ವಿಷಯದ ವಿವರಗಳಿಗೆ ದಾಟಿರಿ

ಮೇ 8, 2015

73

ವೈಜ್ಞಾನಿಕ ಮನೋಧರ್ಮ ಎಂದರೇನು?

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

ವೈಜ್ಞಾನಿಕ ಮನೋಧರ್ಮನಮ್ಮ ಜಗತ್ತು ಎಷ್ಟು ವೈಜ್ಞಾನಿಕವಾಗಿ ಮುಂದೆ ಹೋಗುತ್ತಿದೆಯೋ ನಾವಷ್ಟೇ ಕಂದಾಚಾರಿಗಳಾಗಿ ಹಿಂದುಳಿಯಲು ಬಯಸುತ್ತಿದ್ದೇವೆ. ಕಂದಾಚಾರ ಎನ್ನುವ ಪದವನ್ನು ಕೇವಲ ಅರ್ಥಹೀನ ಆಚರಣೆ ಎಂಬುದಕ್ಕಷ್ಟೇ ಸೀಮಿತಗೊಳಿಸದೆ, ಮೌಢ್ಯ (ಅಜ್ಞಾನ), ಮೂಢನಂಬಿಕೆಗಳ ಮೇಲೆ ಅಚಲ ವಿಶ್ವಾಸ ಮತ್ತು ಕುರುಡುಭಕ್ತಿ, ತನ್ನದಲ್ಲದ ಯಾವ ಚಿಂತನೆಯನ್ನೂ ಒಪ್ಪದೆ ನಿರಾಕರಿಸುವುದು, ಹಾಗೆ ನಿರಾಕರಿಸಲು ವಿತಂಡವಾದ ಒಡ್ಡುತ್ತ ತನ್ನ ಮೂಗಿನ ನೇರಕ್ಕೆ ಕಾರಣಗಳನ್ನು ಕೊಡುವುದು, ವಿಜ್ಞಾನದ ಆಳಜ್ಞಾನ ಇಲ್ಲದಿರುವುದು, ವಿಜ್ಞಾನ ಗೊತ್ತಿದ್ದರೂ ಅರ್ಧಸತ್ಯಗಳನ್ನಷ್ಟೇ ಹೇಳುವುದು, ಒಂದೇ ವಿಷಯದ ಬಗ್ಗೆ ಎರಡುಮೂರು ಸಿದ್ಧಾಂತಗಳಿದ್ದಾಗ, ಅವುಗಳಲ್ಲಿ ಒಂದು ಮಾತ್ರ ನಿಜ ಎಂದು ಯಾವ ಪರೀಕ್ಷೆಗಳಿಲ್ಲದೆ ನಂಬುವುದು – ಇವೆಲ್ಲವೂ ಇರುವ ಒಂದು ಸಂಕೀರ್ಣ ಮನಸ್ಥಿತಿಗೆ ಸಮೀಕರಿಸಲು ಬಳಸಬಹುದಾದ ವಿಶಾಲಾರ್ಥದ ಪದವಾಗಿ ತೆಗೆದುಕೊಂಡಿದ್ದೇನೆ.

ಮೊದಲಿಗೆ “ವೈಜ್ಞಾನಿಕ” ಎಂದರೆ ಏನೆಂದು ನೋಡೋಣ. ವಿಜ್ಞಾನದ ತಳಹದಿ ಇರುವಂಥಾದ್ದು ವೈಜ್ಞಾನಿಕ. ವ್ಯಕ್ತಿಗೆ ಅಥವಾ ಸಮಾಜಕ್ಕೆ ಕೇವಲ ವೈಜ್ಞಾನಿಕ ದೃಷ್ಟಿಯೊಂದೇ ಇರಬೇಕು ಎನ್ನುವ ಯಾವ ನಿಬಂಧನೆಯೂ ಇಲ್ಲ. ವೈಜ್ಞಾನಿಕವಲ್ಲದ ಎಷ್ಟೋ ಸಂಗತಿಗಳು ನಮ್ಮ ಸುತ್ತಮುತ್ತ ಮತ್ತು ಜೀವನದಲ್ಲಿ ಇರಬಹುದು. ಉದಾಹರಣೆಗೆ ಸಾಹಿತ್ಯ. ಒಂದು ಒಳ್ಳೆಯ ಸಾಹಿತ್ಯ (ಇದು ದ್ವಿರುಕ್ತಿ. “ಸಾಹಿತ್ಯ” ಅಂದರೇನೇ “ಹಿತವನ್ನುಂಟುಮಾಡುವಂಥದ್ದು”!) ನಮ್ಮ ಮನಸ್ಸಿಗೆ ನೆಮ್ಮದಿ ಕೊಡುತ್ತದೆ; ಕೆಟ್ಟಸಾಹಿತ್ಯ ವ್ಯಕ್ತಿತ್ವದ ಮೇಲೆ ಋಣಾತ್ಮಕ ಪರಿಣಾಮ ಮಾಡುತ್ತದೆ ಎನ್ನುವುದನ್ನು ವೈಜ್ಞಾನಿಕವಾಗಿ ಪ್ರಯೋಗಗಳ ಮೂಲಕ ಸಾಧಿಸಬಹುದೇನೋ. ಆದರೆ, ಅದೆಲ್ಲವನ್ನು ಆಳವಾಗಿ ಅಭ್ಯಾಸ ಮಾಡಿ ಯಾರೂ ಸಾಹಿತ್ಯ ಬರೆಯುವುದಿಲ್ಲ. ಲೇಖಕ ಮತ್ತು ಓದುಗ – ವಿಜ್ಞಾನದ ಯಾವ ತಲೆಬಿಸಿ ಇಲ್ಲದೆ ಬರೆಯುವ ಮತ್ತು ಓದುವ ಕ್ರಿಯೆಯನ್ನು ಮಾಡಬಹುದು. ಹಾಗಾಗಿ, ಸಾಹಿತ್ಯ ವೈಜ್ಞಾನಿಕತೆಯ ಛತ್ರಿಯಡಿ ಬರಬೇಕಾಗಿಲ್ಲ. ಇನ್ನು, ನಂಬಿಕೆಗಳು – ಇವೂ ಅಷ್ಟೆ, ವೈಜ್ಞಾನಿಕವಾಗಿರಬೇಕಾಗಿಲ್ಲ. ಉದಾಹರಣೆಗೆ ದೀಪಾವಳಿಗೆ ಪಟಾಕಿ ಹೊಡೆಯುತ್ತೇವೆ; ಯುಗಾದಿಗೆ ಬೇವುಬೆಲ್ಲ ತಿನ್ನುತ್ತೇವೆ; ರಂಜಾನ್ ತಿಂಗಳು ಉಪವಾಸವಿರುತ್ತೇವೆ, ಕ್ರಿಸ್‍ಮಸ್‍ಗೆ ಸಾಂತಾಕ್ಲಾಸ್‍ನ ಆಟ ಆಡುತ್ತೇವೆ. ಇವೆಲ್ಲ ಮನುಷ್ಯ ತನ್ನನ್ನು ಖುಷಿಯಾಗಿಟ್ಟುಕೊಳ್ಳಲು ಅಥವಾ ಹಬ್ಬಕ್ಕೆ ವಿಶೇಷತೆಯ ಮೆರುಗು ಕೊಡಲು ಅಳವಡಿಸಿಕೊಂಡಿರಬಹುದಾದ ಆಚರಣೆಗಳು. ಇವನ್ನು ವೈಜ್ಞಾನಿಕತೆಯ ನೆಲೆಯಲ್ಲಿ ನೋಡಬೇಕಾಗಿಲ್ಲ. ದೇವರು – ಎಂಬ ಕಲ್ಪನೆ – ಇದೂ ಅಷ್ಟೆ. ಮನುಷ್ಯನಿಗೆ ಹಲವು ಸಹಸ್ರವರ್ಷಗಳಿಂದ ಸದಾ ಕಾಡುವ ಸಂಗತಿಯಾಗಿ ನಿಂತಿರುವ “ದೇವರು” ಎಂಬ ಪರಿಕಲ್ಪನೆಯನ್ನು ಕೂಡ ವಿಜ್ಞಾನದಡಿ ತರಬೇಕಾಗಿಲ್ಲ. ದೇವರು ಇದ್ದಾನೆ ಅಥವಾ ಇಲ್ಲ ಎನ್ನುವುದನ್ನು ಪ್ರೂವ್ ಮಾಡುವುದು ವಿಜ್ಞಾನದ ಗುರಿ ಅಲ್ಲ. ಒಂದು ಸಂಗತಿ ವಿಜ್ಞಾನದ ಪರಿಧಿಗೆ ಬರುವುದಿಲ್ಲ; ವೈಜ್ಞಾನಿಕ ಅಲ್ಲ ಎನ್ನುವುದರಿಂದಲೇ ಅದರ ಮೌಲ್ಯನಿರ್ಣಯ ಆಗಿಹೋಗುವುದಿಲ್ಲ. ತುಂಬ ಸರಳವಾಗಿ ಹೇಳಬೇಕೆಂದರೆ ವೈಜ್ಞಾನಿಕ ಅಲ್ಲದ್ದು ಅವೈಜ್ಞಾನಿಕ ಸರಿ. ಆದರೆ ನಾವಿಂದು ಕೊಟ್ಟಿರುವ ಮೂಢ, ಬುದ್ಧಿಯಿಲ್ಲದ ಎಂಬರ್ಥದಲ್ಲಿ ಅಲ್ಲ. ಮ್ಯಾರಥಾನ್ ಓಡುವ ಹಿಂದಿನ ದಿನ ಏನೇನು ಆಹಾರ ತೆಗೆದುಕೊಳ್ಳಬೇಕೆಂಬ ವಿಷಯದಲ್ಲಿ ವೈಜ್ಞಾನಿಕನಾದ ನಾನು, ಹಬ್ಬಕ್ಕೆ ಒಬ್ಬಟ್ಟು ತಿನ್ನುವ ವಿಚಾರ ಬಂದಾಗ ವಿಜ್ಞಾನದ ಬಗ್ಗೆ ತಲೆಕೆಡಿಸಿಕೊಳ್ಳದ ಅವೈಜ್ಞಾನಿಕನಾಗುತ್ತೇನೆ.

ನಾನಿನ್ನು ಹೇಳಹೊರಟ ವಿಚಾರಕ್ಕೆ ತಳಹದಿಯಾಗಿ ಕೆಲಸ ಮಾಡುವುದರಿಂದ ಈ ಮೇಲೆ ಹೇಳಿದ ಮಾತುಗಳು ತುಂಬ ಮುಖ್ಯ. ಅಲ್ಲಿನ ಸಾರಾಂಶವನ್ನು ಸಂಕ್ಷಿಪ್ತವಾಗಿ ಹೀಗೆ ಹೇಳಬಹುದು: ನಮ್ಮ ಯೋಚನೆ, ಚಿಂತನೆಗಳಲ್ಲಿ ಮುಖ್ಯವಾಗಿ ಮೂರು ಶಾಖೆಗಳಿವೆ – ವೈಜ್ಞಾನಿಕ, ಅವೈಜ್ಞಾನಿಕ ಮತ್ತು ಮೂಢ. ವಿಜ್ಞಾನದ ಸೂತ್ರ, ಸಮೀಕರಣ, ಪ್ರಯೋಗಗಳಿಗೆ ಅಳವಡಿಸಬಹುದಾದ್ದು ವೈಜ್ಞಾನಿಕ. ಅಂತಹ ಯಾವ ಸೂತ್ರ, ಪ್ರಯೋಗಗಳ ಹಂಗಿಲ್ಲದೆಯೂ ಸ್ವತಂತ್ರವಾಗಿ ಅಸ್ತಿತ್ವದಲ್ಲಿರಬಹುದಾದ್ದು ಅವೈಜ್ಞಾನಿಕ. ವಿಜ್ಞಾನದ ಸೂತ್ರಪ್ರಯೋಗಗಳನ್ನು ಹಾಕಿದಾಗ ಸಂಪೂರ್ಣವಾಗಿ ತಪ್ಪೆಂದು ರುಜುವಾತುಪಡಿಸಬಹುದಾದ ಸಂಗತಿ ಮೌಢ್ಯ. ಇವಿಷ್ಟು ಸರಿಯಾಗಿ ಅರ್ಥವಾದರೆ ನಾವು ಅರ್ಧದಾರಿ ಕ್ರಮಿಸಿಬಿಟ್ಟಾಯಿತು ಎಂದು ತಿಳಿಯಬಹುದು!

ವಿಜ್ಞಾನಿ ಅಂದರೆ ಯಾರು? ನಾವಿಂದು ಸೈಂಟಿಸ್ಟ್ ಎಂಬ ಪದಕ್ಕೆ ಬೇರಾವ ಪರ್ಯಾಯಶಬ್ದ ಸಿಕ್ಕದೆ “ವಿಜ್ಞಾನಿ”ಯನ್ನು ಬಳಸುತ್ತಿದ್ದೇವೆ. ಆದರೆ, ನಿಜವಾಗಿ ನೋಡಿದರೆ, ವಿಜ್ಞಾನವನ್ನು ನಂಬಿ ನಡೆಯುವವನು, ಅದರಲ್ಲಿ ಹೆಚ್ಚು ಶ್ರಮ ಇರುವವನು, ವಿಜ್ಞಾನದ ಮಾರ್ಗವನ್ನು ಸತ್ಯಾನ್ವೇಷಣೆಗೆ ಆರಿಸಿಕೊಳ್ಳುವವನು, ಯಾರೇ ಇರಲಿ, ವಿಜ್ಞಾನಿಯೇ. ಚರ್ಮವನ್ನು ಎಷ್ಟು ಬಿಸಿಯಲ್ಲಿ ಕಾಯಿಸಿದರೆ ಚಪ್ಪಲಿಗೆ ಬೇಕಾದ ಹದ ಸಿಗುತ್ತದೆ ಎನ್ನುವುದನ್ನು ಅನುಭವದಿಂದ ಕಲಿತ ಚಮ್ಮಾರ, ಫಿಸಿಕ್ಸ್ ಕಲಿಯದೆ ಇದ್ದರೂ ಪಿಟೀಲಿಗೆ ತಂತಿ ಕೂಡಿಸಿ ಕೊಡಬಲ್ಲ ವಾದ್ಯತಯಾರಕ, ಯಾವ ವರ್ಷ ಕಾಡಿನ ಯಾವ ಮರದಲ್ಲಿ ಜೇನು ತೊನೆಯುತ್ತದೆ ಎನ್ನುವುದನ್ನು ಅಂದಾಜು ಮಾಡಬಲ್ಲ ಕಾಡುಸಿದ್ದ – ಇವರೆಲ್ಲರೂ ವಿಜ್ಞಾನಿಗಳೇ. ಯಾಕೆಂದರೆ, ಇವರೆಲ್ಲ ತಮ್ಮ ನಿರ್ಣಯಕ್ಕೆ ಯಾವುದೋ ಒಂದು ತರ್ಕವನ್ನು ಅವಲಂಬಿಸಿದ್ದಾರೆ. ಆ ತರ್ಕದ ವೈಜ್ಞಾನಿಕ ಹಿನ್ನೆಲೆ ಅವರಿಗೆ ಗೊತ್ತಿಲ್ಲದಿರಬಹುದು, ಆದರೆ ಒಬ್ಬ ನಿಜವಾದ ಸೈಂಟಿಸ್ಟ್ ಅವರ ಈ ತರ್ಕಕ್ಕೆ ಕಾರಣಗಳೇನು, ಯಾವುದು ಆಧಾರ ಎನ್ನುವುದನ್ನು ತರ್ಕಬದ್ಧವಾಗಿ, ವೈಜ್ಞಾನಿಕವಾಗಿ ವಿಶ್ಲೇಷಿಸಿ ಪರೀಕ್ಷಿಸಿನೋಡಬಹುದು. ಆ ಗುಟ್ಟು ಗೊತ್ತಾದ ಮೇಲೆ, ಅದೇ ತರ್ಕವನ್ನು ಬಳಸಿ ಬೇರೆಯವರು ಕೂಡ ಇವರದೇ ದಾರಿಯಲ್ಲಿ ಸಾಗಿದರೆ, ಅವವೇ ಫಲಿತಾಂಶಗಳು ಸಿಗುತ್ತವೆ.

ಅಂದರೆ, ಅತ್ಯಂತ ನಿಖರವಾದ ಮತ್ತು ಪುನರಾವರ್ತಿಸಿ ನೋಡಬಹುದಾದ ತರ್ಕಶುದ್ಧ ವಿನ್ಯಾಸ ಇದೆ ಎನ್ನುವುದು ವಿಜ್ಞಾನದ ಒಂದು ಮೂಲಾಂಶ. ವಿಜ್ಞಾನ ಬೆಳೆದಿರುವುದು ಕೂಡ ಹೀಗೆಯೇ ಅಲ್ಲವೆ? ನ್ಯೂಟನ್ ಸೇಬು ಬೀಳುವುದನ್ನು ನೋಡಿದ; ಹಾಗೆಯೇ ಯಾವುದೇ ವಸ್ತು ಮೇಲಿಂದ ಕೆಳಗೆಯೇ ಬೀಳುತ್ತದೆ ಎನ್ನುವುದನ್ನು ಗಮನಿಸಿದ. ಈ ಕ್ರಮವನ್ನು ತಪ್ಪದ ಯಾವೊಂದು ಸಂಗತಿಯೂ ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡ. ಮೇಲೆ ಚಿಮ್ಮಿದ ಯಾವುದೇ ವಸ್ತು ಕೆಳಬೀಳಲೇಬೇಕು ಎನ್ನುವುದನ್ನು ಪ್ರಯೋಗಗಳ ಮೂಲಕ ದೃಢಪಡಿಸಿಕೊಂಡ ಮೇಲೆ ಗುರುತ್ವಾಕರ್ಷಣ ನಿಯಮ ಕಂಡುಹಿಡಿದ. ಗಮನಿಸಿ: ಮೇಲಿಂದ ವಸ್ತು ಕೆಳಬೀಳುತ್ತದೆ ಎಂದರೆ ಅದು ವಿಜ್ಞಾನವಾಗಲಿಲ್ಲ. ಅದು ಕೇವಲ ಸಿದ್ಧಾಂತ ಆಗುತ್ತದೆ ಅಷ್ಟೆ. ಆದರೆ, ಕಡಿಮೆ ದ್ರವ್ಯರಾಶಿ ಇರುವ ವಸ್ತುವನ್ನು ಹೆಚ್ಚು ದ್ರವ್ಯರಾಶಿ ಇರುವ ವಸ್ತು ಆಕರ್ಷಿಸುತ್ತದೆ. ದ್ರವ್ಯರಾಶಿಯೇ ಆಕರ್ಷಣೆ ಎಂಬ ಹೊಸಶಕ್ತಿ ಹುಟ್ಟಲು ಕಾರಣ. ಇದು ಎರಡು ವಸ್ತುಗಳ ನಡುವಿನ ಅಂತರದ ವರ್ಗಕ್ಕೆ ವಿಲೋಮವಾಗಿರುತ್ತದೆ. ಅಂದರೆ, ತುಂಬ ಹತ್ತಿರದಲ್ಲಿರುವ ವಸ್ತುಗಳ ಆಕರ್ಷಣೆ ಹೆಚ್ಚು; ದೂರ ಹೋದಷ್ಟು ಈ ಸೆಳೆತ ಕಡಿಮೆ. ಚಂದ್ರ ಭೂಮಿಗೆ ಸುತ್ತು ಬರುವುದು, ಭೂಮಿ ಸೂರ್ಯನಿಗೆ ಪ್ರದಕ್ಷಿಣೆ ಹಾಕುವುದು – ಇವೆಲ್ಲ ಗುರುತ್ವದ ಆಟ ಎನ್ನುವುದನ್ನು ಯಾವ ಸಂಶಯಕ್ಕೆ ಎಡೆ ಇಲ್ಲದಂತೆ ತರ್ಕಬದ್ಧವಾಗಿ ಮಂಡಿಸುವುದು ವಿಜ್ಞಾನ. ನ್ಯೂಟನ್ ಕೊಟ್ಟ ಸೂತ್ರವನ್ನು ಬಳಸಿ ಯಾರು ಬೇಕಾದರೂ, ವಿಶ್ವದ ಯಾವ ಮೂಲೆಯಲ್ಲಿ ಬೇಕಾದರೂ ಪ್ರಯೋಗ ಮಾಡಿ ನೋಡಬಹುದು. ಅವರಿಗೆ ಸಿಗುವ ಉತ್ತರ ಒಂದೇ ಆಗಿರುತ್ತದೆ.

ವಿಜ್ಞಾನದ ಬಗ್ಗೆ ಹೇಳುತ್ತಲೇ ಅಲ್ಲಿ ಸಿದ್ಧಾಂತದ ಮಾತು ಬಂತು. ವಿಜ್ಞಾನದ ದಾರಿಯಲ್ಲಿ ಹೋಗುವಾಗ ನಮಗೆ ಪ್ರಯೋಗ ಮತ್ತು ಸಿದ್ಧಾಂತ ಎಂದು ದಾರಿ ಕವಲೊಡೆಯುತ್ತದೆ. “ನೋಡಿ, ನಾನು ಒಂದಷ್ಟು ಪ್ರಯೋಗಗಳನ್ನು ಮಾಡಿದ್ದೇನೆ. ಅವುಗಳ ಆಧಾರದಲ್ಲಿ ಒಂದಷ್ಟು ವಿಚಾರಗಳನ್ನು ಯೋಚಿಸಿದ್ದೇನೆ. ಅವು ಸತ್ಯ ಇದ್ದರೂ ಇರಬಹುದು” ಎಂದು ಹೇಳುವುದು ಸಿದ್ಧಾಂತ. ಉದಾಹರಣೆಗೆ ವಿಶ್ವಸೃಷ್ಟಿ ಒಂದು ಮಹಾಸ್ಫೋಟದಿಂದ ಆಗಿರಬಹುದು ಎನ್ನುವ “ಬಿಗ್‍ಬ್ಯಾಂಗ್” ಒಂದು ಸಿದ್ಧಾಂತ. ವಿಶ್ವದಲ್ಲಿ ಪ್ರತಿಯೊಂದು ವಸ್ತುವಿನ ಚಲನೆಯೂ ಇನ್ನೊಂದಕ್ಕೆ ಸಾಪೇಕ್ಷ. ಕಾಲವನ್ನು ನಾಲ್ಕನೇ ಆಯಾಮವಾಗಿ ತೆಗೆದುಕೊಳ್ಳಬಹುದು; ಮಾತ್ರವಲ್ಲ ಅದನ್ನು ಬೇಕಾದಂತೆ ಬಗ್ಗಿಸಬಹುದು – ತಿರುಚಬಹುದು ಎನ್ನುವ ಐನ್‍ಸ್ಟೈನರ “ರಿಲೇಟಿವಿಟಿ” ವಾದವೂ ಒಂದು ಸಿದ್ಧಾಂತ. ಇವುಗಳನ್ನು ಬೆಂಬಲಿಸುವ ಸಾವಿರ ಪ್ರಯೋಗಗಳು ಇರಬಹುದು; ಆದರೆ, ಇನ್ನೂ ಮಾಡಿನೋಡಬೇಕಾದ ಅಸಂಖ್ಯ ಪ್ರಯೋಗಗಳು ಬಾಕಿ ಇರಬಹುದು. ಅಂತಹ ಎಲ್ಲಾ ಪ್ರಯೋಗಗಳಲ್ಲಿ ಗೆದ್ದುಬಂದ ನಂತರವಷ್ಟೇ ಅವನ್ನು ಪೂರ್ಣವಾಗಿ “ವಿಜ್ಞಾನ” ಎಂದು ಒಪ್ಪಬಹುದು. ಮಾರ್ಗಮಧ್ಯೆ ಯಾವುದಾದರೂ ಪ್ರಯೋಗ ಈ ಸಿದ್ಧಾಂತವನ್ನು ತಪ್ಪು ಎಂದು ಸಾಬೀತುಪಡಿಸಿದರೆ, ಅದಕ್ಕೆ ವಿಜ್ಞಾನ ಎಂಬ ನೆಲೆಯಲ್ಲಿ ಸಿಕ್ಕಿದ ಮಾನ್ಯತೆಯೆಲ್ಲ ಬಿದ್ದುಹೋಗುತ್ತದೆ. ಒಂದಾನೊಂದು ಕಾಲದಲ್ಲಿ “ವಿಜ್ಞಾನ” ಎಂದು ಗುರುತಿಸಲ್ಪಟ್ಟಿದ್ದ “ಭೂಕೇಂದ್ರವಾದ” ಕಿತ್ತೊಗೆಯಲ್ಪಟ್ಟದ್ದು ಹೀಗೆ.

ಇನ್ನು, ಪ್ರಯೋಗಕ್ಕೆ ಅತೀತವಾದ ಸತ್ಯಗಳನ್ನು ಕಾಣಲು ನಾವು ತರ್ಕದ ಮೊರೆ ಹೋಗಬೇಕು. ತರ್ಕ ಎಂದರೇನು? ನಾವು ಯಾವುದನ್ನು ತರ್ಕ ಎಂದು ಒಪ್ಪಬಹುದು? ತರ್ಕಶಾಸ್ತ್ರ ಎನ್ನುವುದು ಗಣಿತದ ಒಂದು ಉಪಶಾಖೆ. ಇದನ್ನು ಗ್ರೀಕರು “ಲಾಜಿಕ್” ಎಂದೂ ಭಾರತೀಯರು “ನ್ಯಾಯ” ಎಂದೂ ಅಭಿವೃದ್ಧಿಪಡಿಸಿದರು. ಗ್ರೀಕರಲ್ಲಿ ಅರಿಸ್ಟಾಟಲ್, ಪ್ಲೇಟೋ, ಪೈಥಾಗೊರಸ್, ಟಾಲೆಮಿ ಮುಂತಾದವರು; ಭಾರತದಲ್ಲಿ ಆಪಸ್ತಂಭ, ಬೋಧಾಯನ, ಗೌತಮ, ನಾಗಾರ್ಜುನ ಮುಂತಾದವರು ಇದನ್ನು ಬೆಳೆಸಿದರು. ಸೂರ್ಯ ಪೂರ್ವದಲ್ಲಿ ಹುಟ್ಟುತ್ತಾನೆ. ಮೊನ್ನೆ, ನಿನ್ನೆ, ಇಂದು ಹುಟ್ಟಿದ್ದಾನೆ; ಹಾಗಾಗಿ ನಾಳೆಯೂ ಸೂರ್ಯ ಹುಟ್ಟುವುದು ಶತಸ್ಸಿದ್ಧ ಎನ್ನುವುದು ಒಬ್ಬರ ಆಲೋಚನೆಯಾದರೆ, ಹಾಗೆ ಆಗಲೇಬೇಕೆಂದಿಲ್ಲವಲ್ಲ! ನಿನ್ನೆಮೊನ್ನೆ ನಡೆದ ಘಟನೆ ನಿನ್ನೆಮೊನ್ನೆ ನಡೆದಿದೆ ಎನ್ನುವ ಕಾರಣಕ್ಕಾಗಿಯೇ ನಾಳೆಯೂ ನಡೆಯಬೇಕು ಎಂದು ಹೇಗೆ ಹೇಳುವುದು? ಎನ್ನುವ ಚಿಂತನೆ ಇನ್ನೊಬ್ಬರದಿರಬಹುದು. ಈ ಇಬ್ಬರ ವಾದವನ್ನು ಪರಿಹರಿಸುವುದು ಹೇಗೆ? ಯಾರ ವಾದ ಸತ್ಯಕ್ಕೆ ಹತ್ತಿರ? ಇಷ್ಟಕ್ಕೂ “ಸತ್ಯ” ಎಂದರೇನು? ನಮ್ಮ “ಕಣ್ಣಿಗೆ” ಕಾಣುವುದು ಮಾತ್ರ ಸತ್ಯವೋ? ಇಂದ್ರಿಯಾನುಭವಕ್ಕೆ ಮೀರಿದ್ದನ್ನು ಸತ್ಯ ಎಂದು ಒಪ್ಪಿಕೊಳ್ಳುವಂತಿಲ್ಲವೆ? – ಇಂತಹ ಪ್ರಶ್ನೆಗಳನ್ನು ಕೇಳುತ್ತ ಚಿಂತನೆಯ ಆಳಕ್ಕೆ ಇಳಿಯುತ್ತ ಹೋದವರು ಹಿಡಿದ ಮೀನು “ತರ್ಕ”. ತರ್ಕವು ಎಷ್ಟು ಪರಿಶುದ್ಧಜ್ಞಾನವೆಂದರೆ ಅದನ್ನು ಯಾವುದೇ ವಿಜ್ಞಾನಕ್ಕೆ ಅಥವಾ ವಿಜ್ಞಾನವಲ್ಲದ ದಿನನಿತ್ಯದ ಸಂಗತಿಗಳಿಗೆ ಬಳಸಬಹುದು. ಗಣಿತಕ್ಕೆ ತಾಯಿಬೇರು ತರ್ಕ. “ಯಾವುದೇ ಕಾರ್ಯ ನಡೆಯಬೇಕಾದರೂ ಅದಕ್ಕೊಂದು ಕಾರಣ ಇರಬೇಕು. ಕಾರಣ ಮುಂದೆ ನಡೆಯುವ ಕಾರ್ಯಕ್ಕೆ ತಕ್ಕ ವೇದಿಕೆ ಒದಗಿಸಿಕೊಡಬೇಕು” – ಇದು ವಿಜ್ಞಾನದಲ್ಲಿ ಬಳಸುವ ತರ್ಕದ ಸಾರಾಂಶ. ಇದನ್ನೇ ಸಂಕ್ಷಿಪ್ತವಾಗಿ “ಕಾರ್ಯಕಾರಣ ಸಂಬಂಧ” ಎನ್ನುವುದು. ಚೆಂಡು ಬೌಂಡರಿಯಾಚೆ ಚಿಮ್ಮಲು ಕಾರಣ, ಅದು ಅಲ್ಲಿಗೆ ಹೋಗಲು ಬೇಕಾದಷ್ಟು ಚಲನಶಕ್ತಿಯನ್ನು ಗಳಿಸಿದ್ದು. ಅದು ಚಲನೆ ಗಳಿಸಲು ಕಾರಣ, ಬ್ಯಾಟು ಬೀಸಿ ಅದಕ್ಕೆ ಶಕ್ತಿಯನ್ನು ಊಡಿದ್ದು. ಬ್ಯಾಟನ್ನು ಮುಟ್ಟಿದೊಡನೆ ಚೆಂಡು ಚಿಮ್ಮಲು ಕಾರಣ, ಅದನ್ನು ಅಷ್ಟೇ ವೇಗದಿಂದ ಬೀಸಿ ಬೌಲಿಂಗ್ ಮಾಡಿದ್ದು.. ಹೀಗೆ ಯೋಚಿಸುತ್ತ ಹೋದರೆ ಪ್ರತಿ ಘಟನೆಗೂ ಹಿಂದೆ ಒಂದು ಕಾರಣದ ಬಲ ಇದೆ ಎನ್ನುವುದು ಗೊತ್ತಾಗುತ್ತದೆ. ಈ ತರ್ಕ ಅನೇಕ ಅನುಮಾನಗಳನ್ನು ಪರಿಹರಿಸಿ ನಮ್ಮ ಬುದ್ಧಿಯನ್ನು ಚುರುಕುಗೊಳಿಸುತ್ತದೆ. “ಚೆಂಡು ಚಿಮ್ಮಿದ್ದಕ್ಕೆ ದೈವವೇ ಕಾರಣ” ಎನ್ನಹೋದರೆ, ನಾವು ಈ ಎಲ್ಲ ಕಾರ್ಯಕಾರಣ ಸಂಬಂಧವನ್ನು ನಿರಾಕರಿಸಿದಂತೆ.

ಶಾಸ್ತ್ರಕ್ಕೂ ವಿಜ್ಞಾನಕ್ಕೂ ಭೇದ ಬರುವುದು ಇಲ್ಲೆ. ಒಬ್ಬರು ಬರೆದಿಟ್ಟದ್ದನ್ನು ಅನುಕರಿಸುವುದು ಶಾಸ್ತ್ರ. ಉದಾಹರಣೆಗೆ ಪತಂಜಲಿ ಬರೆದ ಯೋಗಶಾಸ್ತ್ರ. ಆತ ಬರೆದ ಆಸನಗಳನ್ನು ಚಾಚೂ ತಪ್ಪದೆ ಅದೇ ಕ್ರಮದಲ್ಲಿ, ವಿಧಾನದಲ್ಲಿ ಅನುಸರಿಸಬೇಕು. ಪಾಣಿನಿಯ ವ್ಯಾಕರಣ, ಪಿಂಗಳನ ಛಂದಶ್ಶಾಸ್ತ್ರಗಳೆಲ್ಲ ಈ ಬಗೆಯವು. ಯೂಕ್ಲಿಡನ ಜ್ಯಾಮಿತಿಯೂ ಆ ದೃಷ್ಟಿಯಲ್ಲಿ ಒಂದು ಶಾಸ್ತ್ರವೇ. ಅಲ್ಲಿ ಹಸ್ತಕ್ಷೇಪಕ್ಕೆ ಎಡೆಯಿಲ್ಲ. ಅಂದಮಾತ್ರಕ್ಕೆ ಶಾಸ್ತ್ರ ಗೊಡ್ಡು ಎನ್ನುವ ತೀರ್ಮಾನಕ್ಕೆ ಬರಬಾರದು! ಬರೆದಿಟ್ಟು ಎರಡೂವರೆ ಸಾವಿರವರ್ಷಗಳೇ ಸಂದರೂ ಪಾಣಿನಿಯ ವ್ಯಾಕರಣದಲ್ಲಿ ಒಂದನ್ನಾದರೂ ಅತ್ತಿತ್ತ ಅಲುಗಿಸಬೇಕಾದ ಅಗತ್ಯ ಇದುವರೆಗೆ ಬಂದಿಲ್ಲ; ಯೋಗಶಾಸ್ತ್ರದ ವಿಚಾರದಲ್ಲೂ ಇದು ನಿಜವಿರಬಹುದು ಎಂದುಕೊಂಡಿದ್ದೇನೆ. ಯೂಕ್ಲಿಡನ “ಎಲಿಮೆಂಟ್ಸ್”ಅನ್ನು ಅದೇ ಕ್ರಮದಲ್ಲಿ ಇಂದಿಗೂ ಓದಿ ಜ್ಯಾಮಿತಿಯಲ್ಲಿ ಪಾಂಡಿತ್ಯ ಪಡೆಯಬಹುದು. ಆದರೆ, ಈ ಶಾಸ್ತ್ರವನ್ನು ಆಧಾರವಾಗಿಟ್ಟುಕೊಂಡು ಇನ್ನಷ್ಟು ಬೆಳೆಯಲು ವಿಜ್ಞಾನ ಅವಕಾಶ ಮಾಡಿಕೊಡುತ್ತದೆ. ವಿಜ್ಞಾನದಲ್ಲಿ “ಅಂತಿಮ ನಿರ್ಣಯ” ಎಂಬುದಕ್ಕೆ ಮಾನ್ಯತೆ ಇಲ್ಲ. ವೈದ್ಯಕೀಯದಲ್ಲಿ ನಡೆಯುತ್ತಿರುವ ನೂರಾರು ಸಂಶೋಧನೆಗಳನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಯಾವುದೋ ಕಾಯಿಲೆಗೆ ಕಾರಣವಾದ ಅಂಶ “ಇದೇ” ಎಂದು ಹೇಳಿದ ಐದುವರ್ಷಗಳಲ್ಲಿ ನಮ್ಮ ತಂತ್ರಜ್ಞಾನ, ಪ್ರಯೋಗವಿಧಾನಗಳು ಬೆಳೆದು, ಮಾಡಿದ ಹೊಸ ಪ್ರಯೋಗ ಇನ್ನಾವುದೋ ಕಾರಣವನ್ನು ತೋರಿಸಬಹುದು. ಇಲ್ಲಿ “ಕಾರಣ” ಎಂದು ಗುರುತಿಸುವ ಅಂಶಗಳು ಎಷ್ಟೋ ಸಲ ನಮ್ಮ, ಅಂದರೆ ಮನುಷ್ಯನ ನಿಯಂತ್ರಣಕ್ಕೆ ಒಳಪಡದ ಸಂಗತಿ ಎನ್ನುವುದು ಗಮನೀಯ. ಜ್ವರ ಬಂದಿದೆ ಎಂದು ಮದ್ದು ಕೊಡುವ ವೈದ್ಯ ಸರಿಯಾದ ಪರೀಕ್ಷೆ ಮಾಡಿದರೆ ಮಾತ್ರ ಅದು ಚಳಿಜ್ವರವೋ ಹಂದಿಜ್ವರವೋ ಎಂದು ಗುರುತಿಸಬಲ್ಲ. ಕ್ಯಾನ್ಸರ್ ಬರಲು ನಮ್ಮೊಳಗಿನ ಜೀವಕೋಶಗಳು ಅನಿಯಂತ್ರಿತವಾಗಿ ಬೆಳೆಯುವುದು ಕಾರಣ ಎನ್ನುವುದು ನಮಗೆ ಗೊತ್ತಿದೆ. ಅನೇಕ ಪರೀಕ್ಷೆ-ಪ್ರಯೋಗಗಳಿಂದ ಸಾಬೀತಾದ ಸತ್ಯ ಇದು. ಆದರೆ, ಆ ಜೀವಕೋಶಗಳಿಗೆ ಹಾಗೆ ಬೆಳೆಯುವ ಹುಚ್ಚು ಹತ್ತಿಸುವ ಅಂಶ ಯಾವುದು? ವೈದ್ಯಕೀಯ ವಿಜ್ಞಾನದ ಎಲ್ಲ ಸಲಕರಣೆಗಳನ್ನು ಬೆನ್ನ ಮೇಲೆ ಹೊತ್ತುಕೊಂಡು ಪ್ರಯೋಗಕ್ಕಿಳಿದರೂ ಆ “ಕಾರಣ” ಪತ್ತೆಯಾಗಿಲ್ಲ. ಅಲ್ಲಿಯವರೆಗೆ ನಾವು ಕೊಡುತ್ತ ಹೋಗುವ ಕಾರಣಗಳು ಪೂರ್ತಿಸತ್ಯವೋ ಅರ್ಧಸತ್ಯವೋ ಇರಬಹುದು. ಆದರೆ ಒಂದಂಶವನ್ನು ಇಲ್ಲಿ ಗಮನಿಸಬೇಕು: ವೈದ್ಯಕೀಯಕ್ಕೆ ಕಾರ್ಯಕಾರಣತರ್ಕವನ್ನು ಬೆನ್ನುಹತ್ತಿ ಹೋಗುವ ಛಲ ಇದೆ; ಆ ತರ್ಕದ ನಿರಾಕರಣೆ ಇಲ್ಲ.

ಶಾಸ್ತ್ರ ಸರಿಯಾದ ಸಂಶೋಧನೆಯ ಮೂಲಕ ಮೌಲ್ಯಯುತ ನಿರ್ಣಯಗಳನ್ನು ಕೊಟ್ಟರೆ ಅದನ್ನು ವಿಜ್ಞಾನ ಎಂದೂ ಮಾನ್ಯ ಮಾಡಬಹುದು. ಇನ್ನು ಕೆಲವೊಂದು ಜ್ಞಾನಶಾಖೆಗಳು ಶಾಸ್ತ್ರವಾಗಿ ಹುಟ್ಟಿ ಮುಂದೆ ವಿಜ್ಞಾನವಾಗಿ ಬೆಳೆಯುತ್ತವೆ. ಆಯುರ್ವೇದ ಒಂದು ಉದಾಹರಣೆ. ಅದಕ್ಕೆ ಶಾಸ್ತ್ರಗ್ರಂಥಗಳ ಬೆಂಬಲ ಇದೆ; ಆದರೆ ಅಷ್ಟಕ್ಕೇ ತನ್ನನ್ನು ಸೀಮಿತಗೊಳಿಸದೆ ಹೊಸ ಪದ್ಧತಿ, ಪ್ರಯೋಗಗಳ ಮೂಲಕ ಆಯುರ್ವೇದ ಬೆಳೆಯುತ್ತಿದೆ. ಜ್ಯೋತಿಶ್ಶಾಸ್ತ್ರ (ಂsಣಡಿoಟಿomಥಿ) ಇನ್ನೊಂದು ಉದಾಹರಣೆ. ಅದು ಮೊದಲು ಶಾಸ್ತ್ರವಾಗಿ ಹುಟ್ಟಿದಾಗ, ಅದರಲ್ಲಿದ್ದ ಎಷ್ಟೋ ಕಲ್ಪನೆಗಳು ತಪ್ಪಾಗಿದ್ದವು. ಭೂಮಿಯೇ ವಿಶ್ವಕ್ಕೆ ಕೇಂದ್ರ ಎಂಬ ವಾದದ ಮೇಲೆಯೇ ಇಡೀ ಶಾಸ್ತ್ರ ನಿಂತಿತ್ತು ಎಂದ ಮೇಲೆ ಕೇಳಬೇಕೆ! ಆದರೆ, ಅದರಲ್ಲಿ ಆಳವಾದ ಕೆಲಸ ಮಾಡತೊಡಗಿದವರಿಗೆ ಈ ತೊಡಕುಗಳು ಗಮನಕ್ಕೆ ಬಂದು, ಹಳೆಯ ತತ್ವಗಳನ್ನು ಬದಲಿಸಿ ಹೊಸದನ್ನು ಅಳವಡಿಸಿ, ಒಟ್ಟಾರೆ ಇಡೀ ಶಾಸ್ತ್ರವನ್ನೇ ಥಿಸಿಯಸನ ಹಡಗಿನಂತೆ ಮರುನಿರ್ಮಾಣ ಮಾಡಿದರು. ಅಲ್ಲದೆ, ತಮ್ಮ ಪ್ರತಿ ವೀಕ್ಷಣೆಗೂ ಕಾರ್ಯಕಾರಣದ ಬೆಂಬಲ ಇದೆಯೇ ಎನ್ನುವುದನ್ನು ಅವರು ಕೇಳುತ್ತ ಬಂದದ್ದರಿಂದ, ಆ ಕ್ಷೇತ್ರ ಹೆಚ್ಚು ವೈಜ್ಞಾನಿಕವಾಗಿ ಪರಿಪುಷ್ಟವಾಯಿತು. ಸೂರ್ಯಮಂಡಲಕ್ಕಷ್ಟೇ ಸೀಮಿತವಾಗಿದ್ದ ದೃಷ್ಟಿ ಗ್ಯಾಲಕ್ಸಿಗೆ, ಅದರಾಚೆ ವಿಶ್ವಕ್ಕೆ ಚಾಚಿತು. ಈಗಿನ ಜ್ಯೋತಿರ್ವಿಜ್ಞಾನ “ಅನೇಕ ವಿಶ್ವಗಳ ಸಿದ್ಧಾಂತ”ದವರೆಗೆ ಹೋಗಿ ನಿಂತಿದೆ. ಆದರೆ, ವಿಜ್ಞಾನವನ್ನು ಆಶ್ರಯಿಸಿದ್ದರಿಂದ, ತಾನು ಹೇಳಿದ್ದನ್ನು “ಸಿದ್ಧಾಂತ ಅಷ್ಟೇ. ಪರಮಸತ್ಯವಲ್ಲ” ಎಂದು ಹೇಳುವ ವಿವೇಚನೆ ಅದಕ್ಕೆ ಬಂದಿದೆ.

ಆಗಲೇ ಹೇಳಿದ ಹಾಗೆ, ಈ ನಿಟ್ಟಿನಲ್ಲಿ ನಾವು ಧರ್ಮವನ್ನು ಕೈಗೆತ್ತಿಕೊಂಡರೆ ಅದನ್ನು “ಅವಿಜ್ಞಾನ”ದ ತಕ್ಕಡಿಗೆ ಹಾಕಬೇಕಾಗುತ್ತದೆ. ಯಾಕೆಂದರೆ ಧರ್ಮ ಎನ್ನುವುದು ಸತ್ಯದ ಹುಡುಕಾಟಕ್ಕಿಂತಲೂ ಹೆಚ್ಚಾಗಿ ಮನುಷ್ಯ ಈ ಭೂಮಿಯ ಮೇಲೆ ಹೇಗೆ ಬದುಕಬೇಕು ಎನ್ನುವುದಕ್ಕೆ ಬೇಕಾದ ಚೌಕಟ್ಟನ್ನು ಹಾಕುವ ವ್ಯವಸ್ಥೆ. ಹಾಗೆ ಹಾಕಿದ ಕಟ್ಟುಪಾಡುಗಳನ್ನು ಆಯಾ ಧರ್ಮಗಳು ತಮ್ಮ ಶಾಸ್ತ್ರಗಳ ಮೂಲಕ ಜನರಿಗೆ ಉಪದೇಶದ ರೂಪದಲ್ಲಿ ಹೇಳಿ ಅನುಸರಿಸುವಂತೆ ನೋಡಿಕೊಂಡವು. ಈ ಕಟ್ಟುಪಾಡುಗಳಲ್ಲಿ ಎಷ್ಟನ್ನು ಪ್ರಾಚೀನರು ಕಾರ್ಯಕಾರಣ ಸಂಬಂಧದ ಬೆಳಕಲ್ಲಿ ಪರೀಕ್ಷೆಗೊಳಪಡಿಸಿ ಬರೆದಿದ್ದಾರೆ ಎನ್ನುವುದು ಪ್ರಶ್ನಾರ್ಹ ವಿಚಾರ. ಆದರೆ, ಯಾವುದೋ ಕಾಲದಲ್ಲಿ ಜನರಿಗೆ ಈ ಸಂಪ್ರದಾಯಗಳಿಗೂ ವಿಜ್ಞಾನದ ಗಾಳಿ ಹಾಯಿಸಬೇಕು ಎಂಬ ಆಸೆಯಾಗಿರಬೇಕು. ತಮ್ಮ ಧರ್ಮಗ್ರಂಥಗಳು ಹೇಳುವ ಒಂದೊಂದು ಸಾಲನ್ನೂ ವೈಜ್ಞಾನಿಕ ಎಂದು ಬಿಂಬಿಸಲು ಹೆಣಗತೊಡಗಿದರು. ಬಾಗಿಲಿಗೆ ಮಾವಿನ ತೋರಣ ಕಟ್ಟುವುದು ಒಳ್ಳೆಯದು; ಅದರಿಂದ ಸೊಳ್ಳೆಪಳ್ಳೆಯನ್ನು ದೂರ ಇಡಬಹುದು ಅಂದರು. ಚಿಕ್ಕಮಕ್ಕಳಿಗೆ ಮುಂಜಿ ಮಾಡಿಸುವುದು ಒಳ್ಳೆಯದು; ಅದರಿಂದ ಯೌವನದಲ್ಲಿ ಹಲವು ರೋಗಗಳಿಂದ ದೂರ ಇರಬಹುದು ಎಂದರು. ಏಕಪ್ರಕಾರವಾಗಿ ಮಂತ್ರವನ್ನು ತಾರಕಸ್ಥಾಯಿಯಲ್ಲಿ ಹೇಳುತ್ತ ಹೋದಾಗ ಹುಟ್ಟುವ ತರಂಗಗಳಿಂದ ಮಾನಸಿಕಶಕ್ತಿ ಬೆಳೆಯುತ್ತದೆ ಎಂದರು. ವಿಗ್ರಹಾರಾಧನೆ ಮಾಡುವುದರಿಂದ ಏಕಾಗ್ರತೆ ಹುಟ್ಟುತ್ತದೆಂದರು. ಮುಟ್ಟಾದ ಹುಡುಗಿಯನ್ನು ದೂರ ಇಡುವುದರಿಂದ ಸೋಂಕುರೋಗಗಳನ್ನು ತಡೆದು ಆರೋಗ್ಯ ಕಾಪಾಡಬಹುದೆಂದರು. ವರ್ಷಕ್ಕೊಮ್ಮೆ ತಿಂಗಳುಪೂರ್ತಿ ಉಪವಾಸ ಇರುವುದು ದೇಹಾರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂದರು. ಹೀಗೆ ತಮ್ಮ ಗ್ರಂಥಗಳಲ್ಲಿ ಬಂದದ್ದನ್ನು, ಬಾರದ್ದನ್ನೂ ಸೇರಿಸಿ ವಿಜ್ಞಾನದ ಕೊರಳುಪಟ್ಟಿಗೆ ಬಿಗಿದರು. ಇದನ್ನು ಯಾಕೆ, ಯಾರು, ಯಾವಾಗ ಮಾಡಿದರೆನ್ನುವ ಸಂಶೋಧನೆ ಶುರುಮಾಡಿದವರು ಯಾರೂ ಕೊನೆ ಮುಟ್ಟಿಲ್ಲವಾದ್ದರಿಂದ, ನಾವು ಅದಕ್ಕೆ ಇಲ್ಲಿಂದಲೇ ಕೈಮುಗಿದು ಮುಂದೆ ಹೋಗುವುದು ಒಳ್ಳೆಯದು. ಮೇಲೆ ಹೇಳಿದ ಎಲ್ಲವನ್ನೂ “ಸಂಪ್ರದಾಯ-ನಂಬಿಕೆ-ಶ್ರದ್ಧೆ” ಎಂಬ ನೆಲೆಗಟ್ಟಿನಲ್ಲಿ ನೋಡುವುದಕ್ಕೆ ಏನು ತೊಂದರೆ ಎನ್ನುವುದಕ್ಕೆ ಉತ್ತರವಿಲ್ಲ. ಬಹುಶಃ ಧಾರ್ಮಿಕರು, ತಮ್ಮ ಸಂಪ್ರದಾಯಗಳಿಗೆ ವಿಜ್ಞಾನದ ಮೊಹರು ಇದ್ದರೆ ಒಳ್ಳೆಯದು ಎಂದು ಭಾವಿಸಿದ್ದಾರೋ ಏನೋ. ವಿಜ್ಞಾನ ಎನ್ನುವುದು ಎಲ್ಲಕ್ಕಿಂತ ಶ್ರೇಷ್ಠ; ಅದರ ನಿಕಷಕ್ಕೆ ನಮ್ಮ ತತ್ವಗಳನ್ನೂ ಒಡ್ಡಿಕೊಂಡಿದ್ದೇವೆ ಎನ್ನುವುದು, ಕಂಪೆನಿಗಳು ಐಎಸ್‍ಐ ಮಾರ್ಕನ್ನು ಒತ್ತಿಸಿಕೊಂಡಂತೆ – ಎಂದು ಜನ ತಿಳಿದಿದ್ದಾರೆ ಎನ್ನುವುದಂತೂ ಸ್ಪಷ್ಟ. ಟಿವಿಯಲ್ಲಿ ಬರುವ ಕವಡೆಶಾಸ್ತ್ರಿಗಳು, ಜ್ಯೋತಿಷಿಗಳು, ನ್ಯುಮರಾಲಜಿ ಪಂಡಿತರು – ಎಲ್ಲರೂ ತಮ್ಮ ಶಾಸ್ತ್ರ ವೈಜ್ಞಾನಿಕ ಎಂದು ಬಿಂಬಿಸಲು ಹೆಣಗುವುದನ್ನು ನೋಡಿದಾಗ, ಜನರಿಗೆ ವಿಜ್ಞಾನದ ಬಗ್ಗೆ ಗುಟ್ಟಿನ ಪ್ರೇಮವಿರುವುದು ಕಾಣುತ್ತದೆ.

ಇರಲಿ, ನಮ್ಮ ಚರ್ಚೆ ಧರ್ಮ ಮತ್ತು ವಿಜ್ಞಾನದ ಅಂತರ್‍ಸಂಬಂಧಗಳ ಕಡೆಗೆ ಹೊರಳಿತ್ತು. ಧರ್ಮದಲ್ಲಿ ಬರುವ ಎಷ್ಟೋ ಆಚರಣೆಗಳನ್ನು ಕೇವಲ “ನಂಬಿಕೆ-ಶ್ರದ್ಧೆ” ಎಂಬ ನೆಲೆಗಟ್ಟಿನಲ್ಲಿ ನೋಡುವುದಕ್ಕೆ ಯಾವ ತೊಂದರೆಯೂ ಇಲ್ಲ. ಮತ್ತು ಹಾಗೆ ನೋಡುವುದೇ ಸಾಧು ಕೂಡ. ಧರ್ಮಾಚರಣೆಯನ್ನು ವಿಜ್ಞಾನದ ಕೊರಳಿಗೆ ತಗುಲು ಹಾಕಹೋದಾಗ ನಮಗೆ ಮುಖ್ಯವಾಗಿ ಎದುರಾಗುವುದು “ಕಾರ್ಯಕಾರಣ ಸಂಬಂಧ”ದ ಪ್ರಶ್ನೆ. ಉದಾಹರಣೆಗೆ ಸ್ನಾನ ಮಾಡಿ ಸಂಧ್ಯಾವಂದನೆಗೆ ಕೂತ ವಟು ಗೋಪೀಚಂದನಧಾರಣೆ ಮಾಡುವುದು ಸಂಪ್ರದಾಯ. ಇದನ್ನು ಕೇವಲ ಧಾರ್ಮಿಕ ನೆಲೆಗಟ್ಟಿನಲ್ಲಿ ನೋಡಿದರೆ ಏನೂ ತೊಂದರೆಯಿಲ್ಲ. ಆದರೆ, ಅದಕ್ಕೆ ವೈಜ್ಞಾನಿಕ ಕಾರಣಗಳನ್ನು ಹುಡುಕಿ ತೆಗೆಯುವುದು ಅನವಶ್ಯ ಮಾತ್ರವಲ್ಲ ಅನಾರೋಗ್ಯಕರ ಚರ್ಚೆಗೆ ನಾಂದಿ ಹಾಡಿದಂತೆ. “ಅವಿಜ್ಞಾನ” ಎಂದ ಮಾತ್ರಕ್ಕೆ ಅದು ಕೆಟ್ಟದು ಎಂದು ನಾವೇ ಸ್ವಯಮಾರೋಪ ಮಾಡಿಕೊಂಡಿರುವುದರಿಂದ ಹೀಗಾಗಿದೆ ಎನ್ನಬಹುದೇನೋ. ಮಂಗಳ ಗ್ರಹಕ್ಕೆ ರಾಕೆಟ್ ಕಳಿಸುವ ವಿಜ್ಞಾನಿಗಳು ತಿರುಪತಿ ದೇವರಿಗೆ ಚಿನ್ನದ ರಾಕೆಟ್ ಸಮರ್ಪಿಸಿದ ಸುದ್ದಿಯನ್ನೂ ನಾವು ಇದೇ ನೆಲೆಯಲ್ಲಿ ನೋಡಬೇಕಾಗುತ್ತದೆ. ವಿಜ್ಞಾನಿ ತಿರುಪತಿ ದೇವಸ್ಥಾನಕ್ಕೆ ಹೋಗುವುದು, ಪೂಜೆ ಮಾಡಿಸುವುದು, ಮುಡಿ ಕೊಡುವುದು ಅವನ ಮನಸ್ಸಿನ ಸಮಾಧಾನಕ್ಕೆ ತಾನೆ? ವಿಜ್ಞಾನಿಯಾದ ಮಾತ್ರಕ್ಕೆ ಅವನು ತನ್ನ ನಂಬಿಕೆಗಳನ್ನು-ಶ್ರದ್ಧೆ, ಆಚರಣೆಗಳನ್ನು ಬಲಿ ಕೊಡಬೇಕೆಂದೇನೂ ಇಲ್ಲವಲ್ಲ. ಇಷ್ಟಕ್ಕೂ ದೇವರು ಎಂಬ ಕಲ್ಪನೆಯೇ ವಿಜ್ಞಾನಕ್ಕೆ ಅತೀತವಾದದ್ದು. ಈ ಲೇಖನದ ಪ್ರಾರಂಭದಲ್ಲಿ ಹೇಳಿದಂತೆ, ದೇವರ ಅಸ್ತಿತ್ವವನ್ನು ನಂಬುವುದು ಅಥವಾ ನಿರಾಕರಿಸುವುದು ವಿಜ್ಞಾನದ ಕರ್ತವ್ಯವೇನಲ್ಲ. ರಾಕೆಟ್ ಹಾರಿಸುವ ಮೊದಲು ಕಾಶಿವಿಶ್ವನಾಥನಿಗೆ ಕಾಯಿ ಒಡೆಸಿಕೊಂಡು ಬರುವುದು ಕೇವಲ ನಂಬಿಕೆಯ ಪ್ರಶ್ನೆ. ಆದರೆ, ರಾಕೆಟ್‍ನಲ್ಲಿ ಪೆಟ್ರೋಲ್ ಬದಲು ಗಂಗಾತೀರ್ಥ ತುಂಬಿಸಿ, ದೇವರೇ ಹಾರಿಸಿಯಾನು ಎಂದು ಕಾಯುವುದು ವಿಜ್ಞಾನದ ಅಪಹಾಸ್ಯ ಮತ್ತು ಮೂರ್ಖತನ.

ವಿಜ್ಞಾನ-ಅವಿಜ್ಞಾನಗಳನ್ನು ನೋಡಿದ ನಾವು ಮೌಢ್ಯ ಎಂದರೇನೆಂದು ನೋಡೋಣ. ಮಳೆಗಾಗಿ ಕಪ್ಪೆಮದುವೆ ಮಾಡುವುದು – ಮೌಢ್ಯ. ಯಾಕೆಂದರೆ ಅದು ವಿಜ್ಞಾನದ ಯಾವೊಂದು ಪರೀಕ್ಷೆಯನ್ನೂ ಪಾಸು ಮಾಡುವುದಿಲ್ಲ. ಮಳೆ ಬರುವುದಕ್ಕೂ ಕಪ್ಪೆಗೆ ಮದುವೆ ಮಾಡುವುದಕ್ಕೂ ಕಾರ್ಯಕಾರಣ ಸಂಬಂಧ ಎಲ್ಲಿದೆ – ಎನ್ನುವ ಮೊದಲ ಪ್ರಶ್ನೆಯಲ್ಲೇ ಈ ಪದ್ಧತಿ ನಿರುತ್ತರವಾಗುತ್ತದೆ ಅಲ್ಲವೆ? ವಾಸ್ತು – ಇನ್ನೊಂದು ಮೌಢ್ಯ. ಒಂದು ಮನೆಯ ಕಿಟಕಿ, ಬಾಗಿಲು, ಗೋಡೆಗಳನ್ನು ವ್ಯವಸ್ಥಿತವಾಗಿ; ಗಾಳಿಬೆಳಕಿನ ದಿಕ್ಕುಗಳನ್ನು ನೋಡಿಕೊಂಡು ಕಟ್ಟಿದರೆ, ಮನೆಯಲ್ಲಿ ಹೆಚ್ಚು ಖುಷಿಯಿಂದ ಇರಬಹುದು ಎನ್ನುವುದು ಸರಿ; ಆದರೆ, ದಿಕ್ಕುಗಳು ಮನುಷ್ಯನ ಜೀವನದ ಪ್ರಮುಖಘಟ್ಟಗಳನ್ನು ನಿರ್ಧರಿಸುತ್ತವೆ, ಅವನ ಲಾಭ-ನಷ್ಟಕ್ಕೆ ಕಾರಣವಾಗುತ್ತವೆ ಎನ್ನುವುದಕ್ಕೆ ಕಾರ್ಯಕಾರಣ ಸಂಬಂಧ ಇಲ್ಲ. ಅಲ್ಲದೆ ವಾಸ್ತು, ವಿಜ್ಞಾನವೇ ಆಗಿದ್ದ ಪಕ್ಷದಲ್ಲಿ, ಅದನ್ನು ಅನುಸರಿಸಿದ ನೂರಕ್ಕೆ ನೂರು ಮಂದಿಯೂ ಸುಖಸಂತೋಷದಿಂದ ಬಾಳ್ವೆ ಮಾಡಬೇಕಿತ್ತು. ತನ್ನ ಹೇಳಿಕೆಗಳಿಗೆ ವೈಜ್ಞಾನಿಕ ಆಧಾರ ಇದೆ ಎಂದು ಹೇಳಿಕೊಂಡಮೇಲೂ ಪ್ರಯೋಗದಲ್ಲಿ ತಪ್ಪು ಫಲಿತಾಂಶಗಳನ್ನು ಕೊಡುವ ಶಾಸ್ತ್ರವನ್ನು ಮೌಢ್ಯ ಎನ್ನಬೇಕಾಗುತ್ತದೆ. ಇಲ್ಲಿ ಇನ್ನೊಂದು ಸೂಕ್ಷ್ಮವನ್ನು ಗಮನಿಸಬಹುದು. ತಾನು ಹುಲುಸಾಗಿ ಬೆಳೆಯಲು ಬಂದಣಿಕೆಗೆ ಅರಳಿಯ ಆಸರೆ ಬೇಕಾಗುವಂತೆ, ಕೆಲವು ಮೌಢ್ಯಗಳು ಶುದ್ಧವಿಜ್ಞಾನವನ್ನು ಆಧರಿಸಿಕೊಂಡು ತಮ್ಮ ಬೇಳೆ ಬೇಯಿಸಲು ನೋಡುತ್ತವೆ. ಫಲಜ್ಯೋತಿಷ್ಯ, ವಾಸ್ತು, ಫೆಂಗ್‍ಶುಯಿ, ರೇಖಿ, ಕಾಸ್ಮಿಕ್ ಹೀಲಿಂಗ್, ಸಮ್ಮೋಹಿನಿ ಚಿಕಿತ್ಸೆ, ಯೋಗದ ಹಲವಾರು ಹೊಸ ರೂಪಾಂತರಗಳು – ಇವು ಈ ಪಟ್ಟಿಯಲ್ಲಿ ಬರುತ್ತವೆ. ಭೂಮಿಯಿಂದ ಲಕ್ಷಾಂತರ ಮೈಲಿ ದೂರದಲ್ಲಿರುವ ಗ್ರಹತಾರೆಗಳು ಮನುಷ್ಯನ ದೈನಂದಿನ ಆಗುಹೋಗುಗಳ ಮೇಲೆ ಪರಿಣಾಮ ಬೀರುತ್ತವೆ ಎನ್ನುವುದು, ಮನೆಯಲ್ಲಿ ಅಲ್ಲಲ್ಲಿ ಕಟ್ಟುವ ಸಣ್ಣಪುಟ್ಟ ವಸ್ತುಗಳು ಜೀವನದ ಮಹತ್ತರ ಘಟನೆಗಳಿಗೆ ಕಾರಣವಾಗುತ್ತವೆ ಎನ್ನುವುದು, ಮೋಡಿ ಮಾಡಿ ವ್ಯಕ್ತಿಗೆ ಹಿಂದಿನ ಜನ್ಮದ ನೆನಪು ಹುಟ್ಟುವಂತೆ ಮಾಡಬಹುದು ಎನ್ನುವುದು, ಚಿಕಿತ್ಸೆ ಇಲ್ಲದೆ ಮಾರಣಾಂತಿಕ ರೋಗಗಳನ್ನು ಗುಣಪಡಿಸಬಹುದು ಎನ್ನುವುದು – ಇವೆಲ್ಲ ಕಾರ್ಯಕಾರಣ ಸಂಬಂಧಕ್ಕೆ ಪೂರ್ತಿ ವಿರುದ್ಧವಾದ ಚಿಂತನೆಗಳಾದ್ದರಿಂದ ಅವು “ವೈಜ್ಞಾನಿಕ” ಎಂಬ ಪಟ್ಟಿಯಲ್ಲೂ ಬರುವುದಿಲ್ಲ, ನಾವು ಈ ಲೇಖನದಲ್ಲಿ ಬಳಸಿದ “ಅವೈಜ್ಞಾನಿಕ” ಗುಂಪಲ್ಲೂ ಬರುವುದಿಲ್ಲ. ಅವನ್ನು ಮೌಢ್ಯ ಎಂದೇ ಕರೆಯಬೇಕಾಗುತ್ತದೆ.
ವಿಜ್ಞಾನಕ್ಕೂ ವೈಜ್ಞಾನಿಕ ಮನೋಭಾವಕ್ಕೂ ತುಂಬ ಹತ್ತಿರದ ನಂಟು. ನಾನು ಈ ಮೊದಲು ಹೇಳಿದ “ವಿಜ್ಞಾನಿ”ಗಳಲ್ಲಿ ಈ ಮನೋಭಾವ ಅಂತರ್ಗತವಾಗಿರುತ್ತದೆ. ಬೇರೆಯವರು ಕೂಡ ತುಸು ಪರಿಶ್ರಮಪಟ್ಟರೆ ಇದನ್ನು ಬೆಳೆಸಿಕೊಳ್ಳಬಹುದು. ವೈಜ್ಞಾನಿಕ ಮನೋಭಾವ ಎಂದರೆ “ಏಕೆ” ಎಂಬ ಪ್ರಶ್ನೆಗಳನ್ನು ಕೇಳುತ್ತ, ತರ್ಕಬದ್ಧ ಉತ್ತರಗಳನ್ನು ಅನ್ವೇಷಿಸುತ್ತ ಹೋಗುವ ನಿರಂತರ ಪ್ರಕ್ರಿಯೆ. ಇಲ್ಲಿ ಸತ್ಯಕ್ಕಲ್ಲದೆ ಇನ್ನಾವುದಕ್ಕೂ ತಲೆಬಾಗುವ, ಶರಣಾಗತನಾಗುವ ಅಗತ್ಯವಿಲ್ಲ. ಆದ್ದರಿಂದಲೇ ವಿಜ್ಞಾನದಲ್ಲಿ “ನಾನು ಹೇಳಿದ್ದಷ್ಟೇ ಸತ್ಯ” ಎಂದು ಹೇಳುವ ಪ್ರವಾದಿಗಳಿಲ್ಲ; ಹೀಗೇ ನಡೆಯಬೇಕು ಎಂದು ಕಟ್ಟುಪಾಡು ವಿಧಿಸುವ ಧರ್ಮಗ್ರಂಥಗಳಿಲ್ಲ. ತರ್ಕವಲ್ಲದೆ ಇನ್ನಾವ ಸಿದ್ಧಾಂತಕ್ಕೂ ಮನ್ನಣೆಯಿಲ್ಲ. ಹಾಗೆಂದು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡವನು ಧಾಡಸಿತನದಿಂದ ವರ್ತಿಸಬೇಕೆಂದಿಲ್ಲ. ಎಷ್ಟೋ ಸಂಗತಿಗಳು ಗೊತ್ತಿಲ್ಲದ್ದನ್ನು ಒಪ್ಪಿಕೊಳ್ಳುವ ನಿಗರ್ವವೂ ಆತನಿಗೆ ಇರಬೇಕು. ಉದಾಹರಣೆಗೆ ವಿಶ್ವದ ಬಹುಪಾಲನ್ನು ಆವರಿಸಿರುವ “ಬ್ಲ್ಯಾಕ್ ಮ್ಯಾಟರ್” ಏನೆಂದೇ ಇದುವರೆಗೆ ವಿಜ್ಞಾನಿಗಳಿಗೆ ಗೊತ್ತಾಗಿಲ್ಲ. ಇಡೀ ಕಾಸ್ಮೋಸ್‍ನ ಕೇವಲ 5% ಮಾತ್ರ ಇದುವರೆಗೆ ಕಂಡಿದೆ. ಅದನ್ನು ಒಪ್ಪಿಕೊಳ್ಳಲು ಯಾವ ವಿಜ್ಞಾನಿಯೂ ನಾಚಿಕೆ ಪಡುವುದಿಲ್ಲ. ವೈಜ್ಞಾನಿಕ ಮನೋಭಾವ ಕೊಡುವ ಸಂಸ್ಕಾರ ಇದು.

ವೈಜ್ಞಾನಿಕದೃಷ್ಟಿಯನ್ನು ಯಾಕೆ ಬೆಳೆಸಿಕೊಳ್ಳಬೇಕು? ಅದಿಲ್ಲದೆ ಹೋದರೆ ಏನು ನಷ್ಟ? ಎಂದು ಕೇಳುವವರಿಗೆ ಫೈಯ್ನ್‍ಮನ್ ಎಂಬ ಅಮೆರಿಕನ್ ಭೌತವಿಜ್ಞಾನಿ ಒಂದು ಸುಂದರ ಉತ್ತರ ಕೊಟ್ಟಿದ್ದಾನೆ. ರಸಿಕನೊಬ್ಬ ಅವನೆದುರು ಒಂದು ಗುಲಾಬಿ ಹಿಡಿದು, “ನೋಡಯ್ಯ, ಎಷ್ಟು ಚೆನ್ನಾಗಿದೆ ಈ ಹೂವು! ಅದರ ಸೌಂದರ್ಯ ಆಸ್ವಾದಿಸಲಿಕ್ಕೂ ಕವಿಹೃದಯ ಬೇಕು. ಆದರೆ ನೀವು ವಿಜ್ಞಾನಿಗಳೋ ಅದರ ಪಕಳೆಗಳನ್ನು ಕಿತ್ತು ಸೂಕ್ಷ್ಮದರ್ಶಕದಡಿ ಇಟ್ಟು ಬಗೆಬಗೆಯ ಪ್ರಯೋಗ ಮಾಡಿ ಕೊಂದೇಬಿಡುತ್ತೀರಿ! ಎಂಥ ಅರಸಿಕರಪ್ಪ ನೀವು!” ಎಂದನಂತೆ. ಆಗ ಫೈಯ್ನ್‍ಮನ್ ಹೇಳುತ್ತಾನೆ: “ಗುಲಾಬಿ ಸುಂದರವಾಗಿದೆ ಎಂಬ ಅಂಶ ನನಗೂ ಗೊತ್ತಾಗುವಂಥಾದ್ದೇ. ಒಂದು ಗುಲಾಬಿಯ ಚೆಲುವನ್ನು ಮೆಚ್ಚುವಷ್ಟು ರಸಿಕತೆ ಪ್ರತಿಯೊಬ್ಬನಿಗೂ ಇದ್ದೇ ಇದೆ. ಆದರೆ, ವಿಜ್ಞಾನಿಯಾಗಿ ನಾನು ಕಾಣುವ ಸೌಂದರ್ಯ ಇನ್ನೂ ಹೆಚ್ಚಿನದು. ನಾನು ಆ ಪಕಳೆಗಳ ವಿನ್ಯಾಸ ನೋಡುತ್ತೇನೆ. ಪುಂಕೇಸರ ಹುಟ್ಟಿನಿಂತ ಬಗೆಯನ್ನು ಗಮನಿಸುತ್ತೇನೆ. ಪರಾಗಸ್ಪರ್ಶವೆಂಬ ಸಂತಾನಕ್ರಿಯೆಗಾಗಿ ಪ್ರಕೃತಿ ಎಂಥ ಆಟಗಳನ್ನು ಆಡುತ್ತಲ್ಲ ಎಂದು ವಿಸ್ಮಯಗೊಳ್ಳುತ್ತೇನೆ. ನಿಜಕ್ಕಾದರೆ, ಗುಲಾಬಿಯ ಎಸಳ ಮೇಲೆ ಕೂರುವ ದುಂಬಿಗೆ ಹೂವಿನ ಕೆಂಪು ಗಮನಕ್ಕೆ ಬರುವುದಿಲ್ಲ. ಯಾಕೆಂದರೆ ಅದಕ್ಕೆ ಬಣ್ಣಗುರುಡು. ಆದರೂ ಈ ಗಿಡ ಇಷ್ಟೊಂದು ವರ್ಣಮಯ ಹೂ ಬಿಟ್ಟಿದ್ದು ಯಾಕೆ? ಗಿಡಕ್ಕೂ ಸೌಂದರ್ಯಾಪೇಕ್ಷೆ ಇರಬಹುದೆ ಎಂದು ಚಕಿತನಾಗುತ್ತೇನೆ. ಇವೆಲ್ಲವೂ ಸೌಂದರ್ಯದ ವಿವಿಧ ಆಯಾಮಗಳೇ. ಇವನ್ನು ಯೋಚಿಸಲು ಕೇವಲ ರಸಿಕಹೃದಯ ಇದ್ದರೆ ಸಾಲದು, ವಿಜ್ಞಾನಿಯ ದೃಷ್ಟಿಯೂ ಇರಬೇಕು”. ವೈಜ್ಞಾನಿಕದೃಷ್ಟಿ ಮನುಷ್ಯನನ್ನು ಹೆಚ್ಚು ಮಾನವೀಯವಾಗಿ ಮಾಡುತ್ತದೆ ಎಂಬ ಕಾರಣಕ್ಕಾಗಿಯಾದರೂ ಅದನ್ನು ಬೆಳೆಸಿಕೊಳ್ಳಬೇಕು!

(ಹೊಸತು ಪತ್ರಿಕೆಯಲ್ಲಿ ಪ್ರಕಟಿತ)

ಚಿತ್ರಕೃಪೆ : callagylaw.com

73 ಟಿಪ್ಪಣಿಗಳು Post a comment
 1. hemapathy
  ಮೇ 8 2015

  ನನ್ನ ಪ್ರಕಾರ ಯಾವುದೇ ವಿಷಯವನ್ನಾಗಲೀ ಪರೀಕ್ಷಿಸದೇ, ಹಿಂದುಮುಂದಾಲೋಚಿಸದೇ ನಂಬುವುದು, ಒಪ್ಪುವುದು ಅಥವಾ ಪಾಲಿಸುವುದು ಮೌಡ್ಯತನವಾಗುತ್ತದೆ. ದೇವರು ಅಂದರೆ ಏನು ಅನ್ನುವುದನ್ನು ತಿಳಿಯದೇ 33 ಕೋಟಿ ದೇವರುಗಳನ್ನು ನಾವು ನಮ್ಮ ದೇಶದಲ್ಲಿ ಸೃಷ್ಟಿಸಿದ್ದೇವೆ. ಆದರೆ ಆ ದೇವರನ್ನು ನೋಡಿದವರು ಯಾರೂ ಇಲ್ಲ. ಅಂದ ಮೇಲೆ ನಾವು ದೇವರ ಸೃಷ್ಟಿಯನ್ನು ಹೀಗೆ ಅರ್ಧೈಸಬಹುದು. ಭೂಕಂಪ, ಸುನಾಮಿ, ಸುಂಟರಗಾಳಿ/ಬಿರುಗಾಳಿ, ಅಗ್ನಿ ಪರ್ವತಗಳು ಇಂತಹ ಪ್ರಾಕೃತಿಕ ವಿಕೋಪಗಳಿಗೆ ಹೆದರಿದ ಕಾಡು ಮನುಷ್ಯರು ಈ ಲೋಕದಲ್ಲಿ ಯಾವುದೋ ವಿಶೇಷ ಶಕ್ತಿಯಿರುವುದೆಂದು ಊಹಿಸಿ ಸೃಷ್ಟಿಸಿದ್ದೇ ದೇವರು ಎನ್ನಬಹುದು. ಒಂದೇ ಮಾತಿನಲ್ಲಿ ಹೇಳುವುದಾದರೆ, ನಮ್ಮೆಲ್ಲರ ಕಣ್ಣಿಗೆ ಕಾಣುವ ಪ್ರಕೃತಿ ಮಾತೆಯನ್ನೇ ದೇವರು ಎಂದು ನಾವು ತಿಳಿಯಬಹುದು. ಇನ್ನು ಮಿಕ್ಕಿದ್ದೆಲ್ಲಾ ಮಾನವನ ಊಹಾಪೋಹಗಳಿಂದ ಸೃಷ್ಟಿಯಾದ ಸಂಗತಿಗಳು. ಯಾವುದೋ ವಿಗ್ರಹವನ್ನು, ಕಲ್ಲುಗಳನ್ನು ದೇವರೆಂದು ಪೂಜಿಸುತ್ತಾ, ಸರ್ವಂತರ್ಯಾಮಿ, ಸರ್ವಶಕ್ತ ಎಂದು ಕರೆಯುತ್ತಾ, ಆ ವಿಗ್ರಹದ ಮುಂದೆ ಗೋಲಕವನ್ನಿಟ್ಟು ಹಣವನ್ನು ಸಂಗ್ರಹಿಸಿ ತಮ್ಮ ಐಷಾರಾಮಿ ಜೀವನಕ್ಕೆ ಅದನ್ನು ಉಪಯೋಗಿಸುತ್ತಾ, ಭಕ್ತರೆನ್ನಿಸಿಕೊಂಡ ದಡ್ಡರೆಲ್ಲರೂ ಹೊರಗೆ ಹೋದ ಕೂಡಲೇ ದೇವಸ್ಥಾನಕ್ಕೆ ಬೀಗ ಜಡಿಯುತ್ತಾರಲ್ಲಾ. ಆ ಸರ್ವಶಕ್ತನಿಗೆ ತನ್ನನ್ನು ತಾನು ಕಾಪಾಡಿಕೊಳ್ಳಲಾಗುವುದಿಲ್ಲವೆಂದು ಬೀಗ ಹಾಕಿ ಭದ್ರ ಮಾಡಿ ಆತನನ್ನು ಈ ಹುಲುಮಾನವರು ಕಾಪಾಡಬೇಕಾಗಿದೆಯೆ? ಎಂತಹ ವಿಪರ್ಯಾಸ?

  ಉತ್ತರ
  • rohithmath
   ಮೇ 8 2015

   ಕಾಡುಮನುಷ್ಯರು ಪ್ರಾಕೃತಿಕ ವಿಕೋಪಗಳಿಗೆ ಹೆದರಿ ಇದೆಲ್ಲವನ್ನು ಯಾವುದೋ ಶಕ್ತಿ ನಿಯಂತ್ರಿಸುತ್ತಿದೆ ಎಂದು ಭಾವಿಸಿ, ಆ ಶಕ್ತಿಯನ್ನು ದೇವರು ಎಂದರು – ಎಂಬ ವಾದ ಇದೆ ಸರಿ. ಆದರೆ, ಬುದ್ಧಿ ಚೆನ್ನಾಗಿ ಬೆಳೆದ ಕೆಲ ಆಧುನಿಕ ಚಿಂತಕರು ಕೂಡ ದೇವರು ಎಂಬ ಕಲ್ಪನೆಯನ್ನು ಒಪ್ಪಿದ್ದಾರೆ. ಅದು ಭಯದಿಂದ ಹುಟ್ಟಿದ ತಿಳುವಳಿಕೆ ಅಲ್ಲ. ಎಷ್ಟೋ ಜನ ವಿಜ್ಞಾನಿಗಳು ತಮ್ಮ ಚಿಂತನೆಯ ಅಂತಿಮಘಟ್ಟಕ್ಕೆ ಬಂದುನಿಂತ ಮೇಲೆ, ದೇವರ ಸಾಕ್ಷಾತ್ಕಾರ ಪಡೆದಿದ್ದಾರೆ. ಅವರು “ದೇವರು” ಎಂದು ಏನನ್ನು ಹೇಳುತ್ತಿದ್ದಾರೋ ಅದು ಕೃಷ್ಣ, ಏಸು, ಅಲ್ಲಾ – ಇವರೆಲ್ಲ ಅಲ್ಲ (ಅಥವಾ ಇವರೆಲ್ಲರೂ ಹೌದು!). ಅವರು ಒಂದು ವಿಶ್ವಚೈತನ್ಯದ ಬಗ್ಗೆ ಮಾತಾಡುತ್ತಿದ್ದಾರೆ. ಈ ವಿಶ್ವ ಚೈತನ್ಯವೇ subatomic particlesಗಳನ್ನೂ ನಮ್ಮ ಕಣ್ಣಿಗೆ ಕಾಣದ ಹಾಗೂ ಬುದ್ಧಿಗೆ ನಿಲುಕದ dark matter, dark energyಗಳನ್ನೂ ಆಡಿಸುತ್ತಿದೆ. ವಿಜ್ಞಾನಿಗಳ ಪಾಲಿಗೆ ದೇವರು ಎಂದರೆ ವಿಶ್ವರಹಸ್ಯ. ವಿಶ್ವದ ವಿಷಯಕ್ಕೆ ಯಾಕೆ ಹೋಗಬೇಕು, ನಮ್ಮ ದಿನನಿತ್ಯದ ಜೀವನದಲ್ಲಿ ಅನುಭವಕ್ಕೆ ಬರುವ ಯಕಶ್ಚಿತ್ ಗುರುತ್ವ (gravity)ದ ಬಗ್ಗೆ ಕೂಡ ನಮಗೆ ಇನ್ನೂ ಏನೇನೂ ಗೊತ್ತಾಗಿಲ್ಲ. ಅದರ ಬಗ್ಗೆ ತಿಳಿಯುತ್ತ ಹೋದವನಿಗೆ ಕೊಟ್ಟಕೊನೆಗೆ ಇದೆಲ್ಲದರ ಮಹಾಸೂತ್ರ ಯಾವುದು ಎಂದು ದಿಗ್ಭ್ರಮೆಯಾಗುತ್ತದೆ. ಅದನ್ನು ಅವನು ದೇವರು ಎಂದು ಕರೆಯಬಹುದು. ಸರಳವಾಗಿ ಹೇಳಬೇಕೆಂದರೆ “ದೇವರು” ಎಂಬ ಕಲ್ಪನೆ ಒಬ್ಬೊಬ್ಬರದು ಒಂದೊಂದು ರೀತಿ. ಆದರೆ ಪ್ರತಿಯೊಬ್ಬನೂ ತನ್ನ ತಿಳಿವಿನ ಪರಿಧಿ ಎಲ್ಲೆ ಕೊನೆಯಾಗುತ್ತದೋ ಅಲ್ಲಿಂದ ಆಚಿನ ಲೋಕವನ್ನು ಮಾತ್ರ ದೇವರು ಎನ್ನುತ್ತಾನೆ.

   ಉತ್ತರ
 2. ಮೂರ್ನಾಲ್ಕಂಶ
  ಮೇ 9 2015

  “ಮಳೆ ಬರುವುದಕ್ಕೂ ಕಪ್ಪೆಗೆ ಮದುವೆ ಮಾಡುವುದಕ್ಕೂ ಕಾರ್ಯಕಾರಣ ಸಂಬಂಧ ಎಲ್ಲಿದೆ – ಎನ್ನುವ ಮೊದಲ ಪ್ರಶ್ನೆಯಲ್ಲೇ ಈ ಪದ್ಧತಿ ನಿರುತ್ತರವಾಗುತ್ತದೆ ಅಲ್ಲವೆ?”

  ಉತ್ತರ
 3. ಮೂರ್ನಾಲ್ಕಂಶ
  ಮೇ 9 2015

  ಲೇಖನದ ಓಘದಲ್ಲಿ ಕೆಲವಾರು ತಪ್ಪುಗಳು ನುಸುಳಿವೆ. ಅವುಗಳಲ್ಲಿ ಬಹುತೇಕವು ನಿಮ್ಮ ಕಣ್ತಪ್ಪಿನಿಂದ ಆಗಿದ್ದಿರಬಹುದು. ಜಿಟಿಎನ್ನಾರರ “ವೈಜ್ಙಾನಿಕ ಮನೋಧರ್ಮ” ಎನ್ನುವ ಪುಸ್ತಕದಲ್ಲಿ ನಿಮ್ಮ ಕೆಲವೊಂದು ಗ್ರಹಿಕೆಗಳನ್ನು ಇನ್ನೂ ನಿಖರ-ಸಮಂಜಸಗೊಳಿಸುವ ವಿವರಣೆಗಳು ಸಿಗುತ್ತವೆ ಅಂತ ಅಂದುಕೊಂಡಿದ್ದೇನೆ.

  ಉತ್ತರ
  • rohithmath
   ಮೇ 9 2015

   ಜಿಟಿಎನ್ ವೈಜ್ಞಾನಿಕ ಮನೋಧರ್ಮ ಎಂಬ ಪುಸ್ತಕ ಬರೆದಿದ್ದಾರೆ ಸರಿ. ಆದರೆ ನನ್ನ ಲೇಖನದ ಅಷ್ಟೂ ವಿವರಗಳು ನನ್ನದೇ ಗ್ರಹಿಕೆಗಳು. ಲೇಖನದ base ಆಗಿ ನಾನು ಬಳಸಿಕೊಂಡ ವಿಜ್ಞಾನ – ಅವಿಜ್ಞಾನ – ಮೌಢ್ಯ ಎಂಬ ವಿಂಗಡಣೆಯ ಅಂಶವನ್ನು ನಾನು ಎಲ್ಲಿಂದಲೂ ಕಡ ಪಡೆದಿಲ್ಲ. (ಇಲ್ಲಿ “ಎಲ್ಲವೂ ನನ್ನದೇ” ಎಂಬ ಸ್ವಪ್ರಶಂಸೆ ಇಲ್ಲ. ಬೇರೆಯವರ ಚಿಂತನೆಯ ಪ್ರಭಾವ ಇದೆ ಎಂದು ಓದುಗ ಭಾವಿಸಬಾರದೆಂಬ ಕಾಳಜಿ ಇದೆ ಅಷ್ಟೆ)

   ಕೆಲವಾರು ತಪ್ಪು ನುಸುಳಿವೆ – ಎಂದಿದ್ದೀರಿ. ಯಾವುವು ಎಂದು ತಿಳಿಸಿದರೆ ಚರ್ಚಿಸಬಹುದು.

   ಉತ್ತರ
   • ಮೂರ್ನಾಲ್ಕಂಶ
    ಮೇ 12 2015

    ಕಣ್ತಪ್ಪುಗಳು? :
    >> “ಕಡಿಮೆ ದ್ರವ್ಯರಾಶಿ ಇರುವ ವಸ್ತುವನ್ನು ಹೆಚ್ಚು ದ್ರವ್ಯರಾಶಿ ಇರುವ ವಸ್ತು ಆಕರ್ಷಿಸುತ್ತದೆ.”
    ಸಂಪೂರ್ಣವಾಗಿ ತಪ್ಪು, –ಕಡಿಮೆ ದ್ರವ್ಯರಾಶಿಯವಸ್ತುವಿನ ಚೌಕಟ್ಟಿನಲ್ಲಿ ಕೂತು ನೋಡುವಾಗಲಂತಲೂ!

    >>”ದ್ರವ್ಯರಾಶಿಯೇ ಆಕರ್ಷಣೆ ಎಂಬ ಹೊಸಶಕ್ತಿ ಹುಟ್ಟಲು ಕಾರಣ. ಇದು ಎರಡು ವಸ್ತುಗಳ ನಡುವಿನ ಅಂತರದ ವರ್ಗಕ್ಕೆ ವಿಲೋಮವಾಗಿರುತ್ತದೆ.”
    ತಪ್ಪು. ‘ಶಕ್ತಿ'(ಎನರ್ಜಿ)ಯಲ್ಲ, ‘ಬಲ'(force) ವಿಲೋಮವರ್ಗದನುಪಾತವನ್ನನುಸರಿಸೋದು. ದ್ರವ್ಯರಾಶಿಯ ಇರುವಿಕೆಯಿಂದ ಮೂಲಭೂತವಾಗಿ ಬರುವುದು ‘ಗುರುತ್ವಬಲ'(gravitational force)ವೇ ಹೊರತೂ ‘ಗುರುತ್ವ-ಪ್ರಚ್ಛನ್ನಶಕ್ತಿ'(gravitational potential) ಅಲ್ಲ.

    ಉತ್ತರ
   • ಮೂರ್ನಾಲ್ಕಂಶ
    ಮೇ 12 2015

    ಯಾಕೆ ಅಂತ ಯೋಚಿಸುತ್ತಿದ್ದೆ, ಈಗ ಸ್ವಲ್ಪ ತಿಳಿದಂತಾಯಿತು. ಏನೆಂದರೆ ಈ ಲೇಖನದಲ್ಲಿನ ಬಹುತೇಕ ಹೇಳಿಕೆಗಳು ಜಾಳುಜಾಳಾಗಿವೆ. ಅವು ಸಂಪೂರ್ಣವಾಗಿ ತಪ್ಪಾಗಿರದಿದ್ದರೂ ಭಾಗಶಃ ತಪ್ಪಾಗಿವೆ – ಅರ್ಥಾತ್ inaccurate ಆಗಿವೆ. ಹೀಗೆ ಲೇಖನವು ಅನಾವಶ್ಯಕವಾಗಿ ಗೊಂದಲಗ್ರಸ್ತವಾಗಿರುವುದಕ್ಕೆ, ಬಹುಶಃ, ಹಾಗೆ ನೀವೇ ಹೇಳಿಕೊಂಡಂತೆ ಪೂರ್ವ ಪರಂಪರೆಯ ಕಡೆಗೆ ಗಮನ ಕೊಡದೇ ಬರೆದಿರುವುದೇ ಕಾರಣವಾಗಿರಬಹುದೇನೋ. ‘ವೈಜ್ಞಾನಿಕ ಮನೋಧರ್ಮ’, ‘ವೈಜ್ಞಾನಿಕ’, ‘ವೈಜ್ಞಾನಿಕ ಮನೋಧರ್ಮ’, ‘ಮೌಢ್ಯ’ ಇತ್ಯಾದಿ ಘನವಾದ ಪದಗಳಿಗೆ ಅರ್ಥ-ವಿವೇಚನೆಯ ಪರಂಪರೆ ಇರಬೇಕಾದರೆ ಅದನ್ನು ನಿರ್ಲಕ್ಷಿಸಿ ಬರೆಯುವುದರಲ್ಲಿ ಅಗ್ಗಳಿಕೆಗಳಿಗಿಂತಲೂ ಇರುಳಲ್ಲಿಯೂ ಕಾಣುವಂತಹ ಬಾವಿಗಳಿಗೆ ಹಾಡು-ಹಗಲೇ ಬೀಳುವಂತಹಾ ಅಪಾಯಗಳೇ ಜಾಸ್ತಿ ಎನ್ನುವುದಕ್ಕೆ ಈ ಲೇಖನವೇ ಸಾಕ್ಷಿ ಎಂಬಂತಾಯಿತು. ಇದನ್ನು – ಅದರಲ್ಲಿಯೂ ನೀವು – ಅವಾಯ್ಡ್ ಮಾಡಿಕೊಳ್ಳಬಹುದಿತ್ತು ಅಂತ ನನ್ನ ಅನಿಸಿಕೆ.

    ಉತ್ತರ
    • rohithmath
     ಮೇ 12 2015

     ಇಲ್ಲಿ “ಎಲ್ಲವೂ ನನ್ನದೇ” ಎಂಬ ಸ್ವಪ್ರಶಂಸೆ ಇಲ್ಲ. ಬೇರೆಯವರ ಚಿಂತನೆಯ ಪ್ರಭಾವ ಇದೆ ಎಂದು ಓದುಗ ಭಾವಿಸಬಾರದೆಂಬ ಕಾಳಜಿ ಇದೆ ಅಷ್ಟೆ – ಇಷ್ಟು ಸರಳವಾದ ವಾಕ್ಯದಲ್ಲಿ “ಪೂರ್ವ ಪರಂಪರೆಯ ಕಡೆಗೆ ಗಮನ ಕೊಡದಿರುವ”, “ಹಗಲು ಕಂಡ ಬಾವಿಗೆ ಇರುಳು ಬೀಳುವ” ಮನೋಭಾವವನ್ನು ಕಷ್ಟಪಟ್ಟು (ಮೊದಲನೇ ಓದಲ್ಲಿ ಗೊತ್ತಾಗದಿದ್ದರೂ ತಪ್ಪನ್ನು ಹುಡುಕಲೇಬೇಕೆಂದು ಹಠ ಹಿಡಿದು ಎರಡನೇ ಬಾರಿ ಓದಿಕೊಂಡು!) ಹುಡುಕಿದ್ದೀರಿ. ಧನ್ಯವಾದಗಳು!

     ಸರಳವಾಗಿ ಬರೆಯುವವನು ನಾನು. ಘನವಾದ ಭಾಷೆಯನ್ನು ಹುಡುಕುವ, ಹಾಗಿದ್ದರೇನೇ ಶ್ರೇಷ್ಠ ಎಂಬ ವ್ಯಸನಿಗಳಿಗೆ ಪ್ರತಿಸಲ ಭ್ರಮನಿರಸನ ಮಾಡುವುದರಲ್ಲಿ ನನಗೆ ಖುಶಿಯಿದೆ. ಇನ್ನು ಅರ್ಥ-ವಿವೇಚನೆಯ ಪರಂಪರೆ ಹುಡುಕುವವರಿಗಂತೂ ಆಗುವ ನಿರಾಸೆಯನ್ನು ಹೇಗೆ ಹೇಳಲಿ!

     ಅದಿರಲಿ, ಜನಸಾಮಾನ್ಯರು ಸರಳವಾಗಿ “ಎರಡು” ಎನ್ನುವುದಕ್ಕೆ ಘನವಾದ ಭಾಷೆಯಲ್ಲಿ “ಕೆಲವಾರು” ಎನ್ನುತ್ತಾರೆಯೆ? ಗೊತ್ತಿರಲಿಲ್ಲ!

     ಉತ್ತರ
     • ಮೂರ್ನಾಲ್ಕಂಶ
      ಮೇ 12 2015

      ಘನವಾದ (sound) ಪದ ಅಂದಿದ್ದೆ, ‘ಘನವಾದ ಭಾಷೆ’ ಅಂತ ವ್ಯಂಗ್ಯದಲ್ಲಿ ಓದಿಕೊಂಡಿದ್ದಾರೆ. ‘ಕೆಲವಾರು’ ಅಂದಿದ್ದೆ, ‘ಹಲವಾರು’ ಅಂದಿರಲಿಲ್ಲ. ಎಲ್ಲ ತಪ್ಪನ್ನೂ (ಅದರಲ್ಲೂ ತಿದ್ದಿಕೊಳ್ಳುವ ವ್ಯವಧಾನವಿರದವರಿಗೆ) ತೋರಿಸಿಕೊಡಲು ಹೋಗಿರಲೂ ಇಲ್ಲ, ಹೋಗುವುದೂ ಇಲ್ಲ.

      ಲೇಖನವನ್ನು ಪ್ರಶ್ನಿಸಿದರೆ ತಮ್ಮ ಮನೋಭವ-ಸ್ವಭಾವಗಳ ಲೇವಡಿಯಾಯಿತು ಅಂತ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಾರೆ. ಹಾಗೆ ನೋಡಿದರೆ ಇದುವರೆಗೆ ಇವರ ಬಗ್ಗೆ ವೈಯಕ್ತಿಕವಾಗಿ ಏನಾದರೂ ಅಂದಿದ್ದರೆ ಅದು ಧನಾತ್ಮಕವಾದ ಮಾತುಗಳು ಮಾತ್ರ: ಈ ದೋಷಗಳನ್ನು ಇವರು ಅವಾಯ್ಡ್ ಮಾಡಿಕೊಳ್ಳಬಹುದಿತ್ತು. ವಿಭಿನ್ನ ಆಸಕ್ತಿಗಳಿರುವರುವ, ಅದನ್ನೆಲ್ಲಾ ಕನ್ನಡದಲ್ಲಿ ಓದುಗರಿಗೆ ತಲುಪಿಸುವ ಆಸ್ಥೆ ಇರುವ, ಗಣಿತದಲ್ಲಿ ಡಿಗ್ರಿ ಇರುವ ಇವರಿಂದ ಇನ್ನೂ ಹೆಚ್ಚಿನ ಗುಣಮಟ್ಟದ ಲೇಖನಗಳನ್ನು ನಿರೀಕ್ಷೆ ಮಾಡಿದ್ದೆವು ಅಂತ. ಇವರಿಗೋ, ತಮ್ಮಲ್ಲೇ ಋಣಾತ್ಮಕ ಅಂಶಗಳು ಕಂಡಿವೆ.

      ಇವೆಲ್ಲ ‘ಮೊದಲಬಾರಿಗೆ ಓದಿದಾಗ ಎಷ್ಟು ಸಿಗುತ್ತೋ ಅಷ್ಟೇ’ ಅನ್ನುವ ಓವರ್ಸಿಂಪ್ಲಿಫಿಕೇಶನ್ನಿನ ದುಷ್ಪರಿಣಾಮಗಳೇನೋ.
      ಯಾವ ರೀತಿಯ ಪದಪ್ರಯೋಗವಾಗಿದೆ, ಯಾವ ರೀತಿಯ ಭಾಷಾಪ್ರಯೋಗವಾಗಿದೆ ಅಂತ ವಸ್ತುನಿಷ್ಟವಾಗಿ ಕಣ್ಣುಬಿಟ್ಟು (ಪ್ರಕಟಿಸುವ ಮುನ್ನ ತಮ್ಮ ಲೇಖನವನ್ನೂ, ಪ್ರತಿಕ್ರಿಯಿಸುವ ಮುನ್ನ ಬಂದ ಕಮೆಂಟುಗಳನ್ನೂ) ಎರಡೆರಡು ಸಲ ಓದಿಕೊಂಡಿದ್ದರೆ ಇವರು ಹೀಗೆ ಹರಿಹಾಯ್ದು ಬರುತ್ತಿರಲಿಲ್ಲವೋ ಏನೋ.

      ‘ವೈಜ್ಞಾನಿಕ ಮನೋಭಾವ ಕೊಡುವ ಸಂಸ್ಕಾರ’ದ ಬಗ್ಗೆ ಮಾತನಾಡುವ ಮಾನ್ಯ ಲೇಖಕರು ತಮ್ಮ ಲೇಖನದಲ್ಲಿ ತಪ್ಪುಗಳಾಗಿದ್ದು ಕಂಡುಬಂದಾಗ ಪ್ರಾಮಾಣಿಕವಾಗಿ ಒಪ್ಪಿಕೊಂಡು ‘ಮಾತು’ ಇಲ್ಲದೇ ತಿದ್ದಿಕೊಳ್ಳುವ ಸಂಸ್ಕಾರವಂತರೆಂದು ಎಣಿಸಿದ್ದೆ, ತೀವ್ರ ನಿರಾಸೆಯಾಗುತ್ತಿದೆ. ನಾನು ತಪ್ಪು ತೋರಿಸಿದ್ದು ಇವರ ಲೇಖನದಲ್ಲೇ ಹೊರತೂ ಇವರ ಮನೋಭಾವದಲ್ಲಲ್ಲ. ಕುಂಬಳಕಾಯಿಕಳ್ಳ್ಳ ಅಂತ ಕೂಡ ಮಾತಿಗೂ ಸಹಾ ಅಂದಿರಲಿಲ್ಲ ನಾನು, ಹೀಗೆ ಹೆಗಲು ಮುಟ್ಟಿಕೊಂಡು ಧಾಳಿನಡೆಸಿದ್ದಾರೆ.

      ಇನ್ನು ಮಾತು ಬೆಳಸುವುದರಲ್ಲಿ ಅರ್ಥವಿಲ್ಲ. ಇನ್ಮುಂದೆ ಇವರ ಲೇಖನ ಓದುವುದಿಲ್ಲ ಅಂತ ಮಾತ್ರ ಹೇಳಲಾರೆ, ಆದರೆ ಚರ್ಚೆಗೆ ಸ್ವಾಗತ ಅಂತ ಇವರೇ ಬೊರ್ಡ್ ತಗಲಿಸಿದರೂ, ಟೀಕೆಟಿಪ್ಪಣಿಗಳನ್ನ್ನು ಸರಿಯಾಗಿ ಓದಿಕೊಳ್ಳುವ ವ್ಯವಧಾನವಿಲ್ಲದೇ ಹರಿಹಾಯ್ದು ಬರುವ ಇವರೊಂದಿಗೆ ಮಾತ್ರ ಚರ್ಚೆಗಿಳಿಯಲಾರೆ.

      ಉತ್ತರ
      • rohithmath
       ಮೇ 12 2015

       ಶ್ರೀಯುತ ಮೂರ್ನಾಲ್ಕಂಶ ಅವರೇ,

       ನಾನು ಯಾವ ಟೀಕೆಯನ್ನೂ ಹಾಗೆಲ್ಲ ತೀರ ಗಂಭೀರವಾಗಿ ವೈಯಕ್ತಿಕ ಪ್ರತಿಷ್ಟೆಗೆ ಧಕ್ಕೆಯಾಯಿತು ಎಂದು ತೆಗೆದುಕೊಳ್ಳುವವನಲ್ಲ. ವಸ್ತುನಿಷ್ಟವಾಗಿಯೇ ಯೋಚಿಸುವವನು.

       “ಕಡಿಮೆ ದ್ರವ್ಯರಾಶಿ ಇರುವ ವಸ್ತುವನ್ನು ಹೆಚ್ಚು ದ್ರವ್ಯರಾಶಿ ಇರುವ ವಸ್ತು ಆಕರ್ಷಿಸುತ್ತದೆ.” ಮತ್ತು ”ದ್ರವ್ಯರಾಶಿಯೇ ಆಕರ್ಷಣೆ ಎಂಬ ಹೊಸಶಕ್ತಿ ಹುಟ್ಟಲು ಕಾರಣ. ಇದು ಎರಡು ವಸ್ತುಗಳ ನಡುವಿನ ಅಂತರದ ವರ್ಗಕ್ಕೆ ವಿಲೋಮವಾಗಿರುತ್ತದೆ.” – ಈ ಎರಡೂ ವಾಕ್ಯಗಳು ತಪ್ಪು ಎಂದು ತೋರಿಸಿಕೊಟ್ಟಿದ್ದೀರಿ. ಎರಡೂ ಕಣ್ತಪ್ಪಿನಿಂದ ಆಗಿರುವ ದೋಷಗಳು ಎನ್ನುವುದನ್ನು ನಾನು ಅಲ್ಲಗಳೆಯಲಾರೆ. ಕಣ್ತಪ್ಪು ಎನ್ನುವುದಕ್ಕಿಂತಲೂ ಇವು ಹೇಳಿಕೆಯ ಮಾತುಗಳು, ಪರಸ್ಪರ ಮಾತುಕತೆಯಲ್ಲಿ ಇಣುಕಿಹೋಗುವ ವಾಡಿಕೆಯ ಮಾತುಗಳು ಎನ್ನುವುದನ್ನು ನೀವೂ ಒಪ್ಪುತ್ತೀರಿ. ನೀವು “ಕೆಲವಾರು ತಪ್ಪುಗಳಾಗಿವೆ” ಎಂದಾಗ ನಾನು ಅಂದುಕೊಂಡದ್ದಕ್ಕೂ ನೀವು ತೋರಿಸುವ ಈ ತಪ್ಪುಗಳಿಗೂ ತಾಳೆಯಾಗಲಿಲ್ಲ ಅಷ್ಟೆ. ತಪ್ಪುಗಳನ್ನು ತೋರಿಸಲೇಬೇಕೆಂದು ಹುಡುಕಿ ಎತ್ತಿರುವ ಪ್ರಶ್ನೆಗಳಂತೆ ಕಂಡವು ನನಗೆ. (ನನ್ನ ತಪ್ಪುಗಳನ್ನು ಖಂಡಿತವಾಗಿಯೂ ಸಮರ್ಥಿಸಿಕೊಳ್ಳುತ್ತಿಲ್ಲ. ಆದರೆ, ಈ “ತಪ್ಪು”ಗಳೇ ಕಾರಣವಾಗಿ ಯಾರ ಚಿಂತನಾಲಹರಿಯೂ ತಪ್ಪುವ ಸಂಭವ ಇರಲಿಲ್ಲ. ಇರಲಿ)

       ನಾನು ನಿಮ್ಮ ಕಾಮೆಂಟನ್ನು ವೈಯಕ್ತಿಕವಾಗಿ ತೆಗೆದುಕೊಂಡು ವ್ಯಂಗ್ಯ ಬಳಸಿದೆನೆ? ಇಲ್ಲಿರುವ ಕಾಮೆಂಟುಗಳನ್ನು ಓದಿದ ಯಾರಿಗೇ ಆದರೂ ವ್ಯಂಗ್ಯಬಾಣಗಳನ್ನು ಎಸೆಯತೊಡಗಿದವರು ಯಾರು ಎನ್ನುವುದು ತಿಳಿಯುತ್ತದೆ. “ನೀವೇ ಹೇಳಿಕೊಂಡಂತೆ ಪೂರ್ವ ಪರಂಪರೆಯ ಕಡೆಗೆ ಗಮನ ಕೊಡದೇ ಬರೆದಿರುವುದೇ” – ಈ ಮಾತನ್ನು ಬರೆಯುವಾಗ ನಿಮಗಿದು ವೈಯಕ್ತಿಕದಾಳಿ ಎಂದು ಅನ್ನಿಸಲಿಲ್ಲವೆ? “ನೀವೇ ಹೇಳಿಕೊಂಡಂತೆ” ಎಂದರೆ ನಾನು ಹಾಗೆ ಹೇಳಿದ್ದು ಯಾವಾಗ? ವಿಷಯ ತಿರುಚುವ ಉತ್ಸಾಹ ನಿಮಗೇಕೆ ಬಂತು? ಪೂರ್ವಸೂರಿಗಳನ್ನು ಓದಿಕೊಂಡೂ ಅವರ ಪ್ರಭಾವದಿಂದ ತಪ್ಪಿಸಿಕೊಂಡು ಬರೆಯುವುದು ಬೇರೆ; ಪೂರ್ವಸೂರಿಗಳನ್ನು ಸಂಪೂರ್ಣವಾಗಿ ಕಡೆಗಣಿಸುವುದು ಬೇರೆ. ಈ ಅಂಶ ನಿಮಗೆ ತಿಳಿಯಲಿಲ್ಲವೆ? ಅಥವಾ ಹಣಿಯಲಿಕ್ಕೆಂದೇ ತಿಳಿದದ್ದನ್ನೂ ಮರೆಮಾಚಿ ಶಬ್ದಜಾಲ ಬೀಸಿದಿರೋ? ನಿಮ್ಮ ಉದ್ಧೇಶವನ್ನು ಪ್ರಶ್ನಿಸಿದಾಗ ಮಾತ್ರ ನಿಮಗೆ ವಸ್ತುನಿಷ್ಟತೆ, ವ್ಯವಧಾನ, ಪ್ರಾಮಾಣಿಕತೆ – ಎಲ್ಲವೂ ನೆನಪಿಗೆ ಬರುತ್ತವೆ! ಆಹಾ!

       ಸ್ವಲ್ಪ ನಿಮ್ಮ ಈ ಮೇಲಿನ ಕಾಮೆಂಟನ್ನೂ ಓದಿಕೊಳ್ಳಿ. ಲೇಖನ ಬರೆದು ಓದಿಕೊಳ್ಳಬೇಕಾಗಿತ್ತೆಂದು ನನಗೆ ಉಪದೇಶಿಸುವ ನಿಮಗೆ ನೀವೇ ಬರೆದ ಕಾಮೆಂಟು ಓದಿಕೊಂಡಿದ್ದರೆ ಅದರ ತುಂಬ ಎ‍ಷ್ಟು ನಂಜು ಕಾರಿಕೊಂಡಿದ್ದೀರೆಂಬ ಅಂದಾಜು ಸಿಗುತ್ತಿತ್ತು. ಅಲ್ಲಿ ಲೇಖನದ ಬಗ್ಗೆ ಯಾವ ಮಾತೂ ಇಲ್ಲ. ಕೇವಲ ವೈಯಕ್ತಿಕ ದ್ವೇಷಸಾಧನೆಯೇ ಕಾಣಿಸುತ್ತಿದೆ. ಜಿಟಿಎನ್ನರನ್ನು ನಾನು ಓದಿಕೊಂಡಿಲ್ಲ ಎಂದೋ ಅಥವಾ ಓದಿಕೊಂಡರೂ ಮೊದಲ ಓದಿಗೆ ಎಷ್ಟು ಸಿಕ್ಕಿತೋ ಅಷ್ಟನ್ನು ಪಡೆದು ತೃಪ್ತನಾಗಿದ್ದೇನೆಂದೋ ನಿಮ್ಮ ಹಾವಿನ ನಾಲಿಗೆ ಚಾಚಿದ್ದೀರಿ. ಸಂತೋಷವೇ! ನನ್ನ ಬಗ್ಗೆ ನೀವು ಬಹಳ ರೀಸರ್ಚ್ ಮಾಡಿರುವಂತಿದೆ! ಇನ್ನೊಬ್ಬರತ್ತ ಕಲ್ಲು ಎಸೆಯುವವರು ಅದೇ ಕಲ್ಲು ತನಗೆ ತಾಕಿದರೆ ಎಷ್ಟು ನೋಯೀತೆಂಬುದನ್ನೂ ಒಂದು ಕ್ಷಣ ಯೋಚಿಸಿದರೆ ಒಳ್ಳೆಯದು.

       ಕೊನೆಯದಾಗಿ ಒಂದು ಮಾತು. ಈಗಲೂ ಅಷ್ಟೆ – ನೀವು ವಸ್ತುನಿಷ್ಟವಾಗಿ, ವ್ಯಂಗ್ಯ-ಕೊಂಕುಗಳನ್ನು ಕಳಚಿಟ್ಟು ಲೇಖನ ಮತ್ತು ಲೇಖಕನ ವಿಮರ್ಶೆ ಮಾಡಿ. ನನ್ನ ಸ್ವಾಗತ ಇದ್ದೇ ಇದೆ. ವ್ಯಂಗ್ಯದ ಕೆಸರಲ್ಲೇ ಕೊಸರಾಡುತ್ತ ಇರುತ್ತೇನೆಂದರೆ ನಿಮ್ಮಿಷ್ಟ.

       ಉತ್ತರ
       • ಮೂರ್ನಾಲ್ಕಂಶ
        ಮೇ 15 2015

        ಇಲ್ಲಿ ಪ್ರಯೋಗಿತವಾಗುತ್ತಿರುವ ಮಾನ್ಯ ಲೇಖಕರ ‘ಬತ್ತಲಿಕೆ’ಯ ಅಸ್ತ್ರಗಳ ಕುರಿತು ಒಂದು ವಿವರ:
        *ಚರ್ಚೆಗಳನ್ನು ಗೆಲ್ಲಲು ಸುಲಭ ಸೂತ್ರಗಳು* ಅಂತ
        http://sampada.net/forum/18361

        ಇದಕ್ಕೆ ಅವರ ಸಂಭಾವ್ಯ ಪ್ರತಿ(ಕೆಸರೆರಚಾಟ) ಕ್ರಿಯೆಯನ್ನ ಊಹಿಸುವುದೇನೂ ಕಷ್ಟವಲ್ಲ :
        “ಮೂರ್ನಾಲ್ಕಂಶ ಅವರು ತಮ್ಮದೇ ಬತ್ತಳಿಕೆಯ ಅಸ್ತ್ರಗಳನ್ನ ಲೇಖಕರ ‘ಬತ್ತಲಿಕೆ’ಯದ್ದು ಅಂತ ಆರೋಪಿಸುತ್ತ ಕೊಂಕು ಮುಂದುವರಿಸಿದ್ದಾರೆ” ಅಂತೆನೋ ಒಂದು.

        ಇರಲಿ, ಇವರೇ ಇವರಾಟದ ಚಾಂಪಿಯನ್ನರಿರಬೇಕಾದುದು, ನಮಗದು ತರವಲ್ಲ. ಇವರಿಗೆ ಶುಭವಾಗಲಿ.

        ಉತ್ತರ
        • rohithmath
         ಮೇ 15 2015

         ನೀವು ಉದ್ಧರಿಸಿರುವ ಹಾಸ್ಯ ಲೇಖನ ಚೆನ್ನಾಗಿದೆ. ಅದರಲ್ಲಿ ಹೇಳಿರುವ ಯಾವ ಅಂಶ ಬಳಸಿ ನಿಮ್ಮನ್ನು ಬಗ್ಗುಬಡಿಯಲು ನೋಡಿದೆ, ದಯವಿಟ್ಟು ತಿಳಿಸಿ. ಕೊಂಕುಪಿಂಕು ಏನೂ ಇಲ್ಲ.

         ಉತ್ತರ
        • rohithmath
         ಮೇ 15 2015

         ಹಾಗೆಯೇ ‘ಬತ್ತಲಿಕೆ’ ಎಂದು ಪದ ಪ್ರಯೋಗಿಸಿ ಏನನ್ನು ಹೇಳಲು ಬಯಸಿದಿರಿ ಎಂದೂ ತಿಳಿಸಿ. ನಿಮ್ಮ ಕೊಂಕು ನನಗೆ ತಿಳಿದರೆ ಮಾತ್ರ ಅದಕ್ಕೊಂದು ಸಾರ್ಥಕತೆ ಅಲ್ಲವೆ? ಇಲ್ಲವಾದರೆ ಅಮೂಲ್ಯವಾದ ಅಸ್ತ್ರವನ್ನು ಸುಮ್ಮನೆ ಗಾಳಿಯಲ್ಲಿ ತೇಲಿಸಿ ವ್ಯರ್ಥ ಮಾಡಿದ ಹಾಗೆ.

         ಉತ್ತರ
    • Nagshetty Shetkar
     ಮೇ 12 2015

     “‘ವೈಜ್ಞಾನಿಕ ಮನೋಧರ್ಮ’, ‘ವೈಜ್ಞಾನಿಕ’, ‘ವೈಜ್ಞಾನಿಕ ಮನೋಧರ್ಮ’, ‘ಮೌಢ್ಯ’ ಇತ್ಯಾದಿ ಘನವಾದ ಪದಗಳಿಗೆ ಅರ್ಥ-ವಿವೇಚನೆಯ ಪರಂಪರೆ ಇರಬೇಕಾದರೆ ಅದನ್ನು ನಿರ್ಲಕ್ಷಿಸಿ ಬರೆಯುವುದರಲ್ಲಿ ಅಗ್ಗಳಿಕೆಗಳಿಗಿಂತಲೂ ಇರುಳಲ್ಲಿಯೂ ಕಾಣುವಂತಹ ಬಾವಿಗಳಿಗೆ ಹಾಡು-ಹಗಲೇ ಬೀಳುವಂತಹಾ ಅಪಾಯಗಳೇ ಜಾಸ್ತಿ ”

     ನಿಮ್ಮ ಮಾತು ಅಕ್ಷರಶಃ ನಿಜ. ಇದನ್ನೇ ನಾನು ಪ್ರಶ್ನೆಗಳ ಮೂಲಕ ಲೇಖಕರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದೆ. ಆದರೆ ಲೇಖಕರಿಗೆ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವುದಿರಲಿ ಒಪ್ಪುವುದಕ್ಕೂ ಮನಸ್ಸಿಲ್ಲ.

     ಉತ್ತರ
 4. ಮೂರ್ನಾಲ್ಕಂಶ
  ಮೇ 9 2015

  ಕ್ಷಮಿಸಿ, ಪ್ರಶ್ನೆ ಇದು: “ಮಳೆ ಬರುವುದಕ್ಕೂ ಕಪ್ಪೆಗೆ ಮದುವೆ ಮಾಡುವುದಕ್ಕೂ ಕಾರ್ಯಕಾರಣ ಸಂಬಂಧ ಎಲ್ಲಿದೆ?” ಅನ್ನುವ ಪ್ರಶ್ನೆ ಸಮಂಜಸವಿದ್ದರೆ “ವಿಜ್ಞಾನಿ ತಿರುಪತಿ ದೇವಸ್ಥಾನಕ್ಕೆ ಹೋಗುವುದು, ಪೂಜೆ ಮಾಡಿಸುವುದು, ಮುಡಿ ಕೊಡುವುದು ಅವನ ಮನಸ್ಸಿನ ಸಮಾಧಾನಕ್ಕೆ” ಅನ್ನುವ ವಾದ ಹ್ಯಾಗೆ ನಿಲ್ಲುತ್ತೆ? ಅಲ್ಲಿ ನೀವು ಅನೇರವಾಗಿ ಉಲ್ಲೇಖಿಸಿರುವ ಘಟನೆಯಲ್ಲಿನ ಇಸ್ರೋ ಮುಖ್ಯಸ್ಥ ಮಹಾಶಯನ (ಆಡಳಿತಗಾರಮಾತ್ರನನ್ನು ವಿಜ್ಞಾನಿ ಅಂತ ಕರೆಯಬಾರದು!) ‘ಮನಸ್ಸಿನ ಸಮಾಧಾನ’ವು “ಆವೊಂದು ಯೋಜನೆಯು ನಿರ್ವಿಘ್ನವಾಗಿ ನೆರವೇರುವುದರಲ್ಲಿತ್ತು” ಅನ್ನುವುದನ್ನು ಒಪ್ಪ್ಪುತ್ತೀರಾ? ಒಪ್ಪುವಿರಾದರೆ, ಯೋಜನೆಯು ಹಾಗೆ ಯಶಸ್ವಿಯಾಗುವುದಕ್ಕೂ ತಿರುಪತಿ ತಿಮ್ಮಪ್ಪನ ಚಿನ್ನದಾಹಕ್ಕೂ ಯಾವುದೇ ಕಾರ್ಯ-ಕಾರಣ ಸಂಭಂಧವನ್ನು ಕಲ್ಪಿಸಲು ಯಾವ ಬಾದರಾಯಣರಿಗೂ ಕೂಡಾ ಸಾಧ್ಯವಿಲ್ಲ ಎನ್ನುವುದನ್ನೂ ಒಪ್ಪಬೇಕಲ್ಲವೇ?

  ಉತ್ತರ
  • rohithmath
   ಮೇ 9 2015

   ಎಲ್ಲ ನಂಬಿಕೆಗಳೂ ಮೌಢ್ಯಗಳು ಎಂಬ ಸರಳೀಕರಣ ಮಾಡುವುದು ಸರಿಯಲ್ಲ. ಲೇಖನದಲ್ಲಿ ಹೇಳಿರುವ ಹಾಗೆ “ನಂಬಿಕೆ-ಶ್ರದ್ಧೆ-ಆಚರಣೆ”ಗಳಿಗೂ “ಮೌಢ್ಯ”ಕ್ಕೂ ಸ್ಪಷ್ಟ ವ್ಯತ್ಯಾಸ ಇದೆ. ತಿರುಪತಿಗೆ ಹೋಗಿ ಬಂದ ವಿಜ್ಞಾನಿ ಅದೊಂದರಿಂದಲೇ ರಾಕೆಟ್ ಹಾರುತ್ತದೆ ಎಂದು ನಂಬಿದ್ದರೆ ಅದು ಮೌಢ್ಯ. ಆದರೆ, ದೇವರಿಗೆ ಪೂಜೆ ಸಲ್ಲಿಸಿ ಬಂದ ಯಾವ ವಿಜ್ಞಾನಿಯೂ ಅಂತಹ ಹೇಳಿಕೆ ಕೊಟ್ಟಿಲ್ಲ. (ಇಲ್ಲಿ ನಾನು ವಿಜ್ಞಾನಿಗಳನ್ನು ಸಮರ್ಥಿಸಿಕೊಳ್ಳುತ್ತಿದ್ದೇನೆಂದು ಭಾವಿಸಬೇಕಿಲ್ಲ. ನಂಬಿಕೆಯ ವಿಷಯ ಬಂದಾಗ ನನಗೆ ಈ ಉದಾಹರಣೆ ಸಿಕ್ಕಿತು ಅಷ್ಟೆ). ಆದರೆ ಕಪ್ಪೆಮದುವೆಯಲ್ಲಿ, “ಕಪ್ಪೆ ಮದುವೆ ಮಾಡುವುದರಿಂದಲೇ ಮಳೆ ಬರುತ್ತದೆ” ಎಂಬ ನೇರಾನೇರ ನಂಬಿಕೆ ಇದೆ. ಇದು ಮೌಢ್ಯ ಅಂದದ್ದು ನಾನು.

   ಭಾನುವಾರ ಚರ್ಚಿಗೆ ಹೋಗಿ ಪ್ರಾರ್ಥಿಸುವುದು – ನಂಬಿಕೆ, ಶ್ರದ್ಧೆ. ಆದರೆ, “ಸಂತ” ಪದವಿಗೇರಲು ವ್ಯಕ್ತಿ ಜೀವನದಲ್ಲಿ ಪವಾಡಗಳನ್ನು ಮಾಡಿರಬೇಕು; ಸತ್ತವರನ್ನು ಬದುಕಿಸಿರಬೇಕು; ಕೇವಲ ಪ್ರಾರ್ಥನೆಯಿಂದ ಗುಣವಾಗದ ಕಾಯಿಲೆ ವಾಸಿ ಮಾಡಿರಬೇಕು – ಎನ್ನುವುದು ಮೌಢ್ಯ. ಶುಕ್ರವಾರ ದೇವರಿಗೆ ನಮಾಝ್ ಸಲ್ಲಿಸುವುದು – ನಂಬಿಕೆ, ಶ್ರದ್ಧೆ. ಇಸ್ಲಾಮನ್ನು ನಂಬದವರು ಕಾಫಿರರು; ಅವರನ್ನು ಕೊಲ್ಲಬೇಕೆಂದು ದೇವರು ಆಜ್ಞೆ ಮಾಡಿದ್ದಾನೆಂದು ಭಾವಿಸುವುದು – ಮೌಢ್ಯ. ದೇವರಿಗೆ ಹಣ್ಣು-ಕಾಯಿ ಒಡೆಯುವುದು, ತೀರ್ಥ-ಗಂಧ ಪಡೆಯುವುದು ನಂಬಿಕೆ, ಆಚರಣೆ. ಆದರೆ, ದೇವಸ್ಥಾನದಲ್ಲಿ ಫೋಟೋ ತೆಗೆಯಬಾರದು ಎಂಬ ಕ್ರಮವನ್ನು (ಅದಕ್ಕೆ ಏನೇ ಸಮರ್ಥನೆ ಕೊಟ್ಟುಕೊಂಡರೂ) ಮೌಢ್ಯದ ಸಾಲಿಗೇ ಸೇರಿಸುತ್ತೇನೆ. ಕ್ರೈಸ್ತನೊಬ್ಬ ರೋಝರಿ ಧರಿಸುವುದು, ಮುಸ್ಲಿಮ್ ಟೋಪಿ ಧರಿಸಿ ಪ್ರಾರ್ಥಿಸುವುದು, ಸಿಖ್ ಕಡಗ, ಪಗಡಿ ಧರಿಸುವುದು, ಬ್ರಾಹ್ಮಣ ಜನಿವಾರ ಹಾಕುವುದು, ಹಿಂದೂ ಹೆಂಗಸರು ಕುಂಕುಮ ಇಡುವುದು – ಇವೆಲ್ಲ ಧರ್ಮಾಚರಣೆಗಳಷ್ಟೆ. ಮೌಢ್ಯಗಳ ಪಟ್ಟಿಯಲ್ಲಿ ಬರುವುದಿಲ್ಲ.

   ನಂಬಿಕೆ ಮತ್ತು ಮೌಢ್ಯಗಳ ನಡುವಿನ ಗೆರೆ ಬಹಳ ತೆಳುವಾದದ್ದು. ಹಿಂದಿನ ಕಾಲದಲ್ಲಿ ಯಾವುದೋ ಕಾರಣಕ್ಕೆ ಆಚರಣೆಗೆ ಬಂದ ಸಂಗತಿಗಳು ಈಗಿನ ಪರಿಸ್ಥಿತಿಯಲ್ಲಿ ಮೌಢ್ಯವಾಗಿ ಕಾಣಬಹುದು. ಇನ್ನು ಆಚರಣೆ ಮತ್ತು ಮೌಢ್ಯಗಳು ಎಷ್ಟೋ ಸಂದರ್ಭಗಳಲ್ಲಿ ಒಂದರೊಳಗೊಂದು ಬೆಸೆದುಹೋಗಿರುವುದರಿಂದ ಅವನ್ನು ಬೇರ್ಪಡಿಸುವುದು ಕೂಡ ಕಷ್ಟ. ಯಾವುದು ಮೌಢ್ಯ, ಯಾವುದು ಅಲ್ಲ ಎಂಬ ಸ್ಪಷ್ಟ ತಿಳುವಳಿಕೆ ಇದ್ದವರೂ ಕೆಲವು ಸಂದರ್ಭಗಳಲ್ಲಿ ಅವನ್ನು ಮನಸ್ಸಿಲ್ಲದೆಯೂ ಆಚರಿಸಬೇಕಾದ ಅನಿವಾರ್ಯತೆ ಬರಬಹುದು.

   ನನ್ನ ಲೇಖನದ ಮುಖ್ಯ ಆಶಯ – ಯಾವುದು ವಿಜ್ಞಾನ, ಯಾವುದು ಮೌಢ್ಯ ಎಂಬ ತಿಳುವಳಿಕೆ ನಮ್ಮಲ್ಲಿ ಹುಟ್ಟಬೇಕೆನ್ನುವುದಷ್ಟೆ. ವೈಜ್ಞಾನಿಕ ಮನೋಧರ್ಮ ಎನ್ನುವುದು ವೈಯಕ್ತಿಕವಾಗಿ ಒಬ್ಬನೊಳಗೆ ಹುಟ್ಟಬೇಕಾದ ಪ್ರಜ್ಞೆ. ಅದನ್ನು ಸಾರ್ವಜನಿಕ ಕಾರ್ಯಕ್ರಮ ಮಾಡಿದಾಗ ಕೆಲವೊಮ್ಮೆ ಹಾಸ್ಯಾಸ್ಪದವಾಗಬಹುದು. ಎಚ್. ನರಸಿಂಹಯ್ಯ, ಗ್ರಹಣದ ಸಮಯದಲ್ಲಿ ಊಟ ಮಾಡಿದರೆ ಏನೂ ಆಗುವುದಿಲ್ಲ ಎನ್ನುವುದನ್ನು ತೋರಿಸಲು ಆ ಸಮಯದಲ್ಲಿ ಸಾರ್ವಜನಿಕರಿಗೆ ಉಪ್ಪಿಟ್ಟು ಹಂಚಿ ತಿನ್ನಲು ಹೇಳುತ್ತಿದ್ದರು. ಇದು ವೈಜ್ಞಾನಿಕ ಮನೋಧರ್ಮ ಬೆಳೆಸುವ ಸರಿಯಾದ ಕ್ರಮ ಅಲ್ಲ; ಅದರ ಅಣಕ ಎನ್ನುವುದು ನನ್ನ ಅಭಿಪ್ರಾಯ.

   ಉತ್ತರ
   • Ramasesha
    ಮೇ 9 2015

    There is one problem with your arguement sir.

    You have forgotten what are known as statistical truths where you come to conconclusions based on correlation. If you administer a medicine to 100 people all of them do not react the same way. Then according to your classificartion it becomes supersticious which is not right, i believe.
    Further, you have mentioned that planets influencing human beings as “moudhya”. If a planet as an object can influence the movement of another object ( say planet) by gravitational force, why can’t we consider the effect of planet on human object as a plausibility. I agree to the fact that it is not properly understood and correlations are not clear. But that is true for most of the medicinal action on human body. Similarly what is data mining or fuzzy logic, for that matter?.
    When we can not have a clear “karya -karana sambandha” we go for statistical correlations. It is not right to classify things a ssupersticious without going thru statistical correlation studies. We may create a separate classification of statistical truths rather that classifying them under 3 rigid classes that you have come up with.

    ಉತ್ತರ
    • rohithmath
     ಮೇ 9 2015

     Shri Ramasesha, You have started with a statement: “You have forgotten what are known as statistical truths where you come to conclusions based on correlation.” The next two sentences of yours say: “If you administer a medicine to 100 people all of them do not react the same way. Then according to your classification it becomes supersticious which is not right, i believe.”

     The third sentence would itself be telling you why we cannot rely only on “statistical truth” when we are differentiating science from non-science. That is the very reason why I have not considered “statistical truth” as a yardstick to classify science, non-science and superstitions.

     The fundamental aspect of the article is however not about classifying things. The article is on investigating some of the fundamental characteristics of scientific temper.

     ಉತ್ತರ
     • Ramasesha
      ಮೇ 11 2015

      Then according to you, the entire field of statistics and technology that relies on it is unscientifc. There is difference between rational and scientific.

      ಉತ್ತರ
      • rohithmath
       ಮೇ 11 2015

       “Then according to you, the entire field of statistics and technology that relies on it is unscientifc” – ರಾಮಸೇಶ ಅವರೇ, ನಿಮ್ಮ ವಾದದ ಸರಳೀಕರಣ ಬೆಚ್ಚಿಬೀಳಿಸುವಂತಿದೆ!

       “ಎಲ್ಲವನ್ನೂ ಸ್ಟಾಟಿಸ್ಟಿಕ್ಸ್ ಮೂಲಕ ಪಾಸು ಮಾಡಿನೋಡಿ ವೈಜ್ಞಾನಿಕವೇ ಅಲ್ಲವೇ ಹೇಳಬೇಕು” ಎನ್ನುತ್ತೀರಿ. ಆಮೇಲೆ, “ವೈದ್ಯಕೀಯದಲ್ಲಿ ಒಂದೇ ಮದ್ದನ್ನು ನೂರು ಜನರಿಗೆ ಕೊಟ್ಟಾಗ ಆಗುವ ಪರಿಣಾಮಗಳು ಬೇರೆಬೇರೆ ಇರುತ್ತವೆ. ಸ್ಟಾಟಿಸ್ಟಿಕ್ಸ್ ಅನ್ನು ನೆಚ್ಚಿದರೆ, ವೈದ್ಯಕೀಯ ವೈಜ್ಞಾನಿಕ ವಲಯದಿಂದ ಹೊರಗುಳಿಯಬೇಕಾಗುತ್ತದೆ” ಎಂದೂ ಹೇಳುತ್ತೀರಿ. ಕೊನೆಗೆ “ಎಲ್ಲಿಯದೋ ಗ್ರಹ ಭೂಮಿಯ ಮೇಲಿನ ವ್ಯಕ್ತಿಗಳ ಮೇಲೆ ಪ್ರಭಾವ ಬೀರಬಹುದಲ್ಲವೆ? ಜ್ಯೋತಿಷ್ಯವನ್ನು ವೈಜ್ಞಾನಿಕ ಅಲ್ಲ ಎಂದು ಹೇಗೆ ಹೇಳುವುದು?” ಎಂದು ನೀವೇ ನೆಚ್ಚಿದ ಸ್ಟಾಟಿಸ್ಟಿಕ್ಸ್ ಅನ್ನು ಮರೆತು ಮಾತಾಡುತ್ತೀರಿ! (ಒಂದೇ ಮನೆಯಲ್ಲಿದ್ದರೂ ಅಪ್ಪನಿಗೆ ಕುಜ ದೆಸೆ ನಡೆಯುತ್ತಿದ್ದರೆ ಮಗನಿಗೆ ಶುಕ್ರದೆಸೆ ನಡೆಯುತ್ತದಲ್ಲ? ಎಲ್ಲಿಯೋ ಇರುವ ಗ್ರಹ ಭೂಮಿಯ ಮೇಲಿನ ಒಬ್ಬೊಬ್ಬರೇ ವ್ಯಕ್ತಿಗಳನ್ನು ಹುಡುಕಿ ಹುಡುಕಿ ಪ್ರಭಾವ ಬೀರುವುದು ಹೇಗೆ ಎನ್ನುವುದನ್ನು ದಯವಿಟ್ಟು ವಿವರಿಸಿ.)

       ಸ್ಟಾಟಿಸ್ಟಿಕಲ್ ಎವಿಡೆನ್ಸ್ ಎನ್ನುವುದು ವೈಜ್ಞಾನಿಕ ಸತ್ಯವನ್ನು ತೋರಿಸಲು ಪೂರಕಾಂಶ ಆಗಬಹುದೇ ಹೊರತು, ಅದೊಂದೇ ವೈಜ್ಞಾನಿಕ ಸತ್ಯವನ್ನು ನಿರೂಪಿಸುವ ಮಾನದಂಡವಲ್ಲ. ಹೆಚ್ಚಿನ ವಿವರಣೆಗಾಗಿ “How to lie with statistics” ಪುಸ್ತಕ ಗಮನಿಸಬಹುದು.

       ಉತ್ತರ
       • Ramasesha
        ಮೇ 12 2015

        Mr rohith
        Please give me your number or e-mail address . I will discuss with you orally. You are misunderstanding my comments.

        ಉತ್ತರ
  • ವಿಜಯ್ ಪೈ
   ಮೇ 9 2015

   ತನ್ನ ಕಲಿಕೆ, ಪಡೆದ ಜ್ಞಾನ, ಮಾಡಿದ ಪ್ರಯೋಗ, ಹಿಂದಿನ ತಪ್ಪಿನಿಂದ ತಿದ್ದಿಕೊಂಡು ಕಂಡು ಹಿಡಿದ ಸುಧಾರಿತ ಹೊಸ ತಂತ್ರ.. ಇವೆಲ್ಲಗಳನ್ನು ಬಳಸಿ ತಾನು ಮಾಡುವದೆಲ್ಲವನ್ನೂ ಮಾಡಿ, ತನ್ನ ಹಿಡಿತದಲ್ಲಿದ ಕೊನೆಯ ಕ್ಷಣದ ಅನಿಶ್ಚಿತತೆ, ಅಡೆ-ತಡೆ ಬರದ ಹಾಗೆ ಆಗಲಪ್ಪ ಎಂದು ತಾನು ನಂಬಿದ ಶಕ್ತಿಗೆ ಪ್ರಾರ್ಥಿಸಿದರೆ ತಪ್ಪೇನು? ಉಪಗ್ರಹ ಹಾರಿಸುವಾಗ ರಾಕೆಟ್ ಗೆ ಊದುಬತ್ತಿ ಬೆಳಗಿ, ದೇವರ ಕೃಪೆಯಿಂದ ಅದು ತಾನಾಗಿಯೇ ಹಾರಿ ಉಪಗ್ರಹವನ್ನು ಕಕ್ಷೆಗೆ ಸೇರಿಸಲಿ ಎಂದು ಅಲ್ಲಿಯೇ ಭಜನೆ ಮಾಡುತ್ತ ಕೂಡುತ್ತಾರೆಯೆ? ವಿಜ್ಞಾನ/ ತಂತ್ರಜ್ಞಾನ ದ ಪ್ರಕಾರ ಮಾಡಿದ್ದೇಲ್ಲವೂ ಸರಿ ಇರಬೇಕು..ತಪ್ಪಲು ಸಾಧ್ಯವೇ ಇಲ್ಲ ಎಂದು ಕೊಂಡರೆ ಹರಿಕೋಟಾದಿಂದ ಹಾರಿ ಅರಬ್ಬಿ ಸಮುದ್ರದಲ್ಲಿಯೇ ಪಥ ಕಂಡುಕೊಂಡ ರಾಕೆಟ್ ಗಳೆಷ್ಟು? ಪ್ರಾರ್ಥನೆ, ತಾನು ನಂಬಿದ ಶಕ್ತಿಯಲ್ಲಿನ ನಂಬಿಕೆ ಆ ಯೋಜನೆಯಲ್ಲಿ ತೊಡಗಿಕೊಂಡ ವೈಕ್ತಿಗೆ ಮನೋಬಲ, ಸ್ಥೈರ್ಯ ತನ್ಮೂಲಕ ತಾನು ಮಾಡಬಹುದಾದ ಮಾನವ ಸಹಜ ತಪ್ಪುಗಳನ್ನು ಕಡಿಮೆ ಮಾಡುವ, ಹೊಸ ಹೊಳಹು ಕೊಡುವ ಕೆಲಸ ಮಾಡಿದರೆ ಅದು ತಪ್ಪೆ? ಅಷ್ಟಕ್ಕೂ ನಮ್ಮ ಆಸಕ್ತಿ ಇರುವುದು ಮತ್ತು ದೇಶಕ್ಕೆ ಸಹಾಯವಾಗುವುದು ವಿಜ್ಞಾನಿಯ ಬುದ್ಧಿಮತ್ತೆಯೇ ಅಥವಾ ಆತ ದೇವರ ಪೂಜೆ ಮಾಡುತ್ತಾನೊ, ನಾಮ ಹಚ್ಚುತ್ತಾನೊ ಎಂಬ ವಿಷಯ? ಆತ ತನ್ನ ಜ್ಞಾನದ ಕ್ರೆಡಿಟ್ ನ್ನು ತನಗೆ ಮನಸ್ಸಿಗೆ ಬಂದವರಿಗೆ ಕೊಡಲಿ..ಅದು ಆತ ಕಷ್ಟಪಟ್ಟು ಗಳಿಸಿದ್ದು.

   ಉತ್ತರ
 5. T.M.Krishna
  ಮೇ 9 2015

  ಯಾರ ಯಾರ ನಂಬಿಕೆಗಳು ಏನೇ ಇರಲಿ, ವಿಷಯವನ್ನು ಇಲ್ಲಿ ಹಲವಾರು ಕೋನಗಳಲ್ಲಿ ನೋಡಲೆತ್ನಿಸುದ್ದು ಸ್ವಾಗತಾರ್ಹ. ಹಾಗೆಯೇ ತನ್ನ ವಾದಕ್ಕೆ ಪುರಾವೆಗಳನ್ನುಡುಕುವ ಸೀಮಿತ ಪ್ರಯತ್ನವನ್ನು ಅಧಿಗಮಿಸಿ, ತನ್ನ ವಾದವೇ ಸರಿ ಎಂಬ ಹಠಕ್ಕೂ ಬೀಳದೆ ಮುಕ್ತವಾಗಿ ತೆರೆದಿಟ್ಟಿರುವುದು ಈ ಬರಹಗಾರರ ಪ್ರಬುದ್ಧತೆಯ ಕಡೆಗೆನ ಪಯಣ ಎಂಬುದು ನನ್ನ ಅನಿಸಿಕೆ.

  ಉತ್ತರ
 6. Nagshetty Shetkar
  ಮೇ 10 2015

  ಜಾತಿ ವ್ಯವಸ್ಥೆ ವೈಜ್ನಾನಿಕವೇ?

  ಉತ್ತರ
  • WITIAN
   ಮೇ 10 2015

   ‘ಗುಣ-ಕರ್ಮ ವಿಭಾಗಶಃ’ ಎಂದು ಹೇಳುವುದಾದರೆ, ಖಂಡಿತ ಹೌದು!

   ಉತ್ತರ
   • Nagshetty Shetkar
    ಮೇ 11 2015

    Your thinking is similar to Natzi thinking when they tried establish Aryan superiority by genetics.

    ಉತ್ತರ
    • WITIAN
     ಮೇ 11 2015

     Natzi ಅಲ್ಲವಯ್ಯ ಅದು, NAZI (ಈಗ ಈ ಮಂದಬುದ್ಧಿಯ ಶೇತ್ಕರನಿಗೆ ಜರ್ಮನ್ ಕೂಡಾ ಹೇಳಿಕೊಡಬೇಕೆ! ಉಚ್ಚಾರಣೆಯಲ್ಲಿ ಮಾತ್ರ ಅದು ನಾತ್ಸಿ)

     ಉತ್ತರ
 7. Nagshetty Shetkar
  ಮೇ 10 2015

  “ಯಾವುದು ವಿಜ್ಞಾನ, ಯಾವುದು ಮೌಢ್ಯ”

  Please read thoughts of great scientists and philosophers on this. No need for scratching surface. Already there just need to get educated.

  ಉತ್ತರ
  • ರಂಜನಾ ರಾಮ್ ದುರ್ಗಾ
   ಮೇ 11 2015

   ನಿಮ್ಮ ಗುರುಗಳು ಈ ಬಗ್ಗೆ ಏನೂ ಬರೆದಿಲ್ಲವೇ ಸಹೋದರರೇ

   ಉತ್ತರ
  • rohithmath
   ಮೇ 11 2015

   ಶೇಟ್ಕರ್, ಲೇಖನ ಅರ್ಥವಾಗಿದ್ದರೆ ಮಾತ್ರ ಚರ್ಚಿಸಿ. ಸುಮ್ಮನೆ ಖಾಲಿ ಗೆರಟೆ ತುರಿಯುವುದರಿಂದ ಯಾರಿಗೂ ಲಾಭವಿಲ್ಲ. ಲೇಖನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಮಾತ್ರ ಉತ್ತರಿಸುತ್ತೇನೆ.

   ಉತ್ತರ
   • Nagshetty Shetkar
    ಮೇ 11 2015

    ಅಪ್ಪಣೆ ಗುರುವರ್ಯ!

    [“ವಿಜ್ಞಾನದ ತಳಹದಿ ಇರುವಂಥಾದ್ದು ವೈಜ್ಞಾನಿಕ.”]
    ೧. ವಿಜ್ಞಾನದ ತಳಹದಿ ಇರುವಂಥಾದ್ದು ಅಂದರೆ ಏನು?

    [ “ಸಮಾಜಕ್ಕೆ ಕೇವಲ ವೈಜ್ಞಾನಿಕ ದೃಷ್ಟಿಯೊಂದೇ ಇರಬೇಕು”]
    ೧. ವೈಜ್ಞಾನಿಕ ದೃಷ್ಟಿ ಅಂದರೆ ಏನು?
    ೨. ಸಮಾಜಕ್ಕೆ ವೈಜ್ಞಾನಿಕ ದೃಷ್ಟಿ ಇರುವುದು ಅಂದರೆ ಏನು?

    [“ಸಾಹಿತ್ಯ ವೈಜ್ಞಾನಿಕತೆಯ ಛತ್ರಿಯಡಿ ಬರಬೇಕಾಗಿಲ್ಲ”]
    ೧. ವೈಜ್ಞಾನಿಕತೆ ಅಂದರೆ ಏನು?
    ೨. ವೈಜ್ಞಾನಿಕತೆಯ ಚತ್ರಿಯ ಅಡಿ ಯಾವುದು ಬರುತ್ತದೆ ಯಾವುದು ಬರುವುದಿಲ್ಲ ಅಂತ ನಿರ್ಧರಿಸುವುದು ಹೇಗೆ? ಮಾನದಂಡಗಳು ಇವೆಯೇ?

    [“ನಮ್ಮ ಜಗತ್ತು ಎಷ್ಟು ವೈಜ್ಞಾನಿಕವಾಗಿ ಮುಂದೆ ಹೋಗುತ್ತಿದೆ”]
    ೧. ವೈಜ್ಞಾನಿಕವಾಗಿ ಮುಂದೆ ಹೋಗುವುದು ಅಂದರೆ ಏನು?
    ೨. ಜಗತ್ತು ವೈಜ್ಞಾನಿಕವಾಗಿ ಮುಂದೆ ಹೋಗುತ್ತಿದೆ ಎಂದ ಮೇಲೆ ನಾವು ಕಂದಾಚಾರಿಗಳಾಗಿ ಹಿಂದೆ ಬೀಳಲು ಹೇಗೆ ಸಾಧ್ಯ? ಮುಂದೆ ಹೋಗುತ್ತಿರುವ ಜಗತ್ತಿನಲ್ಲೇ ಅಲ್ಲವೇ ನಾವು ಇರುವುದು?

    [“ನಂಬಿಕೆಗಳು – ಇವೂ ಅಷ್ಟೆ, ವೈಜ್ಞಾನಿಕವಾಗಿರಬೇಕಾಗಿಲ್ಲ. ಉದಾಹರಣೆಗೆ ದೀಪಾವಳಿಗೆ ಪಟಾಕಿ ಹೊಡೆಯುತ್ತೇವೆ”]
    ೧. ನಂಬಿಕೆಗೂ ಕ್ರಿಯೆಗೂ ಇರುವ ಸಂಬಂಧ ಏನು?

    [“ಒಂದು ಸಂಗತಿ ವಿಜ್ಞಾನದ ಪರಿಧಿಗೆ ಬರುವುದಿಲ್ಲ”]
    ೧. ಯಾವ ಸಂಗತಿ ವಿಜ್ಞಾನದ ಪರಿಧಿಗೆ ಬರುತ್ತದೆ ಹಾಗೂ ಯಾವುದು ಬರುವುದಿಲ್ಲ? ನಿರ್ಧರಿಸುವುದು ಹೇಗೆ?

    [“ವಿಜ್ಞಾನದ ಸೂತ್ರ, ಸಮೀಕರಣ, ಪ್ರಯೋಗಗಳಿಗೆ ಅಳವಡಿಸಬಹುದಾದ್ದು ವೈಜ್ಞಾನಿಕ.”]
    ೧. ನಾಳೆಯ ದಿನ ನೀವು ಬದುಕಿರುತ್ತೀರಿ ಅಥವಾ ಇರುವುದಿಲ್ಲ. ಇದು ವೈಜ್ನಾನಿಕವೋ ಅವೈಜ್ಞಾನಿಕವೋ? ಇದನ್ನು ವಿಜ್ಞಾನದ ಸೂತ್ರ, ಸಮೀಕರಣ, ಪ್ರಯೋಗಗಳಿಗೆ ಅಳವಡಿಸುವುದು ಅಂದರೆ ಏನು?
    ೨. ಮಡೆಸ್ನಾನದಿಂದ ಚರ್ಮ ರೋಗ ವಾಸಿಯಾಗುತ್ತದೆ. ಇದು ವೈಜ್ನಾನಿಕವೋ ಅವೈಜ್ಞಾನಿಕವೋ?
    ೩. ತಿರುಪತಿಯಲ್ಲಿ ಮುಡಿ ಕೊಡುವುದರಿಂದ ವೆಂಕಟೇಶ್ವರ ಸುಪ್ರೀತನಾಗಿ ನಿಮ್ಮ ಭಾಗ್ಯದ ಬಾಗಿಲನ್ನು ತೆರೆಯುತ್ತಾನೆ. ಇದು ವೈಜ್ನಾನಿಕವೋ ಅವೈಜ್ಞಾನಿಕವೋ?
    ೪. ಪುರುಷನ ಮುಖದಿಂದ ಬ್ರಾಹ್ಮಣರು ಹುಟ್ಟಿದರು. ಇದು ವೈಜ್ನಾನಿಕವೋ ಅವೈಜ್ಞಾನಿಕವೋ?

    [“ಅಂತಹ ಯಾವ ಸೂತ್ರ, ಪ್ರಯೋಗಗಳ ಹಂಗಿಲ್ಲದೆಯೂ ಸ್ವತಂತ್ರವಾಗಿ ಅಸ್ತಿತ್ವದಲ್ಲಿರಬಹುದಾದ್ದು ಅವೈಜ್ಞಾನಿಕ. “]
    ೧. ಭೂಮಿ ಚಂದ್ರ ಸೂರ್ಯ ಗ್ರಹ ನಕ್ಷತ್ರಗಳು ವಿಜ್ಞಾನದ ಸೂತ್ರ, ಪ್ರಯೋಗಗಳ ಹಂಗಿನಿಂದ ಅಸ್ತಿತ್ವದಲ್ಲಿದೆಯೇ?
    ೨. ಅಸ್ತಿತ್ವಕ್ಕೂ ವಿಜ್ಞಾನಕ್ಕೂ ಏನು ಸಂಬಂಧ?
    ೩. ಅಸ್ತಿತ್ವದಲ್ಲಿ ಇರದಿರುವ ಸಂಗತಿಗಳಿಗೆ ವಿಜ್ಞಾನದ ಹಂಗಿಲ್ಲವೋ?

    [“ವಿಜ್ಞಾನದ ಸೂತ್ರಪ್ರಯೋಗಗಳನ್ನು ಹಾಕಿದಾಗ ಸಂಪೂರ್ಣವಾಗಿ ತಪ್ಪೆಂದು ರುಜುವಾತುಪಡಿಸಬಹುದಾದ ಸಂಗತಿ ಮೌಢ್ಯ.”]
    ೧. ಬ್ರಾಹ್ಮಣರು ಶ್ರೇಷ್ಠ. ಇದು ಮೌಢ್ಯವಲ್ಲವೇ?

    ಸದ್ಯಕ್ಕೆ ಇಷ್ಟು ಸಾಕು. ಇವುಗಳಿಗೆ ಯೋಚಿಸಿ ಸಮಾಧಾನದಿಂದ ಸಮಾಧಾನಕರವಾದ ಉತ್ತರವನ್ನು ಕೊಡಿ. ಆಮೇಲೆ ಮುಂದಿನ ಮಾತು.

    ಉತ್ತರ
    • rohithmath
     ಮೇ 11 2015

     ನಿಮ್ಮ ಈ ಮೇಲಿನ ಯಾವ ಪ್ರಶ್ನೆಗೂ ಉತ್ತರ ಕೊಡಬೇಕಾದ ಅಗತ್ಯ ಕಾಣುತ್ತಿಲ್ಲ. ಲೇಖನವನ್ನು ಮುಕ್ತಮನಸ್ಸಿನಿಂದ ಓದಿದ ಯಾರಿಗೇ ಆಗಲಿ, ಈ ಪ್ರಶ್ನೆಗಳು ಬರುವುದಕ್ಕೆ ಸಾಧ್ಯವೂ ಇಲ್ಲ! ಅಲ್ಲಲ್ಲಿ ಹೆಕ್ಕಿತೆಗೆದ ವಾಕ್ಯಗಳ ಹಿಂದುಮುಂದಿನ ಭಾಗಗಳನ್ನು ಕತ್ತರಿಸಿ ತನಗೆ ಬೇಕಾದಂತೆ ಪ್ರಶ್ನೆಗಳನ್ನು ಸೃಷ್ಟಿಸುವ ನಿಮ್ಮ ತುರಿಕೆಗೆ ಏನು ಹೇಳಲಿ? ನಗಬಹುದು ಅಷ್ಟೆ! ನಮ್ಮ ಜಗತ್ತು ಎಷ್ಟು ವೈಜ್ಞಾನಿಕವಾಗಿ ಮುಂದೆ ಹೋಗುತ್ತಿದೆಯೋ ನಾವಷ್ಟೇ ಕಂದಾಚಾರಿಗಳಾಗಿ ಹಿಂದುಳಿಯಲು ಬಯಸುತ್ತಿದ್ದೇವೆ – ಎಂಬ ಸಾಮಾನ್ಯ ವಾಕ್ಯವೂ ನಿಮಗೆ ಅರ್ಥವಾಗಿಲ್ಲ. ಅದರ ಮೇಲೂ ಕಂಸ, ಚೌಕಗಳ ಅಲಂಕಾರ ಮಾಡಿ ಎರಡುಮೂರು ಪ್ರಶ್ನೆಗಳನ್ನು ಕೇಳಿದ್ದೀರಿ. ನಿಮ್ಮಂತಹ ಕೂಪಮಂಡೂಕಗಳನ್ನು ಸರಿಮಾಡಲು ಪ್ರಯತ್ನಿಸಿ ನನಗೆ ಆಗಬೇಕಾದ್ದೇನೂ ಇಲ್ಲ. Please get life! ಎಂದು ಹಾರೈಸಬಹುದಷ್ಟೆ.

     ಉತ್ತರ
     • Nagshetty Shetkar
      ಮೇ 11 2015

      ಪ್ರಶ್ನೆಗಳಿಗೆ ಉತ್ತರ ಕೊಡದೆ ಪ್ರಶ್ನೆ ಕೇಳಿದವರ ಉದ್ದಿಶ್ಯವನ್ನೇ ಅನುಮಾನಿಸುವಂತಹ ಮಾತುಗಳನ್ನಾಡುವುದು ವೈಜ್ಞಾನಿಕ ಮನೋಭಾವವೇ ಗುರುವರ್ಯ?

      ಉತ್ತರ
     • Salam Bava
      ಏಪ್ರಿಲ್ 25 2016

      “ನಿಮ್ಮ ಈ ಮೇಲಿನ ಯಾವ ಪ್ರಶ್ನೆಗೂ ಉತ್ತರ ಕೊಡಬೇಕಾದ ಅಗತ್ಯ ಕಾಣುತ್ತಿಲ್ಲ.”

      This is the typical attitude of educated Hindus who want everyone to accept their superstitions as unquestionable truths. Isn’t it a fact that every brahmanical ritual has an associated set of beliefs with it? Isn’t it true that if not all at least some of these beliefs can be tested scientifically? Are Rohit and his educated friends ready to junk such beliefs?

      ಉತ್ತರ
      • ಶೆಟ್ಟಿನಾಗ ಶೇ.
       ಡಿಸೆ 10 2016

       ಥ್ಯಾಂಕ್ಸ್ ಬಾವ ಭಾಯಿ! ನಿಮ್ಮ ವಸ್ತುನಿಷ್ಠ ಪ್ರತಿಕ್ರಿಯೆಗಳಿಂದ ಸಂಪ್ರದಾಯವಾದಿಗಳ ಬೀಡಾಗಿದ್ದರೂ ನಿಲುಮೆ ಬೆಳಗುತ್ತಿದೆ. ಪ್ರಗತಿಪರ ವಿಚಾರಧಾರೆಯು ವಚನಸಾಹಿತ್ಯದ ಮೌಢ್ಯನಿವಾರಕ ಗುಣಗಳನ್ನು ಅಳವಡಿಸಿಕೊಂಡು ವೈದಿಕಶಾಹಿಯಿಂದ ಸಾಂಸ್ಥೀಕರಿಸಲ್ಪಟ್ಟ ಪರಂಪರಾಗತ ಮೌಢ್ಯಕ್ಕೆ ಮಾರಣಾಂತಿಕ ಪೆಟ್ಟನ್ನು ಕೊಡುತ್ತಲಿದೆ. ವೈಜ್ಞಾನಿಕ ಮನೋಭಾವವೆಂದರೆ ವಚನಸಾಹಿತ್ಯದಿಂದ ಪಕ್ವಗೊಂಡ ಮನೋಭಾವವೇ ಹೊರತು ಮತ್ತಾವುದೂ ಅಲ್ಲ. ಇದು ಅನುಭವದ ಮಾತು.

       ಉತ್ತರ
    • Nagshetty Shetkar
     ಮೇ 12 2015

     ಮೇಲಿನ ಪ್ರಶ್ನೆಗಳಿಗೆ ರೋಹಿತ್ ಅವರೇ ಉತ್ತರ ಕೊಡಬೇಕು ಅಂತ ಏನಿಲ್ಲ, ಅವರ ಲೇಖನವನ್ನು ಅವರ ಅಪೇಕ್ಷೆಯ ಮಟ್ಟದಲ್ಲಿ ಅರ್ಥ ಮಾಡಿಕೊಂಡಿರುವ ಸಮರ್ಥರು ಯಾರೂ ಉತ್ತರಿಸಬಹುದು. ವ್ಯಕ್ತಿಗತ ಅಹಂಕಾರ ಇಲ್ಲಿ ಮುಖ್ಯವಲ್ಲ, ಸಂವಾದ ಮುಖ್ಯ.

     ಉತ್ತರ
    • WITIAN
     ಮೇ 13 2015

     ೧. ವಿಜ್ಞಾನದ ತಳಹದಿ ಇರುವಂಥಾದ್ದು ಎಂದರೆ ಏನು?

     ನಾಗಶೆಟ್ಟಿ ಶೇತ್ಕರನಿಗೆ ಇಲ್ಲದಿರುವುದು.

     ೨. ವೈಜ್ಞಾನಿಕ ದೃಷ್ಟಿ ಎಂದರೆ ಏನು?

     ನಾಗಶೆಟ್ಟಿ ಶೇತ್ಕರನಿಗೆ ಇಲ್ಲದಿರುವುದು.

     ೩. ವೈಜ್ಞಾನಿಕತೆ ಎಂದರೆ ಏನು

     ನಾಗಶೆಟ್ಟಿ ಶೇತ್ಕರನಿಗೆ ಇಲ್ಲದಿರುವುದು.

     ೪. ವೈಜ್ಞಾನಿಕತೆ ಚತ್ರಿಯಡಿ ಯಾವುದು ಬರುತ್ತದೆ ಯಾವುದು ಬರುವುದಿಲ್ಲ ಅಂತ ನಿರ್ಧರಿಸುವುದು ಹೇಗೆ? ಮಾನದಂಡಗಳು ಇವೆಯೇ?

     ಅಯ್ಯಾ, ಇವೆಲ್ಲ ಗಹನ ವಿಷಯಗಳು. ಇದಕ್ಕೆ ಕೊಂಚವಾದರೂ ಆಗೀಗ ನೀನು ಕಿರಿಚಿಕೊಳ್ಳುವ ‘ಸೈನ್ಚ್’ ಎನ್ನುವ ವಿಷಯದಲ್ಲಿ ಸ್ವಲ್ಪ ಪ್ರವೇಶವಿರಬೇಕಾಗುತ್ತದೆ. ನಿನ್ನ ಓದು ಕೇವಲ ನಿನ್ನ ‘ಡ್ರಗ್ಗಾ ಸರ್’ ಬರಹಗಳಷ್ಟಕ್ಕೇ ಸೀಮಿತವಾದ್ದರಿಂದ ನೀನು ಸುಮ್ಮನಿರುವುದೇ ಒಳ್ಳೆಯದು.

     ೫. ವೈಜ್ಞಾನಿಕವಾಗಿ ಮುಂದೆ ಹೋಗುವುದು ಅಂದರೆ ಏನು?

     ೪ನೇ ಪ್ರಶ್ನೆಗೆ ಕೊಟ್ಟ ಉತ್ತರವನ್ನು ಮತ್ತೊಮ್ಮೆ ಓದು, ಅರ್ಥವಾಗದಿದ್ದರೆ ಮಗದೊಮ್ಮೆ ಓದು.

     ೬. ಜಗತ್ತು ವೈಜ್ಞಾನಿಕವಾಗಿ ಮುಂದೆ ಹೋಗುತ್ತಿದೆ ಎಂದ ಮೇಲೆ ನಾವು ಕಂದಾಚಾರಿ (ದರ್ಗಾಚಾರಿ ಎಂದು ನೀನು ಓದಿಕೊ)ಗಳಾಗಿ ಹಿಂದೆ ಬೀಳಲು ಹೇಗೆ ಸಾಧ್ಯ? ಮುಂದೆ ಹೋಗುತ್ತಿರುವ ಜಗತ್ತಿನಲ್ಲೇ ಅಲ್ಲವೇ ನಾವು ಇರುವುದು?

     ನಾವೆಲ್ಲ ಮುಂದೆ ಹೋಗುತ್ತಿರುವ ಜಗತ್ತಿನಲ್ಲೇ ಇದ್ದೇವೆ. ಆದರೆ ಕೆಲವರು ಅಂತಹ ಒಂದು ಯಾನದಲ್ಲಿ ಹಿಮ್ಮುಖವಾಗಿ ಕುಳಿತು ಹಿಂದೆ ಹೋಗುತ್ತಿರುವಂತೆ ನಟಿಸುತ್ತಿದ್ದಾರೆ. ನಾಶೆಶೇ ಅಂತಹ ವ್ಯಕ್ತಿಗಳಲ್ಲಿ ಒಬ್ಬ.

     ೭. ನಂಬಿಕೆಗೂ ಕ್ರಿಯೆಗೂ ಇರುವ ಸಂಬಂಧವೇನು?

     ಯಾವ ನಂಬಿಕೆ? ಯಾವ ಕ್ರಿಯೆ? ವಿಶದೀಕರಿಸಲು ಸಾಧ್ಯವೇ? ಇದಕ್ಕೆ ಉತ್ತರ ನಿನಗೆ ಸಾಧ್ಯವಿಲ್ಲ ಎಂದು ನಿಟ್ಟುಸಿರು ಬಿಡಬೇಕಾಗುತ್ತದೆ.

     ೮. ಯಾವ ಸಂಗತಿ ವಿಜ್ಞಾನದ ಪರಿಧಿಗೆ ಬರುತ್ತದೆ ಹಾಗೂ ಯಾವುದು ಬರುವುದಿಲ್ಲ?

     ನಾಲ್ಕೆರಡ್ಲಿ ಎಂಟು! ನಾಲ್ಕನೆ ಪ್ರಶ್ನೆಯನ್ನೇ ಬೇರೆಪದಗಳನ್ನು ಬಳಸಿ ಕೇಳುವುದು ಕೇವಲ ಕುಚೋದ್ಯಕ್ಕೋ ಅಥವಾ ಕೇಳಿದ್ದೇ ಮರೆತು ಹೋಯಿತೋ?

     ೯. ನಾಳೆಯ ದಿನ ನೀವು ಬದುಕಿರುತ್ತೀರಿ ಅಥವಾ ಇರುವುದಿಲ್ಲ ಇದು ವೈಜ್ಞಾನಿಕವೋ ಅವೈಜ್ಞಾನಿಕವೋ? ಇದನ್ನು ವಿಜ್ಞಾನದ ಸೂತ್ರ, ಸಮೀಕರಣ, ಪ್ರಯೋಗಗಳಿಗೆ ಅಳವಡಿಸುವುದು ಎಂದರೆ ಏನು?

     ನಿನ್ನ ಖಾಲಿ ತಲೆಯ ಬುರುಡೆಯೊಳಗೆ ಲೈಟು ಬಲ್ಬು ಹಚ್ಚಲು ಸಾಧ್ಯವೋ, ಇಲ್ಲವೋ? ಮೇಲಿನ ಲೇಖನ ನಿಜವಾಗಿಯೂ ಓದಿದ್ದರೆ ಈ ಪ್ರಶ್ನೆಯನ್ನು ನಿನ್ನಂತಹ ಮಡ್ಡಿ ತಲೆಯೂ ಕೇಳುತ್ತಿರಲಿಲ್ಲ.

     ೧೦. ಮಡೆಸ್ನಾನದಿಂದ ಚರ್ಮರೋಗ ವಾಸಿಯಾಗುತ್ತದೆ. ಇದು ವೈಜ್ಞಾನಿಕವೋ ಅವೈಜ್ಞಾನಿಕವೋ?

     ನಾಗಶೆಟ್ಟಿ ಶೇತ್ಕರನಿಗೆ ಮಂಡೆ ಸಮವಾದಾಗ ಮಡೆಸ್ನಾನದಿಂದ ಚರ್ಮ ರೋಗವೂ ಗುಣವಾಗುತ್ತದೆ.

     ೧೧. ತಿರುಪತಿಯಲ್ಲಿ ಮುಡಿ ಕೊಡುವುದರಿಂದ ವೆಂಕಟೇಶ್ವರ ಸುಪ್ರೀತನಾಗಿ ನಿಮ್ಮ ಭಾಗ್ಯದ ಬಾಗಿಲನ್ನು ತೆಗೆಯುತ್ತಾನೆ. ಇದು ವೈಜ್ಞಾನಿಕವೋ ಅವೈಜ್ಞಾನಿಕವೋ?

     ಕೇವಲ ‘ಡ್ರಗ್ಗಾಸರ್’ ಅವರ ಲೇಖನಗಳನ್ನು ಓದುವುದರಿಂದಲೇ ಕೈವಲ್ಯಜ್ಞಾನ ಸಿಗುವುದಾದರೆ, ೧೧ನೇ ಪ್ರಶ್ನೆಗೆ ಉತ್ತರ ಕೂಡಾ ದೊರೆಯುತ್ತದೆ.

     ೧೨. ಪುರುಷನ ಮುಖದಿಂದ ಬ್ರಾಹ್ಮಣರು ಹುಟ್ಟಿದರು. ಇದು ವೈಜ್ಞಾನಿಕವೋ ಅವೈಜ್ಞಾನಿಕವೋ?

     ಡ್ರಗ್ಗಾ ಸರ್ ಅವರ ಮುಖದಿಂದ ವಚನಗಳ ಘೋರ ಭಾಷ್ಯವೊಂದು ಹುಟ್ಟಿದ್ದು ಅದೆಷ್ಟು ವೈಜ್ಞಾನಿಕವೋ ಪುರುಷನ ಮುಖದಿಂದ ಬ್ರಾಹ್ಮಣರು ಹುಟ್ಟಿದ್ದು ಕೂಡಾ ಅಷ್ಟೇ ವೈಜ್ಞಾನಿಕ.

     ೧೩. ಭೂಮಿ ಚಂದ್ರ ಸೂರ್ಯ ಗ್ರಹ ನಕ್ಷತ್ರಗಳು ವಿಜ್ಞಾನದ ಸೂತ್ರ, ಪ್ರಯೋಗಗಳ ಹಂಗಿನಿಂದ ಅಸ್ತಿತ್ವದಲ್ಲಿದೆಯೇ?

     ಅಲ್ಲವಾದರೆ ಹಾಗಂತ ಪ್ರೂವ್ ಮಾಡಲು ನಿನಗೆ ಸಾಧ್ಯವೇ?

     ೧೪. ಅಸ್ತಿತ್ವಕ್ಕೂ ವಿಜ್ಞಾನಕ್ಕೂ ಏನು ಸಂಬಂಧ?

     ನಾಗಶೆಟ್ಟಿ ಶೇತ್ಕರ್ ಗೂ ತರ್ಕ ಬದ್ಧ ವಾದಕ್ಕೂ ಏನು ಸಂಬಂಧ?

     ೧೫. ಅಸ್ತಿತ್ವದಲ್ಲಿ ಇರದಿರುವ ಸಂಗತಿಗಳಿಗೆ ವಿಜ್ಞಾನದ ಹಂಗಿಲ್ಲವೋ?

     ಅಸ್ತಿತ್ವದಲ್ಲಿ ಇರದಿರುವ ಸಂಗತಿಗಳಿಗೆ ಉದಾಹರಣ್ತೆ ಏನು.. ನಾಗಶೆಟ್ಟಿ ಶೇತ್ಕರನ ಮಿದುಳು?

     ೧೬. ಬ್ರಾಹ್ಮಣರು ಶ್ರೇಷ್ಠ. ಇದು ಮೌಢ್ಯವಲ್ಲವೇ?

     ಜಗತ್ತಿನಲ್ಲಿ ಡ್ರಗ್ಗಾ ಸರ್ ಬರೆದದ್ದೆಲ್ಲವೂ ಅಪ್ಪಟ ಚಿನ್ನ ಎಂದು ನಂಬುವುದು ಮಾತ್ರ ಮೌಢ್ಯವಲ್ಲ…ಅಲ್ಲವೆ!

     ಉತ್ತರ
     • ಮೇ 13 2015

      ಆನಂದದಾಯಕವಾದ ಜವಾಬುಗಳು.ನಕ್ಕು ನಕ್ಕು ಸಾಕಾಯಿತು.

      ಉತ್ತರ
     • Nagshetty Shetkar
      ಮೇ 13 2015

      ನಿಮ್ಮ ಯೋಗ್ಯತೆ ಅಲ್ಪಮಟ್ಟದ ರಂಜನೆಗೆ ಸೀಮಿತ ಅಂತ ಅನುಮಾನವಿತ್ತು, ಈಗ ದೃಢವಾಯಿತು.

      ಉತ್ತರ
      • ಮೇ 14 2015

       ನಿಮ್ಮ ಅನಿಸಿಕೆ ಅನುಮಾನಗಳ ಚೌಕಟ್ಟಿನ ಒಳಗೆ ಬದುಉವ ದರ್ದು ನನಗಿಲ್ಲ ಕುಚೇಷ್ಟಕರೆ. ಕೊನೆಗೂ ಕಡ್ಡಿ ಆಡಿಸಿ ವಿಷಯಾಂತರ ಮಾಡುವ ಧೋರಣೆಗೆ ಚಾಟಿ ಏಟಿನಂಥ ಜವಾಬುಗಳನ್ನು ತೀಕ್ಷಣವಾಗಿ ಆದರೆ ಹಾಸ್ಯಮಾಯವಾಗಿ ಬರೆದ ಕಾರಣ ನಗಲೇಬೇಕಾಯ್ತು.
       ನೀವು ಅಂದುಕೊಳ್ಳುವುದು ನೀಡುವುದು ನಿಮ್ಮ ಕರ್ಮ.

       ಉತ್ತರ
       • ಮೇ 14 2015

        ಕಣ್ತಪ್ಪುಗಳು:
        ಬದುಕುವ
        ಹಾಸ್ಯಮಯ
        ಅಂದುಕೊಳ್ಳುವುದು ಬಿಡುವುದು

        ಉತ್ತರ
     • rohithmath
      ಮೇ 14 2015

      WITIAN ಅವರೇ, ಯಾಕೆ ವೃಥಾ ನಿಮ್ಮ ಶಕ್ತಿ ವ್ಯಯ ಮಾಡಿಕೊಳ್ಳುತ್ತೀರಿ! ಆದರೂ ಇದ್ದಿಲನ್ನು ತಿಕ್ಕಿ ಚಿನ್ನ ಮಾಡುವ ನಿಮ್ಮ ಪ್ರಯತ್ನಕ್ಕೆ ನನ್ನ ಕಡೆಯಿಂದ ಒಂದು ಸಲಾಂ!

      ಉತ್ತರ
     • GANESH BHAT
      ಮೇ 14 2015

      Very nice reply,

      ಉತ್ತರ
 8. Nagshetty Shetkar
  ಮೇ 12 2015

  “ಯಾವುದು ವಿಜ್ಞಾನ, ಯಾವುದು ಮೌಢ್ಯ ಎಂಬ ತಿಳುವಳಿಕೆ”

  ಜಾತಿಯ ಆಧಾರದ ಮೇಲೆ ಪಂಕ್ತಿ ಭೇದ ಮಾಡುವುದು ವೈಜ್ನಾನಿಕವೋ ಮೌಢ್ಯವೋ?
  ಬ್ರಾಹ್ಮಣರ ಉಚ್ಚಿಷ್ಟದ ಮೇಲೆ ಹೊರಳಾಡುವುದು ವೈಜ್ನಾನಿಕವೋ ಮೌಢ್ಯವೋ?
  ಮಡಿ ಹೆಸರಿನಲ್ಲಿ ಮುಟ್ಟಿಸಿಕೊಳ್ಳದಿರುವುದು ವೈಜ್ನಾನಿಕವೋ ಮೌಢ್ಯವೋ?
  ವೇದಗಳೇ ಪರಮಸತ್ಯ ಎಂಬುದು ವೈಜ್ನಾನಿಕವೋ ಮೌಢ್ಯವೋ?
  ವೇದಘೋಷವನ್ನು ಕೇಳಿಸಿಕೊಂಡ ಶೂದ್ರರ ಕಿವಿಗೆ ಸೀಸ ಸುರಿಯತಕ್ಕದ್ದು ಎಂಬುದು ವೈಜ್ನಾನಿಕವೋ ಮೌಢ್ಯವೋ?
  ವಿಧವೆಯ ಮುಡಿಯನ್ನು ತೆಗೆಸಿ ಕಾವಿ ವಸ್ತ್ರ ಉಡುವಂತೆ ಮಾಡುವುದು ವೈಜ್ನಾನಿಕವೋ ಮೌಢ್ಯವೋ?

  ತಮ್ಮ ತಿಳುವಳಿಕೆಯ ಪರಿಚಯವನ್ನು ನಮಗೂ ಮಾಡಿಕೊಡಿ.

  ಉತ್ತರ
  • ರಂಜನಾ ರಾಮ್ ದುರ್ಗಾ
   ಮೇ 13 2015

   ನಿಮ್ಮ ಗುರುಗಳಿಗಿಂತ ಮೌಢ್ಯಕ್ಕೆ ಉದಾಹರಣೆ ಉಂಟೇನು ಸಹೋದರರೇ 😛

   ಉತ್ತರ
   • Nagshetty Shetkar
    ಮೇ 13 2015

    ಸಿಸ್ಟರ್ ರಂಜನಾ, ದರ್ಗಾ ಸರ್ ಅವರ ಚಿಂತನೆಯು ಪ್ರಗತಿಪರ ತತ್ವಗಳ ನೆಲೆಯಲ್ಲಿ ಪಕ್ವಗೊಂಡಂತಹದ್ದು. ವಚನಸಾಹಿತ್ಯದ ಮೌಢ್ಯನಿವಾರಕ ಗುಣಗಳನ್ನು ಅಳವಡಿಸಿಕೊಂಡು ವೈದಿಕಶಾಹಿಯಿಂದ ಸಾಂಸ್ಥೀಕರಿಸಲ್ಪಟ್ಟ ಪರಂಪರಾಗತ ಮೌಢ್ಯಕ್ಕೆ ಮಾರಣಾಂತಿಕ ಪೆಟ್ಟನ್ನು ಕೊಡುತ್ತಲಿದೆ.

    ಉತ್ತರ
 9. WITIAN
  ಮೇ 13 2015

  ಶ್ರೀ ರೋಹಿತ್ ಚಕ್ರತೀರ್ಥ ಅವರ ಲೇಖನಗಳು ಚೆನ್ನಾಗಿವೆ. ಆದರೆ ಪ್ರತಿಕ್ರಿಯೆಗಳಿಗೆ ಉತ್ತರಿಸುವಾಗ (ಶಿವಾಯ್ ನಾಗಶೆಟ್ಟಿ ಶೇತ್ಕರ್ ಪ್ರತಿಕ್ರಿಯೆಗಳು) ಅವರು ಕೊಂಚ ಸೈರಣೆ ಇರಿಸಿಕೊಳ್ಳುವುದು ಒಳ್ಳೆಯದು. ಸಂಖ್ಯಾಶಾಸ್ತ್ರ(statistics)ದ ಬಗ್ಗೆ ಹಗುರ ಅಭಿಪ್ರಾಯವನ್ನು ವ್ಯಕ್ತಪಡಿಸುವ ಉತ್ತರವನ್ನು ಪ್ರತಿಕ್ರಿಯೆಯೊಂದಕ್ಕೆ ಉತ್ತರಿಸುವಾಗ ಅವರಿಂದ ಕಂಡು ಆಘಾತವೇ ಆಯಿತು. After all, ಸಂಭಾವ್ಯತೆಯ (probability) ಯ ಸಂಕೀರ್ಣ ಸ್ವರೂಪವನ್ನು, ಅಲ್ಲೋಲಕಲ್ಲೋಲವಾಗಿ ಕಾಣುವ ನಿಸರ್ಗದ ಅನೇಕ ವಿದ್ಯಮಾನಗಳನ್ನು ಅರಿತುಕೊಳ್ಳಲು ಸಂಖ್ಯಾಶಾಸ್ತ್ರದ ಜ್ಞಾನ ಬಹಳ ಸಹಾಯಕಾರಿ. ವಿಜ್ಞಾನದ ಈ ಶಾಖೆಯ ಉಪಯುಕ್ತತೆಯನ್ನು ಅಲ್ಲಗಳೆಯುವುದು ಬಹಳ ಕಷ್ಟಸಾಧ್ಯ!

  ಉತ್ತರ
  • rohithmath
   ಮೇ 13 2015

   Statistics ಬಗ್ಗೆ ಬಂದ ಪ್ರಶ್ನೆಗೆ ನಾನು ಉತ್ತರಿಸಿದ್ದನ್ನು ಕಂಡು ಹಲವರಿಗೆ ಆ ಬಗೆಯ ಆಘಾತ ಆಗಿದೆ! ಸಂಖ್ಯಾಶಾಸ್ತ್ರ ಕೀಳು ಎಂದು ನಾನು ಹೇಳಿಲ್ಲ; ಹಗುರ ಎಂದೂ ಭಾವಿಸಿಲ್ಲ. ಆದರೆ, ಸಂಖ್ಯಾಶಾಸ್ತ್ರವೊಂದನ್ನೇ ಮಾನದಂಡವಾಗಿ ಇಟ್ಟುಕೊಂಡು ಯಾವುದು ವೈಜ್ಞಾನಿಕ ಯಾವುದು ಅಲ್ಲ ಎಂದು ವಿಂಗಡಿಸುವುದು ಸಾಧುವಲ್ಲ ಎನ್ನುವುದು ನನ್ನ ಮಾತಿನ ಅರ್ಥ. “ಬಾಳೆಹಣ್ಣು ಹಳದಿ ಇರುತ್ತದೆ, ಆದರೆ ಹಳದಿ ಇರುವುದೆಲ್ಲ ಬಾಳೆಹಣ್ಣಲ್ಲ” ಎಂಬರ್ಥ ಕೊಡುವ ಸಂಸ್ಕೃತ ನ್ಯಾಯವೊಂದಿದೆ. ಇದನ್ನೇ ಬೆಳೆಸಿ ತರ್ಕಶಾಸ್ತ್ರದಲ್ಲಿ inverse, converse, contrapositive ಎಂಬ ನಿಬಂಧಿತಗಳು ಬಂದಿವೆ. ಕಾರ್ಯಕಾರಣ ತತ್ವಕ್ಕೂ ಇದೇ ಮೂಲ. ಕಾರ್ಯಕಾರಣ ತತ್ವ ಎಂದರೆ “ಒಂದು ಸಂಗತಿ ನಡೆಯಿತು. ಅದು ನಡೆಯಬೇಕಾದರೆ ಇನ್ನೊಂದು ಸಂಗತಿ ಕಾರಣವಾಯಿತು” ಎಂಬ ಸರಳ ವಿಷಯ ಅಲ್ಲ. ಅವೆರಡೂ ಸಂಗತಿಗಳಿಗೆ ಈ ಮೇಲೆ ಹೇಳಿದ ಮೂರು ನಿಬಂಧಿತಗಳನ್ನು ಆರೋಪಿಸಿ ಸತ್ಯ ಎಂದು ಕಂಡುಬಂದರೆ ಮಾತ್ರ ಅಂಥಾದ್ದನ್ನು ಸತ್ಯ ಎಂದು ಒಪ್ಪಿಕೊಳ್ಳಬಹುದು. ಒಂದು ವಿಚಾರ ವೈಜ್ಞಾನಿಕ ಹೌದೋ ಅಲ್ಲವೋ ಎನ್ನುವುದನ್ನು ಪರೀಕ್ಷಿಸಲು ಕಾರ್ಯಕಾರಣ ಸಂಬಂಧದ ಪರಿಶೀಲನೆಯೊಂದು ಪರಿಶುದ್ಧ ಮಾರ್ಗ.

   ಬೇಕಾದರೆ ಹೀಗೆ ಇಟ್ಟುಕೊಳ್ಳಿ. “ಕಾರ್ಯಕಾರಣ ಸಂಬಂಧ”ದ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಎಂದರೆ ವಾಹನಚಾಲನೆ ತಿಳಿದುಕೊಂಡಂತೆ. ಆದರೆ Statistics ಆಗಲೀ Probability ಆಗಲೀ ಅಥವಾ ಪ್ರಯೋಗಗಳೇ ಆಗಲಿ, ಅವೆಲ್ಲ ಕಾರು, ಬೈಕು, ಬಸ್ಸು ಇತ್ಯಾದಿ ವಾಹನಗಳಿದ್ದಂತೆ. ವಾಹನ ಯಾವುದೋ ಕಾರಣಕ್ಕೆ ಕೆಟ್ಟು ನಿಲ್ಲಬಹುದು; ಆದರೆ ಡ್ರೈವಿಂಗ್ ಚೆನ್ನಾಗಿ ಬಂದರೆ ನೀವು ಯಾವುದೇ ವಾಹನದಲ್ಲಿ ಹೋಗಿ ಗುರಿಮುಟ್ಟಬಲ್ಲಿರಿ. Statistics is not a yardstick to identify the “science”, it is only a tool that can be used when it suits the situation – ಎಂದು ನಾನು ಹೇಳಿದ್ದು ಆ ಬಾವಾರ್ಥದಲ್ಲಿ. Statistics ಪ್ರಕಾರ ಟೆಸ್ಟ್ ಮಾಡಿದಾಗ ನೂರಕ್ಕೆ ನೂರಂಕ ಪಡೆದದ್ದನ್ನು ಮಾತ್ರ ವಿಜ್ಞಾನ ಎನ್ನಬಹುದಾದರೆ ನಾವಿಂದು ಬಳಸುತ್ತಿರುವ ಸಾವಿರಾರು ವೈಜ್ಞಾನಿಕ ಸಲಕರಣೆಗಳನ್ನು ಮೂಲೆಯಲ್ಲಿಡಬೇಕಾಗುತ್ತದೆ. ಹಾಗೆ ನೋಡಲು ಹೋದರೆ ರಾಕೆಟ್ ಹಾರಿಸುವುದು ಕೂಡ ವೈಜ್ಞಾನಿಕವಲ್ಲ ಎಂದುಬಿಡಬೇಕು! ಯಾಕೆಂದರೆ ಅಲ್ಲೂ ನಮಗೆ ಇದುವರೆಗೆ ೧೦೦% ಯಶಸ್ಸು ಸಿಕ್ಕಿಲ್ಲವಲ್ಲ!

   ವೈಜ್ಞಾನಿಕ ದೃಷ್ಟಿಕೋನ ಬೆಳೆಸಿಕೊಳ್ಳುವುದಕ್ಕೂ “ಯಾವುದು ವೈಜ್ಣಾನಿಕ ಯಾವುದು ಅಲ್ಲ” ಎಂದು ವಿಂಗಡಿಸುತ್ತ ಕೂರುವುದಕ್ಕೂ ಬಹುದೊಡ್ಡ ಅಂತರ ಇದೆ ಎಂದು ನಾನು ಲೇಖನದಲ್ಲಿ ಸ್ಪಷ್ಟಪಡಿಸಿದ್ದೇನೆ. ಅದನ್ನು ತಿಳಿಯದೆ ಶೇಟ್ಕರ್ ಮತ್ತೆಮತ್ತೆ ತನ್ನ ಪಟ್ಟಿ ಹಿಡಿದುಕೊಂಡು ಬಂದು “ಇದರಲ್ಲಿ ಯಾವುದು ವೈಜ್ಞಾನಿಕ ಯಾವುದು ಮೌಢ್ಯ?” ಎಂದು ಕೇಳಿದರೆ ಏನು ಹೇಳೋದು! (ಅವರಿಗೆ ಲೇಖನದಲ್ಲಿ ನಂಬಿಕೆ ಎಂಬ ಮೂರನೇ ವರ್ಗೀಕರಣ ಕಾಣಲಿಲ್ಲ!!)

   ಉತ್ತರ
   • WITIAN
    ಮೇ 13 2015

    ಮಾನ್ಯ ರೋಹಿತ್ ಅವರೆ, statistics ಒಂದೇ ವೈಜ್ಞಾನಿಕ ಮಾನದಂಡ ಅಲ್ಲ ಎಂದು ವಿಜ್ಞಾನದ ವಿದ್ಯಾರ್ಥಿಯಾದ ಯಾರಿಗೂ ತಿಳಿಯುತ್ತದೆ. ಆದರೆ ವಿದ್ಯಮಾನಗಳ ಅಳತೆಗೋಲಾಗಿ Statistics ನ ಉಪಯುಕ್ತತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಅದನ್ನು ಫಲಿತಾಂಶದ ಸಂಭಾವ್ಯತೆ ಅಥವಾ ಸಂಭವನೀಯತೆಯನ್ನು ಹಿಂದಿನ ಅನುಭವಗಳ ಹಿನ್ನೆಲೆಯಲ್ಲಿ ಊಹಿಸುವ ಒಂದು ವಿಧಾನ ಎಂದು ಕರೆಯಬಹುದು. ಉದಾಹರಣೆಗೆ, ಮೋಡದ ಸಾಂದ್ರತೆ, ವಿಸ್ತಾರ, ಅಂದಾಜು ಭಾರ, ಸಮುದ್ರಮಟ್ಟದಿಂದ ಎಷ್ಟು ಎತ್ತರದಲ್ಲಿದೆ ಇತ್ಯಾದಿ ವಿವರಗಳು ಲಭ್ಯವಿದ್ದರೆ ಮಳೆ ಬೀಳುತ್ತದೆಯೋ ಇಲ್ಲವೋ ಎನ್ನುವ ಸಂಭವನೀಯತೆಯನ್ನು ಊಹಿಸಲು, ಅಥವಾ, ಒಂದು ಔಷಧದಿಂದ ಎಷ್ಟು ಜನರಿಗೆ ರೋಗವೊಂದರಿಂದ ಗುಣವಾಯಿತು ಎನ್ನುವ ಅನುಭವದ ಮೇಲೆ ಆ ರೋಗವನ್ನು ನಿವಾರಿಸುವಲ್ಲಿ ಔಷಧದ ಕ್ಷಮತೆ ಏನು ಎಂದು ಕಂಡುಹಿಡಿಯುವ ಇವೇ ಮೊದಲಾದ ವಿಷಯಗಳಲ್ಲಿ statistics ನ ಉಪಯುಕ್ತತೆ ಕಾಣಬಹುದು.

    ಆದರೆ statistics ಎಲ್ಲ ವಿಷಯಗಳಿಗೂ ಒಗ್ಗುವ ಮಾನದಂಡ ಎಂದು ಪಟ್ಟು ಹಿಡಿದರೆ ‘ಎಲ್ಲಾ ಸಮಸ್ಯೆಗಳಿಗೂ ನಮ್ಮ ಡ್ರಗ್ಗಾ ಸರ್ ಬಳಿ ಉತ್ತರವಿದೆ’ ಎಂದು ಕಾವ್ಯಶಾಸ್ತ್ರ ವಿನೋದದ ನಡುವೆ ‘ಮನುಸ್ಮ್ರುತಿ’ ಯ ಚರ್ಚೆಯ ಹೊರೆ ಹೊತ್ತು ಬರುವ ಕತ್ತೆಯೊಂದರ ಅರಚಾಟದಂತೆ ಅನ್ನಿಸುತ್ತದೆ.

    ಗಣಿತದಲ್ಲಿ ನಿಮಗಿರುವ ಉತ್ತಮ ಅರಿವು, ಕನ್ನಡದ ಮೇಲೆ ನಿಮಗಿರುವ ಪ್ರಭುತ್ವ ಮೆಚ್ಚುಗೆಯ ವಿಷಯ. ಒಂದು ಬಿಟ್ಟಿ ಸಲಹೆ, ನೀವೇಕೆ statistics ಬಗ್ಗೆ ಸರಳ ಕನ್ನಡದಲ್ಲಿ ಒಂದು ಚಿಕ್ಕ, ಚೊಕ್ಕ ಲೇಖನ ಬರೆಯಬಾರದು?

    ಉತ್ತರ
   • Nagshetty Shetkar
    ಮೇ 13 2015

    “ವೈಜ್ಞಾನಿಕ ದೃಷ್ಟಿಕೋನ ಬೆಳೆಸಿಕೊಳ್ಳು”

    ರೋಹಿತ್ ಅವರೇ, ವೈಜ್ಞಾನಿಕ ದೃಷ್ಟಿಕೋನ ಅಂದರೆ ಏನು ಅಂತ ತಮಗೆ ಸ್ಪಷ್ಟತೆ ಇದ್ದರೆ ಅದು ಏನು ಅಂತ ಸ್ಪಷ್ಟವಾಗಿ ಹೇಳಿ. ಸುಮ್ಮನೆ ವಿಜ್ಞಾನದ ತಳಹದಿ ಇರುವುದು ವೈಜ್ಞಾನಿಕ ಅಂತ ಹಾರಿಕೆಯ ಮಾತುಗಳ ಮೂಲಕ ಗಹನವಾದ್ದುದನ್ನು ಹೇಳಿದೆ ಎಂದು ಬೀಗುವುದನ್ನು ನಿಲ್ಲಿಸಿ. ನಮ್ಮೆಲ್ಲರ ದೈನಂದಿನ ತಾಕಲಾಟಗಳಲ್ಲಿ ವೈಜ್ಞಾನಿಕ ದೃಷ್ಟಿಕೋನದ ಮೂಲಕ ನಾವು ಸಾಧಿಸಬಹುದಾದದ್ದು ಏನು ಅಂತ ಕುತೂಹಲ ಎಲ್ಲರಿಗೂ ಇದೆ. ಆದುದರಿಂದ ವಿಷಯಸ್ಪಷ್ಟತೆ ಚರ್ಚೆಗೆ ಅನಿವಾರ್ಯ.

    ಉತ್ತರ
    • rohithmath
     ಮೇ 14 2015

     ಇಡೀ ಲೇಖನವೇ ವೈಜ್ಞಾನಿಕ ಮನೋಧರ್ಮದ ಬಗ್ಗೆ ನಡೆದಿರುವ ಜಿಜ್ಞಾಸೆ. ಅದು ಒಂದೇ ವಾಕ್ಯದಲ್ಲಿ ಹೇಳಿಬಿಡುವಷ್ಟು ಸರಳವಾಗಿದ್ದರೆ ಹಾಗೇ ಮಾಡುತ್ತಿದ್ದೆ. ಕೆಲವರಿಗೆ ಕೆಲವು ವಿಷಯಗಳು ಅರ್ಥವಾಗುವುದು ಕಷ್ಟ. ಎಲ್ಲವೂ ನಮಗೆ ಅರ್ಥ ಆಗಿಯೇ ತೀರಬೇಕೆಂಬ ನಿಯಮವೇನೂ ಇಲ್ಲ. ಇದುವರೆಗಿನ ಚರ್ಚೆಯಿಂದ ನಿಮಗೆ ಈ ವೈಜ್ಞಾನಿಕ ಮನೋಧರ್ಮದ ಬಗ್ಗೆ ಅರ್ಥಮಾಡಿಸುವುದು ಕಷ್ಟ ಎಂಬ ತಿಳಿವಳಿಕೆ ನನಗೆ ಮೂಡಿದೆ. ಅರ್ಥ ಮಾಡಿಕೊಳ್ಳಲೇಬೇಕೆಂಬ ಆರೋಗ್ಯಕರ ಹಠವಿದ್ದರೆ (ಅದೇನಾದರೂ ಇದ್ದರೆ ಸ್ವಾಗತಾರ್ಹ), ದಯವಿಟ್ಟು ಲೇಖನವನ್ನು ಮೂರ್ನಾಲ್ಕು ಸಲ ಸಮಾಧಾನಚಿತ್ತದಿಂದ ಓದಿಕೊಳ್ಳಿ. ವೈಜ್ಞಾನಿಕ ಮನೋಧರ್ಮದ ಬಗ್ಗೆ ಫೈನ್ಮನ್ ಎಂಬ ಬಹುದೊಡ್ಡ ದಾರ್ಶನಿಕ ವಿಜ್ಞಾನಿಯ ಅರ್ಥಪೂರ್ಣ ಮಾತುಗಳನ್ನು ಉದಾಹರಿಸಿದ್ದೇನೆ. ಕೇವಲ ಅದೊಂದು ಪ್ಯಾರಾಗ್ರಾಫ್ ನಿಮಗೆ ಅರ್ಥವಾದರೂ ಸಾಕು, ನಾನು ಧನ್ಯ!

     ಹಾರಿಕೆಯ ಮಾತು ಬೇಡ, ಬೀಗುವುದನ್ನು ನಿಲ್ಲಿಸಿ – ಇತ್ಯಾದಿ ಮಾತುಗಳು ನಿಮ್ಮಿಂದ ಬರಬಾರದು. ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ ಎಂದ ಬಸವನ ವಚನ ನಿಮಗೆ ಪ್ರಶಸ್ತಿ ಹೊಡೆಯಲು ಮಾತ್ರವೆ? ಅನುಕರಣೆಯಲ್ಲೂ ಬರಬೇಕಲ್ಲವೆ?

     ಉತ್ತರ
    • WITIAN
     ಮೇ 14 2015

     ಅಯ್ಯಾ ನಿನಗೆ ಕನಿಷ್ಠ SSLC ಮಟ್ಟದ ಜ್ಞಾನಾರ್ಹತೆಯಾದರೂ ಇದೆಯಾ, ಎಂದು ಮಿಕ್ಕ ಓದುಗರಿಗೆ ಸಂದೇಹ ಬರಲು ಕಾರಣವಿದೆ. ಅದಕ್ಕೇ ಹೇಳಿದ್ದು, ಇಡೀ ಲೇಖನವನ್ನು ಒಮ್ಮೆಯಾದರೂ ಓದು ಅಂತ. ವಿಜ್ಞಾನದ ತಳಹದಿ ಅಂದರೆ ಏನು ಅಂತ ಅರ್ಥ ಮಾಡಿಕೊಳ್ಳುವ ಮೊದಲು ಇದನ್ನು ಓದು “..ಅತ್ಯಂತ ನಿಖರವಾದ ಮತ್ತು ಪುನರಾವರ್ತಿಸಿ ನೋಡಬಹುದಾದ ತರ್ಕಶುದ್ಧ ವಿನ್ಯಾಸ ಇದೆ ಎನ್ನುವುದು ವಿಜ್ಞಾನದ ಒಂದು ಮೂಲಾಂಶ..” ಇದು ಲೇಖನದ ಒಂದು ಸಾಲು, ಇನ್ನೂ ವಿವರಿಸಿ ಹೇಳಬೇಕಂದರೆ ಐದನೆ ವಾಕ್ಯಪುಂಜ (ಪ್ಯಾರಾಗ್ರಾಫ್) ದ ಮೊದಲ ವಾಕ್ಯ (ಇದಕ್ಕೆ ಮೊದಲು ನಾಲ್ಕನೆ ವಾಕ್ಯಪುಂಜವನ್ನು ಓದಿರಬೇಕಾಗುತ್ತದೆ, ಮತ್ತೆ ಆಕ್ಷೇಪಿಸಬೇಡ ಇದನ್ನೂ ಹೇಳಬೇಕಿತ್ತು, ಇದೆಲ್ಲ ವೈದಿಕರ ಕುತಂತ್ರ, ಜನಸಾಮಾನ್ಯರನ್ನು ದಿಕ್ಕುಗೆಡಿಸುವ ಹುನ್ನಾರ, ಶೋಷಿತರ ಮೇಲೆ ದಬ್ಬಾಳಿಕೆ, ಇತ್ಯಾದಿ… ಬಹುಶಃ ಈ ಸಾಲು ನಿನ್ನ ಡ್ರಗ್ಗಾ ಸರ್ ಪುಂಖಾನುಪುಂಖವಾಗಿ ಬರೆದ ಲೇಖನಗಳಲ್ಲಿ ಇಲ್ಲವೇನೋ, ಅದಕ್ಕೆ ನಿನಗೆ ಅರ್ಥವಾಗಿಲ್ಲ).

     ಉತ್ತರ
     • Nagshetty Shetkar
      ಮೇ 15 2015

      ರೋಹಿತ್ ಹಾಗೂ ಅವರ ಅಭಿಮಾನಿ ಓದುಗರೇ, ಬಸವಶ್ರೀ ಪ್ರಶಸ್ತಿಗೂ ನಿಮ್ಮ ಲೇಖನದ ನ್ಯೂನ್ಯತೆಗಳಿಗೂ ಯಾವ ಸಂಬಂಧವೂ ಇಲ್ಲ. ಬಸವಶ್ರೀ ಪ್ರಶಸ್ತಿ ಪಡೆಯಲು ವಚನಸಾಹಿತ್ಯ ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆ ಮಾಡಿರಬೇಕು. ನನಗೆ ಮೂರು ನಾಲ್ಕು ಬಾರಿ ನಿಮ್ಮ ಲೇಖನ ಓದಲು ಹೇಳುವ ಬದಲು ನೀವೇ ನಿಮ್ಮ ಲೇಖನವನ್ನು ಇನ್ನೊಮ್ಮೆ ಓದಿ – ನಿಮ್ಮ ಚಿಂತನೆ ಬಸವತೊಪ್ಪೆ ಅಂತ ನಿಮಗೂ ಅನ್ನಿಸದೇ ಇರದು. ವೈಜ್ಞಾನಿಕತೆ ಬಗ್ಗೆ ಬಹಳಷ್ಟು ಸಾಹಿತ್ಯ ಅಂತರ್ಜಾಲದಲ್ಲಿ ಲಭ್ಯವಿದೆ, ಅವುಗಳ ಅಧ್ಯಯನ ಮಾಡಿ ನಿಮ್ಮ ಅರಿವನ್ನು ವಿಸ್ತರಿಸಿಕೊಳ್ಳಿ. ನಿಮಗೆ ಒಳ್ಳೆಯದಾಗಲಿ.

      ಉತ್ತರ
      • Nagshetty Shetkar
       ಮೇ 16 2015

       ನಾನು ರೋಹಿತ್ ಅವರನ್ನು ಅಟಾಕ್ ಮಾಡಲಿಲ್ಲ, ಅವರ ಲೇಖನದ ಬಗ್ಗೆ ನನಗಿರುವ ಅಸಮಾಧಾನವನ್ನು ಸಭ್ಯ ಶಿಷ್ಟ ರೀತಿಯಲ್ಲಿ ವ್ಯಕ್ತಪಡಿಸಿದೆ. (ಲೇಖನವನ್ನು ಮೆಚ್ಚಲೇ ಬೇಕು ಅಂತ ಕಾನೂನು ಇಲ್ಲ, ಅಂತಹ ಅಪೇಕ್ಷೆ ಲೇಖಕರಿಗಿದ್ದರೆ ಮೊದಲೇ ಹೇಳಿ ಬಿಡಿ ಹೊಗಳಿಕೆಯ ಕಮೆಂಟುಗಳನ್ನು ಮಾತ್ರ ಪ್ರಕಟಿಸುತ್ತೇವೆ ಅಂತ. ) ನೀವೇಕೆ ವೈಯಕ್ತಿಕ ನಿಂದನೆ ಮೂಲಕ ಅಟಾಕ್ ಮಾಡುತ್ತಿದ್ದೀರಿ? ಮತ್ತು ಮಾಡರೆತರ್ ಅವರೇಕೆ ನಿಮ್ಮ ವರ್ತನೆಯನ್ನು ಸಹಿಸಿಕೊಂಡಿದ್ದಾರೆ?

       ಉತ್ತರ
       • W
        ಮೇ 16 2015

        ಮತ್ತೊಬ್ಬರನ್ನು ‘ನಿಮ್ಮ ಚಿಂತನೆ ಬಸವತೊಪ್ಪೆ..’ ಎಂದು ಅವಹೇಳನ ಮಾಡುವುದು ವೈಯುಕ್ತಿಕ ನಿಂದನೆ ಅಲ್ಲವಾದರೆ ನಿನ್ನನ್ನು ‘ತೊಪ್ಪೆ ಮನುಷ್ಯ’ ಎಂದು ಕರೆದದ್ದೂ ವೈಯುಕ್ತಿಕ ನಿಂದನೆ ಅಲ್ಲ! ಪ್ರತಿಬಾರಿ ಪೆಟ್ಟು ಬಿದ್ದಾಗಲೂ ‘ಮಮ್ಮೀ…’ ಅಂತ ‘ಮಾಡರೆತರ್’ ಬಳಿ ಓಡುವುದು ‘ದಂಡೆತ್ತಿ ಬಂದವರನ್ನು ಮುಗಿಸುವ’, ಶರಣಕುಲಕ್ಕೆ ಒದಗಿಬಂದ ಏಕೈಕ ಧೀರನ ಲಕ್ಷಣವೂ ಅಲ್ಲ.

        ಉತ್ತರ
        • Nagshetty Shetkar
         ಮೇ 16 2015

         ರೋಹಿತ್ ಅವರ ಚಿಂತನೆ ಬಸವತೊಪ್ಪೆ (= bull shit) ಅಂತ ಅಂದದ್ದು ವೈಯಕ್ತಿಕ ನಿಂದನೆ ಹೇಗಾಗುತ್ತದೆ?! ಅದು ಅವರ ಪ್ರಸ್ತುತ ಲೇಖನದ ಬಗ್ಗೆ ನನ್ನ ಅಭಿಪ್ರಾಯವಷ್ಟೇ! ಎಲ್ಲಿಯಾದರೂ ರೋಹಿತ್ ಅವರನ್ನು ತೊಪ್ಪೆ ಮನುಷ್ಯ ಅಂತ ಕರೆದಿದ್ದೀನಾ? ಅಕಸ್ಮಾತ್ ರೋಹಿತ್ ಅವರಿಗೆ ವೈಯಕ್ತಿಕ ನಿಂದನೆ ಅಂತ ಅನ್ನಿಸಿದರೆ ಅವರೇ ದೂರು ನೀಡುತ್ತಾರೆ, ಅವರ ಪರವಾಗಿ ವೈಯಕ್ತಿಕ ನಿಂದನೆ ಮಾಡಲು ನಿಮಗೆ ಯಾವ ಅಧಿಕಾರವಿದೆ? ಅಥವಾ ನೀವೇ ರೋಹಿತ್ತಾ?

         ಉತ್ತರ
         • WITIAN
          ಮೇ 17 2015

          ಅಯ್ಯಾ, ನಿನಗೆ ಇಂಗ್ಲಿಷ್ ಆಗಲೀ ಕನ್ನಡವಾಗಲೀ ಬರುವುದಿಲ್ಲ ಎನ್ನುವುದು ಈ ವೇದಿಕೆಯ ಓದುಗರೆಲ್ಲರಿಗೂ ತಿಳಿದು ಎಷ್ಟೋ ದಿನಗಳಾದವು. Bull shit ಎನ್ನುವುದು ಸಭ್ಯಭಾಷೆಯಲ್ಲ ಎನ್ನುವುದು ಇಂಗ್ಲಿಷ್ ಬಳಸುವ ಎಲ್ಲರಿಗೂ ಗೊತ್ತಿರುವ ವಿಷಯ. ನಿನಗೆ ತಿಳಿದಿಲ್ಲವಾದರೆ ಗೊತ್ತಿರುವವರ ಹತ್ತಿರ ಕೇಳಿ ತಿಳಿದುಕೋ, ಸ್ವಲ್ಪ ವಿನಯವಿದ್ದರೆ ಯಾರಾದರೂ ಸಂತೋಷದಿಂದ ಹೇಳಿಕೊಟ್ಟಾರು. ತಲೆಯೊಳಗೆ ಕೂಡಾ ನಿನ್ನ ಭಾಷೆಯಲ್ಲೇ ಹೇಳುವುದಾದರೆ ‘ಬಸವತೊಪ್ಪೆ’ ತುಂಬಿಕೊಂಡವನಿಗೆ ‘ತೊಪ್ಪೆ ಮನುಷ್ಯ’ ಅನ್ನದೆ ಇನ್ನೇನು ಹೇಳಬೇಕು? ನಿನ್ನ ಕೊನೆ ಪ್ರಶ್ನೆಗೆ ಉತ್ತರ ಕೊಡುವುದರ ಅಗತ್ಯವೇನೂ ಕಾಣುತ್ತಿಲ್ಲ, ಆದರೂ ಹೇಳುತ್ತೇನೆ – ನಾನು WITIAN.. ನೀನೆಂದುಕೊಂಡಂತೆ ರೋಹಿತ್ ಆಲ್ಲ!

          ಉತ್ತರ
          • shripad
           ಮೇ 18 2015

           ಈ ಮಹಾನ್ ಶರಣನೆಂಬೋ ನಾಟಕಕಾರನಿಗೆ ಬಸವ ತತ್ತ್ವಕ್ಕಿಂತ ‘ಬಸವ ತೊಪ್ಪೆ’ ಮೇಲೇ ಪ್ರೀತಿ ಹೆಚ್ಚು. ತಿಂದ ಆಹಾರಾದ ‘ಎಂಡ್ ಪ್ರಾಡಕ್ಟ್’ ಅಂದ್ರೆ ತಮಗೆ ಪ್ರೀತಿ ಅಥವಾ ನೀವು ಅದೇ ಆಗಿದ್ದೀರಿ ಎಂದು ‘ನಾವು, ನಮ್ಮ ಹರಕೆ…’ಲೇಖನದ ಪ್ರತಿಕ್ರಿಯೆಯೊಂದರಲ್ಲಿ ಮಾನ್ಯರಿಗೆ ಹೇಳಿದ್ದೆ. ಅದನ್ನು ಅವರು ನಿಜವಾಗಿಸಿದ್ದಾರೆ. ಅವರಿಗೆ ಧನ್ಯವಾದಗಳು.

      • WITIAN
       ಮೇ 16 2015

       ಮಾಡರೇಟರ್ ಮಹೋದಯರೆ, ವೈಯುಕ್ತಿಕ ನಿಂದನೆ ಇರುವ ಪ್ರತಿಕ್ರಿಯೆಗಳನ್ನು ತೆಗೆದುಹಾಕುವ ನಿಮ್ಮ ಅಧಿಕಾರವನ್ನು ನಾನು ಪ್ರಶ್ನಿಸುವುದಿಲ್ಲ. ಆದರೆ ನನ್ನ ಪ್ರತಿಕ್ರಿಯೆಯನ್ನು ತೆಗೆದು ಹಾಕಲು ನಾಗಶೆಟ್ಟಿ ಶೇತ್ಕರ್ ಆಗ್ರಹಿಸಿದ ತಕ್ಷಣ ಕಾರ್ಯಪ್ರವೃತ್ತರಾಗುವ ನೀವು ಇದೇ ಮನುಷ್ಯ ಬರೆದ ಅವಹೇಳನಕಾರಿ (ಉದಾ: ಶ್ರೀ ರೋಹಿತ್ ಚಕ್ರತೀರ್ಥ ಅವರಿಗೆ ‘ನಿಮ್ಮ ಚಿಂತನೆ ಬಸವತೊಪ್ಪೆ..’ ಎಂದು ಕರೆದ ಪ್ರತಿಕ್ರಿಯೆ ಇನ್ನೂ ಅದೇ ಪುಟದಲ್ಲಿ ರಾರಾಜಿಸುತ್ತಿದೆ) ಪ್ರತಿಕ್ರಿಯೆಗಳನ್ನೇಕೆ ಡಿಲೀಟ್ ಮಾಡುವುದಿಲ್ಲ. ಏಕೆ, ನಿಮಗೂ ಈ ಖೊಟ್ಟಿ ಶರಣನನ್ನು ಕಂಡರೆ ಹೆದರಿಕೆಯಾ?

       ಉತ್ತರ
       • ಸ್ವಾಮಿ ವಿಟಿಯನ್ ಹೆಸರಿನಲ್ಲಿ ಮುಖಮರೆಸಿಕೊಂಡವರೇ,ಯಾರಿಗೂ ಹೆದರಬೇಕಾದ ಅವಶ್ಯಕತೆ ನನಗಿಲ್ಲ.ಸಾಮಾಜಿಕ ತಾಣವೊಂದರಲ್ಲಿ ಮರ್ಯಾದೆಯಾಗಿ ವರ್ತಿಸುವುದನ್ನು ಜನರು ಅರ್ಥ ಮಾಡಿಕೊಳ್ಳುವುದು ಒಳ್ಳೆಯದು.ಶೆಟ್ಕರ್ ಮಹಾಶಯರಂತೆ ತಾವೂ ಸಹ ಪ್ರತಿಕ್ರಿಯೆ ನೀಡುತ್ತ ಅವರದೇ ಹಾದಿಯಲ್ಲಿದ್ದೀರಿ ಎಂದು ನೆನಪಿಡಿ

        ಉತ್ತರ
        • WITIAN
         ಮೇ 17 2015

         ಏನ್ರಿ ರಾಕೇಶ್ ಶೆಟ್ಟರೆ, ಇಷ್ಟೊಂದು ಕೋಪ ಮಾಡಿಕೊಳ್ಳುತ್ತಿದ್ದೀರಿ! ನಿಲುಮೆಯ ಲೇಖನಗಳಿಗೆ ಬರುವ ಪ್ರತಿಕ್ರಿಯೆ, ಉತ್ತರಗಳ ಮೂಲಕ ನಡೆಯುವ ಸಂಭಾಷಣೆಯನ್ನು ನೀವು ಗಮನಿಸಿದ್ದರೆ ನಾಗಶೆಟ್ಟಿ ಶೇತ್ಕರ್ ಎಂಬ ಈ ಮನುಷ್ಯನ ಕೊನೆಮೊದಲಿಲ್ಲದ ಅಪಲಾಪದ ಪರಿಚಯವಾಗುತ್ತಿತ್ತು. ಜಾಣನಿಗೆ ಮಾತಿನ ಪೆಟ್ಟು, ಕತ್ತೆಗೆ ಲತ್ತೆ ಪೆಟ್ಟು ಎಂಬ ಗಾದೆಯಂತೆ ಶೇತ್ಕರನ ಸಭ್ಯತೆ ಮೀರಿದ ಮಾತುಗಳಿಗೆ ಅದೇಭಾಷೆಯಲ್ಲಿ ಉತ್ತರ ಕೊಡುವ ಪ್ರಯತ್ನ ನನ್ನದು.

         ಒಂದೆರಡು ವಾರಗಳ ಕೆಳಗೆ ಶ್ರೀ ರೋಹಿತ್ ಚಕ್ರತೀರ್ಥರ ‘ಮಾನ ಕಳೆದುಕೊಂಡ ಸನ್ಮಾನಗಳು’ ಎಂಬ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳನ್ನು ಗಮನಿಸಿ. ಅದರಲ್ಲಿ ನಡೆದ ಸಂಭಾಷಣೆಯಲ್ಲಿ ರೋಹಿತ್, ರಂಜಾನ್ ದರ್ಗಾ ಅವರ ‘ಒಂದು ವೇಳೆ ಯು ಆರ್ ಅನಂತಮೂರ್ತಿಯವರು ಬಸವಣ್ಣನನ್ನು ನಾನ್ಸೆನ್ಸ್ ಥಿಂಕರ್ ಎಂದು ಕರೆದಿದ್ದರೆ ಮೂರ್ತಿಯವರಿಗೆ ಕರ್ನಾಟಕ ಸರ್ಕಾರ ಕೊಡಮಾಡಿದ ರೂ. ಹತ್ತು ಲಕ್ಷವನ್ನು ನಾನೇ ವಾಪಸ್ ಮಾಡುತ್ತೇನೆ’ ಎಂಬ ಹೇಳಿಕೆಯನ್ನು ತಿಳಿದೋ ತಿಳಿಯದೆಯೋ ‘ಮೂರ್ತಿಗಳಿಂದಲೇ ಕೊಡಿಸುತ್ತೇನೆ’ ಎನ್ನುವ ಅರ್ಥದಲ್ಲಿ ಬಳಸಿದರು. ಇದಕ್ಕೆ ಕ್ಷಮಾಪಣೆ ಕೇಳಲು ನಾನು, WITIAN, ಒತ್ತಾಯಿಸಿದೆ. ರೋಹಿತ್ ಅವರಿಗೂ ಅದು ಸರಿಯಲ್ಲ ಎಂದು ಮನಗಂಡು ಅವರು ಕ್ಷಮೆ ಕೇಳಿದರು.

         ನನ್ನ ಪ್ರತಿಕ್ರಿಯೆಗಳ ಅಸಭ್ಯತೆ ಮಾತ್ರ ನಿಮ್ಮ ಕಣ್ಣಿಗೆ ಕಾಣುವುದು ಸೋಜಿಗದ ವಿಷಯ! ಇನ್ನು ನಾನು ಮುಖಮರೆಸಿಕೊಂಡವನಾಗಿದ್ದರೆ ಅದರಿಂದ ನಿಮಗೇನೂ ನಷ್ಟವಿಲ್ಲ ತಾನೆ? ನನ್ನ ಹಾದಿ ಯಾವುದು ಎನ್ನುವುದು ನನಗೆ ಚೆನ್ನಾಗಿ ಅರ್ಥವಾಗಿದೆ. ಅಷ್ಟಕ್ಕೂ ಒಂದು ಮೈಯುರಿಯುವ ಮಾತು, ಬಿರುಸಾದ ಪ್ರತಿಕ್ರಿಯೆ ಬಂದ ತಕ್ಷಣ ‘ಮಾಡರೇಟರ್’ ಮಂತ್ರಜಪಿಸುವ ಶೇತ್ಕರಿನಿಗಿಂತ ಹೆಚ್ಚಿನ ಸೈರಣೆ ನನಗೆ ಇದೆ.

         ವೇದಿಕೆಯನ್ನು ನಡೆಸುವ ಹಕ್ಕು ನಿಮ್ಮದು, ಪ್ರತಿಕ್ರಿಯೆ ಸಭ್ಯತೆ ಮೀರಿದ್ದೇ, ಅಲ್ಲವೇ ನಿರ್ಣಯಿಸುವ ಜವಾಬ್ದಾರಿ ಕೂಡಾ ನಿಮ್ಮದೇ. ಆದರೆ ಒಬ್ಬ ತಲೆತಿರುಕ ಓದುಗನ ಪ್ರತಿಕ್ರಿಯೆ ಪದೇ ಪದೇ ಮುಂದುವರಿಯುತ್ತಿದ್ದರೆ, ಮಿಕ್ಕ ನನ್ನಂತಹ ಓದುಗರು ಸುಮ್ಮನೆ ಏಕೆ ಕುಳಿತಿರಬೇಕು? ನಿಮ್ಮ ಹಾಗೆ ಕೇಳಿಸಿಕೊಳ್ಳುತ್ತ ಕುಳಿತಿರುವ ಅನಿವಾರ್ಯತೆ ನಮಗೇಕೆ?

         ಉತ್ತರ
         • Naani
          ಮೇ 17 2015

          +1
          Witian ರ ಅಭಿಪ್ರಾಯವನ್ನು ಅನುಮೋದಿಸುತ್ತೇನೆ! ನಿಲುಮೆಯನ್ನು ಚರ್ಚೆಗಳನ್ನು ಉದ್ದೇಶಪೂರ್ವಕವಾಗಿ ಹಳ್ಳಹಿಡಿಸುವ ಪಣ ತೊಟ್ಟಿರುವ ಈ ಶೇತ್ಕರ ತನ್ನ ಧೋರಣೆಯನ್ನು ಆರೋಗ್ಯಪೂರ್ಣ ವಾಗಿಸಿಕೊಳ್ಳವ ವರೆಗೂ ನಿಯಂತ್ರಿಸಿ! ಇಲ್ಲವೇ ಓದುಗರೇ ತಕ್ಕ ಶಾಸ್ತಿಮಾಡುವುದಕ್ಕೆ ಬಿಡಿ! ಇಲ್ಲವೇ ಈ ಶೇತ್ಕರ ಎಲ್ಲಾ ಚರ್ಚೆಗಳನ್ನೂ ದರ್ಗಾಮಂತ್ರಕ್ಕೆ ಹೈಜಾಕಿಂಗ್ ಮಾಡೋದು! ಸಂಬಂದವೇ ಇಲ್ಲದ ವಿಚಾರಗಳನ್ನು ತಂದು ವಿತಂಡವಾದ ಮಾಡೋದು ಸಮಂಜಸ ಅಂತ ನೀವು ಭಾವಿಸಿದ್ರೆ ಈ ತಾಣವನ್ನು ದೇವರೇ ಕಾಪಾಡಬೇಕು

          ಉತ್ತರ
 10. rohithmath
  ಮೇ 17 2015

  ಇಲ್ಲಿನ ಚರ್ಚೆಗಳಲ್ಲಿ ನನ್ನದೂ ಪಾಲು ಇದೆಯಾದ್ದರಿಂದ ಒಂದೆರಡು ಮಾತುಗಳನ್ನು ಸ್ಪಷ್ಟಪಡಿಸುವುದು ನನ್ನ ಜವಾಬ್ದಾರಿ ಎಂದು ಭಾವಿಸಿ ಈ ಮಾತು..

  ೧. ಶೇಟ್ಕರ್ ಅವರು ನಾನೇ ಹಲವು ಹೆಸರುಗಳಲ್ಲಿ ಇಲ್ಲಿ ಬರುತ್ತೇನೆಂದು ಭಾವಿಸಿದಂತಿದೆ. ಕ್ಷಮಿಸಿ, ಅಂತಹ ಮನುಷ್ಯ ನಾನಲ್ಲ; multiple ಅಕೌಂಟುಗಳ ಅಗತ್ಯವೂ ನನಗಿಲ್ಲ.

  ೨. ಶೇಟ್ಕರ್ ಅವರ ಜೊತೆ ವಾದ ಮಾಡುವುದು ಗಾಳಿಯೊಡನೆ ಗುದ್ದಾಡಿದಂತೆ ಎಂಬ ಭಾವನೆ ನನಗೆ ಬಂದಿದೆ. ಚರ್ಚೆಯಿಂದ ನಮ್ಮ ವ್ಯಕ್ತಿತ್ವದಲ್ಲಿ ಕಿಂಚಿತ್ತಾದರೂ ಬದಲಾವಣೆಗಳಾದರೂ (ಅದೂ ಧನಾತ್ಮಕವಾದದ್ದು) ಒಳ್ಳೆಯದು ಎನ್ನುವುದು ನನ್ನ ನಂಬಿಕೆ. ಆದರೆ ಶೇಟ್ಕರ್ ಅವರು ಚರ್ಚೆ ಎಂದರೆ ಕಾಲೆಳೆಯುವುದು ಎಂದು ಭಾವಿಸಿದಂತಿದೆ. ಹಾಗಾಗಿ ಇನ್ನುಮುಂದೆ ಅವರ ವಾದಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದಿರಲು ನಿರ್ಧರಿಸಿದ್ದೇನೆ. ಅವರು ನನ್ನ ಕಣ್ಣಲ್ಲಂತೂ ಹಾಸ್ಯಾಸ್ಪದ ವ್ಯಕ್ತಿಯಾಗಿ ಬದಲಾಗಿದ್ದಾರೆ. ಶಿಷ್ಟಾಚಾರಕ್ಕಾಗಿ ಮರ್ಯಾದೆ ಕೊಡುತ್ತಿದ್ದೇನಷ್ಟೆ.

  ೩. Witian ಅವರು ಹೇಳಿದಂತೆ, “ಮಾನ ಕಳೆದುಕೊಂಡ ಸನ್ಮಾನಗಳು” ಲೇಖನದ ಕಾಮೆಂಟಿನಲ್ಲಿ “ಕೊಡಿಸುತ್ತೇನೆ ಅಂದಿದ್ದಾರೆ” ಎಂದದ್ದು ಉದ್ಧೇಶಪೂರ್ವಕ ಆಗಿರಲಿಲ್ಲ. ಆದರೆ ಅದನ್ನೇ ದೊಡ್ಡ ವಿಷಯ ಮಾಡಿಕೊಂಡ ಶೇಟ್ಕರ್ ಸ್ಸಾರಿ ಕೇಳಬೇಕು ಎಂದು ರಚ್ಚೆ ಹಿಡಿದರು. ನಾನು ಕೇಳಿದಾಗ “apology has been noted” ಎಂಬ ದೊಡ್ಡ ಶಬ್ದ ಬಳಸಿದರು! ಇರಲಿ, ಆದರೆ ನಾನು ಹೇಳಿರದೇ ಇದ್ದ ಮಾತುಗಳನ್ನು ಹೇಳಿದ್ದೇನೆಂಬಂತೆ ಬಿಂಬಿಸಿದ ಅವರೂ ಹಾಗೆ ಕ್ಷಮೆ ಕೇಳಿದರೆ ಕ್ಷಮೆಗೂ ಒಂದು ಮರ್ಯಾದೆ ಇರುತ್ತದೆಂದು ಹೇಳಿದೆ. ಆ ಮನುಷ್ಯ ನೆಗ್ಲೆಕ್ಟ್ ಮಾಡಿದರು. ಅವರಿಂದ ಕ್ಷಮೆ ಕೇಳಿಸಿ ನನಗೆ ಆಗಬೇಕಾದ್ದೇನೂ ಇಲ್ಲ. ಆದರೆ ಆ ಮನುಷ್ಯನ ಅವತಾರದ ಅನಾವರಣ ಆಯಿತು ಅಷ್ಟೆ! ನೀನಾಸಂನವರಿಗೆ ಪೇಜಾವರ ಸ್ವಾಮಿಗಳು ಊಟ ಹಾಕುತ್ತಾರೆ ಎಂದರೆ “ಮುಸ್ಲಿಮರಿಗೆ ಬಿರಿಯಾನಿ ಕೊಡುತ್ತಾರ?” ಎಂದು ಕೇಳುವ ವ್ಯಕ್ತಿಯ ಜೊತೆ ಯಾವ ಆರೋಗ್ಯಕರ ಚರ್ಚೆ ಸಾಧ್ಯ??

  ೪. ಚರ್ಚೆ-ಸಂವಾದ ಆರೋಗ್ಯಕರವಾಗಿರಬೇಕು; ಚರ್ಚೆಯ ಕೊನೆಗೆ ಅದರಲ್ಲಿ ಭಾಗವಹಿಸಿದವನಿಗೂ “ಆಹಾ, ಒಂದು ವಿಷಯ ತಿಳಿದುಕೊಂಡೆ” ಅನ್ನಿಸುವಂತಿರಬೇಕು. ಪರಸ್ಪರ ದ್ವೇಷ ಹರಡುವ ಚರ್ಚೆಯಿಂದ ಯಾವ ಉಪಯೋಗವೂ ಇಲ್ಲ. ಒಬ್ಬ ವ್ಯಕ್ತಿ ಕೊಂಕು ಶುರುಮಾಡಿದಾಗ ಎದುರಾಳಿಯೂ ಅದೇ ದಾರಿಯಲ್ಲಿ ನಡೆಯುವುದು ಕೆಲವು ಸಲ ಅನಿವಾರ್ಯವೇ ಆಗುತ್ತದೆ. ಯಾಕೆಂದರೆ ನಾವ್ಯಾರೂ ಇಂದ್ರಿಯಜಿತುಗಳಲ್ಲ. ಹಾಗಾಗಿ ಚರ್ಚೆಯ ದಾರಿ ತಪ್ಪಿಸಿ ವ್ಯಂಗ್ಯಾಸ್ತ್ರವನ್ನೇ ಮುಖ್ಯಾಯುಧವನ್ನಾಗಿ ಮಾಡಿಕೊಂಡು ವೈಯಕ್ತಿಕ ನಿಂದನೆಗೆ ಇಳಿವವರನ್ನು ಮಾಡರೇಟ್ ಮಾಡುವುದು ಒಳ್ಳೆಯದೇ. ಇದಕ್ಕೆ ಯಾರೂ ಅತೀತರಲ್ಲ. ನಾನೂ ಕೂಡ ಮಾಡರೇಶನ್-ಗೆ ಒಳಗಾಗಲು ನಾಚಿಕೆ ಪಡುವುದಿಲ್ಲ.

  ೫. Witian ಅವರಿಗೊಂದು ಸಲಹೆ ನನ್ನ ಕಡೆಯಿಂದ.. ನೀವೇಕೆ ಮುಖವಾಡ ಕಳಚಬಾರದು? ಇದರಿಂದ ಚರ್ಚೆಯ ದಿಕ್ಕೇನೂ ಬದಲಾಗುವುದಿಲ್ಲ. ಆದರೆ ನೈತಿಕಬಲ ಹೆಚ್ಚುತ್ತದೆ ಅಂತ ಭಾವಿಸಿದ್ದೇನೆ. ಅಲ್ಲದೆ ಶೇಟ್ಕರ್ ಎಂಬ ಇನ್ನೊಂದು ಮುಖವಾಡ ನಿಮ್ಮನ್ನು ಯಾರ್ಯಾರೋ ಎಂದು ತಪ್ಪು ತಿಳಿಯುವುದು ನಿಲ್ಲುತ್ತದೆ 🙂 ಸಲಹೆ ಅಷ್ಟೆ, ಅಂತಿಮ ನಿರ್ಣಯ ನಿಮ್ಮದೆ.

  ಉತ್ತರ
  • WITIAN
   ಮೇ 17 2015

   ನಾಗಶೆಟ್ಟಿ ಶೇತ್ಕರ್ ಎಂಬ ಮನುಷ್ಯನ ಸ್ಥೂಲ ಪರಿಚಯ ಹೀಗಿದೆ: ಈತ ಹೆಸರಿಗೆ ಎಂ ಎ, ಎಂ ಫಿಲ್ (ಪಿ ಎಚ್ಡಿ), ಲಿಂಗಾಯತ ಧರ್ಮದ ಜಾಗತೀಕರಣವೇ ಮೊದಲಾದ ಕಮ್ಯುನಿಷ್ಟರ ‘ಪೆಟ್ ಪೀವ್’ ಗಳಲ್ಲಿ ಒಂದೆರಡು ತವುಡು ಕುಟ್ಟುವ ಪೇಪರ್ ಗಳನ್ನು ಪ್ರಕಟಿಸಿ ಬಾಕಿ ಸಮಯವನ್ನು ತನಗೆ ಗೊತ್ತಿಲ್ಲದ ವಿಷಯಗಳಲ್ಲೂ ಅಜ್ಞಾನ ಪ್ರದರ್ಶಿಸುವ ಪ್ರತಿಕ್ರಿಯೆಗಳನ್ನು ಬರೆಯುತ್ತಾ, ಮಧ್ಯೇ ಮಧ್ಯೇ ತನ್ನ ಗುರು ಡ್ರಗ್ಗಾ ಸರ್ ಬಗ್ಗೆ ಒಡಕು ತುತ್ತೂರಿ ಊದುತ್ತಾ ಮಿಕ್ಕ ಓದುಗರ ಸಹನೆ ಅಳೆಯುತ್ತಿರುತ್ತಾನೆ. ನಾಗಶೆಟ್ಟಿ ಶೇತ್ಕರ್ ನ ಕಮೆಂಟುಗಳನ್ನು block ಮಾಡಿದರೆ, ಅಭಿನವ ಚನ್ನಬಸವಣ್ಣ ಹೆಸರಿನಲ್ಲೋ, ಅಥವಾ ಎಸಿಬಿ ಎಂತಲೋ ಬರಕೊಂಡು ನಾಲ್ಕೈದು ಜನರ ಕಮೆಂಟನ್ನೂ ಒಬ್ಬನೆ ಬರೆಯುತ್ತಾನೆ. ವರ್ತಮಾನ ಡಾಟ್ ಕಾಮ್ ನಲ್ಲಿಯೂ (ಶ್ರೀ ರವಿಕೃಷ್ಣಾರೆಡ್ಡಿಯವರ ಪ್ರಖರ RSS ದ್ವೇಷಿ, ಬಲಪಂಥದ್ವೇಷಿ ಜಾಲತಾಣ) ಈತನ ಕಮೆಂಟಿನ ಹಳಸುತನ ಕಂಡು ಸೈರಿಸಲಾಗದೆ ಈತನ ಕಮೆಂಟುಗಳನ್ನು block ಮಾಡಲು ಪ್ರಾರಂಭಿಸಿದರು! ಈತನ ಭೇಟಿಯಾಗುವ ದೌರ್ಭಾಗ್ಯ ಇದುವರೆಗೂ ನನಗೆ ದೊರಕಿಲ್ಲ, ಮುಂದೂ ಬೇಡ! ಹಾಗಿದ್ದರೂ ಈತನ ಬಗ್ಗೆ ಇಷ್ಟು ಮಾಹಿತಿ ಕಲೆಹಾಕಿದ್ದೇನೆ, ಇನ್ನು ನಾಗಶೆಟ್ಟಿ ಶೇತ್ಕರನಿಗೆ ನಾನ್ಯಾರೆಂದು ಕಂಡುಹಿಡಿಯಲು ಸವಾಲು ಹಾಕುತ್ತಿದ್ದೇನೆ! ಅಷ್ಟು ಬುದ್ಧಿವಂತನಾದರೆ ಕಂಡುಹಿಡಿಯಲಿ ನೋಡುವ!

   ಉತ್ತರ
   • Brother Bull
    ಜೂನ್ 10 2015

    Hello Witian, who you ever are, please oppose a person’s philosophy but don’t hate him. Why you have problems with his education and background?!! You may dislike Shetkar’s comments because of your ideology but many readers find their voice in his comments. Not many readers are extreme right wing like you. We condemn attacks on sane voices like Shetkar.

    ಉತ್ತರ
    • charles bricklayer
     ಜೂನ್ 11 2015

     in support of your comment

     ಉತ್ತರ
 11. ಜೂನ್ 10 2015

  ವೈಜ್ಞಾನಿಕತೆ, ಅವೈಜ್ಞಾನಿಕತೆ, ಮೌಢ್ಯಗಳನ್ನು ಅರ್ಥವತ್ತಾಗಿ ವಿಂಗಡಿಸಿದ್ದೀರಿ. ಆದರೆ ವಿಜ್ಞಾನಿಯನ್ನು ಉದಾಹರಿಸುವಾಗ ಆತನೊಬ್ಬ ತಂತ್ರಜ್ಞ ಎಂದರೆ ಸರಿ ಹೋಗುತಿತ್ತು. ಏಕೆಂದರೆ ಆತ ಕೆಲಸ ಮಾಡುವ ರೀತಿಯಲ್ಲಿ ಚಾಣಾಕ್ಷತನ ಪಡೆದಿರುತ್ತಾನೆಯೆ ಹೊರತು ಹೇಗೆ/ ಏಕೆ ಎಂಬ ಭೂಮಿಕೆಯಲ್ಲಿ ಅಲ್ಲ.

  ಇನ್ನು ಶಾಸ್ತ್ರ ಮತ್ತು ವಿಜ್ಞಾನ ಭಿನ್ನ ಎನ್ನುವುದಕ್ಕಿಂತ ಅವೆರಡರ ಹೋಲಿಕೆಯೇ ಈಗ ಹೆಚ್ಚು ಬೆಳಕಿಗೆ ಬಂದಿದೆ. ಶಾಸ್ತ್ರಕ್ಕೆ ವಿಜ್ಞಾನದ ಕಾರಣಗಳನ್ನು ಹುಡುಕುವುದು ಅದನ್ನು ಸರಿಯೆಂದು ವಾದಿಸುವುದಕ್ಕಲ್ಲ(as you mentioned ISI) ಬದಲಾಗಿ ಅದು ವಿಜ್ಞಾನದ ಇನ್ನೊಂದು ಮುಖ ಅಷ್ಟೇ. ತೀರ್ಥರಾಮ ವಳಲಂಬೆಯವರ ದೇಶ,ಕಾಲ ಮತ್ತು ಬದುಕು ಇದನ್ನು ವಿಷದವಾಗಿ ಸ್ಪಷ್ಟಪಡಿಸಿದೆ.
  ನಿಮ್ಮ ಬರವಣಿಗೆ ಸರಳವಾಗಿ ಮನ ಮುಟ್ಟುವಂತಿದೆ. ಕೊನೆಯ ಉದಾಹರಣೆ ಅತ್ಯುತ್ತಮವಾದ ಅಂತ್ಯ ನೀಡಿದೆ. ಇಂಥ thought provoking ಲೇಖನಕ್ಕಾಗಿ ಧನ್ಯವಾದಗಳು.

  ಉತ್ತರ
 12. ಶೆಟ್ಟಿನಾಗ ಶೇ.
  ಡಿಸೆ 10 2016

  ಪ್ರಿಯ ರೋಹಿತ್ ಚಕ್ರತೀರ್ಥ, ನಿಮ್ಮ ಲೇಖನವನ್ನು ಆಸಕ್ತಿಯಿಂದ ಓದಿದೆ. ನಿಮ್ಮ ಜ್ಞಾನಚಕ್ಷುವಿನ ವಿಸ್ತರಣೆಗೆ ಈ ಕೆಳಗಿನ ಲಿಂಕನ್ನು ನೋಡತಕ್ಕದ್ದು:
  _https://www.facebook.com/ramjan.darga/posts/1168228026565861
  _https://www.facebook.com/ramjan.darga/posts/1151479838240680

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments