನಂಬಿಕೆ ಎಂದು ಹೇಗೆ ನಿರ್ಧರಿಸುವದು? ಯಾವುದರ ಕಲ್ಪನೆಗೆ ವಿರುದ್ಧವಾಗಿರುವ ನಂಬಿಕೆಗಳನ್ನು ಮೂಢನಂಬಿಕೆ ಎನ್ನುವದು. ಇಡೀ ಭಾರತೀಯರು ಎಲ್ಲರೂ ಒಂದೇ ಕಲ್ಪನೆಯನ್ನು ಹೊಂದಿದ್ದಾರೆಯೇ?

      ಉತ್ತರ
      • Ramakant shetty
        ಏಪ್ರಿಲ್ 24 2016
      • Salam Bava
        ಏಪ್ರಿಲ್ 24 2016

        “ಮೂಢನಂಬಿಕೆ ಎಂದರೇನು?”

        Any belief or knowledge claim that doesn’t stand scientific testing is superstition. Eg. Sun revolves around the earth, earth is flat, White race is superior to other races, women are inferior to men, etc.

        ಉತ್ತರ
        • ಏಪ್ರಿಲ್ 29 2016

          ಮದರಸಾದ ಶಿಕ್ಷಣದ ಯಾವುದೇ ವೈಜ್ಞಾನಿಕ ತತ್ವಗಳ ಆಧಾರದ ಅನುಸಾರ ಇಲ್ಲ. ಅದನ್ನು ನಿಷೇಧಿಸುವೆಯಾ ಸಾಬಿಯೇ?

          ಉತ್ತರ
  2. Salam Baca
    ಏಪ್ರಿಲ್ 24 2016

    “ಭಾರತೀಯ ಸಂಪ್ರದಾಯಗಳಲ್ಲಿ ಒಂದಾನೊಂದು ಆಚರಣೆಯನ್ನು ಮೂಢನಂಬಿಕೆ ಎಂದು ಹೇಗೆ ನಿರ್ಧರಿಸುವದು?”

    Simple answer. Whatever is not scientific is ಮೂಢನಂಬಿಕೆ. Hindus believe that by giving gifts and prostrating to Brahmins they will do well. Clearly this belief has no scientific support. Only brahmins benefitted from such practices. Brahmins believe that their deceased parents come in the form of crows to eat pinda. There’s no scientific support for this. Lot of food gets unnecessarily wasted and crows make lot of noise adding to noise pollution.

    ಉತ್ತರ
    • shankaranarayana p
      ಏಪ್ರಿಲ್ 24 2016

      Mr.salman, Without knowing rituals of ” shrarddha”why you are comenting.In pinda pradhana only one plate is kept for crow. In your religion also we saw “stoning to accused” and killing sheap / goat/cow etc. For all these rituals people get support from their own “holy books” Like wise we bramhins have our own belief and rituals. First try to get rid off ods from your own religion.Society stands on the belief and trust towards “almighty” and we were tought to continue such practices. whoever not interested need follow it. Such freedom is given only in Hindhooisam.

      ಉತ್ತರ
    • WITIAN
      ಏಪ್ರಿಲ್ 25 2016

      ಕುರ್’ಆನ್ ನ ಪ್ರಕಾರ ಸೂರ್ಯ ಕೊಚ್ಚೆ ನೀರಿನಲ್ಲಿ ಮುಳುಗುವುದು ಸತ್ಯವೇ ಆದಲ್ಲಿ, ಹಿಂದುಗಳು ತಮ್ಮ ಪಿತೃಗಳು ಕಾಗೆಯ ರೂಪದಲ್ಲಿ ಬಂದು ಅನ್ನದ ಪಿಂಡವನ್ನು ತಿನ್ನುತ್ತಾರೆ ಎನ್ನುವುದ ಸತ್ಯ ಏಕಲ್ಲ?

      ಉತ್ತರ
      • Salam Bava
        ಏಪ್ರಿಲ್ 25 2016

        “ಪಿತೃಗಳು ಕಾಗೆಯ ರೂಪದಲ್ಲಿ ಬಂದು ಅನ್ನದ ಪಿಂಡವನ್ನು ತಿನ್ನುತ್ತಾರೆ ಎನ್ನುವುದ ಸತ್ಯ ಏಕಲ್ಲ?”

        There’s no scientific basis for this belief. Hindus have many such superstitions despite studying science in schools and colleges. Educated Hindus especially brahmins support superstitions using relativistic arguments and denigrating other religions. They want all material benefits that science offers and yet cling on to age old practices and beliefs.

        ಉತ್ತರ
        • WITIAN
          ಏಪ್ರಿಲ್ 25 2016

          If Hindus have many superstitions in spite of studying in colleges, why do Moslems follow blindly what ever Qur’an says? Have they not studied in colleges. Just a couple of days ago, I saw video in which a Moslem cleric from middle east said that if the Earth were to rotate, a plane need not travel from Saudi Arabia to Japan (or China). It simply needs to levitate and stay in air. Since the Earth rotates, the plane can land once Japan (or china) comes to it! I am sure he has not studied in a college where Haram Bawa studied.

          ಉತ್ತರ
          • Salam Bava
            ಏಪ್ರಿಲ್ 25 2016

            Educated Hindus especially brahmins support superstitions using relativistic arguments and denigrating other religions.

            ಉತ್ತರ
          • Salam Bava
            ಏಪ್ರಿಲ್ 25 2016

            “Just a couple of days ago, I saw video in which a Moslem cleric from middle east”

            As if Shankaracharya Swaroopanand spoke scientific wisdom! His comments on Shirdi and women are good reason why Hindus need to junk superstitions and get rid of godmen.

            ಉತ್ತರ
        • ಏಪ್ರಿಲ್ 25 2016

          Almost all religions assume the existence of God. But there is no scientific basis for that belief. Therefore belief in God is superstition?

          ಉತ್ತರ
  3. Salam Bava
    ಏಪ್ರಿಲ್ 24 2016

    ಯಾವುದರ ಕಲ್ಪನೆಗೆ ವಿರುದ್ಧವಾಗಿರುವ ನಂಬಿಕೆಗಳನ್ನು ಮೂಢನಂಬಿಕೆ ಎನ್ನುವದು”

    Science is the ultimate system of truth. Anything that contradicts science is ಮೂಢನಂಬಿಕೆ. A man’s caste must not decide whether to accept his words as truth or not like in a brahmanical system.

    ಉತ್ತರ
  4. Salam Bava
    ಏಪ್ರಿಲ್ 24 2016

    “we bramhins have our own belief and rituals”

    Just because you’re a brahmin should your belief be given the status of immutable truth? What has veracity of a belief got to do with caste hierarchy? The only thing that matters is whether your belief holds itself under scientific scrutiny. Can you prove scientifically that your parents indeed come as crows on the day of Shraddha to eat pinda?

    ಉತ್ತರ
  5. ಏಪ್ರಿಲ್ 24 2016

    Simple answer. Whatever is not scientific is ಮೂಢನಂಬಿಕೆ. => science ಗೂ ಹಿಂದೂಯಿಸಂ ಗೂ ಏನು ಸಂಬಂಧ? ಕ್ರಿಶ್ಚಿಯನ್ನಿಗೆ ಬೈಬಲ್ಲಿನಲ್ಲಿ ಇಲ್ಲದ ಅಂಶವು ಮೂಢನಂಬಿಕೆ, ಮುಸ್ಲಿಮರಿಗೆ ಕುರಾನಿಗೆ ವಿರುದ್ಧವಾದ ನಂಬಿಕೆಯು ಮೂಢನಂಬಿಕೆಯಾಗುತ್ತದೆ? ಆದರೆ ಹಿಂದೂಗಳಿಗೆ ಮಾತ್ರ ವಿಜ್ಞಾನವೇಕೆ? ಈ ಪ್ರಶ್ನೆಯನ್ನು ಇನ್ನೊಂದು ರೀತಿಯಲ್ಲಿ ಕೇಳುವದಾದರೆ ಹಿಂದೂಗಳಷ್ಟೇ scientific ನಂಬಿಕೆಗೆ ಲಕ್ಷ್ಯ ಕೊಡಬೇಕು? ಮುಸ್ಲಿಮರೂ, ಕ್ರಿಶ್ಚಿಯನ್ನರೂ ವಿಜ್ಞಾನಕ್ಕೆ ಬದ್ಧವಾಗಿರುವ ನಂಬಿಕೆಗಳನ್ನು ಹೊರತುಪಡಿಸಿ ಉಳಿದದ್ದನ್ನು superstition ಎಂದೇಕೆ ಪರಿಗಣಿಸುವದಿಲ್ಲ?

    ಹಿಂದೂಗಳಷ್ಟೇ ಏಕೆ ವಿಜ್ಞಾನವನ್ನು ಮಾನದಂಡವಾಗಿಟ್ಟುಕೊಳ್ಳಬೇಕು? ಉಳಿದವರು ಏಕಲ್ಲ?

    ಉತ್ತರ
    • ಏಪ್ರಿಲ್ 24 2016

      ಸಲಾಂ ಬಾಬಾ,
      ನಿನ್ನ ಧರ್ಮದಲ್ಲಿ ಹಂದಿ ಸತ್ತು ಬಿದ್ದಿದೆ. ಅದನ್ನು ಎತ್ಾಕು.ಆಮೇಲೆ ಹಿಂದೂ ಧರ್ಮದ ನೊಣ ತೋರಿಸುವಿಯಂತೆ.

      ಉತ್ತರ
      • Salam Bava
        ಏಪ್ರಿಲ್ 25 2016

        My religion is universal brotherhood.

        ಉತ್ತರ
    • Salam Bava
      ಏಪ್ರಿಲ್ 25 2016

      “ಹಿಂದೂಗಳಷ್ಟೇ ಏಕೆ ವಿಜ್ಞಾನವನ್ನು ಮಾನದಂಡವಾಗಿಟ್ಟುಕೊಳ್ಳಬೇಕು? ಉಳಿದವರು ಏಕಲ್ಲ?”

      Science has no religious or casteist barriers. Science is for all humans. Hindus should junk superstitions and develop scientific attitude like rest of the world. Otherwise india will remain in middleages celebrating widow burning and other heinous practices.

      ಉತ್ತರ
      • ಏಪ್ರಿಲ್ 25 2016

        Hindus should junk superstitions and develop scientific attitude like rest of the world. Otherwise india will remain in middleages celebrating widow burning and other heinous practices. =>

        ನಾನು ಕೇಳಿದ ಪ್ರಶ್ನೆಗೆ ನೀವು ಉತ್ತರಿಸಲಿಲ್ಲ. If sience has no religious or caste barriers then even christian and muslims of India who constitutes 25% of Indian population also should keep science as a standard for deciding superstitious beliefs. So my question is still unanswered.

        “ಹಿಂದೂಗಳಷ್ಟೇ ಏಕೆ ವಿಜ್ಞಾನವನ್ನು ಮಾನದಂಡವಾಗಿಟ್ಟುಕೊಳ್ಳಬೇಕು? ಮುಸ್ಲಿಮರು ಕ್ರಿಶ್ಚಿಯನ್ನರು ಏಕಲ್ಲ? ೨೫% ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಲ್ಲಿರುವ ಅವೈಜ್ಞಾನಿಕ ನಂಬಿಕೆಗಳಿಂದ ಭಾರತವು ಹಿಂದುಳಿದಂತಾಗುವದಿಲ್ಲವೇ ನಿಮ್ಮ ವಾದದ ಪ್ರಕಾರ?

        ಉತ್ತರ
        • Salam Bava
          ಏಪ್ರಿಲ್ 25 2016

          Why do you resort to relativistic argument to defend your indefensible stand? Yes everyone including Hindus must junk superstitions and develop scientific thinking. Science has no religion. But Hindus being majority must take significant steps to inculcate rationality in Hindus. Hiriyakkana chaali maneyavrige.

          ಉತ್ತರ
          • vinayak hampiholi
            ಏಪ್ರಿಲ್ 25 2016

            First of all can you tell me who is a HINDU?? We will fix the superstitions of hindus later.. Please define who is HINDU. I need one line definition like how we define christians and muslims

            ಉತ್ತರ
          • ಏಪ್ರಿಲ್ 25 2016

            Definition of Christian: one who follows the religion based on the person and teachings of Jesus Christ, or its beliefs and practices.

            Definition of Muslim: one who follows the religion of monotheistic faith regarded as revealed through Muhammad as the Prophet of Allah.

            Like wise how can you define the hinduism and who is a hindu???

            ಉತ್ತರ
            • Salam Bava
              ಏಪ್ರಿಲ್ 25 2016

              All this twist and turn argumentative technique might win you some awards in the school of vittanda vaada but has no relevance to the original question you asked. I’ve told you what superstitions are and why beliefs associated with rituals like Shradha are superstitions. Do you agree with me on that? There’s no need to break head on definition for Hindu.

              ಉತ್ತರ
              • ಏಪ್ರಿಲ್ 25 2016

                I agree with your view. But, you seem not to think of superstitions in other religions. There is no religion without superstition. Period.

                ಉತ್ತರ
                • Salam Bava
                  ಏಪ್ರಿಲ್ 25 2016

                  At least someone is honest to admit openly that he agrees with me! Thank you Sir!

                  Coming to your question, please note that Hampiholi’s teacher Balagangadhar has claimed that Hinduism is not a religion. But it’s full of superstitions. Take any practice or ritual of Brahmins. You’ll find that they have associated set of beliefs. Ask which of these beliefs stand scientific scrutiny.

                  ಉತ್ತರ
              • ಏಪ್ರಿಲ್ 25 2016

                So you mean to say, you have just listed some activities in Hinduism and those are superstition because you are telling so….

                In order to decide something as proper belief or blind-belief we need a standard and yet you have not yet given a single reason why science has to be brought here as standard? Science does not assume any God or super natural power. So why should we bring science which has nothing to do with concept of god in between the traditions which agree with super natural power?

                Does believing that god has a will itself a blind belief as per scientific approach which all religions like christianity, judaism and islam has?

                ಉತ್ತರ
                • Salam Bava
                  ಏಪ್ರಿಲ್ 25 2016

                  Don’t shift goal posts and keep jumping from one point to another. Just answer one simple question. Do you believe that your deceased parents come in the form of crows on the day of Shradha? Is there any scientific basis for such beliefs?

                  ಉತ್ತರ
                  • ಏಪ್ರಿಲ್ 29 2016

                    ಸಲಾಂ ಸಾಬಿಯೇ,ನೀನು ಮೊದಲು ಹಿಂದೂ ಧರ್ಮವನ್ನು ಕಾಯಾ ವಾಚಾ ಮನಸಾ ಆಚರಿಸುವ. ಆಮೇಲೆ ಅದರ ನಂಬಿಕೆಗಳ ಪ್ರಸ್ತುತಿಯನ್ನು ಪ್ರಶ್ನೆ ಮಾಡು. ದೂರದ್ಲಿ ಹಂದಿ ಮೇಲೆ ಕೂತು ಕೊಚ್ೆಲಿ ಉರುಳಡಿಕೊಂಡು ಎಲ್ಲಾರೂ ನನ್ನಹಂಗೆ ಕೊಚ್ಚೇಲೇ ಇಱ್ತಾರೆ ಅನ್ಕೋಬೇಡ.

                    ಉತ್ತರ
              • ಏಪ್ರಿಲ್ 25 2016

                I’ve told you what superstitions are and why beliefs associated with rituals like Shradha are superstitions. => As per your logic there is no scientific basis for Shraddha so its superstition.

                Well.. which laws of physics agree that God can create the universe in 7 days?
                which biological theories agree that all living beings including man came into existance just after the creation of universe?

                So isn’t the 70% of the world (which constitutes christianity and islam) under superstitious beliefs???

                ಉತ್ತರ
                • Salam Bava
                  ಏಪ್ರಿಲ್ 25 2016

                  Yes many people believe in many theories of evolution which don’t have scientific basis. Hindu theory of evolution as expoused by Purusha Sukta is completely unscientific.

                  ಉತ್ತರ
                  • ಏಪ್ರಿಲ್ 25 2016

                    Yes many people believe in many theories of evolution which don’t have scientific basis. => Thats it. People of India are free to believe according to their wish. Purusha sukta is one among them. What is the point of bringing science which has nothing to do with the beliefs? The sun never sets at west, we all know that. But is this enough reason to say why we should not write a poem to describe the beauty of the sunset scene???

                    Don’t shift goal posts and keep jumping from one point to another. => In this article, there is not a single mention of Shraddha. This article is about the effects of mis-interpretation of Indian traditions as Hindu religion. You shifted the discussion from mis-interpretation issue to shraddha as a superstition. Only you are eligible to shift the goal? why not me? In fact I am trying to bring the discussion back to the mis-interpreation by comparing and bringing out the difference semetic religion and indian traditions.

                    Well my questions are still not answered by you: I am listing them here.

                    1. Sicence does not believe in god, so how can we (hindus) set scientific enquiry as a standard to determine which one is proper belief or superstition. If so, try to find out at least 5 beliefs which are scientific in christianity and islam, later you can also list out 5 scientifically tested beliefs in Hinduism too. Because one who accepts only scientific beliefs of a religion should not hesitate to put all religions including his into fray.. correct??

                    2. The way with which we can define satisfactorily that who is christian and who is muslim, what are the necessary and sufficient conditions to define one person as HINDU and HINDUISM?

                    ಉತ್ತರ
  6. ಏಪ್ರಿಲ್ 24 2016

    ಶ್ರೀಯುತ ಸಲಾಂ ಬಾವಾ ಅವರೇ, ಮೂಢನಂಬಿಕೆ ಎಂದರೇನು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಓದಿರಿ: https://nilume.net/2015/05/08/%E0%B2%B5%E0%B3%88%E0%B2%9C%E0%B3%8D%E0%B2%9E%E0%B2%BE%E0%B2%A8%E0%B2%BF%E0%B2%95-%E0%B2%AE%E0%B2%A8%E0%B3%8B%E0%B2%A7%E0%B2%B0%E0%B3%8D%E0%B2%AE-%E0%B2%8E%E0%B2%82%E0%B2%A6%E0%B2%B0%E0%B3%87%E0%B2%A8/

    ಉತ್ತರ
    • ಏಪ್ರಿಲ್ 25 2016

      ಸಾಬಿ ಸಲಾಂ ಬಾವಾ ತನ್ನ ಎಲೆಯ ಮುಂದೆ ಸತ್ತಿರುವ ಹಂದಿಯನ್ನು ಎತ್ತಾಕಿಲ್ಲ. ಇವನ ಧರ್ಮ universal brotherhood ಅಂತೆ. ಕಂಡವರನ್ನು ಕೊಲ್ಲುವ, ಮೂರು ಕೂಗಿನಲ್ಲಿ ತಲಾಕ್ ಕೊಡುವ,ಐದಾರು ಹೆಂಡ್ರು ಕಟ್ಟಿಕೊಳ್ಳುವ,ಲವ್ ಜಿಹಾರ್ ಹೆಸರಲ್ಲಿ ಕಂಡವರ ಹೆಣ್ಣು ಮಕ್ಕಳ ಜೀವನದ ಜತೆ ಚಲ್ಲಾಟ ಆಡುವ, ದೇವಾಲಯ ಧ್ವಂಸಮಾಡಿ ಲೂಟಿಹೊಡೆಯುವ,ಪುರಾತನ ಪಳೆಯುಳಿಕೆಗಳನ್ನು ನಾಶಮಾಡುವುದನ್ನು ಕಲಿಸುವ ಇವನ ತರಕಲಾಂಡಿ ಧರ್ಮದ ಬಗ್ಗೆ ಒಂದೇ ಒಂದು ತಪ್ಪೊಪ್ಿಗೆ ಹೇಳಿಕೆಯನ್ನು ಬರೆಯಲಾಗದ ಮತಾಂಧನಾದ ಇವನು ಇತರರ ಆಚರಣೆಯ ಬಗ್ಗೆ ಟೀಕೆ ಟಿಪ್ಪಣಿ ಮಾಡ್ತಾನೆ ಆಷಾಢಭೂತಿ. ದನ ತಿನ್ನಬಹುದಾದರೆ ಹಂದಿ ಯಾಕೆ ತಿನ್ನೊಲ್ಲ? ಅದು ಮೂಢನಂಕೆಯಲ್ಲವೋ? ಕಲ್ಲುಹೊಡೆದರೆ ಸೈತಾನ ಓಡಿಹೋಗುತ್ತಾನೋ? ಗೊಂಡು,ಬಾಂಬು ಹಾಕಿದರೆ? ಬಕ್ರೀದಿನಲ್ಲಿ ಅನ್ಯಾಯವಾಗಿ ಕುರಿಗಳ ಮಾರಣಹೋಮ ಮಾಡ್ತಾರೆ,ಬಂದ ಪುಂಗಿದಾಸ,ಬೊಗಳೆ ಹೊಡೆಯೋಕೆ.

      ಉತ್ತರ
  7. Salam Bava
    ಏಪ್ರಿಲ್ 26 2016

    “What is the point of bringing science which has nothing to do with the beliefs?”

    Your understanding of science and religion is badly exposed by this statement. Read the history of science in Europe. Copernicus Galileo Church.

    ಉತ್ತರ
    • ಏಪ್ರಿಲ್ 26 2016

      What Church did to Copernicus does not answer my question. my questions and its analogy is still open:

      1. What is the point of bringing science which has nothing to do with the beliefs? Assume that I am a science teacher. But I have the habit of writing poems. Should I put my poem which I had written on the beauty of the sun-set in Agumbe to scientific scrutiny as we cannot prove scientifically that there is sunset and there is beauty in sunset?

      2. he way with which we can define satisfactorily that who is christian and who is muslim, what are the necessary and sufficient conditions to define one person as HINDU and HINDUISM?

      ಉತ್ತರ
      • Salam Bava
        ಏಪ್ರಿಲ್ 28 2016

        “science which has nothing to do with the beliefs”

        When the beliefs are given the status of truth and actions are based on them, Science has a role to junk false beliefs.

        ಉತ್ತರ
        • vinayak hampiholi
          ಏಪ್ರಿಲ್ 28 2016

          When the beliefs are given the status of truth and actions are based on them, Science has a role to junk false beliefs. => OK. So with this knowledge of science and its importance please answer the below questions.

          1. I am a science teacher. But I have the habit of writing poems. Should I put my poem which I had written on the beauty of the sun-set in Agumbe to scientific scrutiny as we cannot prove scientifically that there is sunset and there exists something called as beauty?

          2. The way with which we can define satisfactorily that who is christian and who is muslim, what are the necessary and sufficient conditions to define one person as HINDU and HINDUISM?
          With all the method of science and scientific approach prove that HINDUISM exists and we can define it in the way we can define Christianity and ISLAM

          I am simply repeating my questions because you are not even trying to answer my questions. I hope you will not make me to repeat them.

          ಉತ್ತರ
          • Salam Bava
            ಏಪ್ರಿಲ್ 29 2016

            Conflation of categories doesn’t help. Fact is there are beliefs associated with Shradha. These beliefs are accorded the status of truth. Hence they ought to be scientifically proven or junked.

            ಉತ್ತರ
            • ಕಾಮ್ರೇಡ್ ಕನ್ನಯ್ಯ
              ಏಪ್ರಿಲ್ 29 2016

              ok. Let’s JUNK you then 😉

              ಉತ್ತರ
            • WITIAN
              ಏಪ್ರಿಲ್ 29 2016

              Hey Haram, don’t show your broken “junk” here!

              ಉತ್ತರ
              • Salam Bava
                ಏಪ್ರಿಲ್ 29 2016

                Hey troll! shoo..

                ಉತ್ತರ
                • WITIAN
                  ಏಪ್ರಿಲ್ 30 2016

                  Hey exhibitionist Haram, shoo…

                  ಉತ್ತರ
            • vinayak hampiholi
              ಏಪ್ರಿಲ್ 29 2016

              So Shall I conclude that you are running away from my questions as you are unable to answer them? Last time:

              1. I am a science teacher. But I have the habit of writing poems. Should I put my poem which I had written on the beauty of the sun-set in Agumbe to scientific scrutiny as we cannot prove scientifically that there is sunset and there exists something called as beauty? If a poet feels so, then why not a brahmin doing shraddha?

              2. The way with which we can define satisfactorily that who is christian and who is muslim, what are the necessary and sufficient conditions to define one person as HINDU and HINDUISM?

              3. With all the method of science and scientific approach can you prove that HINDUISM exists and we can define it in the way we can define Christianity and ISLAM?

              ಉತ್ತರ
              • Salam Bava
                ಏಪ್ರಿಲ್ 29 2016

                1. It’s you who’s beating around the bush. Let me repeat again for your sake: fct is there are beliefs associated with Shradha. These beliefs are accorded the status of truth. Hence they ought to be scientifically proven or junked.

                2. Bringing in beauty in to the discussion has weakened your case already. Beauty has no bearing on the specific points I made on beliefs associated with Shradha. Ask Hegdeji if I’m wrong.

                3. By bringing in Islam you’ve conceded that Hinduism is a religion like Islam. otherwise you should have been able to answer my questions on beliefs associated with Shradha without recoursing to Islam.

                4. Indian constitution and Hindu code of law has no ambiguity about who a Hindu is and what Hinduism is. Consult your nearest constitutional lawyer.

                ಉತ್ತರ
                • Salam Bava
                  ಮೇ 1 2016

                  Hampiholi, when the hollowness of your argument has been exposed, you remain silent and send your mongrels to attack. Is this the Vedic way of conducting scholarly argumentation?

                  ಉತ್ತರ
                  • WITIAN
                    ಮೇ 1 2016

                    Vedic way of conducting scholarly argumentation….Dude, don’t strain your already fried brain. As I have said before, scholarly discussion is for scholars, you are clearly not a scholar. Argumentation… huh..the whole comment box is at the risk of this heavyweight. You are the one who is having an ‘argument’, not Hampiholi. He has (needless to say ‘decently’) raised some questions. You cannot answer those questions because, obviously, either you are dumb, or don’t understand English (as is obvious again, from your wonderful English), or worse, your bloated ego is not allowing to accept you’re wrong! If I am Hampiholi’s mongrel, what are you, molly of the Prophet?

                    ಉತ್ತರ
                    • Salam Bava
                      ಮೇ 2 2016

                      “I am Hampiholi’s mongrel”

                      I had correctly guessed this. Shame on you Hampiholi, you can’t win a debate online by unleashing trolls on your opponents. No doubt you’re a sanskari writer. If u have guts answer my questions and don’t hide behind trolls.

                      Rao, Whitian and other mongrels, shoo shoo.

                  • ಮೇ 2 2016

                    ಸಲಾಂ ಸಾಬಿಯೇ, ಮೂರ್ಖನಿಗೆ ಬುದ್ಧಿಯನು ನೂರ್ಕಾಲ ಹೇಳಿದರೆ…. ಅಂತ ವಿನಾಯಕ ಸುಮ್ಮನೆ ಆಗಿರಬೇಕು. ನಿನ್ನ ಇಸಿ-ಲಾಂ ಜಗದಾದ್ಯಂತ ಕಿಸಿಯುತ್ತಿರುವ ಕರ್ಮಕಾಂಡ ನೋಡಿ ನಿನ್ನ ಜನ್ಮಕ್ಕೆ ನಾಚಿಕೆಯಾಗಬೇಕು.
                    ಅಷ್ಟು ಹೇಳಿದರು ತಿಳಿಯದ ನಿನ್ನ ಇಸಿಲಾಂ ತಲೆಯಲಿ ಮೆದುಳಿಲ್ಲ- ಇಸಿಯೇ.

                    ಉತ್ತರ
                • WITIAN
                  ಮೇ 1 2016

                  Constitutional lawyer.. there are people who are called constitution experts, who sometimes also happen to be lawyers! Looks like Haram Bawa is inventing new term with every comment!

                  ಉತ್ತರ
                  • WITIAN
                    ಮೇ 2 2016

                    This guy is a gone case. I though only his English is bad. Now I am sure his eye sight is bad, too! Hey you, Haram Bawa, MOLLY of the Prophet, I had written “IF I am a mongrel of Hampiholi”.. Go and get a shave/ haircut so that the beard you’ve grown will be removed from your eyes. By the way, do you even know what a MOLLY is? I am sure you will start jumping when you get to know..And of course,

                    ಉತ್ತರ
                    • WITIAN
                      ಮೇ 2 2016

                      And BTW, Haram Bawa aka molly of the prophet, I am WITIAN (NOT whitian as you have written). It looks like your madrasah hasn’t done a good job in teaching English, so take some more time to read before you comment (I can visualize your hands shaking when you start typing)

            • ಏಪ್ರಿಲ್ 29 2016

              Wrong,cruel,outdated, superstitious practice is to kill sheep,make Galapagos by bleeding to slow death. Accept openly first that this should be banned. Then talk about shraddha.
              While shraddha feeds animals, your kill them.sooooo inhuman

              ಉತ್ತರ
              • Salam Bava
                ಏಪ್ರಿಲ್ 29 2016

                Hey you bigoted troll! Shoo..

                ಉತ್ತರ
                • ಏಪ್ರಿಲ್ 30 2016

                  ಸಾಬಿ ಸಲಾಂ,ನೀನು ಧರ್ಮಾಂಧತೆಯ,ನೀನೊಬ್ಬನೇ ಅಲ್ಲ,ನಿನ್ನಂಥ ಸಾಬಿಗಳ ಇಡೀ ಶನಿಸಂತಾನವೇ ಧರ್ಮಾಂಧತೆಯ ಹುಣ್ಣುಗಳು. ಉಂಡ ಮನೆಗೆರೆಡು ಬಗೆಯುವ ನಿನ್ನ ಮತಬಾಂಧವರನ್ನು ಜಗದೆಲ್ಲೆಡೆ ನೋಡು.ಅಂಗೈ ಹುಣ್ಣಿಗೆ ಕನ್ನಡಿ ಬೇಕೇ? ಬೇಕಿರಬಹುದು-ಕಾರಣ,ನೀನು ಅಂಧ, ಕೊಚ್ಚೆಯಾ ಹುಳುವಾಗಿ,ಕುರಾನಿನ ಕುರುವಾಗಿ,ಮದರಾಸಾದ ಸಿದ್ರಾಮನಾಗಿ.

                  ಉತ್ತರ
                  • Salam Bava
                    ಏಪ್ರಿಲ್ 30 2016

                    Hampiholi, do u know these trolls – Rao & Whitian? Have u employed them to attack those who point out flaws in your arguments? Your continued silence about their viciousness generously hints your tacit support to their mongrel behaviour. What a farce u have enacted here!

                    ಉತ್ತರ
                    • ಏಪ್ರಿಲ್ 30 2016

                      Hampiholi is a gentleman. Proxy attack is a tool used by traitors like you. While reason doesn’t work with idiots and bigots like you lot,me and witian are resorting to the language you understand!!
                      Listen you moron,
                      Hindu philosophy can not be comprehended by looking superficially by cretins. It has deep roots with ramifications. It has employed social,cognitive and behavioural aspects of learning thousands of years before your infdel group was born. Most, if not all rituals have one or the other valid reasons behind practice. You need to live it,study it, experience it before even scratching the surface. It is an output of years of extreme meditation and thought not like your illiterate leader stealing stuff from old testament preaching violence to get his way. Morons do not understand reason.
                      ಚಂಡಾಲ ದೇವರಿಗೆ ಚಪ್ಪಲಿ ಪೂಜೆಯೇ ಹೊರತು ಪುಷ್ಪಾರ್ಚನೆ ಅಲ್ಲ.

                    • Salam Bava
                      ಮೇ 1 2016

                      “all rituals have one or the other valid reasons behind practice.”

                      Burning of widows in the funeral pyre of their husband, aka Sati, has ‘valid’ reasons! Untouchability and dehumanising of Dalits has ‘valid’ reasons!

                    • Salam Bava
                      ಮೇ 1 2016

                      “You need to live it,study it, experience it”

                      As if he has experienced Sati burning and untouchability himself!

    • ಕಾಮ್ರೇಡ್ ಕನ್ನಯ್ಯ
      ಏಪ್ರಿಲ್ 27 2016

      Salam, why don’t u give example of ur Religion and Science 😛

      ಉತ್ತರ
      • Salam Bava
        ಏಪ್ರಿಲ್ 29 2016

        Come to a Madrasa for education and find out.

        ಉತ್ತರ
        • ಏಪ್ರಿಲ್ 29 2016

          ಬುದ್ಮಾಷ್ ಬುದ್ದಿಜೀವಿಯ ಮುಖವಾಡ ಧರಿಸಿ ಮತಾಂತರದ ಹುನ್ನಾರ ನಡೆಸುವ ಸಲಾಂ ಎಂಬ ಕೊಚ್ಚೆಯ ಕ್ರಿಮಿಯೇ, ಮದರಸಾಗಳು ಮಾನವ ಬಾಂಬು ತಯಾರಿಕೆಯ ಕಾರಖನೆಗಳೆಂಬುದನ್ನು ಅರಿಯೆಯಾ

          ಉತ್ತರ
        • WITIAN
          ಏಪ್ರಿಲ್ 29 2016

          Come to a madrasa for education.. to learn what? That your prophet is pedophile.. (grow a grey beard that’s longer than yourself and f**k a nine year old girl), or how to practice incest (by brainwashing your own son to divorce his bride and get married to her, too – this was done in UP by one of your co-religionists!)?

          ಉತ್ತರ
    • WITIAN
      ಏಪ್ರಿಲ್ 28 2016

      Your exposure to your own religion is at doubt now. You have not answered any of my questions.

      ಉತ್ತರ
      • Salam Bava
        ಏಪ್ರಿಲ್ 28 2016

        I don’t answer questions of scumbugs like you & Sudharshan Rao. If you want answers learn decency from Hampiholi first. Gutter creatures like you have no place in scholarly conversations.

        ಉತ್ತರ
        • WITIAN
          ಏಪ್ರಿಲ್ 29 2016

          Oh I see..! So words like scumbag, gutter creatures are very decent words in your lexicon? I didn’t know your knowledge in English is this good! Where did you get your organ cut? In a mosque or in your backyard? Did they cut your organ only or took your brain too? (even that ‘sunnat’ is not an original observation of Moslems, they barrowed it from Jews). With the fact that you are screaming and squealing like a pig (pun intended), it is obvious you have not read the Qur’an as much any other reader of this forum. Coming back to what Hampiholi is trying to tell you – in decent words, of course – you cannot question the scientific veracity of the practices in Hindu dhrama, while keeping your eyes closed to the conspicuous absence of such approach to your “peaceful” religion! And never mind scholarly conversations! They are for scholars, and you’re certainly not one!

          ಉತ್ತರ
        • ಏಪ್ರಿಲ್ 29 2016

          I am not expecting you to answer.you neither have courage nor humility to accept the reality. We want to poke where it hurts.

          ಉತ್ತರ
          • ಶೆಟ್ಟಿನಾಗ ಶೇ.
            ಏಪ್ರಿಲ್ 30 2016

            “you neither have courage nor humility to accept the reality”

            ಇದೆಂತಹ ದಬ್ಬಾಳಿಕೆ? ವೈದಿಕರಿಗೆ ಪಥ್ಯವಾಗದ ಸತ್ಯಗಳನ್ನು ಚರ್ಚೆ ಮಾಡಲೇ ಬಾರದೆ? ಮನುವಾದವನ್ನು ಮರುಪ್ರಶ್ನಿಸದೆ ಒಪ್ಪಿಕೊಳ್ಳಬೇಕೇ? ಇದು ೨೧ನೆ ಶತಮಾನವೋ ೭ನೆ ಶತಮಾನವೋ?

            ಉತ್ತರ
            • WITIAN
              ಏಪ್ರಿಲ್ 30 2016

              Hey you, vermin calld nag shit, it applies to you too.. Whenever any logical questions are asked, you and your ilk like Haram Bawa try to twist the logic. When questions are asked about your faith, things you hold revered are asked, you guys don’t even bother to answer. Why is asking questions ದಬ್ಬಾಳಿಕೆ? You better keep quiet..ಹರಾಮ ನಿಗೆ ಅಪಥ್ಯವಾದ ವಿಷಯಗಳನ್ನು ಕುರಿತಾದ ಪ್ರಶ್ನೆಗಳಿಗೆ ಉತ್ತರಿಸದೆ ಸುತ್ತಿ ಬಳಸಿ ಅದೇ ಪ್ರಶ್ನೆಗಳನ್ನು ಕೇಳುತ್ತಿರುವಾಗ ನಮ್ಮ ಈ ಪ್ರಶ್ನೆಗಳು ಖಂಡಿತ ಪ್ರಸ್ತುತವಾಗುತ್ತವೆ. ದಮ್ಮಿದ್ದರೆ ಉತ್ತರಿಸಲಿ, ಇಲ್ಲದಿದ್ದರೆ ತುಂಡು ….ಣ್ಣಿ ಮುಚ್ಚಿಕೊಂಡು ಹೋಗಲಿ. ಕತ್ತಿಯ ಮೊನೆಯಲ್ಲಿ ತನ್ನ ಧರ್ಮದ ಅನುಯಾಯಿಗಳ ಸಂಖ್ಯೆಯನ್ನು ಬೆಳೆಸಿದ್ದು, ಸತರ್ಕ ವಾದ-ವಿವಾದವನ್ನು ಜೀವಭಯದ ನೆರಳಿನಲ್ಲಿ ಹೊಸಗಿ ಹಾಕಿದ್ದು ಹರಾಮ ಬಾವಾ ನ ಮತದ ಅನುಯಾಯಿಗಳು… ವೈದಿಕ ಪಂಥದವರಲ್ಲ. ನೀನು ಇದರಲ್ಲಿ ತಲೆ ಹಾಕಬೇಡ ಶಿಟ್ಟಿನಾಗ..

              ಉತ್ತರ

Leave a reply to Salam Bava ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments